Tag: Kodi Mutt Sri

  • ಭವಿಷ್ಯದಲ್ಲಿ ಗಾಳಿ ಗಂಡಾಂತರ ಬಂದು ತಿನ್ನಲು ಅನ್ನವಿಲ್ಲದ ಸ್ಥಿತಿ ಬರಲಿದೆ: ಕೋಡಿ ಶ್ರೀಗಳ ಭವಿಷ್ಯ

    ಭವಿಷ್ಯದಲ್ಲಿ ಗಾಳಿ ಗಂಡಾಂತರ ಬಂದು ತಿನ್ನಲು ಅನ್ನವಿಲ್ಲದ ಸ್ಥಿತಿ ಬರಲಿದೆ: ಕೋಡಿ ಶ್ರೀಗಳ ಭವಿಷ್ಯ

    ಚಿಕ್ಕಬಳ್ಳಾಪುರ: ಸದ್ಯ ಕೊರೊನಾ ಮಹಾಮಾರಿಯ ಶಕ್ತಿ ಕುಂದಿದ್ದು ಎಲ್ಲವೂ ಸರಿ ಹೋಗಲಿದೆ. ಆದರೆ ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರದಿಂದ ಜನತೆ ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದೆ ನರಳುತ್ತಾರೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಚಿಕ್ಕಬಳ್ಳಾಪುರ ನಗರಕ್ಕೆ ಮೊದಲ ಬಾರಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಶ್ರೀಗಳು, ಕೊರೊನಾ ಪೂರ್ವದಲ್ಲಿಯೇ ನಾನು ಹೇಳಿದ್ದೆ, ಸಂಕಟ ಬಂದಾಗ ವೆಂಕಟರಮಣ ಎನ್ನುವ ಜನರಿಗೆ ಬುದ್ಧಿ ಕಲಿಸಬೇಕೆನ್ನುವ ಕಾರಣಕ್ಕಾಗಿಯೇ ಕೊರೊನಾ ದೇವರನ್ನು ಹಿಡಿದುಕೊಂಡು ಭೂಮಿಗೆ ಬಂತು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಕೊರೊನಾ ಅಬ್ಬರ ಎಷ್ಟಿತ್ತು ಎನ್ನುವುದಕ್ಕೆ ದೇವಾಲಯಗಳು ಬಾಗಿಲು ಮುಚ್ಚಿದ್ದೇ ಸಾಕ್ಷಿಯಾಗಿದೆ. ತಿರುಪತಿ, ಧರ್ಮಸ್ಥಳ, ಚಾಮುಂಡೇಶ್ವರಿ ದೇವಾಲಯಗಳ ಬಾಗಿಲು ಹಾಕಿಸಿತು. ಮಠ, ಮಾನ್ಯಗಳು ಬಾಗಿಲು ಹಾಕುವಂತಾಯಿತು ಎಂದರು. ಇದನ್ನೂ ಓದಿ: ಹಿಜಬ್ ವಿವಾದ: ಕಾಲೇಜುಗಳಿಗೆ ಫೆ.16ರವರೆಗೂ ರಜೆ ಘೋಷಿಸಿದ ಸರ್ಕಾರ

    ಕೊರೊನಾ ಅಬ್ಬರ ತಗ್ಗಿತು ಎನ್ನುವಾಗ ನೆಲ ಗಂಡಾಂತರ ಪ್ರಾರಂಭವಾಗಿ ಏಕಶಿಲಾ ಪರ್ವತವಾದ ನಂದಿಗಿರಿಧಾಮದ ನೆಲವೇ ಕುಸಿದಂತೆ ಮಲೆಮಹದೇಶ್ವರ ಬೆಟ್ಟ, ಮಡಿಕೇರಿ ಮೊದಲಾದೆಡೆ ಸಮಸ್ಯೆ ಎದುರಾಯಿತು. ಇದರ ಜತೆಗೆ ಜಲಗಂಡಾಂತರವೂ ಸಹ ಎದುರಾಗಿ ಜನಜಾನುವಾರು ಸಹಿತ ಸಕಲ ಜೀವರಾಶಿಯನ್ನು ಹಿಂಡಿ ಹಿಪ್ಪೆ ಮಾಡಿತು. ಮುಂದೆ ಗಾಳಿ ಗಂಡಾಂತರ ಬಂದು ಜನರನ್ನು ಬಾಧಿಸಲಿದೆದೆ. ಗಾಳಿ ಗಂಡಾಂತರವೂ ಕೂಡ ಮನುಷ್ಯನಿಗೆ ಅಪಾಯಕಾರಿ ನೆಲೆಯಲ್ಲಿಯೇ ಬಂದು ಕಷ್ಟವನ್ನು ತಂದರೂ ಮುಂದೆ ಹೋಗಲಿದೆ. ಆದರೆ ಇದು ಹೋಗುವ ಕಾಲಕ್ಕೆ ವಿಪರೀತ ಬರಗಾಲವನ್ನು ತಂದು ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದ ಸ್ಥಿತಿಯನ್ನು ತಂದೊಡ್ಡಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.  ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಬ್ ಅಲ್ಲ : ಬಿಸ್ವಾ ಶರ್ಮಾ

  • ಸಂಕ್ರಾಂತಿಯೊಳಗೆ ದೇಶದಲ್ಲಿ ಮತ್ತೊಂದು ದೊಡ್ಡ ದುರಂತ: ಕೋಡಿ ಮಠ ಶ್ರೀ ಭವಿಷ್ಯ

    ಸಂಕ್ರಾಂತಿಯೊಳಗೆ ದೇಶದಲ್ಲಿ ಮತ್ತೊಂದು ದೊಡ್ಡ ದುರಂತ: ಕೋಡಿ ಮಠ ಶ್ರೀ ಭವಿಷ್ಯ

    ಹಾವೇರಿ: ಮೊನ್ನೆ ನಡೆದ ಭಾರತೀಯ ಸೇನೆಯ ಮುಖ್ಯಸ್ಥರ ಅವಘಡದಂತೆ ಸಂಕ್ರಾತಿಯೊಳಗೆ ಮತ್ತೊಂದು ರಾಜಕೀಯ ಅವಘಡ ಸಂಭವಿಸುವ ಲಕ್ಷಣವಿದೆ. ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಎಂದು ಕೋಡಿ ಮಠದ ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ರಾಣೇಬೆನ್ನೂರು ನಗರದ ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ನಾನು ಈ ಹಿಂದೆಯೇ ದೊಡ್ಡಮಟ್ಟದ ಅವಘಡ ಸಂಭವಿಸುವ ಕುರಿತು ಹೇಳಿದ್ದೆ. ಅದರಂತೆ ಭಾರತೀಯ ಸೇನೆಯ ಮುಖ್ಯಸ್ಥರ ಹೆಲಿಕಾಪ್ಟರ್ ದುರಂತ ಪ್ರಕರಣ ನಡೆದು ಹೋಯಿತು. ಇದೀಗ ಮತ್ತೆ ಅಂಥದ್ದೇ ದುರಂತ ಸಂಭವಿಸುವ ಲಕ್ಷಣವಿದೆ ಎಂದರು. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಮತ್ತಷ್ಟು ಅಪಸ್ವರ – ಚಿತ್ರೋದ್ಯಮದ ನಡೆಗೆ ಸಾ.ರಾ.ಗೋವಿಂದು ಕಿಡಿ

    ಕೊರೊನಾ ರೂಪಾಂತರಿ ಹೆಚ್ಚಾಗುವ ಎಲ್ಲಾ ಲಕ್ಷಣಗಳಿವೆ. ದೇಶದಲ್ಲಿ ಸಂಶಯ, ಅಸಹನೆ, ದ್ವೇಷ ಹಾಗೂ ರಾಜಕೀಯ ಕಲಹಗಳು ಹೆಚ್ಚಾಗಲಿವೆ. ಕೆಲವೇ ದಿನಗಳಲ್ಲಿ ಮಳೆ ಕೂಡ ಅಧಿಕವಾಗಿ ಸುರಿಯುವ ಲಕ್ಷಣವಿದೆ ಎಂದು ಕೋಡಿ ಮಠದ ಶ್ರೀಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಸ್ಲೋ ಪಾಯಿಸನ್: ಬಾಲಕೃಷ್ಣ ಕಿಡಿ

  • ರಾಜ್ಯದಲ್ಲಿ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ: ಕೋಡಿಮಠ ಶ್ರೀ ಭವಿಷ್ಯ

    ರಾಜ್ಯದಲ್ಲಿ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ: ಕೋಡಿಮಠ ಶ್ರೀ ಭವಿಷ್ಯ

    ಕಾರವಾರ: ರಾಜ್ಯದಲ್ಲಿ ಸದ್ಯ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಶಿರಸಿ ತಾಲೂಕಿನ ನೇರಲಕಟ್ಟೆ ಗ್ರಾಮದಲ್ಲಿರುವ ಭೂದೇವಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ. ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಗಿತ್ತು. ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು ತೊಡಕಾಗುತ್ತದೆ. ಆದರೆ ಸದ್ಯವೇ ಈ ಸ್ಥಿತಿ ಸುಖಾಂತ್ಯ ಕಾಣಲಿದೆ ಎಂದರು. ಇದನ್ನೂ ಓದಿ: ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿ: ಸಿದ್ದಗಂಗಾ ಶ್ರೀ

    ನವೆಂಬರ್‍ ನಿಂದ ಸಂಕ್ರಾಂತಿ ನಡುವೆ ದೇಶ ಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ಸಂಭವಿಸಲಿದೆ. ಅದು ಜಾಗತಿಕವಾಗಿ ತಲ್ಲಣ ಸೃಷ್ಟಿಸುತ್ತದೆ. ಆಗಸ್ಟ್ ಮೂರನೇ ವಾರದಿಂದ ಕೋವಿಡ್ ಹಾವಳಿ ಹೆಚ್ಚಾಗಲಿದೆ. ರೋಗದಿಂದ ಜನರು ಸಾಯುವುದಿಲ್ಲ. ರೋಗದ ಭಯದಿಂದಲೇ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ. ಜನವರಿವರೆಗೂ ರೋಗ ಭಾದೆ ಇರಲಿದೆ, ಜನ ಧೈರ್ಯ ಕಳೆದುಕೊಳ್ಳಬಾರದು. ಕುಂಭ ರಾಶಿಯಲ್ಲಿ ಗುರು ಬಂದಿದ್ದಾನೆ ಜಲಸ್ತಂಭನವಿದೆ, ಅನೇಕ ಸಾವು ನೋವುಗಳು ಆಗುವುದಿದೆ. ಮಳೆ, ಗಾಳಿ ಅಧಿಕವಾಗಲಿದೆ. ಕೆರೆಕಟ್ಟೆಗಳು ಭರ್ತಿಯಾಗಿ, ಜಲಪ್ರಳಯ ಸಂಭವಿಸಲಿದೆ. ಪಂಚಭೂತಗಳಿಂದಲೂ ಈ ವರ್ಷ ಅನಾಹುತ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.