Tag: Kodi Mutt Seer

  • ರಾಜಕೀಯ ಭವಿಷ್ಯ ನುಡಿದಿದ್ದ ಕೋಡಿಮಠ ಶ್ರೀಗಳಿಗೆ ನೋಟಿಸ್

    ರಾಜಕೀಯ ಭವಿಷ್ಯ ನುಡಿದಿದ್ದ ಕೋಡಿಮಠ ಶ್ರೀಗಳಿಗೆ ನೋಟಿಸ್

    ಯಾದಗಿರಿ: ತಾಲೂಕಿನ ಅಬ್ಬೆತುಮಕೂರನ ಜಾತ್ರೆಯಲ್ಲಿ ಭಾಗವಹಿಸಿ ಲೋಕಸಭಾ ಚುನಾವಣೆ ಬಗ್ಗೆ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಗಳಿಗೆ ಸಹಾಯಕ ಚುನಾವಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

    ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಎಂದು ಶ್ರೀಗಳಿಗೆ ಸಹಾಯಕ ಚುನಾವಣಾಧಿಕಾರಿಗಳದ ಶಂಕರಗೌಡ ಸೋಮನಾಳ ಅವರು ಯಾದಗಿರಿ ಗ್ರಾಮೀಣ ಠಾಣೆ ಪಿಎಸ್‍ಐ ಮೂಲಕ ನೋಟಿಸ್ ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮಾರ್ಚ್ 10 ರಿಂದಲೇ ಜಾರಿಯಾಗಿದೆ. ನೀವು ಹೇಳಿಕೆ ನೀಡಿರುವುದು ನಿಜವಾದಲ್ಲಿ ಇದು ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಅದ್ದರಿಂದ 48 ಗಂಟೆಗಳ ಒಳಗೆ ನಿಲಿತ ರೂಪದಲ್ಲಿ ಉತ್ತರಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.

    ಮಾರ್ಚ್ 11 ರಂದು ನಡೆದ ಜಾತ್ರೆಯಲ್ಲಿ ಸತ್ಯ ವಿಷದಂತೆ ಇರುತ್ತೆ ಕುರುವಂಶ ದೊರೆಗಳು ಬಡಿದಾಡ್ಯಾರು ಪಾಂಡವರು ಕೌರವರು ಬಡಿದಾಡ್ಯಾರು, ರತ್ನ ಖಚಿತ ಸುವರ್ಣ ಕಿರೀಟ ಸ್ಥಿರವಾದಿತು ಎಂದು ಭವಿಷ್ಯ ನುಡಿದಿದ್ದರು. ಶ್ರೀಗಳ ಭವಿಷ್ಯ ನುಡಿಯನ್ನು ಕೇಂದ್ರದಲ್ಲಿ ಅಧಿಕಾರ ರಚನೆ ಮಾಡಲು ಶತ್ರುಗಳಂತೆಯಿದ್ದ ಪಕ್ಷಗಳು ಅಂದರೆ ಸಮಾಜವಾದಿ ಬಿಎಸ್‍ಪಿ ಒಂದಾಗಿವೆ. ಘಟಬಂಧನ ರಚನೆ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಹವಣಿಸುತ್ತಿವೆ. ಅದರೆ ಮೋದಿಗೆ ಈಗ ಸ್ಥಿರವಾದ ರತ್ನ ಖಚಿತ ಕೀರಿಟ ಈಗಿನ ಚುನಾವಣೆ ನಂತರವೂ ಖಚಿತವಾಗಲಿದೆ. ಬೇವು ಬೆಲ್ಲವಾದಿತು ಅಂದರೆ ಸೈನಿಕರ ಮೇಲಿನ ದಾಳಿ ಪ್ರಧಾನಿ ಮೋದಿ ಪಾಲಿಗೆ ಕಹಿಯ ಬದಲು ಸಿಹಿಯಾಗಲಿದೆ ಎಂದು ಮಠದವರು ವಿಶ್ಲೇಷಿಸಿದ್ದರು. ಈ ಕುರಿತ ವರದಿಯನ್ನ ಪಬ್ಲಿಕ್ ಟಿವಿ ವರದಿ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೊಡಿಹಳ್ಳಿ ಮಠದ ಶ್ರೀಗಳ ಭವಿಷ್ಯ – ಮೋದಿಗೆ ರತ್ನ ಖಚಿತ ಸುವರ್ಣ ಕಿರೀಟ

    ಕೊಡಿಹಳ್ಳಿ ಮಠದ ಶ್ರೀಗಳ ಭವಿಷ್ಯ – ಮೋದಿಗೆ ರತ್ನ ಖಚಿತ ಸುವರ್ಣ ಕಿರೀಟ

    ಯಾದಗಿರಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಕೊಡಿಹಳ್ಳಿ ಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಗಳು ಲೋಕಸಭಾ ಚುನಾವಣೆ ಕುರಿತು ಭವಿಷ್ಯ ನುಡಿದಿದ್ದು, ಮತ್ತೆ ಪ್ರಧಾನಿ ಮೋದಿ ಅವರೇ ಪ್ರಧಾನಿ ಅಗುತ್ತಾರೆಂದು ಭವಿಷ್ಯ ಹೇಳಿದ್ದಾರೆ.

    ಯಾದಗಿರಿಯ ಅಬ್ಬೆ ತುಮಕೂರುನ ವಿಶ್ವರಾಧ್ಯ ಮಠದಲ್ಲಿ ರಾಜಕೀಯ ಭವಿಷ್ಯ ನುಡಿದ ಶ್ರೀಗಳು, ಕುರುವಂಶ ದೊರೆಗಳು ಬಡಿದಾಡ್ಯಾರು. ಪಾಂಡವರು ಕೌರವರು ಬಡಿದಾಡ್ಯಾರು. ರತ್ನ ಖಚಿತ ಸುವರ್ಣ ಕಿರೀಟ ಸ್ಥಿರವಾದಿತು. ಬೇವು ಬೆಲ್ಲವಾದಿತು ಎಂದು ರಾಜಕೀಯ ಭವಿಷ್ಯ ನುಡಿದ್ದಾರೆ.

    ಕೇಂದ್ರದಲ್ಲಿ ಅಧಿಕಾರ ರಚನೆ ಮಾಡಲು ಶತ್ರುಗಳಂತೆಯಿದ್ದ ಪಕ್ಷಗಳು ಅಂದರೆ ಸಮಾಜವಾದಿ ಬಿಎಸ್‍ಪಿ ಒಂದಾಗಿವೆ. ಘಟಬಂಧನ ರಚನೆ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಹವಣಿಸುತ್ತಿವೆ. ಅದರೆ ಮೋದಿಗೆ ಈಗ ಸ್ಥಿರವಾದ ರತ್ನ ಖಚಿತ ಕೀರಿಟ ಈಗಿನ ಚುನಾವಣೆ ನಂತರವೂ ಖಚಿತವಾಗಲಿದೆ. ಬೇವು ಬೆಲ್ಲವಾದಿತು ಅಂದರೆ ಸೈನಿಕರ ಮೇಲಿನ ದಾಳಿ ಪ್ರಧಾನಿ ಮೋದಿ ಪಾಲಿಗೆ ಕಹಿಯ ಬದಲು ಸಿಹಿಯಾಗಲಿದೆ ಎಂದು ಮಠದವರು ವಿಶ್ಲೇಷಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv