Tag: kodi matt swamiji

  • ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ಜಲಪ್ರಳಯವಾಗುತ್ತೆ: ಕೋಡಿಮಠ ಶ್ರೀ

    ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ಜಲಪ್ರಳಯವಾಗುತ್ತೆ: ಕೋಡಿಮಠ ಶ್ರೀ

    ಕಾಂಗ್ರೆಸ್ ಸರ್ಕಾರದ ಬಗ್ಗೆ ಶ್ರೀಗಳು ಹೇಳಿದ್ದೇನು?

    ಹುಬ್ಬಳ್ಳಿ: ರಾಜ್ಯದಲ್ಲಿ ಸಾಕಷ್ಟು ಮಳೆ (Rain) ಬಂದು ಜಳಪ್ರಳಯವಾಗುತ್ತದೆ. ಪ್ರಕೃತಿ ಮುನಿದು ಸರಿಯಾಗುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಭವಿಷ್ಯ ನುಡಿದಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ವಿಪರೀತವಾದ ಜಲಪ್ರಳಯದಿಂದ (Flood) ಜಾಗತಿಕ ಮಟ್ಟದ ಒಂದೆರಡು ರಾಷ್ಟ್ರಗಳು ಮುಚ್ಚುತ್ತವೆ. ಎಲ್ಲಿಯೋ ಆದ ಘಟನೆ ವಾಯುವ್ಯ ಮಾಲಿನ್ಯವಾಗಿ ಜನರು ಅಕಾಲಿಕ ಮರಣ ಹೊಂದುತ್ತಾರೆ. ಎಲ್ಲೋ ಹಾಕಿದ ಬಾಂಬ್ ನಮ್ಮ ರಾಷ್ಟ್ರದ ಜನರ ಮೇಲೆ ಪರಿಣಾಮ ಬೀರುತ್ತದೆ. ವಿಜಯ ದಶಮಿಯಿಂದ ಸಂಕ್ರಾತಿಯವರೆಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಆಳುವವರು ಅರಿತುಕೊಳ್ಳಬೇಕು. ಇಲ್ಲದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಈಗಿರುವ ಯಾರೂ ಬಿಜೆಪಿ ಕಟ್ಟಿಲ್ಲ: ಸ್ವಪಕ್ಷೀಯರ ವಿರುದ್ಧವೇ ಮತ್ತೆ ಗುಡುಗಿದ ರೇಣುಕಾಚಾರ್ಯ

    ಇದು ಬಹುದೊಡ್ಡ ದುರ್ಘಟನೆಯಾಗಿದ್ದು, ಕರುನಾಡಿಗೆ ಕೆಲವೊಂದು ಆಪತ್ತು ಇದೆ. ಕೆಲವು ಸಾವು-ನೋವು ಸಂಭವಿಸುತ್ತವೆ. ಗೌರಿಶಂಕರ ಶಿವ ಶಿವ ಎಂದಿತು. ಭೂಮಿ ನಡುಗಿತು. ಮಳೆ ಬೆಳೆ ತಲ್ಲಣಗೊಂಡಿತು. ಜನರು ತೊಂದರೆಗೆ ಒಳಗಾಗುವರು. ನಾನು ಹೇಳಿದಾಗ ಒಂದು ಘಟನೆ ಆಗಿಯೇ ಆಗುತ್ತದೆ. ಅದನ್ನು ತಪ್ಪಿಸಿಕೊಳ್ಳುವುದು ಆಳುವವರ ಕೈಯಲ್ಲಿದೆ ಎಂದರು. ಇದನ್ನೂ ಓದಿ: ಅನ್ನಭಾಗ್ಯ ಹಣ ಜುಲೈ 1 ರಂದೇ ಕೊಡ್ತೀವಿ ಅಂತಾ ಹೇಳಿಲ್ಲ – ಸಿಎಂ ಸ್ಪಷ್ಟನೆ

    ಕಾಂಗ್ರೆಸ್ (Congress) ಸರ್ಕಾರ ಸ್ಥಿರವಾಗಿರುತ್ತದೆ. ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಒಳಿತಾಗುತ್ತದೆ. ಯಾವ ಮಹಿಳೆಗೆ ಸ್ವಾತಂತ್ರ್ಯವಿರಲಿಲ್ಲ, ಇವತ್ತು ಅವರು ಬಸ್‌ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಅರ್ಜಿ ಹಾಕದಿದ್ರೆ ವಿದ್ಯುತ್‌ ಉಚಿತ ಇಲ್ಲ – ಸಚಿವ ಕೆ.ಜೆ.ಜಾರ್ಜ್

    ಇದೆ ವೇಳೆ ಲೋಕಸಭಾ ಚುನಾವಣೆಯ (Lok Sabha Election) ವಿಚಾರವಾಗಿ ಮಾತನಾಡಿದ ಅವರು, ಸತ್ಯಂ ಅಪ್ರಿಯಂ ಅಸ್ಯತಂ ಪ್ರಿಯ. ಸತ್ಯ ಹೇಳಿದರೆ ನಾನು ಮಠ ಸೇರುವುದಿಲ್ಲ. ಕಾದು ನೋಡಿ. ಏನಾಗುತ್ತದೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದರು. ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರೈಕೆ ಬಗ್ಗೆ ಮೂಗು ಮತ್ತು ಬಾಯಿಯನ್ನು ಉದಾಹರಣೆಯಾಗಿ ಕೊಟ್ಟ ಅವರು, ಮೂಗು ಎಲ್ಲಾ ವಾಸನೆ ಗ್ರಹಿಸುತ್ತದೆ ಆದರೆ ಬಾಯಿಯಲ್ಲಿರುವ ಹೊಲಸನ್ನು ತೋರಿಸುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಇದನ್ನೂ ಓದಿ: ಅನ್ನಭಾಗ್ಯ, ಗೃಹಜ್ಯೋತಿ ಇಂದಿನಿಂದ ಜಾರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಕೋವಿಡ್ ಕಾಟ ಕೊಡಲಿದೆ, ಕೊರೊನಾ ಹೋಗುವಾಗ ಹೆಚ್ಚು ತೊಂದರೆ ಕೊಡುತ್ತೆ: ಕೋಡಿ ಶ್ರೀ ಭವಿಷ್ಯ

    ಮತ್ತೆ ಕೋವಿಡ್ ಕಾಟ ಕೊಡಲಿದೆ, ಕೊರೊನಾ ಹೋಗುವಾಗ ಹೆಚ್ಚು ತೊಂದರೆ ಕೊಡುತ್ತೆ: ಕೋಡಿ ಶ್ರೀ ಭವಿಷ್ಯ

    ಬಳ್ಳಾರಿ: ಮತ್ತೆ ಕೊರೊನಾ ಕಾಟ ಕೊಡಲಿದೆ. ಕೊರೊನಾ ಹೋಗುವಾಗ ಹೆಚ್ಚು ಕಾಟ ಕೊಡಲಿದೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

    ಗಣಿನಾಡು ಬಳ್ಳಾರಿಗೆ ಇಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಆಗಮಿಸಿದ್ದರು. ಬಳ್ಳಾರಿಯ ಕಾಂಗ್ರೆಸ್ ಮುಖಂಡ ಸುನೀಲ್ ರಾವೂರ್ ಅವರ ಮನೆಗೆ ಆಗಮಿಸಿ, ಭಕ್ತಾದಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಕೊರೊನಾ ಕುರಿತು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

    ಕೊರೊನಾ ಒಂದೂವರೆ ವರ್ಷದಲ್ಲಿ ಹೋಗುತ್ತೆ. ಆದರೆ ಹೋಗುವಾಗ ತುಂಬಾ ಕಷ್ಟ ಕೊಟ್ಟು ಹೋಗುತ್ತೆ. ಜಗತ್ತಿನಾದ್ಯಂತ ಕುಡಿಯೋಕೆ ನೀರಿಲ್ಲದ ಹಾಗೆ ಆಗುತ್ತೆ. ಅಷ್ಟೊಂದು ನೋವನ್ನು ಕೊಡುತ್ತೆ ಎಂದು ಶ್ರೀಗಳು ತಿಳಿಸಿದ್ದಾರೆ.

    ಮೂರು ತಿಂಗಳ ಹಿಂದೆ ಹೇಳಿದ್ದೆ, ಮತ್ತೆ ಕೋವಿಡ್ ಬರುತ್ತೆ ಅಂತಾ. ಈಗ ಮತ್ತೆ ಕೋವಿಡ್ ಸೋಂಕು ಬಂದಿದೆ‌. ಕೋವಿಡ್‌ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಜಗತ್ತಿನಾದ್ಯಂತ ಕೋವಿಡ್ ಬಿಡುಗಡೆಯಾಗುತ್ತೆ. ಕೋವಿಡ್ ವಿಶೇಷವೇನೆಂದರೆ, ಮನುಷ್ಯ ಕಷ್ಟ ಬಂದಾಗ ದೇವರು, ಧರ್ಮ ಅಂತಾನೆ ಮತ್ತು ಪ್ರಾರ್ಥನೆ‌ ಮಾಡ್ತಾನೆ. ಕೋವಿಡ್ ನೇರವಾಗಿ ಬಂದು ದೇವರನ್ನೇ ಹಿಡಿದುಕೊಂಡು, ದೇವಸ್ಥಾನಗಳ ಬಾಗಿಲು ಹಾಕಿಸಿತು. ಆಮೇಲೆ ಜನರ ಮೇಲೆ ಬಂತು, ನೀರಿನ ಮೇಲೆ, ಭೂಮಿ ಮೇಲೆ ಬಂತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ