Tag: Kodi

  • 30 ವರ್ಷಗಳ ನಂತರ ಕೋಡಿ ಹರಿದ ಕೆರೆಗೆ ಮೂವರು ಬಾಲಕರ ಬಲಿ

    30 ವರ್ಷಗಳ ನಂತರ ಕೋಡಿ ಹರಿದ ಕೆರೆಗೆ ಮೂವರು ಬಾಲಕರ ಬಲಿ

    ಚಿಕ್ಕಬಳ್ಳಾಪುರ: ಧಾರಾಕಾರ ಮಳೆಯಿಂದ 30 ವರ್ಷಗಳ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಡೇಗಂಡ್ಲು ಗ್ರಾಮದ ಕೆರೆ ಕೋಡಿ ಹರಿದಿದ್ದು, ನೋಡಲು ಹೋದ ಮೂವರು ಬಾಲಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

    ಸಂಜೆ ಶಾಲೆ ಮುಗಿದ ಮೇಲೆ ಕೆರೆ ನೋಡಲು ಹೋದ ಬಾಲಕರು ಕೆರೆಯಲ್ಲಿ ಈಜಾಡಲು ಹೋಗಿದ್ದು, ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೋಡೇಗಂಡ್ಲು ಗ್ರಾಮದ ವೆಂಕಟೇಶ್-ಗಾಯತ್ರಿ ದಂಪತಿ ಅವಳಿ ಮಕ್ಕಳಾದ ರಾಮ(10) – ಲಕ್ಷ್ಮಣ(10) ಹಾಗೂ ಮುನಿರಾಜು-ಗೌತಮಿ ದಂಪತಿ ಪ್ರಜ್ವಲ್(09) ಮೃತ ದುರ್ದೈವಿಗಳು. ಇದನ್ನೂ ಓದಿ:  ಇನ್ಮುಂದೆ ಶಾಲೆಗಳ ಮುಂದೆ ಮಾರುವಂತಿಲ್ಲ ಐಸ್‌ಕ್ರೀಮ್, ಚಾಟ್ ಫುಡ್ – ಇಲ್ಲಿದೆ ವಿವರ 

    ಮೂವರು ಬಾಲಕರ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಮೃತರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇತಿಹಾಸ ಪ್ರಸಿದ್ಧ ಹಳೇಬೀಡಿನ ಕೆರೆ ಕೋಡಿ ಒಡೆದು ನೀರು ಹೊರಕ್ಕೆ- ರೈತರ ಆಕ್ರೋಶ

    ಇತಿಹಾಸ ಪ್ರಸಿದ್ಧ ಹಳೇಬೀಡಿನ ಕೆರೆ ಕೋಡಿ ಒಡೆದು ನೀರು ಹೊರಕ್ಕೆ- ರೈತರ ಆಕ್ರೋಶ

    – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಕಿಡಿ

    ಹಾಸನ: ಇತಿಹಾಸ ಪ್ರಸಿದ್ಧ ಹಳೇಬೀಡಿನ ದ್ವಾರ ಸಮುದ್ರ ಕೆರೆಕೋಡಿಯನ್ನು ಒಡೆದು ನೀರು ಖಾಲಿ ಮಾಡಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು, ಸಾರ್ವಜನಿಕರು ಆಕ್ರೋಶ ಹೊರಹಾಕಿ, ಪ್ರತಿಭಟನೆ ನಡೆಸಿದ್ದಾರೆ.

    ದ್ವಾರಸಮುದ್ರ ಕೆರೆಯ ಏರಿ ಕುಸಿಯುವ ಭೀತಿ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆರೆ ಕೋಡಿ ಒಡೆದು ನೀರನ್ನು ಹೊರ ಬಿಡುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ಹೊರಹಾಕುತ್ತಿರುವ ಸಾರ್ವಜನಿಕರು, ಹದಿಮೂರು ವರ್ಷದ ನಂತರ ದ್ವಾರಸಮುದ್ರ ಕೆರೆ ತುಂಬಿದೆ. ಕೆರೆಯ ಏರಿ ಕುಸಿಯುವ ಬಗ್ಗೆ ಕೆರೆ ಖಾಲಿ ಇದ್ದಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆದರೆ ಅಧಿಕಾರಿಗಳು ಆಗ ಕೆರೆ ಏರಿ ದುರಸ್ಥಿ ಮಾಡಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈಗ ಕೆರೆ ತುಂಬಿದ ನಂತರ ಕೆರೆ ಏರಿ ಕುಸಿಯುತ್ತೆ ಎಂದು ಕೋಡಿ ಒಡೆದು ನೀರನ್ನು ಹೊರಬಿಡುತ್ತಿದ್ದಾರೆ. ಅಧಿಕಾರಿಗಳ ಬೇಜವಬ್ದಾರಿತನದಿಂದ ಕೆರೆ ತುಂಬಿದ್ದರೂ ರೈತರು ಅದರಿಂದ ಅನುಕೂಲ ಪಡೆಯದಂತೆ ಆಗಿದೆ. ಇನ್ನಾದರೂ ಅಧಿಕಾರಿಗಳು ಕೆರೆಕೋಡಿ ಪೂರ್ತಿ ಒಡೆಯುವ ಆಲೋಚನೆ ಕೈಬಿಟ್ಟು, ಕುಸಿಯುವ ಬೀತಿಯಲ್ಲಿರುವ ಕೆರೆ ಏರಿಯನ್ನು ವೈಜ್ಞಾನಿಕ ವಿಧಾನ ಅನುಸರಿಸಿ ದುರಸ್ಥಿ ಮಾಡಬೇಕಾಗಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.