Tag: Kodava

  • ಕೊಡವರಿಂದ ಅದ್ಧೂರಿಯಾಗಿ ಕಕ್ಕಡ ಹಬ್ಬ ಆಚರಣೆ-ಫೋಟೋಗಳಲ್ಲಿ ನೋಡಿ

    ಕೊಡವರಿಂದ ಅದ್ಧೂರಿಯಾಗಿ ಕಕ್ಕಡ ಹಬ್ಬ ಆಚರಣೆ-ಫೋಟೋಗಳಲ್ಲಿ ನೋಡಿ

    ಕೊಡಗು: ಜಿಲ್ಲೆಯಲ್ಲಿ ಇಂದು ಕೊಡವ ಸಮುದಾಯದ ಜನರು ಎಲ್ಲಡೆ ‘ಕಕ್ಕಡ ಪದಿನೆಟ್’ ಎಂದು ಕರೆಯಲಾಗುವ ಆಟಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

    18 ಔಷದ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪನ್ನು ಮನೆಗೆ ತಂದು ಅದರಿಂದ ರುಚಿ ರುಚಿಯಾದ ಖಾದ್ಯಗಳನ್ನು ತಯಾರು ಮಾಡುತ್ತಾರೆ. ಈ ಮದ್ದು ಸೊಪ್ಪಿನಿಂದ ತಯಾರಿಸುವ ಪಾಯಸವನ್ನು ಸೇವಿಸುವದರಿಂದ ಶೀತಕ್ಕೆ ಸಂಬಂಧಿಸಿದ ರೋಗಗಳು ಬರುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

    ಉದ್ದನೆಯ ಕಡ್ಡಿಯಲ್ಲಿ ಎಲೆಗಳನ್ನು ತುಂಬಿರುವ ಈ ಗಿಡಗಳು ಕೊಡಗಿನ ಅರಣ್ಯ ಪ್ರದೇಶಗಳಲ್ಲಿ ಬೆಳೆಯುತ್ತವೆ. ಈ ಎಲೆಗಳನ್ನು ಮಡಿಕೇರಿ, ವಿರಾಜಪೇಟೆ ಸೇರಿದಂತೆ ನಗರದ ವಿವಿಧೆಡೆ ಮಾರಾಟ ಮಾಡಲಾಗುತ್ತದೆ. ಆಟಿ ಅಥವಾ ಅಷಾಡಮಾಸದ 18 ನೇ ದಿನ 18 ಗಿಡಮೂಲಿಕೆ ಔಷಧಿಗಳ ಗುಣಗಳನ್ನು ಮೈದುಂಬಿಕೊಳ್ಳೋ ಈ ವಿಶೇಷ ಸೊಪ್ಪನ್ನು ಮಾರುಕಟ್ಟೆಯಿಂದ ಖರೀದಿಸಿ ಮನೆಗೆ ತಂದು ಅದರಿಂದ ಪಾಯಸ ಹಾಗೂ ಹಲ್ವಾ ಸೇರಿದಂತೆ ಹಲವು ಬಗೆ ಬಗೆಯ ತಿಂಡಿಗಳನ್ನ ತಯಾರಿಸಿ ಸವಿಯುತ್ತಾರೆ.

    ಆಧುನೀಕತೆಯಲ್ಲಿ ಜನರು ಇಂತಹ ಗ್ರಾಮೀಣ ಹಬ್ಬಗಳನ್ನು ಆಚರಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪ್ರದಾಯವನ್ನು ಉಳಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸಾರ್ವಜನಿಕವಾಗಿ ಆಟಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಂಡು ಬರುತ್ತಿದೆ. ಈ ಹಬ್ಬವನ್ನು ಇನ್ನೂ ನಾಲ್ಕೈದು ದಿನಗಳವರೆಗೆ ಆಚರಿಸಲಾಗುತ್ತದೆ.

  • ಕೊಡಗಿನ ಕೌಟುಂಬಿಕ ಹಾಕಿ ಉತ್ಸವಕ್ಕೆ ಚಾಲನೆ

    ಕೊಡಗಿನ ಕೌಟುಂಬಿಕ ಹಾಕಿ ಉತ್ಸವಕ್ಕೆ ಚಾಲನೆ

    ಕೊಡಗು: ಜಿಲ್ಲೆಯ ಪ್ರಸಿದ್ಧ ಕೌಟುಂಬಿಕ ಹಾಕಿ ಉತ್ಸವಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ. ಸಂಭ್ರಮ ಸಡಗರದ ನಡುವೆ ಸಹಸ್ರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಹಾಕಿ ಹಬ್ಬ ಪ್ರಾರಂಭಗೊಂಡಿದೆ. ಇಂದಿನಿಂದ ಒಂದು ತಿಂಗಳು ನಡೆಯುವ ಹಾಕಿ ಹಬ್ಬದಲ್ಲಿ 306 ಕೊಡವ ಕುಟುಂಬದ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

    ಒಲಿಂಪಿಯನ್ ಎ.ಬಿ ಸುಬ್ಬಯ್ಯ ಅವರು ಕಾರ್ಯಕ್ರಮ ಉದ್ಘಾಟಿಸೋ ಮೂಲಕ ಸಹಸ್ರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಹಾಕಿ ಹಬ್ಬಕ್ಕೆ ಚಾಲನೆ ನೀಡಿದರು. ಹಾಕಿ ಉತ್ಸವದ ಸಂಸ್ಥಾಪಕ ಪಾಂಡಂಡ ಕುಟ್ಟಪ್ಪಾ ಬೆಳ್ಳಿ ಹಾಕಿ ಸ್ಟಿಕ್‍ನಲ್ಲಿ ಬೆಳ್ಳಿ ಚೆಂಡನ್ನು ಹೊಡೆಯೋ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಮಡಿಕೇರಿ ತಾಲೂಕಿನ ನಾಪೋಕ್ಲುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ಭಾರತ ವಿಶ್ರಾಂತ ತಂಡ ಹಾಗೂ ಕೂರ್ಗ್ ರೆಜಿಮೆಂಟ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು.

    ಕಳೆದ 21 ವರ್ಷಗಳಿಂದ ನಡೆಯುತ್ತಿರುವ ಕೊಡಗಿನ ಈ ಹಾಕಿ ಉತ್ಸವ ವರ್ಷದಿಂದ ವರ್ಷಕ್ಕೆ ರಂಗೇರುತ್ತಿದೆ. ಕೊಡಗಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಶುರುವಾದ ಈ ಹಾಕಿ ಹಬ್ಬ ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಒಂದೊಂದು ಕುಟುಂಬಗಳು ಆಯೋಜನೆ ಮಾಡೋ ಕೌಟುಂಬಿಕ ಹಾಕಿಯನ್ನು ಈ ಬಾರಿ ಬಿದ್ದಾಟಂಡ ಕುಟುಂಬಸ್ಥರು ನಡೆಸುತ್ತಿದ್ದಾರೆ. ಮುಂದಿನ ಒಂದು ತಿಂಗಳು ಇದೇ ಮೈದಾನದಲ್ಲಿ ರೋಮಾಂಚನಕಾರಿ ಪಂದ್ಯಗಳು ನಡೆಯಲಿವೆ.

  • ಕೊಡವ ಸಮುದಾಯದ ಜನ್ರಿಂದ ಸೌರಮಾನ ಯುಗಾದಿ ಆಚರಣೆ

    ಕೊಡವ ಸಮುದಾಯದ ಜನ್ರಿಂದ ಸೌರಮಾನ ಯುಗಾದಿ ಆಚರಣೆ

    ಕೊಡಗು: ಕೊಡವ ಸಮುದಾಯದ ಜನರು ತಮ್ಮ ಸಂಪ್ರದಾಯದಂತೆ ಇಂದು ಸೌರಮಾನ ಯುಗಾದಿಯನ್ನು ಆಚರಿಸಿದರು.

    ಕೊಡವ ಸಮುದಾಯದ ಜನ ಈ ಹಬ್ಬವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಇಂದು ಗದ್ದೆಯಲ್ಲಿ ಸಾಂಕೇತಿಕವಾಗಿ ಉಳುಮೆ ಮಾಡಿದರೆ ಮುಂದೆ ಕೃಷಿ ಚಟುವಟಿಯಕೆಯಲ್ಲಿ ತೊಡುಗಲು ಶುಭ ದಿನವನ್ನು ಮತ್ತೆ ನೋಡಬೇಕಿಲ್ಲ ಎಂಬುವುದು ಕೊಡವ ಸಮುದಾಯದ ಜನರ ನಂಬಿಕೆ.

    ಇಂದು ಎಲ್ಲರೂ `ಎಡಮ್ಯಾರ್ ಒಂದ್’ ಹಬ್ಬವನ್ನು ಆಚರಣೆ ಮಾಡಿದರು. ಕೊಡವರ ಎಲ್ಲ ಆಚರಣೆಗಳ ಮೂಲ ಕೃಷಿ. ಬೆಳಗ್ಗೆ ದೇವರನ್ನು ಪ್ರಾರ್ಥಿಸಿ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಹಾಗೂ ನೇಗಿಲುಗಳನ್ನು ಪೂಜಿಸಲಾಯಿತು. ಬಳಿಕ ಗದ್ದೆ ಉಳುಮೆ ಮಾಡುವ ಮೂಲಕ ವರ್ಷದ ಉಳುಮೆಗೆ ಚಾಲನೆ ನೀಡಲಾಯಿತು.

    ಮಡಿಕೇರಿ ತಾಲೂಕಿನ ಹೋದ್ದೂರು ಗ್ರಾಮದ ಐನ್ ಮನೆಯಲ್ಲಿ ಇಂದು ದೇವರಿಗೆ ಅಕ್ಕಿ ಹಾಕಿ ನಮಿಸಿ, ಗದ್ದೆಯಲ್ಲಿ ಎತ್ತುಗಳನ್ನು ಪೂಜಿಸಲಾಯಿತು.