Tag: Kodagu Women

  • ವಕ್ಫ್ ಆಸ್ತಿ ಅತಿಕ್ರಮಿಸಿದ್ದೀರಿ, ಮನೆ ಖಾಲಿ ಮಾಡಿ – ಕುಶಾಲನಗರದಲ್ಲಿ ಕೊಡವ ಮಹಿಳೆಗೆ ಬೆದರಿಕೆ

    ವಕ್ಫ್ ಆಸ್ತಿ ಅತಿಕ್ರಮಿಸಿದ್ದೀರಿ, ಮನೆ ಖಾಲಿ ಮಾಡಿ – ಕುಶಾಲನಗರದಲ್ಲಿ ಕೊಡವ ಮಹಿಳೆಗೆ ಬೆದರಿಕೆ

    – ಷರಿಯಾ ಕೋರ್ಟ್‌ಗೆ ಬರಬೇಕಾಗುತ್ತೆ ಅಂತ ಆವಾಜ್‌

    ಮಡಿಕೇರಿ: ಇದ್ದಕ್ಕಿದ್ದಂತೆ ಮಹಿಳೆಯೊಬ್ಬರ ಮನೆಯ ಆವರಣಕ್ಕೆ ಪ್ರವೇಶಿಸಿ ನೀವು ವಕ್ಫ್ ಆಸ್ತಿಯನ್ನು (Waqf Property) ಅತಿಕ್ರಮಿಸಿಕೊಂಡು ಮನೆ ಕಟ್ಟಿದೀರಿ, ತೆರವುಗೊಳಿಸಿ ಎಂದು ಕೆಲವರು ಬೆದರಿಕೆ ಒಡ್ಡಿದ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ.

    ಈ ಕುರಿತು ಕೊಡಗು ಎಸ್ಪಿಗೆ ಗ್ರಾಮದ ಮಹಿಳೆ ರೇಣುಕಾ ಉತ್ತಪ್ಪ ದೂರು ನೀಡಿದ್ದಾರೆ. ತಾವು ತಮ್ಮ ಕುಶಾಲನಗರದ (Kushalnagar) ಮುಳ್ಳುಸೋಗೆ ಮನೆಯಲ್ಲಿ ಒಬ್ಬರೇ ಇರುವಾಗ ಇಬ್ಬರು ಬಂದು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ನಗರ ನಿಮ್ಮ ಜಹಗೀರು ಅಂದುಕೊಂಡಿದ್ದೀರಾ? – ಡಿಕೆಶಿ ವಿರುದ್ಧ ಆರ್.ಅಶೋಕ್ ವಾಗ್ದಾಳಿ

    ದೂರಿನಲ್ಲಿ ಏನಿದೆ?
    ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿರುವ ರೇಣುಕಾ ಉತ್ತಪ್ಪ ಮುಳ್ಳುಸೋಗೆಯಲ್ಲಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಕಳೆದ ಅಕ್ಟೋಬರ್‌ 25ರಂದು ಬೆಳಿಗ್ಗೆ 11 ಗಂಟೆಗೆ, ತಾವೊಬ್ಬರೇ ಮನೆಯಲ್ಲಿ ಇರುವಾಗ ಅನ್ಯ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಮನೆಯ ಆವರಣಕ್ಕೆ ಪ್ರವೇಶಿಸಿದ್ದಾರೆ. ಇದು ವಕ್ಫ್ ಆಸ್ತಿ, ತಕ್ಷಣವೇ ಮನೆಯನ್ನು ತೆರವುಗೊಳಿಸಿ ವಕ್ಫ್‌ಗೆ ಒಪ್ಪಿಸುವಂತೆ ಬೆದರಿಸಿದ್ದಾರೆ.

    ಆಗ ನಾನು ನನ್ನ ತಂದೆ 1984 ರಲ್ಲಿ ಮುಳ್ಳುಸೋಗೆಯಲ್ಲಿ ಸರ್ವೆ ನಂಬರ್ 79/2 ರಲ್ಲಿ 36 ಸೆಂಟ್ಸ್ ಜಮೀನನ್ನು ಮಾನ್ಯಪಂಡ ಬೋಪಣ್ಣ ಎಂಬುವವರಿಂದ ಖರೀದಿಸಿದ್ದರು. ಅಂದಿನಿಂದ ನಾವು ಇದೇ ಆಸ್ತಿಯಲ್ಲಿ ವಾಸಿಸುತ್ತಿದ್ದೇವೆ. ಇತ್ತೀಚೆಗೆ ನನ್ನ ಪೋಷಕರು ನಿಧನರಾದರು, ನಂತರ ನಾನು ಇದನ್ನು ಪಿತ್ರಾರ್ಜಿತವಾಗಿ ಪಡೆದಿದ್ದೇನೆ, ಏಕೆ ತೆರವುಗೊಳಿಸಬೇಕು? ನಿಮ್ಮ ಬಳಿ ಯಾವುದಾದರೂ ನ್ಯಾಯಾಲಯದ ನೋಟಿಸ್ ಅಥವಾ ವಕ್ಫ್‌ಗೆ ಸೇರಿರುವುದಕ್ಕೆ ದಾಖಲೆ ಕೊಡಿ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಸಿಎಂ ಹೆಸರು ಹಾಳು ಮಾಡಲು ಮುಡಾ ಕೇಸ್‌ನಲ್ಲಿ ಆರೋಪ ಮಾಡ್ತಿದ್ದಾರೆ – ದಿನೇಶ್ ಗುಂಡೂರಾವ್

    ಆಗ ಅವರು ನೀವು ಮನೆ ಖಾಲಿ ಮಾಡದಿದ್ದರೇ ಹೊರಗೆ 15 ಜನರು ಇದ್ದಾರೆ. ಅವರನ್ನು ಕರೆಯುವುದಾಗಿ ಬೆದರಿಸಿದರು. ಇದರಿಂದ ಕೋಪಗೊಂಡ ಮಹಿಳೆ ಕೂಡಲೇ ಮನೆಯ ಆವರಣದಿಂದ ಹೊರ ಹೋಗುವಂತೆ ಗದರಿಸಿದ್ದಾರೆ. ಆಗ ಅವರು ನಮಗೆ ಷರಿಯಾ ಕೋರ್ಟ್ ಇದೆ. ನೀವು ಬೆಂಗಳೂರಿನ ಷರಿಯಾ ಕೋರ್ಟ್‌ಗೆ (Sharia Court) ಬರಬೇಕಾಗುತ್ತದೆ. ಅಲ್ಲಿ ನಿಮ್ಮ ಮಾಲೀಕತ್ವ ಸಾಬೀತುಪಡಿಸಬೇಕು ಎಂದು ಬೆದರಿಸಿ ಸ್ಥಳದಿಂದ ತೆರಳಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ಆಶಿಕಾ ರಂಗನಾಥ್ ನೋಡಲು ಮುಗಿಬಿದ್ದ ಜನ : ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದ ಅಂಬುಲೆನ್ಸ್

    ಘಟನೆ ಕುರಿತು ಕೊಡವ ಸಮಾಜದ ಒಕ್ಕೂಟಗಳ ಅಧ್ಯಕ್ಷರಿಗೂ ಸೂಕ್ತ ನೆರವು ನೀಡುವಂತೆ ಕೋರಿ ದೂರು ಸಲ್ಲಿಸಿದ್ದಾರೆ. ಕುಶಾಲನಗರ ಪೋಲೀಸರು ತನಿಖೆ ನಡೆಸುತಿದ್ದು, ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

  • ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡಿದ್ದಕ್ಕೆ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಭೂಪ!

    ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡಿದ್ದಕ್ಕೆ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಭೂಪ!

    – ಪತ್ನಿಯನ್ನು ಕೊಂದು ತಾನೇ ಪೊಲೀಸರಿಗೆ ಶರಣಾದ ಪತಿ

    ಮಡಿಕೇರಿ: ಬೇರೆಯವರೊಂದಿಗೆ ಫೋನ್‌ನಲ್ಲಿ (Phone) ಮಾತನಾಡುತ್ತಿದ್ದುದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಗುಂಡಿಕ್ಕಿ ಕೊಂದು, ಬಳಿಕ ತಾನೇ ಪೊಲೀಸರಿಗೆ ಶರಣಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದಲ್ಲಿ ನಡೆದಿದೆ.

    ಶಿಲ್ಪಾ ಸೀತಮ್ಮ (40) ಮೃತ ದುರ್ದೈವಿ, ಪತಿ ನಾಯಕಂಡ ಬೋಪಣ್ಣ (45) ಗುಂಡಿಕ್ಕಿ ಕೊಂದ ಆರೋಪಿ. ತನ್ನ ಪತ್ನಿ ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದುದ್ದಕ್ಕೆ ಆಕ್ಷೇಪಿಸಿದ ನಂತರ ಇಬ್ಬರ ನಡುವೆ ಜಗಳವಾಗಿ ಪತಿ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 24 ಗಂಟೆ ವಿದ್ಯುತ್‌ ಉಚಿತ, ಯುವಕರಿಗೆ ಉದ್ಯೋಗ ಖಚಿತ, ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ʻಕೇಜ್ರಿವಾಲ್‌ ಕಿ ಗ್ಯಾರಂಟಿʼ ಘೋಷಣೆ!

    ಪ್ರೀತಿಸಿ ಮದುವೆಯಾಗಿದ್ದ ಜೋಡಿ – ಹತ್ಯೆಗೆ ಕಾರಣ ಏನು?
    ಶಿಲ್ಪಾ ಸೀತಮ್ಮ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ. 2012 ರಿಂದ 2017ರ ವರೆಗೆ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆಸಲಿಸಿದ್ದರು. ಶುಕ್ರವಾರ (ಜು.19) ರಾತ್ರಿ ಬೇರೆಯವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇಂದು (ಶನಿವಾರ) ಬೆಳಗ್ಗೆಯೂ ಪತಿ ಆಕ್ಷೇಪಿಸಿದ್ದ, ಇದರಿಂದ ಇಬ್ಬರ ನಡುವೆ ಜಗಳ ಏರ್ಪಟ್ಟಿತ್ತು, ಕೊನೆಗೆ ಜಗಳ ವಿಕೋಪಕ್ಕೆ ತಿರುಗಿ ಪತಿಯೇ ಗುಂಡಿಕ್ಕಿ ಕೊಂದಿದ್ದಾನೆ. ಹತ್ಯೆ ಮಾಡಿ ಪೊಲೀಸರಿಗೆ ತಾನೇ ಶರಣಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    17 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಇಬ್ಬರು ಮದುವೆಯಾಗಿದ್ದರು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಲ್ಲದೇ ಬೋಪಣ್ಣ ವಿರಾಜಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದಲ್ಲಿ ಸರ್ವಿಸ್ ಸ್ಟೇಷನ್ ಹಾಗೂ ಕಾಫಿ ತೋಟದ ಮಾಲೀಕನಾಗಿದ್ದ. ಕಳೆದ ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ಪರಸ್ಪರ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದ್ರೆ ಶುಕ್ರವಾರ ರಾತ್ರಿ ಗಲಾಟೆ ದೊಡ್ಡದಾಗಿ ನಡೆದಿತ್ತು ಎನ್ನಲಾಗಿದೆ. ಇದನ್ನೂ ಓದಿ: Madikeri: ಗುಡ್ಡ ಕುಸಿಯುವ ಭೀತಿ; ಸಂಪಾಜೆ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ!

    ಪತ್ನಿಯನ್ನು ಹತ್ಯೆಗೈದ ಬಳಿಕ ಬೋಪಣ್ಣ ಪೊಲೀಸ್ ಠಾಣೆಗೆ ಕೋವಿಯೊಂದಿಗೆ ಬಂದು ಶರಣಾಗಿದ್ದಾನೆ. ಬಳಿಕ ಘಟನಾ ಸ್ಥಳಕ್ಕೆ ವಿರಾಜಪೇಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: `Public TV’ ಇಂಪ್ಯಾಕ್ಟ್‌: ಪ್ರವಾಹ ಪೀಡಿತ ಪ್ರದೇಶ ಕರಡಿಗೋಡು ಗ್ರಾಮಕ್ಕೆ ಸಚಿವ ಬೋಸರಾಜು ಭೇಟಿ