Tag: Kodagu Police

  • ಕಾಲೇಜಿಗೆ ತೆರಳಿದ ಬಾಲಕ ಕಣ್ಮರೆ – ಫೋಟೋ ಹಿಡಿದು ಬೀದಿ ಬೀದಿಯಲ್ಲಿ ತಾಯಿ ಅಲೆದಾಟ!

    ಕಾಲೇಜಿಗೆ ತೆರಳಿದ ಬಾಲಕ ಕಣ್ಮರೆ – ಫೋಟೋ ಹಿಡಿದು ಬೀದಿ ಬೀದಿಯಲ್ಲಿ ತಾಯಿ ಅಲೆದಾಟ!

    ಮಡಿಕೇರಿ: ಆ ಬಾಲಕ ಸದಾ ಓದಿನಲ್ಲಿ ಮುಂದೆ ಇದ್ದ. ಎಲ್ಲಾ ಗೆಳೆಯರೊಂದಿಗೆ ಆಟ ಪಾಠ ಕ್ರೀಡೆ ಸೇರಿದಂತೆ ಎಲ್ಲದರಲ್ಲೂ ಚಟುವಟಿಕೆಗಳಿಂದ ಇರುತ್ತಿದ್ದ. ಅಂದು ದೀಪಾವಳಿ ಹಬ್ಬ ಇರುವುದರಿಂದ ಹಾಸ್ಟೆಲ್ ನಿಂದ ನೇರವಾಗಿ ತನ್ನ ಮನೆಗೆ ಬಂದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಹಬ್ಬ ರಜೆ ಮುಗಿಸಿಕೊಂಡು ಹೊರಟಿದ್ದ. ಇದೀಗ ನಿಗೂಢವಾಗಿ ಕಣ್ಮರೆಯಾಗಿದ್ದಾನೆ.

    ಇತ್ತ ಮಗ ಕಾಣೆಯಾಗಿ ಒಂದು ತಿಂಗಳು ಕಳೆದರೂ ಸುಳಿವು ಇಲ್ಲ ಎಂದು ಬಾಲಕನ ತಾಯಿ ತನ್ನ ಮಗನ ಫೋಟೋ ಇಡಿದುಕೊಂಡು ಊರು ಊರು, ಬೀದಿ ಬೀದಿ ಅಲೆಯುತ್ತಾ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ.

    ಮಗನಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಮನದಾಸೆಯಿಂದ ಕೊಡಗಿನ ಗೋಣಿಕೋಪ್ಪದಿಂದ ದೂರದ ದಕ್ಷಿಣ ಕನ್ನಡ ಕಾಲೇಜೊಂದರಲ್ಲಿ ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದಋು ತಾಯಿ. ಆತನ ಮುಂದಿನ ಭವಿಷ್ಯವನ್ನು ಉತ್ತಮಗೊಳಿಸಲು ಹತ್ತಾರು ಕನಸುಗಳನ್ನು ಕಂಡಿದ್ದಳು. ತನ್ನ ಒಬ್ಬನೇ ಮಗನನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದ ತಾಯಿ ಪ್ರತಿನಿತ್ಯ ಮಗನೊಂದಿಗೆ ಮಾತನಾಡುತ್ತಾ ತನ್ನ ಜೀವನವನ್ನು ಕಳೆಯುತ್ತಿದ್ದಳು.

    ಕಳೆದ ದೀಪಾವಳಿ ರಜೆಯಂದು ಕಾಲೇಜಿನಿಂದ ಆಗಮಿಸಿದ್ದ. ಮಗ ತಾಯಿಯೊಂದಿಗೆ ದೀಪಾವಳಿ ಹಬ್ಬ ಖುಷಿ ಖುಷಿಯಿಂದಲೇ ಆಚರಿಸಿ ಸಂಭ್ರಮಿಸಿದ್ದ. ದೀಪಾವಳಿ ರಜೆ ಮುಗಿಯುತ್ತಿದ್ದಂತೆಯೇ ಎಂದಿನಂತೆ ಕಾಲೇಜಿನ ಹಾಸ್ಟೆಲ್‌ಗೆ ತೆರಳಲು ಮಗ ಅಣಿಯಾಗಿದ್ದ ಹೆತ್ತ ತಾಯಿ ತನ್ನ ಮಗನಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಬ್ಯಾಗಿಗೆ ತುಂಬಿ ಮಗನೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿ ಬಸ್‌ ಹತ್ತಿಸಿದ್ದಳು ಅಷ್ಟೇ.. ಮಗ ಬಸ್ಸಿನಲ್ಲಿ ಹೋದವನು 2-3 ದಿನ ಕಳೆದ್ರು ಹಾಸ್ಟೆಲ್‌ಗೂ ತಲುಪದೇ ಎಲ್ಲಿ ಹೋಗಿದನ್ನೋ ಗೋತ್ತಿಲ್ಲದೇ ಬಾಲಕ ನಿಗೂಢವಾಗಿ ಕಣ್ಮರೆಯಾಗಿದ್ದಾನೆ. ಹೀಗಾಗಿ ದೀಕ್ಷಿತ್ (17) ತಾಯಿ ಗೋಣಿಕೋಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಪ್ರತಿನಿತ್ಯ ಒಂದಲ್ಲ ಒಂದು ಊರಿಗೆ ತೆರಳಿ ಮಗನಿಗಾಗಿ ನಿತ್ಯ ಹುಡುಕಾಟ ನಡೆಸುತ್ತಿದ್ದಾರೆ.

    ಇನ್ನೂ ಕಾಲೇಜು ವಿದ್ಯಾರ್ಥಿ ದೀಕ್ಷಿತ್ ಕಾಣೆಯಾದ ಬಗ್ಗೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯುವಕನ ಶೋಧ ಕಾರ್ಯಕ್ಕೆ ಪೋಲಿಸರ 3 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪೊಲೀಸರ ತಂಡವು ಈಗಾಗಲೇ ಮಂಗಳೂರಿನ ಕಾಲೇಜು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಹೊಟೇಲ್, ಲಾಡ್ಜ್, ಬೀಚ್ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರೆಸಿದೆ.

  • ವಿಕ್ರಮ್‌ ಗೌಡ ಎನ್‌ಕೌಂಟರ್‌ ಬಳಿಕ ಕೊಡಗಿನಲ್ಲಿ – ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ತೀವ್ರ

    ವಿಕ್ರಮ್‌ ಗೌಡ ಎನ್‌ಕೌಂಟರ್‌ ಬಳಿಕ ಕೊಡಗಿನಲ್ಲಿ – ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ತೀವ್ರ

    – 2012ರಿಂದ 2024ರ ವರೆಗೆ ಕೊಡಗು ಜಿಲ್ಲೆಯಲ್ಲಿ ನಕ್ಸಲರ ಹೆಜ್ಜೆ ಗುರುತು ಹೇಗಿದೆ?

    ಮಡಿಕೇರಿ: ನಕ್ಸಲ್‌ ನಾಯಕ ವಿಕ್ರಮ್‌ ಗೌಡ (Vikram Gowda) ಎನ್‌ಕೌಂಟರ್‌ ಬಳಿಕ ಆತನ ಸಹಚರರು ದಿಕ್ಕಾಪಾಲಾಗಿ ಓಡಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆ ತಪ್ಪಿಸಿಕೊಂಡ ನಕ್ಸಲರ ಗುಂಪು ಕೊಡಗು ಜಿಲ್ಲೆಯನ್ನು ಪ್ರವೇಶಿಲಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ನಕ್ಸಲ್‌ ನಿಗ್ರಹ ದಳ (ANF) ಕೊಡಗು ಜಿಲ್ಲೆಯ ಗಡಿಭಾಗ ಸೇರಿದಂತೆ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಕೊಂಬಿಂಗ್‌ ಕಾರ್ಯಾಚರಣೆ ನಡೆಸುತ್ತಿದೆ. ಕೊಡಗು ಪೊಲೀಸರು ಇದಕ್ಕೆ ಕೈಜೋಡಿಸಿದ್ದಾರೆ.

    ಕೊಡಗು (Kodagu) ಜಿಲ್ಲೆಯ ಗಡಿ ಭಾಗವಾದ ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ನಾಕಾಬಂಧಿ ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ವಾಹನಗಳನ್ನೂ ತಪಾಸಣೆ ನಡೆಸುತ್ತಿದ್ದಾರೆ. ಜೊತೆಗೆ ನಕ್ಸಲರು ಹಿಂದೆ ಓಡಾಟ ನಡೆಸಿದ್ದ ಸ್ಥಳಗಳಲ್ಲಿಯೂ ಕೊಂಬಿಂಗ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸರಣಿ ಅಪಘಾತ – ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ಕೊಡಗು ಜಿಲ್ಲೆಯಲ್ಲಿ ನಕ್ಸಲರ ಹೆಜ್ಜೆ ಗುರುತುಗಳು:
    * 2012 ಅಕ್ಟೋಬರ್‌ 29ರ ಸಂಜೆ 5 ಗಂಟೆ ಸುಮಾರಿಗೆ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ಪಳಂಗಪ್ಪ ಎಂಬುವವರ ಮನೆಗೆ ಭೇಟಿ ನೀಡಿದ ವಿಕ್ರಮ್ ಗೌಡ, ಆಪ್ತ ಮಹೇಶ್ ಜಾನ್ ಮನೆಯಿಂದ ದವಸ ಧಾನ್ಯ ತೆಗೆದುಕೊಂಡು ಹೋಗಿದ್ದ.

    * 2013ರ ಫೆಬ್ರವರಿ 13ರಂದು ಸಂಜೆ 4 ಗಂಟೆ ಸುಮಾರಿಗೆ ಭಾಗಮಂಡಲ ಬಳಿಕ ಚೇರಂಗಾಲ ಗ್ರಾಮದ ಪ್ರಭಾಕರನ್ ಎಸ್ಟೇಟ್ ಹೌಸ್‌ಗೆ ವಿಕ್ರಮ್‌ ಗೌಡ ಭೇಟಿ ನೀಡಿದ್ದ. ಸಹಚರರಾದ ಸುಂದರಿ, ಪ್ರವೀಣ್, ರೂಪೇಶ್ ಜೊತೆಗಿದ್ದರು.

    * 2013ರ ಫೆಬ್ರವರಿ 14ರಂದು ಸಂಜೆ 6 ಗಂಟೆ ಸುಮಾರಿಗೆ ವಿರಾಜಪೇಟೆ ಗ್ರಾಮಾಂತರ ವ್ಯಾಪ್ತಿಯ ಕಾಡಿನಲ್ಲಿ ರೂಪೇಶ್, ಕೃಷ್ಣ ಮೂರ್ತಿ, ರವೀಂದ್ರ ತಂಡ ಕಾಣಿಸಿಕೊಂಡಿತ್ತು.

    * 2013ರ ಮಾರ್ಚ್‌ 12ರಂದು ಸಂಜೆ 4:30ರ ಸುಮಾರಿಗೆ ಪೋನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಗ್ರಾಮದಲ್ಲಿ ರೂಪೇಶ್, ಕೃಷ್ಣ ಮೂರ್ತಿ, ರವೀಂದ್ರ ಕಾಣಿಸಿಕೊಂಡಿದ್ರು.

    * 2013ರ ಮಾರ್ಚ್‌ 14ರಂದು ಸಂಜೆ 6:30 ಸುಮಾರಿಗೆ ಶ್ರೀಮಂಗಲ ಕಾಡಿನಲ್ಲಿ ರೂಪೇಶ್, ಕೃಷ್ಣ ಮೂರ್ತಿ, ರವೀಂದ್ರ ಓಡಾಟ.

    * 2014ರ ಮಾರ್ಚ್‌ 3ರಂದು ರಾತ್ರಿ 11:30ರ ಸುಮಾರಿಗೆ ಕೇರಳ ಗಡಿಭಾಗವಾದ ಕುಟ್ಟ ಚೆಕ್‌ಪೋಸ್ಟ್‌ ಬಳಿ ನಕ್ಸಲರ ಓಡಾಟ.

    * 2018ರ ಫೆಬ್ರವರಿ 2ರಂದು ಸಂಜೆ 7:30ರ ಸುಮಾರಿಗೆ ಮಡಿಕೇರಿ ತಾಲೂಕಿನ ಕೋಯನಾಡು ಗ್ರಾಮದಲ್ಲಿ ವಿಕ್ರಮ್ ಗೌಡ ಸೇರಿದಂತೆ ಕೆಲ ಸಹಚರರು ಬಂದು ಹೋಗಿದ್ರು. ಇದೇ ವೇಳೆ ದವಸ, ಧಾನ್ಯ ಸಂಗ್ರಹಿಸಿದ್ದರು ಎನ್ನಲಾಗಿತ್ತು.

    * 2018ರ ಫೆಬ್ರವರಿ 19ರ ಸುಮಾರಿಗೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ನಾಲಾಡಿ ಗ್ರಾಮಕ್ಕೆ ವಿಕ್ರಮ್ ಗೌಡ ತಂಡ ಭೇಟಿ ನೀಡಿತ್ತು.

    * 2024ರ ಮಾರ್ಚ್‌ 16ರಂದು ಸಂಜೆ 6:30ರ ಸುಮಾರಿಗೆ ಕೊಡಗು ದಕ್ಷಿಣ ಕನ್ನಡ ಗಡಿಭಾಗವಾದ ಕುಜಿಮಲೆಗೆ ನಕ್ಸಲ್ ತಂಡ ಭೇಟಿ. ಇದನ್ನೂ ಓದಿ: ಶುಕ್ರವಾರದಿಂದ ಭಾರತ-ಆಸೀಸ್‌ ನಡುವೆ ಹೈವೋಲ್ಟೇಜ್‌ ಟೆಸ್ಟ್‌ ಸರಣಿ – ಕ್ಯಾಪ್ಟನ್‌ ಬುಮ್ರಾ ಏನ್‌ ಹೇಳಿದ್ರು?

  • ಅಪ್ರಾಪ್ತ ಬಾಲಕಿ ಜನ್ಮವಿತ್ತ ನವಜಾತ ಶಿಶು ಹತ್ಯೆ ಕೇಸ್‌ – ಮೂವರು ಆರೋಪಿಗಳು ಅಂದರ್

    ಅಪ್ರಾಪ್ತ ಬಾಲಕಿ ಜನ್ಮವಿತ್ತ ನವಜಾತ ಶಿಶು ಹತ್ಯೆ ಕೇಸ್‌ – ಮೂವರು ಆರೋಪಿಗಳು ಅಂದರ್

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದ, ಅಪ್ರಾಪ್ತ ಬಾಲಕಿ ಜನ್ಮ ನೀಡಿದ್ದ ಮಗುವನ್ನು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ನವಜಾತ ಶಿಶುವಿನ ತಾಯಿ, ಅಜ್ಜಿ ಹಾಗೂ ಅಜ್ಜ ಬಂಧನಕ್ಕೊಳಗಾದವರು.

    ಕಳೆದ ಅಕ್ಟೋಬರ್​ 17ರಂದು ಮಡಿಕೇರಿ (Madikeri) ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಪ್ರಸೂತಿಯಾಗಿ 4 ದಿನ ಕಳೆದರೂ ನವಜಾತ ಶಿಶು ಕಂಡುಬಂದಿರಲಿಲ್ಲ. ಆಸ್ಪತ್ರೆಯಿಂದ ಆ ಶಿಶು ನಾಪತ್ತೆಯಾಗಿತ್ತು. ಇದನ್ನೂ ಓದಿ: Champions Trophy | ಪಾಕ್‌ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ

    ಒಂದು ವಾರ ಕಳೆದ ನಂತರ ನವಜಾತ ಶಿಶುವಿನ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಹೆತ್ತಾಕೆಯೇ ಮಗುವನ್ನು ನಾಪತ್ತೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ನಂತರ ಅಜ್ಜಿಯೇ ಕೊಂದು ಹೂತಿಟ್ಟಿದ್ದ ಶಂಕೆ ವ್ಯಕ್ತವಾದಾಗ ಶಿಶು ಜನಿಸಿಯೇ ಇಲ್ಲ‌ ಎಂದು ಅಜ್ಜಿ ವಾದಿಸಿದ್ದರು. ಆದರೆ ಗುಂಡಿಯಲ್ಲಿ ನವಜಾತ ಶಿಸುವಿನ ಮೃತದೇಹ ದೊರೆತಿದ್ದರಿಂದ ತನಿಖೆ ಮುಂದುವರೆದು ಅದರ ತಾಯಿ, ಅಜ್ಜಿ ಹಾಗೂ ಅಜ್ಜನ ವಿರುದ್ಧ ಕೊಲೆ‌ ಪ್ರಕರಣ‌ ದಾಖಲಾಗಿದೆ. ಇದನ್ನೂ ಓದಿ: ವಂಚಕರ ಜಾಲಕ್ಕೆ ಬಿದ್ದು ಡಿಜಿಟಲ್‌ ಅರೆಸ್ಟ್‌ ಆಗಿ 10 ಕೋಟಿ ಕಳೆದುಕೊಂಡ ನಿವೃತ್ತ ಎಂಜಿನಿಯರ್‌

    ತಾನು ಗರ್ಭಿಣಿ ಆಗಲು 13 ವರ್ಷದ ಬಾಲಕ ಕಾರಣ ಎಂದು ಬಾಲಕಿ ಆರೋಪಿಸಿದ್ದಳು. ಹೀಗಾಗಿ ಬಾಲಕನ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿತ್ತು. ಆದರೆ ಶಿಶುವಿನ ಡಿಎಸ್​ಎ ಪರೀಕ್ಷೆ ನಡೆಸುವಂತೆ ಆತನ ಪೋಷಕರು ಆಗ್ರಹಿಸಿದ್ದರು. ಇದೀಗ ತನಿಖೆ ಮಾಡುವ ಸಂದರ್ಭಗಳಲ್ಲಿ ಬಾಲಕಿಯ ಪೋಷಕರೇ ಮಗುವನ್ನು ಹತ್ಯೆ ಮಾಡಿರಬೇಕು ಎಂದು ಪೊಲೀಸರು ಅನುಮಾನಗೊಂಡು ಇದೀಗ ಅರೇಸ್ಟ್ ಮಾಡಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದನ್ನೂ ಓದಿ: 50 ಸಾವಿರ ಲಂಚ ಸ್ವೀಕಾರ – ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ 

  • ಸ್ಥಳ ಮಹಜರ್‌ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿ ಬಂಧನ

    ಸ್ಥಳ ಮಹಜರ್‌ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿ ಬಂಧನ

    ಮಡಿಕೇರಿ: ಸ್ಥಳ ಮಹಜರ್‌ ವೇಳೆ ಪೊಲೀಸರಿಂದ (Kodagu Police) ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

    ಹೈದರಾಬಾದ್‌ನ ಉಪ್ಪಳ್ (Hyderabad Uppal) ಎಂಬಲ್ಲಿ ಮಹಜರ್‌ ಪ್ರಕ್ರಿಯೆ ವೇಳೆ ಪರಾರಿಯಾಗಿದ್ದ ಹರಿಯಾಣ ರಾಜ್ಯದ ಕಾರ್ನಲ್‌ಗರುಂದ ನಿವಾಸಿ ಅಂಕುರ್ ರಾಣಾನನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿ ಜಿಲ್ಲೆಗೆ ಕರೆತಂದುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: `ಕರಿಮಣಿ ಮಾಲೀಕ ನೀನಲ್ಲ’ ಅಂತ ಆಸ್ತಿಗಾಗಿ ಗಂಡನ ಕೊಲೆ – ಇಬ್ಬರು ಪ್ರಿಯಕರರು ಸೇರಿ ಪತ್ನಿಯೂ ಅಂದರ್

    ಇತ್ತೀಚೆಗೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಪನ್ಯ ಎಸ್ಟೇಟ್ ಎಂಬಲ್ಲಿ ಅರ್ಧಂಬರ್ಧ ಬೆಂದ ಸ್ಥಿತಿಯಲ್ಲಿ ಪುರುಷನ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಅಪರಾಧ ಪ್ರಕರಣ ಬೇಧಿಸಿ ಆರೋಪಿಗಳಾದ ಮೃತ ವ್ಯಕ್ತಿಯ ಪತ್ನಿ ನಿಹಾರಿಕಾ ಸೇರಿದಂತೆ ಆಕೆಯ ಗೆಳೆಯರಾದ ಆಂಧ್ರಪ್ರದೇಶದ ಕಡಪ ಮೂಲದ ಬೆಂಗಳೂರಿನಲ್ಲಿ ನೆಲೆಸಿದ್ದ ನಿಖಿಲ್ ಮೈರೆಡ್ಡಿ ಹಾಗೂ ಅಂಕುರ್ ರಾಣಾನನ್ನು ಬಂಧಿಸಿದ್ದರು. ಇದನ್ನೂ ಓದಿ: ಅಧಿಕಾರಿಗಳ ಯಡವಟ್ಟಿನಿಂದ ವಕ್ಫ್‌ ಆಸ್ತಿ ಎಂದು ದಾಖಲಾತಿಯಲ್ಲಿ ನಮೂದಾಗಿದೆ: ಸಚಿವ ಬೋಸರಾಜು

    ಬಂಧಿತರ ಪೈಕಿ ಅಂಕುರ್ ರಾಣಾನನ್ನು ಕೊಲೆ ಕೃತ್ಯ ನಡೆದಿದ್ದ ಸ್ಥಳದ ಮಹಜರಿಗೆಂದು 13 ಮಂದಿ ಪೊಲೀಸರು, ಸುಂಟಿಕೊಪ್ಪ ಪಂಚಾಯಿತಿಯ ಇಬ್ಬರು ಸಿಬ್ಬಂದಿಯೊಂದಿಗೆ ಹೈದರಾಬಾದ್‌ನ ಉಪ್ಪಳ್ ಎಂಬಲ್ಲಿಗೆ ಕರೆದೊಯ್ದು ಮಹಜರ್‌ ನಡೆಸಿದ ಬಳಿಕ ಅಲ್ಲಿನ ಲಾಡ್ಜ್‌ವೊಂದರಲ್ಲಿ ಅ.30ರಂದು ರಾತ್ರಿ ತಂಗಿದ್ದರು. ಅ.31ರ ಮುಂಜಾನೆ ಆರೋಪಿ ಅಂಕುರ್ ರಾಣಾ ಪೊಲೀಸ್‌ರೊಬ್ಬರ ಮೊಬೈಲ್ ಕಳವು ಮಾಡಿ ಕೈಗೆ ಹಾಕಿದ್ದ ಬೇಡಿಯನ್ನು ಕಳಚಿ ಪರಾರಿಯಾಗಿದ್ದ. ಈ ಬಗ್ಗೆ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಿಂದಲೂ ಪೊಲೀಸರ ವಿಶೇಷ ತನಿಖಾ ತಂಡ ಅಲ್ಲಿಗೆ ತೆರಳಿ ಅಂಕುರ್ ರಾಣಾನಿಗಾಗಿ ಹುಡುಕಾಟದಲ್ಲಿ ತೊಡಗಿತ್ತು.

  • Madkeri | ಮಹಿಳೆ ಜೊತೆ ಸೇರಿ ಕೊಲೆ – ಸ್ಥಳ‌ ಮಹಜರ್‌ ವೇಳೆ ಆರೋಪಿ ಎಸ್ಕೇಪ್‌

    Madkeri | ಮಹಿಳೆ ಜೊತೆ ಸೇರಿ ಕೊಲೆ – ಸ್ಥಳ‌ ಮಹಜರ್‌ ವೇಳೆ ಆರೋಪಿ ಎಸ್ಕೇಪ್‌

    – 8 ಕೋಟಿ ಆಸ್ತಿಗಾಗಿ ಗಂಡನನ್ನೇ ಹತ್ಯೆ ಮಾಡಿಸಿದ್ದ ಪತ್ನಿ ಸಂಚು ಬಯಲು

    ಮಡಿಕೇರಿ: 8 ಕೋಟಿ ಆಸ್ತಿಗಾಗಿ ವಿವಾಹಿತ ಪ್ರಿಯತಮೆಯೊಂದಿಗೆ (Lover) ಸೇರಿ ಆಕೆಯ ಪತಿಯನ್ನ ಕೊಲೆ ಮಾಡಿದ್ದ ಆರೋಪಿಯನ್ನು ಕೊಡಗು ಪೊಲೀಸರು ಸ್ಥಳ ಮಹಜರ್‌ಗೆ ಕರೆದೊಯ್ದಾಗ ಎಸ್ಕೇಪ್‌ ಆಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಕೊಲೆ ಆರೋಪಿ ಅಂಕುರ್‌ ಠಾಕೂರ್‌ನನ್ನ ತೆಲಂಗಾಣದ ಉಪ್ಪಳ್‌ನಲ್ಲಿ ಕೊಲೆ ನಡೆದ ಸ್ಥಳಕ್ಕೆ ಕರೆದೊಯ್ದು ಮಹಜರ್‌ ನಡೆಸುವ ವೇಳೆ ಎಸ್ಕೇಪ್‌ ಆಗಿದ್ದಾನೆ ಎಂದು ಪೊಲೀಸ್‌‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: `ಕರಿಮಣಿ ಮಾಲೀಕ ನೀನಲ್ಲ’ ಅಂತ ಆಸ್ತಿಗಾಗಿ ಗಂಡನ ಕೊಲೆ – ಇಬ್ಬರು ಪ್ರಿಯಕರರು ಸೇರಿ ಪತ್ನಿಯೂ ಅಂದರ್

    ಇತ್ತೀಚೆಗೆ ಕೊಡಗಿನಲ್ಲಿ ತೆಲಂಗಾಣ ಮೂಲದ ರಮೇಶ್‌ ಕುಮಾರ್‌ ಹತ್ಯೆಯಾಗಿತ್ತು. ಪತ್ನಿಯೇ 8 ಕೋಟಿ ಆಸ್ತಿಗಾಗಿ ಇಬ್ಬರು ಪ್ರಿಯಕರರೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿಸಿದ್ದ ಸಂಚು ಬಯಲಾಗಿತ್ತು. ಆಸ್ತಿಗಾಗಿ ಪತಿಯನ್ನು ಕೊಲೆ ಮಾಡಿಸಿದ್ದ ಪತ್ನಿ ನಿಹಾರಿಕಾ ಬಳಿಕ ಕಾರಿನಲ್ಲಿ ಶವ ಇಟ್ಟುಕೊಂಡು ತೆಲಂಗಾಣದಿಂದ 800 ಕಿಮೀ ದೂರದ ಕೊಡಗಿಗೆ ಬಂದಿದ್ದಳು. ಶವ ಎಸೆದು ಪೆಟ್ರೋಲ್‌ನಿಂದ ಸುಟ್ಟುಹಾಕಿ ಪರಾರಿಯಾಗಿದ್ದಳು. ಇದನ್ನೂ ಓದಿ: ಅಧಿಕಾರಿಗಳ ಯಡವಟ್ಟಿನಿಂದ ವಕ್ಫ್‌ ಆಸ್ತಿ ಎಂದು ದಾಖಲಾತಿಯಲ್ಲಿ ನಮೂದಾಗಿದೆ: ಸಚಿವ ಬೋಸರಾಜು

    ಆರೋಪಿ ತಪ್ಪಿಸಿಕೊಂಡದ್ದು ಹೇಗೆ?
    ಪ್ರಕರಣ ಸಂಬಂಧ ಮೃತ ರಮೇಶ್ ಪತ್ನಿ ನಿಹಾರಿಕಾ, ಆಕೆಯ ಪ್ರಿಯತಮ ನಿಖಿಲ್ ಹಾಗೂ ಇನ್ನೋರ್ವ ಆರೋಪಿ ಅಂಕುರ್‌ನನ್ನು ಬಂಧಿಸಲಾಗಿತ್ತು. ನಂತರ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿತ್ತು. ತನಿಖೆಯ ಭಾಗವಾಗಿ ಪೊಲೀಸರು ಆರೋಪಿ ಅಂಕುರ್‌ ಠಾಕೂರ್‌ನನ್ನ ತೆಲಂಗಾಣದ ಉಪ್ಪಲ್‌ನಲ್ಲಿ ಕೊಲೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಅರೋಪಿಯೊಂದಿಗೆ 13 ಜನ ಪೊಲೀಸರು ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಆರೋಪಿ ಅಂಕುರ್ ಪರಾರಿಯಾಗಿದ್ದಾನೆ.

    ಘಟನೆ ಸಂಬಂಧ ಕೊಡಗು ಪೊಲೀಸರು ತೆಲಂಗಾಣದ ಉಪ್ಪಳ್ ಪೊಲೀಸ್ ಠಾಣೆಗೆ ದೂರು ನೀಡಿ ಅರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಒಂದು ತಂಡ ತೆಲಂಗಾಣದ ಸುತ್ತಮುತ್ತ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರೆ, ಮತ್ತೊಂದು ತಂಡ ದೆಹಲಿ ವಿಮಾನ ನಿಲ್ದಾಣದ ಬಳಿಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ʻಪಬ್ಲಿಕ್ ಟಿವಿʼಗೆ ಮೂಲಗಳು ತಿಳಿಸಿವೆ. ಇನ್ನು 2-3 ದಿನಗಳಲ್ಲಿ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹವಾಮಾನ ವೈಪರೀತ್ಯ – ಕೊಡಗಿನಲ್ಲಿ ವೈರಲ್ ಫೀವರ್, ಒಂದೇ ದಿನ 200 ರಿಂದ 300 ಜನರಿಗೆ ಚಿಕಿತ್ಸೆ

  • ಬ್ಯಾಂಕಾಕ್‌ನಿಂದ ಕೊಡಗಿಗೆ, ಕೊಡಗಿನಿಂದ ದುಬೈಗೆ ಹೈಡ್ರೋ ಗಾಂಜಾವಸ್ತು ರವಾನೆ – ಅಂತಾರಾಷ್ಟ್ರೀಯ ಪೆಡ್ಲರ್‌ಗಳ ಜಾಲ ಬೇಧಿಸಿದ ಪೊಲೀಸರು

    ಬ್ಯಾಂಕಾಕ್‌ನಿಂದ ಕೊಡಗಿಗೆ, ಕೊಡಗಿನಿಂದ ದುಬೈಗೆ ಹೈಡ್ರೋ ಗಾಂಜಾವಸ್ತು ರವಾನೆ – ಅಂತಾರಾಷ್ಟ್ರೀಯ ಪೆಡ್ಲರ್‌ಗಳ ಜಾಲ ಬೇಧಿಸಿದ ಪೊಲೀಸರು

    ಮಡಿಕೇರಿ: ಬ್ಯಾಂಕಾಕ್‌ನಿಂದ ದುಬೈಗೆ ಕೊಡಗಿನ (Kodagu) ಮೂಲಕ ದುಬಾರಿ ಬೆಲೆಯ ಮಾದಕವಸ್ತು ಹೈಡ್ರೋ ಗಾಂಜಾವನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಕೊಡಗು ಜಿಲ್ಲಾ ಪೊಲೀಸರು (Kodagu Police) ಬೇಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೇರಳ ರಾಜ್ಯದವರೂ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಸುಮಾರು 3 ಕೋಟಿ ರೂ. ಬೆಲೆ ಬಾಳುವ 3.31 ಕೆಜಿ ಹೈಡ್ರೋ ಗಾಂಜಾವನ್ನು (hydro Ganja) ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಪತ್ನಿ ಸೈಟ್‌ ಮರಳಿಸಿದ್ದು ತಪ್ಪೇ? ಈ ಕೇಸ್‌ನಲ್ಲಿ ತಪ್ಪೇನಿದೆ:  ತಿಮ್ಮಾಪುರ್‌ ಪ್ರಶ್ನೆ

    ಆರೋಪಿಗಳಾದ ಮೆಹರೂಫ್ (37), ರವೂಫ್ (28), ನಾಸೀರ್ (26), ಹೆಚ್‌. ಯಾಹ್ಯಾಸಿ (28), ಅಕನಾಸ್ವ (26), ವಾಜೀಧ್ (26), ರಿಯಾಜ್ (44) ರನ್ನ ಮಾಲ್ ಸಮೇತ ಬಂಧನ ಮಾಡಲಾಗಿದೆ. ಆರೋಪಿಗಳು ಮಾದಕವಸ್ತುವನ್ನು ಬ್ಯಾಂಕಾಕ್‌ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೊಡಗಿಗೆ ತರುತ್ತಿದ್ದರು. ನಂತರ, ದುಬೈಗೆ ವಿಮಾನದ ಮೂಲಕ ಸಾಗಾಣಿಕೆ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ‌. ಇದನ್ನೂ ಓದಿ: ವಿಮಾನ ನಿಯಮ ಕಾಯ್ದೆ ಉಲ್ಲಂಘನೆ- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ

    ಏನಿದು ಹೈಡ್ರೋಪೋನಿಕ್ ಗಾಂಜಾ?
    ಕೃತಕ ಬೆಳಕನ್ನು ಬಳಸಿ, ಹವಾನಿಯಂತ್ರಿಕ ಕೊಠಡಿಯಲ್ಲಿ ಬೆಳೆಯುವ ಹೈಡ್ರೋ ಗಾಂಜಾ ಬ್ಯಾಂಕಾಕ್‌ನಲ್ಲಿ ಸುಲಭವಾಗಿ ಸಿಗುತ್ತಿದೆ. ಇದನ್ನು ಶ್ರೀಮಂತರು ಮಾತ್ರವೇ ದುಬಾರಿ ಬೆಲೆ ನೀಡಿ ಬಳಸುತ್ತಾರೆ. ಸದ್ಯ, ಆರೋಪಿಗಳು ಸ್ಥಳೀಯರಿಗೆ ಮಾರಾಟ ಮಾಡುವ ವಿಷಯ ಗೊತ್ತಾಗಿಲ್ಲ. ಇವರೆಲ್ಲರೂ ಬ್ಯಾಂಕಾಕ್‌ನಿಂದ ತಂದ ಮಾದಕವಸ್ತುವನ್ನು ಇಂಡಿಯಾ ಏಪೋರ್ಟ್‌ಗಳ ಮೂಲಕ ಪ್ರವಾಸಿಗರ ಸೋಗಿನಲ್ಲಿ ದುಬೈಗೆ ಸಾಗಾಣಿಕೆ ಮಾಡುವ ಸಲುವಾಗಿ ಕೊಡಗಿನ ಗೋಣಿಕೊಪ್ಪಲಿನ ಮನೆಯೊಂದರಲ್ಲಿ ಇಟ್ಟಿದ್ದರು. ಬಳಿಕ ಗೋಣಿಕೋಪ್ಪದಿಂದ ಮಡಿಕೇರಿಗೆ ತರುವಾಗ ಮಡಿಕೇರಿ ನಗರದ ಪೋಲಿಸರು 5 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

    ಮತ್ತೊಬ್ಬ ಆರೋಪಿಯನ್ನು ಬೆಂಗಳೂರಿನಲ್ಲಿ ಹಾಗೂ ಪರಾರಿಯಾಗಲು ಯತ್ನಿಸುತ್ತಿದ್ದ ಪ್ರಮುಖ ಆರೋಪಿ ಕೇರಳದ ಮೆಹರೂಫ್ ಎಂಬಾತನನ್ನು ಕೊಚ್ಚಿನ್‌ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.

    ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣದ ಮೂಲಕವೇ ಆರೋಪಿಗಳು ಈ ಮಾದಕ ವಸ್ತುವನ್ನು ತರುತ್ತಿದ್ದ ವಿಷಯ ತನಿಖೆಯಲ್ಲಿ ದೃಢಪಟ್ಟಿದೆ. ವಿಮಾನ ನಿಲ್ದಾಣದಲ್ಲಿರುವ ಕೆಲವೊಂದು ತಾಂತ್ರಿಕ ದೋಷಗಳಿಂದ ಇವರು ಅಲ್ಲಿ ಸಿಕ್ಕಿ ಬೀಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈ ದಂಧೆಯಲ್ಲಿ ಕೊಡಗು ಜಿಲ್ಲೆಯ ಮಂದಿಗಳು ಭಾಗಿಯಾಗಿದ್ದು ಕೊಡಗು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಹಲವರು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದಾರೆ ಎಂಬ ಸಂದೇಹಗಳು ಮೂಡಿವೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಇದೀಗ ಈ ಪ್ರಕರಣ ಆತಂಕ ಮೂಡಲು ಕಾರಣವಾಗಿದೆ. ಇದನ್ನೂ ಓದಿ: ಆರ್‌.ಅಶೋಕ್‌ ವಿರುದ್ಧ ಸಚಿವ ಪರಮೇಶ್ವರ್‌ ನೂರಾರು ಕೋಟಿ ಭೂ ಹಗರಣ ಬಾಂಬ್‌