Tag: kochi

  • ಮುಂಬೈಯಲ್ಲಿ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ – ತಪ್ಪಿದ ಭಾರೀ ಅವಘಡ

    ಮುಂಬೈಯಲ್ಲಿ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ – ತಪ್ಪಿದ ಭಾರೀ ಅವಘಡ

    – ಕೊಚ್ಚಿಯಿಂದ ಮುಂಬೈಗೆ ಆಗಮಿಸಿದ್ದ ವಿಮಾನ

    ಮುಂಬೈ: ಕೊಚ್ಚಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಭಾರೀ ಮಳೆಯಿಂದಾಗಿ ರನ್‌ವೇನಲ್ಲಿ ಜಾರಿ ಪಕ್ಕದ ಜಮೀನಿಗೆ ಹೋಗಿದ್ದು, ಬಳಿಕ ಪೈಲಟ್‌ನ ಚಾಣಕ್ಷ್ಯತನದಿಂದ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.

    ಸೋಮವಾರ ಬೆಳಗ್ಗೆ 7:43ರ ಸುಮಾರಿಗೆ ಕೊಚ್ಚಿಯಿಂದ AI2744 ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗಿತ್ತು. ಅಲ್ಲಿಂದ ಹೊರಟು ಬೆಳಗ್ಗೆ 9:27ಕ್ಕೆ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಭಾರೀ ಮಳೆಯಿಂದಾಗಿ ವಿಮಾನವು ರನ್‌ವೇಯಿಂದ ಜರಿದು ಪಕ್ಕದ ಜಮೀನಿಗೆ ಹೋಗಿತ್ತು. ಬಳಿಕ ಪೈಲಟ್‌ನ ಚಾಣಕ್ಷ್ಯತನದಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.ಇದನ್ನೂ ಓದಿ: ಕನಕಪುರದ 250ಕ್ಕೂ ಹೆಚ್ಚು ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ: ಡಿಕೆಶಿ

    VT-TYA ನೋಂದಣಿಯ ಏರ್‌ಬಸ್ A320ne ವಿಮಾನವನ್ನು ಲ್ಯಾಂಡಿಂಗ್ ವೇಳೆ ಟರ್ಮಿನಲ್‌ಗೆ ಸಂಪರ್ಕಿಸಲಾಗಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ. ಯಾವುದೇ ಅವಘಡ ಸಂಭವಿಸಿಲ್ಲ. ಇನ್ನೂ ವಿಮಾನವು ರನ್‌ವೇಯಿಂದ ಜರಿದು ಪಕ್ಕಕ್ಕೆ ಹೋಗಿದ್ದರಿಂದ ನಿಲ್ದಾಣದ ಪ್ರಾಥಮಿಕ ರನ್‌ವೇ 09/27 ಹಾಗೂ ವಿಮಾನದ 3 ಟೈರ್‌ಗಳು ಸ್ಫೋಟಗೊಂಡು ಸಣ್ಣಪುಟ್ಟ ಹಾನಿಯಾಗಿದೆ. ಹೀಗಾಗಿ ಯಾವುದೇ ಅಡಚಣೆಯಿಲ್ಲದೇ ವಿಮಾನಗಳ ಹಾರಾಟಕ್ಕಾಗಿ ಎರಡನೇ ರನ್‌ವೇಯನ್ನು ಬಳಸಲಾಯಿತು.

    ಮುಂಬೈ ವಿಮಾನ ನಿಲ್ದಾಣವು ಎರಡು ಛೇದಿಸುವ ರನ್‌ವೇಗಳನ್ನು ಹೊಂದಿದ್ದು, ಒಂದು ಸಮಯದಲ್ಲಿ ಒಂದು ವಿಮಾನ ಮಾತ್ರ ಕಾರ್ಯನಿರ್ವಹಿಸಬಹುದು. ಜೊತೆಗೆ ಈ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನದಟ್ಟಣೆಯಿಂದ ಕೂಡಿರುವ ಒಂದೇ ರನ್‌ವೇ ಕಾರ್ಯಾಚರಣೆ ಮಾಡುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

    ಮುಂಬೈನಲ್ಲಿ ನಿರಂತರ ಮಳೆಯಾಗುತ್ತಿರುವುದು ಈ ಅವಘಡಕ್ಕೆ ಕಾರಣವಾಗಿದೆ. ಸೋಮವಾರ ಬೆಳಿಗ್ಗೆ, ಮುಂಬೈ ಉಪನಗರಗಳಲ್ಲಿ 115 ಮಿ.ಮೀ ಮಳೆಯಾಗಿದ್ದರೆ, ಕೊಲಾಬಾದಲ್ಲಿ ಕೇವಲ 11 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಇದನ್ನೂ ಓದಿ: ಇನ್ಮುಂದೆ ಉಪ್ಪಿ ʻನೆಕ್ಸ್ಟ್‌ ಲೆವೆಲ್‌ʼ – ಸದ್ದಿಲ್ಲದೇ ಸೆಟ್ಟೇರುತ್ತಿದೆ ಹೊಸ ಸಿನಿಮಾ

  • ಕೇರಳ ಸೀಫುಡ್ ಆತಂಕ – ಕಾರ್ಗೋ ಶಿಪ್ ಮುಳುಗಿದ ಮೇಲೆ ಆಗಿದ್ದೇನು?

    ಕೇರಳ ಸೀಫುಡ್ ಆತಂಕ – ಕಾರ್ಗೋ ಶಿಪ್ ಮುಳುಗಿದ ಮೇಲೆ ಆಗಿದ್ದೇನು?

    ಳೆದ ಕೆಲವು ದಿನಗಳ ಹಿಂದೆ ಕಾರ್ಗೋ ಶಿಪ್‌ನ ಕೆಲವು ಕಂಟೇನರ್‌ಗಳು ಕೇರಳದ ಕೊಚ್ಚಿಯ ದಡಕ್ಕೆ ತೇಲಿ ಬಂದಿದ್ದವು. ಇದರಿಂದಾಗಿ ಕೇರಳದ ಕರಾವಳಿ ಜನರಲ್ಲಿ ಜಲಚರ ಜೀವಿಗಳನ್ನು ಆಹಾರವಾಗಿ ಸೇವಿಸುವ ಬಗ್ಗೆ ಭಯ ಹುಟ್ಟಿಕೊಂಡಿದೆ.

    ಲೈಬೀರಿಯಾದ 28 ವರ್ಷ ಹಳೆಯ MSC ELSA 3 ಕಾರ್ಗೋ ಶಿಪ್‌ 640 ಕಂಟೇನರ್‌ಗಳನ್ನು ಹೊತ್ತುಕೊಂಡು ವಿಝಿಂಜಂನಿಂದ ಕೊಚ್ಚಿಗೆ ಬರುತ್ತಿತ್ತು. ಈ ಕಂಟೇನರ್‌ಗಳ ಮೂಲಕ ಕೆಲವು ಅಪಾಯಕಾರಿ ಸರಕುಗಳು ಸೇರಿದಂತೆ ಇಂಧನಗಳನ್ನು ಕೊಂಡೊಯ್ಯುತ್ತಿತ್ತು. ಆದರೆ ಮೇ 24ರಂದು ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು (70.376 ಕಿ.ಮೀ) ದೂರದ ಅರಬ್ಬಿ ಸಮುದ್ರದಲ್ಲಿ ಹಡಗು ಮುಳುಗಿತ್ತು. ಮುಳುಗುವ ಮುನ್ನ ಹಡಗು ಒಂದು ಭಾಗಕ್ಕೆ ವಾಲಿದ್ದರಿಂದ ಅದರಲ್ಲಿದ್ದ ಕಂಟೇನರ್‌ಗಳು ಸಮುದ್ರದ ಪಾಲಾಗಿದ್ದವು. ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಭಾರತದ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದರು. ಮುಳುಗಿದ ಹಡಗನ್ನು ಕೊಚ್ಚಿ ಬಂದರಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಭಾರೀ ಅಲೆಗಳು ಮತ್ತು ಗಾಳಿಯ ಪರಿಣಾಮದಿಂದಾಗಿ ಹಡಗಿನಲ್ಲಿದ್ದ ಸರಕುಗಳನ್ನು ಬೇರೆಡೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ.

    ಮೇ 26ರಂದು ಕಾರ್ಗೋ ಶಿಪ್‌ನಲ್ಲಿದ್ದ ಕಂಟೇನರ್‌ಗಳು ಭಾರಿ ಅಲೆಗಳ ಹೊಡೆತಕ್ಕೆ ಕೇರಳದ ಕೊಚ್ಚಿ ದಡ ಸೇರಿಕೊಂಡಿತ್ತು. ದಡ ತಲುಪುವ ಮುನ್ನ ಹಡಗು ಮುಳುಗಿದ್ದಾಗ ಕಂಟೇನರ್‌ಗಳಲ್ಲಿದ್ದ ಇಂಧನ ಸೋರಿಕೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಇದರ ಪರಿಣಾಮವಾಗಿ ನೀರು ಮಲೀನಗೊಂಡಿದೆ ಎಂಬ ಭಯ ಸೃಷ್ಟಿಯಾಗಿದೆ. ಜೊತೆಗೆ ನರ್ಡಲ್ಸ್ ಎಂದು ಕರೆಯಲ್ಪಡುವ ಪ್ಲಾಸ್ಟಿಕ್ ಉಂಡೆಗಳು ಹೆಚ್ಚಿನ ಪ್ರಮಾಣದ ಮಾಲಿನ್ಯವನ್ನು ಉಂಟು ಮಾಡುತ್ತದೆ. ಹೀಗಾಗಿ ಕರಾವಳಿ ಜನರಲ್ಲಿ ಆತಂಕ ಮನೆಮಾಡಿದೆ. ಆದರೆ ತೈಲ ಸೋರಿಕೆಯ ಕುರಿತು ಈವರೆಗೂ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

    ಕೋಸ್ಟ್ ಗಾರ್ಡ್ ಪ್ರಕಾರ, MSC ELSA 3 ಕಾರ್ಗೋ ಶಿಪ್‌ 84.44 ಮೆಟ್ರಿಕ್ ಟನ್ ಡೀಸೆಲ್ ಮತ್ತು 367 ಮೆಟ್ರಿಕ್ ಟನ್ ಫರ್ನೇಸ್ ಎಣ್ಣೆ ಸೇರಿದಂತೆ ಭಾರೀ ಪ್ರಮಾಣದ ಇಂಧನವನ್ನು ಸಾಗಿಸುತ್ತಿತ್ತು. 640 ಕಂಟೇನರ್‌ಗಳ ಪೈಕಿ 5 ಕಂಟೇನರ್‌ಗಳು ಪತ್ತೆಯಾಗಿವೆ. ಇದರಲ್ಲಿ 25 ಕಂಟೇನರ್‌ಗಳು ಕ್ಯಾಲ್ಸಿಯಂ ಕಾರ್ಬೈಡ್ ಸೇರಿ, ಹಾನಿಕಾರಕ ಕೆಮಿಕಲ್‌ಗಳನ್ನು ಹೊತ್ತೊಯ್ಯುತ್ತಿತ್ತು. ಈಗಾಗಲೇ ಕಂಟೇನರ್‌ಗಳು ಪತ್ತೆಯಾದ ಸ್ಥಳಕ್ಕೆ ಕೊಲ್ಲಂ ಜಿಲ್ಲಾಧಿಕಾರಿ ಭೇಟಿ‌ ನೀಡಿ, ಪರಿಶೀಲನೆ ನಡೆಸಿದ್ದರು. ಜೊತೆಗೆ ರಾಜ್ಯ ಸರ್ಕಾರ ಕಂಟೇನರ್ ಕಾಣಿಸಿಕೊಂಡರೆ ಅದರ ಬಳಿ ಹೋಗಬೇಡಿ, ಮುಟ್ಟಬೇಡಿ ಎಂದು ಮುನ್ನೆಚ್ಚರಿಕೆ ನೀಡಿತ್ತು. ಜೊತೆಗೆ ಇದರಿಂದಾಗಿ ಜಲಚರ ಜೀವಿಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆಯೂ ಇದೆ ಎಂದು ಕಳವಳ ಉಂಟುಮಾಡಿತ್ತು.

     

    ಈ ಕುರಿತು ಹೈದರಾಬಾದ್ ಮೂಲದ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ (INCOIS) ನಿರ್ದೇಶಕ ಡಾ. ಟಿ.ಎಂ. ಬಾಲಕೃಷ್ಣನ್ ನಾಯರ್ ಅವರು ಆಲಪ್ಪುಳ ಕರಾವಳಿಯಲ್ಲಿ ತೈಲ ಸೋರಿಕೆಯಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಕೆಲವು ಏಜೆನ್ಸಿಗಳ ಪ್ರಕಾರ, ಹಡಗಿನಲ್ಲಿದ್ದ ಎಲ್ಲಾ ಡೀಸೆಲ್ ಮತ್ತು ಫರ್ನೇಸ್ ಆಯಿಲ್ ಸಮುದ್ರಕ್ಕೆ ಸೋರಿಕೆಯಾದರೆ, ಅದು ಕೇರಳ ಕರಾವಳಿಯ ಕಡೆಗೆ, ವಿಶೇಷವಾಗಿ ಆಲಪ್ಪುಳ ಮತ್ತು ತಿರುವನಂತಪುರಂ ನಡುವಿನ ಪ್ರದೇಶದ ಕಡೆಗೆ ತೇಲಿ ಬರುವ ಸಾಧ್ಯತೆಯಿದೆ ಎಂದು ತಿಳಿಸಿತ್ತು.

    ಆತಂಕ ಉಂಟಾಗಿದ್ದು ಯಾಕೆ?
    ಮುಖ್ಯವಾಗಿ ತೈಲವು ಸಮುದ್ರದಲ್ಲಿನ ಸಣ್ಣ ಪ್ರಭೇದಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಇದರಿಂದಾಗಿ ಮೀನುಗಾರಿಕೆ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುವುದಲ್ಲದೇ ಕರಾವಳಿ ಪ್ರದೇಶಗಳಲ್ಲಿನ ಮೀನುಗಾರರ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ಸೋರಿಕೆಯಾಗಿ ಅದು ಹರಡಿಕೊಂಡರೆ ಸಮುದ್ರದ ಉತ್ಪನ್ನಗಳಿಗೆ ಹಾನಿಯುಂಟು ಮಾಡುತ್ತದೆ. ಕೆಲವು ಮೀನಿನ ಪ್ರಬೇಧವನ್ನೇ ನಾಶಪಡಿಸಬಹುದು. ಉದಾಹರಣೆಗೆ ಮಳೆಗಾಲವು ಪೆಲಾಜಿಕ್ ಮೀನುಗಳ ಸಂತಾನೋತ್ಪತ್ತಿ ಮತ್ತು ಬೆಳವಣಿಗೆಗೆ ನಿರ್ಣಾಯಕ ಅವಧಿಯಾಗಿದೆ. ಹೀಗಾಗಿ ಅವುಗಳ ಮೇಲೆ ಶಾಶ್ವತ ಪರಿಣಾಮ ಬೀರಬಹುದು.

    ಜಲಚರ ಜೀವಿಗಳನ್ನು ಆಹಾರವಾಗಿ ಸೇವಿಸುವುದು ಸುರಕ್ಷಿತನಾ?
    ಕಾರ್ಗೋ ಶಿಪ್‌ ಮುಳುಗಿದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಸ್ತುತ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಜಲಚರ ಜೀವಗಳು ಮಾರುಕಟ್ಟೆಗೆ ಬರುತ್ತಿಲ್ಲ. ಜೊತೆಗೆ ರಾಜ್ಯ ಮೀನುಗಾರಿಕೆ ಇಲಾಖೆ ಮತ್ತು ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (CMFRI) ನೀರಿನ ಮಾದರಿಗಳನ್ನು ಸಂಗ್ರಹಿಸುವುದು ಹಾಗೂ ನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತಿದೆ. ಆದರೆ ಇಲ್ಲಿಯವರೆಗೆ, ಯಾವುದೇ ಹಾನಿಕಾರಕ ವಸ್ತುಗಳು ಇರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೆ ಈಗಾಗಲೇ ಸರ್ಕಾರವು ಜನರು ಯಾವುದೇ ಭಯವಿಲ್ಲದೇ ಜಲಚರ ಜೀವಗಳನ್ನು ಆಹಾರವಾಗಿ ಸೇವಿಬಹುದು ಎಂದು ತಿಳಿಸಿದೆ. ಜೊತೆಗೆ ಭಾರತೀಯ ಕರಾವಳಿ ರಕ್ಷಣಾ ಪಡೆ ನಡೆಸಿದ ತ್ವರಿತ ಕಾರ್ಯಚರಣೆಯಿಂದಾಗಿ ಕಂಟೇನರ್‌ನಿಂದ ಭಾರೀ ಪ್ರಮಾಣದ ತೈಲ ಸೋರಿಕೆ ತಪ್ಪಿಸುವಲ್ಲಿ ನೆರವಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಕೇರಳ | ಮುಳುಗಿದ ಕಾರ್ಗೋ ಶಿಪ್‌ – ಅಲೆಯ ಅಬ್ಬರಕ್ಕೆ ತೇಲಿಬಂದ ಕಂಟೇನರ್‌; ಮುಟ್ಟದಂತೆ ಜನರಿಗೆ ಸೂಚನೆ

    ಕೇರಳ | ಮುಳುಗಿದ ಕಾರ್ಗೋ ಶಿಪ್‌ – ಅಲೆಯ ಅಬ್ಬರಕ್ಕೆ ತೇಲಿಬಂದ ಕಂಟೇನರ್‌; ಮುಟ್ಟದಂತೆ ಜನರಿಗೆ ಸೂಚನೆ

    ತಿರುನಂತಪುರಂ: ಕೇರಳದ (Kerala) ಕೊಚ್ಚಿಯ ಕರಾವಳಿಯಲ್ಲಿ ಮುಳುಗಿದ್ದ ಲೈಬೀರಿಯಾದ ಕಾರ್ಗೋ ಶಿಪ್‌ನಲ್ಲಿದ್ದ (Liberian ship) ಕೆಲವು ಕಂಟೇನರ್‌ಗಳು ಇಂದು ( ಸೋಮವಾರ) ಬೆಳಗಿನ‌ ಜಾವ ರಕ್ಕಸ ಅಲೆಗಳ ಅಬ್ಬರಕ್ಕೆ ದಡ ಸೇರಿವೆ.

    ಒಟ್ಟು 5 ಕಂಟೇನರ್‌ಗಳು ಇಂದು ಪತ್ತೆಯಾಗಿವೆ. ಕಾರ್ಗೋಶಿಪ್‌ನಲ್ಲಿ ಒಟ್ಟು 623 ಕಂಟೇನರ್‌ಗಳು ಇದ್ದವು. ಇದರಲ್ಲಿ 73 ಖಾಲಿ ಕಂಟೇನರ್‌ಗಳಾಗಿದ್ದವು. ಒಟ್ಟು 25 ಕಂಟೇನರ್‌ಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಸೇರಿ, ಹಾನಿಕಾರಕ ಕೆಮಿಕಲ್‌ಗಳು ಇದ್ದವು. ಇವು ಜಲಚರಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆಯಿದೆ. ಇನ್ನೂ ಕಂಟೇನರ್ ಕಾಣಿಸಿಕೊಂಡರೆ ಅದರ ಬಳಿ ಹೋಗಬೇಡಿ, ಮುಟ್ಟಬೇಡಿ ಎಂದು ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೇರಳ | ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ಕಂಟೇನರ್‌ಗಳು ಸಮುದ್ರಪಾಲು – ಹೆಚ್ಚಿದ ಆತಂಕ

    ಕಂಟೇನರ್‌ಗಳು ಪತ್ತೆಯಾದ ಸ್ಥಳಕ್ಕೆ ಕೊಲ್ಲಂ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ‌ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಏನಿದು ಘಟನೆ?
    ಕಾರ್ಗೋ ಶಿಪ್ ವಿಝಿಂಜಂನಿಂದ ಕೊಚ್ಚಿಗೆ ಬರುತ್ತಿತ್ತು. ಶನಿವಾರ ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು ದೂರದ ಅರಬ್ಬಿ ಸಮುದ್ರದಲ್ಲಿ (Arabian Sea) ಹಡಗು ಮುಳುಗಿತ್ತು. ಮುಳುಗುವ ಮುನ್ನ ಹಡಗು ಒಂದು ಭಾಗಕ್ಕೆ ವಾಲಿದ್ದರಿಂದ ಅದರಲ್ಲಿದ್ದ ಕಂಟೇನರ್‌ಗಳು ಸಮುದ್ರದ ಪಾಲಾಗಿದ್ದವು. ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಭಾರತದ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದರು.

    ಮುಳುಗಿದ ಹಡಗನ್ನು ಕೊಚ್ಚಿ ಬಂದರಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಭಾರೀ ಅಲೆಗಳು ಮತ್ತು ಗಾಳಿಯ ಪರಿಣಾಮ ಬೀಸುತ್ತಿತ್ತು. ಹಾಗಾಗಿ, ಹಡಗಿನಲ್ಲಿದ್ದ ಸರಕುಗಳನ್ನು ಬೇರೆಡೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ – ಪುತ್ತೂರಿಗೆ NDRF ತಂಡ ಆಗಮನ

  • ಕೇರಳದಲ್ಲೂ ವಕ್ಫ್ ವಿವಾದ – ಒಂದೇ ಗ್ರಾಮದ 610 ಕುಟುಂಬಗಳಿಗೆ ಆಸ್ತಿ ಕಳೆದುಕೊಳ್ಳುವ ಭೀತಿ

    ಕೇರಳದಲ್ಲೂ ವಕ್ಫ್ ವಿವಾದ – ಒಂದೇ ಗ್ರಾಮದ 610 ಕುಟುಂಬಗಳಿಗೆ ಆಸ್ತಿ ಕಳೆದುಕೊಳ್ಳುವ ಭೀತಿ

    ತಿರುವನಂತಪುರ: ಕರ್ನಾಟಕದಲ್ಲಿ ವಕ್ಫ್ ವಿವಾದ ತೀವ್ರಗೊಂಡ ಬೆನ್ನಲ್ಲೇ ನೆರೆಯ ಕೇರಳದ ಕೊಚ್ಚಿ ಸಮೀಪದ ಇಡೀ ಗ್ರಾಮವೊಂದರ 610 ಕುಟುಂಬಗಳು ಕೂಡ ವಕ್ಫ್ ಮಂಡಳಿಯಿಂದಾಗಿ (Waqf Board) ತಮ್ಮ 464 ಎಕರೆಯಷ್ಟು ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿವೆ. ಹೀಗಾಗಿ ಮುನಂಬಂ (Munambam) ಹಾಗೂ ಅಕ್ಕಪಕ್ಕದ ಕೆಲ ಗ್ರಾಮಗಳ 600ಕ್ಕೂ ಹೆಚ್ಚು ಕುಟುಂಬಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ. ಈ ವಿಷಯ ಇದೀಗ ವಯನಾಡು ಚುನಾವಣೆ (Wayanad Election) ವೇಳೆಯೂ ಪ್ರತಿಧ್ವನಿಸಿದೆ.

    ವಿವಾದಿತ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿರುವ ಕೇರಳದ ಆಡಳಿತಾರೂಢ ಎಡಪಕ್ಷಗಳ ಎಲ್‌ಡಿಎಫ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಯುಡಿಎಫ್ ಮೈತ್ರಿಕೂಟ, ವಿವಾದಿತ ಜಮೀನು ವಕ್ಫ್ ಮಂಡಳಿಗೆ ಸೇರಿಲ್ಲವೆಂದು ಹೇಳುತ್ತಿವೆಯಾದರೂ ನೇರವಾಗಿ ಜನರ ಪ್ರತಿಭಟನೆಗೆ ಕೈಜೋಡಿಸದೇ ದೂರ ಉಳಿದು ಜಾಣತನ ಪ್ರದರ್ಶಿಸಿವೆ. ಮತ್ತೊಂದೆಡೆ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ಕ್ರೈಸ್ತ ಸಮುದಾಯದ ನೆರವಿಗೆ ಧಾವಿಸಿರುವ ಸ್ಥಳೀಯ ಚರ್ಚ್ಗಳು, ಜನರ ಹೋರಾಟಕ್ಕೆ ಬೆಂಬಲ ನೀಡಿದ್ದು ಕೇಂದ್ರದ ವಕ್ಫ್ ಮಂಡಳಿ ತಿದ್ದುಪಡಿ ಬೆಂಬಲಿಸಿವೆ. ಇದನ್ನೂ ಓದಿ: ವಕ್ಫ್‌ ಆಸ್ತಿ ವಿವಾದದ ಕಿಚ್ಚು – ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ

    ಏನಿದು ವಿವಾದ?
    1902ರಲ್ಲಿ ತಿರುವಾಂಕೂರು ರಾಜ, ಮೀನುಗಾರಿಕೆಗಾಗಿ ಗುಜರಾತ್‌ನಿಂದ ಕೇರಳಕ್ಕೆ ಬಂದಿದ್ದ ಅಬ್ದುಲ್ ಸತ್ತಾರ್ ಮೂಸಾ ಎಂಬುವವರಿಗೆ 464 ಎಕರೆ ಜಾಗ ನೀಡಿದ್ದರು. ಈ ನಡುವೆ 4 ದಶಕಗಳ ಅವಧಿಯಲ್ಲಿ ರಾಜ ನೀಡಿದ್ದ ಜಾಗದ ಪೈಕಿ ಸಾಕಷ್ಟು ಸಮುದ್ರ ಕೊರೆತದಿಂದ ನಾಶವಾಗಿತ್ತು. 1948ರಲ್ಲಿ ಸತ್ತಾರ್ ಅವರ ಉತ್ತರಾಧಿಕಾರಿ ಸಿದ್ಧಿಕಿ ಸೇಠ್, ಈ ಜಾಗವನ್ನು ನೋಂದಣಿ ಮಾಡಿಸಿದ ವೇಳೆ ಸ್ಥಳೀಯ ಮೀನುಗಾರರ ಜಮೀನು ಕೂಡಾ ಅದರಲ್ಲಿ ಸೇರಿಕೊಂಡಿತ್ತು. ಜೊತೆಗೆ ನೋಂದಣಿ ವೇಳೆ ಅದು ಹೇಗೋ ವಕ್ಫ್ ಎಂಬ ಪದ ಕೂಡಾ ಸೇರಿಬಿಟ್ಟಿತ್ತು. ಈ ನಡುವೆ 1950ರಲ್ಲಿ ಸಿದ್ಧಿಕಿ ಈ ಜಾಗವನ್ನು ಫಾರೂಖ್ ಕಾಲೇಜು ನಿರ್ಮಾಣಕ್ಕೆ ದಾನವಾಗಿ ನೀಡಿದರು. ಈ ವೇಳೆ ಅದನ್ನು ಬೇರಾವ ಉದ್ದೇಶಕ್ಕೂ ಬಳಸದಂತೆ, ಬಳಸಿದರೆ ಅದು ಮೂಲ ಮಾಲೀಕರಿಗೆ ಹೋಗಲಿದೆ ಎಂದು ಷರತ್ತು ಹಾಕಲಾಗಿತ್ತು. ಇದಾದ 3 ವರ್ಷದಲ್ಲಿ ರಾಜ್ಯದಲ್ಲಿ ಹೊಸ ವಕ್ಫ್ ಕಾಯ್ದೆ ಜಾರಿಗೆ ಬಂದಿತ್ತು. ಇದನ್ನೂ ಓದಿ: ಉಡುಪಿ| ಮಗುವಿನ ಮೇಲೆ ಹಲ್ಲೆ ನಡೆಸಿದ್ದ ತಾಯಿ, ಆಕೆಯ ಪ್ರಿಯಕರನಿಗೆ ನ್ಯಾಯಾಂಗ ಬಂಧನ

    ಈ ಕಾಯ್ದೆ ಜಾರಿಗೂ ಮೊದಲೇ ಕಾಲೇಜು ಆಡಳಿತ ಮಂಡಳಿಯಿಂದ ನೂರಾರು ಕುಟುಂಬಗಳು ಹಣ ಕೊಟ್ಟು ಜಾಗ ಖರೀದಿ ಮಾಡಿ ದಾಖಲೆ ಪತ್ರ ಪಡೆದುಕೊಂಡಿದ್ದರು. ಈ ನಡುವೆ 2019ರಲ್ಲಿ ಮುನಂಬಂ ಗ್ರಾಮ ತನಗೆ ಸೇರಿದ್ದು ಎಂದು ವಕ್ಫ್ ಮಂಡಳಿ ಘೋಷಿಸಿತು. ಆದಾದ ಬಳಿಕ ನಿಯಮದ ಅನ್ವಯ, ಪಂಚಾಯತ್ ವ್ಯಾಪ್ತಿಯಲ್ಲಿ ಜನರಿಂದ ಆಸ್ತಿ ತೆರಿಗೆ ಸಂಗ್ರಹಿಸಿದಂತೆ ತಡೆಯಾಜ್ಞೆಯನ್ನೂ ತಂತು. ಪರಿಣಾಮ, ಇದುವರೆಗೂ ಜನತೆ ತಮ್ಮ ಆಸ್ತಿಗೆ ತಾವು ತೆರಿಗೆಯನ್ನೂ ಕಟ್ಟಲಾಗದೇ ಯಾವುದೇ ಸಮಯದಲ್ಲಿ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ, ಈಗ ಇರುವ ವಕ್ಫ್ ಕಾಯ್ದೆ ರದ್ದುಪಡಿಸಿ ಕಾನೂನು ಬದ್ಧವಾಗಿ ತಾವು ಖರೀದಿಸಿದ ಆಸ್ತಿಯನ್ನು ತಮಗೆ ಉಳಿಸಿಕೊಡಿ ಎಂದು ಹೋರಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಪತಿಯ ಮೊದಲ ಹೆಂಡತಿಯೊಂದಿಗೆ ಗಲಾಟೆ ಮಾಡಿ 50 ಬಾರಿ ಚಾಕು ಚುಚ್ಚಿದ ಮಹಿಳೆ!

  • ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳು ಕೇರಳಕ್ಕೆ

    ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳು ಕೇರಳಕ್ಕೆ

    ನವದೆಹಲಿ: ಎರಡು ದಿನಗಳ ಹಿಂದೆ ಕುವೈತ್‌ನಲ್ಲಿ (Kuwait Fire) ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಾಯುಸೇನೆಯ ವಿಶೇಷ ವಿಮಾನ ಕೇರಳಕ್ಕೆ (Kerala) ಬಂದಿಳಿದಿದೆ.

    ಮೃತರಲ್ಲಿ ಕೇರಳದ 23, ತಮಿಳುನಾಡಿನ ಏಳು, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಹಾಗೂ ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಸೇರಿದ್ದಾರೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇದನ್ನೂ ಓದಿ: ಕುವೈತ್‌ ಅಗ್ನಿ ದುರಂತದಲ್ಲಿ ಕಲಬುರಗಿ ವ್ಯಕ್ತಿ ಸಾವು

    ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡ ಅಧಿಕಾರಿಗಳಿಗೆ ನಾವು ಧನ್ಯವಾದ ತಿಳಿಸುತ್ತೇವೆ. ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಕ್ಷಿಪ್ರವಾಗಿ ಕಾರ್ಯೋನ್ಮುಖರಾಗಿದ್ದರು. ಇಂದು ವಿಶೇಷ ವಿಮಾನದಲ್ಲಿ ಮೃತದೇಹಗಳನ್ನು ಭಾರತಕ್ಕೆ ತರಲಾಗಿದೆ ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಸುರೇಶ್ ಗೋಪಿ, ಮಾಜಿ ಕೇಂದ್ರ ಸಚಿವ ವಿ ಮುರಳೀಧರನ್ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಕುವೈತ್‌ನ ಕಾರ್ಮಿಕರ ಶಿಬಿರದಲ್ಲಿ ಅಗ್ನಿ ದುರಂತ – 40 ಮಂದಿ ಭಾರತೀಯರು ಸಾವು

    ಮಂಗಾಫ್ ನಗರದ ಆರು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಅಗ್ನಿ ಅವಘಡದಿಂದ ಕನಿಷ್ಠ 48 ಜನರು ಸಾವನ್ನಪ್ಪಿದ್ದರು. ವಸತಿ ಕಟ್ಟಡದಲ್ಲಿದ್ದ 176 ಭಾರತೀಯ ಕಾರ್ಮಿಕರಲ್ಲಿ 45 ಮಂದಿ ಮೃತಪಟ್ಟಿದ್ದರು. 33 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.

  • ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

    ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

    ನವದೆಹಲಿ: ಭಾರತೀಯ ಸೇನೆಗೆ ನೂತನವಾಗಿ ಸೇರ್ಪಡೆಗೊಂಡ ಎಂಹೆಚ್ 60ಆರ್ ಸೀಹಾಕ್ (MH 60R Seahawk) ಹೆಲಿಕಾಪ್ಟರ್‌ಗಳನ್ನು ಬುಧವಾರ ಕೊಚ್ಚಿಯ (Kochi) ನೌಕಾ ನೆಲೆಯಲ್ಲಿ ನಿಯೋಜಿಸಲು ಸಿದ್ಧತೆ ನಡೆದಿದೆ. ಈ ಮಲ್ಟಿ ಟಾಸ್ಕ್ ಹೆಲಿಕಾಪ್ಟರ್ ಜಲಾಂತರ್ಗಾಮಿಗಳ ವಿರುದ್ಧ ಹೋರಾಡುವ ತಂತ್ರಜ್ಞಾನವನ್ನು ಒಳಗೊಂಡಿದ್ದು, ಕ್ಷಿಪಣಿಗಳು ಹಾಗೂ ಗುಂಡಿನಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಭಾರತದ ನೌಕಪಡೆಯ (Indian Navy) ಏಕೈಕ ಹೆಲಿಕಾಪ್ಟರ್ ಇದಾಗಿದೆ.

    ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ಭಾರತದ ನೌಕಪಡೆಯ ಸಾಮಥ್ರ್ಯಗಳನ್ನು ಹೆಚ್ಚಿಸಲಿದೆ. ಅಲ್ಲದೇ ನೌಕಾಪಡೆಯ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ವಿಶಾಲವಾದ ಕಡಲ ಗಡಿಯಲ್ಲಿ ನಿರಂತರ ನೌಕಾ ಕಾರ್ಯಾಚರಣೆಗೆ ಈ ಹೆಲಿಕಾಪ್ಟರ್ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್‌ಗಳನ್ನು ಭಾರತ ಸರ್ಕಾರವು 2020 ರ ಫೆಬ್ರವರಿಯಲ್ಲಿ ಅಮೆರಿಕಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರಲ್ಲಿ ಆರು ಹೆಲಿಕಾಪ್ಟರ್‌ಗಳು ಇದುವರೆಗೆ ಭಾರತೀಯ ನೌಕಾಪಡೆಗೆ ಸಿಕ್ಕಿವೆ. ಎಲ್ಲಾ ರೀತಿಯಾಗಿಯೂ ಹೆಲಿಕಾಪ್ಟರ್‌ಗಳನ್ನು ಪರಿಶೀಲಿಸಲಾಗಿದ್ದು, ಸಮರ್ಥವಾಗಿವೆ. ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ಟಾರ್ಪಿಡೊಗಳು, ಕ್ಷಿಪಣಿಗಳು ಮತ್ತು ರಾಕೆಟ್‍ಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ದಾಳಿಯನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.

    ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಸೀಹಾಕ್‍ನ ನಿಯೋಜನೆಯು ಭಾರತೀಯ ನೌಕಾಪಡೆಯನ್ನು ಬಲಪಡಿಸುತ್ತದೆ. ಸಂಭಾವ್ಯ ಬೆದರಿಕೆಗಳನ್ನು ತಡೆಯುತ್ತದೆ. ಅಲ್ಲದೇ ಈ ಆಯಕಟ್ಟಿನ ನಿರ್ಣಾಯಕ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

  • ಕೇರಳ ಸ್ಫೋಟ – ಮಹಿಳೆ ಸಾವು, ಸಾವಿನ ಸಂಖ್ಯೆ 5ಕ್ಕೆ ಏರಿಕೆ

    ಕೇರಳ ಸ್ಫೋಟ – ಮಹಿಳೆ ಸಾವು, ಸಾವಿನ ಸಂಖ್ಯೆ 5ಕ್ಕೆ ಏರಿಕೆ

    ತಿರುವನಂತಪುರಂ: ಕೇರಳದ (Kerala) ಕೊಚ್ಚಿಯಲ್ಲಿ (Kochi) ನಡೆದ ಕ್ರಿಶ್ಚಿಯನ್ನರ ಪ್ರಾರ್ಥನಾ ಸಭೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ (Blast) ಸಂಬಂಧಿಸಿದಂತೆ ಇದೀಗ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. 45 ವರ್ಷದ ಮಹಿಳೆ ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

    ಮೃತರನ್ನು ಸಾಲಿ ಪ್ರದೀಪ್ (45) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ 10:30 ರ ಸುಮಾರಿಗೆ ಅವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ಪ್ರಕಾರ ಮೃತ ಮಹಿಳೆಯ ಮಗಳು ಲಿಬ್ನಾ ತಿಂಗಳ ಹಿಂದೆ ಸ್ಫೋಟ ಸಂಭವಿಸಿದ ವೇಳೆ ತೀವ್ರವಾದ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಳು. ಆಕೆಯ ಸಹೋದರನ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ.

    ರಾಜ್ಯ ಆರೋಗ್ಯ ಇಲಾಖೆಯು ಅಧಿಕಾರಿಗಳ ಪ್ರಕಾರ ದುರ್ಘಟನೆಯ ಬಳಿಕ ಸ್ಫೋಟದಲ್ಲಿ ಗಾಯಗೊಂಡವರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಪರೀಕ್ಷಾ ಅಕ್ರಮ ಕೇಸ್ – ಸಿಐಡಿ ಫುಲ್ ಅಲರ್ಟ್

    ಅಕ್ಟೋಬರ್ 29 ರಂದು ಕೊಚ್ಚಿಯ ಕಲಮಸ್ಸೆರಿ ಪ್ರದೇಶದಲ್ಲಿ ಪ್ರಾರ್ಥನಾ ಸಭೆಯಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದವು. ಘಟನೆ ಬಳಿಕ ಡೊಮಿನಿಕ್ ಮಾರ್ಟಿನ್ ಎಂಬಾತ ತಾನೇ ಬಾಂಬ್‌ಗಳನ್ನು ಸ್ಫೋಟಿಸಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗಿದ್ದ. ಇದೀಗ ಆರೋಪಿಯನ್ನು ನವೆಂಬರ್ 15 ರವರೆಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

    ರಿಮೋಟ್ ನಿಯಂತ್ರಿತ ಸುಧಾರಿತ ಸ್ಫೋಟಕ ಸಾಧನದಿಂದ (ಐಇಡಿ) ಸ್ಫೋಟ ಸಂಭವಿಸಿದೆ ಎಂದು ಕೇರಳ ಪೊಲೀಸರು ಹೇಳಿದ್ದರು. ಮಾರ್ಟಿನ್ ವಿರುದ್ಧ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಗೆ ಹಠಾತ್ ಬ್ರೇಕ್ – ಇಬ್ಬರ ದುರ್ಮರಣ

  • ಕೇರಳ ಬ್ಲಾಸ್ಟ್- ತೀವ್ರವಾಗಿ ಗಾಯಗೊಂಡಿದ್ದ 61 ವರ್ಷದ ಮಹಿಳೆ ಸಾವು

    ಕೇರಳ ಬ್ಲಾಸ್ಟ್- ತೀವ್ರವಾಗಿ ಗಾಯಗೊಂಡಿದ್ದ 61 ವರ್ಷದ ಮಹಿಳೆ ಸಾವು

    – ಸಾವಿನ ಸಂಖ್ಯೆ 4ಕ್ಕೆ ಏರಿಕೆ

    ತಿರುವನಂತಪುರಂ: ಅಕ್ಟೋಬರ್ 29ರಂದು ಕೇರಳದ (Kerala) ಕೊಚ್ಚಿಯಲ್ಲಿ (Kochi) ಕ್ರಿಶ್ಚಿಯನ್ ಧಾರ್ಮಿಕ ಸಭೆಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ (Bomb Blast) ಮೃತಪಟ್ಟವರ ಸಂಖ್ಯೆ ಇಲ್ಲಿಯವರೆಗೆ 4ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 61 ವರ್ಷದ ಮಹಿಳೆ ಇಂದು (ಸೋಮವಾರ) ಸಾವನ್ನಪ್ಪಿದ್ದಾರೆ.

    ಮೃತ ಮಹಿಳೆಯನ್ನು ಕಲಮಸ್ಸೆರಿಯ ಮೋಲಿ ಜಾಯ್ ಎಂದು ಗುರುತಿಸಲಾಗಿದೆ. ಸ್ಫೋಟ ಸಂಭವಿಸಿದ ವೇಳೆ ಮಹಿಳೆಗೆ 70% ರಷ್ಟು ಸುಟ್ಟ ಗಾಯಗಳಾಗಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ವೆಂಟಿಲೇಟರ್‌ನ ಬೆಂಬಲದಲ್ಲಿದ್ದರು. ಸೋಮವಾರ ಮುಂಜಾನೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಮಹಿಳೆಗೆ ಆರಂಭದಲ್ಲಿ ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಎರ್ನಾಕುಲಂ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಎರ್ನಾಕುಲಂ ಜಿಲ್ಲೆಯ ಮಲಯತ್ತೂರ್‌ನ ಲಿಬಿನಾ ಎಂಬ 12 ವರ್ಷದ ಬಾಲಕಿ ಕೂಡ ಅಕ್ಟೋಬರ್ 30 ರಂದು ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಇದನ್ನೂ ಓದಿ: ಸತತ 4ನೇ ದಿನ ವಾಯುಗುಣಮಟ್ಟ ಕುಸಿತ – ದೆಹಲಿಯಲ್ಲಿ ಹೈವೋಲ್ಟೇಜ್‌ ಸಭೆ ಕರೆದ ಸಿಎಂ

    ಸ್ಫೋಟ ನಡೆದ ದಿನ ಸ್ಥಳದಲ್ಲಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. ಘಟನೆಯಲ್ಲಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಫೋಟ ಸಂಭವಿಸಿದ ಕೆಲ ಗಂಟೆಗಳ ನಂತರ ತ್ರಿಶ್ಶೂರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ. ಆತ ಈ ಸ್ಫೋಟಗಳನ್ನು ನಡೆಸಿರುವುದಾಗಿ ಹೇಳಿಕೊಂಡಿದ್ದು, ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಕೊಲೆ- ತಪ್ಪೊಪ್ಪಿಕೊಂಡ ಕಿರಣ್

  • ಅವಸರದಲ್ಲಿ 2ನೇ ಮದುವೆಯಾದ ಅಮಲಾ ಪೌಲ್

    ಅವಸರದಲ್ಲಿ 2ನೇ ಮದುವೆಯಾದ ಅಮಲಾ ಪೌಲ್

    ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಮಲಾ ಪೌಲ್ ಸದ್ದಿಲ್ಲದೇ 2ನೇ ಮದುವೆಯಾಗಿದ್ದಾರೆ (Marriage). ಹತ್ತು ದಿನಗಳ ಹಿಂದೆಯಷ್ಟೇ ಅವರಿಗೆ ಪ್ರೀತಿಸುತ್ತಿದ್ದ ಹುಡುಗ ಲವ್ ಪ್ರಪೋಸ್ ಮಾಡಿದ್ದ. ಇದಾದ ಒಂದೂವರೆ ವಾರಗಳ ಅಂತರದಲ್ಲಿ ನೆಚ್ಚಿನ ಹುಡುಗನ ಜೊತೆ ಮದುವೆ ಆಗಿದ್ದಾರೆ. ಅಮಲಾ. ನಿನ್ನೆ ಕೊಚ್ಚಿಯಲ್ಲಿ (Kochi) ಅಮಲಾ ಪೌಲ್ ಅವರ ಜಗತ್ ದೇಸಾಯಿ ಅವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಹೇಗಿತ್ತು ಲವ್ ಪ್ರಪೋಸ್

    ಅಮಲಾ ಪೌಲ್ (Amala Paul) ವಿಭಿನ್ನವಾಗಿ ಮದುವೆಯ ಪ್ರಪೋಸಲ್ ಅನ್ನು ಸ್ವೀಕರಿಸಿದ್ದರು. ಅಮಲಾ ಅವರ ಹುಟ್ಟು ಹಬ್ಬದ ದಿನದಂದೇ ಬಾಯ್ ಫ್ರೆಂಡ್ ವಿಶೇಷವಾದ ಸನ್ನಿವೇಶವೊಂದನ್ನು ಸೃಷ್ಟಿ ಮಾಡಿ ಅಮಲಾ ಕೈಗೆ ಉಂಗುರು ತೊಡಿಸಿದ್ದರು.

    ದಕ್ಷಿಣ ಭಾರತದ ಖ್ಯಾತಿ ನಟಿ ಆಗಿರುವ ಅಮಲಾ ಪೌಲ್, ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿ ಆದವರು. ಆದರೂ, ಅವರ ಡಿಮಾಂಡ್ ಕಡಿಮೆ ಆಗಿರಲಿಲ್ಲ. ಒಂದಲ್ಲ ಒಂದು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು. 2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ, ಆ ಸಂಬಂಧ ತುಂಬಾ ದಿನ ಉಳಿಯಲಿಲ್ಲ. ಮದುವೆಯಾದ ಮೂರೇ ಮೂರು ವರ್ಷಕ್ಕೆ ಜೀವನ ಮುರಿದು ಬಿತ್ತು.

    ಆನಂತರ ಈ ನಟಿಯ ಹೆಸರು ಹಲವಾರು ನಟರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಅನೇಕ ನಿರ್ದೇಶಕರ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ಯಾವತ್ತೂ ಅಮಲಾ ಉತ್ತರಿಸಲಿಲ್ಲ. ಇದೀಗ ಬಾಯ್ ಫ್ರೆಂಡ್ ಜೊತೆಗಿನ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಬಾಯ್ ಫ್ರೆಂಡ್ ಮಾಡಿರೋ ಪ್ರಪೋಸ್‍ಗೆ ಒಪ್ಪಿಕೊಂಡಿದ್ದರು.

     

    ಜಗತ್ ದೇಸಾಯಿ (Jagat Desai) ಎನ್ನುವವರ ಜೊತೆ ಅಮಲಾ ಡೇಟಿಂಗ್ ನಲ್ಲಿದ್ದರು. ಅವರೇ ಹೋಟೆಲ್ ವೊಂದರಲ್ಲಿ ಅಮಲಾ ಅವರ ಹುಟ್ಟು ಹಬ್ಬಕ್ಕೆ ಸಿದ್ಧತೆ ಮಾಡಿದ್ದರು. ನೃತ್ಯ ಮಾಡುತ್ತಲೇ ನಟಿಗೆ ಪ್ರಪೋಸ್ ಮಾಡಿದ್ದರು. ಅಚ್ಚರಿಯಿಂದಲೇ ಅಮಲಾ ಕೂಡ ಬಾಯ್ ಫ್ರೆಂಡ್ ತುಟಿಗೆ ಮುತ್ತಿಡುತ್ತಾ (Lip Lock) ಉಂಗುರು ತೊಡಿಸಿದ್ದರು.

  • ದೇಶದಲ್ಲೇ ಅತಿ ದೊಡ್ಡದು – ಕೇರಳದಲ್ಲಿ ಸಿಕ್ಕಿದ್ದು 25 ಸಾವಿರ ಕೋಟಿ ಮೌಲ್ಯದ ಡ್ರಗ್ಸ್

    ದೇಶದಲ್ಲೇ ಅತಿ ದೊಡ್ಡದು – ಕೇರಳದಲ್ಲಿ ಸಿಕ್ಕಿದ್ದು 25 ಸಾವಿರ ಕೋಟಿ ಮೌಲ್ಯದ ಡ್ರಗ್ಸ್

    ತಿರುವನಂತಪುರಂ: ಮಾದಕವಸ್ತು ನಿಗ್ರಹ ದಳ (NCB) ಹಾಗೂ ಭಾರತೀಯ ನೌಕಾಪಡೆ (Indian Navy) ಶನಿವಾರ ಕೇರಳದ (Kerala) ಕೊಚ್ಚಿಯಲ್ಲಿ (Kochi) ವಿಶೇಷ ಕಾರ್ಯಾಚರಣೆ ನಡೆಸಿ ಬಂದರಿಗೆ ಆಗಮಿಸಿದ ನೌಕೆಯಿಂದ 134 ಚೀಲಗಳಲ್ಲಿ ತುಂಬಿದ್ದ ಮಾದಕ ವಸ್ತು (Drugs) ಪತ್ತೆ ಮಾಡಿತ್ತು. ಈ ಮಾದಕ ವಸ್ತುವಿನ ಮೌಲ್ಯ ಬರೋಬ್ಬರಿ 25,000 ಕೋಟಿ ರೂ. ಎಂದು ಎನ್‌ಸಿಬಿ ತಿಳಿಸಿದೆ.

    ಎನ್‌ಸಿಬಿ ಹಾಗೂ ನೌಕಾಪಡೆ ವಶಪಡಿಸಿಕೊಂಡ ಹೈ ಪ್ಯೂರಿಟಿ ಮೆಥಾಂಪೆಟಮೈನ್‌ನ ಎಣಿಕೆ ಪೂರ್ಣಗೊಂಡಿದೆ. ಒಟ್ಟು 2,525 ಕೆಜಿ ತೂಕದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದು, ಇದರ ಬೆಲೆಯನ್ನು ಆರಂಭದಲ್ಲಿ 12,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ಡ್ರಗ್ಸ್ನ ಗುಣಮಟ್ಟ ಪರಿಶೀಲನೆ ಬಳಿಕ ಇದರ ಬೆಲೆ 25,000 ಕೋಟಿ ರೂ. ನಷ್ಟಿದೆ ಎಂದು ಅಂದಾಜಿಸಲಾಗಿದೆ. ಮಾತ್ರವಲ್ಲದೇ ಇದು ದೇಶದಲ್ಲಿಯೇ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ಮಾದಕ ವಸ್ತು ಪ್ರಕರಣವಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ಹಾಡಹಗಲೇ ಡ್ರ್ಯಾಗರ್ ಹಿಡಿದು ಯುವತಿಗೆ ಕಿರುಕುಳ ನೀಡಿದ ದುಷ್ಕರ್ಮಿ – ಮತ್ತೊಬ್ಬ ಮಹಿಳೆಯಿಂದ ರಕ್ಷಣೆ

    ಮೂಲಗಳ ಪ್ರಕಾರ ಉತ್ಕೃಷ್ಟ ಗುಣಮಟ್ಟದ ಡ್ರಗ್ಸ್ ಅನ್ನು ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲೆಂದು ಹಡಗಿನಲ್ಲಿ ತರಲಾಗಿತ್ತು. ತನಿಖೆ ವೇಳೆ ಅಫ್ಘಾನಿಸ್ತಾನದಲ್ಲಿ ಉತ್ಪಾದಿಸಲಾಗಿದ್ದ ಡ್ರಗ್ಸ್ ಅನ್ನು ಪಾಕಿಸ್ತಾನ-ಇರಾನ್ ಸನಿಹದ ಮಕ್ರಾಮ್ ಕರಾವಳಿಯಿಂದ ಮದರ್ ಶಿಪ್ ಎಂಬ ಹಡಗಿನಲ್ಲಿ ತರಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಸಿಎಂ ಪಟ್ಟಕ್ಕೆ ಸಿದ್ದು ಪಟ್ಟು – ದೆಹಲಿಯಲ್ಲಿ ಬೆಂಬಲಿಗರ ಜೊತೆ ಬಲ ಪ್ರದರ್ಶನ