Tag: kocchi

  • ಜಿಮ್‌ನಲ್ಲಿ ವರ್ಕ್ಔಟ್ ವೇಳೆ ಹೃದಯಾಘಾತ – ಪ್ರತ್ಯೇಕ ಕಡೆ ಇಬ್ಬರು ಸಾವು

    ಜಿಮ್‌ನಲ್ಲಿ ವರ್ಕ್ಔಟ್ ವೇಳೆ ಹೃದಯಾಘಾತ – ಪ್ರತ್ಯೇಕ ಕಡೆ ಇಬ್ಬರು ಸಾವು

    ಮುಂಬೈ/ತಿರುವನಂತಪುರಂ: ಜಿಮ್‌ನಲ್ಲಿ (Gym) ವರ್ಕ್ಔಟ್ ಮಾಡುವಾಗ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಒಂದೇ ದಿನ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ಪುಣೆ (Pune) ಹಾಗೂ ಕೊಚ್ಚಿಯಲ್ಲಿ (Kocchi) ನಡೆದಿದೆ.

    ಕೇರಳದ (Kerala) ಕೊಚ್ಚಿ ಮೂಲದ ರಾಜ್ (42) ಹಾಗೂ ಮಹಾರಾಷ್ಟ್ರದ (Maharashtra) ಪುಣೆಯ ಮಿಲಿಂದ್ ಕುಲಕರ್ಣಿ (37) ಮೃತರು.ಇದನ್ನೂ ಓದಿ: ಬಾಲಕನ ಬರ್ಬರ ಹತ್ಯೆ ಕೇಸ್ – ನಿಶ್ಚಿತ್ ಕೊನೇ ಕ್ಷಣದ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

    ಮೃತ ರಾಜ್ ಕೊಚ್ಚಿಯ ಜಿಮ್‌ವೊಂದರಲ್ಲಿ ವರ್ಕ್ಔಟ್ ಮಾಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತ ಮಿಲಿಂದ್ ಕಳೆದ ಆರು ತಿಂಗಳಿನಿಂದ ಪುಣೆಯ ಪಿಂಪ್ರಿ ಚಿಂಚ್ವಾಡದ ಜಿಮ್‌ಗೆ ತೆರಳುತ್ತಿದ್ದರು. ಅವಘಡ ಸಂಭವಿಸಿದ ದಿನ ಎಂದಿನಂತೆ ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿದ್ದರು. ವ್ಯಾಯಾಮ ಮಾಡಿ ನೀರು ಕುಡಿದ ನಂತರ ತಕ್ಷಣ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿದರೂ ಮಾರ್ಗ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು.

    ಮೂಲಗಳ ಪ್ರಕಾರ, ಇದಕ್ಕೂ ಮುನ್ನ ವೈದ್ಯೆಯಾಗಿದ್ದ ಮಿಲಿಂದ್ ಅವರ ಪತ್ನಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು.ಇದನ್ನೂ ಓದಿ: ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ – ಬಂಧಿತರು ದರ್ಶನ್‌ ಅಭಿಮಾನಿಗಳೇ‌ ಅಂತ ಪರಿಶೀಲಿಸ್ತಿದ್ದೇವೆ: ಸೀಮಂತ್‌ ಕುಮಾರ್‌ ಸಿಂಗ್‌

  • ಐಎನ್‌ಎಸ್ ಗರುಡ ರನ್‌ವೇಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಪತನ – ಓರ್ವ ಸಿಬ್ಬಂದಿ ಸಾವು

    ಐಎನ್‌ಎಸ್ ಗರುಡ ರನ್‌ವೇಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಪತನ – ಓರ್ವ ಸಿಬ್ಬಂದಿ ಸಾವು

    ತಿರುವನಂತಪುರ: ಕೊಚ್ಚಿಯ ನೌಕಾ ವಾಯು ನಿಲ್ದಾಣದ ಐಎನ್‌ಎಸ್ ಗರುಡಾ (INS Garuda) ರನ್‌ವೇಯಲ್ಲಿ  ಚೇತಕ್ ಹೆಲಿಕಾಪ್ಟರ್‌ವೊಂದು (Chetak Helicopter) ಪತನಗೊಂಡಿದ್ದು, ಘಟನೆಯಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.

    ನೌಕಾ ವಾಯು ನಿಲ್ದಾಣದಲ್ಲಿ (Naval Air Station) ನಿರ್ವಹಣಾ ಟ್ಯಾಕ್ಸಿ ತಪಾಸಣೆ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ನೌಕಾಪಡೆಯ ವಕ್ತಾರರು ಎಕ್ಸ್‌ನಲ್ಲಿ (X) ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್

    ಇಂದು ಕೊಚ್ಚಿಯ ಐಎನ್‌ಎಸ್ ಗರುಡಾದಲ್ಲಿ ನಿರ್ವಹಣಾ ಟ್ಯಾಕ್ಸಿ ತಪಾಸಣೆಯ ವೇಳೆ ಚೇತಕ್ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಇದರ ಪರಿಣಾಮವಾಗಿ ಸಿಬ್ಬಂದಿಯೊಬ್ಬರು ದುರಾದೃಷ್ಟಕರವಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನೌಕಾಪಡೆ ಎಕ್ಸ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಮೂರು ಬಾರಿ ಕಂಪನ- ದೆಹಲಿಯಲ್ಲಿ ನಿರಂತರ ಭೂಕಂಪನಕ್ಕೆ ಕಾರಣವೇನು?

    ಅಪಘಾತದ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ನೌಕಾಪಡೆಯ ವಕ್ತಾರರು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಎಲ್ಲಾ ನೌಕಾಪಡೆಯ ಸಿಬ್ಬಂದಿ, ಯೋಗೇಂದ್ರ ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ವಿಷವಾಗುತ್ತಿದೆಯಾ ಉಸಿರಾಡುವ ಗಾಳಿ? – ಪರಿಶೀಲನೆಗೆ 1,119 ಅಧಿಕಾರಿಗಳ 517 ತಂಡ ರಚನೆ

    ಅಡ್ಮಿರಲ್ ಹರಿ ಕುಮಾರ್ ಮತ್ತು ಭಾರತೀಯ ನೌಕಾಪಡೆಯ ಎಲ್ಲಾ ಸಿಬ್ಬಂದಿ ಘಟನೆಯಲ್ಲಿ ಮೃತಪಟ್ಟ ಸಿಬ್ಬಂದಿಗೆ ಸಂತಾಪ ಸೂಚಿಸಿದ್ದಾರೆ. ಕೊಚ್ಚಿಯಲ್ಲಿ ನಡೆದ ದುರದೃಷ್ಟಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸಿಬ್ಬಂದಿ ಯೋಗೇಂದ್ರ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ದುಃಖಿತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: Nepal Earthquake: ಭೀಕರ ಭೂಕಂಪನಕ್ಕೆ ಬೆಚ್ಚಿಬಿದ್ದ ನೇಪಾಳ- 70 ಮಂದಿ ದುರ್ಮರಣ

  • ಖಾಸಗಿ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    ತಿರುವನಂತಪುರಂ: ಕೇರಳದ ಕೊಚ್ಚಿಯಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಬುಧವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಕಿನ್‌ಫ್ರಾ ಪಾರ್ಕ್ನಲ್ಲಿರುವ ಖಾಸಗಿ ಸಂಸ್ಥೆ(ಗ್ರೀನ್ ಲೀಫ್ ಎಕ್ಸ್ಟೆನ್ಶನ್ಸ್)ಯಲ್ಲಿ ಮುಂಜಾನೆ ವಾಕಿಂಗ್‌ಗೆ ತೆರಳಿದ್ದ ಕೆಲವು ಸ್ಥಳೀಯರು ಬೆಂಕಿ ಹೊತ್ತಿ ಉರಿಯುವುದನ್ನು ಗುರುತಿಸಿದ್ದಾರೆ. ತಕ್ಷಣ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ 3 ಅಗ್ನಿಶಾಮಕ ಟೆಂಡರ್‌ಗಳು ಬೆಂಕಿ ನಂದಿಸಿದ್ದಾರೆ.

    ಕಂಪನಿಯ ಆವರಣದೊಳಗಿನ ಗ್ಯಾಸ್ ಪೈಪ್‌ಲೈನ್ ಸೋರಿಕೆಯಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯಿಂದ ಕೆಲವರಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ವಸತಿ ನಿಲಯದ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

    POLICE JEEP

    ಬೆಂಕಿಯ ಹೊಗೆಯಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರು ಆಗಬಹುದು ಎಂಬ ಕಾರಣಕ್ಕೆ ಎರ್ನಾಕುಲಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಅಗ್ನಿಶಾಮಕ ಅಧಿಕಾರಿಗಳು, ಸ್ಥಳೀಯರು ಹಾಗೂ ಕಂಪನಿ ಸಿಬ್ಬಂದಿ ಸೇರಿ ಸುಮಾರು 51 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ್ದಕ್ಕಾಗಿ ಭಯಭೀತಗೊಳಿಸುವುದು ದಬ್ಬಾಳಿಕೆ, ಮುಸಲ್ಮಾನರ ಶೋಷಣೆಯಾಗಿದೆ: ಪಾಕ್‌ ಸಚಿವ

  • ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದ ನಟಿಗೆ ಕಿರುಕುಳ- ಆರೋಪಿ ಬಂಧನ

    ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದ ನಟಿಗೆ ಕಿರುಕುಳ- ಆರೋಪಿ ಬಂಧನ

    ತಿರುವನಂತಪುರಂ: ದಕ್ಷಿಣ ಭಾರತದ ಜನಪ್ರಿಯ ನಟಿ ಪಾರ್ವತಿ ತಿರುವೋತು ಅವರನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಲ್ಲಂ ಮೂಲದ ಅಫ್ಸಲ್ (34) ಬಂಧಿತ ಆರೋಪಿ. ನಟಿಗೆ ನಿರಂತರ ಫೋನ್ ಕರೆಗಳ ಮೂಲಕ ಆರೋಪಿಯು ತೊಂದರೆಯನ್ನು ನೀಡುತ್ತಿದ್ದ. ಅಷ್ಟೇ ಅಲ್ಲದೆ ಈತ ಆಹಾರ ಪೊಟ್ಟಗಳನ್ನು ನೀಡಲು ಕೊಚ್ಚಿಯಲ್ಲಿರುವ ನಟಿ ಪಾರ್ವತಿ ನಿವಾಸಕ್ಕೆ ಆಗಾಗ ಬಂದು ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿದ್ದ.

    ಕಳೆದ ಕೆಲವು ವರ್ಷಗಳಿಂದ ಫೋನ್ ಸಂದೇಶಗಳ ಮೂಲಕ ನಟಿಗೆ ತೊಂದರೆ ನೀಡುತ್ತಿದ್ದನು. ಇದರ ಬೆನ್ನಲ್ಲೇ ನಟಿ ಎರ್ನಾಕುಲಂನ ಮರಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿ ಅಫ್ಸಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ಸುಲಭ ಅಲ್ಲ: ಯುವರತ್ನ ನಟಿ 

    ನಟಿ ಪಾರ್ವತಿ ಅವರು ಕನ್ನಡದಲ್ಲೂ ನಟಿಸಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೊತೆ ‘ಮಿಲನ್’ ಹಾಗೂ ‘ಪೃಥ್ವಿ’ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದರು. ಇತ್ತೀಚೆಗೆ ವಸಂತ್ ನಿರ್ದೇಶನದ ಸಿವರಂಜಿನಿಯಂ ಇನ್ನುಮ್ ಸಿಲಾ  ಪೆಂಗಲುಮ್ ನಲ್ಲಿನ ಅಭಿನಯಿಸಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದರು. ಸಿವರಂಜಿನಿಯಂ ಇನ್ನುಮ್ ಸಿಲಾ ಪೆಂಗಲುಮ್ ಸಿನಿಮಾವು ಅಶೋಕ ಮಿತ್ರನ್, ಅಧವನ್ ಮತ್ತು ಜಯಮೋಹನ್ ಬರೆದ ಕಥೆಗಳನ್ನು ಆಧರಿಸಿದ ಮೂರು ಮಹಿಳಾ ಕೇಂದ್ರಿತ ಕಿರುಚಿತ್ರಗಳ ಸಂಕಲನವಾಗಿದೆ. ಈ ಚಿತ್ರದಲ್ಲಿ ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಪಾರ್ವತಿ ತಿರುವೋತ್ತು ಮತ್ತು ಕಾಳೇಶ್ವರಿ ಶ್ರೀನಿವಾಸನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.  ಇದನ್ನೂ ಓದಿ: ಕಪಿಲ್‌ ದೇವ್‌ ಆಗಲು ನಿತ್ಯ 4 ಗಂಟೆ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದ ರಣವೀರ್‌ ಸಿಂಗ್‌!

     

  • ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್

    ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್

    ತಿರುವನಂತಪುರಂ: ಮಹಿಳೆಯೊಬ್ಬಳ ಮೇಲೆ ಕಾಮುಕರು ಮೂರು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ.

    ಸಲೀಂ ಕುಮಾರ್(23) ಬಂಧಿತ ಆರೋಪಿ. ಇನ್ನಿಬ್ಬರು ಆರೋಪಿಗಳಾದ ಅಜ್ಮಲ್ ಮತ್ತು ಶಮೀರ್ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಮಹಿಳೆ ಫೋಟೋಶೂಟ್‌ಗೆಂದು ಕೊಚ್ಚಿಗೆ ಬಂದಿದ್ದರು. ಆಗ ಅಲ್ಲಿದ್ದ ಮೂವರು ವ್ಯಕ್ತಿಗಳು ಮಹಿಳೆಯನ್ನು ಲಾಡ್ಜ್‌ಗೆ ಕರೆತಂದು, ಆಕೆಗೆ ಮಾದಕ ದ್ರವ್ಯ ನೀಡಿ ಗ್ಯಾಂಗ್ ರೇಪ್ ಮಾಡಿದ್ದಾರೆ.

    ಮೂಲಗಳ ಪ್ರಕಾರ ಸಂತ್ರಸ್ತೆಯ ಮೇಲೆ ಡಿ.೧ರಿಂದ ಡಿ.೩ರವರೆಗೆ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಗ್ಯಾಂಗ್ ರೇಪ್ ಮಾಡಿದ್ದನ್ನು ವೀಡಿಯೋ ಮಾಡಿಕೊಂಡು ಸಂತ್ರಸ್ತೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಮತ್ತೆ ಆ ವೀಡಿಯೋ ತೋರಿಸಿ ಅತ್ಯಾಚಾರವೆಸಗಿದ್ದಾರೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

    RAPE CASE

    ದೂರಿನಲ್ಲಿ ಏನಿದೆ?: ಫೋಟೋಶೂಟ್‌ಗಾಗಿ ಕೊಚ್ಚಿಗೆ ಬಂದಿದ್ದೆ. ಈ ವೇಳೆ ಅಲಪ್ಪುಳದ ಸಲೀಂ ಕುಮಾರ್ ಅವರು ಮೊದಲೇ ಪರಿಚಯವಿದ್ದರಿಂದ ಲಾಡ್ಜ್ ವ್ಯವಸ್ಥೆ ಮಾಡಿದ್ದ. ಅಂತೆಯೇ ಲಾಡ್ಜ್ ನಲ್ಲಿದ್ದ ಸಂದರ್ಭದಲ್ಲಿ ಮಾಲೀಕ ಮತ್ತು ಬರುವ ಪಾನೀಯ ನೀಡಿದ್ದಾನೆ. ಇದಾದ ಬಳಿಕ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್

    ಮಲಪ್ಪುರಂ ಮೂಲದ ಸಂತ್ರಸ್ತೆ ಈ ಬಗ್ಗೆ ಇನ್ಫೋ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹಾಗೂ ಆರೋಪಿಗಳ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ- 93 ವಿದ್ಯಾರ್ಥಿಗಳು ಸೇರಿ 107 ಮಂದಿಗೆ ಪಾಸಿಟಿವ್

  • ಶ್ವಾನದ ಕುತ್ತಿಗೆಗೆ ಹಗ್ಗ ಸುತ್ತಿ, ಕಾರಿನ ಹಿಂಭಾಗಕ್ಕೆ ಕಟ್ಟಿ ರಸ್ತೆಯಲ್ಲಿ ಧರಧರನೇ ಎಳೆದೊಯ್ದ!

    ಶ್ವಾನದ ಕುತ್ತಿಗೆಗೆ ಹಗ್ಗ ಸುತ್ತಿ, ಕಾರಿನ ಹಿಂಭಾಗಕ್ಕೆ ಕಟ್ಟಿ ರಸ್ತೆಯಲ್ಲಿ ಧರಧರನೇ ಎಳೆದೊಯ್ದ!

    – ಆರೋಪಿ ಯೂಸುಫ್ ವಿರುದ್ಧ ಪ್ರಕರಣ ದಾಖಲು

    ಕೊಚ್ಚಿ: ವ್ಯಕ್ತಿಯೊಬ್ಬ ಶ್ವಾನದ ಕುತ್ತಿಗೆಗೆ ಹಗ್ಗ ಸುತ್ತಿ ನಂತರ ಅದನ್ನು ಟ್ಯಾಕ್ಸಿಗೆ ಕಟ್ಟಿ ರಸ್ತೆಯಲ್ಲಿ ಧರಧರನೇ ಎಳೆದೊಯ್ದ ಅಮಾನವೀಯ ಘಟನೆಯೊಂದು ನೆಡುಂಬಾಶೇರಿ ಅತ್ತಾಣಿ ಸಮೀಪದ ಚಾಲಾಕ ಎಂಬಲ್ಲಿ ನಡೆದಿದೆ.

    ಕೃತ್ಯ ಎಸಗಿದವನನ್ನು ಯೂಸುಫ್ ಎಂದು ಗುರುತಿಲಾಗಿದೆ. ಈತ ಕಾರು ಚಾಲಕ ಹಾಗೂ ನಾಯಿಯ ಮಾಲಕ ಕೂಡ ಹೌದು. ಸದ್ಯ ಈತನನ್ನು ಚೆಂಗಮನಾಡು ಪೊಲೀಸರು ಬಂಧಿಸಿದ್ದಾರೆ.

    ನಾಯಿಯ ಮೇಲೆ ರಾಕ್ಷಸೀಯ ಕ್ರೂರ ಪ್ರವೃತ್ತಿ ನಡೆಸಿದ ಯೂಸುಫ್ ದೃಶ್ಯವನ್ನು ಅಖಿಲ್ ಎಂಬವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ಪತ್ರೆಯಿಂದ ಹಿಂದಿರುಗುವಾಗ ಈ ಘಟನೆ ಗಮನಕ್ಕೆ ಬಂದಿತು. ಕಾರಿನ ಹಿಂಭಾಗಕ್ಕೆ ಶ್ವಾನವನ್ನು ಕಟ್ಟಿ ಹಾಕಿ ಎಳೆದೊಯ್ಯುವುದನ್ನು ನೋಡಿ ತೀವ್ರ ಕಳವಳಗೊಂಡಿದ್ದೆ ಎಂದು ಅಖಿಲ್ ತಿಳಿಸಿದ್ದಾರೆ.

    ನಾನು ಶ್ವಾನವನ್ನು ಪ್ರೀತಿಯಿಂದ ಸಾಕಿದ್ದೆ. ಆದರೆ ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಶ್ವಾನವನ್ನು ಬೇರೆಡೆ ಸಾಗಿಸಲೆಂದು ಕಾರೊಳಗಡೆ ಹತ್ತಿಸಲು ಪ್ರಯತ್ನಿಸಿದೆ. ಆದರೆ ಶ್ವಾನ ಕಾರು ಹತ್ತಲಿಲ್ಲ. ಕೊನೆಗೆ ಅದರ ಕುತ್ತಿಗೆಗೆ ಹಗ್ಗದಿಂದ ಕಟ್ಟಿ ಹೀಗೆ ಮಾಡಿದೆ ಎಂದು ಯೂಸುಫ್ ತಪ್ಪೊಪ್ಪಿಕೊಂಡಿದ್ದಾನೆ.

    ಆರೋಪಿ ಯೂಸುಫ್ ವಿರುದ್ಧ ಐಪಿಸಿಯ ಸೆಕ್ಷನ್ 428, 429 ಮತ್ತು ನೆಡುಂಬಸ್ಸೆರಿ ಪುತ್ತನ್ವೆಲಿಕರ ಚಲಕ ಕಾರ್ನರ್ ಹೌಸ್ ನ ಈತನ ಮೇಲೆ ಪ್ರಾಣಿಗಳಿಗೆ ಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ವಾಹನ ಚಲಾವಣಾ ಪರವಾನಿಗೆಯನ್ನು ರದ್ದುಪಡಿಸಲಾಗಿದೆ.

  • ದೇವರನಾಡು ಕೇರಳದಲ್ಲಿ ಸಮೂಹ `ಸನ್ನಿ’ – ಸನ್ನಿ ಲಿಯೋನ್ ನೋಡಲು ಮುಗಿಬಿದ್ದ ಲಕ್ಷ-ಲಕ್ಷ ಜನ

    ದೇವರನಾಡು ಕೇರಳದಲ್ಲಿ ಸಮೂಹ `ಸನ್ನಿ’ – ಸನ್ನಿ ಲಿಯೋನ್ ನೋಡಲು ಮುಗಿಬಿದ್ದ ಲಕ್ಷ-ಲಕ್ಷ ಜನ

    ತಿರುವನಂತಪುರ: ಬಾಲಿವುಡ್ ನಟಿ ಸನ್ನಿ ಲಿಯೋನ್ ಗುರುವಾರ ಕೇರಳದ ಕೊಚ್ಚಿಗೆ ಭೇಟಿ ನೀಡಿದ್ದು ಅಭಿಮಾನಿಗಳ ಸಾಗರವೇ ಅಲ್ಲಿ ನೆರೆದಿತ್ತು.

    ಶೋ ರೂಂ ಒಂದರ ಉದ್ಘಾಟನೆಗಾಗಿ ಸನ್ನಿ ಲಿಯೋನ್ ಬಂದಿದ್ದು, ಕೊಚ್ಚಿಯ ಹೃದಯಭಾಗವಾದ ಧಾರವಾಹಿ ಎಂಜಿ ರಸ್ತೆಯಲ್ಲಿ ಸನ್ನಿ ಲಿಯೋನ್ ಕಣ್ತುಂಬಿಕೊಳ್ಳಲು ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಅಭಿಮಾನಿಗಳು ತಮ್ಮ ಮೊಬೈಲ್‍ಗಳಲ್ಲಿ ಸನ್ನಿಯನ್ನು ಸೆರೆ ಹಿಡಿದುಕೊಂಡರು. ಈ ವೇಳೆ ಸ್ಥಳದಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನಸಮೂಹ ಮತ್ತು ಸಂಚಾರವನ್ನು ನಿರ್ವಹಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    ಭೇಟಿ ಬಳೀಕ ಸನ್ನಿ ಲಿಯೋನ್ ಟ್ವಿಟರ್ ಮತ್ತು ಅವರ ಫೇಸ್‍ಬುಕ್ ಪುಟಗಳಲ್ಲಿ ಪ್ರೇಕ್ಷಕರ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಕೊಚ್ಚಿಯ ಜನರಿಗೆ ಧನ್ಯವಾದ ಹೇಳಲು ಯಾವುದೇ ಪದಗಳಿಲ್ಲ. ಪ್ರೀತಿ ವಿಶ್ವಾಸವಿಟ್ಟ ಕೇರಳವನ್ನು ಎಂದಿಗೂ ಮರೆಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ. . ಸನ್ನಿಗಾಗಿ ಸಮೂಹ ಸನ್ನಿಯ ದೃಶ್ಯ ಇದೀಗ ಎಲ್ಲೆಡೆ ಸಖತ್ ವೈರಲ್ ಆಗಿದೆ.