Tag: Kobbari Mitai

  • ಪ್ರಿಯಾಂಕಾ ತಾಯಿ ತಂದ ಸ್ವೀಟ್ ತಿಂದು, ಪುಷ್ಪಾ ಮಿಸ್‍ಗೆ ಥ್ಯಾಂಕ್ಯೂ ಹೇಳಿದ ವಾಸುಕಿ

    ಪ್ರಿಯಾಂಕಾ ತಾಯಿ ತಂದ ಸ್ವೀಟ್ ತಿಂದು, ಪುಷ್ಪಾ ಮಿಸ್‍ಗೆ ಥ್ಯಾಂಕ್ಯೂ ಹೇಳಿದ ವಾಸುಕಿ

    ನ್ನಡದ ಬಿಗ್‍ಬಾಸ್ ರಿಯಾಲಿಟಿ ಶೋ ಅಂತಿಮ ಹಂತ ತಲುಪಿದೆ. 93ನೇ ದಿನ ಮಧ್ಯರಾತ್ರಿ ಸ್ಪರ್ಧಿ ಪ್ರಿಯಾಂಕಾ ತಾಯಿ ಬಿಗ್‍ಬಾಸ್ ಮನೆಗೆ ಆಗಮಿಸಿದ್ದರು. ಪ್ರಿಯಾಂಕ ತಾಯಿ ಸುಕನ್ಯ ಅವರು ತಂದ ಕೊಬ್ಬರಿ ಮಿಠಾಯಿ ತಿಂದ ವಾಸುಕಿ ಸೇರಿದಂತೆ ಇತರ ಮನೆಯ ಸದಸ್ಯರು ಪುಷ್ಮಾ ಮಿಸ್ ಗೆ ಧನ್ಯವಾದ ಹೇಳಿದ್ದಾರೆ.

    ಬಿಗ್‍ಬಾಸ್ ಸ್ಪರ್ಧಿಗಳು ಕುಟುಂಬಸ್ಥರನ್ನು ಬಿಟ್ಟು 93 ದಿನಗಳನ್ನು ಕಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವಾರದಿಂದಲೂ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಸೋಮವಾರ ಕುರಿ ಪ್ರತಾಪ್ ಅವರ ಪತ್ನಿ ಮತ್ತು ಮಕ್ಕಳು ಆಗಮಿಸಿದ್ದರು. 93ನೇ ದಿನ ರಾತ್ರಿ 12.40ಕ್ಕೆ ಪ್ರಿಯಾಂಕಾ ತಾಯಿ ಸುಕನ್ಯ ಬಿಗ್‍ಬಾಸ್ ಮನೆಗೆ ಆಗಮಿಸಿ ಎಲ್ಲರಿಗೂ ಶಾಕ್ ನೀಡಿದರು.

    ಮೊದಲಿಗೆ ಸುಕನ್ಯರನ್ನ ನೋಡಿದ ವಾಸುಕಿ, ಒಂದು ಕ್ಷಣ ಆಶ್ಚರ್ಯಗೊಂಡ ಜೋರಾಗಿ ಕೂಗಿದರು. ವಾಸುಕಿ ಕಿರುಚುತ್ತಿದ್ದಂತೆ ಮನೆಯ ಲೈಟ್ ಆನ್ ಆಯ್ತು. ನಿದ್ದೆಗಣ್ಣಿನಲ್ಲಿ ತಾಯಿಯನ್ನು ನೋಡಿದ ಪ್ರಿಯಾಂಕ ಒಂದು ಕ್ಷಣ ಭಾವುಕರಾಗಿ ಅಮ್ಮನನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ಪ್ರಿಯಾಂಕ ತಾಯಿ ಬರುವಾಗ ಕೊಬ್ಬರಿ ಮಿಠಾಯಿ ತಂದಿದ್ದರು. ಪ್ರಿಯಾಂಕ ಮತ್ತ ಸುಕನ್ಯರನ್ನು ಬೆಡ್‍ರೂಮಿನಲ್ಲಿ ಸ್ವೀಟ್ ಬೌಲ್ ನೊಂದಿಗೆ ಎಲ್ಲ ಸದಸ್ಯರು ಕಿಚನ್ ಬಳಿ ತೆರಳಿದರು. ಪ್ರಿಯಾಂಕ ಬರೋದಕ್ಕೂ ಮುನ್ನವೇ ಚಂದನ್ ಆಚಾರ್ಯ ಮಿಠಾಯಿ ತಿನ್ನಲು ಆರಂಭಿಸಿದರು.

    ತಾಯಿ ಮನೆಯಿಂದ ಹೊರಹೋದ ಬಳಿಕ ಕಿಚನ್ ಬಳಿ ಬಂದ ಪ್ರಿಯಾಂಕಾ, ಕೊಬ್ಬರಿ ಮಿಠಾಯಿ ನಮ್ಮ ಆಂಟಿ ಮಾಡಿದ್ದು ಅಂತಾ ಅಮ್ಮ ಹೇಳಿದರು. ನಮ್ಮ ಆಂಟಿ ಪುಷ್ಪಾ ಶಿಕ್ಷಕಿ ಆಗಿದ್ದಾರೆ ಎಂದ ಕೂಡಲೇ ಮಿಠಾಯಿ ತಿನ್ನುತ್ತಿದ್ದ ವಾಸುಕಿ ವೈಭವ್ ಥ್ಯಾಂಕ್ಯೂ ಪುಷ್ಮಾ ಮಿಸ್ ಅಂತಾ ಧನ್ಯವಾದ ತಿಳಿಸಿದರು. ಹಾಗೆಯೇ ಉಳಿದ ಎಲ್ಲ ಸದಸ್ಯರು ರುಚಿ ರುಚಿಯಾದ ಕೊಬ್ಬರಿ ಮಿಠಾಯಿ ಮಾಡಿ ಕಳುಹಿಸಿದ ಪುಷ್ಪಾರಿಗೆ ಧನ್ಯವಾದ ತಿಳಿಸಿದರು.