Tag: Knowledgebase

  • ತುಮ್ಮನಹಳ್ಳಿ ಮಕ್ಕಳಿಗೆ ಜ್ಞಾನದೀವಿಗೆ ಟ್ಯಾಬ್ ವಿತರಿಸಿದ ವಕೀಲೆ

    ತುಮ್ಮನಹಳ್ಳಿ ಮಕ್ಕಳಿಗೆ ಜ್ಞಾನದೀವಿಗೆ ಟ್ಯಾಬ್ ವಿತರಿಸಿದ ವಕೀಲೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಆರಂಭಿಸಲಾಗಿರುವ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಉಚಿತ ಟ್ಯಾಬ್ ವಿತರಿಸಲಾಯಿತು.

    ತುಮ್ಮನಹಳ್ಳಿ ಶಾಲೆಯ 36 ವಿದ್ಯಾರ್ಥಿಗಳಿಗೆ 18 ಟ್ಯಾಬ್‍ಗಳನ್ನ ವಿತರಿಸಲಾಯಿತು. ಶಾಲೆಯಲ್ಲಿ ವ್ಯಾಸಂಗ ಮಾಡಿ ಸದ್ಯ ಮಾನ್ಯ ಉಚ್ಚನ್ಯಾಯಾಲಯದಲ್ಲಿ ಸರ್ಕಾರಿ ವಕೀಲರಾದ ವಾಣಿ ಹರೀಶ್ ಗೌಡ ರವರು ಈ ಉಚಿತ ಟ್ಯಾಬ್‍ಗಳನ್ನ ಕೊಡುಗೆ ನೀಡಿದ್ದಾರೆ. ಸ್ವತಃ ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನ ಸದ್ಭಳಕೆ ಮಾಡಿಕೊಳ್ಳುವಂತೆ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಹಾಗೂ ಟ್ಯಾಬ್ ದೇಣಿಗೆ ನೀಡಿದ ವಾಣಿ ಹರೀಶ್ ಗೌಡರವರಿಗೆ ಗ್ರಾಮಸ್ಥರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  • ಜ್ಞಾನದೀವಿಗೆ ಉಚಿತ ಟ್ಯಾಬ್ ವಿತರಿಸಿದ ಸಚಿವ ಸುಧಾಕರ್

    ಜ್ಞಾನದೀವಿಗೆ ಉಚಿತ ಟ್ಯಾಬ್ ವಿತರಿಸಿದ ಸಚಿವ ಸುಧಾಕರ್

    – ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಣೆ

    ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ಮಾಡುತ್ತಿರುವ ಅಂಗವಾಗಿ ಇಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಸುಧಾಕರ್ ಟ್ಯಾಬ್ ವಿತರಣೆ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಇಂದು ಸಚಿವ ಸುಧಾಕರ್ ಸಾಂಕೇತಿಕವಾಗಿ ಟ್ಯಾಬ್ ವಿತರಿಸಿದರು. ಇಂದು ಬಿಬಿ ರಸ್ತೆಯ ಪ್ರೌಢಶಾಲೆಯ 201 ಮಂದಿ ವಿದ್ಯಾರ್ಥಿಗಳಿಗೆ 102 ಟ್ಯಾಬ್ ವಿತರಿಸಲಾಯಿತು.

    ಸಚಿವ ಸುಧಾಕರ್ ಪಬ್ಲಿಕ್ ಟಿವಿ ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಿದ್ದು, ಇಡೀ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ತಮ್ಮ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಟ್ಯಾಬ್ ವಿತರಣೆ ಮಾಡುವುದಾಗಿ ತಿಳಿಸಿದರು. ಟ್ಯಾಬ್ ವಿತರಿಸಿ ಮಾತನಾಡಿದ ಅವರು, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್ ಆರ್ ರಂಗನಾಥ್ ಅವರ ಸಮಾಜಮುಖಿ ಕಾರ್ಯವನ್ನ ಕೊಂಡಾಡಿದರು. ಟ್ಯಾಬ್ ಪಡೆದ ವಿದ್ಯಾರ್ಥಿಗಳು, ಸಚಿವ ಸುಧಾಕರ್ ಹಾಗೂ ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.

  • 56 ಮಂದಿ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ಟ್ಯಾಬ್ ವಿತರಣೆ

    56 ಮಂದಿ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ಟ್ಯಾಬ್ ವಿತರಣೆ

    – ಸಾಫ್ಟ್‍ವೇರ್ ಎಂಜಿನಿಯರ್ ರವಿಕುಮಾರ್ ರಿಂದ ಕೊಡುಗೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮೇಳೆಕೋಟೆ ಸರ್ಕಾರಿ ಪ್ರೌಢಶಾಲೆಯ 10ನೇ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ, ರೋಟರಿ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು.

    ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ರವಿಕುಮಾರ್ ಪಬ್ಲಿಕ್ ಟಿವಿ ಸಮಾಜಮುಖಿಕಾರ್ಯ ಮೆಚ್ಚಿ ಟ್ಯಾಬ್‍ಗಳನ್ನ ಕೊಡುಗೆ ನೀಡಿದ್ದಾರೆ. ರವಿಕುಮಾರ್ ಅವರ ಅನುಪಸ್ಥಿತಿಯಲ್ಲಿ ನಿಮ್ಮ ಪಬ್ಲಿಕ್ ಟಿವಿ ತಂಡ ಶಾಲಾ ಮಕ್ಕಳಿಗೆ ಇಂದು ಉಚಿತ ಟ್ಯಾಬ್ ವಿತರಿಸಿದೆ.

    ಟ್ಯಾಬ್ ಪಡೆದುಕೊಂಡ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು ಪಬ್ಲಿಕ್ ಟಿವಿ ಹಾಗೂ ಸಹೃದಯಿ ದಾನಿಗಳಾದ ರವಿಕುಮಾರ್ ರವರಿಗ ಧನ್ಯವಾದಗಳನ್ನು ಅರ್ಪಿಸಿದರು. ಈ ಹಿಂದೆ ರವಿಕುಮಾರ್ ರವರು ಹಣಬೆ ಸರ್ಕಾರಿ ಶಾಲೆಯ ಮಕ್ಕಳಿಗೂ ಸಹ ತಮ್ಮ ತಂದೆ ವ್ಯಾಸಂಗ ಮಾಡಿದ ಶಾಲೆ ಎಂಬ ನೆನಪಿನಾರ್ಥಕವಾಗಿ ಫ್ರೀ ಟ್ಯಾಬ್ ವಿತರಿಸಿದ್ದರು.