Tag: knife

  • ದ್ವೇಷ ಮರೆತು ಮತ್ತೆ ಸ್ನೇಹಿತರಾಗುವುದಾಗಿ ನಂಬಿಸಿ ವ್ಯಕ್ತಿಯ ಬರ್ಬರ ಹತ್ಯೆ

    ದ್ವೇಷ ಮರೆತು ಮತ್ತೆ ಸ್ನೇಹಿತರಾಗುವುದಾಗಿ ನಂಬಿಸಿ ವ್ಯಕ್ತಿಯ ಬರ್ಬರ ಹತ್ಯೆ

    ನವದೆಹಲಿ: ಮತ್ತೆ ಗೆಳೆಯರಾಗುವುದಾಗಿ ಹೇಳಿ ಮದ್ಯಪಾನ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವನನ್ನು ಕರೆದೊಯ್ದು ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಪದೇ ಪದೇ ಇರಿದು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದ್ದು, ಹತ್ಯೆಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಆಶಿಶ್ (22) ಹತ್ಯೆಯಾದ ಯುವಕ. ವಿಕಾಸ್ ಮತ್ತು ವಂಶು ಎಂಬ ಯುವಕರು ಈ ಕೊಲೆಯನ್ನು ಮಾಡಿದ್ದು, ಇವರು ಆಶಿಶ್‌ನೊಂದಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿದ್ದರು. ಅಲ್ಲದೇ ಜೂನ್ 24ರಂದು ದೆಹಲಿಯ ಕಂಟೋನ್ಮೆಂಟ್‌ನಲ್ಲಿರುವ ತಮ್ಮ ಮನೆಗೆ ಬಂದು ಆಶಿಶ್‌ನೊಂದಿಗೆ ಮತ್ತೆ ಸ್ನೇಹಿತರಾಗುವುದಾಗಿ (Friends) ಹೇಳಿದ್ದಾರೆ. ಬಳಿಕ ಬಾರ್‌ಗೆ (Bar) ಹೋಗೋಣ. ಅಲ್ಲಿ ಬಿಲ್ ನಾವೇ ಕೊಡುತ್ತೇವೆ ಎಂದು ಹೇಳಿದ್ದರು ಎಂದು ಮೃತ ಆಶಿಶ್ ತಂದೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭೀಮ್ ಆರ್ಮಿ ಮುಖ್ಯಸ್ಥನ ಮೇಲೆ ದಾಳಿ ಮಾಡಿದ್ದ ನಾಲ್ವರ ಬಂಧನ

    CRIME

    ಮತ್ತೆ ಸ್ನೇಹಿತರಾಗಲು ಬಯಸಿದ್ದನ್ನು ಗಮನಿಸಿದ ಆಶಿಶ್ ತಂದೆ ಅನುಮಾನಗೊಂಡು ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಮೂವರೂ ಸುಮಾರು ಅರ್ಧಗಂಟೆಗಳ ಕಾಲ ಪ್ರಯಾಣಿಸಿದ ಬಳಿಕ ವಿಕಾಸ್ ಆಶಿಶ್ ಜೊತೆ ಜಗಳ ಮಾಡಿದ್ದಾನೆ. ಇವರಿಬ್ಬರ ಜಗಳಕ್ಕೆ ವಂಶು ಕೂಡಾ ಸೇರಿಕೊಂಡು ಇದ್ದಕ್ಕಿದ್ದಂತೆ ಆಶಿಶ್‌ಗೆ ಚಾಕುವಿನಿಂದ (Knife) ಇರಿದಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಹೊರರಸ್ತೆಯಲ್ಲಿ ಎಮ್ಮೆಯ ತಲೆ ಪತ್ತೆ- ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ

    ಚಾಕುವಿನಿಂದ ಇರಿದ ಬಳಿಕ ವಿಕಾಸ್ ಮತ್ತು ವಂಶು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ವಿಡಿಯೋದಲ್ಲಿ ವಿಕಾಸ್ ಹಾಗೂ ವಂಶು ಆಶಿಶ್‌ನ ಬೆನ್ನಿಗೆ ಹಲವು ಬಾರಿ ಇರಿದಿದ್ದು, ಬಳಿಕ ರಸ್ತೆಯಲ್ಲಿ ಆತನನ್ನು ಥಳಿಸಿರುವುದು ಸೆರೆಯಾಗಿದೆ. ಘಟನೆಯಿಂದ ಭೀಕರ ಗಾಯಗೊಂಡಿದ್ದ ಆಶಿಶ್‌ನನ್ನು ಆತನ ತಂದೆ ಏಮ್ಸ್ (AIIMS) ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದಾರೆ. ಈ ವೇಳೆ ಸಾರ್ವಜನಿಕರು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಬ್ಲಾಸ್ಟ್ ಕೇಸ್‌ – ರೊಬೊಟ್‌ ಬಳಸಿ‌ ಭಾರತದಲ್ಲಿ ದಾಳಿಗೆ ಮುಂದಾಗಿದ್ದ ಐಸಿಸ್

    ಈ ಹಿನ್ನೆಲೆ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಧಾವಿಸಿದ್ದು, ಬಳಿಕ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಆಶಿಶ್ ಮೃತಪಟ್ಟಿದ್ದು, ಆತನ ತಂದೆಯ ಹೇಳಿಕೆಯನ್ನು ತೆಗೆದುಕೊಂಡು ಅದೇ ದಿನ ಸಂಜೆ ವಿಕಾಸ್ ಮತ್ತು ವಂಶುವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ಮಹಿಳೆ ಜೊತೆ ಕಂಡಕ್ಟರ್ ಸೆಕ್ಸ್- ವೀಡಿಯೋ ವೈರಲ್

    ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಆಶಿಶ್‌ನನ್ನು ಕೊಲೆ ಮಾಡಲು ಒಂದು ದಿನ ಮೊದಲೇ ಯೋಜನೆ ಹಾಕಿಕೊಂಡಿದ್ದೆವು ಎಂದು ಒಪ್ಪಿಕೊಂಡಿದ್ದು, ಆತನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುವ ಸಲುವಾಗಿ ಮತ್ತೆ ಸ್ನೇಹಿತರಾಗುವ ನಾಟಕವಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿ ಹುಡ್ಗನನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಬದುಕಿದ್ದಾಗಲೇ ಮಗಳ ಅಂತ್ಯಸಂಸ್ಕಾರ ಮಾಡಿದ ತಂದೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತನ್ನದೇ ಕತ್ತು ಸೀಳಿ, ಚಾಕು, ಗನ್ ಹಿಡ್ಕೊಂಡು ದೆಹಲಿ ಬೀದಿಯಲ್ಲಿ ಓಡಾಡಿದ ವ್ಯಕ್ತಿ – ಜನ ಚೆಲ್ಲಾಪಿಲ್ಲಿ

    ತನ್ನದೇ ಕತ್ತು ಸೀಳಿ, ಚಾಕು, ಗನ್ ಹಿಡ್ಕೊಂಡು ದೆಹಲಿ ಬೀದಿಯಲ್ಲಿ ಓಡಾಡಿದ ವ್ಯಕ್ತಿ – ಜನ ಚೆಲ್ಲಾಪಿಲ್ಲಿ

    ನವದೆಹಲಿ: ವ್ಯಕ್ತಿಯೊಬ್ಬ (Man) ತನ್ನ ಕತ್ತು ಸೀಳಿಕೊಂಡು, ಕೈಯಲ್ಲಿ ಚಾಕು (Knife) ಹಾಗೂ ಗನ್ (Gun) ಅನ್ನು ಹಿಡಿದುಕೊಂಡು, ರಾಷ್ಟ್ರ ರಾಜಧಾನಿಯ ಬೀದಿಯಲ್ಲಿ ಓಡಾಡಿರುವ ಘಟನೆ ನಡೆದಿದೆ. ವ್ಯಕ್ತಿಯ ವಿಚಿತ್ರ ವರ್ತನೆಯನ್ನು ನೋಡಿ ಜನರು ಭೀತಿಯಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.

    ದೆಹಲಿಯ (Delhi) ನಾಥು ಚೌಕ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಯಲ್ಲಿ ದೃಶ್ಯಗಳು ಸೆರೆಯಾಗಿದೆ. ವ್ಯಕ್ತಿಯನ್ನು ಕ್ರಿಶನ್ ಶೇರ್ವಾಲ್ ಎಂದು ಗುರುತಿಸಲಾಗಿದೆ. ಆತ ತನ್ನ ಗಂಟಲನ್ನು ಸೀಳಿ, ರಕ್ತ ಸ್ರಾವವಾಗುತ್ತಿದ್ದರೂ ಜನನಿಬಿಡ ಪ್ರದೇಶದಲ್ಲಿ ಓಡಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಕಂಡು, ಹೆದರಿ ಅಲ್ಲಿಂದ ಓಡಿದ್ದಾರೆ.

    ಈ ಬಗ್ಗೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ, ಸ್ಥಳೀಯರ ನೆರವಿನಿಂದ ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಶೇರ್ವಾಲ್ ತನ್ನನ್ನು ಹಿಡಿದಿದ್ದ ಪೊಲೀಸ್ ಕೈಗೆ ಚಾಕುವಿನಿಂದ ಇರಿದು, ಗಾಯಗೊಳಿಸಿದ್ದಾನೆ. ಮಾತ್ರವಲ್ಲದೇ ಅವರ ಪಿಸ್ತೂಲ್ ಅನ್ನು ಕಸಿದುಕೊಂಡು, ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಕೋರ್ಟ್‌ನತ್ತ ತೆರಳಿದ ಪಾಕ್ ಮಾಜಿ ಪ್ರಧಾನಿ – ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು

    ಕೊನೆಗೆ ಶೇರ್ವಾಲ್‌ನನ್ನು ಪೊಲೀಸರು ಹರಸಾಹಸಪಟ್ಟು ಬಂಧಿಸಿದ್ದಾರೆ. ಆತ ತನ್ನ ಪತ್ನಿಯಿಂದ ಬೇರ್ಪಟ್ಟಿದ್ದು, ಖಿನ್ನತೆಗೆ ಒಳಗಾಗಿ ಈ ರೀತಿ ವಿಚಿತ್ರವಾಗಿ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ತನ್ನ ಕತ್ತನ್ನು ಸೀಳಿಕೊಂಡಿದ್ದ ಶೇರ್ವಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಇದೀಗ ವ್ಯಕ್ತಿ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 394 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 397 (ದರೋಡೆ ಅಥವಾ ಡಕಾಯಿತಿ, ಸಾವು ಅಥವಾ ಘೋರ ಗಾಯವನ್ನು ಉಂಟುಮಾಡುವ ಪ್ರಯತ್ನ), 186 (ಸಾರ್ವಜನಿಕ ಸೇವಕನಿಗೆ ಅಡ್ಡಿಪಡಿಸುವುದು), 353 (ಅಪರಾಧ ಅಥವಾ ಕ್ರಿಮಿನಲ್ ಬಳಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾರಸ್ವಾಮಿ ಕಿಡಿ

  • ರಿಸೆಪ್ಷನ್‍ಗೂ ಮುನ್ನ ನವದಂಪತಿ ಶವವಾಗಿ ಪತ್ತೆ

    ರಿಸೆಪ್ಷನ್‍ಗೂ ಮುನ್ನ ನವದಂಪತಿ ಶವವಾಗಿ ಪತ್ತೆ

    ರಾಯ್‍ಪುರ್: ಆರತಕ್ಷತೆಗೂ ಮುನ್ನವೇ ನವದಂಪತಿಗಳು (couple) ಶವವಾಗಿ ಪತ್ತೆಯಾದ ಘಟನೆ ರಾಯ್‍ಪುರ್‍ನ, ತ್ರಿಕ್ರಪಾರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಿಜ್‍ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದೇಹದ ಮೇಲೆ ಬಲವಾದ ಇರಿತದ ಗಾಯಗಳಾಗಿದ್ದು, ಇಬ್ಬರ ನಡುವೆ ಜಗಳವಾಗಿ ಪತಿ ಚಾಕುವಿನಿಂದ  ಇರಿದು ಕೊಲೆಗೈದಿದ್ದಾನೆ (Murder). ನಂತರ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಪ್ರಣಾಳಿಕೆ ರಚನಾ ಕಾರ್ಯ ಚುರುಕು; ಜನರಿಂದ ಸಲಹೆ ಸಂಗ್ರಹಕ್ಕೆ ಚಾಲನೆ

    ಅಸ್ಲಾಂ (24) ಹಾಗೂ ಕಹ್ಕಶಾ ಬಾನೊ (22) ಭಾನುವಾರವಷ್ಟೇ ವಿವಾಹವಾಗಿದ್ದರು. ಮಂಗಳವಾರ ರಾತ್ರಿ ಆರತಕ್ಷತೆ ನಡೆಯಬೇಕಿತ್ತು. ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದಾಗ ವಧುವಿನ ಕಿರುಚಾಟದ ಧ್ವನಿ ಕೇಳಿ ವರನ ತಾಯಿ ಅಲ್ಲಿಗೆ ಹೋಗಿದ್ದಾರೆ. ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಕುಟುಂಬದ ಸದಸ್ಯರು ಕರೆದರೂ ಪ್ರತಿಕ್ರಿಯೆ ಬರದಿದ್ದಾಗ, ಕಿಟಕಿಯಿಂದ ನೋಡಿದ್ದಾರೆ. ಆಗ ಇಬ್ಬರೂ ಪ್ರಜ್ಞಾಹೀನವಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ತಿಳಿಸಿದ್ದಾರೆ.

    ಬಾಗಿಲು ಒಡೆದು ಒಳಗೆ ತೆರಳಿದ ಪೊಲೀಸರು (Police) ಮೃತ ದೇಹಗಳನ್ನು ಶವ ಪರೀಕ್ಷೆಗೆ ಕಳುಹಿಸಿ, ಚಾಕುವನ್ನು (Knife)  ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್‌ನಿಂದ ಮೃತರಾದ ಕುಟುಂಬಕ್ಕೆ 446 ಕೋಟಿ ಪರಿಹಾರ ನೀಡಲಾಗಿದೆ: ಆರ್ ಅಶೋಕ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿ ಅನಾಮಿಕ ಯುವಕನ ಹುಚ್ಚಾಟ

    ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿ ಅನಾಮಿಕ ಯುವಕನ ಹುಚ್ಚಾಟ

    ಚಿಕ್ಕಬಳ್ಳಾಪುರ: ಬೈಕ್‌ನಲ್ಲಿ ಬಂದ ಅನಾಮಿಕ ಯುವಕನೊಬ್ಬ ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿ ಹುಚ್ಚಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದ ಬಜಾರ್ ರಸ್ತೆಯ ಬಲಮುರಿ ವೃತ್ತದಲ್ಲಿ ನಡೆದಿದೆ.

    ಸ್ಕೂಟಿಯಲ್ಲಿ ಜರ್ಸಿ ಧರಿಸಿ, ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಇದರಿಂದ ಸದ್ಯ ಚಿಕ್ಕಬಳ್ಳಾಪುರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ನಿಮ್ಮ ಬರ್ತ್‌ಡೇ ಇದ್ರೆ ಹೇಳಿ ಅದಕ್ಕೂ ಬರ್ತೀವಿ: ಡಿಕೆಶಿ

    crime

    ಘಟನೆಯಿಂದ ಸ್ವಾತಿ, ಮನೋಹರ್, ಸಂತೋಷ್, ರೆಹಮಾನ್, ಅರೀಫ್ ಹಾಗೂ ಮುನಿರೆಡ್ಡಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಮಣಿಪಾಲದ ಹಿರಿಯ ಚೇತನ, ಉದಯವಾಣಿ ಸಂಸ್ಥಾಪಕ ಮೋಹನ್‌ ದಾಸ್‌ ಪೈ ನಿಧನ

    ಯುವಕ 8ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಅವರಲ್ಲಿ 7ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಘಟನಾ ಸ್ಥಳಕ್ಕೆ ಹಾಗೂ ಖಾಸಗಿ ಆಸ್ಪತ್ರೆ ಎಸ್‌ಪಿ ಡಿ.ಎಲ್.ನಾಗೇಶ್ ಭೇಟಿ ನೀಡಿದ್ದು ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಚಿವ ಸುಧಾಕರ್ ಕಾರ್ಯಕ್ರಮದಲ್ಲಿ ಚಾಕು ಇಟ್ಕೊಂಡು ಓಡಾಡುತ್ತಿದ್ದ ಯುವಕ ಪೊಲೀಸರ ವಶಕ್ಕೆ

    ಸಚಿವ ಸುಧಾಕರ್ ಕಾರ್ಯಕ್ರಮದಲ್ಲಿ ಚಾಕು ಇಟ್ಕೊಂಡು ಓಡಾಡುತ್ತಿದ್ದ ಯುವಕ ಪೊಲೀಸರ ವಶಕ್ಕೆ

    ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಸುಧಾಕರ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅನುಮಾನಾಸ್ಪದವಾಗಿ ಚಾಕು ಇಟ್ಟುಕೊಂಡಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಉಜ್ವಲ ಭಾರತ ಉಜ್ವಲ ಭವಿಷ್ಯ ಎಂಬ ವಿದ್ಯುತ್ ಮಹೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಸಿ ಕಾರು ಹತ್ತಿ ಸಚಿವರು ತೆರಳುವ ವೇಳೆ ಕಾರಿನ ಸುತ್ತಮುತ್ತ ಇದ್ದ ಜನರನ್ನು ಪೊಲೀಸರು ಸರಿಸಿದ್ದಾರೆ.

    ಜನರನ್ನು ಪಕ್ಕಕ್ಕೆ ತಳ್ಳುವ ವೇಳೆ ಯುವಕನೊಬ್ಬನ ಸೊಂಟಕ್ಕೆ ಕೈ ಹಾಕಿದ ಪೊಲೀಸ್ ಪೇದೆಗೆ ಆತನ ಬಳಿ ಅನುಮಾನಸ್ಪದ ವಸ್ತು ಇರುವ ಅನುಮಾನ ಬಂದಿದೆ. ಕೂಡಲೇ ಆತನನ್ನು ಎಳೆದು, ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಯಾರು ಬೇಕಾದ್ರು ಮಾಡ್ತಾರೆ, ಹಿಂದೂ ಸಮಾಜ ಉಳಿಸೋದ್ಯಾರು- ಸರ್ಕಾರಕ್ಕೆ ಬಜರಂಗದಳ ಪ್ರಶ್ನೆ

    ಯುವಕನನ್ನು ವಶಕ್ಕೆ ಪಡೆದ ಪೊಲೀಸರು ಪೇರೇಸಂದ್ರರ ಹೊರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆತ ಅದೇ ಬೀಚಗಾನಹಳ್ಳಿ ಗ್ರಾಮದ ಯುವಕ ಗಂಗರಾಜು ಎಂಬುದು ತಿಳಿದುಬಂದಿದೆ. ಆತನಿಗೆ ಗ್ರಾಮದಲ್ಲಿನ ಕೆಲವರೊಂದಿಗೆ ನೀರಿನ ವಿಚಾರದಲ್ಲಿ ಗಲಾಟೆ ಆಗಿದ್ದು, ಅವರು ನನ್ನ ಮೇಲೆ ಯಾವಾಗಲಾದರೂ ದಾಳಿ ಮಾಡುವ ಭಯ, ಆತಂಕ, ಅನುಮಾನ ಇತ್ತು. ಹೀಗಾಗಿ ನನ್ನ ಸುರಕ್ಷತೆಯ ಹಿತದೃಷ್ಠಿಯಿಂದ ಚಾಕು ಇಟ್ಟುಕೊಂಡಿದ್ದೆ ಹೊರತು ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾನೆ.

    ನೀರಿನ ವಿಚಾರಕ್ಕೆ ಗಲಾಟೆ ನಡೆದಿರುವ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದ್ದು, ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಫಾಝಿಲ್ ಮನೆಗೆ ಸಿಎಂ ಹೋಗಿಲ್ಲ: ಸಿ.ಎಂ ಇಬ್ರಾಹಿಂ

    Live Tv
    [brid partner=56869869 player=32851 video=960834 autoplay=true]

  • ನೂಪುರ್ ಹತ್ಯೆಗೆ ಪಾಕ್‌ನಿಂದ ಅಕ್ರಮವಾಗಿ ಗಡಿ ದಾಟಿ ಬಂದಿದ್ದ ವ್ಯಕ್ತಿ – ಆತನ ಬಳಿ ಇತ್ತು 11 ಇಂಚಿನ ಚಾಕು

    ನೂಪುರ್ ಹತ್ಯೆಗೆ ಪಾಕ್‌ನಿಂದ ಅಕ್ರಮವಾಗಿ ಗಡಿ ದಾಟಿ ಬಂದಿದ್ದ ವ್ಯಕ್ತಿ – ಆತನ ಬಳಿ ಇತ್ತು 11 ಇಂಚಿನ ಚಾಕು

    ನವದೆಹಲಿ: ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಹತ್ಯೆ ನಡೆಸಲು ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಪ್ರಜೆಯನ್ನು ರಾಜಸ್ಥಾನದ ಶ್ರೀ ಗಂಗಾ ನಗರ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

    ಜುಲೈ 16ರಂದು ರಾತ್ರಿ 11 ಗಂಟೆಯ ವೇಳೆಗೆ ಗಡಿ ಬಳಿ ವ್ಯಕ್ತಿಯೊಬ್ಬನನ್ನು ಭದ್ರತಾ ಪಡೆ ಬಂಧಿಸಿತ್ತು. ಅನುಮಾನಾಸ್ಪದವಾಗಿ ಪತ್ತೆಯಾದ ವ್ಯಕ್ತಿಯನ್ನು ಅಧಿಕಾರಿಗಳು ತಕ್ಷಣವೇ ವಶಕ್ಕೆ ಪಡೆದು, ತಪಾಸಣೆ ನಡೆಸಿದ್ದರು. ವ್ಯಕ್ತಿಯ ಬ್ಯಾಗ್‌ನಲ್ಲಿ 11 ಇಂಚು ಉದ್ದದ ಚಾಕು, ಧಾರ್ಮಿಕ ಪುಸ್ತಕಗಳು, ಬಟ್ಟೆ, ಆಹಾರ ಹಾಗೂ ಮರಳು ಪತ್ತೆಯಾಗಿತ್ತು. ಆತನನ್ನು ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಂಡಿ ಬಹೌದ್ದೀನ್ ನಗರದ ರಿಜ್ವಾನ್ ಅಶ್ರಫ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಬಿಗ್ ರಿಲೀಫ್- ಆಗಸ್ಟ್ 10ರವರೆಗೂ ಬಂಧಿಸದಂತೆ ಸುಪ್ರೀಂ ಸೂಚನೆ

    ಪ್ರಾಥಮಿಕ ತನಿಖೆಯಲ್ಲಿ ಆತ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ಅವರನ್ನು ಕೊಲ್ಲಲು ಗಡಿ ದಾಟಿ ಬಂದಿರುವುದಾಗಿ ತಿಳಿಸಿದ್ದಾನೆ. ನೂಪುರ್ ಅವರನ್ನು ಕೊಲ್ಲುವುದಕ್ಕೂ ಮೊದಲು ಆತ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಲು ಯೋಜಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಫೋಟೋ ದುರ್ಬಳಕೆ ಮಾಡಿದ್ದ ಬಾಲಿವುಡ್ ನಿರ್ದೇಶಕ ಅವಿನಾಶ್ ಅರೆಸ್ಟ್

    ಹೆಚ್ಚಿನ ತನಿಖೆಗಾಗಿ ಆತನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆತನ ಬಗ್ಗೆ ಸಂಬಂಧಪಟ್ಟ ಗುಪ್ತಚರ ಸಂಸ್ಥೆಗಳಿಗೂ ತಿಳಿಸಿದ್ದೇವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಬಂಧಿತ ಪಾಕಿಸ್ತಾನಿ ವ್ಯಕ್ತಿಯನ್ನು ಇಂಟಲಿಜೆನ್ಸ್ ಬ್ಯೂರೋ(ಐಬಿ) ಹಾಗೂ ಇತರ ಗುಪ್ತಚರ ಸಂಸ್ಥೆಗಳ ಜಂಟಿ ತಂಡ ವಿಚಾರಣೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅಯೂಬ್‌ಖಾನ್ ಹತ್ಯೆ – ಎಫ್‌ಬಿಯಲ್ಲಿ ಬಿಲ್ಡಪ್ ಕೊಟ್ಟಿದ್ದ ಆರೋಪಿ ಮತೀನ್ ಖಾನ್ ಬಂಧನ

    ಅಯೂಬ್‌ಖಾನ್ ಹತ್ಯೆ – ಎಫ್‌ಬಿಯಲ್ಲಿ ಬಿಲ್ಡಪ್ ಕೊಟ್ಟಿದ್ದ ಆರೋಪಿ ಮತೀನ್ ಖಾನ್ ಬಂಧನ

    ಬೆಂಗಳೂರು: ಚಾಮರಾಜಪೇಟೆ ಮಾಜಿ ಕಾರ್ಪೊರೇಟರ್ ಪತಿ ಅಯೂಬ್ ಖಾನ್ ಹತ್ಯೆ ಆರೋಪಿ ಮತೀನ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

    ಇದೇ ತಿಂಗಳ ಜುಲೈ 13ರಂದು ಅಯೂಬ್ ಖಾನ್ ಹತ್ಯೆ ಮಾಡಲಾಗಿತ್ತು. 4 ದಿನಗಳಿಂದ ಮಂಡ್ಯ, ರಾಮನಗರ, ಕೋಲಾರ ಸೇರಿದಂತೆ ಹಲವು ಕಡೆಗಳಲ್ಲಿ ಸುತ್ತಾಡಿಕೊಂಡು ಆರೋಪಿ ಮತೀನ್ ಖಾನ್ ತಲೆಮರೆಸಿಕೊಂಡಿದ್ದ. ನಂತರ ನಾಜೀಮಾ ಖಾನ್ ಹಂತಕರ ತಲೆಗೆ 10 ಕೋಟಿ ಆಫರ್ ನೀಡಿರುವ ಬಗ್ಗೆ ವಿಡಿಯೋವೊಂದನ್ನು ಹರಿಬಿಟ್ಟಿದ್ದ. ಇದೀಗ ಕೆಂಗೇರಿ ಬಳಿ ಪೊಲೀಸರು ಮತೀನ್ ಖಾನ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಂತ್, ಪಾಂಡ್ಯ ಪರಾಕ್ರಮ ಭಾರತಕ್ಕೆ ಏಕದಿನ ಸರಣಿ – ಇಂಗ್ಲೆಂಡ್‍ಗೆ ತವರಿನಲ್ಲಿ ಮುಖಭಂಗ

    ಏನಿದು ಘಟನೆ?
    ಜುಲೈ 13 ರಂದು ಬೆಂಗಳೂರಿನ ಚಾಮರಾಜಪೇಟೆ ಬಳಿಯ ಟಿಪ್ಪು ನಗರದ ಮಾಜಿ ಕಾರ್ಪೋರೇಟರ್ ನಾಜಿಮಾ ಖಾನ್ ಪತಿ ಅಯೂಬ್ ಖಾನ್‌ನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಖುದ್ದು ಅಯೂಬ್ ಖಾನ್ ಅಣ್ಣನ ಮಗ ಮತೀನ್ ಖಾನ್ ಚಾಕು ಇರಿದಿದ್ದ. ನಡುರಸ್ತೆಯಲ್ಲೇ ಕುಸಿದುಬಿದ್ದಿದ್ದ ಆಯೂಬ್ ಖಾನ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರೂ ಬದುಕುಳಿಯಲಿಲ್ಲ. ಇದನ್ನೂ ಓದಿ: ಪರಿಹಾರದ ಹಣ ಪಡೆಯಲು ಜನರು ಉದ್ದೇಶಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ – ತಹಶೀಲ್ದಾರ್ ಪತ್ರ ತಂದ ಅನುಮಾನ

    ನಂತರ ಪತಿಯ ಹತ್ಯೆ ಖಂಡಿಸಿದ ಪತ್ನಿ ನಾಜೀಮಾ ಖಾನ್ ತನ್ನ ಪತಿ ಹಂತಕರ ತಲೆ ಕಡಿದವರಿಗೆ 10 ಕೋಟಿ ಕೊಡುವುದಾಗಿ ಘೋಷಿಸಿದ್ದರು. ಇದಕ್ಕೆ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಒಂದಷ್ಟು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದ ಮತೀನ್ ಖಾನ್ `ಹತ್ತಾರು ವರ್ಷಗಳಿಂದ ಮಸೀದಿಯನ್ನು ಅಭಿವೃದ್ದಿ ಮಾಡಿದ್ದೆ, ಅಧ್ಯಕ್ಷ ಸ್ಥಾನ ಕೊಡ್ತಿನಿ ಅಂದಿದ್ದ ಚಿಕ್ಕಪ್ಪ ಅಯೂಬ್ ಖಾನ್ ಕೊನೆ ಕ್ಷಣದಲ್ಲಿ ತನ್ನ ಮಗನನ್ನು ಅಧ್ಯಕ್ಷನಾಗಿ ಮಾಡಿದ್ದ. ಆಗಲೂ ನಾನು ಸುಮ್ಮನಿದ್ದೆ. ಆದರೆ ಅಯೂಬ್ ಖಾನ್‌ಗೆ ನಾನು ಏರಿಯಾದಲ್ಲಿರೋದು ಇಷ್ಟ ಇರಲಿಲ್ಲ. ಇದೇ ಕಾರಣಕ್ಕೆ ಗಲಾಟೆ ತೆಗೆದು ನನಗೆ ತೊಂದರೆ ಕೊಡ್ತಿದ್ದ. ಕೊಲೆಯಾದ ದಿನ ಕೂಡ ಅಯೂಬ್ ಖಾನ್ ಮತ್ತು ಮಗ ಇಬ್ಬರು ನನ್ನ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡೋಕೆ ಮುಂದಾದ್ರು. ಪ್ರಾಣ ರಕ್ಷಣೆ ವೇಳೆ ಚಾಕು ತಗುಲಿ ಅಯೂಬ್ ಖಾನ್ ಮೃತಪಟ್ಟರು. ಅಯೂಬ್ ಖಾನ್ ಹೆಂಡತಿ ನಾಜೀಮಾ, ನನ್ನ ತಲೆ ಕಡಿದು ತಂದವರಿಗೆ ಹತ್ತು ಕೋಟಿ ಕೊಡ್ತೀನಿ ಅಂತಾ ಸಾರ್ವಜನಿಕವಾಗಿ ಘೋಷಣೆ ಮಾಡಿದ್ದಾರೆ. ಆ 10 ಕೋಟಿನಾ, ಯಾರಿಗೆ ಕೊಡ್ತೀರಿ ಹೇಳಲಿ, ದರ್ಗಾದವರಿಗೆ, ನನ್ನ ಕುಟುಂಬದವರಿಗೆ ಕೊಡ್ತೀರಾ? ಒಂದು ಕೆಲಸ ಮಾಡಿ ಶಾಸಕ ಜಮೀರ್ ಅಹಮದ್ ಖಾನ್‌ಗೆ ಕೊಡಲಿ, ನಾನೇ ತಲೆ ಕಡಿದುಕೊಳ್ತೀನಿ’ ಎಂದು ಘೋಷಣೆ ಮಾಡಿದ್ದ.

    Live Tv
    [brid partner=56869869 player=32851 video=960834 autoplay=true]

  • ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ

    ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ

    ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಪ್ರೇಯಸಿಯನ್ನು ಚಾಕುವಿನಿಂದ ಇರಿದ ಪ್ರೇಮಿಯೊಬ್ಬ ಪೊಲೀಸರಿಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದಲ್ಲಿ ಮತ್ತೆ ನೆತ್ತರು ಹರಿದಿದ್ದು, ಪ್ರಿಯಕರ ವಿಜಯ್ ಕದಂ ತನ್ನ ಪ್ರೇಯಸಿ ಪದ್ಮಾಳನ್ನು ಚಾಕುವಿನಿಂದ ಇರಿದಿದ್ದಾನೆ. ಆದರೆ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಈ ನಡುವೆ ಉಪನಗರ ಠಾಣೆಗೆ ವಿಜಯ್ ತಾನೇ ಹೋಗಿ ಶರಣಾಗಿದ್ದಾನೆ.

    ನಡೆದಿದ್ದೇನು?
    ರಾಮಸೇನಾ ಸಂಘಟನೆ ಧಾರವಾಡ ಜಿಲ್ಲಾಧ್ಯಕ್ಷನಾಗಿ ವಿಜಯ್ ಕೆಲಸ ಮಾಡುತ್ತಿದ್ದ. ಪದ್ಮಾ ಮತ್ತು ವಿಜಯ್ ಇಬ್ಬರು ಪ್ರೀತಿಸುತ್ತಿದ್ದು ಕಳೆದ 7 ವರ್ಷಗಳಿಂದ ಇಬ್ಬರು ಸಂಸಾರ ನಡೆಸುತ್ತಿದ್ದರು. ಆದರೆ ಇಬ್ಬರ ಮಧ್ಯೆ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು. ಇದನ್ನೂ ಓದಿ:  ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು RSS, SDPIನಿಂದ ಸಾಧ್ಯವಿಲ್ಲ: ಪಿಣರಾಯಿ ವಿಜಯನ್ 

    ಈ ಹಿನ್ನೆಲೆ ವಿಜಯ್ ಜಗಳದ ವೀಡಿಯೋ ಸಹ ಮಾಡಿದ್ದು, ಇಬ್ಬರು ವಾದ-ಪ್ರತಿವಾದ ಮಾಡುತ್ತಿರುವುದು ಸೆರೆಯಾಗಿದೆ. ಈ ವೇಳೆ ಪದ್ಮಾ ಕೈ ನರ ಕಟ್ ಮಾಡಿಕೊಳ್ಳುವ ಧಮಕಿ ಹಾಕಿದ್ದು, ಜಗಳ ತಾರಕಕ್ಕೇರಿ ಅದೇ ಚಾಕುದಿಂದ ವಿಜಯ್ ಚುಚ್ಚಿದ್ದಾನೆ.

    ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಪದ್ಮಾಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಪೊಲೀಸರು ರವಾನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಲ್ಲುಜ್ಜದೇ ಕಿಸ್ ಮಾಡೋದನ್ನ ತಡೆದಿದ್ದಕ್ಕೆ ಹೆಂಡತಿಯನ್ನೇ ಕೊಂದ ಪತಿರಾಯ

    ಹಲ್ಲುಜ್ಜದೇ ಕಿಸ್ ಮಾಡೋದನ್ನ ತಡೆದಿದ್ದಕ್ಕೆ ಹೆಂಡತಿಯನ್ನೇ ಕೊಂದ ಪತಿರಾಯ

    ತಿರುವನಂತಪುರಂ: ಪ್ರತಿದಿನವೂ ಒಂದಿಲ್ಲೊಂದು ಕಾರಣಗಳಿಗೆ ಅನೇಕ ಕಡೆ ಹತ್ಯೆ ನಡೆಯುವುದನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನೇ ಹೊಡೆದು ಕೊಂದಿರುವ ಘಟನೆ ನಡೆದಿದೆ.

    ಹಲ್ಲುಜ್ಜದೇ ತಮ್ಮ ಪುಟ್ಟ ಮಗುವಿಗೆ ಮುತ್ತಿಡಲು ಬಂದ ಪತಿಯನ್ನು ತಡೆದಿದ್ದಕ್ಕೆ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ.

    CRIME

    ಅವಿನಾಶ್ ತಮ್ಮ ಎರಡೂವರೆ ವರ್ಷದ ಮಗುವಿಗೆ ಹಲ್ಲುಜ್ಜದೇ ಚುಂಬಿಸಲು ಮುಂದಾಗಿದ್ದಾನೆ. ಇದನ್ನು ಪತ್ನಿ ದೀಪಿಕಾ ವಿರೋಧಿಸಿದ್ದರಿಂದ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: 16 ವರ್ಷಗಳಿಂದ ಅಳಿಯನನ್ನೇ ಪ್ರೀತಿಸ್ತಿದ್ದ ಅತ್ತೆ- ಒಟ್ಟಿಗೆ ಇರಲು ಸಾಧ್ಯವಾಗದೇ ಇಬ್ಬರೂ ಆತ್ಮಹತ್ಯೆ

    CRIME 2

    ತಮ್ಮ ಮಗುವಿಗೆ ಪತಿ ಮುತ್ತಿಡುವುದನ್ನು ವಿರೋಧಿಸಿದ್ದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಇಬ್ಬರ ಮಾತು ಆಕ್ರೋಶಕ್ಕೆ ತಿರುಗಿದ್ದು, ಪತಿ ಅವಿನಾಶ್ ಚಾಕುವಿನಿಂದ ದೀಪಿಕಾ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯೆ ಚೀರಾಟ ಕೇಳಿದ ಸ್ಥಳೀಯರು ದೀಪಿಕಾಳ ರಕ್ಷಣೆಗೆ ಧಾವಿಸಿದ್ದಾರೆ. ಕೂಡಲೇ ಆಕೆಯನ್ನು ಪೆರಿಂತಲ್ಮನ್ನಾ ಬಳಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ತಾçವದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 3 ದಿನದ ಮಗುವನ್ನು ಆಸ್ಪತ್ರೆಯಿಂದ ಹೊತ್ತೊಯ್ದು ಕಚ್ಚಿ ಕೊಂದ ಬೀದಿನಾಯಿ

    ಸದ್ಯ ಪೊಲೀಸರು ಆರೋಪಿ ಅವಿನಾಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶ್ ಎರಡು ತಿಂಗಳ ಹಿಂದೆಯಷ್ಟೇ ಪಾಲಕ್ಕಾಡ್‌ಗೆ ಮರಳಿದ್ದರು.

    Live Tv

  • ತಂಗಿಯನ್ನ ಚುಡಾಯಿಸಿದ್ದಕ್ಕೆ ಯುವಕನಿಗೆ ಮನಬಂದಂತೆ ಚಾಕುವಿನಿಂದ ಇರಿದ ಅಣ್ಣಂದಿರು

    ತಂಗಿಯನ್ನ ಚುಡಾಯಿಸಿದ್ದಕ್ಕೆ ಯುವಕನಿಗೆ ಮನಬಂದಂತೆ ಚಾಕುವಿನಿಂದ ಇರಿದ ಅಣ್ಣಂದಿರು

    ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ನೆತ್ತರು ಹರಿದಿದೆ. ತಂಗಿಯನ್ನ ಚುಡಾಯಿಸಿದ ಕಾರಣಕ್ಕಾಗಿ ಯುವಕನಿಗೆ ಯುವತಿಯ ಅಣ್ಣಂದಿರಿಬ್ಬರು ಚಾಕುವಿನಿಂದ ಮನಬಂದಂತೆ ಇರಿದಿದ್ದಾರೆ.

    ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಚಂದ್ರಶೇಖರ್ ಎಂಬಾತನಿಗೆ ಗಂಭೀರವಾಗಿ ಗಾಯಗಳಾಗಿವೆ. ಇದನ್ನೂ ಓದಿ: BBMP 243 ವಾರ್ಡ್ ವಿಂಗಡಣೆಗೆ ಸರ್ಕಾರ ಗ್ರೀನ್ ಸಿಗ್ನಲ್ – 40ಕ್ಕೂ ಹೆಚ್ಚು ವಾರ್ಡ್‌ಗಳ ಸೇರ್ಪಡೆ

    CRIME

    ನಡೆದಿದ್ದೇನು?: ಇರಿತಕ್ಕೊಳಗಾದ ಚಂದ್ರಶೇಖರ್ ಅದೇ ನಗರದ ಕಿರಣ್ ಹಾಗೂ ಅಭಿ ಎನ್ನುವವರ ತಂಗಿಯನ್ನು ಚುಡಾಯಿಸಿದ್ದಾನೆ. ಈ ವಿಚಾರವಾಗಿ ಇಬ್ಬರು ಅಣ್ಣಂದಿರೂ ಚಂದ್ರಶೇಖರ್‌ಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ. ಎಷ್ಟು ಹೇಳಿದರೂ ಕೇಳದೇ ಇದ್ದರಿಂದ ಕೋಪಗೊಂಡ ಇಬ್ಬರು ಚಂದ್ರಶೇಖರ್‌ಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

    ತೀವ್ರ ಗಾಯಗೊಂಡಿರುವ ಚಂದ್ರುವನ್ನು ಕುಟುಂಬಸ್ಥರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿಸುತ್ತಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv