Tag: KMF Nandini

  • ರಾಷ್ಟ್ರ ರಾಜಧಾನಿಗೂ ಲಗ್ಗೆಯಿಟ್ಟ ʻನಂದಿನಿʼ – ನಿತ್ಯ 5 ಲಕ್ಷ ಲೀಟರ್‌ ಹಾಲು ಪೂರೈಕೆ ಗುರಿ!

    ರಾಷ್ಟ್ರ ರಾಜಧಾನಿಗೂ ಲಗ್ಗೆಯಿಟ್ಟ ʻನಂದಿನಿʼ – ನಿತ್ಯ 5 ಲಕ್ಷ ಲೀಟರ್‌ ಹಾಲು ಪೂರೈಕೆ ಗುರಿ!

    – ಆರಂಭಿಕ ಹಂತದಲ್ಲಿ ನಿತ್ಯ 2.5 ಲಕ್ಷ ಲೀ. ಹಾಲು ಪೂರೈಕೆ

    ನವದೆಹಲಿ: ರಾಷ್ಟ್ರ ರಾಜಧಾನಿಗೆ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯ (KMF) ನಂದಿನಿ ಹಾಲು ಲಗ್ಗೆಯಿಟ್ಟಿದೆ. ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ. ಮುಂದಿನ 6 ತಿಂಗಳ ಒಳಗೆ ಪ್ರತಿನಿತ್ಯ 5 ಲಕ್ಷ ಲೀಟರ್‌ ಹಾಲು (Nandini Milk) ಮಾರಾಟ ಮಾಡಲು ಕೆಎಂಎಫ್‌ ನಿರ್ಧರಿಸಿದೆ.

    ಹೌದು. ದೆಹಲಿಯಲ್ಲಿ ಕೆಎಂಎಫ್ ಮತ್ತು ಮಂಡ್ಯ ಹಾಲು ಒಕ್ಕೂಟಗಳು ಜಂಟಿಯಾಗಿ ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಸಿಎಂ ಸಿದ್ದರಾಮಯ್ಯ (Siddaramaiah) ಅವರು ನಂದಿನಿ ಹಾಲಿನ ಉತ್ಪನ್ನಗಳನ್ನು ದೆಹಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಅಲ್ಲದೇ ದೆಹಲಿಯ ನಿವಾಸಿಗಳಿಂದ ನಂದಿನಿ ಉತ್ಪನ್ನಗಳಿಗೆ ಅತ್ಯುತ್ತಮ ಸ್ಪಂದನೆ ದೊರೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಮುಂದುವರಿದು ಮಾತನಾಡಿದ ಸಿಎಂ, ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇಡೀ ದೇಶದಲ್ಲಿ ರೈತರ ಉಪಕಸುಬು ಪಶುಸಂಗೋಪನೆ. ಗುಜರಾತ್ ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಪ್ರಾರಂಭ ಮಾಡಿದರು. ಹಿಂದೆ ನಾನೂ ಕೂಡ ಪಶುಸಂಗೋಪನಾ ಸಚಿವನಾಗಿದ್ದೆ, ಒಂದು ವರ್ಷ ಕಾಲ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷನೂ ಆಗಿದ್ದೆ. ಪಶುಸಂಗೋಪನಾ ಸಚಿವನಾಗಿದ್ದಾಗಲೇ ಹಾಲು ಉತ್ಪಾದಕರಿಗೆ ಶೋಷಣೆಯಾಗುತ್ತಿದ್ದುದ್ದನ್ನು ಮನಗಂಡು ಶಾಶ್ವತ ಮಾರುಕಟ್ಟೆ ಕಲ್ಪಿಸಲು ಹಾಲು ಉತ್ಪಾದಕರ ಸಂಘಗಳನ್ನು ರಚಿಸಿದ್ದೆ ಎಂದು ಹೇಳಿದರು.

    ರಾಜ್ಯದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀ.ಗೆ 32 ರೂ. ಗಳಿಗೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂ. ಇದ್ದ ಪ್ರೋತ್ಸಾಹಧನ, ನಂತರ 3 ರೂ. ಆಯಿತು. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂ.ಗಳಿಗೆ ಹೆಚ್ಚಿಸಿದ್ದೆ. ಪ್ರೋತ್ಸಾಹಧನಕ್ಕಾಗಿ ಪ್ರತಿ ದಿನ 5 ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಶ್ಲಾಘಿಸಿದರು.

    ರಾಜ್ಯದಲ್ಲಿ ಒಟ್ಟು 16 ಹಾಲು ಒಕ್ಕೂಟಗಳಿದ್ದು, ಅಂದಾಜು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೆ ನಿತ್ಯ ತಲಾ 2.5 ಲಕ್ಷ ಲೀ.ಟರ್ ಹಾಲು ಪೂರೈಕೆಯಾಗುತ್ತಿದೆ. ಇದೀಗ ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್ ಹಾಲು ನವದೆಹಲಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ. ಇನ್ನು ಆರು ತಿಂಗಳೊಳಗೆ 5 ಲಕ್ಷ ಲೀಟರ್‌ಗೆ ಏರಿಸುವ ಗುರಿ ನಮ್ಮದಾಗಿದೆ ಎಂದು ಸಿಎಂ ತಿಳಿಸಿದರು.

    ದೆಹಲಿಯಲ್ಲಿ ಯಾವ – ಯಾವ ಪ್ರಮಾಣದ ಹಾಲು ಲಭ್ಯ
    * ಹಸುವಿನ ಹಾಲು: ಪ್ರಮುಖ ಉತ್ಪನ್ನವು 100 ಮಿಲಿ (10 ರೂ.), 500 ಮಿಲಿ (28 ರೂ.), 1 ಲೀಟರ್ (56 ರೂ.), ಮತ್ತು 6 ಲೀಟರ್ (336 ರೂ.) ಮಾದರಿಗಳು ಲಭ್ಯವಿದೆ.
    * ಪೂರ್ಣ ಕೆನೆ ಹಾಲು (ಸಮೃದ್ಧಿ): ಇದರ ಬೆಲೆ 500 ಮಿಲಿ (33 ರೂ.), 1 ಲೀಟರ್ (67 ರೂ.) ಹಾಗೂ 6 ಲೀಟರ್ (402) ಮಾದರಿಗಳಿವೆ.
    * ಟೋನ್ಡ್ ಹಾಲು (ಶುಭಂ): 500 ಮಿಲಿ (30 ರೂ. ) ಮತ್ತು 1 ಲೀಟರ್ (61 ರೂ.) ಮಾದರಿ.
    * ತಿಳಿ ಹಾಲು (ಸಂಪೂರ್ಣ): 500 ಮಿಲಿ (27 ರೂ.) ಮತ್ತು 1 ಲೀಟರ್ (55 ರೂ.) ಪ್ರಮಾಣದ ಹಾಲಿನ ಪ್ಯಾಕೆಟ್‌ ಲಭ್ಯವಿರಲಿದೆ. ಇದರೊಂದಿಗೆ ಹಾಲಿನ ಇತರ ಉತ್ಪನ್ನಗಳು ಸಿಗಲಿವೆ.

  • ಶುಭಂ ಗೋಲ್ಡ್ ನಂದಿನಿ ಹಾಲಿನ ದರ 2 ರೂ. ಅಲ್ಲ, ಲೀಟರ್‌ಗೆ 4 ರೂ. ಹೆಚ್ಚಳ!

    ಶುಭಂ ಗೋಲ್ಡ್ ನಂದಿನಿ ಹಾಲಿನ ದರ 2 ರೂ. ಅಲ್ಲ, ಲೀಟರ್‌ಗೆ 4 ರೂ. ಹೆಚ್ಚಳ!

    – ಹೇಳುವುದೊಂದು ಮಾಡುವುದು ಇನ್ನೋಂದು ಎಂದು ಜನರ ಆಕ್ರೋಶ

    ರಾಯಚೂರು: ನಂದಿನಿ ಹಾಲಿನ ದರ ಹೆಚ್ಚಳ (Nandini Milk Price Hike) ಮಾಡಿರುವ ಕೆಎಂಎಫ್ (KMF) ಗ್ರಾಹಕರಿಗೆ ಬೆಲೆ ಏರಿಕೆ ಜೊತೆಗೆ ಮತ್ತೊಂದು ಶಾಕ್ ನೀಡಿದೆ. ತಾನೇ ಹೊರಡಿಸಿದ್ದ ಪರಿಷ್ಕೃತ ದರ ಪಟ್ಟಿಯನ್ನ ಕೈಬಿಟ್ಟು ಹಾಲಿನ ಪ್ಯಾಕೆಟ್ ಮೇಲೆ ಹೆಚ್ಚುವರಿ ಬೆಲೆ ಮುದ್ರಿಸಿ ಮಾರಾಟಕ್ಕೆ ಮುಂದಾಗಿದ್ದು, ಇದರ ವಿರುದ್ಧ ರಾಯಚೂರಿನಲ್ಲಿ ಗ್ರಾಹಕರು ಸಿಡಿದೆದ್ದಿದ್ದಾರೆ. ಸರ್ಕಾರದ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಹಾಲು ಮಾರಾಟ – ಗ್ರಾಹಕರು ದೂರು ನೀಡಿದ್ರೆ ಲೈಸನ್ಸ್ ರದ್ದು?

    ಇತ್ತೀಚೆಗಷ್ಟೇ ಕೆಎಂಎಫ್‌ ನಂದಿನ ಹಾಲಿನ (KMF Nandini Milk) ದರ ಹೆಚ್ಚಿಸಿ ಪರಿಷ್ಕೃತ ದರದ ಪಟ್ಟಿಯನ್ನ ಬಿಡುಗಡೆ ಮಾಡಿತ್ತು. ಪ್ರತಿ ಲೀಟರ್‌ ಹಾಗೂ ಅರ್ಥ ಲೀಟರ್‌ ಹಾಲಿನ ಪ್ಯಾಕೆಟ್‌ನಲ್ಲಿ 50 ಎಂಎಲ್‌ ಹಾಲಿನ ಪ್ರಮಾಣ ಹೆಚ್ಚಿಸಿ 2 ರೂ. ಹೆಚ್ಚಳ ಮಾಡಿರುವುದಾಗಿ ಘೋಷಣೆ ಮಾಡಿತ್ತು. ಆದ್ರೆ ಶುಭಂ ಗೋಲ್ಡ್ ಹಾಲಿನ ದರವನ್ನು ತಾನೇ ಘೋಷಿಸಿದಂತೆ 2 ರೂ. ಹೆಚ್ಚಳ ಮಾಡುವ ಬದಲು ಅರ್ಧ ಲೀಟರ್‌ಗೆ 3 ರೂ. ಹಾಗೂ 1 ಲೀಟರ್‌ಗೆ 4 ರೂ. ಹೆಚ್ಚಳ ಮಾಡಿದೆ. ಈಗ ಬಂದಿರುವ ಹೊಸ ಪ್ಯಾಕೆಟ್‌ನಲ್ಲಿ ದುಬಾರಿ ಬೆಲೆ ಮುದ್ರಿತವಾಗಿದೆ. ಈ ಮೊದಲು ಅರ್ಧ ಲೀಟರ್‌ಗೆ 26 ರೂ. ಇದ್ದ ಶುಭಂ ಗೋಲ್ಡ್ ಹಾಲು 28 ರೂ. ಬದಲು 29 ರೂ. ಆಗಿದೆ. 1 ಲೀಟರ್‌ಗೆ 49 ರೂ. ಇದ್ದ ಹಾಲು 51 ರೂ. ಬದಲು 53 ರೂಪಾಯಿ ಆಗಿದೆ. ಹೀಗಾಗಿ ಸರ್ಕಾರ ಹೇಳುವುದೊಂದು ಮಾಡಿರುವುದು ಒಂದು ಅಂತ ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ.

    ಕೆಎಂಎಫ್‌ ಹೆಚ್ಚಳ ಮಾಡಿದ್ದ ದರ ಯಾವುದಕ್ಕೆ ಎಷ್ಟು?
    ಟೋನ್ಡ್‌ ಹಾಲು
    550 ಎಂಎಲ್‌ – 24 ರೂ.
    1050 ಎಂಎಲ್‌ – 44 ರೂ.

    ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು
    550 ಎಂಎಲ್‌ – 24 ರೂ.
    1050 ಎಂಎಲ್‌ – 45 ರೂ.

    ಹೋಮೋಜಿನೈಸ್ಡ್‌ ಹಸುವಿನ ಹಾಲು
    550 ಎಂಎಲ್‌ – 26 ರೂ.
    1050 ಎಂಎಲ್‌ – 48 ರೂ.

    ಸ್ಪೆಷಲ್‌ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 50 ರೂ.

    ಶುಭಂ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 50 ರೂ.

    ಸಮೃದ್ಧಿ ಹಾಲು
    550 ಎಂಎಲ್‌ – 28 ರೂ.
    1050 ಎಂಎಲ್‌ – 53 ರೂ.

    ಹೋಮೋಜಿನೈಸ್ಡ್‌ ಶುಭಂ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 51 ರೂ.

    ಸತೃಪ್ತಿ ಹಾಲು
    550 ಎಂಎಲ್‌ – 30 ರೂ.
    1050 ಎಂಎಲ್‌ – 57 ರೂ.

    ಶುಭಂ ಗೋಲ್ಡ್‌ ಹಾಲು
    550 ಎಂಎಲ್‌ – 28 ರೂ.
    1050 ಎಂಎಲ್‌ – 51 ರೂ.

    ಡಬಲ್‌ ಟೋನ್ಡ್‌ ಹಾಲು
    550 ಎಂಎಲ್‌ – 23 ರೂ.
    1050 ಎಂಎಲ್‌ – 43 ರೂ.

  • ಗ್ರಾಹಕರಿಗೆ ಕೆಎಂಎಫ್‌ ಶಾಕ್‌ – ನಂದಿನಿ ಹಾಲಿನ ದರ ಹೆಚ್ಚಳ – ಯಾವುದಕ್ಕೆ ಎಷ್ಟು?

    ಗ್ರಾಹಕರಿಗೆ ಕೆಎಂಎಫ್‌ ಶಾಕ್‌ – ನಂದಿನಿ ಹಾಲಿನ ದರ ಹೆಚ್ಚಳ – ಯಾವುದಕ್ಕೆ ಎಷ್ಟು?

    ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (KMF) ನಂದಿನಿ ಹಾಲಿನ ದರ ಹೆಚ್ಚಿಸಿದೆ (Nandini Milk Price Hike). ಪ್ರತಿ ಲೀಟರ್‌ ಹಾಲಿನ ದರ 2 ರೂ. ಹೆಚ್ಚಿಸಿದೆ ಎಂದು ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್‌ ಪ್ಯಾಕೆಟ್‌ ಹಾಲಿನ ದರವನ್ನ 2 ರೂ. ಹಾಗೂ ಅರ್ಧ ಲೀಟರ್‌ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. ಆದ್ರೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್‌ (1 ಲೀಟರ್)‌ ಪ್ಯಾಕೆಟ್‌ ಹಾಲು ಇನ್ಮುಂದೆ 1,050 ಎಂಎಲ್‌ ಹಾಗೂ ಅರ್ಧ ಲೀಟರ್‌ ಪ್ಯಾಕೆಟ್‌ ಹಾಲು 550 ಎಂಎಲ್‌ ಹೆಚ್ಚುವರಿ ಸಿಗಲಿದೆ. ಪರಿಷ್ಕೃತ ದರ ನಾಳೆಯಿಂದ (ಜೂ.26) ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

    ಯಾವುದಕ್ಕೆ ಎಷ್ಟು ದರ ಹೆಚ್ಚಳ?
    ಟೋನ್ಡ್‌ ಹಾಲು
    550 ಎಂಎಲ್‌ – 24 ರೂ.
    1050 ಎಂಎಲ್‌ – 44 ರೂ.

    ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು
    550 ಎಂಎಲ್‌ – 24 ರೂ.
    1050 ಎಂಎಲ್‌ – 45 ರೂ.

    ಹೋಮೋಜಿನೈಸ್ಡ್‌ ಹಸುವಿನ ಹಾಲು
    550 ಎಂಎಲ್‌ – 26 ರೂ.
    1050 ಎಂಎಲ್‌ – 48 ರೂ.

    ಸ್ಪೆಷಲ್‌ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 50 ರೂ.

    ಶುಭಂ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 50 ರೂ.

    ಸಮೃದ್ಧಿ ಹಾಲು
    550 ಎಂಎಲ್‌ – 28 ರೂ.
    1050 ಎಂಎಲ್‌ – 53 ರೂ.

    ಹೋಮೋಜಿನೈಸ್ಡ್‌ ಶುಭಂ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 51 ರೂ.

    ಸತೃಪ್ತಿ ಹಾಲು
    550 ಎಂಎಲ್‌ – 30 ರೂ.
    1050 ಎಂಎಲ್‌ – 57 ರೂ.

    ಶುಭಂ ಗೋಲ್ಡ್‌ ಹಾಲು
    550 ಎಂಎಲ್‌ – 28 ರೂ.
    1050 ಎಂಎಲ್‌ – 51 ರೂ.

    ಡಬಲ್‌ ಟೋನ್ಡ್‌ ಹಾಲು
    550 ಎಂಎಲ್‌ – 23 ರೂ.
    1050 ಎಂಎಲ್‌ – 43 ರೂ.