Tag: KM Shivalingegowda

  • ಶಾಸಕ ಶಿವಲಿಂಗೇಗೌಡ ಈಗ ಸಿಎಂ

    ಶಾಸಕ ಶಿವಲಿಂಗೇಗೌಡ ಈಗ ಸಿಎಂ

    ಅಂದುಕೊಂಡಂತೆ ಆಗಿದ್ದರೆ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ (KM Shivalingegowda) ಮಂತ್ರಿಯಾಗಬೇಕಿತ್ತು. ಅದಕ್ಕಾಗಿ ಅವರು ಏನೆಲ್ಲ ಕಸರತ್ತೂ ಮಾಡಿದ್ದರು. ಆದರೂ, ಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಇದೀಗ ಶಿವಲಿಂಗೇಗೌಡ ಅವರು ಮಂತ್ರಿಯಲ್ಲ, ಮುಖ್ಯಮಂತ್ರಿಯಾಗಿ ಜನರ ಮುಂದೆ ನಿಲ್ಲುತ್ತಿದ್ದಾರೆ.

    ಮಂತ್ರಿಯಾಗುವುದಕ್ಕೆ ಪರದಾಡುತ್ತಿದ್ದವರು, ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುವುದು ಸಹಜ. ಹೌದು, ಶಾಸಕ ಶಿವಲಿಂಗೇಗೌಡರು ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸದ್ದಿಲ್ಲದೇ ಅವರು ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ‘ನಮ್ ಶಾಲೆ’ (Nam School) ಹೆಸರಿನ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

     

    ಇಂದು ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಗೀಜಿಹಳ್ಳಿಯಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರು ಭಾಗಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಮುಖ್ಯಮಂತ್ರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಕಳೆದ ಹದಿನೈದು ದಿನಗಳಿಂದ ಗೀಜಿಹಳ್ಳಿಯಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಮುಖ್ಯಮಂತ್ರಿ ಪಾತ್ರದ ಅಭಿನಯದ ಜೊತೆಗೆ ಡಬ್ಬಿಂಗ್ ಮಾಡಲು ಶಿವಲಿಂಗೇಗೌಡರು ಒಪ್ಪಿಕೊಂಡಿದ್ದಾರಂತೆ. ಕೃಷ್ಣ ಬೆಳ್ತಂಗಡಿ (Krishna Belthangadi)ನಿರ್ದೇಶನದ, ರವಿ ಆಚಾರ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ – ಶಿವಲಿಂಗೇಗೌಡರ ಮತ್ತೊಂದು ಆಡಿಯೋ ವೈರಲ್

    ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ – ಶಿವಲಿಂಗೇಗೌಡರ ಮತ್ತೊಂದು ಆಡಿಯೋ ವೈರಲ್

    ಹಾಸನ: ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ (KM Shivalinge Gowda) ಮಾತನಾಡಿರುವ ಮತ್ತೊಂದು ಆಡಿಯೋ ವೈರಲ್ ಆಗಿದೆ. ಅದರಲ್ಲಿ ತಾವು ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

    ಜೆಡಿಎಸ್ (JDS) ತೊರೆದು ಕಾಂಗ್ರೆಸ್ (Congress) ಸೇರುವ ಬಗ್ಗೆ ಶಾಸಕ ಶಿವಲಿಂಗೇಗೌಡ ಮಾತನಾಡಿದ್ದ ಆಡಿಯೋ ಗುರುವಾರವಷ್ಟೇ ವೈರಲ್ ಆಗಿತ್ತು. ಶಾಸಕ ಶಿವಲಿಂಗೇಗೌಡ ಅವರದ್ದು ಎನ್ನಲಾದ ಆಡಿಯೋದಲ್ಲಿ ,ನಾನು ಕಾಂಗ್ರೆಸ್ ಸೇರಿದ್ರೆ 50 ಸಾವಿರ ವೋಟ್ ಲೀಡ್‍ನಲ್ಲಿ ಗೆಲ್ತೀನಿ ಎಂದು ಹೇಳಿದ್ದರು. ಈ ಆಡಿಯೋ ಬೆನ್ನಲ್ಲೇ ಇದೀಗ ಐದು ಸೆಕೆಂಡ್ ಇರುವ ಮತ್ತೊಂದು ಆಡಿಯೋ ವೈರಲ್ ಆಗಿದೆ.

    ಆಡಿಯೋದಲ್ಲಿ ಏನಿದೆ?: ಇಬ್ಬರು ಹೀಗೆ ಕಿತ್ತಾಡಿದ್ರೆ ಮುಂದಿನ ಚುನಾವಣೆಯಲ್ಲಿ ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಬೇಡ. ಎರಡು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಪ್ಪದೆ ಹೋದರೇ ಪಕ್ಷೇತರನಾಗಿ ಸ್ಪರ್ಧಿಸುವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಂಗಲ್ ಹನುಮಂತಯ್ಯ ಜೀವನ ಚರಿತ್ರೆ ಗ್ರಂಥ ಈ ವರ್ಷ ಬಿಡುಗಡೆ: ಬೊಮ್ಮಾಯಿ

    ಕಾರ್ಯಕರ್ತರೊಂದಿಗೆ ಮಾತನಾಡಿರುವ ಶಿವಲಿಂಗೇಗೌಡ ಜೆಡಿಎಸ್‍ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆ ನಡುವೆ ಮತ್ತೊಂದು ಆಡಿಯೋ ವೈರಲ್ ಆಗಿದೆ. ಇದನ್ನೂ ಓದಿ: Aero India 2023: ತುರ್ತು ಆರೋಗ್ಯ ಸೇವೆಗಾಗಿ 30 ವೈದ್ಯಕೀಯ ತಂಡಗಳ ನಿಯೋಜನೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಪಕ್ಷ ತೊರೆಯುವುದು ಗ್ಯಾರಂಟಿ – ಸ್ಫೋಟಕ ಆಡಿಯೋ ವೈರಲ್

    ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಪಕ್ಷ ತೊರೆಯುವುದು ಗ್ಯಾರಂಟಿ – ಸ್ಫೋಟಕ ಆಡಿಯೋ ವೈರಲ್

    ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಹಾಸನ ಜಿಲ್ಲೆಯಲ್ಲಿ ಪಕ್ಷಾಂತರ ಪಾಲಿಟಿಕ್ಸ್‌ ಮಾತು ಕೇಳಿಬರುತ್ತಿದೆ. ಅರಸೀಕೆರೆಯ ಜೆಡಿಎಸ್‌ (JDS) ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalingegowda) ಅವರು ಪಕ್ಷ ತೊರೆಯುವುದು ಗ್ಯಾರಂಟಿ ಎನ್ನಲಾಗುತ್ತಿದೆ.

    ಗ್ರಾಮ ಪಂಚಾಯಿತಿ ಸದಸ್ಯೆ ಪತಿ ವಾಸು ಎಂಬವರಿಗೆ ಹಣಕ್ಕಾಗಿ ಧಮ್ಕಿ ಹಾಕಿರುವ ಆಡಿಯೋ ವೈರಲ್‌ ಆಗಿದೆ. ಇದರಲ್ಲಿ ಶಿವಲಿಂಗೇಗೌಡರು ಜೆಡಿಎಸ್‌ ತೊರೆಯುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್

    ಜಕ್ಕನಹಳ್ಳಿ ಗ್ರಾಪಂ ಸದಸ್ಯೆ ಸೌಮ್ಯ ಪತಿ ವಾಸು ಜೊತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿರುವ ಆಡಿಯೋದಲ್ಲಿ, “ನಾನು ಕೊಟ್ಟಿದ್ದ 50 ಸಾವಿರ ಹಣವನ್ನು ವಾಪಸ್‌ ಕೊಡು. ನೀನು ಆ ಕಡೆ (ಜೆಡಿಎಸ್‌) ಇದ್ದೀಯಾ. ನನ್ನ ಪರವಾಗಿ ಇಲ್ಲ. ಹೀಗಾಗಿ ಹಣ ತಂದು ಕೊಡು” ಎಂದು ಧಮ್ಕಿ ಹಾಕಿದ್ದಾರೆ.

    ಅದಕ್ಕೆ ವಾಸು, “ನಾನೇನಾದ್ರೂ ನಿನ್‌ ಹತ್ರ ಹಣ ಕೇಳಿದ್ನಾ ಅಣ್ಣ. ಈಗ ನನ್‌ ಹತ್ರ ಇಲ್ಲ. ಏನ್‌ ಮಾಡ್ಕೋತೀಯಾ ನೀನು? ಜೈಲಿಗೆ ಕಳಿಸ್ತೀಯಾ, ಕೊಲೆ ಮಾಡಿಸ್ತೀಯಾ? ಮಾಡಿಸ್ಕೊ. ಈಗ ನನ್ನ ಬಳಿ ಹಣ ಇಲ್ಲ” ಎಂದು ಎದುರುತ್ತರ ನೀಡಿದ್ದಾರೆ. ಇದಕ್ಕೆ ಶಿವಲಿಂಗೇಗೌಡರು ಮಾತನಾಡಿ, “ನೀನು ದೊಡ್ಡ ಮನುಷ್ಯ ಅಂತಾ ಜೈಲಿಗೆ ಕಳಿಸ್ತಾರಾ? ಅದೆಲ್ಲ ನನಗೆ ಗೊತ್ತಿಲ್ಲ, ನನ್‌ ಹಣ ನನಗೆ ತಂದು ಕೊಡು” ಎಂದು ಕೇಳಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ

    ನಾನು ಯಾವ ಪಕ್ಷದಲ್ಲಿ ಇದ್ದರೂ ನೀನು ನನ್ನ ಜೊತೆ ಇರಬೇಕು ಅಂತಾ ವಾಸುಗೆ ಶಿವಲಿಂಗೇಗೌಡರು ದುಡ್ಡು ಕೊಟ್ಟಿದ್ದರು ಎನ್ನಲಾಗಿದೆ. ಈಗ ವಾಸು ಜೆಡಿಎಸ್‌ ಪರವೇ ಇದ್ದು, ಶಿವಲಿಂಗೇಗೌಡರು ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ವಾಸು ತನ್ನ ಪರ ಇಲ್ಲ ಎಂದು ಹಣ ವಾಪಸ್‌ ನೀಡುವಂತೆ ಕೇಳಿದ್ದಾರೆ. ಈ ಸಂಭಾಷಣೆಯ ಆಡಿಯೋ ವೈರಲ್‌ ಆಗಿದೆ.‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿ ನಾಯಕರ ಆರೋಪ: ಧರ್ಮಸ್ಥಳದಲ್ಲಿ ಆಣೆ ಮಾಡಲು ಹೊರಟ ಶಾಸಕ ಕೆ.ಎಂ.ಶಿವಲಿಂಗೇಗೌಡ

    ಬಿಜೆಪಿ ನಾಯಕರ ಆರೋಪ: ಧರ್ಮಸ್ಥಳದಲ್ಲಿ ಆಣೆ ಮಾಡಲು ಹೊರಟ ಶಾಸಕ ಕೆ.ಎಂ.ಶಿವಲಿಂಗೇಗೌಡ

    ಹಾಸನ: ಬಿಜೆಪಿ ನಾಯಕರು ತಮ್ಮ ಮೇಲೆ ಮಾಡಿರುವ ಆರೋಪ ನಿರಾದಾರ ಎಂದು ದೇವರ ಮೇಲೆ ಆಣೆ ಮಾಡಲು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ತಮ್ಮ ಅಪಾರ ಬೆಂಬಲಿಗರೊಂದಿಗೆ ಇಂದು ಧರ್ಮಸ್ಥಳಕ್ಕೆ ತೆರಳಿದರು.

    ಆ.8ರಂದು ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ವಿರುದ್ಧ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಎಂಎಲ್‍ಸಿ ರವಿಕುಮಾರ್, ಶಿವಲಿಂಗೇಗೌಡರನ್ನು ರಾಗಿ ಕಳ್ಳ, ಸಿಮೆಂಟ್ ಕಳ್ಳ, ಕಬ್ಬಿಣ ಕಳ್ಳ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಆ.22 ರಂದು ಕೆ.ಎ.ಶಿವಲಿಂಗೇಗೌಡರು ಅರಸೀಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಾನು ಒಂದು ಕೆಜಿ ರಾಗಿ ಕಳ್ಳತನ ಮಾಡಿಲ್ಲ. ಮಾಡಿದ್ದರೆ ದಾಖಲೆ ಸಮೇತ ಸಾಬೀತು ಮಾಡಲಿ. ಇಲ್ಲ ಧರ್ಮಸ್ಥಳಕ್ಕೆ ಬನ್ನಿ ದೇವರ ಮೇಲೆ ಆಣೆ ಮಾಡೋಣಾ ಎಂದು ಸವಾಲು ಹಾಕಿದ್ದರು. ಇದನ್ನೂ ಓದಿ: ಆಕಾಶ ಏರ್ ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ – ಸಂಸ್ಥೆಯಿಂದ ಕ್ಷಮೆ

    ಬಿಜೆಪಿ ನಾಯಕರು ಆಣೆ ಮಾಡಲು ಬಾರದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅರಸೀಕೆರೆಯ ಮೈಸೂರು ರಸ್ತೆಯಿಂದ ನೂರಾರು ವಾಹನದಲ್ಲಿ ತಮ್ಮ ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳ ಜೊತೆ ಕೆ.ಎಂ.ಶಿವಲಿಂಗೇಗೌಡ ಧರ್ಮಸ್ಥಳಕ್ಕೆ ತೆರಳಿದರು. ಶಾಸಕರ ತಂಡ ಅರಸೀಕೆರೆ, ಬಾಣಾವರ, ಬೇಲೂರು, ಮೂಡಿಗೆರೆ ಮಾರ್ಗವಾಗಿ ಧರ್ಮಸ್ಥಳ ತಲುಪಲಿದ್ದು, ತಮ್ಮ ಮೇಲೆ ಬಿಜೆಪಿ ನಾಯಕರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ದೇವರ ಮೇಲೆ ಆಣೆ ಮಾಡಿ ವಾಪಾಸ್ಸಾಗಲಿದ್ದಾರೆ. ಇದನ್ನೂ ಓದಿ: ಮಾತಾಡ್ಲಿಲ್ಲ ಅಂತ ಕಿಟಕಿಯಿಂದ ಮಲಗಿದ್ದವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ

    Live Tv
    [brid partner=56869869 player=32851 video=960834 autoplay=true]