Tag: kk singh

  • ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ

    ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ

    -ಪೊಲೀಸ್ ರಕ್ಷಣೆ ಬೇಕೆಂದು ರಿಯಾ ಮನವಿ

    ಮುಂಬೈ: ನಟಿ ರಿಯಾ ಚಕ್ರವರ್ತಿ ನನ್ನ ಮಗನಿಗೆ ದೀರ್ಘ ಸಮಯದಿಂದ ಹಂತ ಹಂತವಾಗಿ ವಿಷ ನೀಡಿ ಕೊಂದಳು ಎಂದು ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಕೆ.ಕೆ.ಸಿಂಗ್ ಆರೋಪಿಸಿದ್ದಾರೆ. ನನ್ನ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.

    ಇಂದು ರಿಯಾ ತಂದೆ ಇಂದ್ರಜಿತ್ ಮುಖರ್ಜಿ ಅವರನ್ನ ವಿಚಾಚರಣೆಗೆ ಒಳಪಡಿಸಿದ್ದಾರೆ. ಇಂದು ಬೆಳಗ್ಗೆ ರಿಯಾ ಮನೆಗೆ ಬಂದ ಪೊಲೀಸರು ನೋಟಿಸ್ ನೀಡಿದ್ದರು. ಮಧ್ಯಾಹ್ನ ಇಂದ್ರಜಿತ್ ಚಕ್ರವರ್ತಿ ಪೊಲೀಸರ ಭದ್ರೆತೆಯಲ್ಲಿ ಮನೆಯಿಂದ ಕರೆದುಕೊಂಡು ಹೋಗಲಾಗಿದೆ. ಇದಕ್ಕೂ ಮೊದಲು ಇನ್‍ಸ್ಟಾಗ್ರಾಂ ಪೋಸ್ಟ್ ಮಾಡಿದ್ದ ರಿಯಾ ತಮಗೆ ಪೊಲೀಸ್ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಸುಶಾಂತ್ ಮನೆ ರಿಯಾ ತೊರೆಯುವ ಮುನ್ನ 8 ಹಾರ್ಡ್ ಡಿಸ್ಕ್ ಡೇಟಾ ಡಿಲೀಟ್

    ಇನ್‍ಸ್ಟಾಗ್ರಾಂನಲ್ಲಿ ಮನೆಯ ಮುಂದೆ ಪೊಲೀಸರು ಮತ್ತು ಮಾಧ್ಯಮ ಸಿಬ್ಬಂದಿ ನಿಂತಿರುವ ವಿಡಿಯೋ ಪೋಸ್ಟ್ ಮಾಡಿರುವ ರಿಯಾ, ನನ್ನ ಮತ್ತು ನಮ್ಮ ಕುಟುಂಬದವರ ಜೀವಕ್ಕೆ ಅಪಾಯವಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಆದ್ರೆ ಯಾರೂ ನಮಗೆ ಸಹಾಯ ಮಾಡುತ್ತಿಲ್ಲ. ತನಿಖೆ ನಡೆಸುತ್ತಿರೋ ಏಜೆನ್ಸಿಯಿಂದಲೂ ಸಹಾಯ ಕೇಳಿದ್ರೂ ಯಾವ ಪ್ರಯೋಜನ ಆಗಿಲ್ಲ. ಪ್ರಕರಣದ ತನಿಖೆ ನಡೆಸ್ತಿರೋ ಏಜೆನ್ಸಿಗೆ ಸಹಕರಿಸಲು ನಮಗೆ ಸೂಕ್ತ ಭದ್ರತೆ ನೀಡಬೇಕೆಂದು ಮುಂಬೈ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ

    https://www.instagram.com/p/CEYg61Nnwoe/?utm_source=ig_embed

    ಡಿಆರ್‍ಡಿಓ ಗೆಸ್ಟ್ ಹೌಸ್ ನಲ್ಲಿ ರಿಯಾ ಸೋದರ ಶೌವಿಕ್ ಮತ್ತು ತಂದೆ ಇಂದ್ರಜಿತ್ ಅವರನ್ನ ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಇತ್ತ ಸಿದ್ಧಾರ್ಥ್ ಪಿಠಾಣಿ ವಿಚಾರಣೆ ಐದನೇ ದಿನವೂ ಮುಂದುವರಿದಿದೆ. ಇಂದು ಸಿಬಿಐ ಅಧಿಕಾರಿಗಳು ಓರ್ವ ಮಹಿಳೆಯನ್ನ ಕರೆಸಿದ್ದಾರೆ. ವಿಚಾರಣೆಗೆ ಹಾಜರಾಗಿರುವ ಮಹಿಳೆ ಯಾರು? ಪ್ರಕರಣಕ್ಕೆ ಮಹಿಳೆಗೆ ಏನು ಸಂಬಂಧ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

  • ಪಂಚ ಸವಾಲುಗಳಿಗೆ ಉತ್ತರ ಬೇಕೆಂದ ಸುಶಾಂತ್ ತಂದೆ

    ಪಂಚ ಸವಾಲುಗಳಿಗೆ ಉತ್ತರ ಬೇಕೆಂದ ಸುಶಾಂತ್ ತಂದೆ

    -ಖಾತೆಯಲ್ಲಿಯ 15 ಕೋಟಿ ಹೋಗಿದ್ದು ಯಾರ ಖಾತೆಗೆ?

    ಮುಂಬೈ/ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನದಿಂದ ದಿನ ಜಟಿಲವಾಗುತ್ತಾ ಹೋಗ್ತಿದೆ. ಸುಶಾಂತ್ ತಂದೆ ಕೆಕೆ ಸಿಂಗ್ ನಟಿ ರಿಯಾ ಚಕ್ರವರ್ತಿ ಮತ್ತು ಇಂದ್ರಜಿತ್ ಚಕ್ರವರ್ತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಕೆ ಸಿಂಗ್ ದೂರಿನಲ್ಲಿ ತಮಗೆ ಐದು ಪ್ರಶ್ನೆಗಳಿಗೆ ಉತ್ತರ ಬೇಕಂದಿದ್ದಾರೆ.

    ಪಂಚ ಸವಾಲುಗಳು:
    1. 2019ಕ್ಕಿಂತ ಮೊದಲು ನನ್ನ ಮಗನಿಗೆ ಯಾವುದೇ ಸಮಸ್ಯೆ ಇರಲಿಲ್ಲ. ರಿಯಾಳ ಸಂಪರ್ಕಕ್ಕೆ ಬಂದ ಮೇಲೆ ಏನಾಯ್ತು?
    2. ಒಂದು ವೇಳೆ ಮಾನಸಿಕ ಚಿಕಿತ್ಸೆಗೆ ಒಳಗಾಗಿದ್ರೆ ಈ ಬಗ್ಗೆ ನಮಗೆ ಮಾಹಿತಿ ಏಕೆ ನೀಡಲಿಲ್ಲ?
    3. ಪುತ್ರನಿಗೆ ಚಿಕಿತ್ಸೆ ನೀಡಿರುವ ವೈದ್ಯರ ರಿಯಾಳ ಮೋಸದಾಟದಲ್ಲಿ ಭಾಗಿಯಾಗಿದ್ದಾರೆ. ಚಿಕಿತ್ಸೆ ವೇಳೆ ಸುಶಾಂತ್ ಯಾವ ಔಷಧಿ ನೀಡಲಾಗಿತ್ತು?
    4. ನನ್ನ ಮಗನ ಬ್ಯಾಂಕ್ ಖಾತೆಯಲ್ಲಿ 17 ಕೋಟಿ ರೂ. ಹಣವಿತ್ತು. ಕಳೆದ ವರ್ಷ ಅಪರಿಚಿತರ ಖಾತೆಗಳಿಗೆ 15 ಕೋಟಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಎಲ್ಲ ಖಾತೆಗಳ ಬಗ್ಗೆ ತನಿಖೆ ನಡೆಯಬೇಕು.
    5. ರಿಯಾಳ ಸಂಪರ್ಕಕ್ಕೆ ಬಂದ ಕೂಡಲೇ ಸುಶಾಂತ್ ಗೆ ಬರುತ್ತಿದ್ದ ಸಿನಿಮಾ ಆಫರ್ ಗಳು ಕಡಿಮೆ ಆಗಿದ್ದೇಕೆ?

    ಸುಶಾಂತ್ ಗೆ ಬರುತ್ತಿದ್ದ ಸಿನಿಮಾಗಳಿಗೆ ರಿಯಾ ಷರತ್ತು ವಿಧಿಸುತ್ತಿದ್ದಳು. ಸುಶಾಂತ್ ಸಿನಿಮಾದಲ್ಲಿ ತನ್ನನ್ನೇ ನಾಯಕಿಯನ್ನಾಗಿ ಕಾಸ್ಟ್ ಮಾಡಬೇಕು ಎಂದು ನಿರ್ದೇಶಕರ ಮುಂದೆ ಕಂಡೀಷನ್ ಹಾಕುತ್ತಿದ್ದಾರೆ. ಸುಶಾಂತ್ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಎಲ್ಲ ಆಪ್ತರನ್ನು ರಿಯಾ ಬದಲಿಸಿದ್ದಳು. ತನಗೆ ಬೇಕಾದವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಳು. ಇತ್ತೀಚೆಗೆ ಸುಶಾಂತ್ ಫೋನ್ ನಂಬರ್ ಸಹ ರಿಯಾ ಬದಲಿಸಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಓವರ್ ಡೋಸ್ ಮಾತ್ರೆ ಕೊಟ್ಟಿದ್ದಾಳೆ: ಸುಶಾಂತ್ ತಂದೆ ಗಂಭೀರ ಆರೋಪ

    ಸುಶಾಂತ್ ನನಗೆ ಫೋನ್ ಮಾಡಿದ್ದಾಗ ನನ್ನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸಲಾಗ್ತಿದೆ ಎಂದು ಹೇಳಿಕೊಂಡಿದ್ದನು. ಕೆಲ ದಿನಗಳ ಬಳಿಕ ಸುಶಾಂತ್ ದೆಹಲಿಯಲ್ಲಿರು ಸೋದರಿಯ ಮನೆಗ ಹೋಗಿದ್ದನು. ಮೂರು ದಿನಗಳ ಬಳಿಕ ಪದೇ ಪದೇ ಫೋನ್ ಮಾಡಿದ್ದ ರಿಯಾ ಮಗನನ್ನು ಕರೆಸಿಕೊಂಡಿದ್ದಳು ಎಂದು ಕೆ.ಕೆ.ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಸುಶಾಂತ್ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸ್ತಿದ್ದ ರಿಯಾ