Tag: KJF

  • ಕೆಜಿಎಫ್ ಅಧೀರನ ಭೇಟಿಯಾದ ಕಂಗನಾ ರಣಾವತ್

    ಕೆಜಿಎಫ್ ಅಧೀರನ ಭೇಟಿಯಾದ ಕಂಗನಾ ರಣಾವತ್

    – ಭೇಟಿ ವೇಳೆ ನಡೆದ ಮಾತುಕತೆಯೇನು?

    ಹೈದರಾಬಾದ್: ಸದ್ಯ ಸುದ್ದಿಯಲ್ಲಿರುವ  ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಕೆಜಿಎಫ್ ಅಧೀರ ಸಂಜಯ್ ದತ್ ಅವರನ್ನು ಭೇಟಿಯಾಗಿದ್ದಾರೆ.

    ಹೌದು. ಇಂದು ಬೆಳಗ್ಗೆ ಭೇಟಿಯಾಗಿರುವ ಕಂಗನಾ ಸಂಜಯ್ ದತ್ ಅವರನ್ನು ನೋಡಿ ಅಚ್ಚರಿಯೊಂದಿಗೆ ಖುಷಿಯಾಗಿದ್ದಾರೆ. ಅಲ್ಲದೆ ಅವರ ಆರೋಗ್ಯ ಇನ್ನಷ್ಟು ವೃದ್ಧಿಸಲು ಪ್ರಾರ್ಥೊಸೋಣ ಎಂದು ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಕಂಗನಾ, ಹೈದರಾಬಾದ್‍ನ ಹೋಟೆಲಿನಲ್ಲಿ ತಂಗಿರುವ ಸುದ್ದಿ ತಿಳಿದು ನಾನು ಇಂದು ಬೆಳಗ್ಗೆ ಸಂಜು ಅವರನ್ನು ನೋಡಲು ತೆರಳಿದೆ. ಈ ವೇಳೆ ಅವರ ಆರೋಗ್ಯವನ್ನು ವಿಚಾರಿಸಿದೆ. ಅವರು ಇನ್ನಷ್ಟು ಸುಂದರ ಹಾಗೂ ಆರೋಗ್ಯವಂತರಾಗಿರುವುದನ್ನು ಕಂಡು ನಿಜಕ್ಕೂ ನನಗೆ ಅಚ್ಚರಿಯಾಯಿತು. ನಾವೆಲ್ಲರೂ ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ ಎಂದು ಬರೆದುಕೊಂಡಿದ್ದಾರೆ.

    ಆಗಸ್ಟ್ 8ರಂದು ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡು ನಟ ಸಂಜಯ್ ಅವರು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಇವರ ಕೊರೊನಾ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಬಂದಿತ್ತು. ಕೊರೊನಾ ಅಲ್ಲದ ಕಾರಣ ಅವರಿಗೆ ನಾನ್ ಕೋವಿಡ್ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

    ಆ ನಂತರ ನಟಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರ ಬಹಿರಂಗವಾಗಿತ್ತು. ಈ ಸಂಬಂಧ ಟ್ವೀಟ್ ಮಾಡಿದ್ದ ಅಧೀರ, ಸಿನಿಮಾದಿಂದ ಸಣ್ಣ ಬ್ರೇಕ್ ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ನನಗೆ ಚಿಕಿತ್ಸೆ ಮಾಡಿಸಿಕೊಳ್ಳಬೇಕಿದ್ದು, ಸ್ನೇಹಿತರು ಕುಟುಂಬಸ್ಥರು ನನ್ನ ಜೊತೆಗಿದ್ದಾರೆ. ಹೀಗಾಗಿ ನನ್ನ ಆತ್ಮೀಯರು ಏನೂ ಯೋಚನೆ ಮಾಡಬೇಡಿ. ಅಲ್ಲದೆ ವದಂತಿಗಳನ್ನು ಕೂಡ ನಂಬಬೇಡಿ. ನಿಮ್ಮೆಲ್ಲರ ಹಾರೈಕೆಯಿಂದ ನಾನು ಅತೀ ಶೀಘ್ರವೇ ಹುಷಾರಾಗಿ ನಿಮ್ಮ ಮುಂದೆ ಬರುತ್ತೇನೆ ಎಂದು ಬರೆದುಕೊಂಡಿದ್ದರು.

    ಕ್ಯಾನ್ಸರ್ ಚಿಕಿತ್ಸೆಯ ನಂತರ ಕೆಜಿಎಫ್-2ಗಾಗಿ ನಟ ಸಂಜಯ್ ದತ್ ಅವರು ತಯಾರಿ ಮಾಡಿಕೊಳ್ಳುತ್ತಿರುವ ಸಂದೇಶ ನೀಡಿದ್ದರು. ಸ್ಟೈಲಿಶ್ ಲುಕ್‍ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಂಜಯ್, ಮೂರು ಫೋಟೋಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಧೀರನಿಗಾಗಿ ತಯಾರಿ ಎಂದು ಬರೆದುಕೊಂಡಿದ್ದರು. ಈ ಮೂಲಕ ನವೆಂಬರ್ ನಲ್ಲಿ ಆರಂಭವಾಗಲಿರುವ ಕೆಜಿಎಫ್-2 ಅಧೀರನ ಶೂಟಿಂಗ್ ಸಿದ್ಧವಾಗಿದ್ದೇನೆ ಎಂಬ ಸಂದೇಶವನ್ನು ರವಾನೆ ಮಾಡಿದ್ದರು. ಈ ಸುದ್ದಿ ತಿಳಿದ ಅಧೀರನ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು.

  • ಗನ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ ದಂತ ವೈದ್ಯ

    ಗನ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ ದಂತ ವೈದ್ಯ

    ಕೋಲಾರ: ತಲೆಗೆ ಗನ್‍ನಿಂದ ಶೂಟ್ ಮಾಡಿಕೊಂಡು ಪ್ರಸಿದ್ಧ ದಂತ ವೈದ್ಯ ಆತ್ಮಹತ್ಯೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಸಲ್ಡಾನ್ ವೃತ್ತದಲ್ಲಿ ನಡೆದಿದೆ.

    ಕೆಜಿಎಫ್ ನಗರದ ಡಾ. ಸಲ್ಡಾನ್ (55) ಆತ್ಮಹತ್ಯೆಗೆ ಯತ್ನಿಸಿದ್ದ ದಂತ ವೈದ್ಯ. ಸಲ್ಡಾನ್ ಸೋಮವಾರ ಸಂಜೆ 7.30 ಗಂಟೆ ಸುಮಾರಿಗೆ ಸಲ್ಡಾನ್ ವೃತ್ತದಲ್ಲಿರುವ ಅವರ ಕ್ಲಿನಿಕ್‍ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಲೆಗೆ ಗನ್‍ನಿಂದ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರ ಕುಟುಂಬದ ಸದಸ್ಯರು ಮತ್ತು ಖಾಸಗಿ ವೈದ್ಯರು ಅವರನ್ನು ಕೆಜಿಎಫ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಿಮ್‍ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ತಮ್ಮ ಮಗ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ ಎಂದು ಗಾಯಾಳು ವೈದ್ಯರ ತಂದೆ ಡಾ.ಕಾರ್ಲಟಸನ್ ಸಲ್ಡಾನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    ಈ ಸಂಬಂಧ ರಾಬರ್ಟಸನ್‍ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಡಾ. ಸಲ್ಡಾನ್ ಅವರು ಯಾಕೆ ಆತ್ಮಹತ್ಯೆಗೆ ಯತ್ನಿಸಿದರು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.