Tag: kj halli

  • ಹಬ್ಬದ ಸಂಭ್ರಮದಲ್ಲಿ ಮಾರಕಾಸ್ತ್ರ ಹಿಡಿದು ಮಧ್ಯರಾತ್ರಿ ವ್ಹೀಲಿಂಗ್ ಮಾಡಿದ್ದ ಪುಂಡರು ಅರೆಸ್ಟ್

    ಹಬ್ಬದ ಸಂಭ್ರಮದಲ್ಲಿ ಮಾರಕಾಸ್ತ್ರ ಹಿಡಿದು ಮಧ್ಯರಾತ್ರಿ ವ್ಹೀಲಿಂಗ್ ಮಾಡಿದ್ದ ಪುಂಡರು ಅರೆಸ್ಟ್

    ಬೆಂಗಳೂರು: ಹಬ್ಬದ ಸಂಭ್ರಮದಲ್ಲಿ ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡಿದ್ದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.

    ಇದೇ ತಿಂಗಳ 13ರಂದು ಮಧ್ಯರಾತ್ರಿ ಶಬ್ ಎ ಬಾರತ್ ಹಬ್ಬದ ಪ್ರಯುಕ್ತ 25ಕ್ಕೂ ಹೆಚ್ಚು ಮಂದಿ ಕೆಜಿ ಹಳ್ಳಿಯ ನೂರ್ ಮಸೀದಿ ಬಳಿ ಸೇರಿದ್ದರು. ಈ ವೇಳೆ ರೀಲ್ಸ್ ಹುಚ್ಚಿಗಾಗಿ ಅರ್ಫಾತ್, ಸಾಹಿಲ್ ಸೇರಿದಂತೆ ಇನ್ನಿತರರು ಸೇರಿ ವ್ಹೀಲಿಂಗ್ ಪ್ಲ್ಯಾನ್‌ ಮಾಡಿದ್ದಾರೆ.ಇದನ್ನೂ ಓದಿ: ಅಮೆರಿಕದ ಎಫ್‌ಬಿಐಗೆ ಗುಜರಾತ್‌ ಮೂಲದ ಕಾಶ್‌ ಪಟೇಲ್‌ ಬಾಸ್‌ – ನೇಮಕವಾದ ಬೆನ್ನಲ್ಲೇ ಬಿಗ್‌ ವಾರ್ನಿಂಗ್‌

    ಪ್ಲ್ಯಾನ್‌ ಮಾಡಿದ ಪುಂಡರ ಗ್ಯಾಂಗ್ ಕೆಜಿ ಹಳ್ಳಿಯ ಮೇನ್‌ರೋಡ್‌ನಲ್ಲಿ ತ್ರಿಬಲ್ ರೈಡಿಂಗ್‌ನಲ್ಲಿ ಹೋಗಿದ್ದಾರೆ. ಅಲ್ಲಿಂದ ಹೊಸಕೋಟೆ ಟೋಲ್‌ವರೆಗೂ ಹೋಗಿ ಮತ್ತೆ ಅದೇ ರೀತಿ ಕೆಜಿ ಹಳ್ಳಿಗೆ ವಾಪಸ್ ಆಗಿದ್ದಾರೆ. ಏರಿಯಾಗಳಲ್ಲಿ ರ‍್ಯಾಶ್ ಡ್ರೈವ್ ಮಾಡ್ತಿದ್ದ ಟೀಂ ಆ ಮಧ್ಯರಾತ್ರಿ ಲಾಂಗ್ ಹಿಡಿದು ವ್ಹೀಲಿಂಗ್ ಮಾಡಿತ್ತು.

    ಹಬ್ಬದ ಪ್ರಯುಕ್ತ ಪೂರ್ವ ವಿಭಾಗದಲ್ಲಿ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಆದರೂ ಕೂಡ ಪುಂಡರ ಗ್ಯಾಂಗ್ ಮಾರಕಾಸ್ತ್ರ ಹಿಡಿದು ರ‍್ಯಾಶ್ ಡ್ರೈವ್ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಪೊಲೀಸರ ವಿರುದ್ಧ ಟೀಕೆ ವ್ಯಕ್ತವಾಗಿತ್ತು.

    ಸದ್ಯ ಐದು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಕಮಿಷನರ್, ಉಳಿದವರಿಗಾಗಿ ಹುಡುಕಾಟ ನಡೆಸುವಂತೆ ಸೂಚನೆ ನೀಡಿದ್ದು, ತನಿಖೆ ಮುಂದುವರೆದಿದೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಹೆಬ್ಬಾಳ್ಕರ್‌ ಅಪಘಾತ ಕೇಸ್‌ – ಗುದ್ದಿ ಪರಾರಿಯಾದ ಕ್ಯಾಂಟರ್‌ಗಾಗಿ ತೀವ್ರ ಹುಡುಕಾಟ

  • ಕತ್ತಿ, ಖಡ್ಗ, ತಲ್ವಾರ್ ಒಂದು ಶಸ್ತ್ರ ಮನೆಯಲ್ಲಿ ಇರಲೇಬೇಕು: ಮುತಾಲಿಕ್

    ಕತ್ತಿ, ಖಡ್ಗ, ತಲ್ವಾರ್ ಒಂದು ಶಸ್ತ್ರ ಮನೆಯಲ್ಲಿ ಇರಲೇಬೇಕು: ಮುತಾಲಿಕ್

    ಧಾರವಾಡ: ಎಲ್ಲಾ ದೇವರಗಳ ಕೈಯಲ್ಲಿ ಶಸ್ತ್ರಗಳಿವೆ, ದೇವರುಗಳಿಗೆ ನಮಸ್ಕಾರ ಮಾಡುವಾಗ ನಾವು ಶಸ್ತ್ರಗಳನ್ನು ನೋಡುತ್ತೇವೆ, ಆದರೆ ಇಂದು ಒಂದೇ ಒಂದು ಶಸ್ತ್ರ ನಮ್ಮ ಮನೆಗಳಲ್ಲಿ ಇಲ್ಲದಾಗಿದೆ. ನಮ್ಮ ಮನೆಯಲ್ಲಿ ಕತ್ತಿ, ಖಡ್ಗ ಅಥವಾ ತಲ್ವಾರ್‍ ನಂತಹ ಒಂದು ಶಸ್ತ್ರ ಇಡಲೇಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಹುಬ್ಬಳ್ಳಿ-ಧಾರವಾಡ ನವನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಎಲ್ಲಾ ದೇವರಗಳ ಕೈಯಲ್ಲಿ ಶಸ್ತ್ರಗಳಿವೆ, ದೇವರುಗಳಿಗೆ ನಮಸ್ಕಾರ ಮಾಡುವಾಗ ನಾವು ಶಸ್ತ್ರಗಳನ್ನು ನೋಡುತ್ತೇವೆ, ಆದರೆ ಇಂದು ಒಂದೇ ಒಂದು ಶಸ್ತ್ರ ನಮ್ಮ ಮನೆಗಳಲ್ಲಿ ಇಲ್ಲದಾಗಿದೆ. ಕತ್ತಿ, ಖಡ್ಗ, ತಲ್ವಾರ್ ಇವುಗಳಲ್ಲಿ ಯಾವುದಾದರು ಒಂದು ಶಸ್ತ್ರ ನಮ್ಮ ಮನೆಗಳಲ್ಲಿ ಇರಲೇಬೇಕು. ಇವತ್ತಿಲ್ಲ ನಾಳೆ ಬೀದಿ ಕಾಳಗ ಆಗುತ್ತದೆ, ಅವತ್ತು ನಾವು, ನಮ್ಮ ಸಮಾಜ ಎಲ್ಲವನ್ನೂ ಎದುರಿಸಬೇಕಾಗುತ್ತದೆ ಎಂದರು. ಇದನ್ನೂ ಓದಿ: ಅತ್ಯಾಚಾರಿಗಳಿಗೆ ಸಜ್ಜನ್ ರಾವ್ ಮಾರ್ಗವೇ ಸರಿ – ಪರೋಕ್ಷವಾಗಿ ಎನ್‍ಕೌಂಟರ್ ಮಾಡ್ಬೇಕೆಂದ್ರು ರಾಜೂಗೌಡ

    ನಮ್ಮ ದೇಶದ ಭವಿಷ್ಯ ಉಳಿಯುತ್ತದೆ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆ ನೆನಪು ಮಾಡಿಕೊಳ್ಳೋಣ, ಈ ರೀತಿ ದೇಶದಲ್ಲಿ ಆವರಿಸಿಕೊಂಡಿರುವ ಶತ್ರುಗಳನ್ನು ಗುರುತಿಸೋಣ. ಶತ್ರುಗಳನ್ನು ತಡೆದು ನಮ್ಮ ಗುಡಿ-ಗೋಪುರ, ದೇವಸ್ಥಾನಗಳನ್ನು ಉಳಿಸೋಣ, ನಮ್ಮ ಅಕ್ಕ, ತಂಗಿಯರ ಮಾಂಗಲ್ಯ ರಕ್ಷಿಸೋಣ ಎನ್ನುವ ಮೂಲಕ ಸಾರ್ವಜನಿಕರನ್ನು ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ.ಇದನ್ನೂ ಓದಿ: ನನ್ನ ಮಗ ಗೂಂಡಾ ಅಲ್ಲ, ತಪ್ಪು ಸಾಬೀತಾದರೆ ಕ್ರಮ ಕೈಗೊಳ್ಳಲಿ: ಮಾನಪ್ಪ ವಜ್ಜಲ್

  • ಬಕ್ರಿದ್‍ಗೆ ವಧೆ ಮಾಡಲು ತಂದಿದ್ದ ಗೋವುಗಳ ರಕ್ಷಣೆ

    ಬಕ್ರಿದ್‍ಗೆ ವಧೆ ಮಾಡಲು ತಂದಿದ್ದ ಗೋವುಗಳ ರಕ್ಷಣೆ

    ಬೆಂಗಳೂರು: ಬಕ್ರೀದ್ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆ ಹತ್ತಾರು ಗೋವುಗಳನ್ನು ಬಲಿ ಕೊಡಲು ಸಿಲಿಕಾನ್ ಸಿಟಿಗೆ ತರಲಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಾಗಾಗಿ ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯ ಗಲ್ಲಿ, ಗಲ್ಲಿಗಳಲ್ಲಿ ಮನೆಮುಂದೆ ಕಟ್ಟಿಹಾಕಿದ್ದ ನೂರಾರು ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

    ವಯಸ್ಸಾಗಿರುವ ಎತ್ತುಗಳು ಮತ್ತು ಎಮ್ಮೆಗಳನ್ನು ಮಾತ್ರ ವಧೆ ಮಾಡಲು ರಾಜ್ಯದಲ್ಲಿ ಅವಕಾಶವಿದೆ. ಆದರೆ ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯಲ್ಲಿ ಕಾನೂನು ಉಲ್ಲಂಘಿಸಿ, ಪೊಲೀಸರ ಕಣ್ತಪ್ಪಿಸಿ ಹತ್ತಾರು ಗೋವುಗಳನ್ನು ತಂದು ಮನೆ ಮುಂದೆ ಕಟ್ಟಿಕೊಂಡಿದ್ದಾರೆ. ದೇವರ ಜೀವನಹಳ್ಳಿಯ ಗಲ್ಲಿ, ಗಲ್ಲಿಗಳಲ್ಲಿ ಮನೆ ಮುಂದೆ ಎತ್ತುಗಳನ್ನು ತಂದು ಕಟ್ಟಿ ಹಾಕಿರುವ ಬಗ್ಗೆ ಸ್ವಯಂ ಸೇವಾ ಸಂಘಟನೆಯ ಸದಸ್ಯರೊಬ್ಬರು ದೂರು ಕೊಟ್ಟಿದ್ದರು. ಇದರ ಅನ್ವಯ ಕಾರ್ಯಚರಣೆಗೆ ಇಳಿದ ಪೊಲೀಸರು ಬಕ್ರೀದ್ ಹಬ್ಬಕ್ಕೆಂದು ಕಡಿಯಲು ತಂದಿದ್ದ ನೂರಾರು ಎತ್ತುಗಳು, ಹಸುಗಳನ್ನು ರಕ್ಷಣೆ ಮಾಡಿದ್ದಾರೆ.  ಇದನ್ನೂ ಓದಿ: ಮೇಲ್ಮನೆಯಲ್ಲೂ ಗೋಹತ್ಯೆ ನಿಷೇಧ ಬಿಲ್ ಅಂಗೀಕಾರ – ವಿಪಕ್ಷಗಳಿಂದ ಗದ್ದಲ, ಬಿಜೆಪಿ ಸದಸ್ಯರ ಸಂಭ್ರಮ

    ಗೋವುಗಳನ್ನು ರಕ್ಷಣೆ ಮಾಡಿದ ಪೊಲೀಸರು, ಸ್ಟೇಷನ್ ಬಳಿ ತಂದಿದ್ದಾರೆ. ಸದ್ಯ ಗೋವುಗಳ ರಕ್ಷಣೆ ಮಾಡಲಾಗಿದ್ದು ಅನಾಮಧೇಯ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದ್ದು, ಗೋವುಗಳನ್ನು ವಧೆ ಮಾಡಲು ತಂದವರ ಹುಡುಕಾಟ ನಡೆಯುತ್ತಿದೆ.

  • ಗಲಭೆ ಮಾಡಿ ಊರು ಬಿಟ್ಟ ಪುಂಡರು – ಎರಡು ಎಟಿಎಂ ಧ್ವಂಸ

    ಗಲಭೆ ಮಾಡಿ ಊರು ಬಿಟ್ಟ ಪುಂಡರು – ಎರಡು ಎಟಿಎಂ ಧ್ವಂಸ

    ಬೆಂಗಳೂರು: ಮಂಗಳವಾರ ರಾತ್ರಿ ಕೆಜಿ ಹಳ್ಳಿಯಲ್ಲಿ ಗಲಭೆ ಮಾಡಿದ್ದ ದುಷ್ಕರ್ಮಿಗಳು ಊರು ಬಿಟ್ಟು ಪರಾರಿಯಾಗಿದ್ದಾರೆ. ಇದನ್ನೂ ಓದಿ: ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ – ಭಯದಿಂದ ಬಾತ್‍ರೂಮಿನಲ್ಲಿ 3 ಗಂಟೆ ಬಚ್ಚಿಟ್ಟುಕೊಂಡಿದ್ದ ಕುಟುಂಬ

    ಕೆಜಿ ಹಳ್ಳಿ, ಡಿಜೆ ಪೊಲೀಸ್ ಠಾಣೆಗೆ ಬೆಂಕಿ ಹಾಕಿ, ಧ್ವಂಸ ಮಾಡಿದ್ದ ಉದ್ರಿಕ್ತರು ಕಾಲ್ಕಿತ್ತಿದ್ದಾರೆ. ದುಷ್ಕರ್ಮಿಗಳು ಮಂಗಳವಾರ ರಾತ್ರಿ ಗಲಭೆ ಮಾಡಿದ ನಂತರ ರಾತ್ರೋ ರಾತ್ರಿ ಊರು ಬಿಟ್ಟಿದ್ದಾರೆ. ಸದ್ಯಕ್ಕೆ 170 ಮಂದಿ ಗಲಭೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪೊಲೀಸರು ಗೋಲಿಬಾರ್‌ಗೆ ಮೂವರು ಬಲಿಯಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಮನೆ ಧ್ವಂಸ- ಘಟನೆ ಖಂಡಿಸದೆ ಮೌನ ತಾಳಿದ ಕೈ ನಾಯಕರು

    ಈ ಗಲಭೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಆದರೆ ದುಷ್ಕರ್ಮಿಗಳು ಡಿಜಿ ಹಳ್ಳಿ, ಕೆಜಿ ಹಳ್ಳಿ ಮತ್ತು ಟ್ಯಾನರಿ ರೋಡ್ ತೊರೆದಿದ್ದಾರೆ. ಹೀಗಾಗಿ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಹುಡುಕಾಟ ಮಾಡುತ್ತಿದ್ದಾರೆ.

    ರಾತ್ರಿ ಕಿಡಿಕೇಡಿಗಳು ಎಟಿಎಂ ಧ್ವಂಸ ಮಾಡಿದ್ದಾರೆ. ಕಾವಲ್ ಬೈರಸಂದ್ರದಲ್ಲಿದ್ದ ಹೆಚ್‍ಡಿಎಫ್‍ಸಿ ಮತ್ತು ಕರ್ನಾಟಕ ಬ್ಯಾಂಕ್ ಎರಡು ಎಟಿಎಂ ಅನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ್ದಾರೆ.

  • ಕೆಜಿ ಹಳ್ಳಿ ಗಲಭೆ ಪ್ರಕರಣ – ಎಸ್‍ಡಿಪಿಐ ಮುಖಂಡ ಅರೆಸ್ಟ್

    ಕೆಜಿ ಹಳ್ಳಿ ಗಲಭೆ ಪ್ರಕರಣ – ಎಸ್‍ಡಿಪಿಐ ಮುಖಂಡ ಅರೆಸ್ಟ್

    ಬೆಂಗಳೂರು: ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾ ಎಸ್‍ಡಿಪಿಐ (Social Democratic Party of India) ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

    ಎಸ್‍ಡಿಪಿಐ ಮುಖಂಡ ಮುಜಾಮಿಲ್ ಪಾಷಾನನ್ನು ಡಿಜೆ ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಮುಜಾಮಿಲ್ ಪಾಷಾ ಎ-1 ಆರೋಪಿ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

    ಮಂಗಳವಾರ ರಾತ್ರಿ ಕೆಜಿ ಹಳ್ಳಿಯಲ್ಲಿ ದಾಂಧಲೆ ಮಾಡುತ್ತಿದ್ದ ಗಲಭೆಕೋರರ ಜೊತೆ ಮುಜಾಮಿಲ್ ಪಾಷಾ ಇದ್ದನು. ಅಲ್ಲದೇ ಗಲಭೆ ನಡೆಯುತ್ತಿದ್ದಾಗ ಮೈಕ್ ಹಿಡಿದುಕೊಂಡು ಗಲಭೆಗೋರರ ಜೊತೆ ಮಾತನಾಡಿದ್ದನು. ಹೀಗಾಗಿ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಿ ಡಿಜೆ ಪೊಲೀಸರು ಮುಜಾಮಿಲ್ ಪಾಷಾನನ್ನು ಬಂಧಿಸಿದ್ದಾರೆ.

    ಮುಜಾಮಿಲ್ ಪಾಷಾನ ವಿರುದ್ಧ ಈಗಾಗಲೇ ಡಿಜೆ ಹಳ್ಳಿ ಠಾಣೆಯಲ್ಲಿ ಐದು ಕೇಸ್ ದಾಖಲಾಗಿವೆ. ಗುಂಪು ಕಟ್ಟಿಕೊಂಡು ಹಲ್ಲೆ ಮತ್ತು ಪ್ರಚೋದಾನಾತ್ಮಕ ಹೇಳಿಕೆ ಪ್ರಕರಣ ದಾಖಲಾಗಿವೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

  • ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ ಮೇಲೆ ಹಲ್ಲೆ

    ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ ಮೇಲೆ ಹಲ್ಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಲಾಂಗು ಮಚ್ಚು ಝಳಪಿಸಿದೆ. ದುಷ್ಕರ್ಮಿಗಳ ಗುಂಪೊಂದು ಕೆ.ಜೆ ಹಳ್ಳಿ ಬಳಿ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಎನ್‍ಎಸ್‍ಯುಐ ಪ್ರಧಾನ ಕಾರ್ಯದರ್ಶಿ ಮೇಲೆ ಏಕಾಏಕಿ ಲಾಂಗು ಮಚ್ಚಿನಿಂದ ದಾಳಿ ನಡೆಸಿದೆ.

    ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ನಾಗವಾರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎನ್‍ಎಸ್‍ಯುಐ ಪ್ರಧಾನ ಕಾರ್ಯದರ್ಶಿ ರಾಜೇಶ್ ಮೇಲೆ ಈ ಹಲ್ಲೆ ನಡೆದಿದೆ. ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಕೃತ್ಯ ಸೆರೆಯಾಗಿದೆ.

     ಆರೋಪಿ

    ಘಟನೆಯಲ್ಲಿ ರಾಜೇಶ್ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಈ ಬಗ್ಗೆ ಕೆ.ಜೆ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಇನ್ನೂ ಎಫ್ ಐ ಆರ್ ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಸಂಬಂಧಿಕರು ಭಾಗಿಯಾಗಿರೋ ಶಂಕೆ ಇದೆ. ಹೀಗಾಗಿ ಇಂದು ಕೆ.ಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಲು ಕಾಂಗ್ರೆಸ್ ನಿರ್ಧರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv