Tag: Kiwis

  • ಚೆಸ್‍ನಲ್ಲಿ ನ್ಯೂಜಿಲೆಂಡ್ ಆಟಗಾರ ಸೋಧಿಯನ್ನು ಸೋಲಿಸಿದ ಚಹಲ್

    ಚೆಸ್‍ನಲ್ಲಿ ನ್ಯೂಜಿಲೆಂಡ್ ಆಟಗಾರ ಸೋಧಿಯನ್ನು ಸೋಲಿಸಿದ ಚಹಲ್

    ತಿರುವನಂತಪುರಂ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಕಿವಿಸ್ 40 ರನ್‍ಗಳ ಗೆಲುವು ಸಾಧಿಸಿದ್ದರೆ, ಪಂದ್ಯದ ನಂತರ ನಡೆದ ಚೆಸ್ ಆಟದಲ್ಲಿ ಭಾರತದ ಯುವ ಸ್ಪೀನ್ ಬೌಲರ್ ಯಜುವೇಂದ್ರ ಚಹಲ್ ಕಿವಿಸ್ ಬೌಲರ್ ಇಶ್ ಸೋಧಿಯನ್ನು ಚೆಸ್ ಆಟದಲ್ಲಿ ಸೋಲಿಸಿದ್ದಾರೆ.

    ಯಜುವೇಂದ್ರ ಚಹಲ್ ಮತ್ತು ಇಶ್ ಸೋಧಿ ಇಬ್ಬರು ಚೆಸ್ ಪ್ರಿಯರಾಗಿದ್ದು, ಪಂದ್ಯದ ನಂತರ ಚಹಲ್ ಕಿವಿಸ್ ಬೌಲರ್‍ಗೆ ತನ್ನೊಂದಿಗೆ ಆನ್ ಲೈನ್ ನಲ್ಲಿ ಚೆಸ್ ಆಡುವಂತೆ ಚಾಲೆಂಜ್ ನೀಡಿದ್ದಾರೆ. ಇಬ್ಬರ ನಡುವೆ ನಡೆದ ಚೆಸ್ ಪಂದ್ಯದಲ್ಲಿ ಚಹಲ್ ಚೆಕ್ ನೀಡುವ ಮೂಲಕ ಗೆಲುವು ಸಾಧಿಸಿದ್ದು, ಇಬ್ಬರು ಈ ಕುರಿತು ಟ್ವೀಟ್ ಮಾಡಿದ್ದಾರೆ.

    ಮೊದಲು ನಡೆದ ಪಂದ್ಯದಲ್ಲಿ ಚಹಲ್ ಗೆಲುವು ಪಡೆದ ಸಮಯದಲ್ಲಿ ಸೋಧಿ ಎರಡನೇ ಪಂದ್ಯ ಆಡುವುವಂತೆ ಚಾಲೆಂಜ್ ನೀಡಿದ್ದಾರೆ. ನಂತರ ಇವರಿಬ್ಬರು ತಿರುವನಂತಪುರಂಗೆ ಬರುತ್ತಿದ್ದ ವಿಮಾನದಲ್ಲಿ ಚೆಸ್ ಆಡಿದ್ದಾರೆ. ಈ ಪಂದ್ಯದಲ್ಲೂ ಚಹಲ್ ಗೆಲವು ಪಡೆದಿದ್ದು, ಈ ಕುರಿತು ಚಹಾಲ್ ‘ಹಾರ್ಡ್ ಲಕ್ ಮೈ ಬ್ರದರ್’ ಎಂದು ಟ್ವೀಟ್ ಮಾಡಿದ್ದಾರೆ.

    ಚಹಲ್ ಅವರೊಂದಿಗಿನ ಚೆಸ್ ಪಂದ್ಯದಲ್ಲಿ ಸೋತ ಕಿವಿಸ್ ಇಶ್ ಸೋಧಿ, ಚಹಲ್  ಒಬ್ಬ ಚೆಸ್ ಚಾಂಪಿಯನ್ ಆಗಿದ್ದು, ಅವರ ವಿರುದ್ಧ ಚಾಲೆಂಜ್ ಉತ್ತಮವಾಗಿತ್ತು. ಆದರೆ ಚಾಲೆಂಜ್ ನನ್ನ ಪರವಾಗಿ ಇರಲಿಲ್ಲ. ಇಬ್ಬರು ಎರಡು ಪಂದ್ಯಗಳನ್ನು ಆಡಿದ್ದೇವೆ. ನಾನು ಚಹಲ್ ಆಟದ ಬಗ್ಗೆ ಊಹಿಸಿರಲಿಲ್ಲ. ಇಬ್ಬರ ನಡುವಿನ ಪಂದ್ಯ ಎಲ್ಲರಿಗೂ ನಗೆ ಮೂಡಿಸಿತ್ತು ಎಂದು ಟ್ವೀಟ್ ಮಾಡಿದ್ದಾರೆ.

    ಮೂಲತಃ ಭಾರತದ ಯಜುವೇಂದ್ರ ಚಹಲ್ ಚೆಸ್ ಆಟಗಾರ. ಭಾರತದ ಪರ ಏಷ್ಯಾ ಮತ್ತು ವಿಶ್ವ ಯುವ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಚಹಲ್ ಏಳು ವರ್ಷ ಇದ್ದಾಗಲೇ ಚೆಸ್ ಹಾಗು ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅಲ್ಲದೆ ಅಂಡರ್-ಚೆಸ್ ರಾಷ್ಟ್ರೀಯ ಚಾಪಿಂಯನ್ ಸಹ ಆಗಿದ್ದರು. ಆದರೆ ಪ್ರಯೋಜಕರ ಕೊರತೆಯಿಂದಾಗಿ ಚೆಸ್ ಆಟದಿಂದ ಹಿಂದಕ್ಕೆ ಸರಿದರು.

    ಕಿವಿಸ್ ಸ್ಪೀನರ್ ಇಶ್ ಸೋಧಿ ಭಾರತದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 25 ರನ್ ನೀಡಿ 4 ವಿಕೆಟ್ ಕಬಳಿಸಿದ್ದರೆ, ಎರಡನೇ ಪಂದ್ಯದಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದಿದ್ದರು.

  • ಭಾರತದಲ್ಲಿ ಎಲ್ಲಾ 5 ಸರಣಿ ಸೋತಿದೆ ನ್ಯೂಜಿಲೆಂಡ್! – ಭಾನುವಾರ ಮೊದಲ ಒನ್ ಡೇ ಮ್ಯಾಚ್

    ಭಾರತದಲ್ಲಿ ಎಲ್ಲಾ 5 ಸರಣಿ ಸೋತಿದೆ ನ್ಯೂಜಿಲೆಂಡ್! – ಭಾನುವಾರ ಮೊದಲ ಒನ್ ಡೇ ಮ್ಯಾಚ್

    ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ 3 ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಭಾನುವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಎರಡೂ ತಂಡಗಳ ಮುಂಬೈನಲ್ಲಿ ಬೀಡು ಬಿಟ್ಟಿದ್ದು ಮೊದಲ ಮುಖಾಮುಖಿಗೆ ಪ್ರಾಕ್ಟೀಸ್ ನಡೆಸುತ್ತಿದ್ದಾರೆ.

    ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾದ ಸದ್ಯದ ಫಾರ್ಮ್ ಹಾಗೂ ನ್ಯೂಜಿಲೆಂಡ್ ತಂಡ ಇದುವರೆಗೆ ಭಾರತದಲ್ಲಿ ಮಾಡಿದ ಸಾಧನೆ ನೋಡಿದರೆ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ತಂಡ ಎನ್ನಬಹುದು. ಕಾರಣ ಇದುವರೆಗೆ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಭಾರತದಲ್ಲಿ ಆಡಿದ 32 ಪಂದ್ಯಗಳಲ್ಲಿ ಕೇವಲ 7 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಭಾರತ 24 ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿರಲಿಲ್ಲ. 1987ರಿಂದ ನ್ಯೂಜಿಲೆಂಡ್ ಭಾರತ ತಂಡದ ವಿರುದ್ಧ ಅಟವಾಡುತ್ತಿದೆ.

    ಟೆಸ್ಟ್ ಆಟವಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ವಿರುದ್ಧ ಭಾರತದಲ್ಲಿ ನ್ಯೂಜಿಲೆಂಡ್ ಗಿಂತ ಕಳಪೆ ಪ್ರದರ್ಶನ ನೀಡಿರುವುದು ಜಿಂಬಾಬ್ವೆ ಮಾತ್ರ. ಜಿಂಬಾಬ್ವೆ ಭಾರತದಲ್ಲಿ ಒಟ್ಟು 19 ಏಕದಿನ ಪಂದ್ಯಗಳನ್ನಾಡಿದ್ದು ಇದರಲ್ಲಿ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿತ್ತು. 15 ಪಂದ್ಯದಲ್ಲಿ ಭಾರತ ಗೆದ್ದರೆ ಒಂದು ಪಂದ್ಯ ಟೈ ಆಗಿತ್ತು.

    ಭಾರತದಲ್ಲಿ ಇದುವರೆಗೆ ನ್ಯೂಜಿಲೆಂಡ್ 5 ಏಕದಿನ ಸರಣಿಯನ್ನು ಆಡಿದೆ. ಈ ಐದೂ ಸರಣಿಗಳಲ್ಲೂ ಭಾರತವೇ ಗೆದ್ದು ಮೇಲುಗೈ ಸಾಧಿಸಿದೆ. 1988ರಲ್ಲಿ 4-0, 1995ರಲ್ಲಿ 3-2, 1999ರಲ್ಲಿ 3-2, 2010ರಲ್ಲಿ 5-0 ಹಾಗೂ 2016ರಲ್ಲಿ 3-2 ಅಂತರದಿಂದ ಭಾರತ ಗೆಲುವು ಸಾಧಿಸಿತ್ತು.

    ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ. 2ನೇ ಏಕದಿನ ಅ.25ರಂದು ಪುಣೆ ಹಾಗೂ 3ನೇ ಏಕದಿನ ಪಂದ್ಯ ಅ.29ರಂದು ಕಾನ್ಪುರದಲ್ಲಿ ನಡೆಯಲಿದೆ.

    ಮೊದಲ ಟಿ20 ಪಂದ್ಯ ನವಂಬರ್ 1ರಂದು ದೆಹಲಿ, 2ನೇ ಟಿ20 ನ.4ರಂದು ರಾಜ್ ಕೋಟ್ ಹಾಗೂ ಸರಣಿಯ ಕೊನೆಯ ಟಿ20 ಪಂದ್ಯ ನ.7ರಂದು ತಿರುವನಂತಪುರಂನಲ್ಲಿ ನಡೆಯಲಿದೆ. ಏಕದಿನ ಪಂದ್ಯಗಳು ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದ್ದು, ಟಿ20 ಪಂದ್ಯಗಳು ರಾತ್ರಿ 7 ಗಂಟೆಗೆ ಆರಂಭಗೊಳ್ಳಲಿದೆ.