Tag: kitturu

  • ಶಾಸಕ ರಾಜು ಕಾಗೆ ಸಹೋದರನ ಪುತ್ರನಿಂದ ಕಾರು ಅಪಘಾತ – ಬೈಕ್ ಸವಾರ ಸಾವು

    ಶಾಸಕ ರಾಜು ಕಾಗೆ ಸಹೋದರನ ಪುತ್ರನಿಂದ ಕಾರು ಅಪಘಾತ – ಬೈಕ್ ಸವಾರ ಸಾವು

    ಬೆಳಗಾವಿ: ಶಾಸಕ ರಾಜು ಕಾಗೆ (Raju Kage) ಸಹೋದರನ ಪುತ್ರನಿಂದ ಕಾರು ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belgavi) ಜಿಲ್ಲೆಯ ಕಿತ್ತೂರು (Kitturu) ಪಟ್ಟಣದ ಹೊರವಲಯದ ಬೆಂಗಳೂರು-ಪುಣೆ (Bengaluru-Pune) ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಗೋಕಾಕ್ ಮೂಲದ ಬಸವರಾಜ ಪುಡಕಲಕಟ್ಟಿ (22) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ತಾಯಿ

    ಮೃತ ಬಸವರಾಜ ಹಾಗೂ ಆತನ ಇಬ್ಬರು ಸ್ನೇಹಿತರು ಬೆಳಗಾವಿಯಿಂದ ಕಿತ್ತೂರಿಗೆ ಬೈಕ್‌ನಲ್ಲಿ ಕೆಲಸಕ್ಕೆ ಹೊರಟ್ಟಿದ್ದರು. ಈ ವೇಳೆ ಶಾಸಕ ರಾಜು ಕಾಗೆ ಸಹೋದರನ ಪುತ್ರ ಶ್ರೀಪ್ರಸಾದ್ ಸಿದ್ದನಗೌಡ ಕಾಗೆ ಪ್ರಯಾಣಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸವರಾಜ ಪುಡಕಲಕಟ್ಟಿ ಸಾವನ್ನಪ್ಪಿದ್ದು, ಸಣ್ಣವಿಠ್ಠಲ್ ದುರದುಂಡಿ, ನಿಂಗಪ್ಪ ಹೆಬ್ಬಾಳ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಮೃತ ದೇಹವನ್ನು ಬಿಮ್ಸ್ (BIMS) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು (Kitturu Police Station) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ:ಚಿಕ್ಕಬಳ್ಳಾಪುರ| ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೂವರು ದುರ್ಮರಣ

  • ಮದುವೆ ಸಂಭ್ರಮದಲ್ಲಿದ್ದ ಮಗನನ್ನು ಕಲ್ಲಿನಿಂದ ಹೊಡೆದು ಕೊಂದ ತಂದೆ!

    ಮದುವೆ ಸಂಭ್ರಮದಲ್ಲಿದ್ದ ಮಗನನ್ನು ಕಲ್ಲಿನಿಂದ ಹೊಡೆದು ಕೊಂದ ತಂದೆ!

    ಬೆಳಗಾವಿ: ಮದುವೆ (Marriage) ಖುಷಿಯಲ್ಲಿದ್ದ ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಆತನ ತಂದೆ ಹಾಗೂ ಸಹೋದರ ಸೇರಿ ಹತ್ಯೆಗೈದ ಘಟನೆ ಕಿತ್ತೂರು (Kitturu) ತಾಲೂಕಿನ ಚಿಕ್ಕ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತನನ್ನು ಮಂಜುನಾಥ್ ಉಳ್ಳಾಗಡ್ಡಿ (25) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಗಳನ್ನು, ನಾಗಪ್ಪ ಹಾಗೂ ಗುರುಬಸಪ್ಪ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಮಂಜುನಾಥ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ತಂದೆ ಹಾಗೂ ಸಹೋದರ ಆತನನ್ನು ಕಲ್ಲು, ಇಟ್ಟಿಗೆಯಿಂದ ಹೊಡೆದು ಹತ್ಯೆಗೈದಿದ್ದಾರೆ. ಇದನ್ನೂ ಓದಿ: 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ ಅರೆಸ್ಟ್‌

    ಮಾ.12ರಂದು ಮಂಜುನಾಥ್ ಮದುವೆ ನಿಗದಿಯಾಗಿತ್ತು. ಆತನ ಮದುವೆಗಾಗಿ ಸೇನೆಯಲ್ಲಿದ್ದ ಗುರುಬಸಪ್ಪ ರಜೆಯ ಮೇಲೆ ಊರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.

    ಕಿತ್ತೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವವನ್ನು ಬಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಇದನ್ನೂ ಓದಿ: 3 ವಾರಗಳ ಹಿಂದೆ ಅಪ್ರಾಪ್ತ ಬಾಲಕಿ ನಾಪತ್ತೆ – 42 ವರ್ಷದ ವ್ಯಕ್ತಿಯ ಜೊತೆ ಶವವಾಗಿ ಪತ್ತೆ

  • ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚನ್ನಮ್ಮ – ಸಿಎಂ

    ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚನ್ನಮ್ಮ – ಸಿಎಂ

    ಬೆಂಗಳೂರು: ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚನ್ನಮ್ಮ (Kitturu Chennamma) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

    ಇಂದು (ಅ,2) ಬೆಳಗಾವಿ (Belagavi) ಜಿಲ್ಲಾ ಆಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ (Kitturu Development Authority) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (Kannada And Culture Department) ವತಿಯಿಂದ ವಿಧಾನಸೌಧ ಭವ್ಯ ಮೆಟ್ಟಿಲುಗಳ ಬಳಿ ಹಮ್ಮಿಕೊಳ್ಳಲಾದ “ಕಿತ್ತೂರು ವಿಜಯೋತ್ಸವದ ಜ್ಯೋತಿ”ಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.ಇದನ್ನೂ ಓದಿ: HMT ಕ್ಯಾಂಪಸ್‌ನಲ್ಲಿ ಪೌರ ಕಾರ್ಮಿಕರೊಂದಿಗೆ ಕಸ ಗುಡಿಸಿದ ಎಚ್‌ಡಿಕೆ

    ಚಾಲನೆ ನೀಡಿ ಮಾತನಾಡಿದ ಅವರು, 2024ರ ಕಿತ್ತೂರು ಚೆನ್ನಮ್ಮ ಉತ್ಸವ ಇದೇ ತಿಂಗಳ 23, 24 ಹಾಗೂ 25 ರಂದು ಕಿತ್ತೂರಿನಲ್ಲಿ ನಡೆಯಲಿದ್ದು, ಕಿತ್ತೂರು ವಿಜಯವಾಗಿ 200 ವರ್ಷಗಳಾಗುತ್ತವೆ. ಇದರ ಅಂಗವಾಗಿ ಇಂದು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಿತ್ತೂರು ವಿಜಯೋತ್ಸವದ ಜ್ಯೋತಿಯು ಇಲ್ಲಿಂದ ಹೊರಟು ಎಲ್ಲಾ ಜಿಲ್ಲೆಗಳ ಮೂಲಕ ಹಾದು ಕಿತ್ತೂರನ್ನು ತಲುಪಲಿದೆ ಎಂದರು.

    ನಾಡಪ್ರೇಮ, ದೇಶಪ್ರೇಮ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರೆಂದರೆ ಅದು ಕಿತ್ತೂರು ರಾಣಿ ಚನ್ನಮ್ಮ. ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ. ಸಂಗೊಳ್ಳಿ ರಾಯಣ್ಣ (Sangolli Rayanna) ಕೂಡ ರಾಣಿ ಚನ್ನಮ್ಮನ ಸೈನ್ಯದಲ್ಲಿದ್ದರು. ಬ್ರಿಟಿಷರಿಗೆ ತೆರಿಗೆ ಕೊಡಲು ವಿರೋಧಿಸಿ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿಗಳು ಇವರು ಎಂದು ತಿಳಿಸಿದರು.ಇದನ್ನೂ ಓದಿ: ಸತತ ಪ್ರಯತ್ನದಿಂದ ಮಾತ್ರ ಭಾರತವನ್ನು ಸ್ವಚ್ಛಗೊಳಿಸಲು ಸಾಧ್ಯ: ಮೋದಿ

    ಕಿತ್ತೂರಿನಲ್ಲಿ ಆಚರಿಸಲ್ಪಡುವ ಕಿತ್ತೂರು ಉತ್ಸವಕ್ಕೆ (Kitturu Utsava) ಮತ್ತು ಕಿತ್ತೂರಿನ ಅಭಿವೃದ್ಧಿಗೆ ಸರ್ಕಾರ ಸಕಲ ನೆರವು ಮತ್ತು ಅಗತ್ಯ ಅನುದಾನವನ್ನು ನೀಡುತ್ತಿದೆ. ಇಂದು ಮಹಾತ್ಮ ಗಾಂಧಿಯವರ ಜಯಂತಿ ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಹೌದು. ಗಾಂಧಿ ನಡಿಗೆ ಮೂಲಕ ಗಾಂಧಿ ತತ್ವಾದರ್ಶಗಳು ಇವತ್ತಿನ ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.

    ಗಾಂಧೀಜಿಯವರು ದೇಶದ ಸ್ವಾತಂತ್ರ‍್ಯ ಹೋರಾಟಕ್ಕೆ ನೇತೃತ್ವ ವಹಿಸಿ ಶಾಂತಿಯುತವಾಗಿ ಸ್ವಾತಂತ್ರ‍್ಯ ದೊರಕಿಸಿಕೊಟ್ಟರು. 1920 ರಿಂದ 1947ರ ವರೆಗಿನ ಸ್ವಾತಂತ್ರ‍್ಯ ಹೋರಾಟದ ನೇತೃತ್ವ ವಹಿಸಿದ್ದರು ಎಂದರು.

    ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ, ಬೆಳಗಾವಿ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕಿತ್ತೂರು ಶಾಸಕ ಬಾಬಾ ಸಾಹೇಬ ಪಾಟೀಲ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಇದನ್ನೂ ಓದಿ: ಹೆಣ್ಣು ಮಗು ಎಂದು ತಿಳಿಸಿ, ಸತ್ತ ಗಂಡು ಮಗು ನೀಡಿದ್ದಾರೆ : ಆಸ್ಪತ್ರೆಯ ವಿರುದ್ಧ ತಾಯಿ ಆಕ್ರೋಶ

  • ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಕಿಡ್ನ್ಯಾಪ್ – ಕಾಂಗ್ರೆಸ್ ಶಾಸಕನ ಆಪ್ತರ ವಿರುದ್ಧ ದೂರು

    ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಕಿಡ್ನ್ಯಾಪ್ – ಕಾಂಗ್ರೆಸ್ ಶಾಸಕನ ಆಪ್ತರ ವಿರುದ್ಧ ದೂರು

    ಬೆಳಗಾವಿ: ಕಿತ್ತೂರು (Kitturu) ಪಟ್ಟಣ ಪಂಚಾಯತಿ ಬಿಜೆಪಿ (BJP) ಸದಸ್ಯ ನಾಗೇಶ್ ಅಸುಂಡಿ ಅಪಹರಣ ಪ್ರಕರಣ ಸಂಬಂಧ ಸ್ಥಳೀಯ ಕಾಂಗ್ರೆಸ್‌ (Congress) ಶಾಸಕರ ಮೂವರು ಆಪ್ತರ ವಿರುದ್ಧ ದೂರು ದಾಖಲಾಗಿದೆ. ನಾಗೇಶ್‌ ಅಪಹರಣ ಆದ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

    ತಡರಾತ್ರಿ ಕಿತ್ತೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಚೌಕಿಮಠ ಕ್ರಾಸ್ ಬಳಿ ನಾಗೇಶ್ ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿದ್ದಾಗ ಅಪಹರಣ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ದ್ವೇಷದ ಪೋಸ್ಟ್‌ – ವಿಜಯೇಂದ್ರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

    ನಾಗೇಶ್ ಅಸುಂಡಿ ತಂದೆ ಬಸವರಾಜ್ ಅಸುಂಡಿ ನೀಡಿದ ದೂರಿನ ಮೇರೆಗೆ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಆಪ್ತ ಅಶೋಕ್ ಮಾಳಗಿ, ಬಸವರಾಜ್ ಸಂಗೊಳ್ಳಿ, ಸುರೇಶ್ ಕುದರೇಮನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

    ನಾಗೇಶ್‌ ಅಸುಂಡಿ ಶೋಧಕ್ಕೆ ಬೈಲಹೊಂಗಲ ಡಿವೈಎಸ್‌ಪಿ ರವಿ ಡಿ.ನಾಯಕ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಇದನ್ನೂ ಓದಿ: ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

  • ಕಿತ್ತೂರು ಚೆನ್ನಮ್ಮಳ ನಾಡಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ: ನಿರಾಣಿ

    ಕಿತ್ತೂರು ಚೆನ್ನಮ್ಮಳ ನಾಡಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ: ನಿರಾಣಿ

    ಬೆಳಗಾವಿ: ಕಿತ್ತೂರು ಚೆನ್ನಮ್ಮಳ ನಾಡಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ರೂಪರೇಷಗಳನ್ನು ಹಾಕಿಕೊಳ್ಳಲಾಗಿದ್ದು, ಈ ಯೋಜನೆಯಿಂದ ಈ ಭಾಗದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮತ್ತು ಹುಬ್ಬಳ್ಳಿ ಡೋಮ್ಯಾಸ್ಟಿಕ್ ಏರ್ ಪೋರ್ಟ್ ಮಾಡಿಕೊಂಡು ಕಿತ್ತೂರಿನಲ್ಲಿಯೂ ಒಂದು ಏರ್ ಪೋರ್ಟ್ ಅನ್ನು ನಿರ್ಮಿಸುವುದಾಗಿ ಮುಂಬರುವ ದಿನಗಳಲ್ಲಿ ಕಾರ್ಯ ನಡೆಯಲಿದೆ. ಈಗಾಗಲೇ ಖಾಸಗಿ ಬಂಡವಾಳ ಹೂಡಿಕೆದಾರರೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿ ವಿಮಾನ ನಿಲ್ದಾಣವಾಗಲಿದೆ ಎಂದು ಆಶ್ವಾಸನೆ ನೀಡಿದರು. ಇದನ್ನೂ ಓದಿ: ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ

    ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಹೊಂದಲು ಮೂಲಭೂತ ಸೌಕರ್ಯ ಬೇಕು. ಕಾರವಾರ ವಿಮಾನ ನಿಲ್ದಾಣ ಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತದೆ. ಅದರಂತೆ, ಕಿತ್ತೂರಿನಲ್ಲಿಯೂ ಒಂದು ವಿಮಾನ ನಿಲ್ದಾಣ ಮಾಡುವ ಖಾಸಗಿ ಕಂಪನಿಯವರು ಅವರು ಸಹ ಸಹಮತ ನೀಡಿದ್ದಾರೆ. ಶೀಘ್ರದಲ್ಲಿಯೇ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ನಗದು ಬಹುಮಾನ – ಹಲಾಲ್ ವಿರುದ್ಧ ಅಭಿಯಾನ: ಎರಡಕ್ಕೂ ನಂಟೇನು?