Tag: Kittur Utsav

  • ಜ್ಯೋತಿ ಬೆಳಗುವ ವೇಳೆ ಸಿಎಂ ಬಟ್ಟೆಗೆ ತಾಕಿದ ಬೆಂಕಿಯ ಬಿಸಿ

    ಜ್ಯೋತಿ ಬೆಳಗುವ ವೇಳೆ ಸಿಎಂ ಬಟ್ಟೆಗೆ ತಾಕಿದ ಬೆಂಕಿಯ ಬಿಸಿ

    ಬೆಂಗಳೂರು: ಜ್ಯೋತಿ ಬೆಳಗುವ ವೇಳೆ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಬಟ್ಟೆಗೆ ಬೆಂಕಿಯ ಬಿಸಿ ತಾಗಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ

    ವಿಧಾನಸೌಧದ (Vidhana Soudha) ಗ್ರ‍್ಯಾಂಡ್ ಸ್ಟೆಪ್ ನಲ್ಲಿ 200ನೇ ಕಿತ್ತೂರು ವಿಜಯೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಇಂದು ಸಿಎಂ ಚಾಲನೆ ನೀಡಿದರು. ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡಿದ ಬಳಿಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಜಾಗ ಬಿಡಲು ಸಿಎಂ ಮುಂದಾದರು.

     

    ಈ ವೇಳೆ ಸಿಎಂ ದೀಪದ ಹತ್ತಿರ ಬಂದಾಗ ಎಡಕೈಗೆ ಬೆಂಕಿಯ ಕಿಡಿ ತಾಗಿದೆ. ಬಟ್ಟೆಗೆ ಆಕಸ್ಮಿಕವಾಗಿ ತಾಕಿದ ಕಿಡಿಯನ್ನು ಕೂಡಲೇ ಭದ್ರತಾ ಸಿಬ್ಬಂದಿ ಆರಿಸಿದ್ದಾರೆ. ಇದನ್ನೂ ಓದಿ: ಇರಾನ್‌ನಿಂದ ಕ್ಷಿಪಣಿ ದಾಳಿ – ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಟರ್ಕಿಯಲ್ಲಿ ಲ್ಯಾಂಡಿಂಗ್‌

    ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿವಕುಮಾರ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಉಪಸ್ಥಿತರಿದ್ದರು.

     

  • ಭಿಕ್ಷೆ ಬೇಡಲು ಹೋಗಿದ್ದೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಕಿಡಿ

    ಭಿಕ್ಷೆ ಬೇಡಲು ಹೋಗಿದ್ದೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಕಿಡಿ

    ಬೆಳಗಾವಿ: ಐತಿಹಾಸಿಕ ಕಿತ್ತೂರು ಉತ್ಸವಕ್ಕೆ (Kittur Utsav) ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಆಗದಿರುವ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ (Babasaheb Patil) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ಇನ್ನಷ್ಟು ಅನುದಾನ ನೀಡಿ ಎಂದು ಭಿಕ್ಷೆ ಬೇಡಲು ಬೆಂಗಳೂರಿಗೆ ಹೋಗಿದ್ದೆ. ಈಗಾಗಲೇ ಉತ್ಸವಕ್ಕೆ ಸರ್ಕಾರ 2 ಕೋಟಿ ರೂ. ಅನುದಾನ ನೀಡಿದೆ. ಇನ್ನಷ್ಟು ಅನುದಾನ ಕೊಡಲಿ ಎಂದು ಭಿಕ್ಷೆ ಬೇಡಲು ಹೋಗಿದ್ದೆ. ಕಳೆದ ವರ್ಷದಿಂದ ರಾಜ್ಯಮಟ್ಟದ ಉತ್ಸವವಾಗಿ ಕಿತ್ತೂರು ಉತ್ಸವ ಆಚರಿಸಲಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಟೆರರ್ ಫಂಡಿಂಗ್‍ಗೆ ಕಡಿವಾಣ – ವಿದೇಶಿ ವ್ಯವಹಾರದ ಮೇಲೆ ಕೇಂದ್ರ ಕಣ್ಣು

    ಹಿಂದಿನ ಬಿಜೆಪಿ (BJP) ಸಿಎಂ ಬಸವರಾಜ್ ಬೊಮ್ಮಾಯಿಯವರು ಈ ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಣೆ ಮಾಡಿದ್ದರು. 2021ರಲ್ಲೇ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಆಚರಿಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದರು. ಜೊತೆಗೆ ಕಿತ್ತೂರು ಉತ್ಸವಕ್ಕೆ 5 ಕೋಟಿ ರೂ. ಅನುದಾನ ನೀಡುವುದಾಗಿಯೂ ಘೋಷಣೆ ಮಾಡಿದ್ದರು. ಈಗಿನ ಸರ್ಕಾರ ಕೇವಲ 2 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈಜು ಬಾರದೇ ಯುವಕ ಕೆರೆಯಲ್ಲಿ ಮುಳುಗಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆನಂದ ಮಾಮನಿ ನಿಧನ- ಕಿತ್ತೂರು ಉತ್ಸವ ನಾಳೆಗೆ ಮುಂದೂಡಿಕೆ

    ಆನಂದ ಮಾಮನಿ ನಿಧನ- ಕಿತ್ತೂರು ಉತ್ಸವ ನಾಳೆಗೆ ಮುಂದೂಡಿಕೆ

    ಬೆಳಗಾವಿ: ಡೆಪ್ಯೂಟಿ ಸ್ಪೀಕರ್ (Deputy Speaker) ಆನಂದ ಮಾಮನಿ (Anand Mamani) ವಿಧಿವಶ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಮೂರು ದಿನಗಳ ನಡೆಯುವ ಐತಿಹಾಸಿಕ ಕಿತ್ತೂರು ಉತ್ಸವವನ್ನು (Kittur Utsav) ನಾಳೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ಬೆಳಗಾವಿ (Belagavi) ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಅ.23 ರಿಂದ 25ರವರೆಗೆ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಆಯೋಜನೆ ಮಾಡಲಾಗಿತ್ತು. ಆದರೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಇಂದು ನಡೆಯಬೇಕಿದ್ದ ಕಿತ್ತೂರು ಉತ್ಸವ ಹಾಗೂ ಇಂದಿನ ಕಾರ್ಯಕ್ರಮಗಳನ್ನು ನಾಳೆಗೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನ: ಆನಂದ ಮಾಮನಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿಯ ರಾಮಾಪುರ ಸೈಟ್ ಬಳಿಯ ತಾಲೂಕು ಕ್ರೀಡಾಂಗಣದಲ್ಲಿ ಕುಟುಂಬಸ್ಥರಿಗೆ ಹಾಗೂ ವಿಐಪಿಗಳಿಗೆ ಪ್ರತ್ಯೇಕ ಪೆಂಡಾಲ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯ ಆನಂದ ಮಾಮನಿ ಪಾರ್ಥಿವ ಶರೀರ ಸವದತ್ತಿ ತಲುಪಿದ್ದು, ರಾಮಾಪುರ ಸೈಟ್‍ನಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

    ಕುಟುಂಬಸ್ಥರಿಂದ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ ಅಂತಿಮ ದರ್ಶನ ಸ್ಥಳಕ್ಕೆ ಸ್ಥಳಾಂತರ ಮಾಡಿದರು. ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಂತಿಮ ದರ್ಶನದ ಬಳಿಕ ಸವದತ್ತಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಆನಂದ ಮಾಮನಿ ಚಂದ್ರಮಾ ಫಾರ್ಮಹೌಸ್‍ನಲ್ಲಿ ವೀರಶೈವ ಲಿಂಗಾಯತ ಧರ್ಮದ ವಿಧಿ-ವಿಧಾನದಂತೆ ಅಂತ್ಯಕ್ರಿಯೆ ನೆರವೇರಲಿದ್ದು, ತಾಲೂಕು ಕ್ರೀಡಾಂಗಣದತ್ತ ಆನಂದ ಮಾಮನಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ

    ಶಾಸಕ ಆನಂದ ಮಾಮನಿ ಮೊದಲ ಪತ್ನಿ ರೇಖಾ, ಎರಡನೇ ಪತ್ನಿ ರತ್ನಾ ಸವದತ್ತಿ ಪಟ್ಟಣದ ಆನಂದ ಮಾಮನಿ ಅವರ ನಿವಾಸಕ್ಕೆ ಆಗಮಿಸಿದರು. ಬೆಂಗಳೂರಿನಿಂದ ಸವದತ್ತಿಯ ರಾಮಾಪುರ ಸೈಟ್‍ನಲ್ಲಿರುವ ನಿವಾಸಕ್ಕೆ ಆಗಮಿಸಿದ್ದು, ಕಣ್ಣೀರಿಡುತ್ತಾ ಇಬ್ಬರು ಪತ್ನಿಯರು ಮನೆಯೊಳಗೆ ತೆರಳಿದ್ದರು. ಇದೇ ವೇಳೆ ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಬೆಡಸೂರಮಠದ ಅಜ್ಜಯ್ಯ ಸ್ವಾಮೀಜಿ ಸಹ ಆಗಮಿಸಿದ್ದಾರೆ. ಇದನ್ನೂ ಓದಿ: ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ನಿಧನ

    Live Tv
    [brid partner=56869869 player=32851 video=960834 autoplay=true]