Tag: Kittur Rani Chennamma School

  • ವಿದೇಶಿಗರ ಕ್ವಾರಂಟೈನ್- ವಸತಿ ಶಾಲೆಗೆ ರಾತ್ರೋರಾತ್ರಿ ಕಟ್ಟಿಗೆ ಬೇಲಿ ಹಾಕಿ ಮುಚ್ಚಿದ ಗ್ರಾಮಸ್ಥರು

    ವಿದೇಶಿಗರ ಕ್ವಾರಂಟೈನ್- ವಸತಿ ಶಾಲೆಗೆ ರಾತ್ರೋರಾತ್ರಿ ಕಟ್ಟಿಗೆ ಬೇಲಿ ಹಾಕಿ ಮುಚ್ಚಿದ ಗ್ರಾಮಸ್ಥರು

    ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಬಾಣವಾಡಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದೇಶಿಗರ ಕ್ವಾರಂಟೈನ್ ವಿಚಾರವಾಗಿ, ಮಠದ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

    ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಬೇಡ ಎಂದು ವಸತಿ ಶಾಲೆಗೆ ರಾತ್ರೋರಾತ್ರಿ ಕಟ್ಟಿಗೆ ಬೇಲಿ ಹಾಕಿ ಮುಚ್ಚಿ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದರು. ಇಂದು ಗ್ರಾಮಸ್ಥರ ಜೊತೆ ಜಂಟಿ ಸಭೆ ನಡೆಸಿದ ಅಧಿಕಾರಿಗಳು ಮತ್ತು ಪೊಲೀಸರು ಹಾಗೂ ವಸತಿ ಶಾಲೆ ಒಳಗೊಂಡಿರುವ ಮಠದ ಸಿಬ್ಬಂದಿಗಳು ಸಭೆ ನಡೆಸಿ, ಜನವಸತಿ ಪ್ರದೇಶವಾದ ಬಾಣವಾಡಿಯಲ್ಲಿ ಕ್ವಾರಂಟೈನ್ ಬೇಡ, ಪಕ್ಕದ ಗುಡೇಮಾರನಹಳ್ಳಿಯ ಜನನಿಬಿಡ ನಮ್ಮ ಮಠದ ಸಂಸ್ಥೆಯಾದ ಮಾರುತಿ ಶಾಲೆಯನ್ನು ಬೇಕಾದರೆ ಬಳಸಿಕೊಳ್ಳಿ ಎಂದು ಮಠದ ಮುಖ್ಯಸ್ಥರಾದ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದ್ದಾರೆ.

    ಸಭೆ ಬಳಿಕ ಕಟ್ಟಿಗೆ ಬೇಲಿ ತೆರವು ಮಾಡಿದ ಸ್ಥಳೀಯ ಪೊಲೀಸರು, ಕ್ವಾರಂಟೈನ್ ವಿಚಾರದಲ್ಲಿ ಆತಂಕಕ್ಕೆ ಒಳಗಾಗಿರುವ ಬಾಣವಾಡಿ ಗ್ರಾಮಸ್ಥರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಯಾವುದೇ ಕಾರಣಕ್ಕೂ ನಮ್ಮ ಗ್ರಾಮದಲ್ಲಿ ವಿದೇಶಿಗರ ಕ್ವಾರಂಟೈನ್ ಮಾಡಬೇಡಿ ಎಂದು ಬಾಣವಾಡಿ ಗ್ರಾಮದವರು ಮನವಿ ಮಾಡಿದ್ದರು. ಇಂದು ಆತಂಕಗೊಂಡು ಜನರು ವಸತಿ ಶಾಲೆಯ ಮುಂದೆ ಜಮಾಯಿಸಿದ ನೂರಾರು ಗ್ರಾಮಸ್ಥರು, ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಿ, ನಮ್ಮ ಮತ್ತೊಂದು ಶಾಲೆ ಇದೆ ಅಲ್ಲಿ ಅವಕಾಶ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ ಸಚ್ಚಿದಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ ಸಭೆ ನಿರ್ಧಾರ ಎಷ್ಟರಮಟ್ಟಿಗೆ ಜಾರಿಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

  • ಈ ವಸತಿ ಶಾಲೆಯಲ್ಲಿ ಮುಟ್ಟಾದ್ರೆ ಮಾತ್ರ ಸ್ನಾನಕ್ಕೆ ನೀರು – ಇಲ್ಲದಿದ್ರೆ ವಾರಕ್ಕೊಮ್ಮೆ ವಿದ್ಯಾರ್ಥಿನಿಯರ ಸ್ನಾನ

    ಈ ವಸತಿ ಶಾಲೆಯಲ್ಲಿ ಮುಟ್ಟಾದ್ರೆ ಮಾತ್ರ ಸ್ನಾನಕ್ಕೆ ನೀರು – ಇಲ್ಲದಿದ್ರೆ ವಾರಕ್ಕೊಮ್ಮೆ ವಿದ್ಯಾರ್ಥಿನಿಯರ ಸ್ನಾನ

    ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರದಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹೆಣ್ಣು ಮಕ್ಕಳಿಗೆ ಕೇವಲ ಮುಟ್ಟಾದ್ರೆ ಮಾತ್ರ ಪ್ರತಿದಿನ ಸ್ನಾನ, ಇಲ್ಲವಾದ್ರೆ ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿಯಿದೆ.

    300 ಮಕ್ಕಳಿರುವ ವಸತಿ ಶಾಲೆಗೆ ಪ್ರತಿದಿನ 3 ಟ್ಯಾಂಕರ್ ನೀರು ಪೂರೈಕೆ ಮಾಡಿಸ್ತಿದ್ದಾರೆ. ಆದ್ರೆ ಈ ನೀರು ಮಕ್ಕಳ ಮುಖ ತೊಳೆಯಲು ಸಾಕಾಗ್ತಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ತಾವರಗೇರಾದಿಂದ 2 ಕಿಲೋಮೀಟರ್ ದೂರದಲ್ಲಿದ್ದು, ನಿರ್ಜನ ಪ್ರದೇಶವಾಗಿದೆ.

    ಇಲ್ಲಿ ಓಡಾಡಲು ಸೂಕ್ತ ರಸ್ತೆಯೂ ಇಲ್ಲ. ಇನ್ನೂ ಇದೇ ಕ್ಯಾಂಪಸ್‍ ನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ಆರಂಭವಾಗಿದ್ದು, ಹೆಚ್ಚುವರಿಯಾಗಿ 50 ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ಹೀಗಾಗಿ ಶಾಲೆಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.