Tag: Kittur Rani Chennamma

  • ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಆಚರಣೆ

    ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಆಚರಣೆ

    – ಚೆನ್ಮಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಸೋಮಣ್ಣ

    ನವದೆಹಲಿ: ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ (Kittur Rani Chennamma) 201ನೇ ವಿಜಯೋತ್ಸವ ಹಾಗೂ ಜನ್ಮದಿನೋತ್ಸವವನ್ನು ಸಂಸತ್ ಆವರಣದಲ್ಲಿ ಆಚರಿಸಲಾಯಿತು. ಸಂಸತ್ (Parliament) ಆವರಣದ ಪ್ರೇರಣಾ ಸ್ಥಳದಲ್ಲಿರುವ ಚೆನ್ನಮ್ಮ ಪ್ರತಿಮೆಗೆ ತುಮಕೂರು ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಪುಷ್ಪನಮನ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸೋಮಣ್ಣ, ರಾಣಿ ಚೆನ್ನಮ್ಮನವರ ಪುತ್ಥಳಿಯನ್ನು ಸಂಸತ್ತಿನ ಆವರಣದಲ್ಲಿ 2007ರಲ್ಲಿ ಸ್ಥಾಪಿಸಲಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಬಲ ಮತ್ತು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರ ಸಹಕಾರದಿಂದ 200ನೇ ರಾಣಿ ಚೆನ್ನಮ್ಮನವರ ವಿಜಯೋತ್ಸವ ಮತ್ತು ಜನ್ಮದಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಅದೇ ರೀತಿ ಈ ವರ್ಷವೂ ಸಹ ರಾಣಿ ಚೆನ್ಮಮ್ಮನವರ 201ನೇ ವಿಜಯೋತ್ಸವ ಮತ್ತು ಜನ್ಮದಿನೋತ್ಸವ ಆಚರಣೆಯನ್ನು ಸಂಸತ್ತಿನ ಅವರಣದ ಪ್ರೇರಣಾ ಸ್ಥಳದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೆಟ್ಟ ಸಾಧನೆ ಬರೆದ ಕೊಹ್ಲಿ

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕದ ಸಂಸ್ಕೃತಿ, ಈ ದೇಶಕ್ಕೆ ಕೊಡುಗೆ ನೀಡಿದ ಕನ್ನಡದ ಮಹನೀಯರನ್ನು, ಸ್ವಾತಂತ್ರ‍್ಯ ಹೋರಾಟಗಾರರನ್ನು, ವೀರವನಿತೆಯರನ್ನು ನೆನಪಿಸುವ ಮತ್ತು ಅವರನ್ನು ಗೌರವಿಸುವ ಕೆಲಸ ಮಾಡುವಲ್ಲಿ ಸದಾ ಸನ್ನದ್ಧವಾಗಿದೆ. ಇದಕ್ಕೆ ಪೂರಕವಾಗಿಯೇ ನಾಳೆ ಸಿರಿಪೋರ್ಟ ಆಡಿಟೋರಿಯಂನಲ್ಲಿ ನಡೆಯಲಿರುವ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವೀರರಾಣಿ ಚೆನ್ಮಮ್ಮನವರ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ ಎಂದರು. ಇದನ್ನೂ ಓದಿ: ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ – ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ

    ಸ್ವಾತಂತ್ರ‍್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿಯಿಂದ ನಿರ್ವಹಿಸಬೇಕಾದ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಕಿತ್ತೂರು ಸಂಸ್ಥಾನದ ಕೋಟೆ ಕೊತ್ತಲೆಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದಿರುವುದನ್ನು ಸಾರ್ವಜನಿಕರು ಮನಗಂಡಿದ್ದು, ಈ ಬಗ್ಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ. ಬೈಲಹೊಂಗಲದಲ್ಲಿರುವ ರಾಣಿ ಚೆನ್ಮಮ್ಮನವರ ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು. ವೀರ ರಾಣಿ ಚೆನ್ಮಮ್ಮನವರ ಜೀವನ ಮತ್ತು ಸಾಧನೆ ಕುರಿತು ಭಾರತೀಯ ಎಲ್ಲಾ ಭಾಷೆಗಳಲ್ಲೂ ಪುಸ್ತಕವನ್ನು ಹೊರತರಬೇಕೆಂದು ಮನವಿ ಮಾಡಿದೆ ಎಂದು ನುಡಿದರು. ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಚುರುಕು – ನದಿ ಪಾತ್ರದ ಜನರಿಗೆ ಅಲರ್ಟ್

    ಈ ಸಂದರ್ಭದಲ್ಲಿ ಬೆಳಗಾವಿ ಸಂಸದರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯ ಸಭಾ ಸದಸ್ಯೆ ಡಾ. ಸುಧಾಮೂರ್ತಿಯವರು, ಜಯಮೃತ್ಯುಂಜಯ ಸ್ವಾಮಿಜೀ, ಶ್ರೀ ವಚನಾನಂದ ಸ್ವಾಮಿಗಳು, ಜನಪ್ರತಿನಿಧಿಗಳು, ದೆಹಲಿ ಕನ್ನಡ ಸಂಘದ ಅಧ್ಯಕ್ಷ ಸಿಎಂ ನಾಗರಾಜ್ ಹಾಗೂ ದೆಹಲಿ ಕನ್ನಡಿಗರು ಉಪಸ್ಥಿತರಿದ್ದರು. ಇದನ್ನೂ ಓದಿ: ನಮ್ದೇನಿದ್ದರೂ 2028ಕ್ಕೆ ಸಿಎಂ ಕ್ಲೈಮ್‌, ಯತೀಂದ್ರ ಹೇಳಿಕೆ ಅದು ವೈಯಕ್ತಿಕ: ಸತೀಶ್‌ ಜಾರಕಿಹೊಳಿ

  • ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ – ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ

    ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ – ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ

    ನವದೆಹಲಿ: ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ (Kittur Rani Chennamma) ನಡೆಸಿದ ಹೋರಾಟದ ವಿಜಯೋತ್ಸವಕ್ಕೆ 200 ವರ್ಷ ಪೂರ್ಣಗೊಂಡ ಹಿನ್ನೆಲೆ ಸಂಸತ್ ಆವರಣದಲ್ಲಿರುವ ರಾಣಿ ಚೆನ್ನಮ್ಮ ಪ್ರತಿಮೆಗೆ ಲೋಕಸಭೆ ಸ್ಪೀಕರ್ ಓಂಬಿರ್ಲಾ (Om Birla) ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು.

    ಐತಿಹಾಸಿಕ ದಿನದ ಹಿನ್ನೆಲೆ ಸಂಸತ್ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ದೆಹಲಿ ಕನ್ನಡಿಗರು ಭಾಗಿಯಾಗಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.ಇದನ್ನೂ ಓದಿ: ವಯನಾಡ್ ಉಪಚುನಾವಣೆ | ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ

    ಕಾರ್ಯಕ್ರಮದಲ್ಲಿ ಮಾತನಾಡಿದ ವಿ.ಸೋಮಣ್ಣ (V.Sommanna), ಈ ದೇಶದ ಸ್ವತಂತ್ರ ಪೂರ್ವ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಬಂಡಾಯ ಸಾರಿದ ಮೊದಲ ಧೀರ ಮಹಿಳೆ ಚೆನ್ನಮ್ಮ, ಬ್ರಿಟಿಷರನ್ನು ಸೋಲಿಸಿದ ದಿನಕ್ಕೆ 200 ವರ್ಷಗಳಾಗಿದೆ. ಬ್ರಿಟಿಷರ ವಿರುದ್ಧ ಹೋರಾಟದ ಮೂಲಕ ದೇಶದಲ್ಲಿ ಸಂಚಲನ ಮೂಡಿಸಿ, ಸ್ವಾತಂತ್ರ‍್ಯ ಹೋರಾಟಕ್ಕೆ ಪ್ರೇರಣೆ ನೀಡಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರ ಇತಿಹಾಸವನ್ನು ದೇಶಕ್ಕೆ ಸಮರ್ಪಣೆ ಮಾಡುವ ಪ್ರಯತ್ನವೂ ಮಾಡಿದೆ ಎಂದು ಹೇಳಿದರು.

    ಜಯಮೃತಂಜ್ಯಯ ಸ್ವಾಮೀಜಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಬೆಳ್ಳಿ ಚುಕ್ಕಿ, ಮೊದಲ ಬಾರಿಗೆ ಸಂಸತ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷಗೊಳಿಸಿದೆ. ಈ ವರ್ಷ ಮಾಡಿದರೆ ಸಾಲದು ಪ್ರತಿ ವರ್ಷವೂ ಈ ಕಾರ್ಯಕ್ರಮ ಸಂಸತ್‌ನಲ್ಲಿ ನಡೆಯಬೇಕು. ಈ ಮೂಲಕ ಉತ್ತರ ಭಾರತದ ಜನರಿಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರೀತಿಯಲ್ಲಿ ರಾಣಿ ಚೆನ್ನಮ್ಮ ಅವರ ಶೌರ್ಯ ತಿಳಿಯಬೇಕಿದೆ ಎಂದರು.

    ಪರಿಷತ್ ಸದಸ್ಯ ಅರವಿಂದ್ ಬೆಲ್ಲದ್ (Arvind Bellad) ಮಾತನಾಡಿ, ಎರಡು ನೂರು ವರ್ಷಗಳ ಹಿಂದೆ ಇದೇ ದಿನ ಠಾಕ್ರೆಯನ್ನು ಚೆನ್ನಮ್ಮ ಸೋಲಿಸಿ ಭಾರತ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿದರು. ಚೆನ್ನಮ್ಮನ ಗಂಡ ತೀರಿದ ಬಳಿಕ ಮಗುವನ್ನು ದತ್ತು ಪಡೆಯಲು ಸಾಧ್ಯವಿಲ್ಲ ಎಂದು ಬ್ರಿಟಿಷರು ಹೇಳಿದಾಗ ಅವರು ವಿರುದ್ಧ ಯುದ್ಧ ಸಾರಿದರು. ಇಂದು ಸಂಸತ್‌ನಲ್ಲಿ ಸನ್ಮಾನ ಮಾಡಲು ಅವಕಾಶ ನೀಡಿರುವ ಕಾರಣ ನಾನು ಸ್ಪೀಕರ್ ಓಂಬಿರ್ಲಾ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

    ಕಾರ್ಯಕ್ರಮದಲ್ಲಿ ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಭಾಗಿಯಾಗಿದ್ದರು.ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ- ಅಕ್ರಮ ಕಟ್ಟಡ ಮಾಲಿಕರಿಗೆ ಶಾಕ್ ನೀಡಿದ ಅಧಿಕಾರಿಗಳು

  • ಝಾನ್ಸಿ ರಾಣಿಗೂ ಮೊದಲೇ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಸತ್ಯ ಪ್ರಕಟಣೆ ಅಗತ್ಯ: ಬೊಮ್ಮಾಯಿ

    ಝಾನ್ಸಿ ರಾಣಿಗೂ ಮೊದಲೇ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಸತ್ಯ ಪ್ರಕಟಣೆ ಅಗತ್ಯ: ಬೊಮ್ಮಾಯಿ

    ಬೆಳಗಾವಿ: ಝಾನ್ಸಿ ರಾಣಿ ಲಕ್ಷ್ಮೀಬಾಯಿ (Jhansi Rani Lakshmi Bai) 1857ರಲ್ಲಿ ಬ್ರಿಟಿಷರ (British) ವಿರುದ್ಧ ಹೋರಾಟ ಮಾಡಿದ್ದಾರೆ. ಆದರೆ ವೀರರಾಣಿ ಕಿತ್ತೂರು ಚನ್ನಮ್ಮ (Kittur Rani Chennamma) ಅದಕ್ಕೂ ಮುನ್ನವೇ 1824ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಈ ಸತ್ಯವನ್ನು ಪ್ರಕಟಣೆ ಮಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೂಡ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ಕಿತ್ತೂರು (Kittur) ರಾಜ್ಯಮಟ್ಟದ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಿನ್ನೆಯಿಂದ ಕಿತ್ತೂರು ಉತ್ಸವ ಚಾಲನೆ ನೀಡಬೇಕಿತ್ತು. ನಮ್ಮೆಲ್ಲರ ದುರ್ದೈವ ಸಹೋದರ ಆನಂದ ಮಾಮನಿ ನಿಧನದ ಹಿನ್ನೆಲೆ ಒಂದು ದಿನ ವಿಳಂಬವಾಗಿ ಇಂದು ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.

    1824 ಅಕ್ಟೋಬರ್ 21 ಭಾರತ ಎಂದೂ ಮರೆಯದ ದಿನವಾಗಿದೆ. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿದ ಮಹಿಳೆ ವೀರರಾಣಿ ಕಿತ್ತೂರು ಚನ್ನಮ್ಮ. ಬ್ರಿಟಿಷರ ವಿರುದ್ಧ ಧ್ವನಿ ಎತ್ತುವ ಧೈರ್ಯ ಆ ಸಮಯದಲ್ಲಿ ಯಾರಿಗೂ ಇರಲಿಲ್ಲ. ಕಿತ್ತೂರು ಚನ್ನಮ್ಮ ಬರೀ ಧ್ವನಿ ಅಷ್ಟೆ ಅಲ್ಲ, ತಲೆ ಎತ್ತಿ ಹೋರಾಡಿದ್ದರು. ಇದನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕು ಎಂದರು.

    ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಮೊದಲನೇ ಯುದ್ಧದಲ್ಲಿ ಜಯ ಸಾಧಿಸಿ ವಿಜಯೋತ್ಸವ ಮಾಡಿದ್ದರು. ಅದರ ಸವಿನೆನಪಿಗಾಗಿ ಇವತ್ತು ಕಿತ್ತೂರು ಉತ್ಸವ ಮಾಡಲಾಗುತ್ತಿದೆ. ಕಿತ್ತೂರು ಚನ್ನಮ್ಮ ಎಂದರೆ ಮೈಯಲ್ಲಿರುವ ಕೂದಲು ಎದ್ದು ನಿಲ್ಲುತ್ತದೆ, ಅದು ಚನ್ನಮ್ಮಳ ಶಕ್ತಿ. ಸಮಸ್ಯೆ, ಸವಾಲುಗಳನ್ನು ಎದುರಿಸಿ ಹಿಮ್ಮೆಟ್ಟಿ ಜಯ ಸಾಧಿಸಿ ಕೆಲಸ ಮಾಡುವುದು ನಮ್ಮ ಧರ್ಮವಾಗಿದೆ. ಅದರಿಂದ ಹಿಂದೆ ಸರಿದರೆ ಅದು ಸಾರ್ಥಕತೆ ಆಗಲ್ಲ. ಬಾಹ್ಯವಾಗಿ, ಆಂತರಿಕವಾಗಿ ದೇಶದ ಅಖಂಡತೆ ಕಾಪಾಡುವುದು ಬಹಳ ಮುಖ್ಯವಾಗಿದೆ. ಸುದೈವವಾಗಿ ನಮ್ಮ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಇದ್ದಾರೆ. ಉಗ್ರವಾದ ದಮನ ಮಾಡಿದ್ದಾರೆ. ಅಮೆರಿಕ, ಯೂರೋಪ್ ಎಲ್ಲಾ ದೇಶಗಳಲ್ಲಿ ಆರ್ಥಿಕ ಕಂಟಕ ಬಂದಿದೆ, ಆದರೆ ಭಾರತಕ್ಕೆ ಬಂದಿಲ್ಲ. ನರೇಂದ್ರ ಮೋದಿ ಆಡಳಿತದಲ್ಲಿ ಕಿತ್ತೂರು ರಾಣಿ ಚನ್ನಮ್ಮ ದೈರ್ಯ, ಮುಂದಾಲೋಚನೆ ಆಡಳಿತ ಇದೆ. ಕಿತ್ತೂರು ಬಗ್ಗೆ ಎಷ್ಟು ಅಭಿಮಾನ ಪಡುತ್ತಿದ್ದೇವೆಯೋ ಅಷ್ಟೇ ಅಭಿವೃದ್ಧಿಯ ಅವಶ್ಯಕವಿದೆ ಎಂದರು.

    ಈ ಭಾಗದ ನೀರಾವರಿ ಯೋಜನೆಗೆ 580 ಕೋಟಿ ರೂ. ಪಡೆದಿದ್ದಾರೆ. ಎಲ್ಲಾ ಊರಿಗೆ ಕುಡಿಯುವ ನೀರು ಪೂರೈಕೆಗೂ ಪ್ರಧಾನಿಯವರ ಜಲಜೀವನ್ ಮಿಷನ್ ಯೋಜನೆ ಅನುಕೂಲವಾಗಿದೆ. ಕಿತ್ತೂರು, ಬೈಲಹೊಂಗಲ, ಖಾನಾಪುರ, ಸವದತ್ತಿ ಸೇರಿ 980 ಕೋಟಿ ರೂ. ನೀಡಿದ್ದೇವೆ ಎಂದು ತಿಳಿಸಿದರು.

    ಚನ್ನಮ್ಮ ಅರಮನೆ ನಿರ್ಮಾಣಕ್ಕೆ ನಮ್ಮ ನಾಯಕ ಬಿಎಸ್ ಯಡಿಯೂರಪ್ಪ 50 ಕೋಟಿ ರೂ. ನೀಡಿದ್ದರು. ನಾವು ಈಗ ಅದನ್ನು 115 ಕೋಟಿ ರೂ. ಮಾಡಿದ್ದೇವೆ. ಭೂಸ್ವಾಧೀನಕ್ಕೆ ಎಷ್ಟು ಖರ್ಚು ಬರುತ್ತೋ ಅದನ್ನು ಕೊಟ್ಟು ಅರಮನೆಯ ಪಕ್ಕದಲ್ಲೇ ಕೋಟೆ ನಿರ್ಮಾಣ ಮಾಡುತ್ತೇವೆ. ಮೂಲ ಚನ್ನಮ್ಮ ಕೋಟೆ ಅಭಿವೃದ್ಧಿಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 27 ಕೋಟಿ ರೂ. ನೀಡಲಾಗಿದೆ. ಕಿತ್ತೂರು ಬಳಿಯ ಕೆಐಎಡಿಬಿ ಯೋಜನೆಯಲ್ಲಿ 1 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದೇವೆ. ಅಲ್ಲಿ ಕನಿಷ್ಟ 50 ಸಾವಿರ ಯುವಕರಿಗೆ ಕೆಲಸ ಸಿಗಬೇಕೆಂಬ ಅಭಿಲಾಷೆ ನಮ್ಮದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

    ಧಾರವಾಡ – ಕಿತ್ತೂರು – ಬೆಳಗಾವಿ ರೈಲು ಕಾಮಗಾರಿಗೆ ಕೇಂದ್ರ ಒಪ್ಪಿಗೆ ಕೊಟ್ಟಿದೆ. ಭೂಸ್ವಾಧೀನ ಮಾಡಿ ಆದಷ್ಟು ಬೇಗ ಮಾಡುತ್ತೇವೆ ಎಂಬ ಭರವಸೆ ಕೊಡುತ್ತೇನೆ. ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿ ಸಂಕಲ್ಪವನ್ನು ನಮ್ಮ ಸರ್ಕಾರ ಮಾಡಿದೆ. ನಿಮ್ಮೆಲ್ಲರ ಆಶೀರ್ವಾದ, ಚನ್ನಮ್ಮ ಆಶೀರ್ವಾದದಿಂದ 2 ನೀರಾವರಿ ಯೋಜನೆಗೆ ಅನುಮತಿ ಪಡೆಯಬೇಕಿದೆ. ಕೃಷ್ಣ ಮೇಲ್ದಂಡೆ ಸ್ಟೇಜ್ 3 ಯೋಜನೆಗೆ ಅನುಮತಿ ನೀಡಿ, ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಕ್ರಮಕೈಗೊಳ್ಳಲಾಗಿದೆ. ಆದಷ್ಟು ಬೇಗ ಕಳಸಾ ಬಂಡೂರಿ ಯೋಜನೆಗೂ ಚಾಲನೆ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಸತತ 2ನೇ ಸಲ ಉತ್ಸವಕ್ಕೆ ಬಂದಿರುವ ಸಿಎಂ ನಾನೇ. ಈ ಹಿಂದೆ ಮಾಜಿ ಸಿಎಂ ಬಂಗಾರಪ್ಪ ಕಿತ್ತೂರು ಉತ್ಸವವನ್ನು ಆರಂಭ ಮಾಡಿದ್ದರು. ಆದರೆ, ಇದಾದ ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರು. ನಂತರ ಯಾರೊಬ್ಬ ಸಿಎಂ ಕೂಡಾ ಕಿತ್ತೂರು ಉತ್ಸವಕ್ಕೆ ಬರಲು ಹಿಂದೇಟು ಹಾಕಿದ್ದಾರೆ. ಕಿತ್ತೂರು ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆ ಇದೆ. ಚಾಮರಾಜನಗರಕ್ಕೆ ಹೋದರೂ ಸಿಎಂ ಪದವಿ ಹೋಗುತ್ತದೆ ಎನ್ನುತ್ತಾರಾದರೂ ಅಲ್ಲಿಗೆ ಹೋಗಿ ಬಂದಿದ್ದೇನೆ. ಎಂತಹ ಮೂಢನಂಬಿಕೆ ನಮ್ಮಲ್ಲಿ ಇದೆ! ನಾನು 2ನೇ ಸಲ ಕಿತ್ತೂರಿಗೆ ಬಂದು, ನಿಮ್ಮ ಮುಂದೆ ನಿಂತಿದ್ದೇನೆ. ಪುಣ್ಯಾತ್ಮ ಒಬ್ಬ ಕಳೆದ ವರ್ಷ ಉತ್ಸವಕ್ಕೆ ಹೋಗಬೇಡಿ ಅಂತ ಹೇಳಿದ್ರು. ಆದರೆ, ನನಗೆ ಅಧಿಕಾರ ಮುಖ್ಯ ಅಲ್ಲ, ರಾಣಿ ಚನ್ನಮ್ಮಳಿಗೆ ಗೌರವ ಸಲ್ಲಿಸುವುದು ಮುಖ್ಯ ಎಂದು ನಾನು ಉತ್ಸವಕ್ಕೆ ಬಂದಿದ್ದೇನೆ ಎಂದು ನುಡಿದರು. ಇದನ್ನೂ ಓದಿ: ಬ್ರಿಟಿಷರು ನಮ್ಮನ್ನು ಇನ್ನೂರು ವರ್ಷಗಳ ಕಾಲ ಆಳಿದರು ಈಗ ಚಕ್ರ ತಿರುಗಿದೆ: ಬೊಮ್ಮಾಯಿ

    ಸುವರ್ಣ ಸೌಧದ ಮುಂಭಾಗದಲ್ಲಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ನವೆಂಬರ್ ತಿಂಗಳಲ್ಲಿ ಬಂದು ನಾನೇ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ಮಾಡುತ್ತೇನೆ. ಬೈಲಹೊಂಗಲದ ರಾಣಿ ಚನ್ನಮ್ಮ ಸಮಾಧಿಗೆ 2 ಕೋಟಿ ರೂ. ಹಣ ಬಿಡುಗಡೆ ಹಾಗೂ ರಾಣಿ ಬೆಳವಡಿ ಮಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದರು.

    ಇದಕ್ಕೂ ಮೊದಲು ಕಿತ್ತೂರು ಪಟ್ಟಣದ ಕೋಟೆ ಆವರಣದಲ್ಲಿ ಹಮ್ಮಿಕೊಂಡ 2022ರ ರಾಜ್ಯಮಟ್ಟದ ಕಿತ್ತೂರು ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಕಿತ್ತೂರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಕಿತ್ತೂರು ಬಿಜೆಪಿ ಕಾರ್ಯಾಲಯ ಉದ್ಘಾಟನೆ ಮಾಡಿದರು. ಬಳಿಕ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಕಿತ್ತೂರು ಆಡಳಿತ ಸೌಧ ಉದ್ಘಾಟನೆ ಮಾಡಿದರು.

    ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕಿತ್ತೂರು ಶಾಸಕರಾದ ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕೌಜಲಗಿ, ದುರ್ಯೋಧನ ಐಹೊಳೆ, ಎಂಎಲ್‌ಸಿ ಸಾಬಣ್ಣ ತಳವಾರ ಹಾಗೂ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಉಪಸ್ಥಿತರಿದ್ದರು. ಇದನ್ನೂ ಓದಿ: ವರ್ಷಕ್ಕೊಮ್ಮೆ ಪೂಜೆ ಸಲ್ಲುವ ಬೆಟ್ಟದ ತುದಿಯ ದೇವೀರಮ್ಮನ ನೋಡಲು ಹರಿದು ಬಂದ ಭಕ್ತಸಾಗರ

    Live Tv
    [brid partner=56869869 player=32851 video=960834 autoplay=true]

  • ಕಿತ್ತೂರು ಉತ್ಸವ ಆಮಂತ್ರಣ ಪತ್ರಿಕೆಯಲ್ಲಿ ರಾಯಣ್ಣನ ಭಾವಚಿತ್ರ ಮಾಯ- ಅಭಿಮಾನಿಗಳು ಗರಂ

    ಕಿತ್ತೂರು ಉತ್ಸವ ಆಮಂತ್ರಣ ಪತ್ರಿಕೆಯಲ್ಲಿ ರಾಯಣ್ಣನ ಭಾವಚಿತ್ರ ಮಾಯ- ಅಭಿಮಾನಿಗಳು ಗರಂ

    ಬೆಳಗಾವಿ: ಕಿತ್ತೂರು ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ (Sangolli Rayanna) ಭಾವಚಿತ್ರವೇ ಮಾಯವಾಗಿದ್ದು, ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ರಾಯಣ್ಣನ ಫೋಟೋ (Photo) ಹಾಕದಿದ್ದಕ್ಕೆ ರಾಯಣ್ಣನ ಅಭಿಮಾನಿಗಳು ಅಸಮಾಧಾನ ಹೊರಹಾಕಿದರು.

    ಬೆಳಗಾವಿ ಜಿಲ್ಲೆಯ ಕಿತ್ತೂರು ವೀರರಾಣಿ ಚೆನ್ನಮ್ಮನ (Kittur Rani Chennamma) ಉತ್ಸವವನ್ನು ಇದೇ ಮೊದಲ ಬಾರಿಗೆ ಸರ್ಕಾರ ರಾಜ್ಯಮಟ್ಟದ ಕಿತ್ತೂರು ಉತ್ಸವ ಆಚರಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭರದ ಸಿದ್ಧತೆ ಮಾಡಿಕೊಂಡಿದೆ. ಆದರೆ, ರಾಜ್ಯಮಟ್ಟದ ಕಿತ್ತೂರು ಉತ್ಸವ ಆಮಂತ್ರಣ ಪತ್ರಿಕೆಯಲ್ಲಿ ಸಾಲು ಸಾಲು ಅದ್ವಾನ ಆರೋಪ ಕೇಳಿಬಂದಿದೆ.

    ಕಿತ್ತೂರು ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬಲಗೈ ಬಂಟ ರಾಯಣ್ಣನ ಫೋಟೋ ಹಾಕದಿದ್ದಕ್ಕೆ ಬೆಳಗಾವಿ (Belagavi) ಜಿಲ್ಲಾಡಳಿತದ ವಿರುದ್ಧ ರಾಯಣ್ಣನ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಅ. 23 ರಿಂದ 3 ದಿನಗಳ ಕಾಲ ರಾಜ್ಯಮಟ್ಟದ ಕಿತ್ತೂರು ಉತ್ಸವ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ಪರಿವರ್ತನೆಗೊಂಡಿದೆ. ಆದರೆ, ಆಮಂತ್ರಣ ಪತ್ರಿಕೆಯಲ್ಲಿ ಸ್ಥಳೀಯ ಶಾಸಕ ಮಹಾಂತೇಶ್ ದೊಡ್ಡಗೌಡರ ಪತ್ನಿಯ ಹೆಸರು ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದಾರೆ.

    ಮಹಿಳಾ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಗೌರವ ಉಪಸ್ಥಿತಿಯಾಗಿ ಶಾಸಕ ಮಹಾಂತೇಶ್ ದೊಡ್ಡಗೌಡರ ಪತ್ನಿ ಮಂಜುಳಾ ದೊಡ್ಡಗೌಡರಿಗೆ ಸ್ಥಾನ ನೀಡಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಪಂಚಮಸಾಲಿ ಎರಡೂ ಪೀಠಗಳ ಸ್ವಾಮೀಜಿಗಳ ಹೆಸರು ಹಾಕದಿದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಖರ್ಗೆಗೆ ಭರ್ಜರಿ ಗೆಲುವು – 24 ವರ್ಷಗಳ ಬಳಿಕ ಗಾಂಧೀಯೇತರ ವ್ಯಕ್ತಿಗೆ ಕಾಂಗ್ರೆಸ್‌ ಪಟ್ಟ

    ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದು ಶಾಸಕರ ಹೆಸರು ಓಕೆ, ಅವರ ಪತ್ನಿಯ ಹೆಸರು ಆಹ್ವಾನ ಪತ್ರಿಕೆಯಲ್ಲಿ ಏಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಮ್ಮನನ್ನು ಜೈಲಿಗೆ ಹಾಕಿ ಎಂದ ಪುಟ್ಟ ಕಂದಮ್ಮನಿಗೆ ಸಚಿವರಿಂದ ದೀಪಾವಳಿ ಗಿಫ್ಟ್

    Live Tv
    [brid partner=56869869 player=32851 video=960834 autoplay=true]

  • ಸುವರ್ಣಸೌಧದಲ್ಲಿ ಈ ವರ್ಷ ಚೆನ್ನಮ್ಮ, ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ- ಬೊಮ್ಮಾಯಿ

    ಸುವರ್ಣಸೌಧದಲ್ಲಿ ಈ ವರ್ಷ ಚೆನ್ನಮ್ಮ, ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ- ಬೊಮ್ಮಾಯಿ

    ಬೆಂಗಳೂರು: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಇದೇ ವರ್ಷ ಬೆಳಗಾವಿ ಸುವರ್ಣಸೌಧದಲ್ಲಿ ರಾಣಿ ಚೆನ್ನಮ್ಮ (Kittur Rani Chennamma) ಹಾಗೂ ಸಂಗೊಳ್ಳಿ ರಾಯಣ್ಣ (Sangolli Rayanna) ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ (Tourism Department) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ (kannada and culture department) ವತಿಯಿಂದ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ ಆಯೋಜಿಸಿದ್ದ ಕಿತ್ತೂರು ಚೆನ್ನಮ್ಮಾಜಿ ವಿಜಯ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಇದನ್ನೂ ಓದಿ:  ಸಮಾವೇಶಕ್ಕೂ ಮುನ್ನವೇ ದೇವರ ಮೊರೆ ಹೋದ ಕಾಂಗ್ರೆಸ್‌ ನಾಯಕರು- ಬಳ್ಳಾರಿಯಲ್ಲಿ ಹೋಮ

    ಕಿತ್ತೂರು ಉತ್ಸವ ಪ್ರಾರಂಭವಾಗಿ 25-30 ವರ್ಷ ಕಳೆದಿದೆ. ಮಧ್ಯೆ-ಮಧ್ಯೆ ಕುಂಟುತ್ತಾ ಇದ್ದ ಉತ್ಸವಕ್ಕೆ ನಮ್ಮ ಸರ್ಕಾರ ಅಧಿಕೃತ ಆದೇಶದ ಮೂಲಕ ರಾಜ್ಯ ಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಣೆ ಮಾಡುತ್ತಿದೆ. ಹಿಂದೆ ತಾವು ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಅನುದಾನ ನೀಡಿ 3 ದಿನಗಳ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ್ದನ್ನು ಸ್ಮರಿಸಿದ ಅವರು, ಅಂದು ಜ್ಯೋತಿ ಕಿತ್ತೂರಿನಿಂದ ಬೆಂಗಳೂರಿಗೆ (Bengaluru) ಚೆನ್ನಮ್ಮಳ ಸಂದೇಶ ಹೊತ್ತು ಬರುತ್ತಿತ್ತು. ಈಗ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಕಿತ್ತೂರು ಸಂಸ್ಥಾನದ ರಾಜಧಾನಿ ಕಿತ್ತೂರಿಗೆ ಜ್ಯೋತಿ ಯಾತ್ರೆ ಬೆಳೆಸಿದೆ ಎಂದು ತಿಳಿಸಿದರು.

    ಸ್ವಾತಂತ್ರ‍್ಯ ಹೋರಾಟದ ಮೊದಲ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಎಂಬುದಾಗಿ ನಮ್ಮ ಕರ್ನಾಟಕ ವಿಶ್ವವಿದ್ಯಾಲಯ ಗೆಜೆಟಿಯರ್‌ನಲ್ಲಿ ಪ್ರಕಟಗೊಂಡಿದೆ. ಇದನ್ನು ರಾಷ್ಟ್ರೀಯ ದಾಖಲೆಗಳ ಪಟ್ಟಿಗೂ ನೋಂದಣಿ ಮಾಡಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಶುರುವಾಯ್ತು ಮತ್ತೊಂದು ಧರ್ಮ ದಂಗಲ್ – ಮದರಸಾ ಬ್ಯಾನ್‍ಗೆ ಹಿಂದೂ ಸಂಘಟನೆಗಳಿಂದ ಒತ್ತಾಯ

    ಕಿತ್ತೂರಿನಲ್ಲಿ ಶಿಥಿಲಗೊಂಡಿರುವ ಪ್ರಸ್ತುತ ಅರಮನೆಯನ್ನು ಗಟ್ಟಿಗೊಳಿಸಿ, ಪಕ್ಕದಲ್ಲೇ ಹೊಸ ಅರಮನೆಯನ್ನೂ ಕಟ್ಟಿಸಲು ತೀರ್ಮಾನ ಮಾಡಲಾಗಿದೆ. ಇದರ ಜೊತೆಗೆ ಕಿತ್ತೂರನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೈಲಹೊಂಗಲ, ಸಂಗೊಳ್ಳಿ ಸೇರಿದಂತೆ ಕಿತ್ತೂರು ಸಂಸ್ಥಾನದ ಪ್ರಾಚೀನ ಕುರುಹುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

    ಈಗಾಗಲೇ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆ ಪ್ರಾರಂಭ ಮಾಡಿದ್ದೇವೆ. ಮುಂದಿನ ತಿಂಗಳು ಸೈನಿಕ ಶಾಲೆ ಉದ್ಘಾಟನೆ ಮಾಡುತ್ತೇವೆ. ಇದರೊಂದಿಗೆ ರಾಯಣ್ಣನನ್ನು ನೇಣುಗಂಬಕ್ಕೆ ಹಾಕಿದ ನಂದಗಡ ಸಮಾಧಿ ಸ್ಥಳವನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಫೋಟೋ ಕಡ್ಡಾಯಗೊಳಿಸಿ – ಹಣಬರ ಯಾದವ ಸಮಾಜದಿಂದ ಬೈಕ್ ರ‍್ಯಾಲಿ

    ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಫೋಟೋ ಕಡ್ಡಾಯಗೊಳಿಸಿ – ಹಣಬರ ಯಾದವ ಸಮಾಜದಿಂದ ಬೈಕ್ ರ‍್ಯಾಲಿ

    ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಅಮಟೂರು ಬಾಳಪ್ಪನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಫೋಟೋ ಕಡ್ಡಾಯವಾಗಿ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಣಬರ ಯಾದವ ಸಂಘದ ನೇತೃತ್ವದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು.

    75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಜಾದಿ ಕ ಅಮೃತ್ ಮಹೋತ್ಸವ್ ಆಚರಿಸಲಾಗುತ್ತಿದೆ. ಆದರೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಮಟೂರು ಬಾಳಪ್ಪರ ಇತಿಹಾಸವನ್ನ ಮರೆತಿದ್ದಾರೆ. ಹೀಗಾಗಿ ಸರ್ಕಾರದಿಂದ ಅಮಟೂರು ಬಾಳಪ್ಪನ ಜಯಂತಿ ಆಚರಣೆ ಮಾಡಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಫೋಟೋ ಕಡ್ಡಾಯವಾಗಿ ಅಳವಡಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯಾದವ ಸಂಘದ ನೇತೃತ್ವದಲ್ಲಿ ಅಮಟೂರಿನಿಂದ ಬೆಳಗಾವಿಯವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಇದನ್ನೂ ಓದಿ: 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ 75 ಮೀ. ತಿರಂಗಾದೊಂದಿಗೆ 75 ಕಿ.ಮೀ ರ‍್ಯಾಲಿ

    ರ‍್ಯಾಲಿಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಬೈಕ್ ಸವಾರರು ಪಾಲ್ಗೊಂಡಿದ್ದರು. ನಂತರ ಬಸವನ ಕುಡಚಿಯ ಸಭಾ ಭವನದಲ್ಲಿ ಸಮಾವೇಶ ನಡೆಸಿದರು. ಇದೇ ವೇಳೆ ನಾಗರಾಜ್ ಹಣಬರ ಅಂತೂರು ಬಾಳಪ್ಪ ಅವರ ಬಗ್ಗೆ ರಚಿಸಿದ ಆಲ್ಬಮ್ ಸಾಂಗ್ ಸಮಾಜದ ಮುಖಂಡರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.  ಇದನ್ನೂ ಓದಿ: 18ರ ಯುವತಿ ಆರ್ಯ ವಾಲ್ವೇಕರ್‌ಗೆ ಮಿಸ್ ಇಂಡಿಯಾ USA-2022 ಕಿರೀಟ; ಈಕೆ ಯಾರು ಗೊತ್ತಾ?

    ನಾಗರಾಜ ಹಣಬರ, ಪ್ರಶಾಂತ ಕೌಲಗಿ, ಸಂತೋಷ್ ಕೌತ್, ನಾಗಪ್ಪ ಕಳಸನ್ನವರ್, ಬಸವರಾಜ್ ಸಂತ್ರೆ ಸೇರಿದಂತೆ ಸಮಾಜದದ ಅನೇಕ ಮುಖಂಡರು ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಿತ್ತೂರು ರಾಣಿ ಚೆನ್ನಮ್ಮಗೆ ಅಪಮಾನ ಮಾಡಿದ ಎನ್‍ಸಿಪಿ ಕಾರ್ಯಕರ್ತರು

    ಕಿತ್ತೂರು ರಾಣಿ ಚೆನ್ನಮ್ಮಗೆ ಅಪಮಾನ ಮಾಡಿದ ಎನ್‍ಸಿಪಿ ಕಾರ್ಯಕರ್ತರು

    ಬೆಳಗಾವಿ: ಎನ್‍ಸಿಪಿ ಕಾರ್ಯಕರ್ತರು ಕಿತ್ತೂರು ರಾಣಿ ಚೆನ್ನಮ್ಮಗೆ ಅಪಮಾನ ಮಾಡಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಇದೀಗ ಈ ಘಟನೆ ಚೆನ್ನಮ್ಮ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಬೆಳಗಾವಿ ಪ್ರವಾಸದಲ್ಲಿರುವ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಚೆನ್ನಮ್ಮ ವೃತ್ತದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ್ದ ಎನ್‍ಸಿಪಿ ನಾಯಕ ಶರದ್ ಪವಾರ್‌ಗೆ ಬೃಹದಾಕಾರದ ಹೂವಿನ ಹಾರ ತಂದು ಪಟಾಕಿ, ಸಿಡಿಮದ್ದು ಸಿಡಿಸಿ ಅದ್ಧೂರಿ ಸ್ವಾಗತ ಕೊರಲಾಯಿತು. ಇದನ್ನೂ ಓದಿ: 2-3 ದಿನದಲ್ಲಿ ಸಂಪುಟ ವಿಸ್ತರಣೆ : ಸಿಎಂ ಬೊಮ್ಮಾಯಿ

    ಶರದ್ ಪವಾರ್ ಎದುರು ಬೃಹದಾಕಾರದ ಹಾರ ನಿಲ್ಲಿಸಿ ಫೋಟೋಗೆ ಪೋಸ್ ನೀಡಿದ್ದ ಅವರು ತೆರಳಿದ ಬಳಿಕ ಅದೇ ಬೃಹದಾಕಾರದ ಹಾರವನ್ನು ಚೆನ್ನಮ್ಮ ಮೂರ್ತಿ ಎದುರು ತಂದು ಫೋಟೋಗೆ ಕಾರ್ಯಕರ್ತರು ಫೋಸ್ ಕೊಟ್ಟರು. ಇದನ್ನೂ ಓದಿ: ಜಾತಿ ನಿಂದನೆಗೈದು ಅಪ್ರಾಪ್ತನನ್ನು ಬೆಂಕಿಗೆ ತಳ್ಳಿದ ವಿದ್ಯಾರ್ಥಿಗಳು!

  • ಅಧಿಕಾರಿಗಳ ನಿರ್ಲಕ್ಷ್ಯ- ಚೆನ್ನಮ್ಮನ ಪುತ್ಥಳಿಗೆ ಮುತ್ತಿಕೊಂಡ ಜೇನು ಹುಳುಗಳು

    ಅಧಿಕಾರಿಗಳ ನಿರ್ಲಕ್ಷ್ಯ- ಚೆನ್ನಮ್ಮನ ಪುತ್ಥಳಿಗೆ ಮುತ್ತಿಕೊಂಡ ಜೇನು ಹುಳುಗಳು

    – ಚನ್ನಮ್ಮನ ಮುಖ ಕಾಣದ ರೀತಿ ದಟ್ಟವಾಗಿ ಆವರಿಸಿದ ಹುಳುಗಳು

    ಹುಬ್ಬಳ್ಳಿ: ಸೂಕ್ತ ನಿರ್ವಹಣೆ ಹಾಗೂ ಸ್ವಚ್ಛತೆ ಕಾಪಾಡದ ಹಿನ್ನೆಲೆ ಹುಬ್ಬಳಿಯ ಐಕಾನ್, ಸುಪ್ರಸಿದ್ಧ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಪುತ್ಥಳಿಗೆ ಜೇನು ಹುಳುಗಳು ಮುತ್ತಿಕೊಂಡಿವೆ. ಚೆನ್ನಮ್ಮನ ಮುಖ ಕಾಣದಂತೆ ದಟ್ಟವಾಗಿ ಹುಳುಗಳು ಮುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಗರ ವಾಸಿಗಳು ಕಿಡಿಕಾರಿದ್ದಾರೆ.

    ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹುಬ್ಬಳ್ಳಿಯ ಜನನಿಬೀಡ ಪ್ರದೇಶವಾಗಿದ್ದು, ಎಲ್ಲರಿಗೂ ತಿಳಿದ ವಿಚಾರ. ಹುಬ್ಬಳ್ಳಿಯನ್ನು ಇದೇ ವೃತ್ತದಿಂದಲೂ ಹಲವರು ಗುರುತಿಸುತ್ತಾರೆ. ಹುಬ್ಬಳ್ಳಿಯ ಐಕಾನ್ ಎಂದೇ ಈ ವೃತ್ತವನ್ನು ಕರೆಯಲಾಗುತ್ತದೆ. ಇಂತಹ ಸುಪ್ರಸಿದ್ಧ ಹಾಗೂ ಜನನಿಬಿಡ ಪ್ರದೇಶದಲ್ಲಿನ ರಾಣಿ ಚೆನ್ನಮ್ಮ ಪುತ್ಥಳಿಯನ್ನು ನಿರ್ವಹಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ವಿಪರೀತ ಧೂಳು ಆವರಿಸಿದೆ. ಇದೀಗ ಜೇನು ಹುಳುಗಳು ಮುತ್ತಿವೆ.

    ಕಿತ್ತೂರು ಚೆನ್ನಮ್ಮನ ಮೂರ್ತಿಯ ಮುಖಕ್ಕೆ ಜೇನು ಹುಳುಗಳು ಮುತ್ತಿಕ್ಕಿಕೊಂಡ ಪರಿಣಾಮ ಚೆನ್ನಮ್ಮನ ಮುಖ ದರ್ಶನವೇ ಕಾಣುತ್ತಿರಲಿಲ್ಲ. ಹಲವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಹಲವರು ಆಶ್ಚರ್ಯವೆಂಬಂತೆ ನೋಡುತ್ತಿದ್ದರು. ಪಾಲಿಕೆ ಅಧಿಕಾರಿಗಳು ಜೇನು ಹುಳುಗಳನ್ನು ತೆರವುಗೊಳಿಸಿ, ಪುತ್ಥಳಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಇನ್ನಾದರೂ ಸುಪ್ರಸಿದ್ಧ ಪುತ್ಥಳಿಯನ್ನು ಸರಿಯಾಗಿ ನಿರ್ವಹಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಸಚಿವೆ ಉಮಾಶ್ರೀ, ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್- ಹಂಪಿ ವಿವಿ ಅಧೀಕ್ಷಕ ಪೊಲೀಸರ ವಶಕ್ಕೆ

    ಸಚಿವೆ ಉಮಾಶ್ರೀ, ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್- ಹಂಪಿ ವಿವಿ ಅಧೀಕ್ಷಕ ಪೊಲೀಸರ ವಶಕ್ಕೆ

    ಬಳ್ಳಾರಿ: ಫೇಸ್‍ಬುಕ್ ಹಾಗು ವಾಟ್ಸಪ್‍ನಲ್ಲಿ ಮಹಿಳೆಯರ ಬಗ್ಗೆ ಅವಹೇಳಕಾರಿಯಾಗಿ ಬರೆದು ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಅಧೀಕ್ಷಕ ಎಚ್.ಎಂ.ಸೋಮನಾಥ್ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಫೇಸ್‍ಬುಕ್ ಅಕೌಂಟ್‍ನಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಅಕ್ಕಮಹಾದೇವಿ ಮತ್ತು ಸಚಿವೆ ಉಮಾಶ್ರೀ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಸಚಿವೆ ಉಮಾಶ್ರೀ ಅವರಿಗೆ ಉಪಮಾಶ್ರೀ, ಕಿತ್ತೂರ ಚೆನ್ನಮ್ಮರಿಗೆ ಕಿರಾಣಿ ಚೆನ್ನಮ್ಮ ಎಂದು ಹಾಗೂ ಶರಣೆ ಅಕ್ಕಮಹಾದೇವಿ ಅವರನ್ನು ಅಕ್ರಮದೇವಿ ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅವಮಾನ ಮಾಡಿದ್ದರು.

    ಇತ್ತೀಚಿಗೆ ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿಯವರಿಗೆ ಅಕ್ಕಮಹದೇವಿ ಪ್ರಶಸ್ತಿಯನ್ನು ಸಚಿವೆ ಉಮಾಶ್ರೀ ಅವರು ಪ್ರಧಾನ ಮಾಡಿದ್ದರು. ಹೀಗಾಗಿ ಮಲ್ಲಿಕಾ ಘಂಟಿಯವರಿಗೆ ಪ್ರಶಸ್ತಿ ಸ್ವೀಕರಿಸುವ ನೈತಿಕತೆಯಿಲ್ಲ ಎನ್ನುವ ರೀತಿಯಲ್ಲಿ ಸೋಮನಾಥ್ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಬರೆದುಕೊಂಡಿದ್ದರು.

    ಈ ಫೇಸ್‍ಬುಕ್ ಪೋಸ್ಟ್ ನೋಡಿದ್ದ ಕಮಲಾಪುರ ಠಾಣಾ ಪೊಲೀಸರು ಯಾವ ದೂರು ದಾಖಲಾಗದಿದ್ದರೂ ಸೋಮನಾಥ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.