Tag: kissing scene

  • ಸಲ್ಲು ತುಟಿಗೆ ಮುತ್ತಿಡಲು ಗಳಗಳನೇ ಕಣ್ಣೀರಿಟ್ಟಿದ್ದ ನಟಿ ಭಾಗ್ಯ ಶ್ರೀ

    ಸಲ್ಲು ತುಟಿಗೆ ಮುತ್ತಿಡಲು ಗಳಗಳನೇ ಕಣ್ಣೀರಿಟ್ಟಿದ್ದ ನಟಿ ಭಾಗ್ಯ ಶ್ರೀ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಭಾಗ್ಯ ಶ್ರೀ ಜೊತೆಯಾಗಿ ಅಭಿನಯಿಸಿದ್ದ ಮೈನೆ ಪ್ಯಾರ್ ಕಿಯಾ ಸಿನಿಮಾದ ಚಿತ್ರೀಕರಣದ ವೇಳೆ ಸಲ್ಲು ತುಟಿಗೆ ಮುತ್ತಿಡಲು ಭಾಗ್ಯ ಶ್ರೀ ಗಳಗಳನೇ ಅತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

    ಪ್ರಸ್ತುತ ಬಾಲಿವುಡ್ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಾವಳಿಗಳು ಸರ್ವೇ ಸಾಮಾನ್ಯವಾಗಿ ಹೋಗಿದೆ. ಹಿಂದಿನ ಕಾಲದಲ್ಲಿ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯಾವಳಿಗಳಿದೆ ಎಂದರೆ ಎಷ್ಟೋ ನಟಿಯರು ಅಭಿನಯಿಸುವುದಿಲ್ಲ ಎಂದು ಸಿನಿಮಾವನ್ನೇ ರಿಜೆಕ್ಟ್ ಮಾಡಿರುವ ಸಂಗತಿಗಳು ಇದೆ. ಇದನ್ನೂ ಓದಿ: ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

    salman

    ಸದ್ಯ ಸಂದರ್ಶನವೊಂದರಲ್ಲಿ ಮೈನೆ ಪ್ಯಾರ್ ಕಿಯಾ ಸಿನಿಮಾದ ಚಿತ್ರೀಕರಣದ ವೇಳೆ ಆನ್ ಸ್ಕ್ರೀನ್‍ನಲ್ಲಿ ಸಲ್ಮಾನ್ ತುಟಿಗೆ ಚುಂಬಿಸುವ ದೃಶ್ಯದಲ್ಲಿ ನಟಿಸಬೇಕಾದ ಸಂದರ್ಭದಲ್ಲಿ ಭಾಗ್ಯ ಶ್ರೀ ಗಳಗಳನೇ ಅತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟ ಗೋವಿಂದ್ ಸ್ಯಾಂಡಲ್‍ವುಡ್‍ಗೆ ಎಂಟ್ರಿ

    salman

    ಈ ಸಿನಿಮಾದಲ್ಲಿ ನಟಿಸುವಾಗ ನನಗಿನ್ನು 18 ವರ್ಷವಾಗಿತ್ತು. ನಾನು ಆಗಲೇ ಒಬ್ಬರನ್ನು ಪ್ರೀತಿಸುತ್ತಿದ್ದೆ. ಅವರನ್ನೇ ಮದುವೆಯಾಗುವುದಾಗಿ ನಿಶ್ಚಯಿಸಿದ್ದೆ. ಹೀಗಾಗಿ ಬೇರೆ ಪುರುಷರನ್ನು ತಬ್ಬಿಕೊಳ್ಳಲು ನನಗೆ ಬಹಳ ಮುಜುಗರ ಹಾಗೂ ಕಷ್ಟವಾಗುತ್ತಿತ್ತು. ಆಗ ನಾನು ನಟಿಸುವುದಿಲ್ಲ ಎಂದು ಅತ್ತಿದ್ದೆ. ನಂತರ ಸಲ್ಮಾನ್ ಖಾನ್ ಬಂದು ಈ ದೃಶ್ಯದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ಕೊನೆಗೆ ನಿರ್ದೇಶಕರು ಇಬ್ಬರ ತುಟಿ ಮಧ್ಯೆ ಗ್ಲಾಸ್ ಇರಿಸಿ ಈ ದೃಶ್ಯವನ್ನು ಸೆರೆಹಿಡಿಯಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಕುರಿಗಾಯಿ ಜೊತೆಗೆ ಕುಳಿತು ಊಟ ಮಾಡಿದ ನಟ ಪುನೀತ್

    salman

    ಹಿಂದೆ ಈ ಸಿನಿಮಾ ಸಲ್ಮಾನ್‍ಖಾನ್‍ಗೆ ಹಿಟ್ ತಂದು ಕೊಡುವುದರ ಜೊತೆಗೆ ಖ್ಯಾತಿ ತಂದು ಕೊಟ್ಟತ್ತು. ಜೊತೆಗೆ ಸಿನಿಮಾದ ಹಾಡುಗಳು ಕೂಡ ಸಖತ್ ಫೇಮಸ್ ಆಗಿತ್ತು.

     

  • ನನಗೂ ಅಮೀರ್‌ಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು: ಕರಿಷ್ಮಾ ಕಪೂರ್

    ನನಗೂ ಅಮೀರ್‌ಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು: ಕರಿಷ್ಮಾ ಕಪೂರ್

    ಮುಂಬೈ: ನನಗೂ ಅಮೀರ್ ಖಾನ್ ಅವರಿಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು ಎಂದು ಬಾಲಿವುಡ್‍ನ 90ರ ದಶಕದ ಬೆಡಗಿ ಕರಿಷ್ಮಾ ಕಪೂರ್ ಅವರು ಹೇಳಿದ್ದಾರೆ.

    1996ರಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅಭಿನಯದ ರಾಜಾ ಹಿಂದೂಸ್ತಾನಿ ಎಂಬ ಚಿತ್ರ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಕರಿಷ್ಮಾ ಮತ್ತು ಅಮಿರ್ ಖಾನ್ ಅವರ ಕೆಮಿಷ್ಟ್ರಿ ವರ್ಕ್ ಆಗಿತ್ತು. ಅದರಲ್ಲೂ ಚಿತ್ರದಲ್ಲಿ ಈ ಇಬ್ಬರ ಲಿಪ್‍ಲಾಕ್ ದೃಶ್ಯ ಸಖತ್ ಸದ್ದು ಮಾಡಿತ್ತು. ಈಗ ಇದೇ ದೃಶ್ಯದಲ್ಲಿ ನಮಗಿಬ್ಬರಿಗೂ ಅಭಿನಯಿಸುವುದರಲ್ಲಿ ಸಾಕಾಗಿ ಹೋಗಿತ್ತು ಎಂದು ಕಪೂರ್ ಹೇಳಿದ್ದಾರೆ.

    ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಕರಿಷ್ಮಾ, ಅಂದು ರಾಜಾ ಹಿಂದೂಸ್ತಾನಿ ಚಿತ್ರದಲ್ಲಿ ಮೂಡಿಬಂದಿದ್ದ ಆ ಚುಂಬನದ ದೃಶ್ಯ ಸಖತ್ ಮೋಡಿ ಮಾಡಿತ್ತು. ಈಗ ಎಲ್ಲ ಸಿನಿಮಾಗಳಲ್ಲೂ ಲಿಪ್‍ಲಾಕ್ ಮಾಡುತ್ತಾರೆ. ಆದರೆ ಅಂದು ಕಿಸ್ಸಿಂಗ್ ಸೀನ್‍ಗಳು ಹೆಚ್ಚು ಬರುತ್ತಿರಲಿಲ್ಲ. ಆದರೆ ಆ ಚಿತ್ರದಲ್ಲಿ ನಾವು ಕಿಸ್ಸಿಂಗ್ ಸೀನ್ ಅಲ್ಲಿ ಅಭಿನಯಿಸಬೇಕಿತ್ತು. ಜನರು ಚಿತ್ರದಲ್ಲಿ ನೋಡಿದಷ್ಟು ಸುಲಭವಾಗಿ ಆ ದೃಶ್ಯವನ್ನು ನಾವು ಚಿತ್ರೀಕರಣ ಮಾಡಿರಲಿಲ್ಲ. ಆ ದೃಶ್ಯದಲ್ಲಿ ನಟಿಸಲು ನನಗೂ ಮತ್ತು ಅಮೀರ್ ಗೂ ಸಖತ್ ಕಷ್ಟವಾಗಿತ್ತು ಎಂದು ಹೇಳಿದ್ದಾರೆ.

    ಈ ದೃಶ್ಯದ ಚಿತ್ರೀಕರಣವನ್ನು ನಾವು ಫೆಬ್ರವರಿ ತಿಂಗಳಲ್ಲಿ ಊಟಿಯಲ್ಲಿ ಮಾಡಿದ್ದೇವು. ಜೊತೆಗೆ ಈ ಒಂದು ದೃಶ್ಯವನ್ನು ಮೂರು ದಿನ ಶೂಟ್ ಮಾಡಿದ್ದೇವು. ನಾನು ಮತ್ತು ಅಮೀರ್ ಖಾನ್ ಈ ದೃಶ್ಯದ ಚಿತ್ರೀಕರಣ ಯಾವಾಗ ಮುಗಿಯುತ್ತೋ ಎಂದು ಸೆಟ್‍ನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ಅಂದು ಊಟಿಯಲ್ಲಿ ಸಖತ್ ಚಳಿ ಅದರಲ್ಲೂ ನಮ್ಮಿಬ್ಬರ ಮೇಲೆ ತಣ್ಣೀರನ್ನು ಸುರಿಯಲಾಗಿತ್ತು. ಜೊತೆಗೆ ಗಾಳಿ ಬರಲೆಂದು ದೊಡ್ಡ ಫ್ಯಾನ್ ಕೂಡ ಹಾಕಿದ್ದರು. ಆ ಚಳಿಯಲ್ಲಿ ಸಿನಿಮಾ ಶೂಟ್ ಮಾಡುವುದು ತುಂಬಾ ಕಷ್ಟವಾಗುತ್ತಿತ್ತು ಎಂದು ಕರಿಷ್ಮಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    1996 ನವೆಂಬರ್ 15 ರಂದು ಬಿಡುಗಡೆಯಾಗಿದ್ದ ರಾಜಾ ಹಿಂದೂಸ್ತಾನಿ ಚಿತ್ರ ಬಾಲಿವುಡ್ ಚಿತ್ರರಂಗದಲ್ಲೇ ಸಖತ್ ಹಿಟ್ ಆಗಿತ್ತು. ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಅಮಿರ್ ಖಾನ್ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅವರ ರೊಮ್ಯಾನ್ಸ್ ನೋಡಿದ್ದ ಪ್ರೇಕ್ಷಕ ಚಿತ್ರವನ್ನು ಒಪ್ಪಿ ಅಪ್ಪಿಕೊಂಡಿದ್ದ. ಈ ಚಿತ್ರ 2002ರಲ್ಲಿ ಕನ್ನಡಕ್ಕೆ ‘ನಾನು ನಾನೇ’ ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು ಇದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿದ್ದರು.

  • ಸಿಗರೇಟ್ ಸೇದೋದಂತೆ, ಲಿಪ್‍ಕಿಸ್ ಅಂತೆ – ರಚಿತಾ ವಿರುದ್ಧ ಹುಚ್ಚ ವೆಂಕಟ್ ಫೈರ್

    ಸಿಗರೇಟ್ ಸೇದೋದಂತೆ, ಲಿಪ್‍ಕಿಸ್ ಅಂತೆ – ರಚಿತಾ ವಿರುದ್ಧ ಹುಚ್ಚ ವೆಂಕಟ್ ಫೈರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ವಿರುದ್ಧ ಫೈರಿಂಗ್ ಸ್ಟಾರ್ ನಟ ಹುಚ್ಚ ವೆಂಕಟ್ ವಾಗ್ದಾಳಿ ನಡೆಸಿದ್ದಾರೆ.

    ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ ಟ್ರೈಲರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಈ ಟ್ರೈಲರ್ ವಿಚಾರವಾಗಿ ಮಾತನಾಡಿರುವ ಹುಚ್ಚ ವೆಂಕಟ್ ರಚಿತಾ ರಾಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಟ್ರೈಲರ್‍ನಲ್ಲಿ ನಾಯಕ ರಾನಾ ಜೊತೆಗೆ ರಚಿತಾ ರಾಮ್ ಲಿಪ್‍ಲಾಕ್ ಹಾಗೂ ಸಿಗರೇಟ್ ಸೇದುವ ದೃಶ್ಯ ನೋಡಿದ ವೆಂಕಟ್ ವಿಡಿಯೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ನಿರ್ದೇಶಕ ಪ್ರೇಮ್ ಅವರಿಗೆ ಒಂದಿಷ್ಟು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್

     ವೆಂಕಟ್ ಹೇಳಿದ್ದೇನು?
    ನನ್ ಮಗಂದ್ ಡೈಲಾಗ್… ಇದು ರಚಿತಾ ರಾಮ್ ಅವರಿಗೆ ಹೇಳುತ್ತಿರೋದು. ಯಾಕ್ರೀ.. ಯಾಕ್ರೀ.. ಈ ಥರಹದ ಪಾತ್ರಗಳನ್ನು ಮಾಡಿ ಜನರ ಮನಸ್ಸನ್ನು ಹಾಳು ಮಾಡ್ತೀರಾ? ನೀವು ಮಾಡಿರುವುದು ಏನು? ಸಿಗರೇಟ್ ಸೇದುವುದಂತೆ, ಲಿಪ್‍ಕಿಸ್ ಅಂತೆ… ಇದರಿಂದ ಏನಾಗುತ್ತೆ? ಮಕ್ಕಳಿಂದ ಹಿಡಿದು ಹೆಣ್ಣು ಮಕ್ಕಳು ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡೋಕಾಗುತ್ತಾ? ಹೆಣ್ಣು ಮಕ್ಕಳಿಗೆ ಮುಜುಗರ ಆಗುವುದಿಲ್ಲವಾ? ಡೈರೆಕ್ಟರ್ ಕೊಟ್ರೂ ಅದಕ್ಕೆ ಮಾಡಿದ್ವಿ ಎಂದು ಎಲ್ಲವನ್ನೂ ಡೈರೆಕ್ಟರ್ ಮೇಲೆ ಹಾಕ್ತೀರಾ. ನಿಮಗೆ ಇಷ್ಟವಿಲ್ಲ ಅಂದರೆ ಡೈರೆಕ್ಟರ್ ಬಲವಂತ ಮಾಡಲು ಸಾಧ್ಯವಿಲ್ಲ. ಯಾಕ್ ಈ ಥರಾ ಮಾಡ್ತೀರಾ? ಇದನ್ನೂ ಓದಿ: “ಹೆಣ್ಣು ಮಕ್ಳು ಬಾರ್‌ಗೆ ಹೋಗ್ಬಾರ್ದಾ”: ರಚಿತಾ ರಾಮ್

    ಕಳೆದ ಸಿನಿಮಾದಲ್ಲೂ (ಐ ಲವ್ ಯೂ) ಹೀಗೆ ಮಾಡಿದ್ರಿ. ಈ ಸಿನಿಮಾದಲ್ಲೂ ಮಾಡಿದ್ದೀರಾ. ನಿಮ್ಮ ಪ್ರತಿಭೆಯನ್ನು ತೋರಿಸೋಕೆ ಬೇರೆ ದಾರಿ ಇಲ್ವಾ? ನಿಮಗೆ ಪ್ರತಿಭೆ ಇದ್ದರೆ ಬೇರೆ ಕಡೆಗೆ ತೋರಿಸಿ. ಹೀಗೆ ಮಾಡೋದನ್ನು ಪ್ರತಿಭೆ ಅಂತರಾ? ನನ್ ಮಗಂದ್ ತೂ….

    ಇಂತ ಸೀನ್‍ಗಳಿಂದ ಎಷ್ಟೋ ಜನ ಹಾಳಾಗುತ್ತಾರೆ ಅಂತ ನಿಮಗೆ ಗೊತ್ತಾ? ಒಂದು ಗಂಡಸು ಡ್ರಿಂಕ್ಸ್ ಮಾಡಿ ಸಿಗರೇಟ್ ಸೇದಿದ್ರೇನೆ ತಪ್ಪು. ಅಂತಹದ್ರಲ್ಲಿ ನೀವು ಸಿಗರೇಟ್ ಸೇದೋದು, ಲಿಪ್ ಕಿಸ್ ಮಾಡೋದು ಅಂದ್ರೆ ಏನ್ ಅರ್ಥ? ಇಲ್ಯಾರೂ ಕೇಳೋರು ಇಲ್ವಾ? ಇದರಿಂದ ನಿಮ್ಮ ಮನೆಯಲ್ಲಿನ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ನೋವು ಅನುಭವಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ.

    ಈ ಹಿಂದೆ ಕನ್ನಡ ಇಂಡಸ್ಟ್ರಿ ಅಂದರೆ ಹೇಗಿತ್ತು? ಕನ್ನಡ ಇಂಸ್ಟ್ರಿ ಅಂದ್ರೆ ಒಂದೇ ಒಂದು ಅಶ್ಲೀಲ ಇಲ್ಲ ಎನ್ನುವಂತಿತ್ತು. ಇವತ್ತು ಏನೆಲ್ಲಾ ಆಗಿದೆ ನೋಡಿ. ಪ್ರೇಮ್ ನಿನಗೆ ಇದು ಬೇಕಿತ್ತಾ? ಈ ರೀತಿಯ ಶಾಟ್ ಇಡೋದು ಬೇಕಿತ್ತಾ? ಇದ್ರಿಂದ ನೀನು ಜನರಿಗೆ ತೋರಿಸೋದಾದ್ರೂ ಏನು? ಆ ದೃಶ್ಯವನ್ನು ತೆಗೆದು ಹಾಕು.

    ರಚಿತಾ ರಾಮ್ ಅವ್ರೆ ನಾಳೆ ನೀವು ಮದ್ವೆ ಆಗ್ಬೇಕು. ನಿಮ್ಮ ಗಂಡ ಇದನ್ನ ನೋಡಬೇಕು. ನೋಡಿ ನಿಮಗೇನ್ ಅಂತಾನೆ. ಬೇಶ್ ಎನ್ನುತ್ತಾನಾ? ಚಿಕ್ಕ ಕಾರಣ ಸಿಕ್ರೆ ಸಾಕು ಡಿವೋರ್ಸ್ ಕೊಡ್ತಾರೆ. ಅಂಥ್ರದಲ್ಲಿ ನೋಡಿ ನೀವು ಏನ್ ಮಾಡ್ತಾ ಇದ್ದೀರಾ? ಸಿನಿಮಾ ರಂಗವೇ ನಿಮಗೆ ಕೊನೆಯಲ್ಲ. ನೀವು ಮದ್ವೆ ಆಗ್ಬೇಕು, ತಾಯಿ ಆಗಬೇಕು ನೆನಪಿರಲಿ.

    ರಚಿತಾ ರಾಮ್ ಅವ್ರ ತಂದೆ-ತಾಯಿಗೂ ನನ್ನದೊಂದು ವಿನಂತಿ. ಇನ್ಮೇಲೆ ನಿಮ್ಮ ಮಗಳಿಗೆ ನೀವು ಬುದ್ಧಿ ಹೇಳಿ. ನಾನು ಎಲ್ಲ ರೀತಿ ಹೇಳಿ ಮುಗಿಸಿದ್ದೇನೆ. ಲಿಪ್‍ಕಿಸ್ ಸೀನ್‍ಗಳನ್ನು ನಿಮಗೆ ನೋಡೋಕೆ ಆಗುತ್ತಾ? ಈ ವಿಚಾರದಲ್ಲಿ ನಿಮ್ಮನ್ನ ಎಳೆದಿದ್ದಕ್ಕೆ ತಪ್ಪು ತಿಳಿಯಬೇಡಿ.

    ಸಿನಿಮಾದಿಂದ ಲಿಪ್‍ಲಾಕ್, ಸಿಗರೇಟ್ ಸೇದುವ ಸೀನ್ ತೆಗೆದುಹಾಕಬೇಕು. ಕನ್ನಡ ಇಂಡಸ್ಟ್ರಿ ಇಷ್ಟು ಕೆಟ್ಟ ಮಟ್ಟಕ್ಕೆ ಇಳಿಯುವುದು ನನಗೆ ಇಷ್ಟವಿಲ್ಲ. ಇಲ್ಲಿ ಕಲೆಗೆ ಬೆಲೆ ಕೊಡಲಾಗುತ್ತದೆ. ಹೆಣ್ಣು ಮಕ್ಕಳು ಡ್ರಿಂಕ್ಸ್ ಮಾಡೋದು, ಪಾರ್ಟಿ ಮಾಡೋದು ಸಿರಿಯಲ್‍ಗಳಲ್ಲೂ ಬಂದಿದೆ. ಈ ಬಗ್ಗೆ ಯಾರೂ ಯಾಕೆ ಹೋರಾಟ ಮಾಡುತ್ತಿಲ್ಲ?

    ಆ ಬಂದು ಸೀನ್ ತೆಗೆದು ಹಾಕಿದ್ರೆ ಸಿನಿಮಾ ಓಡಲ್ವಾ? ಸಿನಿಮಾದ ಹೀರೋಗೆ ಅಣ್ಣನಾಗಿ ಹೇಳುತ್ತಿದ್ದೇನೆ, ನೀನು ಫಸ್ಟ್ ಟೈಮ್ ನಾಯಕನಾಗಿ ಕನ್ನಡ ಇಂಡಸ್ಟ್ರಿ ಬರುತ್ತಿದ್ದಿಯಾ. ಉತ್ತಮ ಸಿನಿಮಾದೊಂದಿಗೆ ಕಾಲಿಡು. ನಾನು ಮಾಡುವ ಸಿನಿಮಾದಲ್ಲಿ ಐಟಂ ಸಾಂಗ್ ಹಾಕ್ತಾರೆ ಎನ್ನುವ ಭಯದಿಂದ ಅನೇಕರು ನನ್ನ ಕೈಬಿಟ್ಟಿದ್ದಾರೆ. ಯಾಕಂದ್ರೆ ನಾನು ಸಿನಿಮಾ ಕಥೆಯನ್ನು ಸಂಪೂರ್ಣವಾಗಿ ಓದಿ ಓಕೆ ಎನ್ನುತ್ತೇನೆ. ಕೆಟ್ಟ ಸೀನ್ ಇದ್ರೆ ಸಿನಿಮಾ ಬೇಡ ರಿಜೆಕ್ಟ್ ಮಾಡ್ತೀನಿ.

    ರಚಿತಾ ರಾಮ್ ಅವ್ರೆ ಎಷ್ಟೋ ನಟಿಯರ ಜೀವನ ಹಾಳಾಗಿದೆ. ನೀವು ಅರ್ಥ ಮಾಡಿಕೊಂಡು ಪಾತ್ರ ನಿರ್ವಹಿಸಿ.

  • ಕೊರೊನಾ ಎಫೆಕ್ಟ್- ಕಿಸ್ಸಿಂಗ್ ಮಾಡ್ಬೇಡಿ ಎಂದ ಸರ್ಕಾರ

    ಕೊರೊನಾ ಎಫೆಕ್ಟ್- ಕಿಸ್ಸಿಂಗ್ ಮಾಡ್ಬೇಡಿ ಎಂದ ಸರ್ಕಾರ

    – ಸಿನಿಮಾ, ಸೀರಿಯಲ್‍ಗಳಲ್ಲಿ ಲಿಪ್‍ಲಾಕ್ ಬ್ಯಾನ್

    ಬೀಜಿಂಗ್: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್‍ಗೆ ಇಡೀ ದೇಶವೇ ಬೆಚ್ಚಿ ಬೀಳುತ್ತಿದೆ. ಇದೀಗ ಕೊರೊನಾ ವೈರಸ್ ಎಫೆಕ್ಟ್ ಸಿನಿಮಾ, ಸೀರಿಯಲ್‍ಗಳ ಮೇಲೂ ಪರಿಣಾಮ ಬೀರುತ್ತಿವೆ.

    ಇದುವರೆಗೂ ದೇಶದಲ್ಲಿ ಸುಮಾರು 900ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. ಮಧ್ಯ ಚೀನಾದ ವುಹಾನ್‍ನಿಂದ ಕಂಡು ಬಂದಿರುವ ಕೊರೊನಾ ವೈರಸ್ ಇಡೀ ಜಗತ್ತನ್ನೇ ವ್ಯಾಪಿಸುತ್ತಿದೆ. ಈಗಾಗಲೇ ಹಲವಾರು ದೇಶಗಳು ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ಜನರಂತೂ ಮನೆಬಿಟ್ಟು ಹೊರಗಡೆ ಬರುತ್ತಿಲ್ಲ. ಈಗ ಕೊರೊನಾ ವೈರಸ್ ಸಿನಿಮಾರಂಗಕ್ಕೂ ಲಗ್ಗೆ ಇಟ್ಟಿದೆ.

    ಹೌದು. ಚೀನಾದಲ್ಲಿ ಏಕಾಏಕಿ ಸಿನಿಮಾ, ಸೀರಿಯಲ್ ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ. ತೈವಾನ್ ದೇಶದಲ್ಲಿ ಕೊರೊನಾ ವೈರಸ್‍ನ ತೀವ್ರತೆ ಅಷ್ಟಾಗಿ ಕಂಡು ಬಂದಿಲ್ಲ. ಹೀಗಾಗಿ ಅಲ್ಲಿನ ಸರ್ಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪ್ರಮುಖವಾಗಿ ತೈವಾನ್‍ನಲ್ಲಿ ಸರ್ಕಾರ ಸಿನಿರಂಗಕ್ಕೆ ಸಂಬಂಧಿಸಿದಂತೆ ಒಂದು ನಿರ್ಧಾರ ತೆಗೆದುಕೊಂಡು ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

    ತೈವಾನ್‍ನಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಾಗೂ ನಿರ್ಮಾಣಗೊಳ್ಳುತ್ತಿರುವ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳನ್ನು ಮಾಡದಂತೆ ಸರ್ಕಾರ ನಿರ್ಬಂಧ ಹೇರಿದೆ. ಅಲ್ಲದೇ ನಟಿ-ನಟರು ಮುಖ್ಯವಾಗಿ ಲಿಪ್‍ಲಾಕ್ ಸನ್ನಿವೇಶಗಳನ್ನು ಕೈಬಿಡಬೇಕೆಂದು ಟಿವಿ ಸ್ಟೇಷನ್ಸ್, ನಿರ್ದೇಶಕ, ನಿರ್ಮಾಪಕರಿಗೆ ಸೂಚನೆಗಳನ್ನು ನೀಡಲಾಗಿದೆ. ಕೊರೊನಾ ವೈರಸ್ ಭೀತಿಯಿಂದಾಗಿ ಸರ್ಕಾರ ಈ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ ಎನ್ನಲಾಗಿದೆ.

    ತೈವಾನ್‍ನ ‘ಗೋಲ್ಡನ್ ಸಿಟಿ’ ಸೀರಿಯಲ್‍ನಲ್ಲಿ ಅಧಿಕವಾಗಿ ಕಿಸ್ಸಿಂಗ್ ದೃಶ್ಯಗಳಿವೆ. ಹೀಗಾಗಿ ಈ ಸೀರಿಯಲ್‍ನಲ್ಲಿ ನಟಿಸುತ್ತಿರುವ ಇಬ್ಬರು ಕಲಾವಿದರಿಗೆ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸದಂತೆ ಸರ್ಕಾರ ಎಚ್ಚರಿಕೆ ಕೊಟ್ಟಿದೆ. ಅದರಲ್ಲೂ ಸೀರಿಯಲ್‍ಗೆ ಅವಶ್ಯಕತೆ ಇದೆ ಎಂದು ಹಸಿಬಿಸಿ ದೃಶ್ಯ ಹಾಗೂ ಕಲಾವಿದರೂ ತುಂಬಾ ರೊಮ್ಯಾನ್ಸ್ ದೃಶ್ಯದಲ್ಲಿ ಅಭಿನಯಿಸದಂತೆ ಎಚ್ಚರಿಕೆ ಕೊಟ್ಟಿದೆ ಎಂದು ವರದಿಯಾಗಿದೆ.

    ಸಾರ್ವಜನಿಕ ಸ್ಥಳಗಳಲ್ಲೂ ಶೂಟಿಂಗ್ ಮಾಡುವುದನ್ನು ರದ್ದು ಮಾಡಲಾಗಿದೆ. ಕರೋನಾ ವೈರಸ್‍ನಿಂದ ಯಾವುದೇ ರೀತಿ ಸಮಸ್ಯೆಯಾಗಬಾರದೆಂದು ಸರ್ಕಾರ ಈ ರೀತಿಯ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

  • ಲಿಪ್‍ಲಾಕ್ ಅಂದ್ರೆ ಏನು? ಈ ಪದವೇ ನನಗೆ ಇಷ್ಟವಾಗಲಿಲ್ಲ: ವಿಜಯ್ ದೇವರಕೊಂಡ

    ಲಿಪ್‍ಲಾಕ್ ಅಂದ್ರೆ ಏನು? ಈ ಪದವೇ ನನಗೆ ಇಷ್ಟವಾಗಲಿಲ್ಲ: ವಿಜಯ್ ದೇವರಕೊಂಡ

    ಬೆಂಗಳೂರು: ಲಿಪ್‍ಲಾಕ್ ಅಂದರೆ ಏನು? ಈ ಪದವೇ ನನಗಿಷ್ಟವಾಗಲಿಲ್ಲ ಎಂದು ಟಾಲಿವುಡ್ ನಟ ವಿಜಯ್ ದೇವರಕೊಂಡ ಹೇಳಿದ್ದಾರೆ.

    ನಗರದಲ್ಲಿ ‘ಡಿಯರ್ ಕಾಮ್ರೆಡ್’ ಚಿತ್ರತಂಡ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸ್ಸಿಂಗ್ ಒಂದು ಭಾವಾತ್ಮಕ ಅಂಶ. ಅದಕ್ಕೆ ಬೆಲೆ ಕೊಡಬೇಕು. ಅಳುವುದು, ಕೋಪ ವ್ಯಕ್ತಪಡಿಸುವುದು, ಪ್ರೀತಿಯಿಂದ ಚುಂಬಿಸುವುದು ಇದೆಲ್ಲಾ ಭಾವನೆಗಳು. ಇದು ಲಿಪ್ಸ್ ಲಾಕಿಂಗ್ ಅಲ್ಲ. ಈ ಪದ ಕೇಳಿದಾಗ ನನಗೆ ಬೇಜಾರಾಗುತ್ತದೆ. ಈಗಲೂ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಿಸ್ಸಿಂಗ್ ಎಂದೇ ಭಾವಿಸುತ್ತಾರೆ. ಅದು ಆ ಪಾತ್ರಗಳು ಎಂದುಕೊಳ್ಳುವುದಿಲ್ಲ. ಪಾತ್ರಗಳನ್ನು ಪಾತ್ರಗಳ ರೀತಿ ನೋಡಿ. ನಿಜ ಜೀವನಕ್ಕೆ ಹೋಲಿಸಬೇಡಿ ಎಂದು ಮನವಿ ಮಾಡಿಕೊಂಡರು.

    ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ಜನರು ನನ್ನನ್ನು ನೋಡಿ ಭಯಬಿದ್ದರು. ಆ ಸಿನಿಮಾದಲ್ಲಿ ನನ್ನ ಪಾತ್ರ ಹಾಗಿತ್ತು. ನಿಜ ಜೀವನದಲ್ಲಿ ನಾನು ಸಿಗರೇಟ್ ಕೂಡ ಸೇದುವುದಿಲ್ಲ. ಪಾತ್ರಕ್ಕೆ ತಕ್ಕಂತೆ ನಾನು ನಟಿಸಿದ್ದೇನೆ. ಹೀಗಾಗಿ ಕಿಸ್ಸಿಂಗ್ ಸೀನ್ ಬಗ್ಗೆ ವಿವರಣೆ ನೀಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

    ಈ ವೇಳೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, ಇದೊಂದು ಭಿನ್ನವಾದ ವಿಷಯಾಧಾರಿತ ಸಿನಿಮಾ. ಎಲ್ಲಾ ರೀತಿಯ ಭಾವನೆಗಳು ಡಿಯರ್ ಕಾಮ್ರೆಡ್ ಸಿನಿಮಾದಲ್ಲಿವೆ. ಆದರೂ ಕಿಸ್ಸಿಂಗ್ ಸೀನ್ ಬಗ್ಗೆಯೇ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಸಿನಿಮಾದಲ್ಲಿರುವ ಭಾವನಾತ್ಮಕ ಅಂಶಗಳಲ್ಲಿ ಕಿಸ್ಸಿಂಗ್ ಸೀನ್ ಕೂಡ ಒಂದು ಎಂದು ಹೇಳಿದರು.

    ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿಯ ‘ಡಿಯರ್ ಕಾಮ್ರೆಡ್’ ಸಿನಿಮಾ ಇದೇ ಜುಲೈ 26ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಡಿಯರ್ ಕಾಮ್ರೆಡ್ ದಕ್ಷಿಣ ಭಾರತದಲ್ಲಿ ಭಾರೀ ಸದ್ದು ಮಾಡಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.

  • ಲಿಪ್ ಲಾಕ್ ಸೀನ್ ಬಗ್ಗೆ ರಶ್ಮಿಕಾ ಖಡಕ್ ಪ್ರತಿಕ್ರಿಯೆ

    ಲಿಪ್ ಲಾಕ್ ಸೀನ್ ಬಗ್ಗೆ ರಶ್ಮಿಕಾ ಖಡಕ್ ಪ್ರತಿಕ್ರಿಯೆ

    ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ನಟಿಸಿದ ‘ಡಿಯರ್ ಕಾಮ್ರೆಡ್’ ಚಿತ್ರದ ಟ್ರೈಲರ್ ನಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಸೀನ್‍ನಲ್ಲಿ ನಟಿಸಿದ್ದರು. ಈ ಸೀನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಬೇಸರಗೊಂಡ ರಶ್ಮಿಕಾ ಟ್ರೋಲ್ ಮಾಡಿದವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಚಿತ್ರದಲ್ಲಿ ಈ ಸೀನ್ ಬೇಕೇಬೇಕು ಎಂದು ಹೇಳಿದ್ದರು. ಹಾಗಾಗಿ ನಾನು ನನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಕಿಸ್ಸಿಂಗ್ ಸೀನ್ ಮಾಡಿದೆ. ಲಿಪ್‍ಲಾಕ್ ಸೀನ್ ನೋಡಿ ಯಾವುದೇ ಸಿನಿಮಾದ ಬಗ್ಗೆ ನಿರ್ಧರಿಸಬಾರದು. ಜನರು ‘ಗೀತಾ ಗೋವಿಂದಂ’ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ. ಈ ಸಿನಿಮಾವನ್ನು ಕೂಡ ಮೆಚ್ಚಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಅವರನ್ನು ಕೂಡ ಜನರು ಟ್ರೋಲ್ ಮಾಡುತ್ತಿದ್ದಾರೆ. ವಿಜಯ್ ‘ಅರ್ಜುನ್ ರೆಡ್ಡಿ’ ಚಿತ್ರದಿಂದ ಎಲ್ಲ ಚಿತ್ರದಲ್ಲಿ ಲಿಪ್‍ಲಾಕ್ ಸೀನ್ ಮಾಡುತ್ತಿದ್ದಾರೆ. ವಿಜಯ್ ಟಾಲಿವುಡ್ ಇಮ್ರಾನ್ ಹಶ್ಮಿ ಆಗಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.

    ಡಿಯರ್ ಕಾಮ್ರೆಡ್ ಚಿತ್ರ ಭರತ್ ಕಾಮಾ ನಿದೇಶನದಲ್ಲಿ ಮೂಡಿ ಬಂದಿದ್ದು, ನವೀನ್ ಯೆರನೆನಿ, ವೈ.ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜಸ್ಟಿನ್ ಪ್ರಭಾಕರನ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು, ಟೀಸರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ನೋಡಬಹುದು.

    ಟ್ರೋಲ್ ಮಾಡಿದ್ದು ಯಾಕೆ?:
    ರಶ್ಮಿಕಾ ಈ ಮೊದಲು ವಿಜಯ್ ಜೊತೆ ‘ಗೀತಾ ಗೋವಿಂದಂ’ ಚಿತ್ರದಲ್ಲಿ ಕಿಸ್ಸಿಂಗ್ ಸೀನ್‍ನಲ್ಲಿ ನಟಿಸಿದ್ದರು. ಇದಾದ ಬಳಿಕ ಈಗ ಮತ್ತೆ ವಿಜಯ್ ಜೊತೆ ‘ಡಿಯರ್ ಕಾಮ್ರೆಡ್’ ಟ್ರೈಲರ್ ನಲ್ಲೂ ಕಿಸ್ಸಿಂಗ್ ಸೀನ್ ಮಾಡಿದ್ದಾರೆ. ಹಾಗಾಗಿ ಜನರು ಸಾಮಾಜಿಕ ಜಾಲತಾಣದಲ್ಲಿ ಅವರ ಚಾರಿತ್ರ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಲು ಶುರು ಮಾಡಿದ್ದರು.

    https://www.youtube.com/watch?v=z9uAL7o5jq0