Tag: kiss

  • ಯಶ್ ಲಾಂಚ್ ಮಾಡಿದ ಕಿಸ್ ಟ್ರೈಲರ್ ಮಸ್ತಾಗಿದೆ!

    ಯಶ್ ಲಾಂಚ್ ಮಾಡಿದ ಕಿಸ್ ಟ್ರೈಲರ್ ಮಸ್ತಾಗಿದೆ!

    ಬೆಂಗಳೂರು: ವಿರಾಟ್ ಮತ್ತು ಶ್ರೀಲೀಲಾ ನಾಯಕ ನಾಯಕಿಯರಾಗಿ ನಟಿಸಿರುವ ಕಿಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಈ ಟ್ರೈಲರ್ ಅನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹೀಗೆ ಹೊರ ಬಂದಿರೋ ಈ ಟ್ರೈಲರ್‍ಗೆ ಸಿಗುತ್ತಿರೋ ಪ್ರತಿಕ್ರಿಯೆ ಕೂಡಾ ಭರ್ಜರಿಯಾಗಿಯೇ ಇದೆ. ಇದುವೇ ಕಿಸ್‍ಗಾಗಿ ಜನ ಅದೆಷ್ಟು ಕಾತರರಾಗಿ ಕಾಯುತ್ತಿದ್ದಾರೆಂಬುದನ್ನೂ ಧ್ವನಿಸುವಂತಿದೆ. ಇದಕ್ಕೆ ಬರುತ್ತಿರೋ ಬಹುತೇಕ ಪ್ರತಿಕ್ರಿಯೆಗಳಲ್ಲಿ ಅಂಥಾದ್ದೇ ಕಾತರ ಎದ್ದು ಕಾಣಿಸುತ್ತಿದೆ.

    ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಚಿತ್ರದ ಬ್ಯುಸಿಯ ನಡುವೆಯೂ ಪ್ರೀತಿಯಿಂದ ಈ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಅದು ಮೂಡಿ ಬಂದಿರೋ ರೀತಿಯನ್ನು ಮೆಚ್ಚಿಕೊಳ್ಳುತ್ತಲೇ ಭರವಸೆಯ ಮಾತುಗಳನ್ನಾಡಿದ್ದಾರೆ. ವರ್ಷಾಂತರಗಳಿಂದ ಪರಿಶ್ರಮವಹಿಸಿ ಈ ಸಿನಿಮಾವನ್ನು ಅಚ್ಚುಕಟ್ಟಾಗಿ ರೂಪಿಸಿರೋ ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಇಡೀ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಗಲೆಂದು ಹಾರೈಸಿದ್ದಾರೆ.

    ಹೀಗೆ ಯಶ್ ಕಡೆಯಿಂದ ಬಿಡುಗಡೆಗೊಂಡಿರೋ ಈ ಟ್ರೈಲರ್ ನಿಜಕ್ಕೂ ರೊಮ್ಯಾಂಟಿಕ್ ಆಗಿದೆ. ಪ್ರೇಮಕಾವ್ಯಗಳನ್ನು ಸೃಷ್ಟಿಸೋದರಲ್ಲಿ ಸಿದ್ಧಹಸ್ತರಾಗಿರೋ ಎ.ಪಿ ಅರ್ಜುನ್ ಇಂದಿನ ಜನರೇಷನ್ನಿಗೆ ಹತ್ತಿರಾದ ಕಥೆಯೊಂದನ್ನು ಎತ್ತಿಕೊಂಡಿರೋದೂ ಸ್ಪಷ್ಟವಾಗಿದೆ. ಹಾಗಂತ ಈ ಸಿನಿಮಾದಲ್ಲಿ ಬರೀ ಪ್ರೇಮಕಥೆಯೇ ಇದೆಯೆಂಬ ಭಾವಕ್ಕೆ ಈ ಟ್ರೈಲರ್ ನಲ್ಲಿಯೇ ಮತ್ತೊಂದು ಆಯಾಮದ ಹೊಳಪನ್ನೂ ನೀಡಲಾಗಿದೆ. ಲವರ್ ಬಾಯ್ ಆಗಿ ನಟಿಸಿರೋ ವಿರಾಟ್ ಇಲ್ಲಿ ಮಾಸ್ ಲುಕ್ಕಿನಲ್ಲಿಯೂ ಕಂಗೊಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಪ್ರೀತಿಯ ಜೊತೆ ಜೊತೆಗೇ ಬೇರೊಂದು ಥರದ ಕಥೆಯೇ ಇದರಲ್ಲಿದೆಯಂತೆ.

    ಅದರ ಸ್ಪಷ್ಟ ಸೂಚನೆ ಈ ಟ್ರೈಲರ್ ನಲ್ಲಿದೆ. ಅದುವೇ ಕಿಸ್ ಎಷ್ಟು ರಿಚ್ ಆಗಿ ಮೂಡಿ ಬಂದಿದೆ ಅನ್ನೋದನ್ನೂ ಪ್ರೇಕ್ಷಕರಿಗೆ ತಲುಪಿಸಿದೆ. ಬಿಡುಗಡೆಯಾಗಿ ಗಂಟೆ ಕಳೆಯೋದರೊಳಗಾಗಿಯೇ ಈ ಟ್ರೈಲರ್ ವೀಕ್ಷಣೆಯ ಸಂಖ್ಯೆ ಲಕ್ಷದ ಗಡಿಯತ್ತ ಸಾಗುತ್ತಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ಬೇಗನೆ ಬಿಡುಗಡೆ ಮಾಡಿ ಎಂಬಂಥಾ ಒತ್ತಾಯಗಳೂ ಕೇಳಿ ಬರಲಾರಂಭಿಸಿವೆ.

  • ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ‘ಕಿಸ್’ ಕೊಡ್ತಾರಂತೆ!

    ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ‘ಕಿಸ್’ ಕೊಡ್ತಾರಂತೆ!

    ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ರೊಮ್ಯಾಂಟಿಕ್ ಹಾಡುಗಳೊಂದಿಗೆ ಬಹುನಿರೀಕ್ಷಿತ ಚಿತ್ರವಾಗಿ ನೆಲೆ ಕಂಡುಕೊಂಡಿದೆ. ತಡವಾದಷ್ಟೂ ಕಾತರವನ್ನು ಹೆಚ್ಚಾಗಿಸುತ್ತಿರೋ ಈ ಸಿನಿಮಾ ಇದೀಗ ಬಿಡುಗಡೆಯ ನಿರ್ಣಾಯಕ ಹಂತ ತಲುಪಿಕೊಂಡಿದೆ. ಅದರ ಭಾಗವಾಗಿ ಚೆಂದದ್ದೊಂದು ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ರೆಡಿಯಾಗಿದೆ. ಈ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಪ್ರೀತಿಯಿಂದ ಬಿಡುಗಡೆ ಮಾಡಲಿದ್ದಾರೆ.

    ಇದೇ ಶುಕ್ರವಾರ, 23ನೇ ತಾರೀಕಿನಂದು ರಾಕಿಂಗ್ ಸ್ಟಾರ್ ಯಶ್ ಕಿಸ್ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಯಶ್ ಬಹು ಕಾಲದ ಸ್ನೇಹಿತರು. ಈ ಸೆಳೆತದಿಂದಲೇ ತಮ್ಮ ಬ್ಯುಸಿಯಾದ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ಕಿಸ್ ಟ್ರೇಲರ್ ಲಾಂಚ್ ಮಾಡಲು ಅವರೊಪ್ಪಿಕೊಂಡಿದ್ದಾರೆ. ಈ ಮೂಲಕವೇ ಕಿಸ್ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತೆಯೂ ಆಗಿದೆ. ಕಿಸ್ ಈವರೆಗೂ ಸೃಷ್ಟಿಸಿರೋ ಕ್ರೇಜ್ ಕಂಡು ಯಶ್ ಸಂತಸಗೊಂಡಿದ್ದಾರಂತೆ.

    ವಿರಾಟ್ ಮತ್ತು ಶ್ರೀಲೀಲಾ ಕಿಸ್‍ನಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿರೋ ಶೀಲ ಸುಶೀಲ ಯೂ ಡೋಂಟುವರಿ ಎಂಬ ಹಾಡಂತೂ ಈ ಕ್ಷಣಕ್ಕೂ ಟ್ರೆಂಡಿಂಗ್‍ನಲ್ಲಿದೆ. ಆ ನಂತರ ಬಂದಿರೋ ಹಾಡುಗಳೂ ಕೂಡಾ ಮಿಲಿಯನ್ನುಗಟ್ಟಲೆ ವೀವ್ಸ್‍ನೊಂದಿಗೆ ದಾಖಲೆ ಬರೆದಿವೆ. ಆದರೆ ಈ ಸಿನಿಮಾದ ಕಥೆ ಏನಿರಬಹುದೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದು ಕೊಂಡಿದೆ. ಶುಕ್ರವಾರ ಯಶ್ ಬಿಡುಗಡೆಗೊಳಿಸಲಿರೋ ಟ್ರೇಲರ್‍ನಲ್ಲಿ ಅದರ ಸಿಳಿವಿರಬಹುದಾ? ಅಥವಾ ಆ ಮೂಲಕವೇ ಮತ್ತಷ್ಟು ಕ್ಯೂರಿಯಾಸಿಟಿಗೆ ಕಾರಣವಾಗುವಂತೆ ಈ ಟ್ರೇಲರ್ ಅನ್ನು ರೂಪಿಸಿದ್ದಾರಾ ಅನ್ನೋದೆಲ್ಲ ಜಾಹೀರಾಗಲು ಇನ್ನೊಂದು ದಿನ ಕಾಯಬೇಕಿದೆಯಷ್ಟೆ!

  • ಕಿಸ್ ಮಾಡೋ ಭರದಲ್ಲಿ ಸೇತುವೆಯಿಂದ ಕೆಳಗೆ ಬಿದ್ದ ದಂಪತಿ

    ಕಿಸ್ ಮಾಡೋ ಭರದಲ್ಲಿ ಸೇತುವೆಯಿಂದ ಕೆಳಗೆ ಬಿದ್ದ ದಂಪತಿ

    ಲಿಮಾ: ಪ್ರೀತಿಯಲ್ಲಿ ಮುಳುಗಿದ್ದ ದಂಪತಿ ಕಿಸ್ ಮಾಡುವ ತನ್ಮಯತೆಯಲ್ಲಿ 50 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಪೆರು ನಗರದಲ್ಲಿ ನಡೆದಿದೆ.

    ಎಸ್ಪಿನೋಜ್ (34), ಹೆಕ್ಟರ್ ವಿಡಾಲ್ (36) ಸಾವನ್ನಪ್ಪಿದ ದಂಪತಿಯಾಗಿದ್ದು, ಶನಿವಾರ ತಡರಾತ್ರಿ ದುರ್ಘಟನೆ ನಡೆದಿದೆ. ಟೂರಿಸ್ಟ್ ಗೈಡ್‍ಗಳಾಗಿ ಕೆಲಸ ಮಾಡುವ ದಂಪತಿ ಕಾರ್ಯ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದರು. ಶನಿವಾರ ಕೆಲಸ ಪೂರ್ಣಗೊಳಿಸಿದ್ದ ದಂಪತಿ ನಗರದ ಬೆಥ್ಲೆಹೆಮ್ ಸೇತುವೆ ಮೇಲೆ ಏಕಾಂತದಲ್ಲಿ ಕಾಲ ಕಳೆಯಲು ನಿರ್ಧರಿಸಿ ನಿಂತಿದ್ದರು.

    ಸೇತುವೆ ಮೇಲೆ ತನ್ಮಯದಿಂದ ಕಿಸ್ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ನಿ ಎಸ್ಪಿನೋಜ್ ತನ್ನ ಪತಿಯನ್ನು ಹತ್ತಿರಕ್ಕೆ ಎಳೆದುಕೊಂಡಿದ್ದು, ಈ ವೇಳೆ ಬ್ಯಾಲೆನ್ಸ್ ತಪ್ಪಿದ ಕಾರಣ ಇಬ್ಬರು ಸೇತುವೆ ಮೇಲಿಂದ ಕೆಳಗೆ ಉರುಳಿ ಬಿದ್ದಿದ್ದಾರೆ. ಪರಿಣಾಮ ತೀವ್ರಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರೂ ಎಸ್ಪಿನೋಜ್ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಪತಿ ವಿಡಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಸೇತುವೆ ಮೇಲಿಂದ ಕೆಳಗೆ ಬಿದ್ದ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

  • ಮಂಡಿಯೂರಿ ಅಜ್ಜಿಗೆ ರೋಸ್ ಜೊತೆ ಕಿಸ್ ಕೊಟ್ಟ ರಣ್‍ವೀರ್ – ವಿಡಿಯೋ ವೈರಲ್

    ಮಂಡಿಯೂರಿ ಅಜ್ಜಿಗೆ ರೋಸ್ ಜೊತೆ ಕಿಸ್ ಕೊಟ್ಟ ರಣ್‍ವೀರ್ – ವಿಡಿಯೋ ವೈರಲ್

    ಲಂಡನ್: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ರಣ್‍ವೀರ್ ತಾವು ಹೋದ ಕಡೆಯಲ್ಲಿ ಅಭಿಮಾನಿಗಳ ಜೊತೆ ಪ್ರೀತಿಯಿಂದ ಮಾತನಾಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ವೃದ್ಧೆ ಅಭಿಮಾನಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಗೆ ರೋಸ್ ಜೊತೆಗೆ ಕಿಸ್ ಕೊಟ್ಟಿದ್ದಾರೆ.

    ನಟ ರಣ್‍ವೀರ್ ಸಿಂಗ್ ವೃದ್ಧೆ ಅಭಿಮಾನಿಗೆ ಗೌರವ ಕೊಟ್ಟು ಮಾತನಾಡಿಸಿದ ವಿಡಿಯೋವನ್ನು ಅಭಿಮಾನಿಗಳು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ. ನಟ ರಣ್‍ವೀರ್ ಸಿಂಗ್ ಸದ್ಯಕ್ಕೆ `83′ ಸಿನಿಮಾವನ್ನು ಮಾಡುತ್ತಿದ್ದು, ಈ ಸಿನಿಮಾ ಶೂಟಿಂಗ್ ಲಂಡನ್‍ನಲ್ಲಿ ನಡೆಯುತ್ತಿದೆ. ಇದಕ್ಕಾಗಿ ರಣ್‍ವೀರ್ ಲಂಡನ್ ಪ್ರವಾಸದಲ್ಲಿದ್ದಾರೆ.

    ಸಿನಿಮಾದ ಕೆಲವು ಪ್ರಮುಖ ದೃಶ್ಯವನ್ನು ಲಂಡನ್‍ನ ಸೌತ್‍ಹಾಲ್‍ನಲ್ಲಿ ಶೂಟ್ ಮಾಡಲಾಗಿದೆ. ಇದೇ ವೇಳೆ ರಣ್‍ವೀರ್ ಅಲ್ಲಿಗೆ ಬರುತ್ತಿರುವ ಮಾಹಿತಿ ತಿಳಿದುಕೊಂಡು ಅಪಾರ ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು. ರಣ್‍ವೀರ್ ಬರುತ್ತಿದ್ದಂತೆ ಅಭಿಮಾನಿಗಳು ಬ್ಯಾಂಡ್‍ಗಳನ್ನು ಸ್ಥಳಕ್ಕೆ ತರಿಸಿ ಸ್ಥಳದಲ್ಲಿ ಹಬ್ಬದ ವಾತಾವರಣವನ್ನೇ ಕ್ರಿಯೇಟ್ ಮಾಡಿದ್ದರು.

    ಅಭಿಮಾನಿಗಳ ಅಪಾರ ಅಭಿಮಾನಕ್ಕೆ ಸೋತು ರಣ್‍ವೀರ್ ಕೂಡ ಬ್ಯಾಂಡ್ ಮ್ಯೂಸಿಕ್‍ಗೆ ಸ್ಟೆಪ್ ಹಾಕಿದ್ದಾರೆ. ನಂತರ ಅಲ್ಲಿದ್ದ ಮಕ್ಕಳು, ಯುವಕ-ಯುವತಿಯರು ಮತ್ತು ಹಿರಿಯರು ಸೇರಿದಂತೆ ಎಲ್ಲರಿಗೂ ಕೈ ಬೀಸಿ ಹಾಯ್ ಹೇಳಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ರೋಸ್ ಕೊಟ್ಟಿದ್ದಾರೆ. ಆ ರೋಸ್ ತೆಗೆದುಕೊಂಡು ಎಲ್ಲರ ಕೈ ಕುಲುಕುತ್ತಿದ್ದರು.

    ಆಗ ರಣ್‍ವೀರ್ ಸುಮಾರು 70 ವರ್ಷದ ಅಜ್ಜಿಯೊಬ್ಬರನ್ನು ನೋಡಿದ್ದಾರೆ. ಅವರು ವ್ಹೀಲ್ ಚೇರ್ ಮೇಲೆ ಸ್ಟಿಕ್ ಹಿಡಿದು ಕುಳಿತುಕೊಂಡಿದ್ದರು. ಅವರ ಮುಂದೆ ರಣ್‍ವೀರ್ ಮಂಡಿಯೂರಿ ರೋಸ್ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದರು. ಆಗ ಅಜ್ಜಿ ಸಂತಸಗೊಂಡು ರಣ್‍ವೀರ್ ಕೆನ್ನೆಗೆ ಮುತ್ತು ಕೊಟ್ಟರು. ನಂತರ ರಣ್‍ವೀರ್ ಕೂಡ ಅಜ್ಜಿ ಕೈಗೆ ಕಿಸ್ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    https://twitter.com/RanveerSinghtbt/status/1157723474611384321

  • ಕಿಸ್: ಸೂಪರ್ ಹಿಟ್ ಹಾಡುಗಳ ಮೆರವಣಿಗೆ!

    ಕಿಸ್: ಸೂಪರ್ ಹಿಟ್ ಹಾಡುಗಳ ಮೆರವಣಿಗೆ!

    ಬೆಂಗಳೂರು:  ವಿರಾಟ್ ಮತ್ತು ಶ್ರೀಲೀಲಾ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಕಿಸ್ ಚಿತ್ರದ ಹಾಡುಗಳ ಹಂಗಾಮಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಈ ಮುದ್ದಾದ ಜೋಡಿ, ಅದಕ್ಕೆ ತಕ್ಕುದಾದ ಹಾಡುಗಳ ಮೂಲಕವೇ ಕಿಸ್ ಬಗ್ಗೆ ಪ್ರೇಕ್ಷಕರೆಲ್ಲರಿಗೂ ಮೋಹ ಮೂಡಿಕೊಂಡಿದೆ. ಈ ದಿಸೆಯಲ್ಲಿ ನಿರ್ದೇಶಕ ಎ.ಪಿ ಅರ್ಜುನ್ ಕಿಸ್ ಮೂಲಕವೂ ಹಾಡುಗಳೊಂದಿಗೆ ಸಿನಿಮಾ ಪ್ರೇಮಿಗಳನ್ನು ತಾಕುವ ತಮ್ಮತನವನ್ನು ಮುಂದುವರೆಸಿದ್ದಾರೆ.

     

    ಎ.ಪಿ ಅರ್ಜುನ್ ಚಿತ್ರಗಳೆಂದ ಮೇಲೆ ಪ್ರೇಕ್ಷಕರಿಗೆಲ್ಲ ಹಾಡುಗಳ ಬಗ್ಗೆ ಅಗಾಧವಾದ ನಿರೀಕ್ಷೆಗಳಿರುತ್ತವೆ. ಅಂಬಾರಿ ಚಿತ್ರದಿಂದ ಆರಂಭವಾಗಿ ಇಲ್ಲಿಯವರೆಗೂ ಅರ್ಜುನ್ ಅದನ್ನು ಸುಳ್ಳು ಮಾಡಿಯೇ ಇಲ್ಲ. ಆದರೆ ಕಿಸ್ ಹಾಡುಗಳು ಮಾತ್ರ ಅವರ ಈವರೆಗಿನ ದಾಖಲೆಗಳನ್ನೆಲ್ಲ ಬ್ರೇಕ್ ಮಾಡಿ ಮುನ್ನುಗ್ಗುತ್ತಿವೆ. ವಿ. ಹರಿಕೃಷ್ಣ ಮತ್ತು ಎ.ಪಿ ಅರ್ಜುನ್ ಜೋಡಿಯ ಮೆಲೋಡಿ ಕಾಂಬಿನೇಷನ್ ಕಿಸ್ ಮೂಲಕವೂ ಯಶಸ್ವಿಯಾಗಿ ಮುಂದುವರೆದಿದೆ.

    ಆರಂಭದಲ್ಲಿ ಬಿಡುಗಡೆಯಾಗಿದ್ದ ಶೀಲ ಸುಶೀಲ ಯೂ ಡೋಂಟುವರಿ ಹಾಡಿನ ಮೂಲಕವೇ ಕಿಸ್ ಏಕಾಏಕಿ ಸಂಚಲನ ಸೃಷ್ಟಿಸಿತ್ತು. ಅದಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಿಕ್ಕ ವೀವ್ಸ್ ಬೆರಗಾಗುವಂತಿತ್ತು. ಇದೀಗ ಮಿಲಿಯಗಟ್ಟಲೆ ವೀವ್ಸ್‍ನೊಂದಿಗೆ ಅದು ಮುನ್ನುಗ್ಗುತ್ತಲೇ ಇದೆ. ಅದಾದ ನಂತರ ಬಂದ ಮೆಲೋಡಿ ಹಾಡಿಗೂ ಜನ ಫಿದಾ ಆಗಿದ್ದಾರೆ. ಇದೇ ಬಿಸಿಯಲ್ಲೀಗ ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ ಎಂಬ ಹಾಡು ಬಿಡುಗಡೆಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿ ಬಿಡುಗಡೆಗೊಳಿಸಿರೋ ಈ ಹಾಡು ಕೂಡಾ ಹಿಟ್ ಆಗಿದೆ.

    ಇನ್ನೇನು ಬಿಡುಗಡೆಗೆ ಅಣಿಗೊಂಡಿರೋ ಕಿಸ್ ಹಾಡುಗಳಷ್ಟೂ ಮೋಹಕವಾದ ಕಥೆಯನ್ನೂ ಒಳಗೊಂಡಿದೆ. ಕಿಸ್ ಎಂಬ ಪದವೇ ಅನೇಕರಲ್ಲಿ ಅವರದ್ದೇ ಆದ ನವಿರು ಭಾವಗಳು ಮೂಡಿಕೊಳ್ಳುತ್ತವೆ. ಅಂಥಾದ್ದೇ ನವಿರುತನ ಹೊಂದಿರೋ ಕಥೆಯಿರುವ ಈ ಸಿನಿಮಾದಲ್ಲಿ ಅಶ್ಲೀಲತೆಯ ಲವಲೇಷವೂ ಇಲ್ಲ. ಇದೊಂದು ಮುದ್ದಾದ ಲವ್ ಸ್ಟೋರಿ. ಆದದ್ದು ಬರೀ ಪ್ರೀತಿಗೆ ಮಾತ್ರವೇ ಸೀಮಿತವಾಗಿಲ್ಲ ಅನ್ನೋದು ಚಿತ್ರತಂಡದ ಮಾತು.

  • ಕಿಸ್: ನಾಳೆ ಬಿಡುಗಡೆಯಾಗಲಿದೆ ಪವರ್ ಸ್ಟಾರ್ ಹಾಡಿರೋ ಸ್ಪೆಷಲ್ ಸಾಂಗ್!

    ಕಿಸ್: ನಾಳೆ ಬಿಡುಗಡೆಯಾಗಲಿದೆ ಪವರ್ ಸ್ಟಾರ್ ಹಾಡಿರೋ ಸ್ಪೆಷಲ್ ಸಾಂಗ್!

    ಬೆಂಗಳೂರು: ವಿರಾಟ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸಿರೋ ಕಿಸ್ ಬಿಡುಗಡೆಯ ಹಂತದಲ್ಲಿದೆ. ಈ ಹಿಂದೆಯೇ ಬಿಡುಗಡೆಯಾಗಿದ್ದ ಎರಡು ಹಾಡುಗಳು ಸೃಷ್ಟಿ ಮಾಡಿದ್ದ ಕ್ರೇಜ್ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಆಕರ್ಷಕ ಹಾಡನ್ನು ರೂಪಿಸಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರೋ ಈ ಸ್ಪೆಷಲ್ ಸಾಂಗ್ ಅನ್ನು ನಾಳೆ ಸಂಜೆ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಾಗಿದೆ.

    ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ ಎಂಬ ಈ ವಿಶೇಷವಾದ ಹಾಡನ್ನು ನಿರ್ದೇಶಕ ಎ ಪಿ ಅರ್ಜುನ್ ಅವರೇ ಬರೆದಿದ್ದಾರೆ. ಇದಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಿಂದೆ ಯಜಮಾನ ಚಿತ್ರದ ಬಸಣ್ಣಿ ಹಾಡಿಗೆ ಸಂಗೀತ ನೀಡಿ ಹಾಡುವ ಮೂಲಕ ಹರಿಕೃಷ್ಣ ಎಲ್ಲರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಇದೀಗ ಕಿಸ್ ಮೂಲಕವೂ ಅಂಥಾದ್ದೇ ಟ್ರೆಂಡ್ ಸೆಟ್ ಮಾಡೋ ಮಹತ್ವಾಕಾಂಕ್ಷೆಯೊಂದಿಗೆ ಅವರು ಈ ಹಾಡನ್ನು ರೂಪಿಸಿದ್ದಾರೆ. ಇದು ನಾಳೆ ಸಂಜೆ 5 ಗಂಟೆ 1 ನಿಮಿಷಕ್ಕೆ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಲಿದೆ.

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅತ್ತ ಯುವರತ್ನ ಚಿತ್ರದ ಚಿತ್ರೀಕರಣದ ನಡುವೆಯೂ ಬಲು ಪ್ರೀತಿಯಿಂದಲೇ ಈ ಹಾಡನ್ನು ಹಾಡಿದ್ದಾರೆ. ಇದರ ಸಾಹಿತ್ಯ ಮತ್ತು ಸಂಗೀತಕ್ಕೆ ಮನಸೋತಿದ್ದಾರೆ. ಈ ವರೆಗೂ ಹಲವಾರು ಚಿತ್ರಗಳಿಗೆ ಪುನೀತ್ ಹಾಡಿದ್ದಾರೆ. ಅವೆಲ್ಲವೂ ಹಿಟ್ ಕೂಡಾ ಆಗಿವೆ. ಕಿಸ್ ಚಿತ್ರದ ಬೆಟ್ಟೇಗೌಡನ ಹಾಡೂ ಕೂಡಾ ಆ ಹಿಟ್ ಲಿಸ್ಟಿಗೆ ದಾಖಲಾಗೋ ಭರವಸೆ ಚಿತ್ರತಂಡದಲ್ಲಿದೆ.

    ಎಪಿ ಅರ್ಜುನ್ ಹೊಸತನ ಹೊಂದಿರೋ ಪ್ರೇಮ ಕಥೆಯೊಂದನ್ನು ಕಿಸ್ ಮೂಲಕ ಹೇಳ ಹೊರಟಿದ್ದಾರೆ. ಆರಂಭದಲ್ಲಿಯೇ ಶೀಲ ಸುಶೀಲ ಯೂ ಡೋಂಟುವರಿ ಎಂಬ ರ್ಯಾಪ್ ಶೈಲಿಯ ಹಾಡನ್ನು ಬಿಡುಗಡೆಗೊಳಿಸಲಾಗಿತ್ತು. ಈ ಹಾಡಂತೂ ಯೂಟ್ಯೂಬ್‍ನಲ್ಲಿ ಹುಟ್ಟು ಹಾಕಿರೋ ಟ್ರೆಂಡ್ ಸಾಮಾನ್ಯವಾದುದೇನಲ್ಲ. ಅದರ ಬೆನ್ನಿಗೇ ಬಿಡುಗಡೆಯಾದ ಮೆಲೋಡಿ ಹಾಡೂ ಕೂಡಾ ಹಿಟ್ ಆಗಿದೆ. ಇದೀಗ ಆ ಸಾಲು ಸೇರಿಕೊಳ್ಳಲು ಬೆಟೇಗೌಡ ವರ್ಸಸ್ ಚಿಕ್ಕಬೋರಮ್ಮ ಎಂಬ ವಿಶೇಷ ಗೀತೆಯೂ ತಯಾರಾಗಿದೆ.

  • ಅಭಿಮಾನಿಯಿಂದ ಕಿಸ್ – ಈಶ್ವರಪ್ಪ ಫುಲ್ ಖುಷ್

    ಅಭಿಮಾನಿಯಿಂದ ಕಿಸ್ – ಈಶ್ವರಪ್ಪ ಫುಲ್ ಖುಷ್

    ಬೆಂಗಳೂರು: ಶಾಸಕರ ರಾಜೀನಾಮೆ ಪರ್ವದಿಂದ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಮಡಾ ರೆಸಾರ್ಟ್‍ನಲ್ಲಿ ತಂಗಿರುವ ಬಿಜೆಪಿ ಶಾಸಕರನ್ನು ನೋಡಲು ಬಂದಿದ್ದ ಅಭಿಮಾನಿಯೊಬ್ಬ ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪನವರಿಗೆ ಕಿಸ್ ಕೊಟ್ಟಿದ್ದಾನೆ.

    ಇಂದು ತಮ್ಮ ನೆಚ್ಚಿನ ನಾಯಕರನ್ನು ಭೇಟಿ ಮಾಡಲು ರೆಸಾರ್ಟ್ ಬಳಿ ಅಭಿಮಾನಿಗಳು ಬೀಡು ಬಿಟ್ಟಿದ್ದರು. ರೆಸಾರ್ಟ್ ಬಳಿ ತಮ್ಮ ನೆಚ್ಚಿನ ನಾಯಕರ ಸೆಲ್ಫಿಗಾಗಿ ಕಾರ್ಯಕರ್ತರು ಮುಗಿಬಿಳುತ್ತಿದ್ದರು. ಇದನ್ನು ಗಮನಿಸಿದ ಈಶ್ವರಪ್ಪ ಮತ್ತು ರಾಮದಾಸ್ ರೆಸಾರ್ಟ್ ನಿಂದ ಹೊರಬಂದು ಅಭಿಮಾನಿಗಳನ್ನು ಭೇಟಿ ಮಾಡಿದರು.

    https://www.instagram.com/p/Bz8QU_KnZHF/?igshid=ha19aaeb8ymj

    ಈ ವೇಳೆ ಅಭಿಮಾನಿಗಳಿಗೋಸ್ಕರ ನಾಯಕರು ಅವರ ಜೊತೆ ಬಳಿ ಸೆಲ್ಫಿ ತೆಗೆದುಕೊಂಡರು. ಈ ಸಮಯದಲ್ಲಿ ಅಭಿಮಾನಿಯೊಬ್ಬ ಈಶ್ವರಪ್ಪ ಅವರ ಕೆನ್ನೆ ಮುಟ್ಟಿ ಮುತ್ತು ಕೊಟ್ಟಿದ್ದಾನೆ. ಅಭಿಮಾನಿ ಮುತ್ತು ಕೊಟ್ಟಿದ್ದಕ್ಕೆ ಈಶ್ವರಪ್ಪ ಫುಲ್ ಖುಷ್ ಆಗಿದ್ದಾರೆ.

    ಇದೇ ವೇಳೆ ಸುರುಪುರ ಮತ್ತು ಬದಾಮಿ ಕ್ಷೇತ್ರದಿಂದ ನೆಚ್ಚಿನ ಶಾಸಕರನ್ನು ಭೇಟಿಯಾಗಲು ಬಂದಿದ್ದ ಕಾರ್ಯಕರ್ತರನ್ನು ಮಾತನಾಡಿಸಿದ ಕೆ.ಎಸ್.ಈಶ್ವರಪ್ಪ, ಬದಾಮಿಯಿಂದ ಬಂದಿದ್ದೀರಾ? ಸಿದ್ದರಾಮಯ್ಯ ಅವರನ್ನು ಈ ಬಾರಿ ಸೋಲಿಸೋಕೆ ಬಂದಿದ್ದಿರಾ ಎಂದು ಹೇಳಿ ವ್ಯಂಗ್ಯವಾಡಿದರು.

  • ಫೋಟೋಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಕಿಸ್ಸಿಂಗ್ ಕಪಲ್

    ಫೋಟೋಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಕಿಸ್ಸಿಂಗ್ ಕಪಲ್

    ಕೋಲಂಬೋ: ಎಲ್ಲರಗಿಂತ ನಮ್ಮ ಫೋಟೋಗಳು ಚೆನ್ನಾಗಿರಬೇಕು. ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಲೈಕ್ಸ್, ಕಮೆಂಟ್ ಬರಬೇಕು ಎಂಬುವುದು ಯುವ ಜನತೆಯ ಆಸೆ ಆಗಿರುತ್ತದೆ. ಹಾಗಾಗಿ ಸಾಹಸ ಮಾಡಿ ಅಪಯಾಕಾರಿ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಇಂತಹ ಸ್ಥಳಗಳಲ್ಲಿ ಫೋಟೋಗಳು ಚೆನ್ನಾಗಿಯೇ ಬರುತ್ತೆ, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಕಿಸ್ಸಿಂಗ್ ಕಪಲ್ ಎಂದೇ ಪ್ರಸಿದ್ಧಿ ಪಡೆದಿರುವ ಜೀನ್ ಮತ್ತು ಕ್ಯಾಮಿಲ್ಲೆ ಬೆಟ್ಟದ ನಡುವೆ ಸೇತುವೆ ಮೇಲೆ ಚಲಿಸುತ್ತಿರುವ ರೈಲಿನ ಬಾಗಿಲ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ರೈಲಿನ ಬಾಗಿಲ ಹೊರಗಡೆ ಮುಖಮಾಡಿ ಇಬ್ಬರು ಕಿಸ್ ಮಾಡಿದ್ದು, ಮೂರನೇ ವ್ಯಕ್ತಿ ಫೋಟೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ಫೋಟೋವನ್ನು ತಮ್ಮ ಇನ್ಸಟಾಗ್ರಾಂ ಪೇಜಿನಲ್ಲಿ ಅಪ್ಲೋಡ್ ಮಾಡಿಕೊಂಡು ಇದು ಪ್ರೀತಿಯ ಹುಚ್ಚುತನದ ಮುತ್ತು ಎಂದು ಬರೆದುಕೊಂಡಿದ್ದಾರೆ. ಜೀನ್ ಮತ್ತು ಕ್ಯಾಮಿಲ್ಲೆ ಫೋಟೋ ವೈರಲ್ ಆಗುತ್ತಿದ್ದಂತೆ ಮತ್ತೊಂದು ಜೋಡಿ ಇದೇ ರೀತಿ ಫೋಟೋ ಕ್ಲಿಕ್ಕಿಸಿಕೊಂಡಿದೆ.

    https://www.instagram.com/p/BvM-YKqFX6Q/

    ಕಿಸ್ಸಿಂಗ್ ಕಪಲ್ ಫೋಟೋ ನೋಡಿದ ನೆಟ್ಟಿಗರು ವಾವ್, ಅಮೇಜಿಂಗ್, ಸೂಪರ್, ಟ್ರೂ ಲವ್ ಅಂತ ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಹಲವರು ಕೇವಲ ಒಂದು ಫೋಟೋಗಾಗಿ ಪ್ರಾಣವನ್ನ ಪಣಕ್ಕಿಡುವುದು ಹುಚ್ಚುತನ ಎಂದು ಕಮೆಂಟ್ ಮಾಡಿದ್ದಾರೆ. ಫೋಟೋ ಇದೂವರೆಗೂ 43 ಸಾವಿರಕ್ಕೂ ಅಧಿಕ ಲೈಕ್ಸ್, 2 ಸಾವಿರಕ್ಕೂ ಅಧಿಕ ಕಮೆಂಟ್ ಪಡೆದುಕೊಂಡಿದೆ.

    ಜೀನ್ ಮತ್ತು ಕ್ಯಾಮಿಲ್ಲೆ ವಿಶ್ವದ ಸುಂದರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿಯ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಕಿಸ್ ಮಾಡುತ್ತಿರುವ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಭಾರತಕ್ಕೂ ಭೇಟಿ ನೀಡಿದ್ದ ಕಿಸ್ಸಿಂಗ್ ಜೋಡಿ ಜೈಪುರ ಕೋಟೆಯ ತಡೆಗೋಡೆಯ ಮೇಲೆ ನಿಂತು ಫೋಟೋ ತೆಗೆದುಕೊಂಡಿದ್ದಾರೆ.

    https://www.instagram.com/p/Bw9-B8NBla5/

    https://www.instagram.com/p/BvKLe31hix1/

  • ಸುಮಲತಾಗೆ ಹಾರ ಹಾಕಿ ಯಶ್, ದರ್ಶನ್‍ಗೆ ಮುತ್ತಿಟ್ಟ ಅಭಿಮಾನಿ

    ಸುಮಲತಾಗೆ ಹಾರ ಹಾಕಿ ಯಶ್, ದರ್ಶನ್‍ಗೆ ಮುತ್ತಿಟ್ಟ ಅಭಿಮಾನಿ

    ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಸುಮಲತಾ ಅಂಬರೀಶ್ ಅಂಬರೀಶ್ ಇಂದು ನಗರದಲ್ಲಿ ಭಾರೀ ರೋಡ್ ಶೋ ನಡೆಸಿದರು. ಈ ವೇಳೆ ಸುಮಲತಾ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮೆರವಣಿಗೆ ಉದ್ದಕ್ಕೂ ಎಡ-ಬಲದಲ್ಲಿ ನಿಂತು ಸಾಥ್ ನೀಡಿದ್ದಾರೆ.

    ರೋಡ್ ಶೋ ಸಮಯದಲ್ಲಿ ಅಭಿಮಾನಿಯೊಬ್ಬರು ದೊಡ್ಡ ಹೂಹಾರ ತಂದು ಸುಮಲತಾ ಅವರ ಕೊರಳಿಗೆ ಹಾಕಿ ಅಭಿಮಾನ ಮೆರೆದರು. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಯಶ್ ಹಾಗೂ ದರ್ಶನ್ ಅವರಿಗೆ ಕೈ ಕೊಟ್ಟು, ಮುತ್ತಿಟ್ಟು ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ ನೆಚ್ಚಿನ ನಾಯಕರನ್ನು ಹತ್ತಿರದಿಂದ ನೋಡಿದ ಖುಷಿಗೆ ಕೈ ಎತ್ತಿ ಕುಣಿದು ಫುಲ್ ಖುಷಿ ಪಟ್ಟಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದ ಜ್ಯುಬಿಲಿ ಪಾರ್ಕ್ ವರೆಗೆ ನಡೆದ ರೋಡ್ ಶೋದಲ್ಲಿ ಭಾರೀ ಸಂಖ್ಯೆಯಲ್ಲಿ ಅಂಬಿ ಅಭಿಮಾನಿಗಳು ಪಾಲ್ಗೊಂಡು ಸುಮಲತಾ ಅವರಿಗೆ ಬೆಂಬಲ ನೀಡಿದರು.

  • ಮುತ್ತಿನ ಆಸೆಗೆ ಬುರ್ಕಾ ಧರಿಸಿ ನಡುಬೀದಿಯಲ್ಲೇ ಒದೆತಿಂದ!

    ಮುತ್ತಿನ ಆಸೆಗೆ ಬುರ್ಕಾ ಧರಿಸಿ ನಡುಬೀದಿಯಲ್ಲೇ ಒದೆತಿಂದ!

    ಚೆನ್ನೈ: ಪ್ರೇಯಸಿಯಿಂದ ಮುತ್ತು ಪಡೆಯಲು ರಸ್ತೆಗೆ ಬುರ್ಕಾ ಧರಿಸಿ ಬಂದಿದ್ದ ಯುವಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಮಿಳುನಾಡಿನ ರಾಯ್ಪೆಟ್ಟಾದಲ್ಲಿ ನಡೆದಿದೆ.

    ಪಟ್ಟಬ್ರಾಮ್ ಪ್ರದೇಶದ ನಿವಾಸಿ ಶಕ್ತಿವೇಲ್ ಮುತ್ತಿನ ಆಸೆಗೆ ಒದೆ ತಿಂದಿದ್ದಾನೆ. ಹೌದು, ಶಕ್ತಿವೇಲ್ ಕಳೆದ ಆರು ತಿಂಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರಿಂದ ಪ್ರೇಮಿಗಳ ದಿನದಂದು ಪ್ರೇಯಸಿ ಬಳಿ ಯುವಕ ಕಿಸ್ ಕೊಡುವಂತೆ ಕೇಳಿದ್ದಾನೆ.

    ಈ ವೇಳೆ ಮುತ್ತು ಪಡೆಯಲು ಗೆಳತಿ ಬುರ್ಕಾ ಧರಿಸಿ ರಾಯ್ಪೆಟ್ಟಾದ ರಸ್ತೆಯಲ್ಲಿ ನಡೆದುಕೊಂಡು ಮರೀನಾ ಬೀಚ್ ಬಳಿ ಬಂದರೆ ಮಾತ್ರ ಮುತ್ತು ಕೊಡುತ್ತೇನೆ ಎಂದು ವಿಚಿತ್ರ ಷರತ್ತನ್ನು ವಿಧಿಸಿದ್ದಾಳೆ. ಮುತ್ತಿಗೋಸ್ಕರ ಯುವತಿಯ ಮಾತು ಒಪ್ಪಿದ ಯುವಕ ಮಂಗಳವಾರ ರಾತ್ರಿ ಬುರ್ಕಾ ಧರಿಸಿ ರಸ್ತೆಗಿಳಿದಿದ್ದಾನೆ.

    ಇನ್ನೇನು ಆತ ಯುವತಿ ಬಳಿ ತಲುಪಬೇಕು ಎನ್ನುವಷ್ಟರಲ್ಲಿ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ. ಮರೀನಾ ಬೀಚ್ ಸಮೀಪದಲ್ಲಿರುವ ಐಸ್ ಹೌಸ್ ಬಳಿ ಯುವಕ ಬುರ್ಕಾ ಧರಿಸಿ ಬರುತ್ತಿದ್ದಾಗ ವ್ಯಕ್ತಿಯೊಬ್ಬ ಆತನನ್ನು ಗಮನಿಸಿದ್ದಾನೆ.

    ಯುವಕ ನಡೆಯುವ ಶೈಲಿ ನೋಡಿ ಅನುಮಾನ ಬಂದು ಆತನನ್ನೇ ಹಿಂಬಾಲಿಸಿದ್ದಾನೆ. ಬಳಿಕ ಯುವಕ ಹಾಕಿದ್ದ ಚಪ್ಪಲಿಯನ್ನು ಗಮನಿಸಿ ಬುರ್ಕಾ ಧರಿಸಿರುವುದು ಮಹಿಳೆ ಅಲ್ಲ ಎನ್ನುವುದು ಖಚಿತವಾಗಿದೆ.

    ನಂತರ ಸ್ಥಳದಲ್ಲಿದ್ದವರಿಗೆ ವಿಷಯ ತಿಳಿಸಿದ ಎಲ್ಲರು ಸೇರಿಕೊಂಡು ಯುವಕನನ್ನು ಕಳ್ಳನೆಂದು ಭಾವಿಸಿ ಹೊಡೆದಿದ್ದಾರೆ. ಯಾಕೆ ಬುರ್ಕಾ ಧರಿಸಿ ಹೀಗೆ ಓಡಾಡುತ್ತಿದ್ದೀಯಾ ಅಂತ ಪ್ರಶ್ನಿಸಿದ್ದಾರೆ. ಆದರೆ ಯಾವುದಕ್ಕೂ ಯುವಕ ಉತ್ತರ ನೀಡದೇ ಇದ್ದಾಗ ಸಿಕ್ಕಾಪಟ್ಟೆ ಹೊಡೆದು ಕೊನೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಳಿಕ ಪೊಲೀಸರು ಯುವಕನನ್ನು ವಿಚಾರಣೆ ನಡೆಸಿದಾಗ ಸತ್ಯಾಂಶವನ್ನು ಯುವಕ ಬಾಯ್ಬಿಟ್ಟಿದ್ದಾನೆ. ಸದ್ಯ ವಿಚಾರಣೆ ಬಳಿಕ ಪೊಲೀಸರು ಯುವಕನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv