Tag: kiss

  • ನೋಡ ನೋಡ್ತಿದ್ದಂತೇ ಮೆಟ್ರೋದಲ್ಲಿ ಅಪ್ಪಿ ಮುದ್ದಾಡಿಕೊಂಡ ಜೋಡಿ

    ನೋಡ ನೋಡ್ತಿದ್ದಂತೇ ಮೆಟ್ರೋದಲ್ಲಿ ಅಪ್ಪಿ ಮುದ್ದಾಡಿಕೊಂಡ ಜೋಡಿ

    – ಇಬ್ಬರ ವಿರುದ್ಧವೂ ಕ್ರಮಕ್ಕೆ ಆಗ್ರಹ
    – ಕ್ರಮ ಕೈಗೊಳ್ಳೋದಾಗಿ ಅಧಿಕಾರಿಗಳು ಭರವಸೆ

    ನವದೆಹಲಿ: ಇತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಪರಸ್ಪರ ಚುಂಬಿಸಿಕೊಂಡು ಸುದ್ದಿಯಾದ ಬೆನ್ನಲ್ಲೇ ಇದೀಗ ಮತ್ತೊಂದು ಜೋಡಿ ಇದೇ ರೀತಿಯ ವರ್ತನೆಯನ್ನು ತೋರಿದೆ.

    ಹೌದು. ದೆಹಲಿ ಮೆಟ್ರೋದಲ್ಲಿ ನಿಂತುಕೊಂಡಿದ್ದ ಜೋಡಿಯೊಂದು ಏಕಾಏಕಿ ತಬ್ಬಿಕೊಂಡು ಮುದ್ದಾಡಿದ್ದು, ಪ್ರಯಾಣಿಕರನ್ನು ಅಸಹ್ಯಕ್ಕೀಡಾಗುವಂತೆ ಮಾಡಿದೆ. ಈ ಜೋಡಿ ಚಲಿಸುತ್ತಿರುವ ಮೆಟ್ರೋದಲ್ಲಿ ಪ್ರಯಾಣಿಕರಿದ್ದಾರೆ ಎಂಬುದನ್ನೂ ಮರೆತು ತಮ್ಮಷ್ಟಕ್ಕೆ ತಾವೇ ಮೈಮರೆಯವಲ್ಲಿ ಬ್ಯುಸಿಯಾಗಿದ್ದಾರೆ.

    ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ತನ್ನ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಬಳಿಕ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ಮೆಟ್ರೋ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ಶೀಘ್ರವೇ ಈ ಜೋಡಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮೆಟ್ರೋ ರೈಲಿನೊಳಗೆ ಪ್ರಯಾಣಿಕರ ಮಧ್ಯೆ ನಿಂತುಕೊಂಡ ಜೋಡಿ ಪರಸ್ಪರ ಅಪ್ಪಿಕೊಂಡು ಕಿಸ್ ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ವಾತ್ಸಲ್ಯವನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಿದ್ದಾರೆ.

    ಈ ಸಂಬಂಧ ದೆಹಲಿಯ ಮೆಟ್ರೋ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಆ ಜೋಡಿಯನ್ನು ಪತ್ತೆ ಹಚ್ಚಿ ಕೂಡಲೇ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ತುಂಬಿದ್ದ ಜನ್ರ ಮುಂದೆಯೇ ಮೆಟ್ರೋದಲ್ಲಿ ಜೋಡಿ ಕಿಸ್!

    ಈ ಹಿಂದೆ ಜೋಡಿಯೊಂದು ಪ್ರಯಾಣಿಕರು ತುಂಬಿದ್ದ ಲೋಕದ ಪರಿಜ್ಞಾನವೇ ಇಲ್ಲದಂತೆ ಪರಸ್ಪರ ಕಿಸ್ ಮಾಡಿಕೊಳ್ಳುವಲ್ಲಿ ನಿರತವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಹುಡುಗ- ಹುಡುಗಿ ಎದುರು ಕೂತಿದ್ದ ಪ್ರಯಾಣಿಕನೇ ಅವರು ಕಿಸ್ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದ. ಇದಕ್ಕೆ ಸಾಕಷ್ಟು ಪರ ವಿರೋಧ ಕಮೆಂಟ್ ಗಳು ಬಂದಿದ್ದವು.

  • ಕಿಸ್: ತುಂಟ ತುಟಿಗಳ ಆಟೋಗ್ರಾಫಿಗೆ ಮನಸೋತ ಪ್ರೇಕ್ಷಕರು!

    ಕಿಸ್: ತುಂಟ ತುಟಿಗಳ ಆಟೋಗ್ರಾಫಿಗೆ ಮನಸೋತ ಪ್ರೇಕ್ಷಕರು!

    ಬೆಂಗಳೂರು: ಗಾಢವಾದ ಪ್ರೀತಿಯಿಂದ, ಶ್ರದ್ಧೆಯಿಂದ ಮಾಡಿದ ಯಾವ ಸಿನಿಮಾಗಳನ್ನೂ ಕನ್ನಡದ ಪ್ರೇಕ್ಷಕರ ಪ್ರಭುಗಳು ಕಡೆಗಣಿಸಿದ ಉದಾಹರಣೆಗಳಿಲ್ಲ. ಹಾಗಿದ್ದ ಮೇಲೆ ಅಖಂಡ ಮೂರು ವರ್ಷಗಳ ಕಾಲ ನಿರ್ದೇಶಕ ಎ.ಪಿ. ಅರ್ಜುನ್ ಶ್ರಮವಹಿಸಿ ಸೃಷ್ಟಿಸಿರುವ ಕಿಸ್ ಎಂಬ ದೃಶ್ಯ ಕಾವ್ಯವನ್ನು ಒಪ್ಪಿಕೊಳ್ಳದಿರುತ್ತಾರೆಯೇ? ಕಿಸ್ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುತ್ತಾ ಬಂದಿದ್ದರು ಕೂಡ ಪ್ರೇಕ್ಷಕರ ಕುತೂಹಲವೆಂಬುದು ಅದನ್ನು ಸದಾ ಹಿಂಬಾಲಿಸುತ್ತಲೇ ಇತ್ತು. ಅದಕ್ಕೆ ಸರಿಯಾಗಿ ಹೊರ ಬಂದಿದ್ದ ಹಾಡುಗಳು ಮತ್ತು ಟ್ರೇಲರ್‍ಗಳು ಪ್ರೇಕ್ಷಕರಲ್ಲಿ ತೀವ್ರವಾದ ನಿರೀಕ್ಷೆಗಳೇ ಪಡಿಮೂಡಿಕೊಂಡಿದ್ದವು. ಅಂತಹ ನಿರೀಕ್ಷೆಗಳಿಗೂ ಮೀರಿದ ಸೊಗಸಿನೊಂದಿಗೆ ಮೂಡಿ ಬಂದಿರೋ ಕಿಸ್ ಸಿನಿಮಾವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

    ಎ.ಪಿ ಅರ್ಜುನ್ ನಿರ್ದೇಶನ ಮತ್ತು ನಿರ್ಮಾಣದ ಕಿಸ್‍ಗೆ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆ ನಂತರದ ದಿನಗಳಲ್ಲಿಯೂ ರಾಜ್ಯಾದ್ಯಂತ ಒಂದೇ ಆವೇಗದಿಂದ ಥಿಯೇಟರ್‍ಗಳು ಭರ್ತಿಯಾಗಲಾರಂಭಿಸಿದ್ದವು. ಇದಕ್ಕೆ ಕಾರಣವಾದದ್ದು ಕಿಸ್ ಬಗ್ಗೆ ಬಾಯಿಂದ ಬಾಯಿಗೆ ಹರಡಿಕೊಂಡಿದ್ದ ಸದಾಭಿಪ್ರಾಯ. ಅಷ್ಟಕ್ಕೂ ಈ ಚಿತ್ರವನ್ನು ಅರ್ಜುನ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಕಾಡುವಂತೆ, ಮತ್ತೆ ಮತ್ತೆ ಚಿತ್ರಮಂದಿರಗಳತ್ತ ಸೆಳೆಯುವ ಸಮ್ಮೋಹಕ ರೀತಿಯಲ್ಲಿಯೇ ಕಟ್ಟಿಕೊಟ್ಟಿದ್ದರು. ಮೊದಲ ದಿನವೇ ತಾಜಾ ತಾಜಾ ಕಿಸ್‍ಗೆ ಜನ ಫಿದಾ ಆಗಿ ಮಾರನೇ ದಿನದಿಂದಲೇ ಸಿನಿಮಾ ಮಂದಿರಗಳು ತುಂಬಿ ತುಳುಕುವಂತಾಗಿತ್ತು. ಈ ಮೂಲಕ ವರ್ಷಾಂತರಗಳ ಶ್ರಮವೂ ಸಾರ್ಥಕ್ಯ ಕಂಡಿದೆ.

    ಇವತ್ತಿನ ವಾತಾವರಣದಲ್ಲಿ ಹೊಸ ಹುಡುಗ-ಹುಡುಗಿಯನ್ನು ನಾಯಕ-ನಾಯಕಿಯರನ್ನಾಗಿಸಿ ಸಿನಿಮಾ ಮಾಡಲು ಎಂಥವರೂ ಹಿಂದೇಟು ಹಾಕುತ್ತಾರೆ. ಆದರೆ ಸ್ವತಃ ನಿರ್ಮಾಪಕರಾಗಿಯೂ ಜವಬ್ದಾರಿ ಹೊತ್ತುಕೊಂಡಿದ್ದ ಅರ್ಜುನ್ ಯಾವ ಭಯವೂ ಇಲ್ಲದೇ ಹೊಸ ಮುಖಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ಹಾಗೆಯೇ ನಾಯಕ ನಾಯಕಿಯರಾಗಿ ನಟಿಸಿರೋ ವಿರಾಟ್ ಮತ್ತು ಶ್ರೀಲೀಲಾ ಜೋಡಿ ಮುದ್ದು ಮುದ್ದಾಗಿಯೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಎ.ಪಿ ಅರ್ಜುನ್ ಹೇಳಿಕೇಳಿ ಪ್ರೇಮ ಕಥೆಗಳ ಸ್ಪೆಷಲಿಸ್ಟ್. ಈ ಸಿನಿಮಾದಲ್ಲಿಯೂ ಅವರು ಮಧುರವಾದ ಪ್ರೀತಿಯ ತಾಜಾ ಕಥೆಯನ್ನು ಹೇಳಿದ್ದಾರೆ. ಅದು ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗಿದೆ. ಆದ್ದರಿಂದಲೇ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರೋ ಕಿಸ್ ಕಲೆಕ್ಷನ್ನಿನಲ್ಲಿಯೂ ದಾಖಲೆ ಬರೆದಿದೆ. ನೀವಿನ್ನೂ ಕಿಸ್ ನೋಡಿಲ್ಲವೆಂದರೆ ಒಂದೊಳ್ಳೆ ಚಿತ್ರವನ್ನು ಮಿಸ್ ಮಾಡಿಕೊಂಡಿದ್ದೀರೆಂದೇ ಅರ್ಥ!.

  • ಕಿಸ್: ಮುದ್ದು ಮನಸುಗಳ ಮಧುರ ಪ್ರೇಮಕಾವ್ಯ!

    ಕಿಸ್: ಮುದ್ದು ಮನಸುಗಳ ಮಧುರ ಪ್ರೇಮಕಾವ್ಯ!

    ಬೆಂಗಳೂರು: ಯಾರನ್ನೇ ಆದರೂ ಕಾಡುವಂಥಾ ಮಧುರ ಪ್ರೇಮ ಕಾವ್ಯಗಳಿಗೆ ಹೆಸರಾಗಿರುವವರು ನಿರ್ದೇಶಕ ಎ.ಪಿ ಅರ್ಜುನ್. ಬಹು ಕಾಲದಿಂದಲೂ ಚೆಂದದ ಹಾಡುಗಳ ಮೂಲಕವೇ ಭಾರೀ ಸದ್ದು ಮಾಡುತ್ತಾ ಸಾಗಿ ಬಂದಿರೋ ಅರ್ಜುನ್ ನಿರ್ದೇಶನದ ಕಿಸ್ ಚಿತ್ರವೀಗ ತೆರೆ ಕಂಡಿದೆ. ಈವರೆಗೂ ಕೂಡಾ ಕೇವಲ ಯುವ ಬಳಗವನ್ನು ಮಾತ್ರವಲ್ಲದೇ ಎಲ್ಲ ವರ್ಗದ ಪ್ರೇಕ್ಷಕರನ್ನೂ ಕೂಡಾ ಈ ಚಿತ್ರ ಸಾರಾಸಗಟಾಗಿಯೇ ಸೆಳೆದುಕೊಂಡಿತ್ತು. ಹೀಗೆ ಬಿಡುಗಡೆ ಪೂರ್ವದಲ್ಲಿ ಎಂಥಾ ಕ್ರೇಜ್ ಸೃಷ್ಟಿಯಾಗಿತ್ತೋ ಅದಕ್ಕೆ ತಕ್ಕುದಾದ ಮಧುರ ಪ್ರೇಮಕಾವ್ಯವೇ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

    ಸದಾ ಪುಟಿದೇಳುವಂಥಾ ಉತ್ಸಾಹವನ್ನು ಎದೆಯಲ್ಲಿಟ್ಟುಕೊಂಡ ಹುಡುಗ, ನಿಂತಲ್ಲಿ ಕುಂತಲ್ಲಿ ಕನಸು ಕಾಣೋ ಮುದ್ದಾದ ಹುಡುಗಿ. ಆ ಇಬ್ಬರ ಭೇಟಿಯೂ ಆಕಸ್ಮಿಕ. ಆದರೆ ಅದುವೇ ಮುದ್ದಾದ ಪ್ರೇಮ ಯಾನಕ್ಕೆ ಆರಂಭವಾಗುತ್ತೆ. ಹೀಗೆ ಎರಡು ಮುದ್ದಾದ ಮನಸುಗಳು ಮುಖಾಮುಖಿಯಾದ ನಂತರದ ಯಾವ ಎಳೆಯನ್ನು ಹೇಳಿದರೂ ಅದರ ನಿಜವಾದ ಫೀಲ್ ಅನ್ನು ಹಿಡಿದಿಡೋದು ಕಷ್ಟ. ಈ ಯುವ ಜೋಡಿಗಳ ಕೀಟಲೆ, ತರಲೆಗಳ ಎನರ್ಜಿಟಿಕ್ ಪ್ರೇಮ ಯಾನವನ್ನು ಥಿಯೇಟರಿಗೇ ತೆರಳಿ ನೋಡಿದರೆನೇ ಚೆಂದ.

    ಪ್ರೀತಿ ಅನ್ನೋದು ಯಾವತ್ತಿಗೂ ಹಳತಾಗದ ಮಾಯೆ. ಅದಕ್ಕೆ ಹೇಗೆಲ್ಲ ಹೊಸತನದ ಹೊಳಪು ನೀಡ ಬೇಕೆಂಬ ಕಲೆ ನಿರ್ದೇಶಕ ಎ.ಪಿ ಅರ್ಜುನ್‍ಗೆ ಸರಿಯಾಗಿಯೇ ಅರಿವಿದೆ. ಈ ಹಿಂದಿನ ಚಿತ್ರಗಳಲ್ಲಿಯೂ ಕೂಡಾ ಅಂಥಾ ಕಲೆಗಾರಿಕೆಯ ಕಾರಣದಿಂದಲೇ ಅವರು ಗೆಲ್ಲುತ್ತಾ ಬಂದಿದ್ದಾರೆ. ತಾಜಾ ತಾಜ ಅನ್ನಿಸೋ ಕಥೆಗೆ ಅಷ್ಟೇ ಫ್ರೆಶ್ ಮುಖಗಳನ್ನು ನಾಯಕ ನಾಯಕಿಯನ್ನಾಗಿಸಿರೋ ಅರ್ಜುನ್ ಈ ಎಲ್ಲ ಪಾತ್ರಗಳನ್ನೂ ಕೂಡಾ ಕಿಸ್ ಮೂಲಕ ಪ್ರೇಕ್ಷಕರ ಮನದಂಗಳಕ್ಕೆ ದಾಟಿಸುವಲ್ಲಿ ಗೆದ್ದಿದ್ದಾರೆ. ವಿರಾಟ್ ಶ್ರೀಲೀಲಾ ಆರಂಭದಿಂದ ಕಡೇಯವರೆಗೂ ಕೂಡಾ ಒಂದೇ ಥರದ ಎನರ್ಜಿಯೊಂದಿಗೆ ನಟಿಸಿದ್ದಾರೆ. ಈ ಮೂಲಕ ಇಬ್ಬರೂ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ.

    ಇದಲ್ಲದೇ ಬೇರೆ ಪಾತ್ರಗಳೂ ಕೂಡಾ ಕಥೆಯ ಓಘಕ್ಕೆ ತಮ್ಮ ಕೊಡುಗೆಯನ್ನೂ ನೀಡುವಂತೆ ಮೂಡಿ ಬಂದಿವೆ. ಬಿಡುಗಡೆ ಪೂರ್ವದಲ್ಲಿಯೇ ಹಿಟ್ ಆಗಿದ್ದ ಹಾಡುಗಳೆಲ್ಲವೂ ಕಥೆಗೆ ತಕ್ಕುದಾಗಿ ಮತ್ತೆ ಪ್ರೇಕ್ಷಕರನ್ನು ಮೋಹಕವಾಗಿಯೇ ಕಾಡಿದೆ. ದೃಷ್ಯಗಳಿಗೆ ಹೊಸ ಮೆರುಗು ಕೊಟ್ಟು ರಿಚ್ ಆಗಿ ಕಟ್ಟಿಕೊಡೋದರೊಂದಿಗೆ ಅರ್ಜುನ್ ನಿರ್ಮಾಪಕರಾಗಿಯೂ ಗಮನ ಸೆಳೆದಿದ್ದಾರೆ. ಒಟ್ಟಾರೆಯಾಗಿ ಕಿಸ್ ಎಲ್ಲ ವಯೋಮಾನ ಮತ್ತು ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಚಿತ್ರ.

    ರೇಟಿಂಗ್: 4/5

  • ಭರ್ಜರಿ ಡ್ಯಾನ್ಸ್ ಮೂಲಕವೇ `ಕಿಸ್’ ಕೊಟ್ಟ ವಿರಾಟ್!

    ಭರ್ಜರಿ ಡ್ಯಾನ್ಸ್ ಮೂಲಕವೇ `ಕಿಸ್’ ಕೊಟ್ಟ ವಿರಾಟ್!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಒಂದು ಕಡೆಯಿಂದ ಹುಡುಕಾಡಿದರೂ ಡ್ಯಾನ್ಸ್ ಬರೋ ನಾಯಕರ ಸಂಖ್ಯೆ ಕಡಿಮೆಯಿದೆ. ಕಷ್ಟಪಟ್ಟು, ಅನಿವಾರ್ಯತೆಗೆ ಬಿದ್ದು ಕುಣಿದಂತೆ ಮಾಡುವವರು ಕೂಡ ತಮ್ಮನ್ನು ತಾವೇ ತಮಾಷೆ ಮಾಡಿಕೊಳ್ಳುತ್ತಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರಂತಹ ನಟರು ಡ್ಯಾನ್ಸಿನಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಕಿಸ್ ಚಿತ್ರದ ಮೂಲಕವೇ ನಾಯಕನಾಗಿ ಎಂಟ್ರಿ ಕೊಡುತ್ತಿರೋ ವಿರಾಟ್ ಕೂಡ ಆ ಸಾಲಿಗೆ ಸೇರಿಕೊಳ್ಳುವಂಥಾ ನಟನೆಂಬುದರಲ್ಲಿ ಎರಡು ಮಾತಿಲ್ಲ.

    ಎ.ಪಿ ಅರ್ಜುನ್ ನಿದೇಶನದಲ್ಲಿ ಮೂಡಿ ಬಂದಿರೋ ಕಿಸ್ ಚಿತ್ರ ಆರಂಭ ಕಾಲದಿಂದಲೂ ಸುದ್ದಿ ಮಾಡುತ್ತಲೇ ಬಂದಿತ್ತು. ಆದರೆ ಅದರ ಭರಾಟೆ ಜೋರಾಗಿಯೇ ಶುರುವಾಗಿರುವುದು ಹಾಡುಗಳು ಹೊರ ಬಂದ ನಂತರವೇ. ಕಿಸ್ ಚಿತ್ರದ ಹಾಡುಗಳಲ್ಲಿ ಮೊದಲನೆಯದ್ದಾಗಿ ಹೊರ ಬಂದಿದ್ದು ‘ಶೀಲಾ ಸುಶೀಲ ಯೂ ಡೋಂಟುವರಿ’ ಎಂಬ ಹಾಡು. ಇದರ ಸಂಗೀತ, ಸೌಂಡಿಂಗ್ ಮತ್ತು ದೃಶ್ಯ ವೈಭವ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಹೆಚ್ಚು ವೀಕ್ಷಣೆ ಪಡೆದು ಟ್ರೆಂಡಿಂಗ್‍ನಲ್ಲಿದ್ದ ಈ ಹಾಡಿನಲ್ಲಿ ವಿರಾಟ್ ಮಾಡಿದ್ದ ಸಖತ್ ಡ್ಯಾನ್ಸ್‍ಗಂತೂ ನೋಡುಗರೆಲ್ಲ ಫಿದಾ ಆಗಿದ್ದರು.

    ಈ ಹಾಡನ್ನು ನೋಡಿದ ಎಲ್ಲರೂ ಕೂಡ ವಿರಾಟ್ ಡ್ಯಾನ್ಸ್ ನೋಡಿ ಕನ್ನಡಕ್ಕೋರ್ವ ಡ್ಯಾನ್ಸಿಂಗ್ ಸ್ಟಾರ್ ಆಗಮನವಾಯಿತೆಂದೇ ಮಾತಾಡಿಕೊಂಡಿದ್ದರು. ಮೂಲತಃ ಡ್ಯಾನ್ಸರ್ ಆಗಿರೋ ವಿರಾಟ್ ಈ ಹಾಡಿನ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ ಡ್ಯಾನ್ಸ್ ಮಾತ್ರವಲ್ಲದೇ ನಟನೆಯಲ್ಲಿಯೂ ವಿರಾಟ್ ಫುಲ್ ಮಾರ್ಕ್ಸ್ ತೆಗೆದುಕೊಳ್ಳುವಂತೆಯೇ ನಟಿಸಿದ್ದಾರಂತೆ. ಅದೆಲ್ಲವೂ ಇದೇ ತಿಂಗಳ 27ನೇ ತಾರೀಕಿನಂದು ಪ್ರೇಕ್ಷಕರೆದುರು ಅನಾವರಣಗೊಳ್ಳಲಿದೆ.

  • ಕಿಸ್: ಶ್ರೀಲೀಲಾ ನಂದಿನಿಯಾಗಿದ್ದರ ಹಿಂದಿದೆ ಒಂದು ನಿಗೂಢ!

    ಕಿಸ್: ಶ್ರೀಲೀಲಾ ನಂದಿನಿಯಾಗಿದ್ದರ ಹಿಂದಿದೆ ಒಂದು ನಿಗೂಢ!

    ಬೆಂಗಳೂರು: ನಿರ್ದೇಶಕ ಎ.ಪಿ. ಅರ್ಜುನ್ ಮೊದಲ ಚಿತ್ರ ‘ಅಂಬಾರಿ’ಯ ಮೂಲಕವೇ ಗೆಲುವಿನ ಮೆರವಣಿಗೆ ಶುರು ಮಾಡಿರೋ ಪ್ರತಿಭಾವಂತ ನಿರ್ದೇಶಕ. ಕಥೆಯನ್ನು ಆರಿಸಿಕೊಳ್ಳೋದರಿಂದ ಹಿಡಿದು ಅದನ್ನು ಪರಿಣಾಮಕಾರಿ ಪಾತ್ರ ಮತ್ತು ದೃಶ್ಯಗಳಿಂದ ಅಲಂಕರಿಸುವವರೆಗೂ ಅರ್ಜುನ್ ಮೊದಲ ಚಿತ್ರದಲ್ಲಿಯೇ ಗೆದ್ದಿದ್ದರು. ಅದಾದ ನಂತರದ ಸಿನಿಮಾಗಳಲ್ಲಿಯೂ ಕೂಡಾ ನೆನಪಿಟ್ಟುಕೊಳ್ಳುವಂಥಾ ಪಾತ್ರ ಮತ್ತು ಅದಕ್ಕೊಂದು ನಾಮಕರಣ ಮಾಡೋದರಲ್ಲಿಯೂ ಅರ್ಜುನ್ ಪರಿಣಿತರು. ಈ ಸಿನಿಮಾದಲ್ಲಿಯೂ ಅದುವೇ ಮುಂದುವರಿದಿದೆ. ಇದರ ಮೂಲಕವೇ ನಾಯಕಿಯಾಗಿ ಆಗಮಿಸಿರೋ ಶ್ರೀಲೀಲಾ ಇಲ್ಲಿ ನಂದಿನಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

    ನಾಯಕಿಯ ಪಾತ್ರದ ಹೆಸರೇ ಹೊಸ ಕ್ರೇಜ್‍ಗೆ ಕಾರಣವಾದ ಅದೆಷ್ಟೋ ಉದಾಹರಣೆಗಳಿವೆ. ಆದ್ದರಿಂದಲೇ ಸಿನಿಮಾಗಳಲ್ಲಿ ನಾಯಕಿಯರ ಹೆಸರೇನಿರುತ್ತದೆ ಎಂಬಂಥಾ ಕುತೂಹಲದ ಕ್ರೇಜ್ ಕೂಡಾ ಪ್ರೇಕ್ಷಕರಲ್ಲಿದೆ. ಆದರೆ ಕಿಸ್ ಚಿತ್ರದಲ್ಲಿನ ನಾಯಕಿ ಪಾತ್ರದ ಹೆಸರು ಈಗಾಗಲೇ ರಿವೀಲ್ ಆಗಿದೆ. ನವನಾಯಕಿ ಶ್ರೀಲೀಲಾ ಇಲ್ಲಿ ನಂದಿನಿ ಎಂಬ ಹೆಸರಿನಲ್ಲಿ ನಟಿಸಿದ್ದಾರೆ. ನಂದಿನಿ ಅನ್ನೋ ಪಾತ್ರ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಾಯಕಿಯ ಹೆಸರಾಗಿದೆ. ಹಾಗಿರುವಾಗ ಕಿಸ್‍ನಲ್ಲಿಯೂ ಏಕೆ ಅದೇ ಹೆಸರನ್ನಿಡಲಾಗಿದೆ ಅನ್ನೋ ಪ್ರಶ್ನೆ ಎದುರಾಗುತ್ತದೆ.

    ನಾಯಕಿ ಶ್ರೀಲೀಲಾಗೂ ಕೂಡಾ ಈವರೆಗೆ ಅಡಿಗಡಿಗೆ ಇಂಥಾ ಪ್ರಶ್ನೆಗಳು ಎದುರಾಗಿವೆಯಂತೆ. ಸಂದರ್ಶನಗಳಲ್ಲಿಯೂ ಅವರು ಈ ಪ್ರಶ್ನೆಯನ್ನು ಎದುರಿಸಿದ್ದಾರೆ. ಆದರೆ ಯಾಕೆ ನಂದಿನಿ ಎಂಬ ಹೆಸರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ವಿಚಾರವನ್ನು ರಿವೀಲ್ ಮಾಡೋ ಹಾಗಿಲ್ಲವಾದ್ದರಿಂದ ಶ್ರೀಲೀಲಾ ಅಂಥಾ ಪ್ರಶ್ನೆಗಳಿಗೆ ಮುಗುಳುನಗೆಯನ್ನೇ ಉತ್ತರವಾಗಿ ರವಾನಿಸಿ ಪಾರಾಗುತ್ತಾ ಬಂದಿದ್ದಾರೆ. ಯಾಕೆಂದರೆ ಈ ಹೆಸರನ್ನೇ ಆರಿಸಿಕೊಂಡಿದ್ದರ ಹಿಂದೊಂದು ನಿಗೂಢವಿದೆ. ಅದು ಏನೆಂಬುದು ಇದೇ ತಿಂಗಳ 27ರಂದು ಎಲ್ಲರಿಗೂ ತಿಳಿಯಲಿದೆ.

  • ಕಿಸ್ ಅಂದ್ರೆ ನವಿರು ಪ್ರೇಮದ ಮೊದಲ ಆಮಂತ್ರಣ!

    ಕಿಸ್ ಅಂದ್ರೆ ನವಿರು ಪ್ರೇಮದ ಮೊದಲ ಆಮಂತ್ರಣ!

    ಬೆಂಗಳೂರು: ವಿರಾಟ್ ಮತ್ತು ಶ್ರೀಲೀಲಾ ಜೋಡಿ ನಾಯಕ ನಾಯಕಿಯರಾಗಿ ನಟಿಸಿರೋ ಚಿತ್ರ ಕಿಸ್. ಇದುವರೆಗೂ ಹಾಡುಗಳ ಮೂಲಕವೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿ ಬಂದಿರೋ ಈ ಚಿತ್ರ ಇದೇ ತಿಂಗಳ 27ರಂದು ತೆರೆಗಾಣಲಿದೆ. ಅಷ್ಟಕ್ಕೂ ಕಿಸ್ ಅಂದರೇನೇ ಥರ ಥರದ ಭಾವಗಳು ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳುತ್ತವೆ. ಅದು ಅವರವರ ಭಾವಕ್ಕೆ ಭಕುತಿಗೆ ದಕ್ಕುವಂಥಾದ್ದೂ ಹೌದು. ಈ ಸಿನಿಮಾದ ಕಥೆ ಸಾಗೋದು ಕಿಸ್ ಎಂಬುದರ ಒರಿಜಿನಲ್ ಪರಿಭಾಷೆಗನುಗುಣವಾಗಿಯೇ.

    ಇಡೀ ಸಿನಿಮಾದಲ್ಲಿ ಎತ್ತಲಿಂದ ಹುಡುಕಿದರೂ ಒಂದೇ ಒಂದು ವಲ್ಗರ್ ಅನ್ನಿಸೋ ಸೀನು, ಡೈಲಾಗುಗಳು ಸಿಗಲೂ ಸಾಧ್ಯವಿಲ್ಲ ಎಂಬುದನ್ನು ನಿರ್ದೇಶಕರು ಆರಂಭದಿಂದಲೂ ಸ್ಪಷ್ಟೀಕರಿಸಿಕೊಂಡು ಬರುತ್ತಿದ್ದಾರೆ. ಇದುವೇ ಈ ಸಿನಿಮಾದ ಬಗೆಗೆ ಸ್ಪಷ್ಟ ಚಿತ್ರಣವನ್ನೂ ಕಟ್ಟಿಕೊಡುವಂತಿದೆ. ಕಿಸ್ ಎಂಬುದು ಪ್ರೀತಿಯ ಪಾಲಿಗೆ ಮೊದಲ ಆಮಂತ್ರಣವಿದ್ದಂತೆ. ಆ ನಂತರವೇ ಅದರ ಎಲ್ಲ ಭಾವಗಳೂ ಬಿಚ್ಚಿಕೊಳ್ಳಲಾರಂಭಿಸುತ್ತವೆ. ನಿದೇಶಕ ಎ.ಪಿ. ಅರ್ಜುನ್ ಆ ಮೊದಲ ಆಮಂತ್ರಣದ ಕಥೆಯನ್ನು ಮಜವಾಗಿಯೇ ಕಟ್ಟಿ ಕೊಟ್ಟಿದ್ದಾರಂತೆ.

    ಇದೀಗ ಬಿಡುಗಡೆಯಾಗಿರೋ ಹಾಡುಗಳ ಮೂಲಕವೇ ಕಿಸ್ ಪ್ರೇಕ್ಷಕರಿಗೂ ಕೂಡಾ ಪರಿಣಾಮಕಾರಿಯಾಗಿಯೇ ಆಮಂತ್ರಣ ಕೊಟ್ಟಿದೆ. ಅಷ್ಟಕ್ಕೂ ಈ ಹಾಡುಗಳು ಪ್ರೇಕ್ಷಕರ ಪಾಲಿಗೆ ಚಿತ್ರಮಂದಿರಕ್ಕೆ ಬರಲು ಕೊಡೋ ಆಮಂತ್ರಣವಿದ್ದಂತೆ. ಅದೆಷ್ಟೋ ಚಿತ್ರಗಳನ್ನು ಈ ಹಾಡುಗಳ ಆಮಂತ್ರಣವೇ ದೊಡ್ಡ ಮಟ್ಟದಲ್ಲಿ ಗೆಲ್ಲಿಸಿಕೊಂಡಿವೆ. ಕಿಸ್ ಚಿತ್ರದ ಹಾಡುಗಳೂ ಕೂಡಾ ಅದರಲ್ಲಿ ಯಶ ಕಾಣೋ ಲಕ್ಷಣಗಳೇ ದಟ್ಟವಾಗಿವೆ. ಈ ಹಾಡಿನ ನವಿರುತನವನ್ನೇ ಹೊದ್ದುಕೊಂಡಂಥಾ ಕಥೆ ಹೊಂದಿರೋ ಕಿಸ್ ನಿಮ್ಮೆಲ್ಲರೆದುರು ಅನಾವರಣಗೊಳ್ಳುವುದಕ್ಕೆ ಕ್ಷಣಗಣನೆ ಶುರುವಾಗಿದೆ.

  • ಎ.ಪಿ ಅರ್ಜುನ್ ಬತ್ತಳಿಕೆಯಲ್ಲಿರೋದು ಫ್ರೆಶ್ ‘ಕಿಸ್’!

    ಎ.ಪಿ ಅರ್ಜುನ್ ಬತ್ತಳಿಕೆಯಲ್ಲಿರೋದು ಫ್ರೆಶ್ ‘ಕಿಸ್’!

    ಬೆಂಗಳೂರು: ಕಿಸ್ ಅಂದರೆ ಮಡಿವಂತಿಕೆಯ ಮಂದಿ ಮುಜುಗರ ಪಟ್ಟುಕೊಳ್ಳಬಹುದೇನೋ. ಆದರೆ ಅದು ಕಾಲಮಾನವನ್ನು ಮೀರಿಕೊಂಡು ಸದಾ ತಾಜಾತನ ಉಳಿಸಿಕೊಳ್ಳೋ ಮಧುರಾನುಭೂತಿ. ಹದಿಹರೆಯದ ಮನಸುಗಳಲ್ಲಿ ಸ್ಫುರಿಸೋ ಮೆಲುವಾದ ಕಂಪನ ಮತ್ತು ಪ್ರೇಮವನ್ನು ಮಾತಿಲ್ಲದೆಯೇ ದಾಟಿಸೋ ವಾಹಕ. ಇಂಥಾ ರೊಮ್ಯಾಂಟಿಕ್ ಕಲ್ಪನೆಗಳಿಗೆ ತಕ್ಕುದಾಗಿಯೇ ಒಂದಿನಿತೂ ವಲ್ಗಾರಿಟಿಯ ಸೋಂಕಿಲ್ಲದೆ ನಿರ್ದೇಶಕ ಎ.ಪಿ ಅರ್ಜುನ್ ಬತ್ತಳಿಕೆಯಿಂದ ಹೊರಬಂದು ಪ್ರೇಕ್ಷಕರ ಮುಂದೆ ನಿಲ್ಲೋ ಸನ್ನಾಹದಲ್ಲಿರೋ ಚಿತ್ರ ಕಿಸ್.

    ಎ.ಪಿ ಅರ್ಜುನ್ ಯುವ ತುಮುಲಗಳ ಎರಕ ಹೊಯ್ದಂಥಾ ಪ್ರೀತಿ ತುಂಬಿದ ದೃಶ್ಯ ಕಟ್ಟುವಲ್ಲಿ ಸಿದ್ಧಹಸ್ತರೆನ್ನಿಸಿಕೊಂಡಿರೋ ನಿರ್ದೇಶಕ. ಅಂಬಾರಿಯಿಂದ ಆರಂಭವಾಗಿ ಕಿಸ್ ವರೆಗೂ ಅದು ಅನೂಚಾನವಾಗಿಯೇ ಮುಂದುವರೆದುಕೊಂಡು ಬಂದಿದೆ.

    ಕಿಸ್ ಎಂಬ ಹೆಸರೇ ಇದೊಂದು ಯುವ ಆವೇಗದ ಪ್ರೇಮಕಥೆ ಹೊಂದಿರೋ ಸಿನಿಮಾ ಅನ್ನೋದನ್ನು ಜಾಹೀರು ಮಾಡುವಂತಿದೆ. ಹಾಗೆಂದ ಮಾತ್ರಕ್ಕೆ ಇದು ಬರೀ ಯುವ ಜನಾಂಗಕ್ಕೆ ಮಾತ್ರವೇ ಸೀಮಿತವಾದ ಸಿನಿಮಾ ಅಲ್ಲ. ಎಲ್ಲ ವರ್ಗದ, ವಯೋಮಾನದವರೂ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ಅರ್ಜುನ್ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ.

    ಕಿಸ್ ಅಂದರೆ ಸದಾ ಫ್ರೆಶ್ ಆಗಿರೋ ಭಾವವೇ ಆದರೂ ಅದಕ್ಕೂ ಒಂದಷ್ಟು ಮುಜುಗರದಂಥಾ ಲೇಪ ಬಳಿಯಲಾಗಿದೆ. ಆದರೆ ಇಲ್ಲಿರೋದು ಸಾವಿರಕ್ಕೊಂದು ಎಂಬಂಥಾ ತಾಜಾ ತಾಜಾ ಲವ್ ಸ್ಟೋರಿ. ಅದು ಎಲ್ಲ ವಯೋಮಾನದವರಲ್ಲಿಯೂ ಆಹ್ಲಾದ ಮೂಡಿಸುವ ರೀತಿಯಲ್ಲಿ ಮೂಡಿ ಬಂದಿದೆಯಂತೆ.

    ಈಗಾಗಲೇ ಬಂದಿರೋ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಇದರ ತಾಜಾತನದ ಅನುಭೂತಿ ಪ್ರೇಕ್ಷಕರಿಗೆಲ್ಲ ಮುಟ್ಟಿದೆ. ಅದುವೇ ಕಾತರವಾಗಿಯೂ ಪಡಿಮೂಡಿಕೊಂಡಿದೆ. ಕಿಸ್ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ.

  • ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಹಾಡಿನ ಕಿಸ್!

    ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಹಾಡಿನ ಕಿಸ್!

    ಬೆಂಗಳೂರು: ಈವರೆಗೆ ಬಿಡುಗಡೆಯಾಗಿರೋ ಎ.ಪಿ ಅರ್ಜುನ್ ನಿದೇಶನದ ಕಿಸ್ ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿವೆ. ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದುಕೊಳ್ಳೋ ಮೂಲಕ ದಾಖಲೆಯನ್ನೂ ಬರೆದಿವೆ. ಇನ್ನೇನು ಕಿಸ್ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಅನಾವರಣಗೊಂಡಿದೆ. ಎಲ್ಲ ಥರದ ವಿರಹದ ನೋವಿನ ಆತ್ಮನಿವೇದನೆಯಂತಿರೋ ಈ ಹಾಡೂ ಕೂಡಾ ಇದುವರೆಗೆ ಬಂದಿರೋ ಹಾಡುಗಳಂತೆಯೇ ಹಿಟ್ ಆಗೋ ಹಾದಿಯಲ್ಲಿ ಮುಂದುವರೆಯುತ್ತಿದೆ. ಇದರೊಂದಿಗೇ ಎ.ಪಿ ಅರ್ಜುನ್ ಪ್ರೀತಿಯಲ್ಲಿ ಸೋತ ಹೃದಯಗಳಿಗೆಲ್ಲ ಕಿಸ್ ಕೊಟ್ಟು ಸಮಾಧಾನಿಸಿದ್ದಾರೆ!

    ಅಷ್ಟಕ್ಕೂ ನಿರ್ದೇಶಕ ಎ.ಪಿ ಅರ್ಜುನ್ ಪ್ರೀತಿಯ ನವಿರು ಭಾವಗಳನ್ನು ಸೊಗಸಾದ ಕಥೆಗಳ ಮೂಲಕ ಕಟ್ಟಿಕೊಡುವಲ್ಲಿ ಸಿದ್ಧಹಸ್ತರು. ಅಂಬಾರಿಯಿಂದ ಇಲ್ಲಿಯವರೆಗೂ ಅರ್ಜುನ್ ನಿರ್ದೇಶನ ಮಾಡಿರೋ ಚಿತ್ರಗಳೆಲ್ಲವೂ ಪ್ರೀತಿಯ ಪುಳಕ ಹೊದ್ದ ಕಥೆಗಳ ಮೂಲಕವೇ ಗೆದ್ದಿವೆ. ಇದೀಗ ಅವರು ನಿರ್ದೇಶನ ಮಾಡಿ ಬಿಡುಗಡೆಗೆ ರೆಡಿಯಾಗಿರೋ ಕಿಸ್ ಕೂಡಾ ಪ್ರೇಮದ ಮತ್ತೊಂದು ಮಜಲಿನ ಕಥಾನಕ. ಅದರ ಪ್ಯಾಥೋ ಶೈಲಿಯ ಹಾಡೀಗ ಎಲ್ಲರ ಮನಸಿಗೂ ಕಿಸ್ ಕೊಟ್ಟಿದೆ. ಈ ಹಾಡನ್ನು ಅರ್ಜುನ್ ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಅರ್ಪಿಸಿದ್ದಾರೆ.

    ಎ.ಪಿ. ಅರ್ಜುನ್ ಅವರೇ ಬರೆದಿರೋ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ ಧ್ವನಿಯಲ್ಲಿ ಮೂಡಿ ಬಂದಿರೋ ಕಣ್ಣ ನೀರಿದು ಜಾರುತಾ ಇದೆ ನೀನು ಇಲ್ಲದೆ ತುಂಬ ನೋವಾಗಿದೆ ಎಂಬ ಲಿರಿಕಲ್ ವೀಡಿಯೋ ಸಾಂಗ್ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಸದರಿ ಪ್ಯಾಥೋ ಮೂಡಿನ ಹಾಡಿಗೆ ಯೂಟ್ಯೂಬ್‍ನಲ್ಲಿ ವ್ಯಾಪಕ ಮೆಚ್ಚುಗೆ, ವೀಕ್ಷಣೆಗಳು ಸಿಗುತ್ತಿವೆ. ವೇಗವಾಗಿ ಹೆಚ್ಚು ಹೆಚ್ಚು ವೀವ್ಸ್ ಪಡೆಯುತ್ತಲೇ ಈ ಹಿಂದಿನ ಹಾಡುಗಳ ದಾಖಲೆಗಳನ್ನು ಬೀಟ್ ಮಾಡೋ ಆವೇಗದೊಂದಿಗೆ ಸಾಗುತ್ತಿದೆ. ಅಂದಹಾಗೆ ಕಿಸ್ ಚಿತ್ರ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ.

  • ಕಿಸ್ ಕೊಟ್ಟು ನಕ್ಕ ಅನುಷ್ಕಾ-ಎಲ್ಲರೆದರು ಮುಜುಗರಕ್ಕೊಳಗಾದ ಕೊಹ್ಲಿ

    ಕಿಸ್ ಕೊಟ್ಟು ನಕ್ಕ ಅನುಷ್ಕಾ-ಎಲ್ಲರೆದರು ಮುಜುಗರಕ್ಕೊಳಗಾದ ಕೊಹ್ಲಿ

    ನವದೆಹಲಿ: ಕಾರ್ಯಕ್ರಮವೊಂದರಲ್ಲಿ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಗೆ ಕಿಸ್ ನೀಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಕೊಹ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

    ಹಲವು ಗಣ್ಯರ ಮಧ್ಯೆ ಕುಳಿತಿದ್ದ ವಿರುಷ್ಕಾ ಜೋಡಿ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ಕೈಗೆ ಮುತ್ತು ನೀಡಿದ ಅನುಷ್ಕಾ ಸಮಾಧಾನ ಮಾಡುವಂತೆ ಕಾಣುವಂತಿತ್ತು. ಎಲ್ಲರ ಮಧ್ಯೆ ಕಿಸ್ ನೀಡಿದ್ದರಿಂದ ಒಂದು ಕ್ಷಣ ವಿರಾಟ್ ಕೊಹ್ಲಿ ಮುಜುಗರಕ್ಕೊಳಗಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಗುರುವಾರ ವಿರುಷ್ಕಾ ದಂಪತಿ ದೆಹಲಿಯಲ್ಲಿ ನಡೆದ ಸ್ಟಾರ್ ಜೋಡಿ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಭಾಗಿಯಾಗಿ ನಮನ ಸಲ್ಲಿಸಿದ್ದರು. ನೀಲಿ ಬಣ್ಣದ ಉಡುಪಿನಲ್ಲಿ ಅನುಷ್ಕಾ ಮಿಂಚುತ್ತಿದ್ದರು. ಇತ್ತ ವಿರಾಟ್ ಕೊಹ್ಲಿ ಕಂದು ಮತ್ತು ಬಿಳಿ ಬಣ್ಣದ ಕುರ್ತಾದ ಟ್ರೆಡಿಷನಲ್ ಲುಕ್ ನೋಡುಗರನ್ನು ಅಟ್ರ್ಯಾಕ್ಟ್ ಮಾಡಿತ್ತು.

    https://www.instagram.com/p/B2Voj07l0tn/

    ದೆಹಲಿಯ ಫಿರೋಜ್ ಶಾ ಕೊಟ್ಲಾ ಸ್ಟೇಡಿಯಂ ಮೈದಾನಕ್ಕೆ ಅರುಣ್ ಜೇಟ್ಲಿ ಹೆಸರನ್ನು ನಾಮಕರಣ ಮಾಡುವ ಮೂಲಕ ಗೌರವ ಸೂಚಿಸಲಾಗಿದೆ. ಇದೇ ಸ್ಟೇಡಿಯಂ ವಿಶೇಷ ಸ್ಟ್ಯಾಂಡ್ ಗೆ ವಿರಾಟ್ ಕೊಹ್ಲಿ ಅವರ ಹೆಸರನ್ನು ಇರಿಸಲಾಗಿದೆ. ಎರಡು ದಿನಗಳ ಹಿಂದೆ ವಿರಾಟ್ ಕೊಹ್ಲಿ ಪತ್ನಿಯೊಂದಿಗೆ ಕಳೆದ ರೊಮ್ಯಾಂಟಿಕ್ ಕ್ಷಣಗಳ ಫೋಟೋಗಳನ್ನು ಸೋಶಿಯಲ್ಲಿ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    https://www.instagram.com/p/B2V1f2uFbAb/