Tag: kiss

  • ಮುತ್ತಿಟ್ಟಿದ್ದು ಬಿಂದುಗಲ್ಲ, ಹೊಸ ಗರ್ಲ್ ಫ್ರೆಂಡ್ ಹರಿತಾಗೆ : ಎಡವಟ್ಟು ಮಾಡಿಕೊಂಡ ನಟ

    ಮುತ್ತಿಟ್ಟಿದ್ದು ಬಿಂದುಗಲ್ಲ, ಹೊಸ ಗರ್ಲ್ ಫ್ರೆಂಡ್ ಹರಿತಾಗೆ : ಎಡವಟ್ಟು ಮಾಡಿಕೊಂಡ ನಟ

    ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಸಿನಿಮಾ ಜಗತ್ತಿಗೆ ಪರಿಚಿತರಾದ ರಾಹುಲ್ ರಾಮಕೃಷ್ಣ ತಮ್ಮ ಮದುವೆ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಹುಡುಗಿಯೊಬ್ಬಳಿಗೆ ಮುತ್ತಿಡುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ‘ಕೊನೆಗೂ ಮದುವೆ ಆಗುತ್ತಿದ್ದೇನೆ. ಶೀಘ್ರದಲ್ಲೇ’ ಎಂದು ಬರೆದುಕೊಂಡಿದ್ದರು. ಈ ಟ್ವಿಟ್ ಮಾಡಿದ ಕೆಲವೇ ನಿಮಿಷಗಳಲ್ಲೇ ಈ ಅಕ್ಷರಗಳನ್ನು ಎಡಿಟ್ ಮಾಡಿ, ಆಗುತ್ತಿದ್ದ ಮುಜಗರವನ್ನು ತಪ್ಪಿಸಿಕೊಂಡಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ತೆಲುಗಿನಲ್ಲಿ ಹಲವು ಚಿತ್ರಗಳನ್ನು ಮಾಡಿರುವ ರಾಹುಲ್ ರಾಮಕೃಷ್ಣ, ಮೂಲತಃ ಲೇಖಕರೂ ಹೌದು. ಸೈನ್ಮಾ ಎಂಬ ಕಿರುಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟವರು ಆನಂತರ ಹಲವು ಚಿತ್ರಗಳಲ್ಲಿ ನಟಿಸಿದರು. ಇವರನ್ನು ಹೆಚ್ಚು ಜನಪ್ರಿಯತೆಗೆ ತಂದ ಸಿನಿಮಾ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ್ದ ಅರ್ಜುನ್ ರೆಡ್ಡಿ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ರಾಹುಲ್ ರಾಮಕೃಷ್ಣ ಈ ಹಿಂದೆ ಬಿಂದು ಎಂಬ ಹುಡುಗಿಯೊಂದಿಗೆ ಅಫೇರ್ ಇತ್ತು. ಇಬ್ಬರೂ ಗಾಢವಾಗಿಯೇ ಪ್ರೀತಿಸುತ್ತಿದ್ದರು. ಹಾಗಾಗಿ ರಾಹುಲ್ ಯುವತಿಯೊಬ್ಬಳ ತುಟಿಗೆ ತುಟಿ ಬೆರೆಸಿ ಹಾಕಿದ್ದ ಫೋಟೋವನ್ನು ಬಹುತೇಕರು ಬಿಂದು ಎಂದೇ ನಂಬಿದ್ದರು. ಹೊಸ ಜೋಡಿಗೆ ಶುಭವಾಗಲಿ ಎಂದು ಹಲವು ಸಂದೇಶ ರವಾನಿಸಿದ್ದರು. ಬಿಂದು ಮತ್ತು ನಿಮ್ಮ ಜೀವನ ಸುಖಮಯವಾಗಿರಲಿ ಎಂದೂ ಹಾರೈಸಿದ್ದರು. ಇದನ್ನು ಅರಿತ ರಾಹುಲ್ ತಕ್ಷಣವೇ ಟ್ವಿಟ್ ಅನ್ನು ತಿದ್ದುಪಡೆ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ರಾಹುಲ್ ಮದುವೆ ಆಗುತ್ತಿರುವ ಹುಡುಗಿ ಬಿಂದು ಅಲ್ಲವಂತೆ. ಆಕೆ ಹರಿತ ಎಂದು ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ‘ಸಣ್ಣ ತಿದ್ದುಪಡೆ ಅಂದರೆ, ನಾನು ಮದುವೆ ಆಗುತ್ತಿರುವ ಹುಡುಗಿಯ ಹೆಸರು ಬಿಂದು ಅಲ್ಲ, ಹರಿತ’ ಎಂದು ಅವರೇ ಬರೆದುಕೊಂಡಿದ್ದಾರೆ.

  • ಬ್ಯಾಡ್ ಬಾಯ್ ಗೆ ಸಾರ್ವಜನಿಕವಾಗಿ ಕಿಸ್: ವೈರಲ್ ಆದ ನಟಿ ಶೆಹನಾಜ್ ಗಿಲ್

    ಬ್ಯಾಡ್ ಬಾಯ್ ಗೆ ಸಾರ್ವಜನಿಕವಾಗಿ ಕಿಸ್: ವೈರಲ್ ಆದ ನಟಿ ಶೆಹನಾಜ್ ಗಿಲ್

    ಬಿಗ್ ಬಾಸ್ ಖ್ಯಾತಿಯ, ಕಿರುತೆರೆ ಮತ್ತು ಹಿರಿತೆರೆ ನಟಿ ಶೆಹನಾಜ್ ಗಿಲ್ ಕಳೆದ ಹಲವು ತಿಂಗಳುಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.  ಪ್ರಿಯಕರ, ನಟ ಸಿದ್ಧಾರ್ಥ ಶುಕ್ಲಾ ನಿಧನದ ನಂತರ ಅವರು ಯಾವುದೇ ಕಾರ್ಯಕ್ರಮಗಳಲ್ಲೂ ಭಾಗಿಯಾಗಿರಲಿಲ್ಲ. ಮೊನ್ನೆಯಷ್ಟೇ ಸಲ್ಮಾನ್ ಖಾನ್ ಸಹೋದರಿ ಆಯೋಜನೆ ಮಾಡಿದ್ದ ಇಫ್ತಾರ ಕೂಟದಲ್ಲಿ ಪಾಲ್ಗೊಂಡಿದ್ದ ಶೆಹನಾಜ್ ಗಿಲ್, ನಟ ಸಲ್ಮಾನ್ ಖಾನ್ ಗೆ ಸಾರ್ವಜನಿಕವಾಗಿ ತಬ್ಬಿಕೊಂಡು, ಕಿಸ್ ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾದಲ್ಲಿ ಶೆಹನಾಜ್ ಗಿಲ್ ಕೂಡ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಅದೊಂದು ಪ್ರಮುಖ ಪಾತ್ರ ಎನ್ನಲಾಗುತ್ತಿದೆ. ಅಲ್ಲದೇ, ಮೊದಲಿನಿಂದಲೂ ಸಲ್ಮಾನ್ ಖಾನ್ ಜತೆ ಆತ್ಮೀಯ ಸಂಬಂಧ ಹೊಂದಿದ್ದ ಶೆಹನಾಜ್ ಇಫ್ತಾರ್ ಕೂಟದಲ್ಲಿ ಭಾಗಿಯಾಗಿ ಆತಿಥ್ಯ ಸ್ವೀಕರಸಿದ್ದಾರೆ.

     

    View this post on Instagram

     

    A post shared by Manav Manglani (@manav.manglani)

    ಇಫ್ತಾರ್ ಕೂಟ ಮುಗಿದ ಬಳಿಕ ಮನೆಗೆ ತೆರಳು ಹೊರಟ ಶೆಹನಾಜ್ ಅವರು, ಸಲ್ಮಾನ್ ಖಾನ್ ಅವರನ್ನು ತಬ್ಬಿಕೊಂಡೆ ಆಚೆ ಬರುತ್ತಾರೆ. ಕ್ಯಾಮೆರಾಗಳಿಗೆ ಫೋಸ್ ಕೊಡುತ್ತಿದ್ದಾರೆ. ಎರಡೆರಡು ಬಾರಿ ತಬ್ಬಿಕೊಳ್ಳುತ್ತಾರೆ. ನಂತರ ಬಿಗಿಯಾಗಿ ತಬ್ಬಿಕೊಂಡು ಕಿಸ್ ಕೊಟ್ಟು, ಅಲ್ಲಿಂದ ಕಾರಿನತ್ತ ಹೊರಡುತ್ತಾರೆ. ಸಲ್ಮಾನ್ ಖಾನ್ ಕೂಡ ಆತ್ಮೀಯವಾಗಿಯೇ ಶೆಹನಾಜ್ ಅವರನ್ನು ಬೀಳ್ಕೊಡುತ್ತಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

    ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಹಂಚಿಕೊಂಡಿದ್ದು, ಇಬ್ಬರ ಆತ್ಮಿಯತೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಪ್ರಿಯಕರನ ಸಾವಿನ ನೋವಿನಿಂದ ಆಚೆ ಬಂದ ಶೆಹನಾಜ್ ಗಿಲ್, ಹೀಗೆಯೇ ಖುಷಿ ಖುಷಿಯಾಗಿಯೇ ಇರಿ ಎಂದು ಹಾರೈಸಿದ್ದಾರೆ.

  • ಇಂಥದ್ದೊಂದು ‘ಕಿಸ್’ (Kiss) ಗಾಗಿ ಆರು ವರ್ಷ ಕಾದಿದ್ದ ಆಲಿಯಾ ಭಟ್

    ಇಂಥದ್ದೊಂದು ‘ಕಿಸ್’ (Kiss) ಗಾಗಿ ಆರು ವರ್ಷ ಕಾದಿದ್ದ ಆಲಿಯಾ ಭಟ್

    ಬಾಲಿವುಡ್ ನ ಪ್ರಣಯ ಪಕ್ಷಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಿನ್ನೆ (ಎ.14) ಹಸೆಮಣೆ ಏರಿದ್ದಾರೆ. ಬರೋಬ್ಬರಿ ಆರು ವರ್ಷಗಳಿಂದ ಬಿಟೌನ್ ನ ಕನಸನ್ನು ಈ ಮೂಲಕ ಈಡೇರಿಸಿದ್ದಾರೆ. ಇದೊಂದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಎರಡೂ ಕುಟುಂಬಗಳ ಒಪ್ಪಿಗೆ ಪಡೆದುಕೊಂಡೇ ಈ ಜೋಡಿ ಸಪ್ತಪದಿ ತುಳಿದಿದೆ.  ಇದನ್ನೂ ಓದಿ : ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

    ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮಧ್ಯೆ ಪ್ರೇಮಾಂಕುರ ಆಗಿದ್ದು, 2017ರಲ್ಲಿ. ಈ ಜೋಡಿಯು ‘ಬ್ರಹ್ಮಾಸ್ತ’ ಸಿನಿಮಾದಲ್ಲಿ ನಟಿಸುತ್ತಿತ್ತು. ಈ ಸಿನಿಮಾದಲ್ಲಿಯ ಸಲುಗೆಯೇ ಪ್ರೇಮಕ್ಕೂ ಕಾರಣವಾಯಿತು. ಅಲ್ಲಿಂದ ಆಲಿಯಾ ಮತ್ತು ರಣಬೀರ್ ಸಾಕಷ್ಟು ಬಾರಿ ಹೋಟೆಲ್, ಪಾರ್ಟಿ, ಪ್ರವಾಸ ಅಂತ ಸುತ್ತಿದ್ದಾರೆ. ಇಬ್ಬರೂ ಪ್ರೇಮಿಗಳು ಅನ್ನುವುದಕ್ಕೆ ಅನೇಕ ಸಾಕ್ಷಿಗಳನ್ನೂ ನೀಡಿದ್ದಾರೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ಇಬ್ಬರೂ ಪ್ರೇಮಿಗಳಾಗಿದ್ದರೂ, ಯಾವತ್ತೂ ಅವರು ಪ್ರೀತಿಸುತ್ತಿದ್ದ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ, ಬಿಟೌನ್ ಮಂದಿಗೆ ಮಾತ್ರ ಇವರು ಪ್ರೀತಿಯ ಕುರುಹುಗಳು ಒಂದಿಲ್ಲೊಂದು ರೀತಿಯಲ್ಲಿ ತಿಳಿಯುತ್ತಲೇ ಇದ್ದವು. ಹಾಗಾಗಿ ಆಲಿಯಾ ಮತ್ತು ರಣಬೀರ್ ಸೀರಿಯಸ್ ಆಗಿಯೇ ಪ್ರೀತಿಸುತ್ತಿದ್ದರು ಎಂಬ ನಂಬಿಕೆ ಇತ್ತು. ಅದನ್ನು ಮದುವೆ ಆಗುವ ಮೂಲಕ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ನಿನ್ನೆಯಷ್ಟೇ ಈ ಜೋಡಿ ಸತಿ ಪತಿಗಳಾಗಿದ್ದಾರೆ. ಆಲಿಯಾ ಜತೆ ರಣಬೀರ್ ಸಪ್ತಪತಿ ತುಳಿಯುತ್ತಿದ್ದಂತೆಯೇ ಹೆಂಡತಿಯನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ. ಅಲ್ಲದೇ, ಸಿಹಿ ಮುತ್ತನ್ನೂ ನೀಡಿದ್ದಾರೆ. ಇಂಥದ್ದೊಂದು ಮುತ್ತಿಗೆ ಆರು ವರ್ಷಗಳಿಂದ ಕಾಯುತ್ತಿದ್ದೆ ಎನ್ನುವಂತೆ ಪೋಸ್ ನೀಡಿದ್ದಾರೆ ಆಲಿಯಾ ಭಟ್. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ಆಲಿಯಾ ಭಟ್ ಪ್ರೇಮ ಹೊಸದೇನೂ ಅಲ್ಲ. ಕಾಲೇಜು ದಿನಗಳಿಂದಲೂ ಅವರು ಹಲವರನ್ನು ಪ್ರೀತಿಸಿದ್ದೂ ಇದೆ. ಸಿದ್ಧಾರ್ಥ ಮಲ್ಹೋತ್ರ ಜತೆ ಮದುವೆ ಆಗುತ್ತಾರೆ ಎನ್ನುವಲ್ಲಿಗೆ ಪ್ರೇಮ ಮುಂದುವರೆದಿತ್ತು. ಆದರೆ, ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡರು. ಕಾಲೇಜಿನಲ್ಲಿರುವಾಗಲೇ ಆಲಿಯಾ ಭಟ್ ಅವರು ರಮೇಶ್ ದೂಬೆ ಅವರನ್ನು ಪ್ರೀತಿಸುತ್ತಿದ್ದರು ಎಂಬ ಸುದ್ದಿಯಿತ್ತು. ಆ ನಂತರ ಬಾಲಿವುಡ್ ಗೆ ಬರುವ ಮುನ್ನ ಅಲಿ ದಾದರ್ಕರ್ ಜತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಗಾಸಿಪ್ ಕೂಡ ಇದೆ. ಸಿನಿಮಾ ರಂಗಕ್ಕೆ ಬಂದ ಮೇಲೆ ಖ್ಯಾತ ಉದ್ಯಮಿ ಪುತ್ರ ಕವಿನ್ ಮಿತ್ತಲ್ ಜತೆಯೇ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ರೂಮರ್ ಕೂಡ ಇತ್ತು. ಈ ಎಲ್ಲ ಪ್ರೇಮಕ್ಕೆ ಇದೀಗ ಅಧಿಕೃತವಾಗಿ ಫುಲ್ ಸ್ಟಾಪ್ ಬಿದ್ದಿದೆ.

  • ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್‌-ಕಿಸ್‌ ಮಾಡುವಂತಿಲ್ಲ; ಕೊರೊನಾ ಟಫ್‌ ರೂಲ್ಸ್‌

    ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್‌-ಕಿಸ್‌ ಮಾಡುವಂತಿಲ್ಲ; ಕೊರೊನಾ ಟಫ್‌ ರೂಲ್ಸ್‌

    ಬೀಜಿಂಗ್: ಕೋವಿಡ್‌-19 ಕಾರಣದಿಂದಾಗಿ ಶಾಂಘೈನಲ್ಲಿ ತೀವ್ರ ಲಾಕ್‌ಡೌನ್‌ನಲ್ಲಿರುವ ಸ್ಥಳೀಯರು ಕಠಿಣ ಜೀವನ ನಡೆಸುತ್ತಿದ್ದಾರೆ. ನಗರದಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

    ಚೀನಾದಲ್ಲಿ ಮತ್ತೆ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದು, ಶಾಂಘೈ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳಲ್ಲಿ ದೈನಂದಿನ ಸೋಂಕಿನ ಪ್ರಮಾಣವು ಕುಸಿದಿದ್ದರೂ, ಇತರ ದೇಶಗಳಿಗೆ ಹೋಲಿಸಿದರೆ ಇದು ಇನ್ನೂ ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ ನಗರದ 26 ಮಿಲಿಯನ್ (2.6 ಕೋಟಿ) ನಿವಾಸಿಗಳನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: 26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ

    ಕೋವಿಡ್‌ ನಿಯಮಗಳ ಪಾಲನೆ ಬಗ್ಗೆ ಆರೋಗ್ಯ ಕಾರ್ಯಕರ್ತರು ಮೆಗಾಫೋನ್‌ಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಅನೌನ್ಸ್‌ ಮಾಡುತ್ತಿದ್ದಾರೆ. ʼಇಂದಿನಿಂದ ದಂಪತಿ ಪ್ರತ್ಯೇಕವಾಗಿ ಮಲಗಬೇಕು. ಪರಸ್ಪರರನ್ನು ಆಲಿಂಗನ ಮಾಡುವುದು, ಚುಂಬಿಸುವುದಕ್ಕೆ ಅವಕಾಶವಿಲ್ಲ. ಉಪಾಹಾರ, ಊಟ ಸೇವನೆಯೂ ಪ್ರತ್ಯೇಕವಾಗಿ ಆಗಬೇಕು. ನಿಮ್ಮ ಸಹಕಾರಕ್ಕೆ ಧನ್ಯವಾದಗಳುʼ ಎಂದು ಅನೌನ್ಸ್‌ ಮಾಡುತ್ತಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ಕೊರೊನಾ ಹರಡುವುದನ್ನು ತಡೆಯಲು ನಗರವು ಕಠಿಣ ನಿರ್ಬಂಧಗಳನ್ನು ವಿಧಿಸಿದ ನಂತರ ಚೀನಾದ ಆರ್ಥಿಕ ಕೇಂದ್ರಗಳು ಸ್ತಬ್ಧವಾಗಿವೆ. ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು, ವಿತರಣಾ ಸಿಬ್ಬಂದಿ, ವಿಶೇಷ ಅನುಮತಿ ಹೊಂದಿರುವ ಜನರನ್ನು ಮಾತ್ರ ಬೀದಿಗಳಲ್ಲಿ ಓಡಾಡಲು ಅನುಮತಿ ನೀಡಲಾಗಿದೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್ ಪುತ್ರಿಯರನ್ನೂ ಟಾರ್ಗೆಟ್‌ ಮಾಡ್ತಿದೆ ಅಮೆರಿಕ- ಯಾಕೆ ಗೊತ್ತಾ?

    ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯ ವಸ್ತುಗಳು, ಅಕ್ಕಿ, ಮಾಂಸ ದಾಸ್ತಾನಿದೆ. ಲಾಕ್‌ಡೌನ್‌ ವಿಧಿಸಿರುವ ವಲಯಗಳಲ್ಲಿ ಡೆಲಿವರಿ ಸಿಬ್ಬಂದಿ ಮೂಲಕ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು. ಇನ್ನುಳಿದ ಕಡೆಗಳಲ್ಲಿ ಸಗಟು ಮಾರುಕಟ್ಟೆ, ಆಹಾರ ಮಳಿಗೆಗಳನ್ನು ತೆರೆಯಲು ಪ್ರಯತ್ನಿಸಲಾಗುವುದು ಎಂದು ಶಾಂಘೈ ಉಪ ಮೇಯರ್‌ ಚೆನ್‌ ಕಾಂಗ್‌ ತಿಳಿಸಿದ್ದಾರೆ.

  • ಬಸ್ಸಿನಲ್ಲಿ ‘ಗೀತ ಗೋವಿಂದಂ’ ಸೀನ್ – ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟ ಅಪರಿಚಿತ ಯುವಕ!

    ಬಸ್ಸಿನಲ್ಲಿ ‘ಗೀತ ಗೋವಿಂದಂ’ ಸೀನ್ – ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟ ಅಪರಿಚಿತ ಯುವಕ!

    ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ‘ಗೀತ ಗೋವಿಂದಂ’ ಚಿತ್ರ ಸೀನ್ ರೀಕ್ರಿಯೆಟ್ ಆಗಿರುವ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಹೌದು. ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿದ್ದ ಯುವತಿಗೆ ಅಪರಿಚಿತ ಯುವಕನೊಬ್ಬ ಮುತ್ತುಕೊಟ್ಟಿದ್ದಾನೆ. ಈ ಘಟನೆ ಸೇಮ್ ‘ಗೀತ ಗೋವಿಂದಂ’ ಸೀನ್ ತರಾನೇ ಇತ್ತು ಎನ್ನಲಾಗಿದೆ.

    ಯುವತಿ ಬೆಂಗಳೂರಿನಲ್ಲಿ ಆರ್ಕಿಟೆಕ್ಚರ್ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ನಿನ್ನೆ ರಾತ್ರಿ 10.40ಕ್ಕೆ ಬಳ್ಳಾರಿಯಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕೆಟ್ಟ ದಾಖಲೆ ಬರೆದ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್

    21 ವರ್ಷದ ಯುವತಿ ಬಸ್ ಹತ್ತಿದ ಸಂದರ್ಭದಲ್ಲಿಯೇ ಯುವಕ ಆಕೆಯನ್ನ ಫಾಲೋ ಮಾಡಿಕೊಂಡು ಬಂದು ಬಸ್ಸಿನಲ್ಲಿ ಕುಳಿತಿದ್ದಾನೆ. ಬಳಿಕ ಯುವತಿಯನ್ನೇ ನೋಡಿ ಕೆಟ್ಟ ಕೆಟ್ಟ ಸನ್ನೆ ಮಾಡಿದ್ದಾನೆ. ಇತ್ತ ಬಸ್ ಬೆಂಗಳೂರಿಗೆ ಬರುತ್ತಿದ್ದಂತೆಯೇ ಪೀಣ್ಯ ಬಳಿ ಯುವತಿ ನಿದ್ದೆಗೆ ಜಾರಿದಾಗ ಆಸಾಮಿ, ಯುವತಿಗೆ ಫಿಲಂ ಸ್ಟೈಲಿನಲ್ಲಿ ಕಿಸ್ ಕೊಟ್ಟಿದ್ದಾನೆ. ಬೆಳಗ್ಗಿನ 5 ಗಂಟೆಯ ವೇಳೆಗೆ ಬಸ್ ಪೀಣ್ಯ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಯುವಕ, ಯುವತಿಗೆ ಮುತ್ತು ಕೊಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

    ಇತ್ತ ಯುವಕನ ಮುತ್ತಿನಿಂದ ಆತಂಕಗೊಂಡ ಯುವತಿ ಬಸ್ಸಿನಿಂದ ಇಳಿದು ನೇರವಾಗಿ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಸದ್ಯ ಯುವತಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್‍ಐಆರ್ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಕಾಬೂಲ್‍ನಿಂದ ಭಾರತಕ್ಕೆ ಮರಳ್ತಿದ್ದಂತೆ ತಮ್ಮನಿಗೆ ಕಿಸ್ ಕೊಟ್ಟ ಅಕ್ಕ- ಭಾವನಾತ್ಮಕ ವೀಡಿಯೋ ವೈರಲ್

    ಕಾಬೂಲ್‍ನಿಂದ ಭಾರತಕ್ಕೆ ಮರಳ್ತಿದ್ದಂತೆ ತಮ್ಮನಿಗೆ ಕಿಸ್ ಕೊಟ್ಟ ಅಕ್ಕ- ಭಾವನಾತ್ಮಕ ವೀಡಿಯೋ ವೈರಲ್

    ನೋಯ್ಡಾ: ಅಫ್ಘಾನಿಸ್ತಾನದಿಂದ ಭಾನುವಾರ ಸುಮಾರು 168 ಮಂದಿ ಗಾಜಿಯಾಬಾದ್‍ನ ಹಿಂಡನ್ ವಾಯುನೆಲೆಗೆ ಬಂದಿಳಿದರು. ಇದರಲ್ಲಿ ಮಕ್ಕಳು ಸಹ ಇದ್ದು, ಇದೀಗ ಇಬ್ಬರು ಮಕ್ಕಳು ನೆಟ್ಟಿಗರ ಗಮನ ಸೆಳೆದಿದ್ದಾರೆ. ತಾಯಿಯ ಮಡಿಲಲ್ಲಿದ್ದ ಪುಟ್ಟ ಕಂದಮ್ಮನಿಗೆ ಆತನ ಅಕ್ಕ ಮುತ್ತಿಟ್ಟ ಭಾವನಾತ್ಮಕ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ, ಜನರ ಮಧ್ಯೆ ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮನನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದಾಳೆ. ಈ ವೇಳೆ ಅಲ್ಲೆ ಇದ್ದ ಪುಟ್ಟ ಹುಡುಗಿಯೊಬ್ಬಳು ಆ ಮಗುವಿನ ಮುಂದೆ ಕುಣಿಯುತ್ತಾ ಕಿಸ್ ಕೊಡುತ್ತಾ ಮುದ್ದಾಡುತ್ತಿರುವುದನ್ನು ಕಾಣಬಹುದಾಗಿದೆ. ಮೇಲ್ನೋಟಕ್ಕೆ ಪುಟ್ಟ ಹುಡುಗಿ ಕಂದಮ್ಮನ ಸಹೋದರಿಯಂತೆ ಕಾಣುತ್ತದೆ. ಸದ್ಯ ಈ ಹೃದಯಸ್ಪರ್ಶಿ ವೀಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

    ಈ ವೀಡಿಯೋವನ್ನು ಸರಿಯಾಗಿ ಗಮನಿಸಿದಾಗ ಮಹಿಳೆ, ಕಳೆದ ಏಳು ದಿನಗಳಿಂದ ಅನುಭವಿಸುತ್ತಿರುವ ನರಕಯಾತನೆಯ ಬಗ್ಗೆ ಮಾತನಾಡುವುದನ್ನು ಸಹ ಕೇಳಬಹುದಾಗಿದೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ಅಲ್ಲಿ ನೆಲೆಸಿದ್ದ ಸಾವಿರಾರು ಮಂದಿ ನರಕಯಾತನೆ ಅನುಭವಿಸಿದ್ದಾರೆ. ಅನೇಕರು ದೇಶ ಬಿಟ್ಟು ತೆರಳಿದ್ದಾರೆ. ಇತ್ತ ಕನ್ನಡಿಗರನ್ನು ಭಾರತಕ್ಕೆ ಕರೆತರುವ ಪ್ರಯತ್ನವೂ ನಡೆಯುತ್ತಿದ್ದು, ಈಗಾಗಲೇ ಹಲವಾರು ಮಂದಿ ತಮ್ಮ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.  ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್

    ಉಗ್ರರು ದೇಶವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ತಮ್ಮ ಕಣ್ಣ ಮುಂದೆ ನಡೆದಿದ್ದ ಘಟನೆಯನ್ನು ವಿವರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬರ ಆರ್ತನಾದ ಕೇಳಲಾಗದೇ ಏರ್‍ಪೋರ್ಟ್‍ನ ಮುಳ್ಳುತಂತಿ ಗೋಡೆಯ ಮೇಲೆ ಹತ್ತಿದ ಅಮೆರಿಕ ಸೈನಿಕರು, ಆ ಮಹಿಳೆ ಮತ್ತು ಮಗುವೊಂದನ್ನು ಏರ್‍ಪೋರ್ಟ್ ಒಳಗೆ ಎಳೆದುಕೊಂಡಿದ್ದರು. ಕೆಲ ಪೋಷಕರು ತಮ್ಮ ಮುಂದಿನ ತಲೆಮಾರಾದ್ರೂ ತಾಲಿಬಾನಿಗಳ ಕ್ರೂರದೃಷ್ಟಿಗೆ ಬೀಳದಿರಲಿ ಎಂದು ಏರ್‍ಪೋರ್ಟ್ ಕಾಂಪೌಂಡ್ ಬಳಿ ನಿಂತು ಮಕ್ಕಳನ್ನು ಒಳಗೆ ಎಸೆದಿದ್ದು, ಹೀಗೆ ಎಸೆಯುವಾಗ ಕೆಲ ಮಕ್ಕಳು ಮುಳ್ಳಿನ ತಂತಿಗೆ ಸಿಲುಕಿ ಒದ್ದಾಡೋದನ್ನು ನೋಡಲು ಆಗ್ತಿಲ್ಲ ಎಂದು ಅಧಿಕಾರಿಯೊಬ್ಬರು ಕಣ್ಣೀರು ಇಟ್ಟಿದ್ದರು. ಇದನ್ನೂ ಓದಿ: ತಾನು ಸೆಲೆಕ್ಟ್ ಮಾಡಿದ ಹಾಡು ಹಾಕೋವರೆಗೂ ಮದುವೆ ಹಾಲ್‍ಗೆ ತೆರಳಲು ನಿರಾಕರಿಸಿದ ವಧು!

    https://twitter.com/ANI/status/1429324388420112384

  • ಇಲ್ಲಿ ಕಿಸ್ ಮಾಡುವಂತಿಲ್ಲ – ಜೋಡಿಗಳ ಚುಂಬನದಿಂದ ಬೇಸತ್ತ ಸೊಸೈಟಿ

    ಇಲ್ಲಿ ಕಿಸ್ ಮಾಡುವಂತಿಲ್ಲ – ಜೋಡಿಗಳ ಚುಂಬನದಿಂದ ಬೇಸತ್ತ ಸೊಸೈಟಿ

    – ಗೇಟ್ ಮುಂಭಾಗವೇ ಜೋಡಿಗಳ ತುಂಟಾಟ

    ಮುಂಬೈ: ನಗರದ ಹೌಸಿಂಗ್ ಸೊಸೈಟಿ ಗೇಟ್ ಮುಂಭಾಗದ ರಸ್ತೆಯ ಮೇಲೆ ನೋ ಕಿಸ್ಸಿಂಗ್ ಜೋನ್ ಎಂದು ಬರೆಸಿದೆ. ಸದ್ಯ ಈ ಬರಹದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಮುಂಬೈನ ಬೋರಿವಲಿಯ ಸತ್ಯಂ ಶಿವಂ ಸೊಸೈಟಿ ಈ ರೀತಿ ರಸ್ತೆ ಮೇಲೆ ಬರೆಸಿದೆ. ಸಾರ್ವಜನಿಕ ಪ್ರದೇಶದಲ್ಲಿ ಚುಂಬನ ಮಾಡೋದು ಸರಿಯಲ್ಲ. ಆದ್ರೆ ಸೊಸೈಟಿ ಮುಂಭಾಗದಲ್ಲಿ ಹಲವು ಜೋಡಿಗಳು ಕಿಸ್ ಮಾಡುತ್ತಿದ್ದವು. ಸೊಸೈಟಿಯಲ್ಲಿದ್ದ ಜನರು ಅಶ್ಲೀಲ ದೃಶ್ಯಗಳನ್ನ ನೋಡಿಕೊಂಡೇ ಮನೆಗೆ ಬರುವಂತಾಗಿತ್ತು. ಜೋಡಿಗಳ ಚುಂಬನದ ಹಾವಳಿಯಿಂದಾಗಿ ಬೇಸತ್ತ ಸೊಸೈಟಿ ಗೇಟ್ ಮುಂಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ಇಲ್ಲಿ ಕಿಸ್ ಮಾಡುವಂತಿಲ್ಲ ಎಂದು ಬರೆಸಿದೆ.

    ಸೊಸೈಟಿಯ ಪ್ರವೇಶ ದ್ವಾರದಲ್ಲಿಯೇ ಜೋಡಿಗಳು ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದರು. ಈ ಸಂಬಂಧ ಸೊಸೈಟಿ ನಿವಾಸಿಗಳು ದೂರು ಸಲ್ಲಿಸಿದ್ದರಿಂದ ನೋ ಕಿಸ್ಸಿಂಗ್ ಝೋನ್ ಎಂದು ಬರೆಸಲಾಗಿದೆ. ಈ ರೀತಿ ಬರೆಸಿದ ಮೇಲೆ ಜೋಡಿಗಳು ಇಲ್ಲಿ ನಿಂತು ಮಾತನಾಡೋದು, ಕಿಸ್ ಮಾಡೋದು ಕಡಿಮೆಯಾಗಿದೆ ಎಂದು ಹೌಸಿಂಗ್ ಬೋರ್ಡ್ ಹೇಳಿದೆ.

    ಕ್ರಮ ತೆಗೆದುಕೊಳ್ಳದ ಪೊಲೀಸರು:
    ಪ್ರವೇಶ ದ್ವಾರದಲ್ಲಿಯೇ ಜೋಡಿ ಕಿಸ್ ಮಾಡುವ ವೀಡಿಯೋ ಚಿತ್ರೀಕರಿಸಿ ಸ್ಥಳೀಯ ಪೊಲೀಸರು ಮತ್ತು ಕಾರ್ಪೋರೇಟರ್ ಗೂ ಸೊಸೈಟಿಯ ಸದಸ್ಯರೊಬ್ಬರು ದೂರು ನೀಡಿದ್ದರು. ಆದ್ರೆ ಅಧಿಕಾರಿ ಮತ್ತು ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ನಂತರ ಸೊಸೈಟಿ ಸದಸ್ಯರು ಒಮ್ಮತದಿಂದ ಗೇಟ್ ಮುಂಭಾಗದಲ್ಲಿ ಈ ರೀತಿ ಸಾಲುಗಳನ್ನು ಬರೆಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನಿಗೆ ಖ್ಯಾತಿ ನಟಿ ಕಿಸ್ 

    ನಾವು ಯಾವ ಜೋಡಿ ಮೇಲೆಯೂ ವೈಯಕ್ತಿಯ ದ್ವೇಷ ಇಲ್ಲ. ಆದ್ರೆ ಅವರ ಅಶ್ಲೀಲತೆ ನಡವಳಿಕೆ ಬಗ್ಗೆ ಬೇಸರವಿದೆ. ಇಂತಹ ಘಟನೆಗಳು ಪ್ರತಿನಿತ್ಯ ನಮ್ಮ ಮನೆ ಮುಂದೆಯೇ ನಡೆಯುತ್ತಿದ್ದವು. ಜೋಡಿಗಳ ಚುಂಬನದ ಹಾವಳಿಯಿಂದಾಗಿ ಹಿರಿಯರು ಮತ್ತು ಮಹಿಳೆಯರು ಹೊರಗೆ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕ ಪ್ರದೇಶಗಳಲ್ಲಿ ಅಶ್ಲೀಲವಾಗಿ ನಡೆದುಕೊಳ್ಳುವವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸೊಸೈಟಿಯ ಮುಖ್ಯಸ್ಥ ವಿನಯ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಟಮಟ ಮಧ್ಯಾಹ್ನವೇ ಮಂಡ್ಯದ ಜಿಲ್ಲೆಯ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಪ್ರೇಮಿಗಳ ಕಿಸ್ಸಿಂಗ್

  • ನಂದಿಗಿರಿಧಾಮದಲ್ಲಿ ಪ್ರೇಮಿಗಳಿಂದ ಚುಂಬನ – ಕೊರೊನಾ ರೂಲ್ಸ್ ಬ್ರೇಕ್

    ನಂದಿಗಿರಿಧಾಮದಲ್ಲಿ ಪ್ರೇಮಿಗಳಿಂದ ಚುಂಬನ – ಕೊರೊನಾ ರೂಲ್ಸ್ ಬ್ರೇಕ್

    ಚಿಕ್ಕಬಳ್ಳಾಪುರ: ಅನ್‍ಲಾಕ್ ಆದ ಕಾರಣ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಳಿಯ ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ. ಇದೇ ವೇಳೆ ಜೋಡಿಯೊಂದು ಕೊರೊನಾ ರೂಲ್ಸ್ ಬ್ರೇಕ್ ಮಾಡಿ ಸಾರ್ವಜನಿಕವಾಗಿ ಚುಂಬಿಸಿದ್ದಾರೆ.

    ಬೆಳ್ಳಂ ಬೆಳ್ಳಗ್ಗೆ ಕಾರು ಹಾಗೂ ಬೈಕ್ ಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದು, ಮುಂಜಾನೆ ಚುಮು ಚುಮು ಚಳಿ ನಡುವೆ ಮೋಡಗಳ ಮಂಜಿನಾಟದ ಜೊತೆ ಪ್ರವಾಸಿಗರು ನಂದಿ ಗಿರಿಧಾಮದ ಸೌಂದರ್ಯ ಕಣ್ಣುತುಂಬಿಕೊಂಡಿದ್ದಾರೆ. ಕೊರೊನಾ ಅನ್ ಲಾಕ್ ಆದ ನಂತರ ಇದೇ ಮೊದಲ ಬಾರಿಗೆ ವೀಕೆಂಡ್ ಶನಿವಾರವಾದ್ದರಿಂದ ಇಂದು ಸಾವಿರಾರು ಮಂದಿ ನಂದಿಬೆಟ್ಟಕ್ಕೆ ಆಗಮಿಸಿದ್ದರು. ಇನ್ನೂ ನಮ್ಮ ನಡುವೆಯೇ ಕೊರೊನಾ ಮಹಾಮಾರಿ ಇದ್ದರೂ ಬಹುತೇಕ ಪ್ರವಾಸಿಗರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರು.

    ಮಾಸ್ಕ್ ಮರೆತ ಪ್ರವಾಸಿಗರು ನಂದಿಬೆಟ್ಟದಲ್ಲಿ ಮನಸ್ಸೋ ಇಚ್ಛೆ ಒಡಾಡಿದ್ದಾರೆ. ಹೇಳೋರು ಇಲ್ಲ, ಕೇಳೋರು ಇಲ್ಲ ಅಂತ ನಂದಿ ಬೆಟ್ಟದಲ್ಲೆಲ್ಲಾ ಅಲೆದಾಡಿ ಎಂಜಾಯ್ ಮಾಡಿದ್ದಾರೆ. ಇದೇ ವೇಳೆ ಜೋಡಿಯೊಂದು ಸಾರ್ವಜನಿಕ ಸ್ಥಳದಲ್ಲೇ ಚುಂಬನ ಮಾಡಿ ಅಸಭ್ಯ ವರ್ತನೆ ತೋರಿದೆ. ಮಾಸ್ಕ್ ಧರಿಸದೇ ನಂದಿಬೆಟ್ಟದಲ್ಲಿ ಅಲೆದಾಡಿ ಚುಂಬನ ಮಾಡಿದ ಜೋಡಿ ಕೊರೊನಾ ಬಗ್ಗೆ ತಾತ್ಸಾರ ತೋರಿದ್ದಾರೆ.

    ಪ್ರವಾಸಿ ತಾಣಗಳು ಕೊರೊನಾ ಹರಡುವ ತಾಣಗಳಾಗಿ ಮಾರ್ಪಾಡಾಗುವ ಆತಂಕ ಕಾಡುತ್ತಿದ್ದು, ಪ್ರವಾಸಿಗರು ಮೈ ಮೆರಯಬೇಡಿ. ಮಾಸ್ಕ್ ಧಾರಣೆ ಮಾಡಿ ಎಚ್ಚರಿಕೆ ವಹಿಸಿ ಅಂತ ಸರ್ಕಾರ ಅಧಿಕಾರಿಗಳು ಹೇಳಿದ್ದರೂ ಪ್ರವಾಸಿಗರು ಮಾತ್ರ ಜಿದ್ದಿಗೆ ಬಿದ್ದವರಂತೆ ತಾವಾಯ್ತು, ತಮ್ಮ ಖುಷಿ ಆಯ್ತು ಅಂತ ಲೋಕದ ಕೊರೊನಾದ ಪರಿವೇ ಇಲ್ಲದಂತೆ ಒಡಾಡುತ್ತಿದ್ದಾರೆ. 800ಕ್ಕೂ ಹೆಚ್ಚು ಕಾರು ಹಾಗೂ ಸಾವಿರಕ್ಕೂ ಹೆಚ್ಚು ಬೈಕ್ ಗಳಲ್ಲಿ ಪ್ರವಾಸಿಗರ ಆಗಮಿಸಿದ್ದರು. ಇದನ್ನೂ ಓದಿ: ಕೊನೆಗೂ ಪೆಟ್ರೋಲ್ ನೂರರ ಗಡಿ ಕ್ರಾಸ್ ಮಾಡ್ತು – ಸೈಕಲ್ ಏರಿದ ಸನ್ನಿ ಲಿಯೋನ್

  • ಝೂಮ್ ಕಾಲ್ ವೇಳೆ ಪತಿಗೆ ಕಿಸ್ ನೀಡಲು ಬಂದ ಪತ್ನಿ- ವೀಡಿಯೋ ವೈರಲ್

    ಝೂಮ್ ಕಾಲ್ ವೇಳೆ ಪತಿಗೆ ಕಿಸ್ ನೀಡಲು ಬಂದ ಪತ್ನಿ- ವೀಡಿಯೋ ವೈರಲ್

    ನವದೆಹಲಿ: ಮೀಟಿಂಗ್ ನಡೆಯುತ್ತಿರುವಾಗ ಝೂಮ್ ಕಾಲ್‍ನಲ್ಲಿ ಪತಿ ಮಾತನಾಡುತ್ತಿರುವಾಗಲೇ ಪತ್ನಿ ಕಿಸ್ ನೀಡಲು ಮುಂದಾಗಿದ್ದು, ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.

    ಕೈಗಾರಿಕೋದ್ಯಮಿ ಹರ್ಷ್ ಗೊಯಂಕಾ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ‘ಝೂಮ್ ಕಾಲ್ ಸೋ ಫನ್ನಿ’ ಎಂದು ಬರೆದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರ ಸಹ ವೈರಲ್ ಆಗಿರುವ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಝೂಮ್ ಕಾಲ್ ಮೀಟಿಂಗ್ ವೇಳೆ ವಿವಿಧ ವಿಷಯಗಳ ಕುರಿತು ವ್ಯಕ್ತಿ ಚರ್ಚಿಸುತ್ತಿದ್ದು, ಈ ವೇಳೆ ಅವರ ಪತ್ನಿ ರೂಮ್‍ಗೆ ಆಗಮಿಸಿ, ಬರುತ್ತಿದ್ದಂತೆಯೇ ಕಿಸ್ ನೀಡಲು ಮುಂದಾಗಿದ್ದಾರೆ. ತಕ್ಷಣವೇ ವ್ಯಕ್ತಿ ತನ್ನ ಲ್ಯಾಪ್‍ಟಾಪ್ ಕಡೆ ತಿರುಗಿ ನೋಡಿ ಸಿಗ್ನಲ್ ಮಾಡಿದ್ದಾರೆ. ಬಳಿಕ ಪತ್ನಿ ಸ್ಮೈಲ್ ಮಾಡಿ ಹಿಂದೆ ಸರಿದಿದ್ದಾರೆ.

    ಈ ವೀಡಿಯೋವನ್ನು ಎಂಜಾಯ್ ಮಾಡಿರುವ ಆನಂದ್ ಮಹೀಂದ್ರಾ, ಹ..ಹ.. ವರ್ಷದ ಪತ್ನಿಯನ್ನಾಗಿ ಈ ಮಹಿಳೆಯನ್ನು ನಾಮಿನೇಟ್ ಮಾಡಬೇಕು. ಅಲ್ಲದೆ ಪತಿಗೂ ಹೆಚ್ಚು ಆಸೆ ಹೊಗಳಿಕೆ ಇದ್ದಿದ್ದರೆ, ಈ ಇಬ್ಬರನ್ನೂ ವರ್ಷದ ಜೋಡಿ ಎಂದು ನಾಮಿನೇಟ್ ಮಾಡುತ್ತಿದ್ದೆ. ಆದರೆ ವ್ಯಕ್ತಿ ಸಿಟ್ಟಾಗಿದ್ದರಿಂದ ಈ ಬಿರುದಿನಿಂದ ವಂಚಿತರಾಗಿದ್ದಾರೆ ಎಂದು ಆನಂದ್ ಮಹೀಂದ್ರ ಪ್ರತಿಕ್ರಿಯಿಸಿದ್ದಾರೆ.

    ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, 3 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ. ಅಲ್ಲದೆ ಕಮೆಂಟ್ ಮಾಡುವ ಮೂಲಕ ಸಹ ನೆಟ್ಟಿಗರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಕೆಲವು ಯಾಂತ್ರಿಕ ಪತಿಯಂದಿರು ಇಂತಹ ಅಪರೂಪದ, ನೆನಪಿನಲ್ಲಿಟ್ಟುಕೊಳ್ಳಬಹುದಾದ ಸಿಹಿ ಕ್ಷಣಗಳನ್ನು ಆನಂದಿಸಲು ಹಿಂಜರಿಯುತ್ತಾರೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಹೀಗೆ ಹಲವರು ಹಲವು ರೀತಿ ಪ್ರತಿಕ್ರಿಯಿಸುತ್ತಿದ್ದಾರೆ.

  • ಕೊರೊನಾ ಟಫ್ ರೂಲ್ಸ್ ವಿರೋಧಿಸಿ ಮೆಟ್ರೋದಲ್ಲಿ ತುಟಿಗೆ ತುಟಿ ಸೇರಿಸಿದ ಜೋಡಿಗಳು

    ಕೊರೊನಾ ಟಫ್ ರೂಲ್ಸ್ ವಿರೋಧಿಸಿ ಮೆಟ್ರೋದಲ್ಲಿ ತುಟಿಗೆ ತುಟಿ ಸೇರಿಸಿದ ಜೋಡಿಗಳು

    – ಕಿಸ್ಸಿಂಗ್ ಫೋಟೋಗಳು ವೈರಲ್
    – ಜೋಡಿಯ ಚುಂಬನಕ್ಕೆ ಸಂಗೀತ ಕಲಾವಿದರ ಬೆಂಬಲ

    ಮಾಸ್ಕೋ: ಸರ್ಕಾರ ವಿಧಿಸಿರುವ ಕೊರೊನಾ ಟಫ್ ರೂಲ್ಸ್ ವಿರೋಧಿಸಿ ಯುವ ಜೋಡಿ ಮೆಟ್ರೋ ರೈಲಿನಲ್ಲಿಯೇ ತುಟಿಗೆ ತುಟಿ ಸೇರಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ರಷ್ಯಾದ ಯೆಕಟೆರಿನ್ಬರ್ಗ್ ನಲ್ಲಿ ರೈಲಿನಲ್ಲಿ ಈ ಘಟನೆ ನಡೆದಿದೆ. ಜೋಡಿಯ ಕಿಸ್ಸಿಂಗ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಸ್ಥಳೀಯ ವೆಬ್‍ಸೈಟ್ ಜೊತೆ ಮಾತಾಡಿರುವ ಜೋಡಿ, ಸಾರ್ವಜನಿಕವಾಗಿ ಕಿಸ್ ಮಾಡುವ ಮೂಲಕ ಯಾರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನಮಗಿಲ್ಲ. ನಮ್ಮಂತೆ ಹಲವು ಸಂಗೀತ ಕಲಾವಿದರು ಸರ್ಕಾರದ ಕೊರೊನಾ ಕಠಿಣ ನಿಯಮಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಾಗಾಗಿ ಬಹುತೇಕರು ನಮಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ.

    ಸರ್ಕಾರದ ಪ್ರಕಾರ ಕನ್ಸರ್ಟ್, ಕ್ಲಬ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮಾತ್ರ ಕೊರೊನಾ ಹರಡುತ್ತದೆ. ಹಾಗಾಗಿ ನೈಟ್ ಕ್ಲಬ್ ಸೇರಿದಂತೆ ಹಲವು ಕಾರ್ಯಕ್ರಮಗಳ ಮೇಲೆ ನಿಷೇಧ ಹಾಕಿವೆ. ಈ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಬದುಕು ಕಟ್ಟಿಕೊಂಡಿದ್ದ ಕಲಾವಿದರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮೆಟ್ರೋ ರೈಲುಗಳಲ್ಲಿ ಇಷ್ಟು ಸಂಖ್ಯೆಯಲ್ಲಿ ಜನ ಸೇರಿದ್ರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನಮಗೆ ಮಾತ್ರ ಯಾಕೆ ಈ ಕಠಿಣ ನಿಯಮಗಳು ಎಂದು ಕಿಸ್ಸಿಂಗ್ ಕಪಲ್ ಆಕ್ರೋಶ ಹೊರ ಹಾಕಿದ್ದಾರೆ.

    ಕೊರೊನಾ ಮತ್ತು ಹೊಸ ರೂಪಾಂತರಿ ವೈರಸ್ ಹಿನ್ನೆಲೆ ಇಂಗ್ಲೆಂಡ್ ನಲ್ಲಿ ಕಠಿಣ ನಿಯಮಗಳನ್ನ ಜಾರಿಗೆ ತರಲಾಗಿದೆ. ರಾತ್ರಿ ಕಾರ್ಯನಿರ್ವಹಿಸುವ ಮ್ಯೂಸಿಕಲ್ ಇವೆಂಟ್, ಪಬ್ ಗಳ ಮೇಲೆ ನಿಷೇಧ ಹಾಕಲಾಗಿದೆ. ಬೆಳಗ್ಗೆ ಇಲ್ಲದ ರೂಲ್ಸ್ ಗಳು ರಾತ್ರಿ ಮಾತ್ರ ಏಕೆ ಎಂದು ಸಂಗೀತ ಕಲಾವಿದರರು ಪ್ರಶ್ನಿಸುತ್ತಿದ್ದಾರೆ.