Tag: kiss film

  • ದಂತದ ಗೊಂಬೆಯಂತೆ ಮಿಂಚಿದ ಶ್ರೀಲೀಲಾ

    ದಂತದ ಗೊಂಬೆಯಂತೆ ಮಿಂಚಿದ ಶ್ರೀಲೀಲಾ

    ನ್ನಡದ ಬೆಡಗಿ ಶ್ರೀಲೀಲಾ (Sreeleela) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಹೊಸ ಫೋಟೋಶೂಟ್‌ನಲ್ಲಿ ದಂತದ ಗೊಂಬೆಯಂತೆ ನಟಿ ಮಿಂಚಿದ್ದಾರೆ. ಶ್ರೀಲೀಲಾರ ನಯಾ ಲುಕ್ ಕಂಡು ಪಡ್ಡೆಹುಡುಗರು ಫಿದಾ ಆಗಿದ್ದಾರೆ.

    ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ ಶ್ರೀಲೀಲಾ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕನ್ನಡದ ‘ಕಿಸ್’ ಚಿತ್ರದ ಮೂಲಕ ಕೆರಿಯರ್ ಶುರು ಮಾಡಿದ್ದ ಶ್ರೀಲೀಲಾ ಈಗ ತೆಲುಗಿನ (Tollywood) ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ತೆಲುಗು ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿದ್ದರೂ ಕೂಡ ನಟಿಗೆ ಬೇಡಿಕೆ ಕಮ್ಮಿಯಾಗಿಲ್ಲ.

    ಕಿಸ್, ಭರಾಟೆ, ಬೈಟು ಲವ್ ಚಿತ್ರದಲ್ಲಿ ನಟಿಸಿದ ನಂತರ ಅವರು ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟರು. ಇಂದು ಸ್ಟಾರ್ ನಟರಿಗೆ ಇವರೇ ನಾಯಕಿಯಾಗಬೇಕು ಎಂಬುವಷ್ಟರ ಮಟ್ಟಿಗೆ ಶ್ರೀಲೀಲಾ ಬೆಳೆದಿದ್ದಾರೆ. ಇದನ್ನೂ ಓದಿ:‘ಪ್ರೇಮಲು’ ಬ್ಯೂಟಿಗೆ ಜಾಕ್‌ಪಾಟ್- ‘ದಳಪತಿ 69’ ಸಿನಿಮಾದಲ್ಲಿ ಮಮಿತಾ ಬೈಜು

    ಸದ್ಯ ರಾಬಿನ್‌ಹುಡ್, ಉಸ್ತಾದ್ ಭಗತ್ ಸಿಂಗ್ ಸಿನಿಮಾಗಳಿವೆ. ಬಾಲಿವುಡ್‌ನಲ್ಲಿ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ.

  • ಬ್ರೇಕ್ ಬಳಿಕ ಮತ್ತೆ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ

    ಬ್ರೇಕ್ ಬಳಿಕ ಮತ್ತೆ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ

    ನ್ನಡದ ಬ್ಯೂಟಿ ಶ್ರೀಲೀಲಾಗೆ (Sreeleela) ತೆಲುಗಿನಲ್ಲಿ ಭಾರೀ ಬೇಡಿಕೆಯಿದೆ. ಸೌಂದರ್ಯದ ಜೊತೆ ಪ್ರತಿಭೆ ಇರುವ ಶ್ರೀಲೀಲಾ ಬ್ರೇಕ್ ನಂತರ ಮತ್ತಷ್ಟು ಬ್ಯುಸಿಯಾಗಿದ್ದಾರೆ. ತೆಲುಗಿನ ಜೊತೆ ಬಾಲಿವುಡ್‌ನಿಂದಲೂ ‘ಕಿಸ್’ (Kiss) ನಟಿಗೆ ಬುಲಾವ್ ಬರುತ್ತಿದೆ. ಇದನ್ನೂ ಓದಿ:ಭಾವಿ ಪತಿಗೆ ಕಾರ್ ಗಿಫ್ಟ್ ಮಾಡಿದ ‘ಅಗ್ನಿಸಾಕ್ಷಿ’ ನಟಿ

    ಶ್ರೀಲೀಲಾ ಬೆಂಗಳೂರಿನ ಕಾಲೇಜುವೊಂದರಲ್ಲಿ ಮೆಡಿಕಲ್ ಓದುತ್ತಿದ್ದಾರೆ. ಇದರ ಪರೀಕ್ಷೆಯ ನಿಮಿತ್ತ ‘ಗುಂಟೂರು ಖಾರಂ’ ಸಿನಿಮಾದ ನಂತರ ಬ್ರೇಕ್ ಪಡೆದುಕೊಂಡಿದ್ದರು. ಪರೀಕ್ಷೆ, ಓದು ಅಂತ ಬ್ಯುಸಿಯಿದ್ದ ನಟಿ ಮತ್ತೆ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಗಟ್ಟಿಮೇಳ’ ನಟಿ

    ಇದೀಗ ನಿತಿನ್ ಜೊತೆ ‘ರಾಬಿನ್‌ಹುಡ್’ (Robinhood Film) ಸಿನಿಮಾ ಮಾಡುತ್ತಿರೋದು ಅಧಿಕೃತ ಘೋಷಣೆ ಆಗಿದೆ. ರವಿತೇಜ ಜೊತೆ ಸಿನಿಮಾಗೆ ಚಾಲನೆ ಸಿಕ್ಕಿದೆ. ಪವನ್ ಕಲ್ಯಾಣ್ (Pawan Kalyan) ಜೊತೆಗಿನ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಒಪ್ಪಿಕೊಂಡಿದ್ದಾರೆ. ಕನ್ನಡದ ‘ಜ್ಯೂನಿಯರ್’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ತಿದೆ ಚಿತ್ರತಂಡ.

    ಅದಷ್ಟೇ ಅಲ್ಲ, ತಮಿಳಿನ ಅಜಿತ್ ಕುಮಾರ್ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೂ ಶ್ರೀಲೀಲಾ ನಾಯಕಿ ಎನ್ನಲಾಗಿದೆ. ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ನಟನೆಯ ಹೊಸ ಸಿನಿಮಾಗೂ ಇವರೇ ಹೀರೋಯಿನ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ನಲ್ಲಿ ಶ್ರೀಲೀಲಾಗೆ ಚಿತ್ರರಂಗದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿರೋದು ಗ್ಯಾರಂಟಿ.

  • ಹೊಸ ವರ್ಷದ ಆರಂಭದಲ್ಲೇ ಶ್ರೀಲೀಲಾ ಹೊಸ ಶಪಥ

    ಹೊಸ ವರ್ಷದ ಆರಂಭದಲ್ಲೇ ಶ್ರೀಲೀಲಾ ಹೊಸ ಶಪಥ

    ನ್ನಡದ ನಟಿ ಶ್ರೀಲೀಲಾ (Sreeleela) ಹೊಸ ವರ್ಷದಲ್ಲಿ ಹೊಸ ಶಫಥ ಮಾಡಿದ್ದಾರೆ. ಇನ್ನೇನು ನನ್ನನ್ನು ಹಿಡಿಯೋರು ಯಾರೂ ಇಲ್ಲ ಎಂದು ಶ್ರೀಲೀಲಾ ಮೆರೆಯುತ್ತಿದ್ದರು. ಆದರೆ ಕಳೆದ ವರ್ಷ ಮೂರು ಸಿನಿಮಾ ಮಕಾಡೆ ಮಲಗಿತ್ತು. ಇದೇ ಕಂಟಿನ್ಯೂ ಆದರೆ ಬಣ್ಣದ ಲೋಕವೂ ದೂರ ಸರಿಸುವುದು ನಿಶ್ಚಿತ. ಅದು ಶ್ರೀಲೀಲಾ ಅರಿವಿಗೂ ಬಂದಿದೆ. ಹಾಗಾಗಿ ಹೊಸ ವರ್ಷದ ಆರಂಭದಲ್ಲೇ ಹೊಸ ಶಪಥ ಮಾಡಿದ್ದಾರೆ.

    ಶ್ರೀಲೀಲಾ ಟಾಲಿವುಡ್‌ನ (Tollywood) ಹಾಟ್ ಬ್ಯೂಟಿ. ಒಂದೇ ಒಂದು ಸಿನಿಮಾದಿಂದ ಹತ್ತತ್ತು ಸಿನಿಮಾ ಹೊಸಿಲಿಗೆ ಬಂದು ಬಿದ್ದವು. ಬಂದಾಗಲೇ ಬಾಚಿಕೊಳ್ಳಬೇಕೆನ್ನುವ ಹಪಹಪಿಗೆ ಬಿದ್ದ ಶ್ರೀಲೀಲಾ ಈಗ 3 ಚಿತ್ರದ ಸೋಲಿನ ನಂತರ ಹೊಸ ಸಿನಿಮಾ ಒಪ್ಪಿಕೊಳ್ಳೋಕೆ ಯೋಚನೆ ಮಾಡುತ್ತಿದ್ದಾರೆ. ಇದನ್ನೂ ಓದಿ:ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್

    ಅದಕ್ಕಾಗಿ ಹೊಸ ವರ್ಷದಲ್ಲಿ ಈ ಹಿಂದೆ ಒಪ್ಪಿಕೊಂಡ ಸಿನಿಮಾ ಬಿಟ್ಟು ಹೊಸ ಸಿನಿಮಾ ಒಪ್ಪಿಲ್ಲ. ಪ್ರಿನ್ಸ್ ಜೊತೆ ‘ಗುಂಟೂರು ಖಾರಂ’ ಚಿತ್ರ, ಪವನ್‌ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’ ಹಾಗೂ ವಿಜಯ್ ದೇವರಕೊಂಡ ಸಿನಿಮಾ. ಇಷ್ಟನ್ನೇ ನೆಚ್ಚಿಕೊಂಡಿದ್ದಾರೆ. ಮಹೇಶ್ ಬಾಬು (Mahesh Babu) ಜೊತೆಗಿನ ಚಿತ್ರ ಸಂಕ್ರಾಂತಿಗೆ ಬರಲಿದೆ. ಇನ್ನು ಎರಡು ಚಿತ್ರ ಅಲ್ಲಲ್ಲೇ ಮರಗಟ್ಟಿವೆ. ಮುಂದೇನು ಶ್ರೀಲೀಲಾ ಮಾಸ್ಟರ್ ಪ್ಲಾನ್ ಎಂದು ಕಾದುನೋಡಬೇಕಿದೆ.

    ‘ಗುಂಟೂರು ಖಾರಂ’ ಇದರ ಮೇಲೆ ಶ್ರೀಲೀಲಾ (Sreeleela) ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಉಳಿದಿಬ್ಬರ ಹೀರೋ ಸಿನಿಮಾ ಯಾವಾಗಲಾದರೂ ಶುರುವಾಗಲಿ, ಮುಗಿಯಲಿ ಆಮೇಲೆ ಹೊಸ ಸಿನಿಮಾ ಸಹಿ ಮಾಡೋಣ ಎನ್ನುವುದು ನಟಿಯ ನಿರ್ಧಾರ. ಶ್ರೀಲೀಲಾ ಮೆದುಳು ಈಗಲಾದರೂ ಕೆಲಸ ಮಾಡುತ್ತಿದೆ. ಕನ್ನಡದ ಹುಡುಗಿ ಬೇಗ ಮನೆ ಮೂಲೆ ಸೇರಬಾರದು. ಯಾವುದೇ ಭಾಷೆಯಾದರೂ ಸರಿ ಗೆದ್ದು ಬೀಗಬೇಕು ಎಂಬುದು ಅಭಿಮಾನಿಗಳ ಆಶಯ.

  • ರಶ್ಮಿಕಾ ಮಂದಣ್ಣಗೆ ಬಿಟ್ಟುಕೊಟ್ಟ ಆ ಚಾನ್ಸ್‌ನಿಂದ ಸ್ಟಾರ್ ಪಟ್ಟ ಕಳೆದುಕೊಂಡ್ರಾ ಶ್ರೀಲೀಲಾ?

    ರಶ್ಮಿಕಾ ಮಂದಣ್ಣಗೆ ಬಿಟ್ಟುಕೊಟ್ಟ ಆ ಚಾನ್ಸ್‌ನಿಂದ ಸ್ಟಾರ್ ಪಟ್ಟ ಕಳೆದುಕೊಂಡ್ರಾ ಶ್ರೀಲೀಲಾ?

    ಚಿತ್ರರಂಗದಲ್ಲಿ ನ್ಯಾಶನಲ್ ಕ್ರಶ್ ಆಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ದು ಮಾಡ್ತಿದ್ದಾರೆ. ಕೊಡಗಿನ ಕುವರಿಯ ಕೈಯಲ್ಲಿ ಅರ್ಧ ಡಜನ್ ಸಿನಿಮಾ ಇದ್ರೂ ನಟಿಯ ಮೇಲಿರುವ ಕ್ರೇಜ್ ಅಭಿಮಾನಿಗಳಿಗೆ ಕಮ್ಮಿಯಾಗಿಲ್ಲ. ಹೀಗಿರುವಾಗ ರಶ್ಮಿಕಾ ಮತ್ತು ಶ್ರೀಲೀಲಾ (Sreeleela) ಬಗ್ಗೆ ಹೊಸ ವಿಚಾರವೊಂದು ಚರ್ಚೆಯಾಗುತ್ತಿದೆ. ಶ್ರೀಲೀಲಾ, ಚಲೋ ಸಿನಿಮಾದ ಆಫರ್ ಬಿಟ್ಟು ಕೊಟ್ಟು ನ್ಯಾಶನಲ್ ಕ್ರಶ್ ಪಟ್ಟ ಬಿಟ್ಟು ಕೊಟ್ರಾ.? ಎಂಬ ವಿಷ್ಯ ಚರ್ಚೆಗೆ ಗ್ರಾಸವಾಗಿದೆ.

    ಕನ್ನಡದ ‘ಕಿಸ್’ (Kiss Kannda Film) ಬೆಡಗಿ ಶ್ರೀಲೀಲಾ ಅವರು ಇಂದು ಟಾಲಿವುಡ್‌ನಲ್ಲಿ ಬ್ಯುಸಿ ನಾಯಕಿಯಾಗಿ ರಶ್ಮಿಕಾಗೆ ಸೆಡ್ಡು ಹೊಡೆಯುತ್ತಿದ್ದಾರೆ. 10ಕ್ಕೂ ಹೆಚ್ಚು ಚಿತ್ರಗಳು ಶ್ರೀಲೀಲಾ ಕೈಯಲ್ಲಿದೆ. ರಶ್ಮಿಕಾ ಕೈಯಲ್ಲಿ 3ರಿಂದ 4 ಸಿನಿಮಾಯಿದೆ. ಆದ್ರೂ ಶ್ರೀಲೀಲಾಗೆ ಸ್ಟಾರ್ ಪಟ್ಟ, ನ್ಯಾಶನಲ್ ಕ್ರಶ್ ಪಟ್ಟ ಸಿಗ್ತಿಲ್ಲ ಯಾಕೆ ಎಂಬ ಚರ್ಚೆ ಶುರುವಾಗಿದೆ. ಶ್ರೀಲೀಲಾ, ಗೋಲ್ಡನ್ ಆಫರ್ ಮಿಸ್ ಮಾಡಿಕೊಂಡಿದ್ದರ ಬಗ್ಗೆ ಚರ್ಚೆಯಾಗುತ್ತಿದೆ.

    ‘ಚಲೋ’ (Challo)ಸಿನಿಮಾದ ಹೀರೊ ನಾಗಶೌರ್ಯ (Nagashaurya) ಇತ್ತೀಚಿನ ಸಂದರ್ಶನದಲ್ಲಿ ರಶ್ಮಿಕಾಗೂ ಮುನ್ನ ಚಿತ್ರತಂಡ ಶ್ರೀಲೀಲಾರನ್ನು ಸಂಪರ್ಕ ಮಾಡಿತ್ತು. ಆದರೆ, ಶ್ರೀಲೀಲಾ ಕಾರಣಾಂತರಗಳಿಂದ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಅವರ ಸ್ಥಾನಕ್ಕೆ ಕನ್ನಡದ ಮತ್ತೊಬ್ಬ ನಟಿ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡಲಾಯ್ತು ಎಂದಿದ್ದಾರೆ. ಈ ಹೇಳಿಕೆ ಬಳಿಕ ಶ್ರೀಲೀಲಾ ಬಿಟ್ಟುಕೊಟ್ಟ ಗೋಲ್ಡನ್ ಚಾನ್ಸ್ ಬಗ್ಗೆ ಅನೇಕರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ‘ಚಲೋ’ ಸಿನಿಮಾ ತೆರೆಕಂಡ ಮೂರು ವರ್ಷಗಳ ಬಳಿಕ ಟಾಲಿವುಡ್‌ಗೆ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದರು. ‘ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಈಗ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೈಯಲ್ಲಿ ಬರೋಬ್ಬರಿ 10ಕ್ಕೂ ಹೆಚ್ಚು ಸಿನಿಮಾಗಳಿವೆ.

    ರಶ್ಮಿಕಾ ಮಂದಣ್ಣ ‘ಪುಷ್ಪ’ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗ್ಬಿಟ್ರು. ತಕ್ಷಣಕ್ಕೆ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇಲ್ಲಿಂದ ರಶ್ಮಿಕಾ ತೆಲುಗು ಸಿನಿಮಾಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ‘ಪುಷ್ಪ 2’ ರಶ್ಮಿಕಾ ಕೈಯಲ್ಲಿರೋ ಏಕೈಕ ತೆಲುಗು ಬಿಗ್ ಬಜೆಟ್ ಸಿನಿಮಾ. ಆದರೂ ಶ್ರೀವಲ್ಲಿ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ರಶ್ಮಿಕಾಗೆ ಅರಸಿ ಬರುತ್ತಿದ್ದ ಪಾತ್ರಗಳು ಈಗ ಶ್ರೀಲೀಲಾ ಆಫರ್ ಸಿಗುತ್ತಿದೆ. ಆದ್ರೂ ರಶ್ಮಿಕಾ ಸ್ಥಾನ ಭದ್ರವಾಗಿದೆ. ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಮಿಂಚ್ತಿರೋ ಶ್ರೀಲೀಲಾ ಲಕ್ ಹೇಗೆಲ್ಲಾ ಬದಲಾಗಬಹುದು ಎಂದು ಮುಂದಿನ ದಿನಗಳವರೆಗೂ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ಯಾಂಟ್ ಧರಿಸದೇ ನೈಟ್ ಡ್ರೆಸ್‌ನಲ್ಲಿ ಮಿಂಚಿದ ಶ್ರೀಲೀಲಾ- ರಶ್ಮಿಕಾ ದಾರಿ ಹಿಡಿಯಬೇಡಿ ಎಂದ ನೆಟ್ಟಿಗರು

    ಪ್ಯಾಂಟ್ ಧರಿಸದೇ ನೈಟ್ ಡ್ರೆಸ್‌ನಲ್ಲಿ ಮಿಂಚಿದ ಶ್ರೀಲೀಲಾ- ರಶ್ಮಿಕಾ ದಾರಿ ಹಿಡಿಯಬೇಡಿ ಎಂದ ನೆಟ್ಟಿಗರು

    ‘ಭರಾಟೆ’ ಬ್ಯೂಟಿ ಶ್ರೀಲೀಲಾ (Sreeleela) ಅವರು ಟಾಲಿವುಡ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಶೆಟ್ಟಿ, ಪೂಜಾ ಹೆಗ್ಡೆ (Pooja Hegde) ಈ ಸೂಪರ್ ಹೀರೋಯಿನ್‌ಗಳಿಗೆ ಸೆಡ್ಡು ಹೊಡೆದು ಶ್ರೀಲೀಲಾ ಮುನ್ನುಗ್ಗುತ್ತಿದ್ದಾರೆ. ಸದ್ಯ ಕಿಸ್ ಬೆಡಗಿ ಶ್ರೀಲೀಲಾ, ತಮ್ಮ ಹೊಸ ಫೋಟೋಶೂಟ್ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಪ್ಯಾಂಟ್ ಇಲ್ಲದೇ ನೈಟ್ ಡ್ರೆಸ್ ಫೋಟೋಸ್ ಶೇರ್ ಮಾಡಿರೋ ಶ್ರೀಲೀಲಾ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕನ್ನಡದ ಕಿಸ್, ಭರಾಟೆ, ಬೈಟು ಲವ್ ಸಿನಿಮಾಗಳ ಗಮನ ಸೆಳೆದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. 8ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗಿಗೆ ಎಂಟ್ರಿ ಕೊಟ್ಟ ಹೊಸತರಲ್ಲೇ ಅಲ್ಲು ಅರ್ಜುನ್‌ಗೆ(Allu Arjun) ಶ್ರೀಲೀಲಾ ನಾಯಕಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕನ್ನಡದ ನಟಿ ಟಾಲಿವುಡ್‌ನಲ್ಲಿ (Tollywood) ಈ ಪರಿ ಹವಾ ಕ್ರಿಯೇಟ್ ಮಾಡಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಆದರೆ ಈಗ ರಶ್ಮಿಕಾ ಹಾದಿಯನ್ನೇ ಶ್ರೀಲೀಲಾ(Sreeleela) ಹಿಡಿದ್ರಾ ಎಂಬ ಅನುಮಾನ ನೆಟ್ಟಿಗರಿಗೆ ಶುರುವಾಗಿದೆ. ಇದನ್ನೂ ಓದಿ:ಮನುಷ್ಯರಂತೆ ವರ್ತಿಸಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ- ‘ಪುಷ್ಪ’ ನಟಿ ಅನಸೂಯಾ

    ಟಾಲಿವುಡ್- ಬಾಲಿವುಡ್‌ನಲ್ಲಿ ಡಿಮ್ಯಾಂಡ್ ಕ್ರಿಯೇಟ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ಕೊಂಚ ಬೋಲ್ಡ್ ಆದ್ರೂ. ಈಗ ಶ್ರೀಲೀಲಾ ಕೂಡ ಸ್ವಲ್ಪ ಅದೇ ರೀತಿ ಆಡ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಆಗಿರೋದು ಶ್ರೀಲೀಲಾ ನಯಾ ಫೋಟೋಶೂಟ್, ಕರ್ನಾಟಕ ಮರೀಬೇಡಿ ರಶ್ಮಿಕಾ ಥರ ಆಗ್ಬೇಡಿ ಅಂತಾ ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.

    ನೈಟ್ ಡ್ರೆಸ್ ಧರಿಸಿ, ಕ್ಯಾಮೆರಾ ಹಿಡಿದು ಪೋಸ್ ಕೊಡುತ್ತಿರುವ ಶ್ರೀಲೀಲಾ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನಟಿ ಪ್ಯಾಂಟ್ ಧರಿಸದೇ ಇರೋದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪ್ಯಾಂಟ್ ಎಲ್ಲಿ ತಾಯಿ ಅಂತಾ ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ. ಶ್ರೀಲೀಲಾ ತಮ್ಮ ಹೊಸ ಫೋಟೋದಲ್ಲಿ ಮುದ್ದಾಗಿ ಕಾಣಿಸಿದ್ರು. ಅವರು ಪ್ಯಾಂಟ್ ಧರಿಸದೇ ಇರೋದು ಅನೇಕರಿಗೆ ಅಸಮಾಧಾನ ತಂದಿದೆ.

  • ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

    ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

    ನ್ನಡದ ‘ಕಿಸ್’ (Kiss Film) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ ಇದೀಗ ಟಾಲಿವುಡ್ ಅಂಗಳದಲ್ಲಿ ಭರ್ಜರಿ ಅವಕಾಶ ಬಾಚಿಕೊಳ್ತಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಬಳಿಕ ಕನ್ನಡದ ನಟಿ ಶ್ರೀಲೀಲಾ (Sreeleela) ಅವರು ತೆಲುಗಿನಲ್ಲಿ ಸದ್ದು ಮಾಡ್ತಿದ್ದಾರೆ.

    ಕನ್ನಡದ ಕಿಸ್, ಭರಾಟೆ, ಬೈ 2 ಲವ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಶ್ರೀಲೀಲಾ ತೆಲುಗಿನಲ್ಲಿ ‘ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ಎಂಟ್ರಿ ಕೊಟ್ರು. ನಂತರ ರವಿತೇಜಾಗೆ ‘ಧಮಾಕ’ ಸಿನಿಮಾದಲ್ಲಿ ನಾಯಕಿಯಾಗಿ ಗಮನ ಸೆಳೆದರು. ಈಗ ಟಾಲಿವುಡ್‌ನ 9 ಸಿನಿಮಾಗಳಲ್ಲಿ ಕಿಸ್ ಬ್ಯೂಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಹೃದಯಾಘಾತದಿಂದ ಫೇಮಸ್ ನಟ ನಿತೇಶ್ ಪಾಂಡೆ ನಿಧನ

    ಎಂಬಿಬಿಎಸ್‌ (MBBS) ಓದುತ್ತಿರೋ ಶ್ರೀಲೀಲಾ, ಏಜುಕೇಷನ್ ಜೊತೆ ನಟನೆ ಕೂಡ ಬ್ಯಾಲೆನ್ಸ್ ಮಾಡ್ತಿದ್ದಾರೆ. ಹಾಗಾದ್ರೆ ಶ್ರೀಲೀಲಾ ಕೈಯಲ್ಲಿ ಯಾವೆಲ್ಲಾ ಸಿನಿಮಾಗಳಿವೆ. ಇಲ್ಲಿದೆ ಮಾಹಿತಿ. ಮಹೇಶ್ ಬಾಬು ಸಿನಿಮಾ, ನಂದಮೂರಿ ಬಾಲಕೃಷ್ಣ, ರಾಮ್ ಪೋತಿನೇನಿ, ವಿಜಯ್ ದೇವರಕೊಂಡ, ಪವನ್ ಕಲ್ಯಾಣ್ ನಟನೆಯ ‘ಉಸ್ತಾತ್ ಭಗತ್ ಸಿಂಗ್’, ನಿತಿನ್ ಹೊಸ ಸಿನಿಮಾ, ನವೀನ್ ಪೊಲಿಸೆಟ್ಟಿ ಸಿನಿಮಾ, ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾ (ಕನ್ನಡ & ತೆಲುಗು), ಪಂಜ ವೈಷ್ಣವ್ ತೇಜ್ ಅವರ ‘ಆದಿಕೇಶವ’ ಸಿನಿಮಾಗಳು ನಟಿಯ ಕೈಯಲ್ಲಿದೆ. ಕನ್ನಡ ಸೇರಿ ಒಟ್ಟು 9 ಸಿನಿಮಾಗಳಲ್ಲಿ ಶ್ರೀಲೀಲಾ ಲಿಸ್ಟ್‌ನಲ್ಲಿದೆ.

    ತನ್ನ ಮುದ್ದು ಮುಖ, ಅದ್ಭುತ ನಟನೆ ಮೂಲಕ ಮೋಡಿ ಮಾಡ್ತಿರುವ ಶ್ರೀಲೀಲಾ ಅವರು ಸ್ಟಾರ್ ನಟಿಯಾಗಿ ನಿಲೋದ್ರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಕನ್ನಡದ ನಟಿಮಣಿಯರು ದಕ್ಷಿಣದ ಸಿನಿಮಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ, ಅನುಷ್ಕಾ ಶೆಟ್ಟಿ, ಪ್ರಣೀತಾ ಸುಭಾಷ್, ರಶ್ಮಿಕಾ ಮಂದಣ್ಣ, ನಿತ್ಯಾ ಮೆನನ್ ಸೇರಿದಂತೆ ಹಲವರು ಸೈ ಎನಿಸಿಕೊಂಡಿದ್ದಾರೆ. ಇದೀಗ ಅದೇ ದಾರಿಯಲ್ಲಿ ಶ್ರೀಲೀಲಾ ಕೂಡ ಹೆಜ್ಜೆ ಇಡ್ತಿದ್ದಾರೆ.

  • `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    `ಕಿಸ್’ ಮತ್ತು `ಭರಾಟೆ’ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದ ಸುಂದರಿ ಶ್ರೀಲೀಲಾ, ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ (Rashmika Mandanna) ನಂತರ ಶ್ರೀಲೀಲಾಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇತ್ತೀಚೆಗೆ ಧಮಾಕ ಪ್ರಚಾರ ಕಾರ್ಯದಲ್ಲಿ `ಕಾಂತಾರ’ (Kantara) ನಮ್ಮ ಕನ್ನಡದ ಹೆಮ್ಮೆ ಎಂದು ನಟಿ ಶ್ರೀಲೀಲಾ (Sreeleela) ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

    ಕನ್ನಡದ ನಟಿ ಶ್ರೀಲೀಲಾ ಈಗ ಸೌತ್ ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ತೆಲುಗಿನಲ್ಲಿ ಮಿಂಚ್ತಾ ಇದ್ದರು. ಕನ್ನಡ ಚಿತ್ರರಂಗದ ಮೇಲೆ ಅಗಾಧವಾದ ಪ್ರೀತಿಯನ್ನ ಹೊಂದಿದ್ದಾರೆ. ಸದ್ಯ ರವಿತೇಜಾ ಮತ್ತು ಶ್ರೀಲೀಲಾ ನಟನೆಯ `ಧಮಾಕ’ (Dhamaka)ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಶ್ರೀಲೀಲಾಗೆ ಕನ್ನಡ ಸಿನಿಮಾರಂಗದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿದೆ. `ಕಾಂತಾರ’ ಸಿನಿಮಾ ಬಗ್ಗೆಯೂ ಕೇಳಲಾಗಿದೆ. ಇದನ್ನೂ ಓದಿ: ಫಿಶ್ ತಿನ್ನುವ ಭರದಲ್ಲಿ ʻಸಾನ್ಯ ಅಂದ್ರೆ ಯಾರುʼ ಎಂದ ರೂಪೇಶ್‌ ಶೆಟ್ಟಿ

    ನಾನು `ಕಾಂತಾರ’ ಸಿನಿಮಾ ನೋಡಿದ್ದೇನೆ. ಚಿತ್ರ ಅದ್ಭುತವಾಗಿದೆ. ನಾನು ಕರ್ನಾಟಕದವಳು(Karnataka). ಕನ್ನಡ ಚಿತ್ರರಂಗದ ವ್ಯಾಪ್ತಿ ಹೆಚ್ಚುತ್ತಿರುವ ಬಗ್ಗೆ ತುಂಬಾ ಹೆಮ್ಮೆ ಇದೆ. ಕಾಂತಾರ ನಮ್ಮ ಕನ್ನಡದ ಹೆಮ್ಮೆ ಎಂದು ಈ ವೇಳೆ ಶ್ರೀಲೀಲಾ ಮಾತನಾಡಿದ್ದಾರೆ. ನಟಿ ಆಡಿರುವ ಮಾತು ಇದೀಗ ಕನ್ನಡಿಗರ ಮನಗೆದ್ದಿದೆ. ರಶ್ಮಿಕಾ ಮಾಡಿದ ತಪ್ಪನ್ನ ಮಾಡದೇ, ಕನ್ನಡ ಚಿತ್ರರಂಗದ ಬಗ್ಗೆ ಶ್ರೀಲೀಲಾ ಹೆಮ್ಮೆಯಿಂದ ಮಾತನಾಡಿದ್ದಕ್ಕೆ ಕನ್ನಡಿಗರು ದಿಲ್‌ಖುಷ್ ಆಗಿದ್ದಾರೆ.

    `ಪೆಳ್ಳಿ ಸಂದಡಿ’ ಮತ್ತು `ಧಮಾಕ’ ನಂತರ ತೆಲುಗಿನ ಸಾಕಷ್ಟು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಅದ್ದೂರಿ ಲವರ್’ಗಾಗಿ `ಕಿಸ್’ ಹೀರೋ ವಿರಾಟ್ ಭರ್ಜರಿ ವರ್ಕೌಟ್

    `ಅದ್ದೂರಿ ಲವರ್’ಗಾಗಿ `ಕಿಸ್’ ಹೀರೋ ವಿರಾಟ್ ಭರ್ಜರಿ ವರ್ಕೌಟ್

    `ಕಿಸ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಲಗ್ಗೆಯಿಟ್ಟ ಪ್ರತಿಭಾವಂತ ನಟ ವಿರಾಟ್ ಈಗ ಅದ್ದೂರಿ ಲವರ್ ಆಗಿ ಮಿಂಚಲು ರೆಡಿಯಾಗಿದ್ದಾರೆ. ಈ ಚಿತ್ರಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ಆಗಿ ವರ್ಕೌಟ್ ಮಾಡ್ತಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ.

    ನಟ ವಿರಾಟ್ ಕಿರುತೆರೆ ಟು ಹಿರಿತೆರೆಯವರೆಗೂ ಅಪಾರ ಅಭಿಮಾನಿಗಳ ಬಳಗ ಹೊಂದಿರೋ ನಟ, ಎ.ಪಿ ಅರ್ಜುನ್ ನಿರ್ದೇಶನದ `ಕಿಸ್’ ಸಿನಿಮಾದಿಂದ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಎ.ಪಿ ಅರ್ಜುನ್ ನಿರ್ದೇಶನದ `ಅದ್ದೂರಿ ಲವರ್’ ಚಿತ್ರದಲ್ಲಿ ಅದ್ದೂರಿಯಾಗಿ ಮಿಂಚಲು ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಸದ್ಯ ವಿರಾಟ್ ವರ್ಕೌಟ್ ಮಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾ ತುಂಬೆಲ್ಲಾ ವೈರಲ್ ಆಗ್ತಿದೆ. ಇದನ್ನೂ ಓದಿ:ನಿಮ್ಮ ಹೃದಯವೇ ನನ್ನ ಸಾಮ್ರಾಜ್ಯ: ಅಭಿಮಾನಿಗಳಿಗೆ ಸುಂದರ ಕಥೆ ಹೇಳಿದ ರಾಕಿಭಾಯ್

     

    View this post on Instagram

     

    A post shared by Viraat (@viraat_official)

    `ಅದ್ದೂರಿ ಲವರ್’ ಕನ್ನಡ ಮತ್ತು ತೆಲುಗಿನಲ್ಲಿ ಮೂಡಿ ಬರುತ್ತಿದ್ದು, ವಿರಾಟ್‌ ಡಿಫರೆಂಟ್ ಶೇಡ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅದಕ್ಕಾಗಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾ 8 ಪ್ಯಾಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ನಟ ವಿರಾಟ್ ಜಬರ್‌ದಸ್ತ್ ವರ್ಕೌಟ್‌ಗೆ ಮತ್ತು ಲುಕ್ಕಿಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಪಾತ್ರಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸುತ್ತಿರೋ ವಿರಾಟ್ ಶ್ರಮಕ್ಕೆ ಅಭಿಮಾನಿಗಳು ಉಘೇ ಉಘೇ ಅಂದಿದ್ದಾರೆ. ಹೀಗೆ ಚಂದನವನದಲ್ಲಿ ಸಿನಿಮಾಗಳ ಮೂಲಕ ಸೌಂಡ್ ಮಾಡಲಿ ಎಂಬುದೇ ಅಭಿಮಾನಿಗಳ ಆಶಯ.

  • ತೆಲುಗಿನ ನಟ ನಿತಿನ್ ಜೊತೆ ಭರಾಟೆ ಬೆಡಗಿ ಶ್ರೀಲೀಲಾ ರೊಮ್ಯಾನ್ಸ್

    ತೆಲುಗಿನ ನಟ ನಿತಿನ್ ಜೊತೆ ಭರಾಟೆ ಬೆಡಗಿ ಶ್ರೀಲೀಲಾ ರೊಮ್ಯಾನ್ಸ್

    ನ್ನಡ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಟಾಲಿವುಡ್ ಅಂಗಳದಲ್ಲಿ ಸೌಂಡ್ ಮಾಡ್ತಿದ್ದಾರೆ ಕನ್ನಡದ ಬೆಡಗಿಯರು. ಅವರ ಸಾಲಿಗೆ ಈಗಾಗಲೇ ಭರಾಟೆ ಬೆಡಗಿ ಶ್ರೀಲೀಲಾ ಸೇರಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದ ಇವರು, ಕೆಲವೇ ಸಮಯದಲ್ಲೇ ಬೇರೆ ಸಿನಿಮಾ ರಂಗ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದಾರೆ.

    ಸಾಮಾನ್ಯವಾಗಿ ಕನ್ನಡದಲ್ಲಿ ಅವಕಾಶ ಕಡಿಮೆಯಾದಾಗ ಬೇರೆ ಸಿನಿಮಾ ರಂಗದ ಕಡೆ ಮುಖ ಮಾಡಿದಿದ್ದೆ. ಆದರೆ, ಸ್ಯಾಂಡಲ್‌ವುಡ್‌ನಲ್ಲೇ ಸಿಕ್ಕಾಪಟ್ಟೆ ಬೇಡಿಕೆ ಇರುವಾಗಲೇ ತೆಲುಗು ಚಿತ್ರಗಳಿಂದಲೂ ನಟಿ ಶ್ರೀಲೀಲಾಗೆ ಬುಲಾವ್ ಬರುತ್ತಿದೆ. ತೆಲುಗಿನ `ಪೆಳ್ಳಿ ಸಂದಡಿ’ ಚಿತ್ರದ ನಂತರ ಟಾಲಿವುಡ್ ನಟ ನಿತಿನ್‌ಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ.

    ತೆಲುಗಿನ ಟ್ಯಾಲೆಂಟೆಡ್ ಆಕ್ಟರ್ ನಿತಿನ್ ನಟನೆಯ ಹೊಸ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ವಕ್ಕಂತA ವಂಶಿ ನಿರ್ದೇಶನದ ಚಿತ್ರದಲ್ಲಿ ನಿತಿನ್‌ಗೆ ಭರಾಟೆ ಕ್ವೀನ್ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್‌ಸ್ಟೋರಿ ಚಿತ್ರವಾಗಿದ್ದು, ನಿತಿನ್ ಲವರ್‌ಬಾಯ್ ಲುಕ್ ಕಾಣಿಸಿಕೊಳ್ಳಲಿದ್ದಾರೆ. ನಟಿ ಶ್ರೀಲೀಲಾ ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಲಿದ್ದಾರಂತೆ. ಇದನ್ನು ಓದಿ: ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ

    ನಟ ನಿತಿನ್ ಅವರ ಹೋಮ್ ಪ್ರೊಡಕ್ಷನ್ `ಶ್ರೇಷ್ಠ ಮೂವೀಸ್’ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು. ಇತ್ತೀಚಿಗಷ್ಟೇ ಚಿತ್ರದ ಮುಹೂರ್ತ ನೆರೆವೇರಿದೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. `ಪೆಳ್ಳಿ ಸಂದಡಿ’ ಚಿತ್ರದ ನಂತರ ಸ್ಟಾರ್ ನಟ ರವಿ ತೇಜಾ, ನಿತಿನ್ ಜೊತೆ ನಟಿಸ್ತಿರೋ ಶ್ರೀಲೀಲಾ, ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.