Tag: kiss

  • ರಿಚಾ ಚಡ್ಡಾ ‘ಬೇಬಿ ಬಂಪ್‍’ಗೆ ಮುತ್ತಿಕ್ಕಿ ಟ್ರೋಲ್ ಆದ ನಟಿ ರೇಖಾ

    ರಿಚಾ ಚಡ್ಡಾ ‘ಬೇಬಿ ಬಂಪ್‍’ಗೆ ಮುತ್ತಿಕ್ಕಿ ಟ್ರೋಲ್ ಆದ ನಟಿ ರೇಖಾ

    ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದ್ದ ರಿಚಾ ಚಡ್ಡಾ (Richa Chadda) ಅವರ ಬೇಬಿ ಬಂಪ್ (Baby Bump) ಗೆ ಮುತ್ತಿಕ್ಕುವ ಮೂಲಕ ಟ್ರೋಲ್ ಆಗಿದ್ದಾರೆ ಹಿರಿಯ ನಟಿ ರೇಖಾ ಚಡ್ಡಾ. ರಿಚಾ ನಟನೆಯ ಹೀರಾಮಂಡಿ ಚಿತ್ರದ ಪ್ರೀಮಿಯರ್ ಶೋಗೆ ಆಗಮಿಸಿದ್ದ ರೇಖಾ (Rekha) ಅವರು, ರಿಚಾ ನಟನೆ ಕಂಡು ತಬ್ಬಿಕೊಂಡರು. ನಂತರ ರಿಚಾರ ಬೇಬಿ ಬಂಪ್ ಗೆ ಕಿಸ್ ಮಾಡಿದ್ದಾರೆ.

    ಈ ಹಿಂದೆ ರಿಚಾ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಾಯಿಯ ಮಹತ್ವವನ್ನೂ ತಿಳಿಸಿದ್ದರು.

    ‘1 + 1= 3’ ಎಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ರಿಚಾ ಚಡ್ಡಾ ಮತ್ತು ಅಲಿ ಫಜಲ್ ದಂಪತಿ ಪೋಷಕರಾಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ‘ಒಂದು ಚಿಕ್ಕ ಹಾರ್ಟ್‌ಬೀಟ್  ನಮ್ಮ ಜಗತ್ತಿನಲ್ಲಿ ಅತಿದೊಡ್ಡ ಶಬ್ದ’ ಎಂದು ಈ ಜೋಡಿ ತಮ್ಮ ಚಿತ್ರಗಳಿಗೆ ಶೀರ್ಷಿಕೆ ನೀಡಿ ಪ್ರೆಗ್ನೆನ್ಸಿ ನ್ಯೂಸ್ ಹಂಚಿಕೊಂಡಿದ್ದರು. ರಿಚಾ ದಂಪತಿಗೆ ಕನ್ನಡದ ‘ಗೂಗ್ಲಿ’ ನಟಿ ಕೃತಿ ಕರಬಂಧ ಸೇರಿದಂತೆ ಅನೇಕರು ಶುಭಹಾರೈಸಿದ್ದರು.

     

    ಸೆಪ್ಟೆಂಬರ್ 23ರಂದು ರಿಚಾ ಮತ್ತು ಅಲಿ ಫಜಲ್ (Ali Fazal) ಅದ್ಧೂರಿಯಾಗಿ ಮದುವೆಯಾದರು. ಬಳಿಕ ಮುಂಬೈ, ದೆಹಲಿ ಮತ್ತು ಲಕ್ನೋದಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದರು. ಅಂದಹಾಗೆ, ಸಿನಿಮಾ ಸೆಟ್‌ವೊಂದರಲ್ಲಿ ರಿಚಾ ಮತ್ತು ಅಲಿ ಅವರಿಗೆ ಪರಿಚಯವಾಗಿ ಆ ಸ್ನೇಹ ಪ್ರೇಮಕ್ಕೆ ತಿರುಗಿತ್ತು. 10 ವರ್ಷಗಳ ಡೇಟಿಂಗ್ ನಂತರ 2022ರಲ್ಲಿ ಈ ಜೋಡಿ ಮದುವೆಯಾದರು.

  • Bigg Boss Kannada- ಹೆಣ್ಣು ವೇಷತೊಟ್ಟು ತುಕಾಲಿಗೆ ಮುತ್ತಿಟ್ಟ ಕಾರ್ತಿಕ್

    Bigg Boss Kannada- ಹೆಣ್ಣು ವೇಷತೊಟ್ಟು ತುಕಾಲಿಗೆ ಮುತ್ತಿಟ್ಟ ಕಾರ್ತಿಕ್

    ಬಿಗ್ ಬಾಸ್ (Bigg Boss Kannada) ಫಿನಾಲೆಗೆ ಇನ್ನೊಂದೇ ದಿನ ಬಾಕಿ. ಅಷ್ಟರಲ್ಲೇ ವಿಶೇಷವಾದ ಅವಕಾಶವನ್ನು ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡಿದ್ದಾರೆ. ಅದರಲ್ಲೂ ತುಕಾಲಿ ಸಂತುಗೆ ನೀಡಿದ ಅವಕಾಶ ಸಖತ್ ಫಿನ್ನಿಯಾಗಿದೆ. ಕೆಲವು ದಿನಗಳ ಹಿಂದೆ ಬಿಗ್‌ಬಾಸ್‌, ಮನೆಯಲ್ಲಿರುವ ಆರು ಸ್ಪರ್ಧಿಗಳಿಗೆ ಅವರ ಆಸೆಗಳನ್ನು ಕೇಳಿತ್ತು. ಈಗ ಅವರ ಆಸೆಗಳನ್ನೆಲ್ಲ ಒಂದೊಂದಾಗಿ ಈಡೇರಿಸುತ್ತಿದ್ದಾರೆ ಬಿಗ್‌ಬಾಸ್. ಆ ಸನ್ನಿವೇಶ ಹೇಗಿದೆ ಎಂಬುದು ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

    ‘ತುಕಾಲಿಯವರೆ  (Tukali Santu)ಕೆಲಸಮಯಕ್ಕೆ ರಾಜನಂತೆ ಬದುಕಬೇಕು’ ಎಂದು ಬಿಗ್‌ಬಾಸ್‌ ಹೇಳಿದ್ದಾರೆ. ಅದಕ್ಕೆ ಅನುಗುಣವಾಗಿ ಕೆಂಪು ಸೂಟ್ ತೊಟ್ಟುಕೊಂಡ ತುಕಾಲಿ ಮಹಾರಾಜ್‌, ಮರುಕ್ಷಣವೇ ಮನೆಮಂದಿಗೆ ಅಪ್ಪಣೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ.

    ‘ಪಿಲ್ಲೊವನ್ನು ತೆಗೆದುಕೊಂಡು ನನಗೆ ಬೀಸು’ ಎಂದು ಕಾರ್ತಿಕ್‌ಗೆ ಅಪ್ಪಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ತುಕಾಲಿ ಮಹಾರಾಜರ ಮನಗೆಲ್ಲಲು ಬಿಗ್‌ಬಾಸ್‌ ಮನೆಯಲ್ಲಿ ಹೊಸ ರಾಜಕುಮಾರಿ ಅವತರಿಸಿದ್ದಾಳೆ. ಅಪ್ಪಣೆ ಮಾಡುವ ಮುನ್ನವೇ ತುಕಾಲಿ ಅವರಿಗೆ ಅವಸರವಸರವಾಗಿ ಮುತ್ತಿಟ್ಟು ತನ್ನ ಪ್ರೇಮವನ್ನೂ ವ್ಯಕ್ತಪಡಿಸಿದ್ದಾಳೆ. ‘ಎಷ್ಟು ಆತುರದಿಂದ ಕಾಯುತ್ತಿದ್ದೀಯಾ ಎಂದು ಈಗ ಗೊತ್ತಾಯ್ತು’ ಎಂದು ಆ ರಾಜಕುಮಾರಿಯ ಪ್ರೇಮಕ್ಕೆ ಮಹಾರಾಜರೇ ತಬ್ಬಿಬ್ಬಾಗಿದ್ದಾರೆ.

    ಅಷ್ಟೇ ಅಲ್ಲ, ಪ್ರತಾಪ್‌ ಕಂಪನಿಯ ಡ್ರೋಣ್‌ ಬಿಗ್‌ಬಾಸ್‌ ಮನೆಯೊಳಗೆ ಲ್ಯಾಂಡ್ ಆಗಿದೆ. ನೀಲಿ ಬಣ್ಣದ ಈ ಡ್ರೋಣ್ ಚೆಲುವೆಯನ್ನು ನೋಡಿ ಪ್ರತಾಪ್‌, ಹಳೆಯ ಪ್ರೇಯಸಿಯನ್ನು ಕಂಡಷ್ಟೇ ಉತ್ಸಾಹದಿಂದ ಮುನ್ನುಗ್ಗಿ ಬಂದು ಎತ್ತಿಕೊಂಡಿದ್ದಾರೆ.

    ಬಿಗ್‌ಬಾಸ್‌ನ ಈ ಸೀಸನ್‌ ಕೊನೆಯ ದಿನಗಳು ಭಾವುಕತೆ, ಸಾರ್ಥಕತೆ ಮತ್ತು ಭರಪೂರ ಮನರಂಜನೆಯ ನಗುವಿನಲ್ಲಿ ತುಂಬಿಹೋಗುತ್ತಿದೆ. ಮನೆಯೊಳಗಿನ ಆರು ಸ್ಪರ್ಧಿಗಳೂ ತಮ್ಮೆಲ್ಲ ಜಿದ್ದು ಮರೆತು ಈ ಕ್ಷಣದ ಖುಷಿಯಲ್ಲಿ ಕಳೆದುಹೋಗುತ್ತಿದ್ದಾರೆ. ‘ಹ್ಯಾಪಿ ಬಿಗ್‌ಬಾಸ್’ ಎಂಬ ಟ್ಯಾಗ್‌ ಲೈನ್‌ ಅನ್ನು ಅಕ್ಷರಶಃ ಸತ್ಯವಾಗಿಸುತ್ತಿದ್ದಾರೆ.

     

    ಬಿಗ್‌ಬಾಸ್‌ ಸೀಸನ್ 10 ಫಿನಾಲೆ ಈ ವಾರಾಂತ್ಯದಲ್ಲಿ ನಡೆಯಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಕೋಟಿ ಜನರ ಕುತೂಹಲಕ್ಕೆ ಉತ್ತರ ಸಿಗಲಿದೆ. ಫಿನಾಲೆಯನ್ನು ಜಿಯೊಸಿನಿಮಾ ಆಪ್‌ನಲ್ಲಿ ಉಚಿತವಾಗಿ ಎಲ್ಲಿಬೇಕಾದರೂ ನೋಡಬಹುದಾಗಿದೆ.

  • ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?

    ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?

    ನ್ನಡದ ಹುಡುಗಿ, ಬೆಂಗಳೂರಿನ ಬೆಡಗಿ ಶ್ರೀಲೀಲಾ (Sreeleela) ಅವರಿಗೆ ಇದೀಗ ಟಾಲಿವುಡ್‌ನಲ್ಲಿ (Tollywood) ಅದೃಷ್ಟ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಸೋಲನ್ನು ಕಂಡ ‘ಕಿಸ್’ ನಟಿಗೆ ಈಗ ‘ಗುಂಟೂರು ಖಾರಂ’ ಸಿನಿಮಾದಿಂದ ಯಶಸ್ಸು ಸಿಕ್ಕಿದೆ.

    ಕಿಸ್, ಭರಾಟೆ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ಶ್ರೀಲೀಲಾ ಬಳಿಕ ತೆಲುಗಿಗೆ ಹಾರಿದ್ದರು. ಧಮಾಕಾ’ ಚಿತ್ರದ ಸಕ್ಸಸ್ ಬಳಿಕ ‘ಸ್ಕಂದ’, ‘ಆದಿಕೇಶವ’, ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಸೋಲಿನಿಂದ ಕಂಗೆಟ್ಟ ನಟಿಗೆ ‘ಗುಂಟೂರು ಖಾರಂ’ ಚಿತ್ರದಿಂದ ಯಶಸ್ಸು ಸಿಕ್ಕಿದೆ. ಇದನ್ನೂ ಓದಿ:ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್- 55 ಲಕ್ಷ ಮೊತ್ತದಲ್ಲಿ ಲೀಲಾವತಿ ಸ್ಮಾರಕ

    ಜನವರಿ 12ರಂದು ರಿಲೀಸ್ ಆದ ‘ಗುಂಟೂರು ಖಾರಂ’ (Guntur Kaaram) ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ಶ್ರೀಲೀಲಾ ನಟನೆ ಮತ್ತು ಡ್ಯಾನ್ಸ್, ಚಿತ್ರದ ಕಥೆ ಬಗ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಪ್ರಿನ್ಸ್- ಶ್ರೀಲೀಲಾ ಜೋಡಿ ಮೋಡಿ ಮಾಡುತ್ತಿದೆ.

    ರಶ್ಮಿಕಾ(Rashmika Mandanna), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ (Krithi Shetty) ಠಕ್ಕರ್ ಕೊಟ್ಟು ಮತ್ತೆ ಸಕ್ಸಸ್ ರೇಸ್‌ನಲ್ಲಿದ್ದಾರೆ ಶ್ರೀಲೀಲಾ. ಈಗ ಮತ್ತೆ ಶ್ರೀಲೀಲಾಗೆ ಸ್ಟಾರ್ ನಟರ ಚಿತ್ರಗಳು ಅರಸಿ ಬರುತ್ತಿದೆ. ಇದರ ನಡುವೆ ನಟಿ, ಎಂಬಿಬಿಎಸ್ ಫೈನಲ್ ಇಯರ್ ಓದುತ್ತಿದ್ದಾರೆ. ಎಕ್ಸಾಂ ಹತ್ತಿರವಿರುವ ಕಾರಣ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿಯೂ ಇದೆ.

    ಅದೃಷ್ಟ ಕೈ ಹಿಡಿದಿರೋ ಸಮಯದಲ್ಲಿ ಕನ್ನಡದ ಬ್ಯೂಟಿ ಮತ್ತೆ ಸಿನಿಮಾಗಳನ್ನು ಮಾಡುತ್ತಾರಾ? ಅಥವಾ ಎಜುಕೇಷನ್‌ಗೆ ಒತ್ತು ಕೊಟ್ಟು ವಿರಾಮ ತೆಗೆದುಕೊಳ್ತಾರೆ ಕಾಯಬೇಕಿದೆ. ಡಿಮ್ಯಾಂಡ್‌ ಇರೋವಾಗಲೇ ಹುಡುಕಿ ಬಂದಿರೋ ಅದೃಷ್ಟದ ಕಡೆ ತಿರುಗಿ ನೋಡಬೇಕಲ್ಲವೇ? ಹಾಗಾದ್ರೆ ‘ಕಿಸ್‌’ ನಟಿ ಮುಂದೆ ಏನ್ಮಾಡ್ತಾರೆ ಕಾದುನೋಡೋಣ.

  • ಉರ್ಫಿ ಮೈ ತುಂಬಾ ಮುತ್ತಿನ ಗುರುತು

    ಉರ್ಫಿ ಮೈ ತುಂಬಾ ಮುತ್ತಿನ ಗುರುತು

    ಮಾಜಿ ಬಿಗ್ ಬಾಸ್ ತಾರೆ ಉರ್ಫಿ ಜಾವೇದ್ (Urfi Javed) ತಮ್ಮ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾದಲ್ಲಿ ಹಂಚಿಕೊಂಡ ಫೋಟೋದಲ್ಲಿ ಅವರ ಮೈ ತುಂಬಾ ಮುತ್ತಿನ ಗುರುತುಗಳಿವೆ.  ಆ ತುಟಿಗಳ ಮಾರ್ಕ್ ಅನ್ನು ಕೊಟ್ಟಿದ್ದು ತಮ್ಮ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದಾರೆ ಉರ್ಫಿ. ಜೊತೆಗೆ ಫ್ರೆಂಡ್ಸ್ ಮೈ ತುಂಬಾ ಕಿಸ್ (Kiss) ಕೊಡುತ್ತಿರುವ ವಿಡಿಯೋವನ್ನೂ ಅವರು ಶೇರ್ ಮಾಡಿದ್ದು, ಸಾಕಷ್ಟು ಕಾಮೆಂಟ್ಸ್ ಹರಿದು ಬಂದಿವೆ.

    ಭಿನ್ನ ಭಿನ್ನ ಕಾಸ್ಟ್ಯೂಮ್ ಧರಿಸಿ ಕ್ಯಾಮೆರಾ ಮುಂದೆ ಬರುವುದು ಅವರಿಗೆ ಚಾಲಿ ಆಗಿದೆ. ಅವರ ವಿಚಿತ್ರ ಉಡುಗೆಯೇ ಅನೇಕ ಬಾರಿ ಟ್ರೋಲ್‌ಗರ ಬಾಯಿಗೆ ಆಹಾರವಾಗಿದ್ದು ಇದೆ. ಈ ಹಿಂದೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಉರ್ಫಿ ಮೈ ಮುಚ್ಚಿಕೊಂಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ಬಟ್ಟೆ ವಿಚಾರದಲ್ಲಿ ಸದಾ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಉರ್ಫಿ, ಇದೀಗ ಬಾಳೆ ಹಣ್ಣಿನ ಸಿಪ್ಪೆಯಿಂದ ಮೈ ಮುಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದರು. ಬಾಳೆಹಣ್ಣು ತಿನ್ನುತ್ತ ಫೋಟೋಶೂಟ್ ಮಾಡಿಸಿದ್ದರು. ಉರ್ಫಿ ಅವತಾರ ನೋಡಿ ಧರಿಸೋಕೆ ಬೇರೆ ಏನು ಸಿಗಲಿಲ್ವಾ ಎಂದು ಪ್ರಶ್ನೆ ಮಾಡಿದ್ದರು.

     

     

    View this post on Instagram

     

    A post shared by Uorfi (@urf7i)

    ಬಿಗ್ ಬಾಸ್ ಒಟಿಟಿಯಿಂದ ಉರ್ಫಿ ಜಾವೇದ್ ಜನಪ್ರಿಯತೆ ಗಳಿಸಿದರು. ಹೌಸ್ ಅರೆಸ್ಟ್ ಗೇಮ್ ರಿಯಾಲಿಟಿ ಶೋನ ಮೊದಲ ಸೀಸನ್‌ನಲ್ಲಿಯೂ ಅವರು ಭಾಗವಹಿಸಿದ್ದರು. ಈ ಹಿಂದೆ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಉರ್ಫಿ, ಬಿಗ್ ಬಾಸ್ ಒಟಿಟಿ ಸೀಸನ್ 1ರಲ್ಲಿ (Bigg Boss) ಟಾಸ್ಕ್ ಗೆಲ್ಲಲು ಕಸದ ಚೀಲಗಳಿಂದ ಮಾಡಿದ ಉಡುಪನ್ನು ಧರಿಸಿ ಖ್ಯಾತಿ ಗಳಿಸಿದರು. ತಮ್ಮ ಸೃಜನಶೀಲತೆಗೆ ಮೆಚ್ಚುಗೆ ಪಡೆದರು. ಅಂದಿನಿಂದ ಉರ್ಫಿ ಸಾಮಾನ್ಯ ಉಡುಗೆಯನ್ನು ಧರಿಸಲೇ ಇಲ್ಲ. ಹಾಗಾಗಿ ನಟಿ ನಿರಂತರವಾಗಿ ಟ್ರೋಲ್ ಆಗಿದ್ದರು.

     

    ಕೆಲವು ಜನರು ನನ್ನನ್ನು ಗೌರವಿಸುವುದಿಲ್ಲ. ನನ್ನೊಂದಿಗೆ ಕೆಲಸ ಮಾಡಲು ಯಾರೂ ಬಯಸುವುದಿಲ್ಲ. ನಾನು ಎಲ್ಲರ ಗಮನ ಸೆಳೆಯುವ ಸಲುವಾಗಿಯೇ ಈ ರೀತಿಯ ಬಟ್ಟೆಗಳನ್ನು ಧರಿಸುವುದು ಎಂದು ಉರ್ಫಿ ಒಪ್ಪಿಕೊಂಡಿದ್ದರು. ಆದರೆ ಈ ಕುರಿತು ಕಾಮೆಂಟ್ ಮಾಡಿದರೆ ನನಗೆ ಇಷ್ಟ ಆಗುವುದಿಲ್ಲ ಎಂದು ನಟಿ ಹೇಳಿದ್ದರು.

  • ಶಾರುಖ್ ಖಾನ್ ಗೆ ಮುತ್ತಿಟ್ಟು ವೈರಲ್ ಆದ ದೀಪಿಕಾ ಪಡುಕೋಣೆ

    ಶಾರುಖ್ ಖಾನ್ ಗೆ ಮುತ್ತಿಟ್ಟು ವೈರಲ್ ಆದ ದೀಪಿಕಾ ಪಡುಕೋಣೆ

    ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆಗೆ ಈ ಹಿಂದೆ ಶಾರುಖ್ ಖಾನ್ (Shah Rukh Khan) ಮುತ್ತಿಟ್ಟು  (Kiss)ಸಖತ್ ಸುದ್ದಿಯಾಗಿದ್ದರು. ಇದೀಗ ಉಲ್ಟಾ ಆಗಿದೆ. ಸ್ವತಃ ದೀಪಿಕಾ ಪಡುಕೋಣೆ ಅವರೇ ಶಾರುಖ್ ಖಾನ್ ಗೆ ಕಿಸ್ ಮಾಡಿ ವೈರಲ್ ಆಗಿದ್ದಾರೆ. ಮುತ್ತಿಡುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹಂಚಿಕೆಯಾಗಿದ್ದು, ದೀಪಿಕಾಗೆ ಹಲವರು ಗಂಡನನ್ನು ನೆನಪಿಸಿದ್ದಾರೆ.

    ಶಾರುಖ್ ಖಾನ್ ಜೊತೆ ಪಠಾಣ್, ಜವಾನ್ ಸೇರಿದಂತೆ ಒಂದರ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ ದೀಪಿಕಾ ಪಡುಕೋಣೆ. ಅದರಲ್ಲೂ ಪಠಾಣ್ ಸಿನಿಮಾದ ಕೇಸರಿ ಹಾಡಿಗಾಗಿ ಈ ಜೋಡಿ ವಿವಾದಕ್ಕೆ ಕಾರಣವಾಗಿತ್ತು. ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ದೀಪಿಕಾ ಮೇಲೆ ಹಿಂದೂಪರ ಹೋರಾಟಗಾರರು ಮುಗಿಬಿದ್ದಿದ್ದರು. ಇದೀಗ ಮುತ್ತಿನ ಫೋಟೋ ಇಟ್ಟುಕೊಂಡು ಮತ್ತೊಮ್ಮೆ ಟ್ರೋಲ್ ಮಾಡಲಾಗುತ್ತಿದೆ.ಇದನ್ನೂ ಓದಿ:ಮಲ್ಲಿಕಾ ಸಿಂಗ್ ಪಾತ್ರ ಪರಿಚಯಿಸಿದ ನಿರ್ದೇಶಕ ಸಿಂಪಲ್ ಸುನಿ

    ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರಕ್ಕೆ ನಟಿ ದೀಪಿಕಾ ಪಡುಕೋಣೆ (Deepika Padukone) ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಅತಿಥಿ ಪಾತ್ರಕ್ಕೆ ಅಷ್ಟೊಂದು ಹಣ ಕೊಟ್ಟಿದ್ದಾರಾ ಎಂದು ಅಚ್ಚರಿಯನ್ನೂ ಹಲವರು ವ್ಯಕ್ತ ಪಡಿಸಿದ್ದರು. ಆ ಪ್ರಮಾಣದಲ್ಲಿ ಸಂಭಾವನೆ (Remuneration) ಪಡೆದ ವಿಚಾರ ವೈರಲ್ ಕೂಡ ಆಗಿತ್ತು. ಈ ವಿಷಯ ದೀಪಿಕಾ ಪಡುಕೋಣೆಗೂ ತಲುಪಿದೆ.

     

    ಜವಾನ್ ಸಿನಿಮಾಗಾಗಿ ದೀಪಿಕಾ ಪಡುಕೋಣೆ 15 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆಯೇ ದೀಪಿಕಾ ಆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಜವಾನ್ ಚಿತ್ರಕ್ಕಾಗಿ ತಾವು ಒಂದು ಪೈಸೆಯನ್ನೂ ಸಂಭಾವನೆ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಶಾರುಖ್ ಖಾನ್ ಅವರಿಗಾಗಿ ನಾನು ಉಚಿತವಾಗಿ ನಟಿಸಿದ್ದೇನೆ ಎಂದಿದ್ದಾರೆ. ಈ ಹಿಂದೆಯೂ ತಾವು ಹಲವು ಸಿನಿಮಾಗಳಲ್ಲಿ ಈ ರೀತಿ ಉಚಿತವಾಗಿ ನಟಿಸಿದ್ದನ್ನು ಸ್ಮರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ವೀರ್ ದಾಸ್ ಶೀಲ ಹಾಳು ಮಾಡಿದ್ದು ಯಾವಾಗ?: ಪ್ರಶ್ನೆ ಮಾಡಿದ ಕಂಗನಾ

    ನಟ ವೀರ್ ದಾಸ್ ಶೀಲ ಹಾಳು ಮಾಡಿದ್ದು ಯಾವಾಗ?: ಪ್ರಶ್ನೆ ಮಾಡಿದ ಕಂಗನಾ

    ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಮೇಲೆ ಗುರುತರ ಆರೋಪವೊಂದು ಕೇಳಿ ಬಂದಿದೆ. ನಟ ವೀರ್ ದಾಸ್ (Veer Saad) ಅವರ ತುಟಿ ಕಚ್ಚಿದ ಆರೋಪವನ್ನು ನಟಿ ಎದುರಿಸುತ್ತಿದ್ದಾರೆ. ಈ ಕುರಿತು ಸ್ವತಃ ಕಂಗನಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಆ ಪ್ರತಿಕ್ರಿಯೆ ಇದೀಗ ವೈರಲ್ ಆಗುತ್ತಿದ್ದು, ಕಂಗನಾ ಬೋಲ್ಡ್ ಮಾತಿಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

    ಅದು 2014ರ ವೇಳೆ ಕಂಗನಾ ರಣಾವತ್ ಮತ್ತು ವೀರ್ ದಾಸ್ ‘ರಿವಾಲ್ವರ್ ರಾಣಿ’ (Revolver Rani) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಸಾಯಿ ಕಬೀರ್ (Sai Kabir) ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾದಲ್ಲಿ ಕಂಗನಾ ಮತ್ತು ವೀರ್ ದಾಸ್ ಚುಂಬಿಸುವಂತಹ (Kiss) ದೃಶ್ಯಗಳು ಇದ್ದವು. ಈ ದೃಶ್ಯದಲ್ಲಿ ಕಂಗನಾ ಮೈಮರೆತಿದ್ದರು ಎಂದು ಹೇಳಲಾಗುತ್ತಿದೆ. ದೃಶ್ಯದ ಆಳಕ್ಕೆ ಇಳಿದಿದ್ದ ಕಂಗನಾ, ಮೈಮರೆತು ವೀರ್ ದಾಸ್ ಅವರ ತುಟಿ ಕಚ್ಚಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಸೌತ್‌ನ ಇಬ್ಬರು ಸ್ಟಾರ್ ನಟರ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್

    ರಿವಾಲ್ವರ್ ರಾಣಿ ಸಿನಿಮಾ ರಿಲೀಸ್ ಆಗಿ ಒಂಬತ್ತು ವರ್ಷಗಳು ಕಳೆದರೂ, ಇದೀಗ ಆ ಸುದ್ದಿ ಮುನ್ನೆಲೆಗೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ  ಚರ್ಚೆ ಆಗುತ್ತಿದೆ. ಇದನ್ನು ಕಂಗನಾ ಗಮನಕ್ಕೂ ತಂದಿದ್ದಾರೆ ಅಭಿಮಾನಿಗಳು. ಈ ಸುದ್ದಿಯನ್ನು ನೋಡಿದ ಕಂಗನಾ ಅಷ್ಟೇ ರಸವತ್ತಾಗಿ ಕಾಮೆಂಟ್ ಮಾಡಿದ್ದಾರೆ.

     

    ‘ಹೃತಿಕ್ ರೋಷನ್ ಬಳಿಕ ವೀರ್ ದಾಸ್ ಅವರ ಶೀಲ ಹಾಳು ಮಾಡಿದ್ದೇನೆ ಎನ್ನುತ್ತಿದ್ದಾರೆ. ಯಾವಾಗ ಅದು ಆಯಿತು ಹೇಳ್ರಪ್ಪ’ ಎಂದಿದ್ದಾರೆ ಕಂಗನಾ. ಈ ಮೂಲಕ ಹೃತಿಕ್ ಅವರ ಹೆಸರನ್ನು ಮತ್ತೆ ಬಳಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಶು ರೆಡ್ಡಿದು ಒಂದು ಗೋಳಾದರೆ, ನೀನಾದ್ದು ಮತ್ತೊಂದು ಸಂಕಟ

    ಅಶು ರೆಡ್ಡಿದು ಒಂದು ಗೋಳಾದರೆ, ನೀನಾದ್ದು ಮತ್ತೊಂದು ಸಂಕಟ

    ವರಿಬ್ಬರೂ ಒಂದೊಂದು ಕಾರಣಕ್ಕೆ ಗೋಳಾಡುತ್ತಿದ್ದಾರೆ. ಒಬ್ಬಾಕೆದ್ದು ಡ್ರಗ್ಸ್ (Drugs) ಸಮಸ್ಯೆ, ಇನ್ನೊಬ್ಬ ನಟಿಯದ್ದು ಕಿಸ್ಸಿನ (Kiss) ಕಾಂಟ್ರವರ್ಸಿ. ನಾನು ಹಾಗಿರಲಿಲ್ಲ ಎನ್ನುವುದೇ ಇಬ್ಬರ ಒನ್ ಲೈನ್ ಸಿನಿಮಾ. ಯಾವ ಕಾರಣಕ್ಕೆ ಇಬ್ಬರು ನಟಿಯರು ಹೀಗೆ ಒದ್ದಾಡುತ್ತಿದ್ದಾರೆ? ಏನಿದರ ಹಿಂದಿನ ಅಸಲಿಯತ್ತು?

    ಅಶು ರೆಡ್ಡಿ(Ashu Reddy), ಈಕೆ ಕಾಲಿವುಡ್ ನಟಿ. ಸ್ಟಾರ್ ಪಟ್ಟ ದಕ್ಕಿಲ್ಲ. ಅದಕ್ಕಾಗಿ ಸಕಲ ರೀತಿ ಹೋರಾಟ ಮಾಡುತ್ತಿದ್ದಾರೆ. ತುಣುಕು ಪಾತ್ರ ಸಿಕ್ಕರೂ ಕೇಕೆ ಹಾಕುತ್ತಾರೆ. ರಜನಿಯ ಕಬಾಲಿ ಚಿತ್ರದಲ್ಲೂ ಹಿಂಗೆ ಬಂದು ಹಂಗೆ ಹೋಗಿದ್ದರು. ಈಗ ಅದೇ ಸಿನಿಮಾ ನಿರ್ಮಾಪಕ ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆತನ ಹೆಸರು ಕೆಪಿ ಚೌಧರಿ. ಇದೇ ಚೌಧರಿ ಜೊತೆ ಗಂಟೆಗಟ್ಟಲೆ ಚಾಟಿಂಗು, ನೂರು ಸಾರಿ ಫೋನ್ ಕಾಲಿಂಗು ಅಶು ರೆಡ್ಡಿ ಮಾಡಿದ್ದಾರಂತೆ. ಇದನ್ನು ಖಾಕಿ ಬಹಿರಂಗಗೊಳಿಸಿದೆ. ಮಾಧ್ಯಮ ಬರೆದಿವೆ. ಅಶು ರಣಚಂಡಿ ಅವತಾರ.

    `ನಾನು ಡ್ರಗ್ಸ್ ತೊಗೊಂಡಿಲ್ರಪ್ಪಾ. ನನ್ನ ಮೊಬೈಲ್ ನಂಬರ್ ಲೀಕ್ ಮಾಡಿದ್ದಾರೆ. ಸಾವಿರಾರು ಫೋನ್ ಬರುತ್ತಿವೆ. ನಾನೆಲ್ಲಿಗೆ ಹೋಗಲಿ? ಮೀಡಿಯಾ ಮೇಲೆ ಕೇಸ್ ಹಾಕುತ್ತೇನೆ.’ ಹೀಗಂತ ಟೊಂಕಕ್ಕೆ ಸೀರೆ ಸಿಕ್ಕಿಸಿಕೊಂಡು ಗುಡುಗಿದ್ದಾರೆ ಚಿನ್ನಾರಿ ಅಶು. `ಹಾಗಿದ್ದರೆ ನೂರು ಸಾರಿ ಚೌಧರಿಗೆ ಫೋನ್ ಯಾಕೆ ಮಾಡಿದ್ದೆ?’ ಇದಕ್ಕೆ ಉತ್ತರ ಮಾತ್ರ ಅಶು ರೆಡ್ಡಿ ನಾಲಿಗೆಯಿಂದ ಈಚೆ ಬೀಳುತ್ತಿಲ್ಲ. ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂತಿದ್ದಾರಾ ಅಶು? ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

    ದಶಕಗಳ ನಂತರ ಬಾಲಿವುಡ್ ಹಿರಿಯ ನಟಿ ಲಿಪ್‌ಲಾಕ್ ದೃಶ್ಯ ನೆನಪಿಸಿಕೊಂಡಿದ್ದಾರೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸಿ, ಹೆಂಗೆ ಡೆಟಾಲ್ ಹಾಕಿ ಬಾಯಿ ತೊಳಕೊಂಡೆ ಎನ್ನುವುದನ್ನು ಇಂಚಿಂಚಾಗಿ ಹರವಿಟ್ಟಿದ್ದಾರೆ. ಆ ನಟಿಯ ಹೆಸರು ನೀನಾ ಗುಪ್ತಾ (Neena Gupta). ಪೋಷಕ ನಟಿ ಕಮ್ ಬೋಲ್ಡ್ ಆಕ್ಟರೀಸ್ ಗದ್ದುಗೆ ಏರಿದ್ದರು ಈಕೆ ದಶಕಗಳ ಹಿಂದೆ. ತೊಂಬತ್ತರ ದಶಕದ ದಿಲ್ಲಗಿ ಸೀರಿಯಲ್‌ನಲ್ಲಿ ಮೊದಲ ಬಾರಿ ಲಿಪ್‌ಲಾಕ್ ದೃಶ್ಯಕ್ಕೆ ಒಪ್ಪಿದ್ದರು. ಧಾರಾವಾಹಿ ಲೋಕ ಬೆಚ್ಚಿತ್ತು. ಕಾರಣ ಅಲ್ಲಿವರೆಗೆ ಸೀರಿಯಲ್ ಮಡಿ ಮಡಿಲಾಗಿದ್ದವು.

     

    ದಿಲೀಪ್ ಧವನ್ ಜೊತೆ ತುಟಿಗೆ ಮುತ್ತಿಟ್ಟ ನೀನಾ ಇಡೀ ರಾತ್ರಿ ನಿದ್ದೆ ಮಾಡಲಿಲ್ಲವಂತೆ. ಇಷ್ಟ ಇಲ್ಲದ ನಟನ ಜೊತೆ ಕಿಸ್ ಮಾಡಿದ್ದಕ್ಕೆ ಫುಲ್ ಬಾಟಲ್ ಡೆಟಾಲ್‌ನಿಂದ ಬಾಯಿ ತೊಳೆದುಕೊಂಡಿದ್ದರಂತೆ. ಅದೃಷ್ಟವೋ ದುರದೃಷ್ಟವೋ? ಜನರು ರೊಚ್ಚೆಗೆದ್ದು ರಾಡಿ ನೀರು ಎರಚಬಾರದೆಂದು ನಿರ್ದೇಶಕ ಆ ದೃಶ್ಯಕ್ಕೆ ಕತ್ತರಿ ಹಾಕಿಬಿಟ್ಟ. ಅದನ್ನು ಇಷ್ಟು ವರ್ಷಗಳ ನಂತರ ನೆನೆದಿದ್ದಾರೆ ನೀನಾ. ಈಕೆ ಬೇರೆ ಯಾರೂ ಅಲ್ಲ, ವೆಸ್ಟ್ ಇಂಡೀಸ್ ಮಾಜಿ ಸ್ಟಾರ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಮಗುವಿನ ತಾಯಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಿರುಪತಿ ದೇವಸ್ಥಾನದಲ್ಲಿ ನಟಿ ಕೃತಿಗೆ ನಿರ್ದೇಶಕ ಕಿಸ್: ರೂಮ್ ಬುಕ್ ಮಾಡ್ಕೊಳ್ಳಿ ಎಂದ ಅರ್ಚಕ

    ತಿರುಪತಿ ದೇವಸ್ಥಾನದಲ್ಲಿ ನಟಿ ಕೃತಿಗೆ ನಿರ್ದೇಶಕ ಕಿಸ್: ರೂಮ್ ಬುಕ್ ಮಾಡ್ಕೊಳ್ಳಿ ಎಂದ ಅರ್ಚಕ

    ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ ಗೆ ನಿರ್ದೇಶಕ ಓಂ ರಾವತ್ ಕಿಸ್ ಕೊಟ್ಟ ಪ್ರಕರಣ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಕಿಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಿಮ್ಮಪ್ಪನ ಪ್ರಧಾನ ಅರ್ಚಕರು ಸಿಡಿಮಿಡಿಗೊಂಡಿದ್ದು, ಈ ರೀತಿ ಮಾಡಲು ಹೋಟೆಲ್ ರೂಮ್ ಬುಕ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

    ದೇವರ ಸನ್ನಿಧಾನದಲ್ಲಿ ಹೇಗಿರಬೇಕು ಎನ್ನುವ ಕಾಮನ್ ಸೆನ್ಸ್ ಇಲ್ಲ ಅವರಿಗೆ. ದೇವಸ್ಥಾನಕ್ಕೆ ಬರುವವರು ಈ ರೀತಿ ನಡೆದುಕೊಳ್ಳಬಾರದು. ಈ ಘಟನೆ ಭಕ್ತರಿಗೆ ಅಪಾರ ನೋವನ್ನುಂಟು ಮಾಡಿದೆ. ಸಿನಿಮಾದವರು ಅಂದ ಮಾತ್ರಕ್ಕೆ ಏನೂ ಬೇಕಾದರೂ ಮಾಡಬಹುದಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಮೊನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ಆದಿಪುರುಷ ಸಿನಿಮಾ ಪ್ರಿ ರಿಲೀಸ್ ಇವೆಂಟ್ ತಿರುಪತಿಯಲ್ಲಿ (Tirupati)  ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ದೇಶಕ ಓಂ ರಾವತ್ (Om Rawat), ನಾಯಕಿ ಕೃತಿ ಸನೂನ್ ಸೇರಿದಂತೆ ಹಲವರು ತಿರುಪತಿಗೆ ಆಗಮಿಸಿದ್ದರು. ಈ ವೇಳೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಸಿನಿಮಾ ಟೀಮ್ ಬಂದಿತ್ತು. ಈ ಸಂದರ್ಭದಲ್ಲಿ ನಟಿ ಕೃತಿ ಸನೂನ್ (Kriti Sanoon) ಮತ್ತು ನಿರ್ದೇಶಕ ಓಂ ರಾವತ್ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ತಿಮ್ಮಪ್ಪನ (Thimmappa) ದರ್ಶನದ ನಂತರ ಕೃತಿ ಸನೂನ್ ಕಾರಿನತ್ತ ಬರುತ್ತಾರೆ. ಆಮೇಲೆ ಬೀಳ್ಕೊಡುವುದಕ್ಕಾಗಿ ಕಾರಿನಿಂದ ಸ್ವಲ್ಪವೇ ದೂರದಲ್ಲಿದ್ದ ನಿರ್ದೇಶಕ ಓಂ ರಾವತ್ ಹತ್ತಿರಕ್ಕೆ ಬರುತ್ತಾರೆ. ಆಗ ಕೃತಿ ಸನೂನ್ ನನ್ನು ತಬ್ಬಿಕೊಳ್ಳುವ ನಿರ್ದೇಶಕ ಓಂ, ನಟಿಗೆ ಮುತ್ತಿಟ್ಟು (Kiss) ಬೀಳ್ಕೊಡುತ್ತಾರೆ. ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ದೇವಸ್ಥಾನದ ಆವರಣದಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು ಎನ್ನುವ ಅರಿವು ಇರಬೇಕು. ಅಂಥವರು ಮಾತ್ರ ದೇವಸ್ಥಾನಕ್ಕೆ ಬರಬೇಕು ಎಂದು ಭಕ್ತರು ಕಾಮೆಂಟ್ ಮಾಡಿದ್ದಾರೆ. ಬಹಿರಂಗವಾಗಿ, ಅದರಲ್ಲೂ ದೇವಸ್ಥಾನದ ಆವರಣದಲ್ಲೇ ನಟಿಗೆ ಮುತ್ತಿಟ್ಟು ಬೀಳ್ಕೊಡುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಇಬ್ಬರೂ ಕ್ಷಮೆ ಕೇಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

     

    ಇದೊಂದು ಸ್ನೇಹಪೂರ್ವಕವಾದ ಕಿಸ್ ಆಗಿದ್ದರೂ, ಅದು ಸಹಜವಾಗಿದ್ದರೂ ಭಕ್ತರು ಅದನ್ನು ಹಾಗೆ ನೋಡಿಲ್ಲ. ಹಾಗಾಗಿ ವಿವಾದಕ್ಕೆ ಆ ವಿಡಿಯೋ ನಾಂದಿ ಹಾಡಿದೆ. ಅಂದಹಾಗೆ ನಿನ್ನೆ ಆದಿ ಪುರುಷ (Adi Purush) ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅದ್ಧೂರಿಗಾಗಿ ತಿರುಪತಿಯಲ್ಲಿ ನಡೆದಿದೆ. ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರವನ್ನು ಕಣ್ತುಂಬಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

  • ತಿಮ್ಮಪ್ಪನ ಸನ್ನಿಧಾನದಲ್ಲೇ ನಟಿಗೆ ಮುತ್ತಿಟ್ಟ ಡೈರೆಕ್ಟರ್ : ಭಕ್ತರ ಆಕ್ರೋಶ

    ತಿಮ್ಮಪ್ಪನ ಸನ್ನಿಧಾನದಲ್ಲೇ ನಟಿಗೆ ಮುತ್ತಿಟ್ಟ ಡೈರೆಕ್ಟರ್ : ಭಕ್ತರ ಆಕ್ರೋಶ

    ನಿನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ಆದಿಪುರುಷ ಸಿನಿಮಾ ಪ್ರಿ ರಿಲೀಸ್ ಇವೆಂಟ್ ತಿರುಪತಿಯಲ್ಲಿ (Tirupati)  ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ದೇಶಕ ಓಂ ರಾವತ್ (Om Rawat), ನಾಯಕಿ ಕೃತಿ ಸನೂನ್ ಸೇರಿದಂತೆ ಹಲವರು ತಿರುಪತಿಗೆ ಆಗಮಿಸಿದ್ದರು. ಈ ವೇಳೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಸಿನಿಮಾ ಟೀಮ್ ಬಂದಿತ್ತು. ಈ ಸಂದರ್ಭದಲ್ಲಿ ನಟಿ ಕೃತಿ ಸನೂನ್ (Kriti Sanoon) ಮತ್ತು ನಿರ್ದೇಶಕ ಓಂ ರಾವತ್ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ತಿಮ್ಮಪ್ಪನ (Thimmappa) ದರ್ಶನದ ನಂತರ ಕೃತಿ ಸನೂನ್ ಕಾರಿನತ್ತ ಬರುತ್ತಾರೆ. ಆಮೇಲೆ ಬೀಳ್ಕೊಡುವುದಕ್ಕಾಗಿ ಕಾರಿನಿಂದ ಸ್ವಲ್ಪವೇ ದೂರದಲ್ಲಿದ್ದ ನಿರ್ದೇಶಕ ಓಂ ರಾವತ್ ಹತ್ತಿರಕ್ಕೆ ಬರುತ್ತಾರೆ. ಆಗ ಕೃತಿ ಸನೂನ್ ನನ್ನು ತಬ್ಬಿಕೊಳ್ಳುವ ನಿರ್ದೇಶಕ ಓಂ, ನಟಿಗೆ ಮುತ್ತಿಟ್ಟು (Kiss) ಬೀಳ್ಕೊಡುತ್ತಾರೆ. ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ಬೀಚ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ

    ದೇವಸ್ಥಾನದ ಆವರಣದಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು ಎನ್ನುವ ಅರಿವು ಇರಬೇಕು. ಅಂಥವರು ಮಾತ್ರ ದೇವಸ್ಥಾನಕ್ಕೆ ಬರಬೇಕು ಎಂದು ಭಕ್ತರು ಕಾಮೆಂಟ್ ಮಾಡಿದ್ದಾರೆ. ಬಹಿರಂಗವಾಗಿ, ಅದರಲ್ಲೂ ದೇವಸ್ಥಾನದ ಆವರಣದಲ್ಲೇ ನಟಿಗೆ ಮುತ್ತಿಟ್ಟು ಬೀಳ್ಕೊಡುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಇಬ್ಬರೂ ಕ್ಷಮೆ ಕೇಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

    ಇದೊಂದು ಸ್ನೇಹಪೂರ್ವಕವಾದ ಕಿಸ್ ಆಗಿದ್ದರೂ, ಅದು ಸಹಜವಾಗಿದ್ದರೂ ಭಕ್ತರು ಅದನ್ನು ಹಾಗೆ ನೋಡಿಲ್ಲ. ಹಾಗಾಗಿ ವಿವಾದಕ್ಕೆ ಆ ವಿಡಿಯೋ ನಾಂದಿ ಹಾಡಿದೆ. ಅಂದಹಾಗೆ ನಿನ್ನೆ ಆದಿ ಪುರುಷ (Adi Purush) ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅದ್ಧೂರಿಗಾಗಿ ತಿರುಪತಿಯಲ್ಲಿ ನಡೆದಿದೆ. ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರವನ್ನು ಕಣ್ತುಂಬಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

  • ಸುಧಾಮೂರ್ತಿ ಎದುರೇ ಕಪಿಲ್ ಶರ್ಮಾಗೆ ಮುತ್ತಿಟ್ಟ ರವೀನಾ ಟಂಡನ್

    ಸುಧಾಮೂರ್ತಿ ಎದುರೇ ಕಪಿಲ್ ಶರ್ಮಾಗೆ ಮುತ್ತಿಟ್ಟ ರವೀನಾ ಟಂಡನ್

    ಸಾಮಾನ್ಯವಾಗಿ ಟಿವಿ ಶೋ ಮತ್ತು ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ (Sudha Murthy) ಕಾಣಿಸಿಕೊಳ್ಳುವುದಿಲ್ಲ. ಸಾಹಿತ್ಯದ ಕಾರ್ಯಕ್ರಮಗಳ ಹೊರತಾಗಿ ಮನರಂಜನಾ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲು ಇಚ್ಚಿಸುವುದೂ ಇಲ್ಲ. ಆದರೆ, ಹಿಂದಿಯ ಸುಪ್ರಸಿದ್ಧ ರಿಯಾಲಿಟಿ ಶೋ ಕಪಿಲ್ ಶರ್ಮಾ ಶೋನಲ್ಲಿ (The Kapil Sharma Show) ಅವರು ಭಾಗಿಯಾಗಿದ್ದಾರೆ. ಆ ಪ್ರೋಮೋವನ್ನು ವಾಹಿನಿಯೇ ರಿಲೀಸ್ ಮಾಡಿದೆ.

    ಸುಧಾ ಮೂರ್ತಿ ಅವರ ಜೊತೆಗೆ ಬಾಲಿವುಡ್ ನ ಖ್ಯಾತ ನಟಿ, ಕೆಜಿಎಫ್ 2 ಚಿತ್ರದ ರಮೀಕಾ ಶೇನ್  ಹಾಗೂ ಆಸ್ಕರ್ ಪ್ರಶಸ್ತಿ ವಿಜೇತೆ ನಿರ್ಮಾಪಕಿ ಗುನೀತ್ ಮೋಂಗಾ (Guneet Monga) ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರವೀನಾ ಟಂಡನ್ (Raveena Tandon) ಸಡನ್ನಾಗಿ ಎದ್ದು ಕಪಿಲ್ ಶರ್ಮಾಗೆ ಮುತ್ತು (Kiss) ಕೊಡುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಯಾದಲ್ಲಿ ಭಾರೀ ವೈರಲ್ ಆಗಿದೆ.

    ಕಪಿಲ್ ಶರ್ಮಾ ಮತ್ತು ರವೀನಾ ಟಂಡನ್ ಇಬ್ಬರೂ ಆತ್ಮೀಯ ಸ್ನೇಹಿತರು. ಎಷ್ಟೋ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ಕಪಿಲ್ ಶರ್ಮಾ ಶೋನಲ್ಲಿ ರವೀನ್ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಈ ಸಲುಗೆಯೇ ಮುತ್ತಿನವರೆಗೂ ಎಳೆದುಕೊಂಡು ಹೋಗಿದೆಯಷ್ಟೇ. ಇದರಾಚೆ ಯಾವುದೇ ಗಾಸಿಪ್ ಗಳು ಇಲ್ಲ ಎಂದಿದ್ದಾರೆ ರವೀನಾ ಅಭಿಮಾನಿಗಳು. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

    ಈ ಶೋ ಯಾವಾಗಿಂದ ಪ್ರಸಾರವಾಗಲಿದೆ ಎನ್ನುವ ಮಾಹಿತಿಯನ್ನು ವಾಹಿನಿ ನೀಡದೇ ಇದ್ದರೂ, ಕಪಿಲ್ ಶರ್ಮಾಗೆ ರವೀನಾ ಮುತ್ತಿಡುವ ಪ್ರೋಮೋ ರಿಲೀಸ್ ಮಾಡಿ ಕುತೂಹಲ ಮೂಡಿಸಿದೆ. ರವೀನಾಗೆ ಕಪಿಲ್ ಕಾಲೆಳೆಯುವ ದೃಶ್ಯವಂತೂ ಸಖತ್ ಮಜವಾಗಿದೆ. ಅಲ್ಲದೇ, ನಿರೀಕ್ಷೆಯನ್ನೂ ಹುಟ್ಟಿಸಿದೆ.