ಮಂಗಳೂರು: ಇಲ್ಲಿನ ಪೊಲೀಸ್ ಗ್ರೌಂಡ್‌ನಲ್ಲಿ ಇಂದು ರೌಡಿ ಹಾಗೂ ಗಾಂಜಾ ಗಿರಾಕಿಗಳಿಗೆ ಪರೇಡ್ ನಡೆಸಲಾಗಿದ್ದು, ಬೆಳ್ಳಂಬೆಳಗ್ಗೆ ಪೊಲೀಸರು ರೌಡಿಗಳಿಗೆ ಫುಲ್‌ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವೇಳೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ಗಾಂಜಾ ಗಿರಾಕಿಗಳ ಪರೇಡ್ ನಡೆಸಿದ್ದು, ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಲಕ್ಕಿಡಿಪ್‍ನಲ್ಲಿ ಗೆದ್ದರೂ, ಸೋತರೂ ಅಳುತ್ತೇನೆ ನಾನ್ಯಾರು ಬಲ್ಲಿರಾ!? – ನಾನೇ ಲಕ್ಕಿಡಿಪ್ ಸಿಎಂ ಹೆಚ್‍ಡಿಕೆ: ಬಿಜೆಪಿ

ಪರೇಡ್ ವೇಳೆ ಕಿಶೋರ್ ಅಮನ್ ಶೆಟ್ಟಿ ಶರ್ಟ್ ಬಿಚ್ಚಿಸಿ, ಏನಪ್ಪಾ ಮೈ ಮೇಲೆ ಇಷ್ಟು ಟ್ಯಾಟೋ ಹಾಕಿಸಿಕೊಂಡಿದ್ಯಾ ಎಂದಿದ್ದಾರೆ. ಅಷ್ಟೇ ಅಲ್ಲದೇ ಉದಕ್ಕ ಕೂದಲನ್ನು ನೋಡಿ ಯಾಕೆ ಇಷ್ಟು ಉದ್ದ ಬಿಟ್ಟಿದ್ದಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೋಡಲ್ಲ ಅಂದ್ರೆ ಮುಖ ನೋಡಲ್ಲ, ಮಾತಾಡಲ್ಲ ಅಂದ್ರೆ ಮಾತಾಡಲ್ಲ ಅಷ್ಟೇ – ಇದು ಸಿದ್ದು ವರಸೆ

ಇದಕ್ಕೆ ಉತ್ತರಿಸಿದ ಆರೋಪಿ ಕಿಶೋರ್ ಡ್ಯಾನ್ಸ್‌ಗಾಗಿ ಕೂದಲು ಬಿಟ್ಟಿದ್ದೇನೆ. ತನ್ನ ತಾಯಿಯ ಟ್ಯಾಟೋ ಅಂತಾ ಕಿಶೋರ್ ಅಮನ್ ಹೇಳಿದ ಕೂಡಲೇ ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ಯಾ? ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ.
ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ಯಾ, ಸಪ್ಲೈ ನಿಲ್ಲಿಸಿದ್ಯಾ? ನೀನ್ ತಿನ್ನುತ್ತೀಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತಿಯಾ? ಕಿಶೋರ್ ಶೆಟ್ಟಿಯ ಉದ್ದ ಕೂದಲು ಬಿಟ್ಟಿದ್ದನ್ನು ಪ್ರಶ್ನಿಸಿ ರೌಡಿ, ಡ್ರಗ್ಸ್, ಗಾಂಜಾ, ಕಳ್ಳ ಗಿರಾಕಿಗಳ ಚಳಿ ಬಿಡಿಸಿದ್ದಾರೆ.














ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿಶೋರ್ ಅಮನ್ ಶೆಟ್ಟಿ, ನನಗೂ ಅನುಶ್ರೀಗೂ ಯಾವುದೇ ರೀತಿಯ ಸಂಪರ್ಕ ಇಲ್ಲ. ಕುಣಿಯೋಣ ಬಾರಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪರಿಚಯ ಆಗಿದೆ. 2009ರಲ್ಲಿ ಡ್ಯಾನ್ಸ್ ಗೆ ಕೊರಿಯೋಗ್ರಾಫ್ ಮಾಡಿದ್ದೇ ಅದೇ ಮೊದಲು ಮತ್ತು ಕೊನೆ. ಬಳಿಕ 4-5 ವರ್ಷಗಳ ಹಿಂದೆ ಮಂಗಳೂರಲ್ಲಿ ನಡೆದ ಡ್ಯಾನ್ಸ್ ಕ್ಲಾಸ್ ಕಾರ್ಯಕ್ರಮದಲ್ಲಿ ನಾವು ಭೇಟಿಯಾಗಿದ್ದೆವು. ಬಳಿಕ ನಾವಿಬ್ಬರು ಎಲ್ಲೂ ಭೇಟಿಯಾಗಿಲ್ಲ, ಫೋನ್ ಸಂಪರ್ಕವೂ ಇಲ್ಲ. ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ. ಇದೆಲ್ಲವೂ ಸುಳ್ಳು ಆರೋಪ ಎಂದರು. ಇದನ್ನೂ ಓದಿ:





