Tag: Kishor

  • ಆದಿತ್ಯ ನಟನೆಯ ‘ಕಾಂಗರೂ’ ಸಿನಿಮಾದ ಶೂಟಿಂಗ್ ಮುಕ್ತಾಯ

    ಆದಿತ್ಯ ನಟನೆಯ ‘ಕಾಂಗರೂ’ ಸಿನಿಮಾದ ಶೂಟಿಂಗ್ ಮುಕ್ತಾಯ

    ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ (Aditya) ನಾಯಕರಾಗಿ ನಟಿಸಿರುವ ಹಾಗೂ ಕಿಶೋರ್ ಮೇಗಳಮನೆ (Kishor Megalamane) ನಿರ್ದೇಶನದ ಕಾಂಗರೂ (Kangaroo) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯ ಮಾತಿನ ಜೋಡಣೆ (ಡಬ್ಬಿಂಗ್) ನಡೆಯುತ್ತಿದೆ.

    ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ  ಹೊಂದಿರುವ ಈ ಚಿತ್ರದಲ್ಲಿ ಆದಿತ್ಯ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದು, ಸೈಕಿಯಾಟ್ರಿಸ್ಟ್ ಡಾಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಶಿವಮಣಿ, ಕರಿಸುಬ್ಬು, ನಾಗೇಂದ್ರ ಅರಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಸಾಕಷ್ಟು ಬಂದಿದೆ. ಆದರೆ ನಮ್ಮ ಚಿತ್ರ ಸ್ವಲ್ಪ ವಿಭಿನ್ನ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಗಾಗಿ ಮಾಡಿರುವ ಕಥೆವಿದು. ಇನ್ನು ಕಾಂಗರೂ ಶೀರ್ಷಿಕೆ ಕುರಿತು ಹೇಳುವುದಾದರೆ, ಕಾಂಗರೂ ಒಂದು ಮುಗ್ಧ ಪ್ರಾಣಿ. ಅದು ಯಾರಿಗೂ ಏನು ಮಾಡುವುದಿಲ್ಲ. ಮತ್ತು ಈ ಕಾಂಗರೂ ತನ್ನ ಮರಿಗೆ ಜನ್ಮ ನೀಡಿದ ನಂತರ ಅದರ ಹೊಟ್ಟೆಯ ಮೇಲ್ಬಾಗದಲ್ಲಿ ಇರುವ ಚೀಲದಲ್ಲಿ ಆ ಮರಿಯನ್ನು ಇಟ್ಟು ಕಾಪಾಡುತ್ತದೆ, ಅಂತ ಸಮಯದಲ್ಲಿ ತನ್ನ ಮರಿಯ ತಂಟೆಗೆ ಯಾರಾದರೂ ಹೋದರೆ ಅದು ಯಾರನ್ನು ಬಿಡುವುದಿಲ್ಲ. ಈ ಪ್ರಾಣಿಯ ನಡವಳಿಕೆಯನ್ನು ಹೋಲುವ ಕಥೆಯಾಗಿರುತ್ತದೆ ಎಂದು ನಿರ್ದೇಶಕರು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ರಾಮಚಂದ್ರಯ್ಯ  ಈ ಚಿತ್ರವನ್ನು ನಿರ್ಮಾಣ‌ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ಕಿಶೋರ್ ಮೇಗಳಮನೆ ಅವರೆ ಬರದಿದ್ದಾರೆ, ಉದಯ್ ಲೀಲ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ.

  • ಮಣಿಪುರ ಘಟನೆ : ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿ ಎಂದು ಟೀಕಿಸಿದ ನಟ ಕಿಶೋರ್

    ಮಣಿಪುರ ಘಟನೆ : ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿ ಎಂದು ಟೀಕಿಸಿದ ನಟ ಕಿಶೋರ್

    ನ್ನಡ ಸಿನಿಮಾ ರಂಗದ ಹೆಸರಾಂತ ನಟ ಕಿಶೋರ್ (Kishor ) ಮತ್ತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮೇಲೆ ಹರಿಹಾಯ್ದಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಪ್ರಧಾನಿ (Prime Minister) ವಿರುದ್ಧ ಮಾತನಾಡಿರುವ ಕಿಶೋರ್, ಈ ಬಾರಿ ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನಿಟ್ಟುಕೊಂಡು ನರೇಂದ್ರ ಮೋದಿ ಅವರಿಗೆ ತಿವಿದಿದ್ದಾರೆ.

    ಮಣಿಪುರ (Manipur) ಹಿಂಸಾಚಾರದಿಂದ (Violence) ನಲಗುತ್ತಿದೆ. ಅಲ್ಲಿ ಶಾಂತಿ ಸ್ಥಾಪಿಸಲು ಹಲವಾರು ತೀರಿಯಲ್ಲಿ ಕಸರತ್ತುಗಳು ನಡೆಯುತ್ತಿವೆ. ಮಣಿಪುರ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಯುತ್ತಿವೆ. ನಿನ್ನೆಯಷ್ಟೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಆದರೆ, ಪ್ರಧಾನಿ ಮೌನವಹಿಸಿದ್ದಾರೆ ಎನ್ನುವುದು ಕಿಶೋರ್ ಆರೋಪ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ಈ ಕುರಿತಾಗಿ ಕಿಶೋರ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ‘ಮನ್ ಕೀ ಬಾತ್ ನಲ್ಲಿ ಕಳೆದುಹೋದ ಮಣಿಪುರದ ಬಾತ್. ದೇಶದಲ್ಲಿ ಎಲ್ಲೇ ಅಶಾಂತಿ ನಡೆದಾಗಲೂ ಒಬ್ಬ ಪ್ರಧಾನಿ ಮಾಡಬಹುದಾದ ಮೂಲಭೂತ, ಅತೀ ಸರಳ, ಕಾಮನ್ ಸೆನ್ಸ್‍್ ನ ಕೆಲಸ ಶಾಂತಿಯ ಕರೆ ಕೊಡುವುದು. ಅದನ್ನೂ ಕೂಡ ಮಾಡದ ಪ್ರಧಾನಿಯ ಮನಸ್ಥಿಯೇನು?’ ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ.

     

    ಮುಂದುವರೆದು, ‘ಕೋಟಿ ಓಟಿನ ದೇಶದಲ್ಲಿ ಕೇವಲ 2 ಲೋಕಸಭೆ ಸೀಟಿನ ಮಣಿಪುರದ ಸತ್ತುಹೋದ ನೂರು ಓಟು, ಮನೆ ಕಳೆದುಕೊಂಡ 50 ಸಾವಿರ ಓಟುಗಳು. ಈ ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿಗೆ ಯಾವ ಲೆಕ್ಕವೆಂಬುದೇ? 2002ರಲ್ಲಿ ಗುಜರಾತ್ 2023ರಲ್ಲಿ ಮಣಿಪುರ. ಜೀವಗಳು ಮುಖ್ಯವಲ್ಲ ಓಟುಗಳಷ್ಟೇ ಮುಖ್ಯ. ಇತಿಹಾಸಕ್ಕೆ ನೆನಪಿರಲಿ’ ಎಂದು ಕಿಶೋರ್ ಬರೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ ನಟ ಕಿಶೋರ್

    ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ ನಟ ಕಿಶೋರ್

    ಕಾಂತಾರ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಟ ಕಿಶೋರ್ (Kishor), ಬಿಬಿಎಂಪಿ (BBMP) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರಕೆರೆ (Devarakere) ಕುರಿತಂತೆ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು ಬಿಬಿಎಂಪಿ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ದೇವರಕೆರೆ ಉಳಿಸುವಂತೆ ಅವರು ಜನತೆಗೆ ಮನವಿ ಮಾಡಿದ್ದಾರೆ.

    ಬೆಂಗಳೂರು (Bangalore) ದಕ್ಷಿಣ ಭಾಗದಲ್ಲಿರುವ ದೇವರಕೆರೆಗೆ 1000 ವರ್ಷಗಳ ಇತಿಹಾಸವಿದೆ. ಇದು ಹೊಯ್ಸಳ ಕಾಲದ ಕೆರೆ ಎಂದು ಹೇಳಲಾಗುತ್ತದೆ. ಮೊದಲು ಈ ಕೆರೆಯು ಅರಣ್ಯ ಇಲಾಖೆಯ ಸುಪರ್ದಿಯಲ್ಲಿತ್ತು. ಹತ್ತು ವರ್ಷಗಳ ಹಿಂದೆಯಷ್ಟೇ ಅರಣ್ಯ ಇಲಾಖೆಯು ಈ ಕೆರೆಯನ್ನು ಬಿಬಿಎಂಪಿ ಹಸ್ತಾಂತರ ಮಾಡಲಾಗಿದೆಯಂತೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದಾಗ ಶುದ್ಧ ನೀರಿನಿಂದ ಈ ಕೆರೆಯು ತುಂಬಿರುತ್ತಿತ್ತು ಎಂದಿದ್ದಾರೆ ಕಿಶೋರ್.

    ಬಿಬಿಎಂಪಿ ತೆಕ್ಕೆಗೆ ಈ ಕೆರೆಯು ಯಾವಾಗ ಬಂತೋ ಅಲ್ಲಿಂದ ಹದಗೆಡಲು ಶುರುವಾಯಿತು ಎನ್ನುವುದು ಕಿಶೋರ್ ಆರೋಪ. ಅಭಿವೃದ್ಧಿ ಹೆಸರಿನಲ್ಲಿ ಈ ಕೆರೆಯನ್ನು ಕೊಂದುಬಿಟ್ಟಿದೆ ಬಿಬಿಎಂಪಿ ಎಂದಿದ್ದಾರೆ ನಟ. ಈ ಕೆರೆಯು ಹಾಳಾಗುವುದಕ್ಕೆ ಅನಗತ್ಯ ಕಾಮಗಾರಿಗಳಂತೆ. ಅಭಿವೃದ್ಧಿ ಹೆಸರಿನಲ್ಲಿ ಕೇವಲ ಐದೇ ಐದು ವರ್ಷದಲ್ಲಿ ಕೆರೆಯನ್ನು ಸಾಯಿಸಿದ್ದಾರೆ ಎನ್ನುವುದು ಕಿಶೋರ್ ಆರೋಪ.  ಇದನ್ನೂ ಓದಿ:ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್

    ಕಿಶೋರ್ ಕಾಳಜಿಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕೆರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡದೊಂದು ಆಂದೋಲನವೇ ಶುರುವಾಗಬೇಕು ಎಂದಿದ್ದಾರೆ. ಸ್ಥಳೀಯ ನಿವಾಸಿಗಳು ಈ ಕೆರೆಯ ಕುರಿತು ದೊಡ್ಡಮಟ್ಟದಲ್ಲೇ ಧ್ವನಿ ಎತ್ತಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.

  • ಚೇತನ್ ವೀಸಾ ರದ್ದು: ಸರ್ಕಾರದ ಅತಿರೇಕದ ನಡೆ ಎಂದ ನಟ ಕಿಶೋರ್

    ಚೇತನ್ ವೀಸಾ ರದ್ದು: ಸರ್ಕಾರದ ಅತಿರೇಕದ ನಡೆ ಎಂದ ನಟ ಕಿಶೋರ್

    ಸಾಮಾಜಿಕ ಹೋರಾಟಗಾರ, ನಟ ಚೇತನ್ (Chetan Ahimsa) ಅವರ ವೀಸಾ ರದ್ದು (visa cancellation) ಮಾಡಿರುವ ಸರಕಾರದ ನಡೆಯನ್ನು ವಿಭಿನ್ನವಾಗಿ ಪ್ರಶ್ನಿಸಿದ್ದಾರೆ ನಟ ಕಿಶೋರ್‌. ಇದುಸರಕಾರದ ಅತಿರೇಕದ ನಡೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಶೋರ್‌ (Kishor)  ಬರೆದುಕೊಂಡಿದ್ದಾರೆ. ಅಲ್ಲದೇ, ಹಿಂದುತ್ವವವನ್ನು ಗುತ್ತಿಗೆ ಪಡೆದವರ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇನ್ಸ್ಟಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದಿರುವ ಕಿಶೋರ್, ‘ಹಿಂದುತ್ವ (Hindutva) ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ’ ಎಂದಿದ್ದಾರೆ. ಇದನ್ನೂ ಓದಿ:ನಟಿ ಸಮಂತಾ ಭಗವದ್ಗೀತೆ ಪಾಠ ಮಾಡಿದ್ದು ಯಾರಿಗೆ?

    ಮುಂದುವರೆದು, “ಹಿಂದುತ್ವ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿದೆಯಷ್ಟೇ. ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ” ಎಂದು ಪ್ರಶ್ನೆ ಮಾಡಿದ್ದಾರೆ.

    “ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ? ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡೀಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು” ಎಂದು ಬರೆದಿದ್ದಾರೆ ಕಿಶೋರ್.

  • ನಾನು ‘ಕೆಜಿಎಫ್ 2’ ಸಿನಿಮಾ ನೋಡಿಲ್ಲ, ನನ್ನ ಅಭಿರುಚಿಯ ಸಿನಿಮಾ ಅದಲ್ಲ : ನಟ ಕಿಶೋರ್

    ನಾನು ‘ಕೆಜಿಎಫ್ 2’ ಸಿನಿಮಾ ನೋಡಿಲ್ಲ, ನನ್ನ ಅಭಿರುಚಿಯ ಸಿನಿಮಾ ಅದಲ್ಲ : ನಟ ಕಿಶೋರ್

    ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಕಿಶೋರ್ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಸುಖಾಸುಮ್ಮನೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಕರಾವಳಿ ದೈವಗಳ ಬಗ್ಗೆ ಪೋಸ್ಟ್ ಮಾಡಿ, ನಂಬಿಕೆ ಅಪನಂಬಿಕೆ ಬಗ್ಗೆ ಮಾತನಾಡಿದ್ದರು. ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಕೆಜಿಎಫ್ 2 ಚಿತ್ರದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಅದು ಕೂಡ ವಿವಾದಕ್ಕೀಡಾಗಿದೆ. ಅವರ ನೇರ ನುಡಿಯ ಮಾತುಗಳು ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲವನ್ನೂ ಮೂಡಿಸುತ್ತಿವೆ.

    ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಕುರಿತು ಮಾತನಾಡಿರುವ ಅವರು, ‘ನಾನು ಕೆಜಿಎಫ್ 2 ಸಿನಿಮಾ ಈವರೆಗೂ ನೋಡಿಲ್ಲ. ನೋಡಬೇಕು ಅಂತ ಅನಿಸಿಲ್ಲ. ನಾನು ನೋಡುವ ಚಿತ್ರಗಳೇ ಬೇರೆ. ನನ್ನ ಅಭಿರುಚಿಯ ಸಿನಿಮಾದಲ್ಲಿ ಅದು ಇಲ್ಲ’ ಎಂದು ಹೇಳುವ ಮೂಲಕ ಯಶ್ ಫ್ಯಾನ್ಸ್ ಅನ್ನು ಅವರು ಕೆಣಕಿದ್ದಾರೆ. ಹಾಗಾದರೆ, ಕಿಶೋರ್ ಯಾವ ರೀತಿಯ ಚಿತ್ರಗಳನ್ನು ನೋಡುತ್ತಾರೆ ಎನ್ನುವ ಪಟ್ಟಿಯನ್ನು ಕೊಡಲಿ ಎಂದು ಯಶ್ ಫ್ಯಾನ್ಸ್ ನಟನ ಮೇಲೆ ಗರಂ ಆಗಿದ್ದಾರೆ. ಕಿಶೋರ್ ನಟಿಸಿರುವ ಸಿನಿಮಾಗಳು, ಅವರ ಅಭಿರುಚಿಗೆ ತಕ್ಕದ್ದಾದ ಚಿತ್ರಗಳಾ ಎಂದು ಪ್ರಶ್ನೆಯನ್ನೂ ಹಲವರು ಮಾಡಿದ್ದಾರೆ.

    ಈ ಹಿಂದೆಯೂ ಕಿಶೋರ್ ಅವರು ಕಾಂತಾರ ಸಿನಿಮಾದ ದೈವದ ಬಗ್ಗೆ ಕೆಲವು ಮಾತುಗಳನ್ನು ಬರೆದಿದ್ದರು. ನಂಬಿಕೆ, ಮೂಢನಂಬಿಕೆಗಳ ಬಗ್ಗೆ ಚರ್ಚೆ ಮಾಡಿದ್ದರು. ದೈವಗಳನ್ನು ಯಾರು ಹೇಗೆ ನಂಬಿದರೂ, ಮೂಢನಂಬಿಕೆಗಳ ಬಗ್ಗೆ ಜಾಗ್ರತೆ ಎನ್ನುವಂತೆ ಅವರ ಪೋಸ್ಟ್ ಹಿಂದಿನ ಕಾಳಜಿ ಆಗಿತ್ತು. ಆದರೆ, ಅದನ್ನು ಜನರು ಬೇರೆ ರೀತಿಯಲ್ಲೇ ತಗೆದುಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಹಿಡಿದು ಜಗ್ಗಾಡಿದರು. ಅದು ಪರ ವಿರೋಧದ ಚರ್ಚೆಯೂ ಆಗಿತ್ತು. ಇದೇ ಸಮಯದಲ್ಲೇ ಟ್ವಿಟರ್ ಖಾತೆ ಡಿಲಿಟ್ ಆಗಿ, ಅನೇಕ ಅನುಮಾನಗಳಿಗೂ ಕಾರಣವಾಗಿತ್ತು. ಇದನ್ನೂ ಓದಿ: ‘ವಿರಾಟಪುರ ವಿರಾಗಿ’ ಚಿತ್ರವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುವೆ : ಸಚಿವ ಸಿ.ಸಿ. ಪಾಟೀಲ್

    ಪ್ರಗತಿಪರ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಕಿಶೋರ್, ಅನೇಕರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಕಾಂತಾರ ವಿಷಯದಲ್ಲಿ ಪ್ರಗತಿಪರರೇ ಅವರಿಗೆ ಅನೇಕ ಪ್ರಶ್ನೆಗಳನ್ನು ಮಾಡಿದ್ದರು. ಇದು ಏನೇ ಇರಲಿ, ಕಿಶೋರ್ ಅವರ ಟ್ವಿಟರ್ ಖಾತೆಯನ್ನು ವಾಪಸ್ಸು ಮಾಡುವುದಾಗಿ ಸಂಸ್ಥೆ ತಿಳಿಸಿದೆ. ಅತೀ ಶೀಘ್ರದಲ್ಲೇ ಅವರ ಖಾತೆ ಅವರಿಗೆ ವಾಪಸ್ಸು ಸಿಗಲಿದೆ. ಈ ಮೂಲಕ ಎದ್ದಿದ್ದ ಮತ್ತೊಂದು ವಿವಾದ ಸುಖಾಂತ್ಯ ಕಾಣಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ಕಿಶೋರ್ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿರುವ ಅಸಲಿ ಕಾರಣ ಬಯಲು

    ನಟ ಕಿಶೋರ್ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿರುವ ಅಸಲಿ ಕಾರಣ ಬಯಲು

    ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಕಿಶೋರ್ ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿರುವ ವಿಚಾರ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ದೈವದ ಕುರಿತಾಗಿ ಅವರು ಪೋಸ್ಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಟ್ವಿಟರ್ ಅಕೌಂಟ್ ಅನ್ನು ಡಿಲಿಟ್ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ನಡೆಯನ್ನು ಹಲವರು ಪ್ರಶ್ನಿಸಿದ್ದರು. ನೇರವಾಗಿ ಟ್ವಿಟರ್ ಸಂಸ್ಥೆಗೂ ಈ ವಿಷಯವನ್ನು ಮುಟ್ಟಿಸಿದ್ದರು. ಆದರೆ, ಅಕೌಂಟ್ ಡಿಲಿಟ್ ಆಗಿರುವುದಕ್ಕೆ ಬೇರೆ ಕಾರಣವೇ ಇದೆ. ಅದನ್ನು ಸ್ವತಃ ಕಿಶೋರ್ ಅವರೇ ಹಂಚಿಕೊಂಡಿದ್ದಾರೆ.

    ತಮ್ಮ ಟ್ವಿಟರ್ ಖಾತೆಯು ಡಿಲಿಟ್ ಆಗಿರುವ ಕಾರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಶೋರ್, ‘ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೇ ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು. ನನ್ನ ಯಾವ ಪೋಸ್ಟ್ ನಿಂದಲೂ ಅಲ್ಲ. ಡಿಸೆಂಬರ್ 20ನೇ ತಾರೀಖು ಅಕೌಂಟ್ ಹ್ಯಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ.

    ಇದನ್ನೂ ಓದಿ: ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

    ಕಿಶೋರ್ ಅವರು ಕಾಂತಾರ ಸಿನಿಮಾದ ದೈವದ ಬಗ್ಗೆ ಕೆಲವು ಮಾತುಗಳನ್ನು ಬರೆದಿದ್ದರು. ನಂಬಿಕೆ, ಮೂಢನಂಬಿಕೆಗಳ ಬಗ್ಗೆ ಚರ್ಚೆ ಮಾಡಿದ್ದರು. ದೈವಗಳನ್ನು ಯಾರು ಹೇಗೆ ನಂಬಿದರೂ, ಮೂಢನಂಬಿಕೆಗಳ ಬಗ್ಗೆ ಜಾಗ್ರತೆ ಎನ್ನುವಂತೆ ಅವರ ಪೋಸ್ಟ್ ಹಿಂದಿನ ಕಾಳಜಿ ಆಗಿತ್ತು. ಆದರೆ, ಅದನ್ನು ಜನರು ಬೇರೆ ರೀತಿಯಲ್ಲೇ ತಗೆದುಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಹಿಡಿದು ಜಗ್ಗಾಡಿದರು. ಅದು ಪರ ವಿರೋಧದ ಚರ್ಚೆಯೂ ಆಗಿತ್ತು. ಇದೇ ಸಮಯದಲ್ಲೇ ಟ್ವಿಟರ್ ಖಾತೆ ಡಿಲಿಟ್ ಆಗಿ, ಅನೇಕ ಅನುಮಾನಗಳಿಗೂ ಕಾರಣವಾಗಿತ್ತು.

    ಪ್ರಗತಿಪರ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಕಿಶೋರ್, ಅನೇಕರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಕಾಂತಾರ ವಿಷಯದಲ್ಲಿ ಪ್ರಗತಿಪರರೇ ಅವರಿಗೆ ಅನೇಕ ಪ್ರಶ್ನೆಗಳನ್ನು ಮಾಡಿದ್ದರು. ಇದು ಏನೇ ಇರಲಿ, ಕಿಶೋರ್ ಅವರ ಟ್ವಿಟರ್ ಖಾತೆಯನ್ನು ವಾಪಸ್ಸು ಮಾಡುವುದಾಗಿ ಸಂಸ್ಥೆ ತಿಳಿಸಿದೆ. ಅತೀ ಶೀಘ್ರದಲ್ಲೇ ಅವರ ಖಾತೆ ಅವರಿಗೆ ವಾಪಸ್ಸು ಸಿಗಲಿದೆ. ಈ ಮೂಲಕ ಎದ್ದಿದ್ದ ಮತ್ತೊಂದು ವಿವಾದ ಸುಖಾಂತ್ಯ ಕಾಣಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k