Tag: Kirtigowda

  • ಮೂರಲ್ಲ, ಹತ್ತು ಮಕ್ಕಳಿದ್ರೂ ದುನಿಯಾ ವಿಜಿಯನ್ನೇ ಮದ್ವೆಯಾಗ್ತಿದ್ದೆ: ಕೀರ್ತಿ ಗೌಡ

    ಮೂರಲ್ಲ, ಹತ್ತು ಮಕ್ಕಳಿದ್ರೂ ದುನಿಯಾ ವಿಜಿಯನ್ನೇ ಮದ್ವೆಯಾಗ್ತಿದ್ದೆ: ಕೀರ್ತಿ ಗೌಡ

    ಬೆಂಗಳೂರು: ಮೂರು ವರ್ಷದ ಹಿಂದೆ ಮದುವೆಯಾಗಿದೆ. ನನ್ನ ಪತಿಗೆ ಮೂವರು ಅಲ್ಲ, ಹತ್ತು ಮಕ್ಕಳಿದ್ದರೂ ನಾನು ಮದುವೆಯಾಗುತ್ತಿದ್ದೆ ಎಂದು ವಿಜಯ್ ಎರಡನೇ ಪತ್ನಿ ಕೀರ್ತಿಗೌಡ ಹೇಳಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದುನಿಯಾ ವಿಜಯ್ ಏನು ಅಂತ ಗೊತ್ತಿದ್ದು, ನಾನು ಮದುವೆ ಆಗಿದ್ದೇನೆ. ನಾನು ತುಂಬಾ ತ್ಯಾಗ ಮಾಡಿ ಮದುವೆಯಾಗಿದ್ದೇನೆ. ನಾಗರತ್ನ ಅವರಿಗೆ ಗಂಡ ಮಕ್ಕಳು ಬೇಕು ಅಷ್ಟೇ. ಇದರಿಂದ ಅವರು ಜನರಿಂದ ಸಿಂಪತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

    ನನ್ನ ಪತಿ, ಅತ್ತೆ, ಮಾವ ಎಲ್ಲರು ಅವರ ಬಗ್ಗೆ ಹೇಳಿದ್ದರು. ಆದರೆ ಇಷ್ಟೊಂದು ಸುಳ್ಳು ಹೇಳುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಮೂರು ಮಕ್ಕಳಿರುವವರನ್ನು ಮದುವೆಯಾಗುವುದಕ್ಕೆ ಒಳ್ಳೆಯ ಮನಸ್ಸು ಬೇಕು. ಅವರ ಮಕ್ಕಳಿಗೂ ನಾನು ಪ್ರೀತಿಕೊಟ್ಟು ಸಾಕುತ್ತಿದ್ದೇನೆ. ನನಗೆ ಅವರ ಬಗ್ಗೆ ಗೊತ್ತು. ಈ ಪ್ರಪಂಚ ತಲೆಕೆಳಗಾದರೂ ಸರಿ. ನನಗೆ ನನ್ನ ಗಂಡನೇ ಸರ್ವಸ್ವ. ನನ್ನ ಪತಿ ನೀನು ಬೇಡ ಎಂದು ಹೇಳುವರೆಗೂ ನಾನು ಹೋಗುವುದಿಲ್ಲ ಎಂದು ಕೀರ್ತಿಗೌಡ ಗುಡುಗಿದ್ದಾರೆ.

    ಮೂರು ದಿನಗಳ ಹಿಂದಷ್ಟೇ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಮಾತನಾಡಿ, ಕೀರ್ತಿ ದುಡ್ಡು, ಬಂಗಾರ ಎಲ್ಲಾ ಎತ್ತಿಕೊಂಡು ಮನೆಯಿಂದ ಓಡಿಹೋಗಿದ್ದಾರೆ ಅಂತ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಸಿದ ಕೀರ್ತಿಗೌಡ ಅವರು, ನಾನು ದುಡ್ಡು, ಒಡವೆ ತಗೊಂಡು ಓಡಿಹೋಗಿಲ್ಲ. ಕಳ್ಳತನ ಮಾಡುವಷ್ಟು ಬರ್ಬಾದ್ ಆಗಿಲ್ಲ. ನನ್ನ ಗಂಡ ನನಗೆ ಬೇಜಾನ್ ಕೊಟ್ಟಿದ್ದಾರೆ. ನಾನು ನನ್ನ ತಾಯಿ ಮನೆಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.

    ಅವರು ಮಗನನ್ನ ನೋಡುವುದಕ್ಕೆ ಬಂದಾಗ ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ. ಅವರು ನೂರಕ್ಕೆ ನೂರು ಸುಳ್ಳು ಹೇಳುತ್ತಾರೆ. ಅವರೇ ಜಗಳ ಮಾಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಅಂತವರ ಜೊತೆ ಇರಲು ಸಾಧ್ಯವಿಲ್ಲ. ಮನೆ ವಿಚಾರವನ್ನು ಬೀದಿಗೆ ತರಲು ನನಗೆ ಇಷ್ಟ ಇಲ್ಲ. ನನ್ನ ಅತ್ತೆ, ಮಾವ ನಾದಿನಿ ಎಲ್ಲರ ಸಪೋರ್ಟ್ ನನಗಿದೆ. ಎಲ್ಲೋ ಪುಟ್ಟ ಸಂಸಾರ ಮಾಡಿಕೊಂಡು ನೆಮ್ಮದಿಯಾಗಿದ್ವಿ ಒಂದು ಕ್ಷಣದಲ್ಲಿ ನಾಗರತ್ನ ಅವರು ಹಾಳು ಮಾಡಿದ್ದಾರೆ. ನನ್ನ ಪತಿ ಜೈಲಿನಿಂದ ಹೊರಬರಲಿ ಅಂತ ಕಾಯುತ್ತಿದ್ದೆ. ನನಗೆ ಅವರನ್ನು ಬಿಟ್ಟು ಬೇರೇನು ಬೇಡ. ಅವರೆ ನನ್ನ ಪ್ರಪಂಚ ಎಂದು ಕೀರ್ತಿ ಗೌಡ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv