Tag: Kirti Suresh

  • 130 ಜನರಿಗೆ ಚಿನ್ನದ ನಾಣ್ಯ ಕೊಟ್ಟ ನಟಿ ಕೀರ್ತಿ ಸುರೇಶ್

    130 ಜನರಿಗೆ ಚಿನ್ನದ ನಾಣ್ಯ ಕೊಟ್ಟ ನಟಿ ಕೀರ್ತಿ ಸುರೇಶ್

    ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ತಮಿಳು ನಟಿ ಕೀರ್ತಿ ಸುರೇಶ್ (Kirti Suresh), ತನ್ನ ಗೆಲುವಿಗೆ ಕಾರಣರಾಗುತ್ತಿರುವ ವ್ಯಕ್ತಿಗಳು ಬರೋಬ್ಬರಿ 75 ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ಚಿನ್ನದ ನಾಣ್ಯವನ್ನು (Gold Coin) ನೀಡಿದ್ದಾರೆ. ಯುಗಾದಿ ಹಬ್ಬಕ್ಕಾಗಿ ಅವರು ಈ ಉಡುಗೊರೆಯನ್ನು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

    ಮಹಾನಟಿ ಸಿನಿಮಾ ಮೂಲಕ ಚಿತ್ರ ಜಗತ್ತಿಗೆ ಪರಿಚಯವಾದ ಕೀರ್ತಿ ಸುರೇಶ್, ಮೂಲತಃ ಮಲಯಾಳಂ ಚಿತ್ರರಂಗದವರಾದರೂ, ಸಾಕಷ್ಟು ಹೆಸರು ಮಾಡಿದ್ದು ತೆಲುಗು ಮತ್ತು ತಮಿಳಿನಲ್ಲಿ. ಇದೀಗ ಅವರ ನಟನೆಯ ತೆಲುಗಿನ ದಸರಾ (Dasara) ಸಿನಿಮಾ ರಿಲೀಸ್‍ ಗೆ ರೆಡಿಯಾಗಿದೆ. ನಾನಿ (Nani) ಜೊತೆ ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ಅವರು, ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೂ ಮುಂದಾಗಿದ್ದಾರೆ. ಈ ಸಮಯದಲ್ಲಿ ಉಡುಗೊರೆ ನೀಡಿ ಸಖತ್ ಸುದ್ದಿ ಆಗಿದ್ದಾರೆ.

    ದಸರಾ ಸಿನಿಮಾದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ 130 ಜನರಿಗೆ ತಲಾ ಹತ್ತು ಗ್ರಾಂ ಚಿನ್ನದ ನಾಣ್ಯಗಳನ್ನು ಕೊಡುವ ಮೂಲಕ ಯುಗಾದಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ ಕೀರ್ತಿ ಸುರೇಶ್. ಸಿನಿಮಾದ ಕೊನೆಯ ದಿನದ ಶೂಟಿಂಗ್ ನಲ್ಲಿ ಸೆಟ್ ನಲ್ಲಿದ್ದ ಬಹುತೇಕರು ಭಾವುಕರಾಗಿದ್ದರಂತೆ. ಅಷ್ಟೊಂದು ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಈ ಕಾರಣಕ್ಕಾಗಿ ಎಲ್ಲರಿಗೂ ಚಿನ್ನದ ಉಡುಗೊರೆ ಸಿಕ್ಕಿದೆ.

  • ಬಾಲಿವುಡ್ ಅಪಹಾಸ್ಯ – ಕೆಆರ್‌ಕೆ, ಅಭಿಷೇಕ್ ಬಚ್ಚನ್ ರೋಚಕ ಟ್ವೀಟ್ ಸಮರ!

    ಬಾಲಿವುಡ್ ಅಪಹಾಸ್ಯ – ಕೆಆರ್‌ಕೆ, ಅಭಿಷೇಕ್ ಬಚ್ಚನ್ ರೋಚಕ ಟ್ವೀಟ್ ಸಮರ!

    ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು, ಕಮಾಲ್ ಆರ್ ಖಾನ್ ಅವರಿಗೆ ಟ್ವಿಟರ್‌ನಲ್ಲಿ ಹಾಸ್ಯದ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದಿದ್ದಾರೆ.

    ಅಭಿಷೇಕ್ ಅವರು ಶನಿವಾರ ಟೊವಿನೋ ಥಾಮಸ್ ಮತ್ತು ಕೀರ್ತಿ ಸುರೇಶ್ ಅಭಿನಯದ ವಾಶಿ ಚಿತ್ರದ ಪೋಸ್ಟರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಅವರು ಮಲಯಾಳಂ ಚಲನಚಿತ್ರೋದ್ಯಮದಿಂದ ಮತ್ತೊಂದು ಅದ್ಭುತ ಚಿತ್ರ ಬರುತ್ತಿದೆ ಎಂದು ಶೀರ್ಷಿಕೆ ನೀಡಿದ್ದರು. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಈ ವೇಳೆ ಅಭಿಷೇಕ್ ಅವರ ಟ್ವೀಟ್ ಅನ್ನು ಗಮನಿಸಿದ ಕೆಆರ್‌ಕೆಗೆ ಅದು ಇಷ್ಟವಾಗಲಿಲ್ಲ. ಅವರು ಆಗಾಗ್ಗೆ ಬಾಲಿವುಡ್ ನಟರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ‘ಸಹೋದರ, ಎಂದಾದರೂ ನೀವು ಬಾಲಿವುಡ್ ಜನರು ನಂಬಲುಸಾಧ್ಯವಾದ ಚಲನಚಿತ್ರವನ್ನು ಮಾಡಿ’ ಎಂದು ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.

    ಇದಕ್ಕೆ ಪ್ರತಿ ಉತ್ತರವಾಗಿ ಕೆಆರ್‌ಕೆಯ ಚಿತ್ರ `ದೇಶದ್ರೋಹಿ’ ಬಗ್ಗೆ ವ್ಯಂಗ್ಯವಾಡಿದ ಬಚ್ಚನ್, ನಾವು ಪ್ರಯತ್ನ ಮಾಡುತ್ತೇವೆ. ನೀವು ಒಂದು ಚಿತ್ರ ಮಾಡಿದ್ದೀರಲ್ಲ `ದೇಶದ್ರೋಹಿ’ ಎಂದು ಕುಟುಕಿದ್ದಾರೆ. ನಂತರ ಕೆಆರ್‌ಕೆ ಮತ್ತು ಅಭಿಷೇಕ್ ನಡುವಿನ ಟ್ವಿಟರ್ ಸಮರ ಇಲ್ಲಿಗೇ ಮುಗಿಯಲಿಲ್ಲ.

    ಅಭಿಷೇಕ್‍ಗೆ ಪ್ರತಿಕ್ರಿಯಿಸಿದ ಕೆಆರ್‌ಕೆ,  ಹಹಹಾ! ನನ್ನ ಒಂದು ಚಿತ್ರದ ಬಜೆಟ್ 1.5 ಕೋಟಿ ರೂ.ಗಿಂತ ಜಾಸ್ತಿ ಇರುವುದಿಲ್ಲ. ನನ್ನ ಚಿತ್ರದ ಬಜೆಟ್ ನಿಮ್ಮ ಮೇಕಪ್ ಮ್ಯಾನ್‍ಗೆ ಕೊಡುವ ಬಜೆಟ್‍ಗಿಂತ ಕಡಿಮೆ ಇರುತ್ತದೆ. ನಾನು ಬಾಲಿವುಡ್‍ನಲ್ಲಿ ಎರಡನೇ ಚಿತ್ರ ಮಾಡಲು ಬಯಸಿದ್ದೆ. ಆದರೆ ಬಾಲಿವುಡ್ ನನಗೆ ಅವಕಾಶ ನೀಡಲಿಲ್ಲ. ಇಲ್ಲದಿದ್ದರೆ ಅದು ಮತ್ತೊಂದು ಬ್ಲಾಕ್‍ಬಸ್ಟರ್ ಆಗುತ್ತಿತ್ತು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ಈ ಟ್ವೀಟ್‍ಗೆ ಅಭಿಷೇಕ್ ಮತ್ತೊಮ್ಮೆ ಕೆಆರ್‌ಕೆಗೆ ಟಾಂಗ್ ಕೊಟ್ಟಿದ್ದು, ಬನ್ನಿ, ನೀವೂ ಪ್ರಯತ್ನಿಸಿ, ಹೋರಾಟ ಯಶಸ್ವಿಯಾಗಲಿ ಅಂತ ಹಾರೈಸೋಣ ಎಂದು ಪಂಥಾಹ್ವಾನ ನೀಡಿದ್ದಾರೆ.

    ಅಭಿಷೇಕ್ ಮತ್ತು ಕೆಆರ್‍ಕೆಯ ಈ ಸಂಭಾಷಣೆಯ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಷೇಕ್ ಅವರು ದಾಸ್ವಿ ಎಂಬ ತಮ್ಮ ಮುಂಬರುವ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದು, ಚಿತ್ರದ ನಾಯಕಿಯಾಗಿ ಯಾಮಿ ಗೌತಮ್ ಅವರು ಕೂಡಾ ಕಾಣಿಸಿಕೊಳ್ಳಲಿದ್ದಾರೆ.

  • ಹಗ್ ಮಾಡಿಲ್ಲ, ಜಸ್ಟ್ ಹಿಡ್ಕೊಂಡಿದ್ದೀನಿ ಅಂದು ಬಿಟ್ರು ಪವನ್ ಕಲ್ಯಾಣ್

    ಹಗ್ ಮಾಡಿಲ್ಲ, ಜಸ್ಟ್ ಹಿಡ್ಕೊಂಡಿದ್ದೀನಿ ಅಂದು ಬಿಟ್ರು ಪವನ್ ಕಲ್ಯಾಣ್

    ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಅಜ್ಞಾತವಾಸಿ-ಪ್ರಿನ್ಸ್ ಇನ್ ಎಕ್ಸೆಲ್’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ಪವರ್ ಸ್ಟಾರ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟುಹಾಕಿದೆ.

    ಪವರ್ ಅಭಿಮಾನಿಗಳು ಟ್ರೇಲರ್ ಬಗ್ಗೆ ಅಪಾರ ಮೆಚ್ಚುಗೆಯನ್ನು ಸೂಚಿಸಿದ್ದು, ಯೂಟ್ಯೂಬ್ ನಲ್ಲಿ ನಂಬರ್ 3 ಟ್ರೆಂಡಿಂಗ್ ನಲ್ಲಿದೆ. ಎಂದಿನಂತೆ ಪವನ್ ಸಖತ್ ಫ್ರೆಶ್ ಆ್ಯಂಡ್ ಕೂಲ್ ಲುಕ್‍ನಲ್ಲಿ ಮಿಂಚುತ್ತಿದ್ದು, ಫ್ಯಾನ್ಸ್ ಗಳಿಗೆ ತಮ್ಮ ಖಡಕ್ ಡೈಲಾಗ್‍ಗಳಿಂದ ಭರಪೂರ ಮನರಂಜನೆ ನೀಡಿದ್ದಾರೆ. ಟ್ರೇಲರ್ ನಲ್ಲಿ ಪವನ್ ಕಲ್ಯಾಣ್ ನೋಡುಗರಲ್ಲಿ ಭರವಸೆಯನ್ನು ಮೂಡಿಸಿದ್ದಾರೆ.

    ಚಿತ್ರ ಮಾಸ್, ಸೆಂಟಿಮೆಂಟ್, ರೊಮ್ಯಾಂಟಿಕ್ ಕಥೆಯನ್ನು ಹೊಂದಿದೆ. ಟ್ರೇಲರ್ ಮಧ್ಯ ಮಧ್ಯ ಕಾಮಿಡಿ ಪಂಚ್‍ಗಳ ಮೂಲಕ ಲವರ್ ಇಮೇಜ್‍ನ್ನು ಪವನ್ ಉಳಿಸಿಕೊಂಡಿದ್ದಾರೆ. ಬರೋಬ್ಬರಿ 1 ನಿಮಿಷ 30 ಸೆಕೆಂಡ್‍ಗಳಿರುವ ಟ್ರೇಲರ್ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡುವುದಿಲ್ಲ. ಟ್ರೇಲರ್ ಖಡಕ್ ಡೈಲಾಗ್‍ನಿಂದ ಆರಂಭಗೊಳ್ಳುತ್ತದೆ. ಜೀವನದಲ್ಲಿ ಏನೇ ವಸ್ತುವನ್ನು ಪಡೆದುಕೊಳ್ಳಬೇಕಾದ್ರೆ ಅದಕ್ಕೊಂದು ಮಿನಿ ಯುದ್ಧವೇ ನಡೆಯುತ್ತದೆ ಅಂತಾ ಹೇಳುವ ಮೂಲಕ ಸಿನಿಮಾದಲ್ಲಿ ಆ್ಯಕ್ಷನ್ ಸೀನ್‍ಗಳಿವೆ ಅಂತಾ ಸುಳಿವು ನೀಡಿದ್ದಾರೆ. ಇನ್ನೂ ಮಧ್ಯೆ ಪವನ್ ಹಗ್ ಮಾಡಿಲ್ಲ, ಜಸ್ಟ್ ಹಿಡ್ಕೊಂಡಿದ್ದೀನಿ ಎನ್ನುವ ಕ್ಯಾಚಿ ಡೈಲಾಗ್ ನ್ನು ಹೊಂದಿದೆ.

    ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಪವನ್ ಕಲ್ಯಾಣ್ ಮೂರನೇ ಬಾರಿಗೆ ಜೊತೆಯಾಗಿದ್ದಾರೆ. ಸಿನಿಮಾದಲ್ಲಿ ಕೀರ್ತಿ ಸುರೇಶ್ ಮತ್ತು ಅನು ಇಮ್ಯಾನೇಯಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಹಿಂದೆ ಪವನ್ ಮತ್ತು ತ್ರಿವಿಕ್ರಮ್ ಇಬ್ಬರು ಜೊತೆಯಾಗಿ ಜಲ್ಸಾ, ಅತ್ತಾರಿಂಟಿಕಿ ದಾರೇದಿ ಎರಡು ಬ್ಲಾಕ್ ಬಾಸ್ಟರ್ ಸಿನಿಮಾಗಳನ್ನು ನೀಡಿದ್ದು, ಮೂರನೇ ಸಿನಿಮಾ ಟಾಲಿವುಡ್ ನಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ.

    ಪವನ್ ಕಲ್ಯಾಣ್ ನಂತರ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಆದಿ ಎಲ್ಲರನ್ನು ಆಕರ್ಷಿಸುತ್ತಾರೆ. ಹಿರಿಯ ನಟರಾದ ಬೊಮನ್ ಇರಾನಿ, ಖುಷ್ಬು, ಕನ್ನಡತಿ ಪವಿತ್ರಾ ಲೋಕೇಶ್ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿದೆ. ಇದೇ ತಿಂಗಳು 10ನೇ ತಾರೀಖಿನಂದು ಚಿತ್ರ ಬಿಡುಗಡೆಯಾಗಲಿದೆ.