Tag: Kirti Reddy

  • ಮಾಜಿಮಂತ್ರಿ ಜನಾರ್ದನ್ ರೆಡ್ಡಿ ಮಗನ ಸಿನಿಮಾದಲ್ಲಿ ಜೆನಿಲಿಯಾ ಅತ್ತಿಗೆ ಪಾತ್ರ ಮಾಡ್ತಿಲ್ಲವಂತೆ

    ಮಾಜಿಮಂತ್ರಿ ಜನಾರ್ದನ್ ರೆಡ್ಡಿ ಮಗನ ಸಿನಿಮಾದಲ್ಲಿ ಜೆನಿಲಿಯಾ ಅತ್ತಿಗೆ ಪಾತ್ರ ಮಾಡ್ತಿಲ್ಲವಂತೆ

    ಮಾಜಿಮಂತ್ರಿ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಗ್ರ್ಯಾಂಡ್ ಆಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಕಿರೀಟಿ ನಟನೆಯ ಸಿನಿಮಾ ಎರಡು ಭಾಷೆಯಲ್ಲಿ ಮೂಡಿ ಬರುತ್ತಿದ್ದು, ಈ ಸಿನಿಮಾಗಾಗಿ ಅವರು ಪಕ್ಕಾ ತಯಾರಿ ಮಾಡಿಕೊಂಡೆ ಎಂಟ್ರಿ ಕೊಟ್ಟಿದ್ದಾರೆ. ಪಾತ್ರಗಳ ಆಯ್ಕೆಯಲ್ಲೂ ಚಿತ್ರತಂಡ ಕಾಳಜಿವಹಿಸಿದೆ. ಕಿರೀಟಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದು, ಮತ್ತೊಂದು ಮಹತ್ವದ ಪಾತ್ರದಲ್ಲಿ ಬಹುಭಾಷಾ ನಟಿ ಜೆನಿಲಿಯಾ ಡಿಸೋಜಾ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರದ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆದಿತ್ತು.

    ಮದುವೆಯ ನಂತರ ಸಿನಿಮಾ ರಂಗದಿಂದ ದೂರವಿದ್ದ ಜೆನಿಲಿಯಾ, ಇದೀಗ ಹಲವು ವರ್ಷಗಳ ನಂತರ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅವರು ಯಾವ ರೀತಿಯ ಪಾತ್ರವನ್ನು ಒಪ್ಪಿಕೊಂಡಿರಬಹುದು ಎಂಬ ಕುತೂಹಲವಿತ್ತು. ಸಿನಿಮಾ ಮುಹೂರ್ತದ ದಿನ ಅವರು ನಾಯಕನ ಅತ್ತಿಗೆ ಪಾತ್ರ ಮಾಡಲಿದ್ದಾರೆ ಎನ್ನುವ ಗಾಸಿಪ್ ಹರಡಿತ್ತು. ಆದರೆ, ಜೆನಿಲಿಯಾ ಈ ಸಿನಿಮಾದಲ್ಲಿ ಅತ್ತಿಗೆಯ ಪಾತ್ರ ಮಾಡುತ್ತಿಲ್ಲವಂತೆ. ಇದನ್ನೂ ಓದಿ:ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಜೆನಿಲಿಯಾ ಕಂಪೆನಿಯೊಂದರ ಸಿಇಓ ಪಾತ್ರವನ್ನು ನಿಭಾಯಿಸಲಿದ್ದಾರಂತೆ. ಅದೊಂದು ಮಹತ್ವದ ಪಾತ್ರವೂ ಆಗಿದೆಯಂತೆ. ಹಾಗಾಗಿಯೇ ಅವರು ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ರಾಧಾಕೃಷ್ಣ ರೆಡ್ಡಿ ಅವರು ಈ ಚಿತ್ರದ ನಿರ್ದೇಶಕರು. ಈ ಹಿಂದೆ ಇವರು ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ಮಾಯಾಬಜಾರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು ಇವರ ಎರಡನೇ ಸಿನಿಮಾ.

    Live Tv