Tag: kiriti

  • ಜನಾರ್ದನ ರೆಡ್ಡಿ ಪುತ್ರ  ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

    ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

    ಜನಾರ್ದನ ರೆಡ್ಡಿ (Janardhan Reddy) ಪುತ್ರ ಕಿರೀಟಿ  ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾಗಿದೆ. ಅದ್ಧೂರಿಯಾಗಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಎಸ್ ಎಸ್ ರಾಜಮೌಳಿ ಕಿರೀಟಿಗೆ ಸಾಥ್ ನೀಡಿ ಪ್ರೋತ್ಸಾಹಿಸಿದ್ದು ಗೊತ್ತೇ ಇದೆ. ಇಂಟ್ರಡಕ್ಷನ್ ಟೀಸರ್ ಮೂಲಕ ಗಮನ ಸೆಳೆದಿರೋ ಕಿರೀಟಿ ಒಂದೇ ನೋಟಕ್ಕೆ ಎಲ್ಲರನ್ನು ಸೆಳೆದಿದ್ದಾರೆ. ಸ್ಯಾಂಡಲ್ ವುಡ್ ಅಂಗಳಕ್ಕೆ ಭರವಸೆಯ ನಾಯಕ ನಟನಾಗುತ್ತಾನೆ ಎಂಬ ಭವಿಷ್ಯ ವಾಣಿಯೂ ಕೇಳಿ ಬಂದಿವೆ. ಎಲ್ಲರ ಪ್ರೋತ್ಸಾಹದ ನುಡಿಗಳೊಂದಿಗೆ ಯಂಗ್ ಅಂಡ್ ಎನರ್ಜಿಟಿಕ್ ಕಿರೀಟಿ ಮೊದಲ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಕಿರೀಟಿ ಮೊದಲ ಚಿತ್ರದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ. ಅದುವೇ ಚಿತ್ರದ ಟೈಟಲ್.

    ಎಸ್. ಕಿರೀಟಿ (Kiriti) ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟು ಚಿತ್ರೀಕರಣದಲ್ಲಿ ತೊಡಗಿದ್ರು ಕೂಡ ಇಲ್ಲಿವರೆಗೂ ಸಿನಿಮಾದ ಟೈಟಲ್ ಅನಾವರಣ ಆಗಿರಲಿಲ್ಲ. ಫೈನಲಿ ಸಿನಿಮಾ ತಂಡ ಟೈಟಲ್ (Title) ರಿವೀಲ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಅದು ಒಂದು ವಿಶೇಷ ದಿನದಂದೂ. ಆ ವಿಶೇಷ ದಿನ ಏನು ಅನ್ನೋದನ್ನ ಮಾತ್ರ ಚಿತ್ರತಂಡ ಇಲ್ಲಿವರೆಗೂ ರಿವೀಲ್ ಮಾಡಿಲ್ಲ. ಸದ್ಯಕ್ಕಿರುವ ಮಾಹಿತಿ ಪ್ರಕಾರ ಕಿರೀಟಿ ಅವರ ಹುಟ್ಟು ಹಬ್ಬಕ್ಕಾಗಿ ಸೆಪ್ಟೆಂಬರ್ 29ಕ್ಕೆ ಸಂಜೆ  6.39ಕ್ಕೆ ವಾರಾಹಿ ಚಲನಚಿತ್ರ ಯೂಟ್ಯೂಬ್ ಚಾನೆಲ್ ನಲ್ಲಿ ಕಿರೀಟಿ ಮೊದಲ ಚಿತ್ರದ ಟೈಟಲ್ ಲಾಂಚ್ ವೀಡಿಯೋ ಬಿಡುಗಡೆಯಾಗೋದು ಫಿಕ್ಸ್ ಆಗಿದೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ರಾಧಾಕೃಷ್ಣ ರೆಡ್ಡಿ (Radhakrishna Reddy) ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದೆ. ಇದು ವಾರಾಹಿ ಸಂಸ್ಥೆಯ 15ನೇ ಸಿನಿಮಾ ಕೂಡ ಆಗಿದ್ದು ಅಷ್ಟೇ ಅದ್ದೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ  ನಿರ್ಮಾಣವಾಗುತ್ತಿರೋ ಈ ಚಿತ್ರದ ಮೂಲಕ ಕಿರೀಟಿ ಕನ್ನಡ ಮತ್ತು ತೆಲುಗು ಎರಡೂ ಇಂಡಸ್ಟ್ರಿಗೆ ಏಕಕಾಲದಲ್ಲಿ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ.

    ಚಿತ್ರದಲ್ಲಿ ರವಿಚಂದ್ರನ್ (Ravichandran), ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ  ಇದೆ. ಚಿತ್ರದ ತಾಂತ್ರಿಕ ವರ್ಗ ಕೂಡ ಶ್ರೀಮಂತವಾಗಿದ್ದು ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ, ಭಾರತದ ಟಾಪ್ ಸ್ಟಂಟ್ ಡೈರೆಕ್ಟರ್ ಪೀಟರ್ ಹೆನ್ ಆಕ್ಷನ್ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಪುತ್ರನ ಸಾಹಸವಿದು

    ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಪುತ್ರನ ಸಾಹಸವಿದು

    ಮಾಜಿ ಮಂತ್ರಿ ಜನಾರ್ದನ್ ರೆಡ್ಡಿ ಪಾತ್ರ ಕಿರೀಟಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇನ್ನಷ್ಟೇ ಅವರ ಚೊಚ್ಚಲು ನಟನೆಯ ಸಿನಿಮಾದ ಶೂಟಿಂಗ್ ಶುರುವಾಗಬೇಕು ಅದಕ್ಕೂ ಮುನ್ನ ಮೊದಲ ಸಿನಿಮಾದ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಮಾಡಿದ್ದಾರೆ. ಕಿರೀಟಿ ಸ್ಟಂಟ್ಸ್, ಡ್ಯಾನ್ಸ್, ಆಕ್ಷನ್ ಸೀನ್ಸ್ ಕಂಡು ಚಿತ್ರರಸಿಕರು ಹುಬ್ಬೇರಿಸಿದ್ದರು. ಸ್ವತಃ ಚಿತ್ರಬ್ರಹ್ಮ ರಾಜಮೌಳಿಯೇ ಕಿರೀಟಿ ಆಕ್ಟಿಂಗ್ , ಸ್ಟಂಟ್ಸ್ ಗೆ ಬಹುಪರಾಕ್ ಅಂತಾ ಬೆನ್ನುತಟ್ಟಿದ್ದರು. ಇಷ್ಟೆಲ್ಲಾ ಮೆಚ್ಚುಗೆ ಪಡೆದಿರುವ ಕಿರೀಟಿ ಸಾಹಸದ ಹಿಂದೆ ನೋವು, ಕಷ್ಟದ ಪರಿಶ್ರಮ ಅಡಗಿದೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

    ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಇಂಟ್ರೂಡಕ್ಷನ್  ಬಿಟಿಎಸ್ ಅಂದ್ರೆ ಟೀಸರ್ ಹಿಂದಿನ ಪರಿಶ್ರಮ ಸಣ್ಣದೊಂದು ಝಲಕ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ.  ಆ ವಿಡಿಯೋ ತುಣುಕಿನಲ್ಲಿ ಕಿರೀಟಿ ಪರಿಶ್ರಮ ಎದ್ದು ಕಾಣ್ತಿದೆ. ಬಿದ್ದು, ಎದ್ದು, ಪೆಟ್ಟು ಮಾಡಿಕೊಂಡರು ಛಲ ಬಿಡದೇ ಕಿರೀಟಿ ಸ್ಟಂಟ್ಸ್ ಗಳನ್ನು ಅದ್ಭುತವಾಗಿ ಮಾಡಿದ್ದಾರೆ. ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸ್ಟಂಟ್ಸ್ ಮೈ ಜುಮ್ ಎನಿಸುತ್ತವೆ.  ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ಅಂದಹಾಗೇ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15 ಸಿನಿಮಾ ಇದಾಗಿದ್ದು, ಮಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಓಂಕಾರ ಹಾಕಿರುವ, ಬಾಹುಬಲಿ ಛಾಯಾಗ್ರಾಹಕ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈಚಳಕ ಹಾಗೂ ದೇವಿಶ್ರೀಪ್ರಸಾದ್ ಮ್ಯೂಸಿಕ್ ಪುಳಕ ಹಾಗೂ ರವೀಂದರ್ ಕಲಾ ನಿರ್ದೇಶನ ಕಿರೀಟಿ ಸಿನಿಮಾಗಿದೆ. ಕಿರೀಟಿ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಿದ್ದು, ಶ್ರೀಲೀಲಾ ನಾಯಕನಾಗಿ ನಟಿಸಿದ್ದು, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

  • ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಮಾಜಿ ಸಚಿನ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್ ವುಡ್ ಅಂಗಳಕ್ಕೆ ಬಂದಾಗಿದೆ. ಇನ್ನೇನು ಸದ್ಯದಲ್ಲೇ ಸಿನಿಮಾದ ಮುಹೂರ್ತ ಕೂಡ ನಡೆಯುತ್ತಿದೆ. ಈ ಮಧ್ಯ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ನಟಿಸಲಿದ್ದಾರೆ ಎನ್ನುವ ಸುದ್ದಿ ಚಿತ್ರತಂಡದಿಂದಲೇ ಬಂದಿದೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ತಮಿಳು ಸಿನಿಮಾ ರಂಗದ ಫೇಮಸ್ ನಟಿ ಜೆನಿಲಿಯಾ ಮತ್ತು ಕನ್ನಡದ ಹುಡುಗಿ ಶ್ರೀಲೀಲಾ ಇಬ್ಬರೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದರೆ, ಜೆನಿಲಿಯಾ ಪಾತ್ರ ಸದ್ಯಕ್ಕೆ ಸಸ್ಪೆನ್ಸ್. ಇದನ್ನೂ ಓದಿ: ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

    ಶಿವರಾಜ್ ಕುಮಾರ್ ನಟನೆಯ ಸತ್ಯ ಇನ್ ಲವ್ ನಂತರ ಜೆನಿಲಿಯಾ ಮತ್ತೆ ಕನ್ನಡ ಸಿನಿಮಾವನ್ನು ಮಾಡಿರಲಿಲ್ಲ. ನಟ ರಿತೇಶ್ ದೇಶಮುಖ ಅವರನ್ನು ಮದುವೆಯಾದ ನಂತರ ಅವರು ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಇದೀಗ ಕಿರೀಟಿ ನಟನೆಯ ಚೊಚ್ಚಲು ಸಿನಿಮಾದ ಮೂಲಕ ಮತ್ತೆ ಚಿತ್ರೋದ್ಯಮಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಇದನ್ನೂ ಓದಿ: ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

    ಈ ಸಿನಿಮಾವನ್ನು ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ.  ಇನ್ನೂ ಹೆಸರಿಡದ ಈ ಸಿನಿಮಾವನ್ನು ಭಾರೀ ಬಜೆಟ್ ನಲ್ಲಿ ತಯಾರಿಸುತ್ತಿದ್ದು, ಹೆಸರಾಂತರ ತಾರಾಬಳಗವ ಇರಲಿದೆ. ಇದನ್ನೂ ಓದಿ:  ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವನ್ನು ವಹಿಸಲಿದ್ದಾರೆ. ರವೀಂದರ್ ಆರ್ಟ್ ಡೈರೆಕ್ಟರ್ ಆಗಿ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್‌ಗಳಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.

  • ಅದ್ಧೂರಿ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಲಾಂಚ್

    ಅದ್ಧೂರಿ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಲಾಂಚ್

    ಮಾಜಿ ಮಂತ್ರಿ, ಉದ್ಯಮಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಇವರ ಚೊಚ್ಚಲ ಚಿತ್ರವನ್ನು ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ : ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಹೈ ಬಜೆಟ್ ಹಾಗೂ ಕಂಟೆಂಟ್ ಸಿನಿಮಾಗಳನ್ನು ತಯಾರಿಸುತ್ತಾ ಬಂದಿರುವ ಈ ಸಂಸ್ಥೆಯು ರಾಧಾ ಕೃಷ್ಣ ಸಾರಥ್ಯದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ರೆಡ್ಡಿ ಪುತ್ರನ ಸಿನಿಮಾ ನಿರ್ಮಾಣ ಮಾಡುತ್ತಿದೆ. ಮಾರ್ಚ್ 4 ರಂದು ಚಿತ್ರದ ಅದ್ಧೂರಿ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ : ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆ

    ಇನ್ನೂ ಹೆಸರಿಡದ ಈ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿದ್ದು, ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇರಲಿದ್ದು,‌ ಹಲವು ಸೂಪರ್ ಹಿಟ್ ಸಿನಿಮಾಗಳ ತಂತ್ರಜ್ಞರನ್ನು ಈ ಸಿನಿಮಾದ ಭಾಗವಾಗಿದ್ದಾರೆ ಎಂದಿದೆ ನಿರ್ಮಾಣ ಸಂಸ್ಥೆ. ಇದನ್ನೂ ಓದಿ : ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವನ್ನು ವಹಿಸಲಿದ್ದಾರೆ. ರವೀಂದರ್ ಆರ್ಟ್ ಡೈರೆಕ್ಟರ್ ಆಗಿ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್‌ಗಳಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.