Tag: Kiren Rijiju

  • ಮುಂಗಾರು ಅಧಿವೇಶನದಲ್ಲಿ ಆಪರೇಷನ್‌ ಸಿಂಧೂರ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧ: ಕಿರಣ್‌ ರಿಜಿಜು

    ಮುಂಗಾರು ಅಧಿವೇಶನದಲ್ಲಿ ಆಪರೇಷನ್‌ ಸಿಂಧೂರ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧ: ಕಿರಣ್‌ ರಿಜಿಜು

    ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ (Monsoon Session) ಆಪರೇಷನ್‌ ಸಿಂಧೂರ (Operation Sindoor) ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಮುಕ್ತವಾಗಿದೆ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು (Kiren Rijiju) ತಿಳಿಸಿದ್ದಾರೆ.

    ಅಧಿವೇಶನಕ್ಕೆ ಮುಂಚಿತವಾಗಿ ಕರೆಯಲ್ಪಟ್ಟ ಎಲ್ಲಾ ಪಕ್ಷದ ಸಭೆಯಲ್ಲಿ ಮಾತನಾಡಿದ ರಿಜಿಜು, ಸದನದ ಸುಗಮ ಕಾರ್ಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಹೆಚ್ಚಿನ ಸಮನ್ವಯ ಸಾಧಿಸಬೇಕೆಂದು ಹೇಳಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ | ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ

    ಸಂಸತ್ತಿನಲ್ಲಿ ಆಪರೇಷನ್ ಸಿಂಧೂರದಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ನಾವು ತುಂಬಾ ಮುಕ್ತರಾಗಿದ್ದೇವೆ. ಸಂಸತ್ತನ್ನು ಸರಾಗವಾಗಿ ನಡೆಸುವಲ್ಲಿ ಸರ್ಕಾರಿ-ಆಪರೀಟಿ ಸಮನ್ವಯ ಇರಬೇಕು ಎಂದಿದ್ದಾರೆ.

    ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಿದ್ದೇನೆಂದು ನೀಡಿರುವ ಹೇಳಿಕೆಯು ಸಹ ಸಾಕಷ್ಟು ವಿವಾದ ಹುಟ್ಟುಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಜಿಜು, ಸರ್ಕಾರವು ಸದನದಲ್ಲಿ ಎಲ್ಲದಕ್ಕೂ ಉತ್ತರಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ | ಬಾಯ್ಸ್ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್ ಕೇಸ್ – ಬಾಗಲಕೋಟೆ ಆರೋಪಿಗೆ ಜಾಮೀನು

    ಸರ್ವಪಕ್ಷೀಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಸಂಸತ್ತಿನಲ್ಲಿ ಹೈಲೈಟ್ ಮಾಡಲು ಯೋಜಿಸಿರುವ ಹಲವಾರು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

  • ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?

    ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?

    ನವದೆಹಲಿ: ಪಹಲ್ಗಾಮ್ ದಾಳಿ ಪ್ರತೀಕಾರವಾಗಿ ಭಾರತ ನಡೆಸಿದ್ದ ಆಪರೇಷನ್ ಸಿಂಧೂರದಿಂದ (Operation Sindoor) ಉಗ್ರಸ್ತಾನ ಪಾಕ್‌ನ (Pakistan) ಜಂಘಾಬಲವೇ ಕುಸಿದು ಹೋಗಿದೆ. ಇದೀಗ ಭಾರತ (India) ಭಯೋತ್ಪಾದನೆ ನಿರ್ಮೂಲನೆಗೆ ಹೊಸ ಅಸ್ತ್ರ ಪ್ರಯೋಗಿಸಿದೆ. ಈ ಸಲ ಉಗ್ರ ಪೋಷಕ ಪಾಕಿಸ್ತಾನ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಪೂರ್ಣವಿರಾಮ ಹಾಕಲು ಭಾರತ ಪ್ರಮುಖ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ.

    ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ತೋರಿಸಲು ಕೇಂದ್ರ ಸರ್ಕಾರ 7 ಸರ್ವ ಪಕ್ಷ ನಿಯೋಗ ರಚಿಸಿದೆ. ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು (Kiren Rijiju) ಮಾಹಿತಿ ನೀಡಿ ಜಾಗತಿಕ ಮಟ್ಟದಲ್ಲಿ ಪಾಕ್ ಉಗ್ರ ಮುಖವಾಡ ಬಯಲು ಮಾಡಲು ಸರ್ವಪಕ್ಷ ನಿಯೋಗ ವಿವಿಧ ದೇಶಗಳಿಗೆ ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ.

    ಪ್ರಾದೇಶಿಕ ಬಣಗಳಾಗಿ ವಿಂಗಡಿಸಲಾದ ನಿಯೋಗಗಳು ಮೇ 22 ಅಥವಾ 23ರ ವೇಳೆಗೆ 10 ದಿನಗಳ ಕಾಲ ಪ್ರಯಾಣಿಸಲಿವೆ. ಸಂಸದರ ಜೊತೆ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಪ್ರಯಾಣಿಸಿ ವಿಶ್ವದ ಮುಂದೆ ಪಾಕ್‌ನ ಮುಖವಾಡವನ್ನು ಕಳಚಲಿದ್ದಾರೆ. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?


    ಸರ್ವಪಕ್ಷ ಸಂಸದರ ನಿಯೋಗದಲ್ಲಿ ಯಾರಿದ್ದಾರೆ?
    ತಂಡ 1 : ಶಶಿ ತರೂರ್, ಕಾಂಗ್ರೆಸ್
    ತಂಡ 2 : ರವಿಶಂಕರ್ ಪ್ರಸಾದ್, ಬಿಜೆಪಿ
    ತಂಡ 3 : ಸಂಜಯ್ ಕುಮಾರ್ ಝಾ, ಜೆಡಿಯು
    ತಂಡ 4 : ಬೈಜಯಂತ್ ಪಾಂಡಾ, ಬಿಜೆಪಿ
    ತಂಡ 5 : ಕನಿಮೋಳಿ ಕರುಣಾನಿಧಿ, ಡಿಎಂಕೆ
    ತಂಡ 6 : ಸುಪ್ರಿಯಾ ಸುಳೆ, ಎನ್‌ಸಿಪಿ
    ತಂಡ 7 : ಶ್ರೀಕಾಂತ್ ಏಕನಾಥ್ ಶಿಂಧೆ, ಶಿವಸೇನೆ

     

    ರವಿಶಂಕರ್ ಪ್ರಸಾದ್ ನೇತೃತ್ವದ ನಿಯೋಗವು ಸೌದಿ ಅರೇಬಿಯಾ, ಕುವೈತ್, ಬಹರೇನ್‌ ಮತ್ತು ಅಲ್ಜೀರಿಯಾಕ್ಕೆ ಭೇಟಿ ನೀಡುವ ನಿರೀಕ್ಷೆಯಿದ್ದರೆ, ಸುಪ್ರಿಯಾ ಸುಳೆ ಅವರ ತಂಡ ಓಮನ್, ಕೀನ್ಯಾ, ದಕ್ಷಿಣ ಆಫ್ರಿಕಾ ಮತ್ತು ಈಜಿಪ್ಟ್‌ಗೆ ಪ್ರಯಾಣಿಸಲಿದೆ. ಇದನ್ನೂ ಓದಿ: ಪಾಕ್‌, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!

    ಸಂಜಯ್ ಝಾ ನೇತೃತ್ವದ ನಿಯೋಗವು ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾಕ್ಕೆ ಭೇಟಿ ನೀಡಲಿದೆ. ಆರರಿಂದ ಏಳು ಸಂಸದರನ್ನು ಒಳಗೊಂಡಿರುವ ಪ್ರತಿಯೊಂದು ನಿಯೋಗವು ಸುಮಾರು ನಾಲ್ಕರಿಂದ ಐದು ದೇಶಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

    ಈ ನಿಯೋಗದ ಸದಸ್ಯರಲ್ಲಿ ಅನುರಾಗ್ ಠಾಕೂರ್, ಅಪರಾಜಿತ ಸಾರಂಗಿ, ಮನೀಶ್ ತಿವಾರಿ, ಅಸಾದುದ್ದೀನ್ ಓವೈಸಿ, ಅಮರ್ ಸಿಂಗ್, ರಾಜೀವ್ ಪ್ರತಾಪ್ ರೂಡಿ, ಸಮಿಕ್ ಭಟ್ಟಾಚಾರ್ಯ, ಬ್ರಿಜ್ ಲಾಲ್, ಸರ್ಫರಾಜ್ ಅಹ್ಮದ್, ಪ್ರಿಯಾಂಕಾ ಚತುರ್ವೇದಿ, ವಿಕ್ರಮಜಿತ್ ಸಾಹ್ನಿ, ಸಸ್ಮಿತ್ ಪಾತ್ರ ಮತ್ತು ಭುವನೇಶ್ವರ ಕಲಿತಾ ಮುಂತಾದ ಸಂಸದರು ಭಾಗಿಯಾಗಲಿದ್ದಾರೆ.

    ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ಸಂಸದರಲ್ಲದಿದ್ದರೂ, ಝಾ ನೇತೃತ್ವದ ನಿಯೋಗದಲ್ಲಿ ಸೇರಿದ್ದಾರೆ. ಸರ್ಕಾರವು ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಸಹ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು ಆದರೆ ಆರೋಗ್ಯ ಕಾರಣಗಳಿಂದ ಹಿಂದೆ ಸರಿದಿದ್ದಾರೆ. ಒಟ್ಟು 45 ಸಂಸದರು ವಿದೇಶಗಳಿಗೆ ಭೇಟಿ ನೀಡಿ ಪಾಕ್‌ ವಿರುದ್ಧ ಮಾತನಾಡಲಿದ್ದಾರೆ.

  • `ಆಪರೇಷನ್ ಸಿಂಧೂರ’ ಇದು ನಿರಂತರ ಕಾರ್ಯಾಚರಣೆ – ಕಿರಣ್ ರಿಜಿಜು

    `ಆಪರೇಷನ್ ಸಿಂಧೂರ’ ಇದು ನಿರಂತರ ಕಾರ್ಯಾಚರಣೆ – ಕಿರಣ್ ರಿಜಿಜು

    ನವದೆಹಲಿ: ಪಾಕ್ (Pakistan) ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ (Indian Army) ನಡೆಸಿದ `ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಿರಂತರವಾದದ್ದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದರು.

    ಪಹಲ್ಗಾಮ್ ದಾಳಿಯಲ್ಲಿ (Pahalgam Terrorist Attack) ಪ್ರಾಣಬಿಟ್ಟ 26 ಜನರ ಸಾವಿಗೆ ಪ್ರತೀಕಾರವಾಗಿ ಭಾರತೀಯ ಸೇನೆ `ಆಪರೇಷನ್ ಸಿಂಧೂರ’ (Operation Sindoor) ಹೆಸರಿನಲ್ಲಿ ಮಂಗಳವಾರ ತಡರಾತ್ರಿ ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ.ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼದಲ್ಲಿ 100 ಉಗ್ರರ ಹತ್ಯೆ – ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರದಿಂದ ಮಾಹಿತಿ

    ಇಂದು ನಡೆದ ಸರ್ವಪಕ್ಷ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, `ಆpಪರೇಷನ್ ಸಿಂಧೂರ’ದಲ್ಲಿ ಕನಿಷ್ಠ 100 ಭಯೋತ್ಪಾದಕರ ಹತ್ಯೆಯಾಗಿದೆ. ಈ ಕಾರ್ಯಾಚರಣೆ ಹೀಗೆ ಮುಂದುವರಿಯಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದ್ದು, ಅವರು ಹೇಳಿದಂತೆ ಇದು ಒಂದು ನಿರಂತರ ಕಾರ್ಯಾಚರಣೆಯಾಗಿದೆ. ಸಶಸ್ತ್ರ ಪಡೆಗಳು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ 9 ಭಯೋತ್ಪಾದಕ ಅಡಗುತಾಣಗಳು ಧ್ವಂಸಗೊಂಡಿವೆ. ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರತಿಪಕ್ಷಗಳು ಭರವಸೆ ನೀಡಿವೆ. `ಆಪರೇಷನ್ ಸಿಂಧೂರ’ ಯಶಸ್ಸಿಗೆ ಪಕ್ಷಾತೀತವಾಗಿ ಎಲ್ಲರೂ ಭಾರತೀಯ ಸೇನೆಯನ್ನು ಅಭಿನಂದಿಸಿದರು ಎಂದು ತಿಳಿಸಿದರು.

    ಸದ್ಯ ದೇಶವು ಎದುರಿಸುತ್ತಿರುವ ಪ್ರಮುಖ ಸವಾಲನ್ನು ಗುರುತಿಸಿ ಪ್ರತಿಯೊಬ್ಬ ನಾಯಕರು ಜವಾಬ್ದಾರಿ ಮತ್ತು ಪ್ರಬುದ್ಧತೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಂಡರೆ ಭಾರತ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಆದರೆ ಈಗಾಗಲೇ ಆಪರೇಷನ್ ಸಿಂಧೂರಕ್ಕೆ ಪ್ರತಿಯಾಗಿ, ಪಾಕಿಸ್ತಾನಿ ಸೇನೆಯು ಪೂಂಚ್-ರಾಜೌರಿ ಪ್ರದೇಶದ ನಿಯಂತ್ರಣ ರೇಖೆಯುದ್ದಕ್ಕೂ ಫಿರಂಗಿ ದಾಳಿ ನಡೆಸಿ 15 ನಾಗರಿಕರನ್ನು ಬಲಿಪಡೆದುಕೊಂಡಿದೆ ಎಂದರು.ಇದನ್ನೂ ಓದಿ: ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು – ಖರ್ಗೆ ಅಸಮಾಧಾನ

  • Waqf Debate |ವರ್ಷಕ್ಕೆ 12 ಸಾವಿರ ಕೋಟಿ ಆದಾಯ ಸಿಗ್ಬೇಕು, ಆದ್ರೆ ಸಿಕ್ಕಿದ್ದು 166 ಕೋಟಿ: ಕಾಂಗ್ರೆಸ್‌ ವಿರುದ್ಧ ರಿಜಿಜು ಕಿಡಿ

    Waqf Debate |ವರ್ಷಕ್ಕೆ 12 ಸಾವಿರ ಕೋಟಿ ಆದಾಯ ಸಿಗ್ಬೇಕು, ಆದ್ರೆ ಸಿಕ್ಕಿದ್ದು 166 ಕೋಟಿ: ಕಾಂಗ್ರೆಸ್‌ ವಿರುದ್ಧ ರಿಜಿಜು ಕಿಡಿ

    ನವದೆಹಲಿ: “ದೇಶದ ವಕ್ಫ್‌ ಬೋರ್ಡ್‌ಗಳಿಂದ (Waqf Board) ಕನಿಷ್ಟ ವರ್ಷಕ್ಕೆ 12 ಸಾವಿರ ಕೋಟಿ ರೂ. ಆದಾಯ ಸಿಗಬೇಕು. ಆದರೆ ವಕ್ಫ್‌ನಿಂದ ಸಿಕ್ಕಿದ್ದು ಕೇವಲ 166 ಕೋಟಿ ರೂ. ಆದಾಯ”

    ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ (Waqf Bill) ಮಂಡಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್‌ ರಿಜಿಜು (Kiren Rijiju) ಕಾಂಗ್ರೆಸ್‌ ನೇತೃತ್ವದ ಯುಪಿಎ (UPA) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    2004 ರ ಹೊತ್ತಿಗೆ ವಕ್ಫ್ ಬಳಿ ಒಟ್ಟು 4.9 ಲಕ್ಷ ರೂ. ಮೌಲ್ಯದ ಆಸ್ತಿ ಇತ್ತು ಮತ್ತು ಆದಾಯ ಕೇವಲ 163 ಕೋಟಿ ರೂ.ಗಳಷ್ಟಿತ್ತು. ಆದರೆ 2013 ರ ತಿದ್ದುಪಡಿಯ ನಂತರ ಆದಾಯವು 166 ಕೋಟಿ ರೂ.ಗೆ ಏರಿಕೆಯಾಯಿತು. ಕೇವಲ 3 ಕೋಟಿ ಮಾತ್ರ ಏರಿಕೆ ಹೇಗಾಯ್ತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಕ್ಫ್‌ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ

    ಇಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ತಿ ಇರುವ ವಕ್ಫ್‌ನಿಂದ ಅಲ್ಪ ಆದಾಯವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಆದಾಯ ಕನಿಷ್ಠವಾದರೂ 12 ಸಾವಿರ ಕೋಟಿ ರೂ.ಗಳಾಗಿರಬೇಕು. ವಕ್ಫ್ ಆಸ್ತಿಯ ಲಾಭ ಬಡ ಮುಸ್ಲಿಮರಿಗೆ ಆಗಬೇಕು. ಈ ಉದ್ದೇಶ ಈಡೇರಿಕೆಗೆ ವಕ್ಫ್ ಮಸೂದೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಾರದೇ ಇದ್ದರೆ ಈ ಸಂಸತ್ತನ್ನೇ ಕಾಂಗ್ರೆಸ್‌ ವಕ್ಫ್‌ಗೆ ನೀಡ್ತಿತ್ತು: ಕಿರಣ್‌ ರಿಜಿಜು

    ವಕ್ಫ್ ಆಸ್ತಿಯನ್ನು ಸರಿಯಾಗಿ ಬಳಸಿಕೊಂಡರೆ ವರ್ಷಕ್ಕೆ 12,000 ಕೋಟಿ ರೂ. ಆದಾಯ ಗಳಿಸಬಹುದು ಎಂದು ಸಾಚಾರ್ ಸಮಿತಿ ಹೇಳಿತ್ತು. 2006 ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ ಸಾಚಾರ್ ಸಮಿತಿಯು, ಈ ಆಸ್ತಿಗಳನ್ನು ಸಮರ್ಥ ಮತ್ತು ಮಾರುಕಟ್ಟೆ ಬಳಕೆಗೆ ಒಳಪಡಿಸಿ ಕನಿಷ್ಟ 10% ರಷ್ಟು ಬಳಕೆ ಮಾಡಿದರೆ ವರ್ಷಕ್ಕೆ ಸುಮಾರು 12,000 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಬಹುದು ಎಂದು ಉಲ್ಲೇಖಿಸಿತ್ತು.

    ವಕ್ಫ್‌ ಆಸ್ತಿ ಎಷ್ಟಿದೆ?
    ಸರ್ಕಾರಿ ಮಾಹಿತಿಯ ಪ್ರಕಾರ, ವಕ್ಫ್ ಮಂಡಳಿಗಳು ಪ್ರಸ್ತುತ ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ 8.7 ಲಕ್ಷ ಆಸ್ತಿಗಳ ನಿಯಂತ್ರಣ ಹೊಂದಿದೆ. ಈ ಎಲ್ಲಾ ಆಸ್ತಿಗಳ ಮೌಲ್ಯ 1.2 ಲಕ್ಷ ಕೋಟಿ ರೂ. ಸಶಸ್ತ್ರ ಪಡೆಗಳು ಮತ್ತು ಭಾರತೀಯ ರೈಲ್ವೆಯ ನಂತರ, ವಕ್ಫ್ ಮಂಡಳಿಯು ಭಾರತದಲ್ಲಿ ಅತಿಹೆಚ್ಚು ಭೂಮಿಯನ್ನು ಹೊಂದಿದ ಸಂಸ್ಥೆಯಾಗಿದೆ.

    ವಕ್ಫ್ ಮಂಡಳಿಯ ಅಡಿಯಲ್ಲಿ 8,72,328 ಸ್ಥಿರ ಮತ್ತು 16,713 ಚರ ಆಸ್ತಿಗಳನ್ನು ನೋಂದಣಿ ಮಾಡಲಾಗಿದೆ. ವಕ್ಫ್ ಮಂಡಳಿಯ ಅಡಿಯಲ್ಲಿ 3,56, 051 ವಕ್ಫ್ ಎಸ್ಟೇಟ್‌ಗಳು ನೋಂದಾಯಿಸಲ್ಪಟ್ಟಿದೆ. ಅತಿ ಹೆಚ್ಚು ವಕ್ಫ್‌ ಆಸ್ತಿ ಇರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ (2,32,547) ಮೊದಲ ಸ್ಥಾನದಲ್ಲಿದ್ದರೆ ಪಶ್ಚಿಮ ಬಂಗಾಳ (80,480) ಎರಡನೇ ಸ್ಥಾನ ಹೊಂದಿದೆ.

     

  • ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ನವದೆಹಲಿ: ವಿಪಕ್ಷಗಳ ವ್ಯಾಪಕ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಇಂದು ವಕ್ಫ್‌ ತಿದ್ದುಪಡಿ ಮಸೂದೆಯನ್ನು (Waqf Amendment Bill tak) ಮಂಡಿಸಲಾಯಿತು.

    ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಮಸೂದೆಯನ್ನು ಮಂಡಿಸಿದರು.

    ಎರಡೂ ಮನೆಗಳ ಜಂಟಿ ಸಮಿತಿಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಬಗ್ಗೆ ನಡೆದ ಚರ್ಚೆಯನ್ನು ಭಾರತದ ಸಂಸತ್ತಿನ ಇತಿಹಾಸದಲ್ಲಿ ಇಲ್ಲಿಯವರೆಗೆ ಮಾಡಲಾಗಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಜಂಟಿ ಸಮಿತಿಯ ಎಲ್ಲ ಸದಸ್ಯರಿಗೆ ನಾನು ಧನ್ಯವಾದ ಮತ್ತು ಅಭಿನಂದಿಸುತ್ತೇನೆ. ಇಲ್ಲಿಯವರೆಗೆ, ವಿವಿಧ ಸಮುದಾಯಗಳ ರಾಜ್ಯ ಹೊಂದಿರುವವರ ಒಟ್ಟು 284 ನಿಯೋಗಗಳು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಸಮಿತಿಯ ಮುಂದೆ ಮಂಡಿಸಿವೆ. 25 ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಪ್ರಾಂತ್ಯಗಳ ವಕ್ಫ್‌ ಮಂಡಳಿಗಳು ಸಹ ತಮ್ಮ ಸಲ್ಲಿಕೆಗಳನ್ನು ಪ್ರಸ್ತುತಪಡಿಸಿವೆ ಎಂದು ರಿಜಿಜು ತಿಳಿಸಿದ್ದಾರೆ.

    ಭರವಸೆ ಮಾತ್ರವಲ್ಲ, ಈ ಮಸೂದೆಯನ್ನು ವಿರೋಧಿಸುವವರು ಸಹ ತಮ್ಮ ಹೃದಯದಲ್ಲಿ ಬದಲಾವಣೆಯನ್ನು ಹೊಂದಿರುತ್ತಾರೆ ಎಂದು ನನಗೆ ಖಾತ್ರಿಯಿದೆ. ಪ್ರತಿಯೊಬ್ಬರೂ ಈ ಮಸೂದೆಯನ್ನು ಸಕಾರಾತ್ಮಕ ಮನೋಭಾವದಿಂದ ಬೆಂಬಲಿಸುತ್ತಾರೆ ಎಂದು ರಿಜಿಜು ಆಶಯ ವ್ಯಕ್ತಪಡಿಸಿದ್ದಾರೆ.

  • RSS ಹೊಗಳೋದ್ರಲ್ಲಿ ತಪ್ಪೇನು?, ಅವಿಶ್ವಾಸ ನಿರ್ಣಯ ಮಂಡಿಸಿರುವುದು ವಿಷಾದನೀಯ: ಕಿರಣ್ ರಿಜಿಜು

    RSS ಹೊಗಳೋದ್ರಲ್ಲಿ ತಪ್ಪೇನು?, ಅವಿಶ್ವಾಸ ನಿರ್ಣಯ ಮಂಡಿಸಿರುವುದು ವಿಷಾದನೀಯ: ಕಿರಣ್ ರಿಜಿಜು

    ನವದೆಹಲಿ: ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರ ಪದಚ್ಯುತಿಗೆ ಒತ್ತಾಯಿಸಿ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿರುವುದು ಅತ್ಯಂತ ವಿಷಾದನೀಯ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದ್ದಾರೆ.

    ಮೇಲ್ಮನೆಯ ಸಭಾಪತಿಯಾಗಿ ಪಕ್ಷಪಾತ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ, ಧನಕ‌ರ್ (Jagdeep Dhankhar) ಅವರನ್ನು ಪದಚ್ಯುತಿಗೊಳಿಸಲು ರಾಜ್ಯಸಭೆಯಲ್ಲಿ ಗೊತ್ತುವಳಿ ಮಂಡಿಸಲು ಇಂಡಿಯಾ ಬಣದ ಪಕ್ಷಗಳ ಸದಸ್ಯರು ಮಂಗಳವಾರ ನೋಟಿಸ್‌ ನೀಡಿದ್ದಾರೆ. ಈ ಕುರಿತು ರಿಜಿಜು ಮಾತನಾಡಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ ನೋಟಿಸ್‌ನಲ್ಲಿ ಈ ಹಿಂದೆ ಧನಕರ್‌ ಅವರು ಆರ್‌ಎಸ್‌ಎಸ್‌ ಅನ್ನು ಹೇಗೆ ಹೊಗಳಿದ್ದರು ಎಂಬ ಅಂಶವನ್ನು ಕಾಂಗ್ರೆಸ್‌ ಉಲ್ಲೇಖಿಸಿದೆ. ಅಲ್ಲದೇ ಧನಕರ್‌ ಆರ್‌ಎಸ್‌ಎಸ್‌ನ ಏಕಲವ್ಯ ಎಂದು ಬಣ್ಣಿಸಿದೆ. ಆರ್‌ಎಸ್‌ಎಸ್‌ ನಮ್ಮ ದೇಶದ ಹೆಮ್ಮೆಯ ಸಂಘಟನೆಯಾಗಿದೆ. ಆರ್‌ಎಸ್‌ಎಸ್‌ ಹೊಗಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

    ಭಾರತ ದೇಶದ ಯಾವುದೇ ಸಂಘಟನೆಯನ್ನು ಹೊಗಳುವುದು ಕಾನೂನು ಬಾಹಿರ ಆಗುವುದಿಲ್ಲ. ಉಪರಾಷ್ಟ್ರಪತಿಗಳು ಆರ್‌ಎಸ್‌ಎಸ್ ಬಗ್ಗೆ ಒಳ್ಳೆಯ ಮಾತು ಆಡಿರುವುದನ್ನ ಅಪರಾಧ ಅಂತ ಹೇಗೆ ಪರಿಗಣಿಸಿದೆ ಎಂಬುದೇ ಆಶ್ಚರ್ಯವಾಗಿದೆ. ಗಾಂಧಿ ಕುಟುಂಬದೊಂದಿಗೆ ಜಾರ್ಜ್ ಸೊರೊಸ್ ಸಂಪರ್ಕದ ವಿಚಾರವನ್ನು ದಿಕ್ಕುತಪ್ಪಿಸಲು ಕಾಂಗ್ರೆಸ್‌ ತಂತ್ರ ಮಾಡಿದೆ ಎಂದು ರಿಜಿಜು ಹೇಳಿದ್ದಾರೆ.

    ಧನಕರ್ ಅವರು ಅತ್ಯಂತ ವೃತ್ತಿಪರ ಮತ್ತು ನಿಷ್ಪಕ್ಷಪಾತ ಧೋರಣೆ ಉಳ್ಳವರು. ಈ ಅವಿಶ್ವಾಸ ನಿರ್ಣಯ ಅಂಗೀಕಾರವಾಗಬೇಕಾದರೆ ಸರಳ ಬಹುಮತ ಬೇಕು. ಆದರೆ, ವಿಪಕ್ಷಗಳಿಗೆ ಅಷ್ಟು ಸದಸ್ಯರ ಬೆಂಬಲ ಇಲ್ಲ. ಆದರೂ ಸಂಸದೀಯ ಪ್ರಜಾಪ್ರಭುತ್ವಕ್ಕಾಗಿ ಹೋರಾಡಲು ಇದೊಂದು ಅಸ್ತ್ರ ಎಂದು ವಿಪಕ್ಷಗಳ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

    ಪದಚ್ಯುತಗೊಳಿಸಲು ರಾಜ್ಯಸಭೆಯಲ್ಲಿ ಗೊತ್ತುವಳಿ ಮಂಡಿಸಲು ಇಂಡಿಯಾ ಬಣದ ಪಕ್ಷಗಳ ಸದಸ್ಯರು ಮಂಗಳವಾರ ನೋಟಿಸ್‌ ನೀಡಿದ್ದಾರೆ. ಈ ಅವಿಶ್ವಾಸ ನಿರ್ಣಯ ಅಂಗೀಕಾರವಾಗಬೇಕಾದರೆ ಸರಳ ಬಹುಮತ ಬೇಕು. ಆದರೆ, ವಿಪಕ್ಷಗಳಿಗೆ ಅಷ್ಟು ಸದಸ್ಯರ ಬೆಂಬಲ ಇಲ್ಲ. ಆದರೂ ಸಂಸದೀಯ ಪ್ರಜಾಪ್ರಭುತ್ವಕ್ಕಾಗಿ ಹೋರಾಡಲು ಇದೊಂದು ಅಸ್ತ್ರ ಎಂದು ವಿಪಕ್ಷಗಳ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

    ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ, ಸಿಪಿಐ-ಎಂ, ಜೆಂಎಂ, ಎಎಪಿ, ಸಮಾಜವಾದಿ ಪಕ್ಷಗಳ 60 ಸದಸ್ಯರು ಸಹಿ ಹಾಕಿದ್ದ ನೋಟಿಸ್ ಅನ್ನು ವಿಪಕ್ಷಗಳ ಪರವಾಗಿ ಕಾಂಗ್ರೆಸ್‌ ಸದಸ್ಯರಾದ ಜೈರಾಮ್ ರಮೇಶ್, ನಾಸಿ‌ರ್ ಹುಸೇನ್‌ ಅವರು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ.

  • ಭಾರತ ವಿರೋಧಿ ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್‌ ರಿಜಿಜು

    ಭಾರತ ವಿರೋಧಿ ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್‌ ರಿಜಿಜು

    ನವದೆಹಲಿ: ಹಂಗೇರಿ-ಅಮೆರಿಕನ್ ಉದ್ಯಮಿ ಜಾರ್ಜ್ ಸೊರೊಸ್ (George Soros) ಅವರ ಸಂಸ್ಥೆಯ ಜೊತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ನಂಟು ಬಹಳ ಗಂಭೀರ ವಿಚಾರ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು (Kiren Rijiju) ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ಧ. ಭಾರತ ವಿರೋಧಿಗಳ ವಿರುದ್ಧ ದೇಶದ ನಾಗರಿಕರು ಒಗ್ಗಟ್ಟಿನಿಂದ ಇರಬೇಕೆಂದು ಅವರು ಮನವಿ ಮಾಡಿದರು. ಜಾರ್ಜ್‌ ಸೊರೊಸ್‌ ವಿಚಾರವನ್ನು ಈಗಾಗಲೇ ನಾವು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದೇವೆ. ಸೊರೊಸ್ ಭಾರತದ ವಿರುದ್ಧ ಕೆಲಸ ಮಾಡುವ ವ್ಯಕ್ತಿ ಎಂದು ದೂರಿದರು.

     

    ಪ್ರಸ್ತುತ ದೇಶದ ಮುಂದಿರುವ ಸಮಸ್ಯೆ ಬಹಳ ಗಂಭೀರವಾಗಿದೆ. ಕೆಲವು ಸಮಸ್ಯೆಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಜಾರ್ಜ್ ಸೊರೊಸ್ ಅವರ ಒಳಗೊಳ್ಳುವಿಕೆ ಮತ್ತು ಅವರ ಲಿಂಕ್‌ಗಳು ಅದು ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅಗಲಿ ನಾವು ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ವಿಷಯವಾಗಿ ನೋಡುವುದಿಲ್ಲ. ಯಾವುದೇ ಭಾರತೀಯರು ಭಾರತದ ವಿರುದ್ಧ ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿದ್ದರೆ ಅವುಗಳನ್ನು ಪರಿಹರಿಸಬೇಕು ಎಂದರು. ಇದನ್ನೂ ಓದಿ: ಸೊರೊಸ್‌ ಜೊತೆ ಕೈಜೋಡಿಸಿರುವ ರಾಹುಲ್‌ ದೇಶದ್ರೋಹಿ: ಸಂಬಿತ್‌ ಪಾತ್ರ ಕಿಡಿ

    ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾ ಗಾಂಧಿ ಅವರಿಗೆ ನಂಟು ಇದೆ ಎಂದು ಬಿಜೆಪಿ ಆರೋಪಿಸಿದ್ದಕ್ಕೆ ಸೋಮವಾರದ ಕಲಾಪದಲ್ಲಿ ಕಾಂಗ್ರೆಸ್‌ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದರು. ಎರಡು ಕಡೆಯಿಂದ ಘೋಷಣೆ ಕೂಗಿದ ಬೆನ್ನಲ್ಲೇ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

    ಸೋನಿಯಾ ಗಾಂಧಿ ಮತ್ತು ಸೊರೊಸ್‌ ಸಂಸ್ಥೆಯ ಜೊತೆ ನಂಟು ಇದೆ ಎನ್ನುವುದಕ್ಕೆ ಬಿಜೆಪಿ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದೆ.

     

    ಏನಿದು ಸೋನಿಯಾಗೆ ನಂಟು?
    ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜಾರ್ಜ್‌ ಸೊರೋಸ್‌ ಫೌಂಡೇಶನ್‌ನಿಂದ ಹಣಕಾಸು ನೆರವು ಪಡೆಯುವ ಹಾಗೂ ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗುವುದನ್ನು ಬೆಂಬಲಿಸಿದ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾರೆ.

    ಸೊರೋಸ್‌ರಿಂದ ನೆರವು ಪಡೆಯುವ ‘ಫೋರಂ ಆಫ್‌ ಡಿ ಡೆಮಾಕ್ರಟಿಕ್‌ ಲೀಡರ್ಸ್‌ ಇನ್‌ ಏಷ್ಯಾ ಪೆಸಿಫಿಕ್‌’ (FDL-AP) ಸಂಸ್ಥೆ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವಾಗಿ ಪರಿಗಣಿಸುತ್ತದೆ. ಸೋನಿಯಾ ಗಾಂಧಿ ಇದರ ಸಹ ಅಧ್ಯಕ್ಷೆಯಾಗಿದ್ದಾರೆ. ಇದು ಭಾರತದ ಆಂತರಿಕ ವಿಷಯಗಳಲ್ಲಿ ವಿದೇಶಿ ಕಂಪನಿಗಳ ಪ್ರಭಾವವನ್ನು ತೋರಿಸುತ್ತದೆ. ಇದನ್ನೂ ಓದಿ: ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

    ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಸೊರೋಸ್‌ರನ್ನು ಹಳೆಯ ಮಿತ್ರ ಎಂದು ಕರೆದಿದ್ದ ಪೋಸ್ಟ್‌ ಅನ್ನು ಹಾಕಿದೆ. ಅದಾನಿ ಕುರಿತು ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯನ್ನು ಜಾರ್ಜ್ ಸೊರೊಸ್ ಅವರ ಒಸಿಸಿಆರ್‌ಪಿ (OCCRP) ನೇರ ಪ್ರಸಾರ ಮಾಡಿದೆ. ಇದು ಅವರ ಅಪಾಯಕಾರಿ ಸಂಬಂಧವನ್ನು ತಿಳಿಸುತ್ತದೆ. ಭಾರತೀಯ ಆರ್ಥಿಕತೆಯನ್ನು ಹಳಿತಪ್ಪಿಸುವ ಅವರ ಪ್ರಯತ್ನಗಳನ್ನು ಇದು ಎತ್ತಿ ತೋರಿಸುತ್ತದೆ.

     

  • ವಕ್ಫ್ ಬೋರ್ಡ್‌ ಅಧಿಕಾರವನ್ನು ಕಡಿಮೆ ಮಾಡುವ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ವಕ್ಫ್ ಬೋರ್ಡ್‌ ಅಧಿಕಾರವನ್ನು ಕಡಿಮೆ ಮಾಡುವ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ನವದೆಹಲಿ: ವಕ್ಫ್ ಬೋರ್ಡ್‌ (Waqf Board) ಅಧಿಕಾರವನ್ನು ಕಡಿಮೆ ಮಾಡುವ ವಕ್ಫ್ (ತಿದ್ದುಪಡಿ) ಮಸೂದೆ 2024 ಕೇಂದ್ರ ಸರ್ಕಾರ ಲೋಕಸಭೆಯಲ್ಲಿ (Lok Sabha) ಮಂಡಿಸಿದೆ.

    ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ಖಾತೆಯ ಸಚಿವ ಕಿರಣ್‌ ರಿಜುಜು (Kiren Rijiju) ಅವರು ಮಸೂದೆಯನ್ನು ಮಂಡಿಸಿದರು. ಈ ಮಸೂದೆ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

    ಪ್ರಸ್ತುತ ವಕ್ಫ್ ಬೋರ್ಡ್ ಹೊಂದಿರುವ ಏಕಪಕ್ಷೀಯ ಅಧಿಕಾರಗಳನ್ನು ಕಡಿಮೆ ಮಾಡಲು ಕೇಂದ್ರ ಉದ್ದೇಶಿಸಿದೆ. ಹಿಂದಿನ ಕಾಯ್ದೆಯಲ್ಲಿ ವಕ್ಫ್‌ ಬೋರ್ಡ್‌ಗೆ ಹೆಚ್ಚಿನ ಅಧಿಕಾರ ನೀಡಿತ್ತು. ಇದರ ಪ್ರಕಾರ ಭೂಮಿಯನ್ನು ವಕ್ಫ್ ಬೋರ್ಡ್‌ನಿಂದ ಹಿಂಪಡೆಯುವುದು ಅಸಾಧ್ಯವಾಗಿತ್ತು. ಇದಾದ ನಂತರ ವಕ್ಫ್ ಬೋರ್ಡ್ ತೆಗೆದುಕೊಳ್ಳುವ ನಿರ್ಣಯಗಳು ಪದೇ ಪದೇ ವಿವಾದಕ್ಕೆ ಕಾರಣವಾಗುತ್ತಿದ್ದವು. ಇದನ್ನು ತಡೆಯುವುದರ ಸಲುವಾಗಿ ವಕ್ಫ್ ಕಾಯ್ದೆಗೆ ಕೇಂದ್ರ ತಿದ್ದುಪಡಿ ತಂದಿದೆ.

    ಈ ಮಸೂದೆಗೆ ಸಂಸತ್ ಅನುಮೋದನೆ ನೀಡಿದಲ್ಲಿ ಮುಂದೆ ಯಾವುದೇ ಆಸ್ತಿಯನ್ನು ಇದು ತನ್ನದು ಎಂದು ಘೋಷಿಸಿಕೊಳ್ಳಲು ವಕ್ಫ್‌ಬೋರ್ಡ್‌ಗೆ ಸಾಧ್ಯವಾಗುವುದಿಲ್ಲ. ಕೇಂದ್ರದ ಈ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸುತ್ತಿವೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಪವನ್ ಕಲ್ಯಾಣ್

    ಕಾಯ್ದೆಯಲ್ಲಿ ಏನಿದೆ?
    ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಮಸೂದೆಯು ವಕ್ಫ್ ಮಂಡಳಿಗಳ ಆಸ್ತಿಯನ್ನು ನಿರ್ವಹಿಸಲು ಅಧಿಕಾರವನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿದೆ ಮತ್ತು ಹೆಚ್ಚಿನ ಸರ್ಕಾರಿ ನಿಯಂತ್ರಣವನ್ನು ಒದಗಿಸುತ್ತದೆ.

    ಯಾವುದೇ ವಕ್ಫ್ ಆಸ್ತಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿಯನ್ನು ಕಡ್ಡಾಯಗೊಳಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ, ಇದರಿಂದ ಆಸ್ತಿ ಮೌಲ್ಯಮಾಪನ ಮಾಡಬಹುದು.

     

    ಈ ಕಾಯಿದೆ ಪ್ರಾರಂಭವಾಗುವ ಮೊದಲು ಅಥವಾ ನಂತರ ವಕ್ಫ್ ಆಸ್ತಿ ಎಂದು ಗುರುತಿಸಲಾದ ಅಥವಾ ಘೋಷಿಸಲಾದ ಯಾವುದೇ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕಾಯ್ದೆ ಹೇಳುತ್ತದೆ. ವಕ್ಫ್‌ ಆಸ್ತಿಯೇ ಅಥವಾ ಸರ್ಕಾರಿ ಭೂಮಿಯೇ ಎಂಬುದನ್ನು ಜಿಲ್ಲಾಧಿಕಾರಿಗಳು ನಿರ್ಧರಿಸಬೇಕಾಗುತ್ತದೆ. ಜಿಲ್ಲಾಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ.

    ಒಮ್ಮೆ ಜಿಲ್ಲಾಧಿಕಾರಿಗಳು ನಿರ್ಧರಿಸಿದ ನಂತರ ಜಿಲ್ಲಾಧಿಕಾರಿಗಳು ಕಂದಾಯ ದಾಖಲೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬಹುದು ಮತ್ತು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬಹುದು. ಜಿಲ್ಲಾಧಿಕಾರಿ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವವರೆಗೆ ಅಂತಹ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿದ್ದುಪಡಿ ಮಸೂದೆ ಹೇಳುತ್ತದೆ.

  • ಜೂನ್‌ 24 ರಂದು 18ನೇ ಲೋಕಸಭೆಯ ಅಧಿವೇಶನ ಆರಂಭ

    ಜೂನ್‌ 24 ರಂದು 18ನೇ ಲೋಕಸಭೆಯ ಅಧಿವೇಶನ ಆರಂಭ

    ನವದೆಹಲಿ: 18ನೇ ಲೋಕಸಭೆಯ (18th Lok Sabaha) ಮೊದಲ ಅಧಿವೇಶನ (Session) ಜೂನ್‌ 24 ರಂದು ಆರಂಭವಾಗಿ  ಜುಲೈ 3 ರಂದು ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಬುಧವಾರ ತಿಳಿಸಿದ್ದಾರೆ.

    9 ದಿನಗಳ ವಿಶೇಷ ಅಧಿವೇಶನದಲ್ಲಿ ಲೋಕಸಭೆಯ ಸ್ಪೀಕರ್ (Speaker) ಅವರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಹೊಸ ಸಂಸದರು (MP) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಸಭಾ ಅಧಿವೇಶನ ಜೂನ್‌ 26 ರಂದು ಆರಂಭವಾಗಿ ಜುಲೈ 3 ರಂದು ಕೊನೆಯಾಗಲಿದೆ. ಇದನ್ನೂ ಓದಿ: ವಾರಣಾಸಿಯಿಂದ ಪ್ರಿಯಾಂಕಾ ಸ್ಪರ್ಧಿಸುತ್ತಿದ್ರೆ ಮೋದಿ 2-3 ಲಕ್ಷ ಮತಗಳಿಂದ ಸೋಲ್ತಿದ್ರು: ರಾಹುಲ್‌ ಗಾಂಧಿ

    ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

  • ಕೇಂದ್ರ ಕ್ಯಾಬಿನೆಟ್ ಪುನರ್‌ರಚನೆ – ಅರ್ಜುನ್ ಮೇಘವಾಲ್‍ಗೆ ಕಾನೂನು, ರಿಜಿಜುಗೆ ಭೂ ವಿಜ್ಞಾನ

    ಕೇಂದ್ರ ಕ್ಯಾಬಿನೆಟ್ ಪುನರ್‌ರಚನೆ – ಅರ್ಜುನ್ ಮೇಘವಾಲ್‍ಗೆ ಕಾನೂನು, ರಿಜಿಜುಗೆ ಭೂ ವಿಜ್ಞಾನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸಂಪುಟ ಪುನರ್‌ರಚನೆಯಾಗಿದ್ದು (Cabinet) ಸಚಿವರಾದ ರಿಜಿಜು (Kiren Rijiju) ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರ ಖಾತೆ ಬದಲಾವಣೆಯಾಗಿದೆ.

    ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜುಗೆ ಭೂ ವಿಜ್ಞಾನ ಸಚಿವಾಲಯದ ಖಾತೆಯನ್ನು ನೀಡಲಾಗಿದೆ. ಸಂಸದೀಯ ವ್ಯವಹಾರ ಮತ್ತು ಸಂಸ್ಕೃತಿ ಖಾತೆಯ ರಾಜ್ಯ ಸಚಿವರಾಗಿದ್ದ ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಅವರಿಗೆ ಕಾನೂನು ಸಚಿವ (Law Minister) ಸ್ಥಾನ ನೀಡಲಾಗಿದೆ. ಇದನ್ನೂ ಓದಿ: ಗಾಂಧಿ ಕುಟುಂಬದವರ ಆದೇಶಕ್ಕೆ ನಾವು ತಲೆ ಬಾಗಲೇಬೇಕು: ಡಿಕೆಶಿ

    ರಿಜಿಜು 2021ರ ಜು.8 ರಂದು ಕಾನೂನು ಮತ್ತು ನ್ಯಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು, ಅವರು ಮೇ 2019 ರಿಂದ ಜು. 2021 ರವರೆಗೆ ಯುವ ಸಬಲೀಕರಣ ಮತ್ತು ಕ್ರೀಡೆಗಳ ರಾಜ್ಯ (ಸ್ವತಂತ್ರ ಖಾತೆ)ಯನ್ನು ನೋಡಿಕೊಳ್ಳುತ್ತಿದ್ದರು.

    ಈ ವಾರ ನ್ಯಾಯಾಧೀಶರ ನೇಮಕಾತಿ ನಡೆಸುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ರಿಜಿಜು ನೀಡಿದ್ದ ಹೇಳಿಕೆಗಳ ವಿರುದ್ಧ ಬಾಂಬೆ ವಕೀಲರ ಸಂಘ (ಬಿಎಲ್‍ಎ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಈ ಹೇಳಿಕೆ ಮತ್ತು ನಡವಳಿಕೆಯಿಂದಾಗಿ ಕೇಂದ್ರ ಸಚಿವರಿಗೆ ಸಂವಿಧಾನ ಮೇಲೆ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಬಿಎಲ್‍ಎ ಆರೋಪಿಸಿತ್ತು. ಅಷ್ಟೇ ಅಲ್ಲದೇ ಬಿಎಲ್‍ಎ ರಿಜಿಜು ಅವರು ಕಾನೂನು ಖಾತೆಯನ್ನು ನಿರ್ವಹಿಸದಂತೆ ಆದೇಶ ನೀಡಬೇಕೆಂದು ಮನವಿ ಮಾಡಿತ್ತು.

    ನ್ಯಾಯಮೂರ್ತಿಗಳ ನೇಮಕದಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವವನ್ನು ಕಾಪಾಡಲು ಕೇಂದ್ರ ಸರ್ಕಾರದ ಪ್ರತಿನಿಧಿಗೂ ಕೊಲಿಜಿಯಂನಲ್ಲಿ ಅವಕಾಶ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಡಿ.ವೈ. ಚಂದ್ರಚೂಡ್ ಅವರಿಗೆ ಈ ಹಿಂದೆ ರಿಜಿಜು ಪತ್ರ ಬರೆದಿದ್ದರು. ಇದನ್ನೂ ಓದಿ: ಡಿಕೆಶಿಗೆ ಡಿಸಿಎಂ ಸ್ಥಾನ ನೀಡಿರುವುದು ನನಗೆ ಸಂಪೂರ್ಣ ಸಂತೋಷವಿಲ್ಲ: ಡಿ.ಕೆ ಸುರೇಶ್