Tag: kireeti reddy

  • ರೆಡ್ಡಿ ಮಗನ ಜೊತೆ ಶ್ರೀಲೀಲಾ ಡ್ಯುಯೆಟ್- ‘ಜೂನಿಯರ್’ ಚಿತ್ರದ ಸಾಂಗ್ ಔಟ್

    ರೆಡ್ಡಿ ಮಗನ ಜೊತೆ ಶ್ರೀಲೀಲಾ ಡ್ಯುಯೆಟ್- ‘ಜೂನಿಯರ್’ ಚಿತ್ರದ ಸಾಂಗ್ ಔಟ್

    ನ್ನಡತಿ ಶ್ರೀಲೀಲಾಗೆ (Sreeleela) ಸೌತ್‌ನಲ್ಲಿ ಭಾರೀ ಬೇಡಿಕೆಯಿದೆ. ಇದೀಗ 3 ವರ್ಷಗಳ ಬಳಿಕ ಕನ್ನಡಕ್ಕೆ ಶ್ರೀಲೀಲಾ ಬರುತ್ತಿದ್ದಾರೆ. ಜನಾರ್ದನ ರೆಡ್ಡಿ ಮಗ ಕಿರೀಟಿಗೆ ನಾಯಕಿಯಾಗಿ ‘ಜೂನಿಯರ್’ (Junior) ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ. ರೆಡ್ಡಿ ಮಗನೊಂದಿಗೆ ನಟಿ ಡ್ಯುಯೆಟ್ ಹಾಡಿದ್ದಾರೆ. ಇದನ್ನೂ ಓದಿ:ಗೃಹಪ್ರವೇಶದ ಸಂಭ್ರಮದಲ್ಲಿ ‘ಪುಷ್ಪ-2’ ನಟಿ ಅನಸೂಯ

     

    View this post on Instagram

     

    A post shared by VaaraahiCC (@vaaraahicc)

    ಇಂದು (ಮೇ 19) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಸಾಂಗ್ ರಿಲೀಸ್ ಕಾರ್ಯಕ್ರಮ ಜರುಗಿದೆ. ‘ಲೆಟ್ಸ್ ಲಿವ್ ದಿ ಮೂಮೆಂಟ್’ ಎಂಬ ರೊಮ್ಯಾಂಟಿಕ್ ಸಾಂಗ್ ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆಗಿದೆ. ಮಸ್ತ್ ಆಗಿ ಕಿರೀಟಿ ಜೊತೆ ನಟಿ ಕುಣಿದು ಕುಪ್ಪಳಿಸಿದ್ದಾರೆ. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದೇ ಜುಲೈ 18ಕ್ಕೆ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಇದನ್ನೂ ಓದಿ:‘ಸೂರ್ಯ 46’ ಅದ್ಧೂರಿ ಚಾಲನೆ- ‘ರೆಟ್ರೋ’ ಹೀರೋಗೆ ‘ಪ್ರೇಮಲು’ ನಟಿ ಜೋಡಿ

     

    View this post on Instagram

     

    A post shared by VaaraahiCC (@vaaraahicc)

    ‘ಮಾಯಾಬಜಾರ್’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ‘ಜೂನಿಯರ್’ ಸಿನಿಮಾ ತಯಾರಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ವರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಚಿತ್ರ ಮೂಡಿಬಂದಿದೆ. ಬಹುದೊಡ್ಡ ಹಾಗೂ ಸ್ಟಾರ್ ತಾರಾಗಣ ಈ ಸಿನಿಮಾದ ಮತ್ತೊಂದು ಹೈಲೈಟ್.

    ಶ್ರೀಲೀಲಾ, ಕಿರೀಟಿ ಜೊತೆ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್‌ಮುಖ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಜೂನಿಯರ್’ ಸಿನಿಮಾದ ತಾಂತ್ರಿಕ ಬಳಗ ಶ್ರೀಮಂತಿಕೆಯಿಂದ ಕೂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ರಾಕ್‌ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ‘ಬಾಹುಬಲಿ’ ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಸಾಹಸ ಚಿತ್ರಕ್ಕಿದೆ.

  • `ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    `ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    ನ್ನಡ ಚಿತ್ರರಂಗಕ್ಕೆ ಗಾಲಿ ಜನಾರ್ಧನ ರೆಡ್ಡಿ(Janardhan Reddy) ಪುತ್ರ ಕಿರೀಟಿ(Kireeti) ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಟೀಸರ್ ಝಲಕ್‌ನಲ್ಲೇ ಎಲ್ಲರ ಗಮನ ಸೆಳೆದಿರೋ ಕಿರೀಟಿ ಮೊದಲ ಚಿತ್ರದ ಮೂಲಕ ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರೆ. ಇದೀಗ ನಟ ಕಿರೀಟಿ ಚೊಚ್ಚಲ ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ.

     

    View this post on Instagram

     

    A post shared by Kireeti (@kireetiofficial)

    ರಾಧಾಕೃಷ್ಣ ರೆಡ್ಡಿ (Radkakrishna Reddy) ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿ ಬರ್ತಿರುವ ಈ ಚಿತ್ರ ಬಿರುಸಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಇಷ್ಟು ದಿನ ಟೈಟಲ್ ರಿವೀಲ್ ಮಾಡದೇ ಚಿತ್ರೀಕರಣದಲ್ಲಿ ತೊಡಗಿದ್ದ ಚಿತ್ರತಂಡ ಫೈನಲಿ ಸಿನಿಮಾ ಟೈಟಲ್ ರಿವೀಲ್ ಮಾಡಿದೆ. ಆ ಮೂಲಕ ಇಷ್ಟು ದಿನದ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ. ಇಂದು ನಾಯಕ ನಟ ಕಿರೀಟಿ ಹುಟ್ಟುಹಬ್ಬ. ಆದ್ರಿಂದ ಚಿತ್ರತಂಡ ಕಿರೀಟಿ ಹುಟ್ಟುಹಬ್ಬಕ್ಕೆ ಟೈಟಲ್ ರಿವೀಲ್ ಮಾಡಲು ಮೊದಲೇ ತಯಾರಿ ಮಾಡಿಕೊಂಡಿತ್ತು. ಇದೀಗ ಟೈಟಲ್ ವೀಡಿಯೋ ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಕಿರೀಟಿಗೆ ಶುಭಕೋರಿ ಟೈಟಲ್ ಉಡುಗೊರೆಯಾಗಿ ನೀಡಲಿದೆ ಚಿತ್ರತಂಡ. ಚಿತ್ರಕ್ಕೆ `ಜೂನಿಯರ್’ ಎಂದು ಚಿತ್ರತಂಡ ಟೈಟಲ್ ಫಿಕ್ಸ್ ಮಾಡಿದೆ. ಈ ಮೂಲಕ ಇಷ್ಟು ದಿನ ಸಿನಿರಸಿಕರಲ್ಲಿ ಟೈಟಲ್ ಬಗ್ಗೆ ಇದ್ದ ಕುತೂಹಲಕ್ಕೆ ಉತ್ತರ ನೀಡಿದೆ ಚಿತ್ರತಂಡ. ಇದನ್ನೂ ಓದಿ:ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಸಿನಿಮಾ ರಂಗಕ್ಕೆ ಕಂಬ್ಯಾಕ್

    ʻಜೂನಿಯರ್‌ʼ ಚಿತ್ರದ ಮೂಲಕ ನಟ ಕಿರೀಟಿ ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಚಿತ್ರರಂಗಕ್ಕೂ ನಾಯಕನಾಗಿ ಎಂಟ್ರಿ ಕೊಡ್ತಿದ್ದಾರೆ. `ಮಾಯಾಬಜಾರ್’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರವಿದು. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

    ಬಿಗ್ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಬಹುದೊಡ್ಡ ಹಾಗೂ ಸ್ಟಾರ್ ತಾರಾಗಣ ಈ ಸಿನಿಮಾದ ಮತ್ತೊಂದು ಹೈಲೈಟ್ ಆಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ (Genelia), ಶ್ರೀಲೀಲಾ (Sreeleela) ಸೇರಿದಂತೆ ಇನ್ನೂ ಹಲವು ತಾರೆಯರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಗೆಯೇ ಚಿತ್ರದ ತಾಂತ್ರಿಕ ಬಳಗ ಕೂಡ ಅಷ್ಟೇ ಶ್ರೀಮಂತವಾಗಿದ್ದು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಸಾಹಸ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಜನಾರ್ದನ್ ರೆಡ್ಡಿ ಮಗನ ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಸರ್ಪ್ರೈಸ್ ವಿಸಿಟ್

    ಜನಾರ್ದನ್ ರೆಡ್ಡಿ ಮಗನ ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಸರ್ಪ್ರೈಸ್ ವಿಸಿಟ್

    ಮಾಜಿ ಮಂತ್ರಿ ಗಾಲಿ ಜನಾರ್ದನ್ ರೆಡ್ಡಿ ಪುತ್ರ, ನಟ ಕಿರೀಟಿ ಗಂಧದಗುಡಿ ಅಂಗಳಕ್ಕೆ ಗ್ರ್ಯಾಂಡ್ ಆಗಿ ಬಂದಾಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ರಾಧಾಕೃಷ್ಣ ರೆಡ್ಡಿ ಸಾರಥ್ಯದಲ್ಲಿ ತಯಾರಾಗುತ್ತಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಈಗಾಗಲೇ ರಿಲೀಸ್ ಆಗಿರುವ ಕಿರೀಟಿ ಇಂಟ್ರೂಡಕ್ಷನ್ ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ಸಿನಿಮಾ ಅಂಗಳದಿಂದ ನಯಾ ಖಬರ್ ರಿವೀಲ್ ಆಗಿದೆ.

    ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿಕೊಂಡು ಶೂಟಿಂಗ್ ಅಖಾಡಕ್ಕೆ ಧುಮುಕ್ಕಿದ್ದ ಚಿತ್ರತಂಡ ಬ್ರೇಕ್ ತೆಗೆದುಕೊಳ್ಳದೇ ನಿರಂತರವಾಗಿ ಚಿತ್ರೀಕರಣ ನಡೆಸುತ್ತಿದೆ. ಸದ್ಯ ಬೆಂಗಳೂರಿನ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಶೂಟಿಂಗ್ ಸೆಟ್ ಗೆ ದೊಡ್ಮನೆ ದೊರೆ ಶಿವಣ್ಣ ಸರ್ಪ್ರೈಸ್ ಆಗಿ ವಿಸಿಟ್ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಿರೀಟಿ ಹಾಗೂ ಜೆನಿಲಿಯಾ ಭಾಗದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಕೆಲಕಾಲ ಅಲ್ಲಿಯೇ ಸಮಯ ಕಳೆದ ಶಿವಣ್ಣ ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಇಡೀ ತಂಡ ಹಾಗೂ ಜನಾರ್ದನ ರೆಡ್ಡಿ ಕೂಡ ಉಪಸ್ಥಿತರಿದ್ದರು. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್‌ ತನ್ನಿ ಎಂದ ರಿಯಲ್‌ ಸ್ಟಾರ್‌ ಉಪೇಂದ್ರ

    ಹೆಸರಿಡದ ಕಿರೀಟಿ ಚೊಚ್ಚಲ ಸಿನಿಮಾದ ಟೈಟಲ್ ಅನಾವರಣಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 29ಕ್ಕೆ ಕಿರೀಟಿ ಹುಟ್ಟುಹಬ್ಬವಿದೆ. ಈ ದಿನದಂದೂ ಟೈಟಲ್ ರಿವೀಲ್ ವಿಡಿಯೋ ಝಲಕ್ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದೆ. ಸದ್ಯ ಬಹುತೇಕ ಭಾಗ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ನಡೆಯುತ್ತಿವೆ. ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]