Tag: Kiran Yogeshwar

  • ಬಿಗ್ ಬಾಸ್ ಮನೆಯಿಂದ ರಾಜಸ್ಥಾನ ಬೆಡಗಿ ಕಿರಣ್ ಯೋಗೇಶ್ವರ್‌ ಔಟ್

    ಬಿಗ್ ಬಾಸ್ ಮನೆಯಿಂದ ರಾಜಸ್ಥಾನ ಬೆಡಗಿ ಕಿರಣ್ ಯೋಗೇಶ್ವರ್‌ ಔಟ್

    ದೊಡ್ಮನೆ ಕಾಳಗ ಈಗಾಗಲೇ ಶುರುವಾಗಿ ಒಂದು ವಾರ ಪೂರೈಸಿದೆ. ಬಿಗ್ ಬಾಸ್ ಮನೆ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇದೆ. ಸ್ಪರ್ಧಿಗಳು ನಾ‌ನಾ ವಿಚಾರವಾಗಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ನಿಯಮದಂತೆ ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಯೊಬ್ಬರು ಮನೆಯಿಂದ ಹೊರನಡೆದಿದ್ದಾರೆ.

    ರಾಜಸ್ಥಾನ ಮೂಲದ ಬ್ಯೂಟಿ ಕ್ವೀನ್, ಮಾಡೆಲ್ ಕಿರಣ್ ಯೋಗೇಶ್ವರ್‌ ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ನಡೆದಿದ್ದಾರೆ. ಮನೆಯವರ ಜತೆ ಖುಷಿ ಖುಷಿಯಾಗಿದ್ದ ಸ್ಪರ್ಧಿ ಕಿರಣ್, ಅಭಿಮಾನಿಗಳಿಗೆ ಮನರಂಜಿಸುವುದರಲ್ಲಿ ಸೋತ್ರಾ ಎಂಬ ಪ್ರಶ್ನೆ ನೆಟ್ಟಿಗರನ್ನ ಇದೀಗ ಕಾಡ್ತಿದೆ. ಇದನ್ನೂ ಓದಿ: ರಾಕೇಶ್ ಅಡಿಗ ನನ್ನ ಗಂಡ ಎಂದು ಬಿಗ್ ಬಾಸ್ ಮನೆಯಲ್ಲೇ ಘೋಷಿಸಿದ ಸ್ಫೂರ್ತಿ ಗೌಡ

    ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಿಚಾರಗಳಿಂದ ಗಮನ ಸೆಳೆದಿದ್ದ ಸ್ಪರ್ಧಿ ಕಿರಣ್ ಯೋಗೇಶ್ವರ್ ಈಗ ಮನೆಯಿಂದ ಹೊರ ನಡೆದಿದ್ದಾರೆ. ಮುಂದಿನ ವಾರ ಯಾರ ತಲೆಯ ಮೇಲೆ ಎಲಿಮೀನೇಷನ್ ಕತ್ತಿ ತೂಗುತ್ತೆ ಎಂಬುದನ್ನ ಕಾದುನೋಡಬೇಕಿದೆ‌.

    Live Tv
    [brid partner=56869869 player=32851 video=960834 autoplay=true]