Tag: Kiran Rao

  • ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್

    ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಮನೆಯಲ್ಲಿ ಈದ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಹಿನ್ನೆಲೆ ನಟ ಆಮೀರ್ ಮಾಜಿ ಪತ್ನಿಯರು ಕೂಡ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಹಬ್ಬದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ:ಅಂದು ಹೈದರಾಬಾದ್‌ನವಳು, ಇಂದು ಕರ್ನಾಟಕ: ರಶ್ಮಿಕಾ ಮಂದಣ್ಣ ಹೇಳಿಕೆ ವೈರಲ್

    ರಂಜಾನ್ ಹಬ್ಬವನ್ನು ಮಾಜಿ ಪತ್ನಿಯರಾದ ರೀನಾ ದತ್ (Reena Dutt) ಮತ್ತು ಕಿರಣ್ ರಾವ್ (Kiran Rao) ಜೊತೆ ನಟ ಸೆಲೆಬ್ರೇಟ್ ಮಾಡಿದ್ದಾರೆ. ಮಕ್ಕಳಾದ ಜುನೈದ್ ಖಾನ್, ಆಜಾದ್ ರಾವ್ ಖಾನ್, ಇರಾ ಖಾನ್ ಸೇರಿದಂತೆ ಮುಂತಾದವರು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಹಬ್ಬದ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ.

    ಆಮೀರ್ ಖಾನ್ ಮಾಜಿ ಪತ್ನಿಯರಿಗೆ ಡಿವೋರ್ಸ್ ನೀಡಿದ್ದರೂ ಕೂಡ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಮಕ್ಕಳಿಗೆ ಯಾವುದೇ ಕೊರತೆ ಬರದೆ ಇರೋ ಹಾಗೆ ಪೋಷಕರಾಗಿ ಜವಾಬ್ದಾರಿ ನಿಭಾಯಿಸುರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಉಮಾಶ್ರೀ

     

    View this post on Instagram

     

    A post shared by Manav Manglani (@manav.manglani)


    ಅಂದಹಾಗೆ, ಇತ್ತೀಚೆಗೆ ಬೆಂಗಳೂರಿನ ಬೆಡಗಿ ಗೌರಿಯೊಂದಿಗೆ ಡೇಟಿಂಗ್ ಮಾಡ್ತಿರೋದಾಗಿ ಆಮೀರ್ ಖಾನ್ ಅಧಿಕೃತವಾಗಿ ಘೋಷಿಸಿದ್ದರು. ಇದೀಗ ಗೌರಿಯೊಂದಿಗೆ ವಾಸಿಸುತ್ತಿರೋದಾಗಿ ನಟ ತಿಳಿಸಿದ್ದರು.

  • ಹಿಂದೂ ಸಂಪ್ರದಾಯದಂತೆ ಕಳಶ ಪೂಜೆ ಮಾಡಿದ ಆಮೀರ್ ಖಾನ್: ಮಾಜಿ ಪತ್ನಿ ಸಾಥ್

    ಹಿಂದೂ ಸಂಪ್ರದಾಯದಂತೆ ಕಳಶ ಪೂಜೆ ಮಾಡಿದ ಆಮೀರ್ ಖಾನ್: ಮಾಜಿ ಪತ್ನಿ ಸಾಥ್

    ಬಾಲಿವುಡ್ (Bollywood) ನಟ ಆಮೀರ್ ಖಾನ್ (Aamir Khan) ಮತ್ತೆ ಸುದ್ದಿಯಲ್ಲಿದ್ದಾರೆ. ನಾನು ಚಿತ್ರರಂಗದಿಂದ ದೂರ ಉಳಿಯುತ್ತೇನೆ ಎಂದು ಆಮೀರ್ ಹೇಳಿದ್ದರು. ಇದೀಗ ಆಮೀರ್ ಖಾನ್ ಪ್ರೊಡಕ್ಷನ್ಸ್ (Aamir Khan Productions) ಕಚೇರಿಯಲ್ಲಿ ಕಳಶ ಪೂಜೆ ಮಾಡುತ್ತಿರುವ ಫೋಟೋ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಮತ್ತೆ ಹಲವು ಟೀಕೆಗೆ ನಟ ಗುರಿಯಾಗಿದ್ದಾರೆ.

    ಆಮೀರ್ ಖಾನ್ ಅವರು ಹಿಂದಿ ಸಿನಿಮಾರಂಗದಲ್ಲಿ ಮಿಸ್ಟರ್ ಪರ್ಫೆಕ್ಟ್ ಎಂದೇ ಗುರುತಿಸಿಕೊಂಡಿರುವವರು. ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ‘ಲಾಲ್ ಸಿಂಗ್ ಛಡ್ಡಾ’ (Lal Singh Chaddha) ಚಿತ್ರ ಮಾತ್ರ ಸಕ್ಸಸ್ ಕಾಣಲಿಲ್ಲ. ಈ ಚಿತ್ರದ ಸೋಲಿಗೆ ನಟ ಆಮೀರ್ ಖಾನ್ ಅವರು ಸಾಮಾಜಿಕವಾಗಿ ನೀಡಿದ ಕೆಲ ವಿವಾದಾತ್ಮಕ ಹೇಳಿಕೆಗಳು ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಹಿಂದೂ ವಿರೋಧಿ ಎಂದು ಕೂಡ ಆಮೀರ್ ಖಾನ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಸದ್ಯ ಹಿಂದೂ ಸಂಪ್ರದಾಯದಂತೆ (Hindhu Culture) ಆಮಿರ್ ಖಾನ್ ಮತ್ತು ಮಾಜಿ ಪತ್ನಿ ಕಿರಣ್ ರಾವ್ (Kiran Rao) ಪೂಜೆ ಮಾಡಿರುವ ಫೋಟೋಗಳು ವೈರಲ್ ಆಗಿವೆ.

     

    View this post on Instagram

     

    A post shared by Advait Chandan (@advaitchandan)

    ಆಮೀರ್ ಖಾನ್ ಇತ್ತೀಚೆಗೆ ತಮ್ಮ ಪ್ರೊಡಕ್ಷನ್ ಸಂಸ್ಥೆಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ್ದಾರೆ. ಆಮಿರ್ ಖಾನ್ ಪೂಜೆ ಮಾಡುತ್ತಿರುವ ಫೋಟೋಗಳನ್ನು `ಲಾಲ್ ಸಿಂಗ್ ಛಡ್ಡಾ’ ನಿರ್ದೇಶಕ ಅದ್ವೈತ್ ಚಂದನ್ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಗುರುವಾರ (ಡಿ.7) ಹಂಚಿಕೊಂಡಿದ್ದಾರೆ. ಆಮಿರ್ ಖಾನ್ ಅವರು ಹಣೆಗೆ ತಿಲಕ, ತಲೆಗೆ ಬಿಳಿ ಬಣ್ಣದ ಟೋಪಿ ಧರಿಸಿದ್ದು, ಕಳಶಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಪತ್ನಿ ಕಿರಣ್ ರಾವ್ ಅವರು ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹನ್ಸಿಕಾ ಟ್ರೋಲ್‌: ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದ ನೆಟ್ಟಿಗರು

     

    View this post on Instagram

     

    A post shared by Advait Chandan (@advaitchandan)

    ಈ ಎಲ್ಲಾ ಫೋಟೋ ಮತ್ತು ಬೆಳವಣಿಗೆ ನೋಡಿರುವ ಅಭಿಮಾನಿಗಳು, ಆಮೀರ್ ಖಾನ್‌ ನಡೆಗೆ ಕೆಲ ನೆಟ್ಟಿಗರು ಟೀಕೆ ಮಾಡಿದ್ದಾರೆ. ಬಗೆ ಬಗೆಯ ಕಾಮೆಂಟ್ ಮೂಲಕ ನಟನ ಕಾಲೆಳೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಮೀರ್‌ ಖಾನ್‌ ತಾಯಿಗೆ ಹೃದಯಾಘಾತ

    ಆಮೀರ್‌ ಖಾನ್‌ ತಾಯಿಗೆ ಹೃದಯಾಘಾತ

    ಬಾಲಿವುಡ್ ಸ್ಟಾರ್ ಆಮೀರ್ ಖಾನ್(Aamir Khan), ತಾಯಿ ಜೀನತ್ ಹುಸೇನ್(Zeenat Hussain) ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿದ್ದರು. ಬಳಿಕ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಆಮೀರ್ ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

    `ಲಾಲ್ ಸಿಂಗ್ ಚಡ್ಡಾ'(Lal Singh Chaddha) ಚಿತ್ರದ ಸೋಲಿನ ನಂತರ ನಟ ಆಮೀರ್ ಖಾನ್ ಮತ್ತೊಂದು ಶಾಕ್ ಎದುರಾಗಿತ್ತು. ದೀಪಾವಳಿ ಹಬ್ಬದಂದು ಆಮೀರ್ ಖಾನ್ ತಾಯಿ ಜೀನತ್ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣವೇ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ವೈದ್ಯರ ಚಿಕಿತ್ಸೆಯ ನಂತರ ಜೀನತ್ ಹುಸೇನ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ಇನ್ನೂ ಕಳೆದ ಜೂನ್ 13ರಂದು ತಾಯಿಯ ಹುಟ್ಟುಹಬ್ಬವನ್ನ ಮಾಜಿ ಪತ್ನಿ ಕಿರಣ್(Kiran Rao) ಮತ್ತು ಕುಟುಂಬದ ಜೊತೆ ಅದ್ದೂರಿಯಾಗಿ ಆಚರಿಸಿದ್ದರು. ನಂತರ ಆಮೀರ್ ತಾಯಿಯ ಹೃದಯಾಘಾತ ಮನೆಮಂದಿಗೆ ಶಾಕ್ ಕೊಟ್ಟಿತ್ತು. ಈಗ ಚಿಕಿತ್ಸೆ ನಂತರ ಜೀನತ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಪತ್ನಿಯೊಂದಿಗೆ ಕಾಶ್ಮೀರದ ಗವರ್ನರ್ ಭೇಟಿಯಾದ ಅಮಿರ್ ಖಾನ್

    ಮಾಜಿ ಪತ್ನಿಯೊಂದಿಗೆ ಕಾಶ್ಮೀರದ ಗವರ್ನರ್ ಭೇಟಿಯಾದ ಅಮಿರ್ ಖಾನ್

    ಶ್ರೀನಗರ: ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್ ಹಾಗೂ ಮಾಜಿ ಪತ್ನಿ ಕಿರಣ್ ರಾವ್ ನಿನ್ನೆ ಜಮ್ಮು- ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರನ್ನ  ಭೇಟಿಯಾಗುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಕೇಂದ್ರಾಡಳಿತ ಪ್ರದೇಶವನ್ನು ನೆಚ್ಚಿನ ಸಿನಿಮಾ ತಾಣವನ್ನಾಗಿಸುವ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದಿರುವ ಲೆಫ್ಟಿನೆಂಟ್ ಗವರ್ನರ್ ಗವರ್ನರ್ ಫಿಲ್ಮ್ ಆ್ಯಕ್ಟರ್ ಅಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಭೇಟಿಯಾದರು. ಈ ವೇಳೆ ಜಮ್ಮು- ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ನೀಡಲಾದ ಹೊಸ ಪಾಲಿಸಿ ಬಗ್ಗೆ ಮಾತನಾಡಿದರು. ಶೀಘ್ರದಲ್ಲೇ ಹೊಸ ಪಾಲಿಸಿಯನ್ನು ಬಿಡುಗಡೆ ಮಾಡಲಾಗುವುದು. ಬಾಲಿವುಡ್‍ನಲ್ಲಿ ಮತ್ತೆ ಜಮ್ಮು- ಕಾಶ್ಮೀರವನ್ನಾ ಉತ್ತಮ ತಾಣನ್ನಾಗಿಸುವ ಸಂಬಧ ಚರ್ಚೆ ಮಾಡಲಾಯಿತ್ತು ಎಂದಿದ್ದಾರೆ.ಇದನ್ನೂ ಓದಿ: ಫಸ್ಟ್ ನೈಟ್ ದಿನ ವಧು ಟೆರೇಸ್ ಹಾರಿ ಎಸ್ಕೇಪ್

    ಅಮೀರ್ ಖಾನ್ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. 15 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಅಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಇತ್ತೀಚೆಗಷ್ಟೇ ವಿಚ್ಛೇದನವನ್ನು ಪಡೆದುಕೊಂಡು ದೂರವಾಗಿದ್ದಾರೆ. ಕೇವಲ ದಾಂಪತ್ಯ ಜೀವನಕ್ಕೆ ಮಾತ್ರ ವಿಚ್ಛೆದನ ಕೊಟ್ಟಿದ್ದು, ತಾವು ಸ್ನೇಹಿತರಾಗಿಯೇ ಮುಂದುವರಿಯುತ್ತೇವೆ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ. ಅದರಂತೆ ಇಬ್ಬರು ಸಿನಿಮಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

  • ವಿಚ್ಛೇದನದ ಬಳಿಕ ಮಾಜಿ ಪತ್ನಿ ಜೊತೆ ಅಮೀರ್ ಟೇಬಲ್ ಟೆನ್ನಿಸ್

    ವಿಚ್ಛೇದನದ ಬಳಿಕ ಮಾಜಿ ಪತ್ನಿ ಜೊತೆ ಅಮೀರ್ ಟೇಬಲ್ ಟೆನ್ನಿಸ್

    ಶ್ರೀನಗರ: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ನಟ ಅಮೀರ್ ಖಾನ್ ವಿಚ್ಛೇದನದ ಬಳಿಕ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಟೇಬಲ್ ಟೆನ್ನಿಸ್ ಆಟವನ್ನು ಆಡಿದ್ದಾರೆ. ಸದ್ಯ ಇವರಿಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಟ ಅಮೀರ್ ಖಾನ್ ವಿಚ್ಛೇದನ ನೀಡಿದ ಬಳಿಕ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಹೆಚ್ಚಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ವಿಚ್ಛೇದನ ಪಡೆದ ಈ ದಂಪತಿ ಮಗ ಅಜಾದ್‍ಗೆ ಪೋಷಕರಾಗಿ ಮುಂದುವರಿದಿದ್ದಾರೆ. ಸದ್ಯ ಲಾಲ್ ಚಡ್ಡಾ ಸಿನಿಮಾದ ಬ್ಯುಸಿಯಾಗಿರುವ ಅಮೀರ್ ಖಾನ್ ಜೊತೆ ಮಾಜಿ ಪತ್ನಿ ಕಿರಣ್ ರಾವ್ ಹಾಗೂ ಅಜಾದ್ ಕೂಡ ಶೂಟಿಂಗ್ ಸೆಟ್‍ನಲ್ಲಿ ಇದ್ದಾರೆ.

    ಈ ಸಿನಿಮಾದ ಚಿತ್ರೀಕರಣ ಲಡಾಕ್‍ನಲ್ಲಿ ನಡೆಯುತ್ತಿದ್ದು, ಶೂಟಿಂಗ್ ವೇಳೆ ಕೊಂಚ ಫ್ರೀ ಆದ ಅಮೀರ್ ಚಿತ್ರತಂಡದವರಿಗೆ ಟೇಬಲ್ ಟೆನ್ನಿಸ್ ಆಟವನ್ನು ಆಯೋಜಿಸಿದ್ದಾರೆ. ಈ ವೇಳೆ ಅಮೀರ್ ಹಾಗೂ ಕಿರಣ್ ರಾವ್ ಇಬ್ಬರು ಎದುರಾಗಿ ಟೇಬಲ್ ಟೆನ್ನಿಸ್ ಆಟವನ್ನು ಆಡಿ ಸಂಭ್ರಮಿಸಿದ್ದಾರೆ. ಅಲ್ಲದೇ ಲಾಲ್ ಚಡ್ಡಾ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಟಾಲಿವುಡ್ ನಟ ನಾಗಚೈತನ್ಯ ಕೂಡ ಟೇಬಲ್ ಆಟ ಆಡಿದ್ದಾರೆ.

    ಇತ್ತೀಚೆಗಷ್ಟೇ ಕೂಡ ಲಾಲ್ ಚಡ್ಡಾ ಸಿನಿಮಾದ ಶೂಟಿಂಗ್ ವೇಳೆ ಅಮೀರ್, ಕಿರಣ್ ರಾವ್ ಜೊತೆ ಲಡಾಕ್ ಪ್ರಾದೇಶಿಕ ಸಾಂಪ್ರದಾಯಿಕ ಉಡುಪನ್ನು ಧರಿಸಿ ನೃತ್ಯ ಮಾಡಿದ್ದರು. ಒಟ್ಟಾರೆ ವಿಚ್ಛೇದನದ ಬಳಿಕವೂ ಅಮೀರ್ ಹಾಗೂ ಕಿರಣ್ ರಾವ್ ಆಟ ಆಡಿ ಸಂಭ್ರಮಿಸುತ್ತಿರುವುದನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.  ಇದನ್ನೂ ಓದಿ:‘ಯುವರತ್ನ’ ನಟಿ ಸಯ್ಯೇಶಾ ಹೆಣ್ಣು ಮಗುವಿಗೆ ಜನನ

  • ವಿಚ್ಛೇದನದ ನಂತರ ಮಾಜಿ ಪತ್ನಿ ಜೊತೆ ಅಮೀರ್ ಖಾನ್ ಡ್ಯಾನ್ಸ್

    ವಿಚ್ಛೇದನದ ನಂತರ ಮಾಜಿ ಪತ್ನಿ ಜೊತೆ ಅಮೀರ್ ಖಾನ್ ಡ್ಯಾನ್ಸ್

    ಮುಂಬೈ: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ನಟ ಅಮೀರ್ ಖಾನ್ ವಿಚ್ಛೇದನದ ನಂತರ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಟ ಅಮೀರ್ ಖಾನ್ ಅಭಿನಯದ ಬಹು ನೀರಿಕ್ಷಿ ಲಾಲ್ ಚಡ್ಡ ಸಿನಿಮಾವನ್ನು ಅಮೀರ್ ಖಾನ್, ಕಿರಣ್ ರಾವ್ ಹಾಗೂ ರಾಧಿಕ ಚೌಧರಿ ನಿರ್ಮಿಸುತ್ತಿದ್ದು, ಈ ಚಿತ್ರದ ಚಿತ್ರೀಕರಣ ಲಡಾಕ್‍ನಲ್ಲಿ ನಡೆಯುತ್ತಿರುವ ವೇಳೆ ಅಮೀರ್ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಅಲ್ಲಿನ ಸಾಂಪ್ರದಾಯಿಕ ಉಡುಪನ್ನು ಧರಿಸಿ ಹೆಜ್ಜೆ ಹಾಕಿದ್ದಾರೆ.

    ವೀಡಿಯೋದಲ್ಲಿ ಅಮೀರ್ ಖಾನ್ ಕೆಂಪು ಬಣ್ಣದ ಧಿರುಸು ಹಾಗೂ ನೇರಳೆ ಬಣ್ಣದ ಟೋಪಿಯನ್ನು ಧರಿಸಿದರೆ, ಕಿರಣ್ ರಾವ್ ಪಿಂಕ್ ಕಲರ್ ಉಡುಪು ತೊಟ್ಟು, ಹಸಿರು ಬಣ್ಣದ ಟೋಪಿ ಧರಿಸಿದ್ದಾರೆ. ಜೊತೆಗೆ ಶಿಕ್ಷಕರೊಬ್ಬರು ಡ್ಯಾನ್ಸ್ ಮಾಡುತ್ತಿದ್ದು, ಇವರಿಬ್ಬರಿಗೂ ನೃತ್ಯ ಹೇಳಿಕೊಟ್ಟಿದ್ದಾರೆ.

     

    ಇತ್ತೀಚೆಗಷ್ಟೇ ಟಾಲಿವುಡ್ ನಟ ನಾಗಚೈತನ್ಯ ಹಾಗೂ ಲಾಲ್ ಚಡ್ಡಾ ಚಿತ್ರತಂಡಕ್ಕೆ ಸೆರ್ಪಡೆಯಾಗಿದ್ದು, ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಲಾಲ್ ಚಡ್ಡಾ ಸಿನಿಮಾವು ಹಾಲಿವುಡ್‍ನ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿದ್ದು, ದೇಶದ ಸುಮಾರು ನೂರ್ಕೂ ಅಧಿಕ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಸಿನಿಮಾದಲ್ಲಿ ಅತೀ ದೊಡ್ಡ ತಾರಾಬಳಗವೇ ಇರಲಿದೆ.

  • ಮುಸ್ಲಿಮರನ್ನು ಮದುವೆಯಾದ ಮಹಿಳೆ, ಮಕ್ಕಳು ಧರ್ಮ ಯಾಕೆ ಬದಲಿಸಿಕೊಳ್ಳಬೇಕು: ಅಮೀರ್​​ಗೆ ಕಂಗನಾ ಪ್ರಶ್ನೆ

    ಮುಸ್ಲಿಮರನ್ನು ಮದುವೆಯಾದ ಮಹಿಳೆ, ಮಕ್ಕಳು ಧರ್ಮ ಯಾಕೆ ಬದಲಿಸಿಕೊಳ್ಳಬೇಕು: ಅಮೀರ್​​ಗೆ ಕಂಗನಾ ಪ್ರಶ್ನೆ

    ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕಿರಣ್ ರಾವ್ ವಿಚ್ಛೇದನಾ ವಿಚಾರವಾಗಿ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ.

    ಸದಾ ಒಂದಲ್ಲ ಒಂದು ವಿವಾದ ಸೃಷ್ಟಿಸಿಕೊಳ್ಳುವ ಕಂಗನಾರವರು ಇದೀಗ ಅಮೀರ್ ಖಾನ್ ಮುಸ್ಲಿಂ, ಕಿರಣ್ ರಾವ್ ಹಿಂದೂ, ಇವರಿಬ್ಬರಿಗೆ ಹುಟ್ಟಿದ ಮಗ ಆಜಾದ್ ರಾವ್ ಖಾನ್ ಮಾತ್ರ ಏಕೆ ಮುಸ್ಲಿಂ ಆಗಿಯೇ ಮುಂದುವರೆಯುತ್ತಿದ್ದಾನೆ. ಮುಸ್ಲಿಮರನ್ನು ಮದುವೆಯಾದವರು ಧರ್ಮವನ್ನು ಯಾಕೆ ಬದಲಾಯಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.

    ಈ ಕುರಿತಂತೆ ಕಂಗನಾ ರಣಾವತ್‍ರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ, ಪಂಜಾಬ್‍ನ ಹಲವು ಕುಟುಂಬಗಳಲ್ಲಿ ಒಬ್ಬ ಮಗನನ್ನು ಸಿಖ್, ಮತ್ತೊಬ್ಬ ಮಗನನ್ನು ಹಿಂದೂ ಆಗಿ ಬೆಳೆಸುತ್ತಾರೆ. ಆದರೆ ಈ ಪದ್ದತಿ ಹಿಂದೂ ಹಾಗೂ ಮುಸ್ಲಿಂ ಅಥವಾ ಸಿಖ್ ಹಾಗೂ ಮುಸ್ಲಿಂ, ಅಥವಾ ಮುಸ್ಲಿಮರನ್ನು ಮದುವೆಯಾದ ಯಾರಲ್ಲೂ ಈ ಪದ್ಧತಿ ಕಾಣಿಸುವುದಿಲ್ಲ ಯಾಕೆ? ಎಂದಿದ್ದಾರೆ.

    ಅಮೀರ್ ಖಾನ್ ಸರ್ ಅವರು ಎರಡನೇ ವಿಚ್ಛೇದನಾ ಪಡೆಯುತ್ತಿರುವ ಬಗ್ಗೆ ಆಶ್ಚರ್ಯ ಪಡೆಯುತ್ತೇನೆ. ಆದರೆ ಮಕ್ಕಳು ಮಾತ್ರ ಏಕೆ ಮುಸ್ಲಿಂ ಆಗಿರಬೇಕು. ಏಕೆ ಮಹಿಳೆಯರು ಹಿಂದೂ ಆಗಿ ಮುಂದುವರೆಯಬಾರದು. ಬದಲಾಗುತ್ತಿರುವ ಸಮಯದೊಂದಿಗೆ ನಾವು ಇದನ್ನು ಬದಲಿಸಬೇಕು. ಒಂದೇ ಕುಟುಂಬದಲ್ಲಿ ಹಿಂದೂ, ಸಿಖ್, ಬೌದ್ಧರು, ಜೈನರು ಜೊತೆಯಾಗಿರಲು ಸಾಧ್ಯವಿರುವಾಗ ಮುಸ್ಲಿಮರಿಗೆ ಮಾತ್ರ ಯಾಕೆ ಸಾಧ್ಯವಿಲ್ಲ? ಮುಸ್ಲಿಮರನ್ನು ಮದುವೆಯಾದವರು ಧರ್ಮವನ್ನು ಯಾಕೆ ಬದಲಾಯಿಸಿಕೊಳ್ಳಬೇಕು ಎಂದು ಬರೆದುಕೊಳ್ಳುವ ಮೂಲಕ ಕಿಡಿಕಾರಿದ್ದಾರೆ.

    ಸದ್ಯ ಕಂಗನಾರವರ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಮೀರ್ ಖಾನ್‍ರವರು ಇದಕ್ಕೆ ಏನು ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ. ಇದನ್ನೂ ಓದಿ:ಒಂಟಿಯಾಗಿ ಬೀದಿ ಸುತ್ತಿದ್ರೂ ನಾನು ಅಂತಾ ಯಾರಿಗೂ ಗೊತ್ತಾಗಿಲ್ಲ: ಸನ್ನಿ ಲಿಯೋನ್

  • 15 ವರ್ಷದ ದಾಂಪತ್ಯ ಅಂತ್ಯ – ವಿಚ್ಛೇದನಕ್ಕೆ ಮುಂದಾದ ಆಮಿರ್ ಖಾನ್, ಕಿರಣ್ ರಾವ್

    15 ವರ್ಷದ ದಾಂಪತ್ಯ ಅಂತ್ಯ – ವಿಚ್ಛೇದನಕ್ಕೆ ಮುಂದಾದ ಆಮಿರ್ ಖಾನ್, ಕಿರಣ್ ರಾವ್

    ಮುಂಬೈ: ಬಿಟೌನ್ ಸ್ಟಾರ್ ಕಪಲ್ ಆಮಿರ್ ಖಾನ್ ಮತ್ತು ಕಿರಣ್ ರಾವ್ ಮದುವೆ ಬಂಧನದಿಂದ ಹೊರ ಬಂದಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.

    ಆಮಿರ್ ಖಾನ್ ಮತ್ತು ಕಿರಣ್ ರಾವ್ ಜೊತೆಯಾಗಿ ಹೇಳಿಕೆ ಬಿಡುಗಡೆಯಾಗಿದ್ದು, ಇನ್ಮುಂದೆ ಇಬ್ಬರ ದಾರಿ ಬೇರೆ ಆಗಿರಲಿದೆ. ನಾವಿಬ್ಬರು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    ಜಂಟಿ ಹೇಳಿಕೆ:
    ಈ 15 ವರ್ಷಗಳಲ್ಲಿ ಇಬ್ಬರೂ ಸುಂದರ ಜೀವನವನ್ನು ಕಳೆದಿದ್ದೇವೆ. ಹೊಸ ಅನುಭವ ಆನಂದ, ಸಂತೋಷವನ್ನು ಶೇರ್ ಮಾಡಿಕೊಂಡಿದ್ದೇವೆ. ನಮ್ಮಿಬ್ಬರ ಸಂಬಂಧ ಕೇವಲ ವಿಶ್ವಾಸ, ಗೌರವ ಮತ್ತು ಪ್ರೀತಿಯ ಮೇಲೆಯೇ ಭದ್ರವಾಗಿ ಬೆಳೆದಿದೆ. ಇಂದು ನಾವು ಜೀವನ ಹೊಸ ಅಧ್ಯಾಯ ಆರಂಭಿಸಲು ಹೊರಟಿದ್ದೇವೆ. ಆದ್ರೆ ಗಂಡ-ಹೆಂಡತಿಯಾಗಿ ಅಲ್ಲ. ಬದಲಾಗಿ ತಂದೆ-ತಾಯಿ ಮತ್ತು ವಿಸ್ತೃತ ಕುಟುಂಬದ ರೂಪದಲ್ಲಿ. ನಾವು ಕಳೆದ ಹಲವು ದಿನಗಳಿಂದಲೇ ಪ್ರತ್ಯೇಕವಾಗುವ ಪ್ಲಾನ್ ಆರಂಭಿಸಿದ್ದೇವೆ. ಇಂದು ನಮ್ಮ ನಿರ್ಧಾರವನ್ನು ಸಮಾಜದ ಮುಂದೆ ಅಧಿಕೃತವಾಗಿ ಹೇಳಿಕೊಳ್ಳುತ್ತಿದ್ದೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಮುಂದೆ ಜೊತೆಯಾಗಿ ಕೆಲಸ ಮಾಡುತ್ತೇವೆ:
    ಪತಿ-ಪತ್ನಿ ರೂಪದಲ್ಲಿ ಪ್ರತ್ಯೇಕವಾದ್ರೂ ಕುಟುಂಬಕ್ಕಾಗಿ ಒಬ್ಬರಿಗೊಬ್ಬರು ಜೊತೆಯಾಗಿರುತ್ತೇವೆ. ಜೊತೆಯಾಗಿಯೇ ಪುತ್ರನ ಪಾಲನೆ-ಪೋಷಣೆ ಮಾಡುತ್ತೇವೆ. ಸಿನಿಮಾ, ನಿರ್ಮಾಣ ಸಂಸ್ಥೆ ಮತ್ತು ಇನ್ನಿತರ ಪ್ರೊಜೆಕ್ಟ್ ಗಳಲ್ಲಿ ಸಹೋದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತೇವೆ. ಕೆಲಸದ ಮಧ್ಯೆ ಸಂಬಂಧವನ್ನು ಅಡ್ಡಿ ತರಲ್ಲ ಎಂದು ಹೇಳಿಕೊಂಡಿದ್ದಾರೆ.

    ಕುಟುಂಬ, ಗೆಳೆಯರ ಬಳಗಗಕ್ಕೆ ಧನ್ಯವಾದ:
    ಇಷ್ಟು ದಿನ ನಮ್ಮ ಜೊತೆಯಲ್ಲಿದ್ದ ಕುಟುಂಬ ಮತ್ತು ಸ್ನೇಹಿತರಿಗೂ ಧನ್ಯವಾದ. ನಿಮ್ಮ ಸಲಹೆ ಮತ್ತು ಬುದ್ಧಿಮಾತುಗಳಿಂದಲೇ ಇಷ್ಟು ದಿನ ನಮ್ಮಿಬ್ಬರ ಸಂಬಂಧ ಸದೃಢವಾಗಿತ್ತು. ನಿಮ್ಮ ಶುಭ ಹಾರೈಕೆಗಳಿಂದಲೇ ಇಲ್ಲಿಯವರೆಗೆ ಬಂದಿದ್ದೇವೆ. ಈ ವಿಚ್ಛೇದನವನ್ನು ಅಂತ್ಯ ಎಂದು ತಿಳಿಯದೇ ಹೊಸ ಬದುಕಿನ ಆರಂಭ ಎಂದು ತಿಳಿಯುತ್ತೀರಿ ಅಂತ ಭಾವಿಸುತ್ತೇವೆ.

    ಲಗಾನ್ ಚಿತ್ರದ ವೇಳೆ ಪ್ರೇಮಾಂಕುರ:
    ಲಗಾನ್ ಚಿತ್ರದ ವೇಳೆ ಆಮೀರ್ ಖಾನ್ ಮತ್ತು ಕಿರಣ್ ರಾವ್ ಪ್ರೇಮಪಾಶದಲ್ಲಿ ಬಂಧಿಯಾಗಿದ್ದರು. ಡಿಸೆಂಬರ್ 28, 2005ರಂದು ಮದುವೆಯಾಗಿದ್ದ ಜೋಡಿಗೆ ಅಜಾದ್ ಎಂಬ ಗಂಡು ಮಗುವಿದೆ. ಈ ಮೊದಲು ಆಮಿರ್ ಖಾನ್ ರೀನಾ ದತ್ತಾರನ್ನು ಮದುವೆಯಾಗಿದ್ದರು.