Tag: Kini Hotel

  • ಪಾಯಸ ವಿತರಿಸಿ ಮೋದಿ ಹುಟ್ಟುಹಬ್ಬ ಆಚರಿಸಿದ ಉಡುಪಿಯ ಕಿಣಿ ಹೋಟೆಲ್

    ಪಾಯಸ ವಿತರಿಸಿ ಮೋದಿ ಹುಟ್ಟುಹಬ್ಬ ಆಚರಿಸಿದ ಉಡುಪಿಯ ಕಿಣಿ ಹೋಟೆಲ್

    ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಆಚರಿಸಲಾಯಿತು. ಉಡುಪಿಯ ಕಡಿಯಾಳಿ ಶ್ರೀನಿವಾಸ ಹೋಟೆಲ್ ಮುಂಭಾಗ ನೂರಾರು ಜನರಿಗೆ ಪಾಯಸ ವಿತರಿಸಲಾಯ್ತು.

    ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ನೆಲೆಯಲ್ಲಿ ಪಾಯಸವನ್ನು ತಯಾರು ಮಾಡಲಾಗಿತ್ತು. ಹೋಟೆಲ್‍ಗೆ ಬರುವ ಗಿರಾಕಿಗಳಿಗೆ, ದಾರಿಯಲ್ಲಿ ಹೋಗುವ ಸಾರ್ವಜನಿಕರಿಗೆ, ಸುತ್ತಮುತ್ತಲ ಅಂಗಡಿ ಮಾಲೀಕರಿಗೆ, ಸಿಬ್ಬಂದಿಗೆ ಸ್ಪೆಷಲ್ ಮೋದಿ ಪಾಯಸವನ್ನು ವಿತರಿಸಲಾಯಿತು. ನೂರಾರು ಜನರಿಗೆ ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಾಯಸವನ್ನು ವಿತರಿಸಿ ಬಾಯಿ ಸಿಹಿ ಮಾಡಲಾಯಿತು.

    ಶ್ರೀನಿವಾಸ ಹೋಟೆಲ್ ಮಾಲೀಕ ನರಸಿಂಹ ಕಿಣಿ ಮಾತನಾಡಿ, ಪ್ರಧಾನಿ ಮೋದಿ ಸಮರ್ಥ ನಾಯಕ. ಮೋದಿ ಆಡಳಿತಾವಧಿಯಲ್ಲಿ ದಿಟ್ಟ ನಿರ್ಧಾರಗಳು ಆದವು. ಪ್ರಧಾನಿ ಮೋದಿಯವರು ಇನ್ನಷ್ಟು ಸಮರ್ಥವಾಗಿ ದೇಶವನ್ನು ಮುನ್ನಡೆಸಲು ಶಕ್ತಿ ಸಿಗಲಿ ಎಂದು ಹಾರೈಸುವ ಉದ್ದೇಶದಿಂದ ಸಿಹಿಯನ್ನು ವಿತರಿಸುವುದಾಗಿ ಹೇಳಿದರು.