Tag: Kings Punjab

  • T20 ಸರಣಿಯಲ್ಲಿ ಟೀಂ ಇಂಡಿಯಾದಿಂದ ಹೊರಬಿದ್ದ ಧವನ್‌ಗೆ ಅಪ್ಪನಿಂದಲೇ ಥಳಿತ!

    T20 ಸರಣಿಯಲ್ಲಿ ಟೀಂ ಇಂಡಿಯಾದಿಂದ ಹೊರಬಿದ್ದ ಧವನ್‌ಗೆ ಅಪ್ಪನಿಂದಲೇ ಥಳಿತ!

    ಮುಂಬೈ: ಕನ್ನಡಿಗ ಮಯಾಂಕ್ ಅಗರ್‌ವಾಲ್ ನೇತೃತ್ವದ ಕಿಂಗ್ಸ್ ಪಂಜಾಬ್ ತಂಡವು ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ. ಆದರೆ ತಮ್ಮ ಬ್ಯಾಟಿಂಗ್ ವೈಖರಿಯಿಂದ ಅತ್ಯುತ್ತಮ ಪ್ರದರ್ಶನ ನೀಡಿದ ಶಿಖರ್‌ಧವನ್ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

    ಈ ಬೆನ್ನಲ್ಲೇ ಮನೆಗೆ ಹಿಂದಿರುಗುತ್ತಿದ್ದಂತೆ ಶಿಖರ್‌ಧವನ್ ಅವರ ತಂದೆ ಮನಬಂದಂತೆ ಥಳಿಸಿದ್ದಾರೆ. ಮನೆಗೆ ಬರುತ್ತಿದ್ದಂತೆ ಜಾಡಿಸಿ ಒದ್ದು, ಕೆಳಗೆ ಬೀಳಿಸಿದ್ದಾರೆ. ಕುಟುಂಬದವರು ತಡೆಯಲು ಬಂದರೂ ಸುಮ್ಮನಾಗದೇ ಧವನ್‌ಗೆ ಮನಬಂದಂತೆ ಥಳಿಸಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಿಖರ್ ಧವನ್ ಅಭಿಮಾನಿಗಳು ಶಾಖ್ ಆಗಿದ್ದಾರೆ. ಇದನ್ನೂ ಓದಿ: ವನಿಂದು ಹಸರಂಗ ಕ್ಯಾಚ್ ವಿವಾದ – ಐಸಿಸಿ ನಿಯಮವೇನು 

    IPL CSK VS PANJAB

    ಶಿಖರ್ ಧವನ್‌ಗೆ ತನ್ನ ತಂದೆ ಥಳಿಸುತ್ತಿರುವುದನ್ನು ಕಂಡು ಕುಟುಂಬದಲ್ಲಿ ಕೋಲಾಹಲ ಎದ್ದಿತೇ? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಅಚ್ಚರಿ ಪಡಬೇಕಾದ್ದಿಲ್ಲ. ಏಕೆಂದರೆ ಇದೊಂದು ಫನ್ನಿ ವೀಡಿಯೋ ಆಗಿದೆ. ಇದನ್ನೂ ಓದಿ: ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

    ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ನಾಕೌಟ್‌ಗೆ ಕ್ವಾಲಿಫೈಯರ್ ಆಗದೇ ಹೋಗಿದ್ದರಿಂದ ನನ್ನ ತಂದೆ ನನ್ನನ್ನು ಮನೆಯಿಂದ ನಾಕೌಟ್ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Shikhar Dhawan (@shikhardofficial)

    ಶಿಖರ್ ಧವನ್ ಕೇವಲ ಮನರಂಜನೆಯ ಉದ್ದೇಶದಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳು ಎಂಜಾಯ್ ಮಾಡಲಿ ಎನ್ನುವ ಉದ್ದೇಶದಿಂದ ಶಿಖರ್ ಧವನ್ ಆಗಾಗ ಇಂತಹ ಫನ್ನಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದರಂತೆ ಅಪರೋಪದ ವೀಡಿಯೋ ಒಂದರಲ್ಲಿ ಕುಟುಂಬಸ್ಥರೂ ಕಾಣಿಸಿಕೊಂಡಿದ್ದಾರೆ.

    ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು ಗೆಲುವು ಸಾಧಿಸುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದೇ ಆವೃತ್ತಿಯಲ್ಲಿ ಧವನ್ 6 ಸಾವಿರ ರನ್‌ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದರು.

  • 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

    6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

    ಮುಂಬೈ: ಚೆನ್ನೈ ಸೂಪರ್‌ಕಿಂಗ್ಸ್ (CSK) ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಅಧಿಕ ರನ್‌ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ (ಪಂದ್ಯಶ್ರೇಷ್ಠ) ಪ್ರಶಸ್ತಿ ಗಳಿಸಿದ ಶಿಖರ್ ಧವನ್ ಐಪಿಎಲ್‌ನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚು ರನ್‌ಗಳಿಸಿರುವ ಬ್ಯಾಟ್ಸ್‌ಮನ್‌ ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ.

    CRICKET-IND-T20-IPL-DELHI-PUNJAB

    ಐಪಿಎಲ್‌ನಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಶಿಖರ್ ಧವನ್, ತಮ್ಮ ಅದ್ಭುತ ಬ್ಯಾಟಿಂಗ್ ವೈಖರಿಯಿಂದ ಅಬ್ಬರಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ 200ನೇ ಪಂದ್ಯವಾಡಿದ ಅವರು, 6 ಸಾವಿರ ರನ್‌ಗಳ ಗಡಿ ದಾಟಿದ್ದಾರೆ. ಪೂರೈಸುವ ಮೂಲಕ ಐಪಿಎಲ್‌ನಲ್ಲಿ ಹೆಚ್ಚು ರನ್‌ಗಳಿಸಿದ 2ನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಪತ್ನಿಯಿಂದ ಒಪ್ಪಿಗೆ ಪಡೆದು 38 ವರ್ಷದ ಟೀಚರ್ ಜೊತೆ 66ರ ಅರುಣ್ ಲಾಲ್ ಮದುವೆ

    DHAVAN

    ಶಿಖರ್ ಧವನ್ ಅವರಿಗಿಂತ ಮೊದಲು ಈ ಸಾಧನೆ ಮಾಡಿರುವ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ 3ನೇ ಸ್ಥಾನ, ಡೇವಿಡ್ ವಾರ್ನರ್ ನಾಲ್ಕನೇ ಸ್ಥಾನ ಹಾಗೂ ಸುರೇಶ್ ರೈನಾ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 4 ವರ್ಷಗಳ ನಂತರ ನನಗೆ ಐಪಿಎಲ್‍ನಲ್ಲಿ ಅವಕಾಶ ಸಿಕ್ಕಿದೆ: ರಿಷಿ ಧವನ್

    2022ರಲ್ಲಿ ನಡೆಯುತ್ತಿರುವ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿರುವ ಶಿಖರ್ ಧವನ್, ಈ ಹಿಂದೆ ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದ್ರಾಬಾದ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ.

    ಅಲ್ಲದೆ, ತಮ್ಮ ಟಿ20 ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳ ಗಡಿ ದಾಟಿದ್ದು, ಇದೀಗ ಅತಿಹೆಚ್ಚು ರನ್‌ಗಳಿಸಿದ ಭಾರತದ 3ನೇ ಆಟಗಾರ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.

    ಐಪಿಎಲ್‌ನಲ್ಲಿ ಅತ್ಯಧಿಕ ರನ್‌ಗಳಿಸಿದವರು
    ವಿರಾಟ್ ಕೊಹ್ಲಿ – 215 ಪಂದ್ಯಗಳು- 6402 ರನ್
    ಶಿಖರ್ ಧವನ್ – 200 ಪಂದ್ಯಗಳು- 6086 ರನ್
    ರೋಹಿತ್ ಶರ್ಮಾ 221 ಪದ್ಯಗಳು- 5764
    ಡೇವಿಡ್ ವಾರ್ನರ್ 155 ಪಂದ್ಯಗಳು – 5668
    ಸುರೇಶ್ ರೈನಾ- 205 ಪಂದ್ಯಗಳು- 5528

  • ಬಲಿಷ್ಠ ತಂಡಗಳ ಹಣಾ-ಹಣಿ ಇಂದು – ಐಪಿಎಲ್ ಪ್ರಿಯರಿಗೆ ಡಬಲ್ ಧಮಾಕ

    ಬಲಿಷ್ಠ ತಂಡಗಳ ಹಣಾ-ಹಣಿ ಇಂದು – ಐಪಿಎಲ್ ಪ್ರಿಯರಿಗೆ ಡಬಲ್ ಧಮಾಕ

    ಮುಂಬೈ: ತಲಾ 3 ಪಂದ್ಯಗಳನ್ನು ಗೆದ್ದು ವಿಶ್ವಾಸದಲ್ಲಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕತ್ವದ ಕಿಂಗ್ಸ್ ಪಂಜಾಬ್ ಮತ್ತು ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಸೆಣಸಲಿವೆ.

    ಸಂಜೆ 7.30ಕ್ಕೆ ನಡೆಯುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಹಣಾಹಣಿ ನಡೆಸಲಿವೆ. ಇದನ್ನೂ ಓದಿ: ಡಿಕೆ ಸ್ಫೋಟಕ ಫಿಫ್ಟಿ – ಕೊಹ್ಲಿ ಸ್ಟನ್ನಿಂಗ್ ಕ್ಯಾಚ್‌ – ಡೆಲ್ಲಿ ವಿರುದ್ಧ ಆರ್​ಸಿಬಿಗೆ 16 ರನ್‍ಗಳ ಜಯ

    IPL 2022 SRH (1)

    ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂಜಾಬ್ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಗಲಿವೆ. ಎರಡೂ ತಂಡಗಳೂ ಈ ಟೂರ್ನಿಯಲ್ಲಿ ಸಿಹಿ, ಕಹಿಯನ್ನು ಸಮನಾಗಿ ಅನುಭವಿಸಿದ್ದು, 5ಕ್ಕೆ ತಲಾ 3 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಈವರೆಗೆ 17 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 5 ಪಂದ್ಯಗಳಲ್ಲಿ ಪಂಜಾಬ್ ಹಾಗೂ 12 ಪಂದ್ಯಗಳಲ್ಲಿ ಹೈದರಾಬಾದ್ ಗೆಲುವು ಸಾಧಿಸಿದೆ.

    ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಹೈದ್ರಾಬಾದ್ ತಂಡವು ಸತತ 3 ಪಂದ್ಯಗಳಲ್ಲಿ ಜಯ ಸಾಧಿಸಿತು. ಬ್ಯಾಟಿಂಗ್ ಲಯಕ್ಕೆ ಮರಳಿರುವ ಜೇಸನ್ ರಾಯ್ ಮತ್ತು ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸುತ್ತಿದ್ದರೆ, ಜೇಸನ್ ಹೋಲ್ಡರ್, ಭುವನೇಶ್ವರ್ ಕುಮಾರ್, ರಶೀದ್ ಖಾನ್ ಬೌಲಿಂಗ್‌ನಲ್ಲಿ ತಮ್ಮ ಪ್ರಾಬಲ್ಯ ಮೆರೆಯುತ್ತಾ ಗೆಲುವಿನ ಹಾದಿಗೆ ತರುತ್ತಿದ್ದಾರೆ.

    IPL 2022 CSK (1)

    ಪಂಜಾಬ್ ತಂಡವು ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸೋಲಿಸಿದೆ. ಅಲ್ಲದೆ ತಾನು ಸೋತ ಎರಡು ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಮಯಾಂಕ್ ಅಗರ್ವಾಲ್, ಶಿಖರ್ ಧವನ್, ಹೊಸಪ್ರತಿಭೆ ಜಿತೇಶ್ ಶರ್ಮಾ ಉತ್ತಮ ಲಯದಲ್ಲಿದ್ದಾರೆ. ಇದನ್ನೂ ಓದಿ: 7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ

    ಆಲ್‌ರೌಂಡರ್‌ಗಳ ಸವಾಲ್
    ಮೊದಲ ಬಾರಿಗೆ ಐಪಿಎಲ್ ನಾಯಕತ್ವದ ಹೊಣೆ ಹೊತ್ತಿರುವ ಭಾರತ ಕ್ರಿಕೆಟ್ ತಂಡದ ಇಬ್ಬರು ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡಗಳು ಇಂದು ಮುಖಾಮುಖಿಯಾಗವೆ. ಗುಜರಾತ್ ಹೊಸ ತಂಡದ ಸೇರ್ಪಡೆಯಿಂದ ಇದೇ ಮೊದಲಬಾರಿಗೆ ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂದ್ಯವು ಸಂಜೆ 7.30ಕ್ಕೆ ಪುಣೆಯಲ್ಲಿರುವ ಮಹಾರಾಷ್ಟç ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದನ್ನೂ ಓದಿ: ಅಯ್ಯರ್‌ಗೆ 12 ಲಕ್ಷ ದಂಡ – ಐಪಿಎಲ್‌ನಲ್ಲಿ ದಂಡ ಹಾಕೋದು ಯಾಕೆ?

    IPL 2022 SRH (1)

    ಬಲಿಷ್ಠ ತಂಡಗಳ ಪೈಕಿ ಈಗಾಗಲೇ ವೋಟಿಂಗ್‌ಪೋಲ್ ನಡೆಸಲಾಗುತ್ತಿದ್ದು, ಪಂಜಾಬ್ ಗೆಲುವಿಗೆ 19,764 ಮಂದಿ, ಎಸ್‌ಆರ್‌ಎಚ್‌ಗೆ 20,554 ಮಂದಿ ಬೆಂಬಲಿಸಿದ್ದಾರೆ. ಅಂತೆಯೇ ಗುಜರಾತ್ ಟೈಟನ್ಸ್‌ಗೆ 9,682 ಮಂದಿ ಪ್ರೋತ್ಸಾಹಿಸಿದ್ದು, ಚೆನ್ನೈ 10,618 ಜನರ ಬೆಂಬಲ ಗಳಿಸಿದೆ. ಚೆನ್ನೈ ಈಗಾಗಲೇ ಐಪಿಎಲ್ ಕ್ರಮಾಂಕದಲ್ಲಿ ಕೆಳಕ್ಕೆ ಕುಸಿದಿದ್ದು, ಪ್ಲೆ-ಆಫ್ ತಲುಪಲು ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

  • ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸಿದ ಜಾಂಟಿ ರೋಡ್ಸ್

    ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸಿದ ಜಾಂಟಿ ರೋಡ್ಸ್

    ಮುಂಬೈ: ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ ವರ್ಷಗಳೇ ಕಳೆದರೂ ಎಷ್ಟು ಆಟಗಾರಿಗೆ ತಮ್ಮ ಸ್ಟಾರ್‌ಗಳ ಮೇಲಿನ ಭಕ್ತಿ ಕಡಿಮೆಯಾಗಿಲ್ಲ ಎಂಬುದಕ್ಕೆ ಬುಧವಾರ ಐಪಿಎಲ್ ವೇಳೆ ಕಂಡುಬಂದ ದೃಶ್ಯವೊಂದು ಸಾಕ್ಷಿಯಾಯಿತು.

    ROADS

    ಹೌದು… 2022ನೇ ಸಾಲಿನ 15ನೇ ಆವೃತ್ತಿಯ ವೇಳೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಕಿಂಗ್ಸ್ ಪಂಜಾಬ್ ನಡುವಣ ಪಂದ್ಯದ ಬಳಿಕ ಎರಡೂ ತಂಡದ ಆಟಗಾರರೂ ಪರಸ್ಪರ ಹಸ್ತಲಾಘವ ಮಾಡುತ್ತಿದ್ದ ವೇಳೆ ರೋಡ್ಸ್ ಸಚಿನ್ ಕಾಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ಸಚಿನ್ ತಡೆಯಲು ಪ್ರಯತ್ನಿಸಿದ್ದಾದರೂ ರೋಡ್ಸ್ ತಮ್ಮ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    ಪ್ರಸ್ತುತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚ್ಚಿನ್‌ಗಿಂತಲೂ ನಾಲ್ಕು ವರ್ಷ ದೊಡ್ಡವರಾಗಿರುವ ಜಾಂಟಿ ರೋಡ್ಸ್ (52) ಅವರ ವಿನಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 2009ರಿಂದ 2017ರ ವರೆಗೆ ಮುಂಬೈ ತಂಡದ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಕರ್ತವ್ಯ ನಿರ್ವಹಿಸಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇದನ್ನೂ ಓದಿ: ಧೋನಿಯೇ ಮುಖ್ಯವಾದ್ರೆ ಉಳಿದ ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ: ಭಜ್ಜಿ ಪ್ರಶ್ನೆ

    ಪಂಜಾಬ್ ಕಿಂಗ್ಸ್ ತಂಡದ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಜವಾಬ್ದಾರಿಯನ್ನು ಜಾಂಟಿ ರೋಡ್ಸ್ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 12 ರನ್ ಅಂತರದ ಗೆಲುವು ದಾಖಲಿಸಿತ್ತು. ಈ ಹಿಂದೆ ಭಾರತದ ಮೇಲಿನ ಪ್ರೀತಿಗಾಗಿ ಜಾಂಟಿ ರೋಡ್ಸ್ ತನ್ನ ಮಗಳಿಗೆ `ಇಂಡಿಯಾ’ ಎಂದು ಹೆಸರಿಟ್ಟಿದ್ದರು ಎನ್ನುವುದು ಇಲ್ಲಿ ವಿಶೇಷ.

  • ಸತತ ಸೋಲಿನ ಸುಳಿಯಲ್ಲಿರುವ ಮುಂಬೈಗೆ ಮತ್ತೊಂದು ಬರೆ

    ಸತತ ಸೋಲಿನ ಸುಳಿಯಲ್ಲಿರುವ ಮುಂಬೈಗೆ ಮತ್ತೊಂದು ಬರೆ

    ಮುಂಬೈ: 15 ಐಪಿಎಲ್ ಆವೃತ್ತಿಯಲ್ಲಿ ಕಳೆದ 5 ಪಂದ್ಯಗಳಲ್ಲೂ ಸತತವಾಗಿ ಸೋಲನ್ನು ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಬರೆ ಬಿದ್ದಿದೆ.

    ಹೌದು.. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ 11 ಸಹ ಆಟಗಾರರಿಗೆ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    IPL 2022 MI (1)

    ಬುಧವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಆಸೋಸಿಯೆಶನ್ ಸ್ಟೇಡಿಯಂನಲ್ಲಿ ನಡೆದ ಕಿಂಗ್ಸ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಪ್ರದರ್ಶಿಸಿದ್ದಕ್ಕಾಗಿ ರೋಹಿತ್ ಶರ್ಮಾಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ತಂಡದ 10 ಸಹ ಆಟಗಾರರಿಗೆ ತಲಾ 6 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ ಶೇ.25 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಯೋಜಕರು ತಿಳಿಸಿದ್ದಾರೆ.

    15ನೇ ಆವೃತ್ತಿಯ ಐಪಿಎಲ್‌ನ ಕಿಂಗ್ಸ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ 186 ರನ್‌ಗಳಿಸಿದ ಮುಂಬೈ ಇಂಡಿಯನ್ಸ್ ತಂಡವು 12 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿದೆ. ಇದರಿಂದಾಗಿ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯುವಂತಾಗಿದೆ. ಇದನ್ನೂ ಓದಿ: ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    suryakumar and rohith sharma

    ಪಂದ್ಯದ ಬಳಿಕ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಸತತವಾಗಿ 5 ಪಂದ್ಯಗಲ್ಲಿ ಸೋಲನ್ನು ಕಂಡಿದೆ. ಪಂಜಾಬ್ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಾವು ಮೈದಾನದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ಕೊನೆಯ ಇನ್ನಿಂಗ್ಸನಲ್ಲಂತೂ ಗೆಲುವಿನ ಸಮೀಪಕ್ಕೆ ಬಂದಿದ್ದೇವೆ. ಆದರೆ, ಪ್ರಮುಖ ರನೌಟ್‌ಗಳು ಸಂಭವಿಸಿದ್ದರಿಂದ ಸೋಲಾಯಿತು. ಬದಲಾವಣೆಗಾಗಿ ಹೊಸ ಆಲೋಚನಾ ಕ್ರಮವನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.