Tag: king film

  • ಶಾರುಖ್ ಖಾನ್ ‘ಕಿಂಗ್’ ಸಿನಿಮಾದಲ್ಲಿ ಅನಿಲ್ ಕಪೂರ್

    ಶಾರುಖ್ ಖಾನ್ ‘ಕಿಂಗ್’ ಸಿನಿಮಾದಲ್ಲಿ ಅನಿಲ್ ಕಪೂರ್

    ಬಾಲಿವುಡ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರು ‘ಕಿಂಗ್’ (King) ಚಿತ್ರದ ಮೂಲಕ ಮಗಳು ಸುಹಾನಾ ಖಾನ್ ಅವರನ್ನು ಅದ್ಧೂರಿಯಾಗಿ ಲಾಂಚ್ ಮಾಡಲು ಮುಂದಾಗಿದ್ದಾರೆ. ದಿನದಿಂದ ದಿನಕ್ಕೆ ಕಲಾವಿದರ ಬಳಗ ಕೂಡ ಹಿರಿದಾಗುತ್ತಿದೆ. ದೀಪಿಕಾ ಪಡುಕೋಣೆ ಬಳಿಕ ಅನಿಲ್ ಕಪೂರ್ (Anil Kapoor) ಕೂಡ ‘ಕಿಂಗ್’ ಚಿತ್ರತಂಡಕ್ಕೆ ಸಾಥ್ ನೀಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಫ್ರೆಂಡ್ಸ್ ಜೊತೆ ಮೋಕ್ಷಿತಾ ಫಾರಿನ್ ಟ್ರಿಪ್

    ಸದಾ ಬಗೆ ಬಗೆಯ ಪಾತ್ರಗಳ ಮೂಲಕ ಕಮಾಲ್ ಮಾಡುವ ಅನಿಲ್ ಕಪೂರ್‌ಗೆ ಬಿಗ್ ಆಫರ್‌ವೊಂದು ಸಿಕ್ಕಿದೆ. ‘ಕಿಂಗ್’ ಸಿನಿಮಾದಲ್ಲಿ ನಟಿಸಲು ಅವರನ್ನು ಕೇಳಲಾಗಿದೆ. ಪವರ್‌ಫುಲ್ ಪಾತ್ರಕ್ಕೆ ಅವರು ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಅವರ ಪಾತ್ರ ತಿರುವು ನೀಡಲಿದೆಯಂತೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ. ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ

    ಈ ಸಿನಿಮಾದ ಚಿತ್ರದ ಶೂಟಿಂಗ್ ಅನ್ನು ಮೇ 20ರಿಂದ ಶುರು ಮಾಡಲು ಪ್ಲ್ಯಾನ್ ಮಾಡಲಾಗಿದೆ. ಶಾರುಖ್, ಸುಹಾನಾ ಜೊತೆ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಅಭಯ್ ವರ್ಮಾ ಸೇರಿದಂತೆ ಅನೇಕರು ನಟಿಸಲಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

    ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಕಿಂಗ್’ ಚಿತ್ರಕ್ಕೆ ‘ಪಠಾಣ್’ ಖ್ಯಾತಿಯ ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

  • ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾದ ದೀಪಿಕಾ ಪಡುಕೋಣೆ

    ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾದ ದೀಪಿಕಾ ಪಡುಕೋಣೆ

    ‘ಪಠಾಣ್’ ಬೆಡಗಿ ದೀಪಿಕಾ ಪಡುಕೋಣೆ‌ (Deepika Padukone) ಬಗ್ಗೆ ಫ್ಯಾನ್ಸ್‌ಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಮಗುವಿನ ಆರೈಯಲ್ಲಿ ಬ್ಯುಸಿಯಾಗಿದ್ದ ದೀಪಿಕಾ ಮತ್ತೆ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಉಗ್ರರ ದಾಳಿ ಖಂಡಿಸಿದ ಶ್ರೀನಿಧಿ ಶೆಟ್ಟಿ

    ಕಳೆದ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದ್ದರು. ಈ ಹಿನ್ನೆಲೆ ನಟನೆಯಿಂದ ದೀಪಿಕಾ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಮತ್ತೆ ಶಾರುಖ್ ಖಾನ್ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗಿದೆ. ಹೀಗೊಂದು ಸುದ್ದಿ ಇದೀಗ ಹರಿದಾಡುತ್ತಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್

    ಶಾರುಖ್ ನಟನೆಯ ‘ಕಿಂಗ್’ (King) ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ನಟಿಸಲು ನಟಿಯ ಜೊತೆ ಚಿತ್ರತಂಡ ಚರ್ಚಿಸಲಾಗಿದೆಯಂತೆ. ಈ ಚಿತ್ರದಲ್ಲಿ ನಟಿಸಲು ಅವರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಮೇ 18ರಿಂದ ‘ಕಿಂಗ್’ ಚಿತ್ರದ ಶೂಟಿಂಗ್‌ಗೆ ಪ್ಲ್ಯಾನ್ ಮಾಡಲಾಗಿದೆ. ಅಕ್ಟೋಬರ್‌ನಲ್ಲಿ ದೀಪಿಕಾ ಪಾತ್ರದ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

    ಕಳೆದ ವರ್ಷ ಕಲ್ಕಿ 2898 ಎಡಿ, ಸಿಂಗಂ ಅಗೈನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕಡೆಯದಾಗಿ ನಟಿಸಿದ್ದರು.

  • 5 ಕೋಟಿ ಮೌಲ್ಯದ ದುಬಾರಿ ವಾಚ್ ಧರಿಸಿದ ಶಾರುಖ್ ಖಾನ್

    5 ಕೋಟಿ ಮೌಲ್ಯದ ದುಬಾರಿ ವಾಚ್ ಧರಿಸಿದ ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಸಿನಿಮಾ ಬದಲು ದುಬಾರಿ ವಾಚ್ ಧರಿಸಿದ್ದಕ್ಕೆ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸಮಾರಂಭವೊಂದರಲ್ಲಿ ಶಾರುಖ್ ಅವರು ದುಬಾರಿ ವಾಚ್ ಧರಿಸಿ ಸಖತ್ ಆಗಿ ಮಿಂಚಿದ್ದಾರೆ. ಈ ಬೆನ್ನಲ್ಲೇ ವಾಚ್ ಅಸಲಿ ಬೆಲೆ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 5 ಕೋಟಿ ರೂ. ಬೆಲೆ ಬಾಳುವ ವಾಚ್ ಅನ್ನು ಧರಿಸಿಕೊಂಡು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ರೆಬೆಲ್ ಸ್ಟಾರ್ ಮನೆಯಲ್ಲಿ ಸಂಭ್ರಮ – ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟ ಅವಿವಾ

    ಶಾರುಖ್ ಅವರು ‘ಆಡೆಮಾರ್ಸ್ ಪಿಗುಯೆಟ್ ರಾಯಲ್ ಓಕ್ ಡಬಲ್ ಬ್ಯಾಲೆನ್ಸ್ ವೀಲ್ ಓಪನ್‌ವರ್ಕ್ಡ್ ವಾಚ್’ ಅನ್ನು ಧರಿಸಿದ್ದಾರೆ. ಇದು 41 ಎಂಎಂ, 18-ಕ್ಯಾರೆಟ್ ರೋಸ್ ಗೋಲ್ಡ್ ಈ ವಾಚ್ ಅನ್ನು ರಚಿಸಲಾಗಿದೆ. ಶಾರುಖ್ ಧರಿಸಿದ್ದ ಈ ವಾಚ್ ಸಖತ್ ಸ್ಟೈಲೀಶ್ ಆಗಿದ್ದು, ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ.

    ಅಂದಹಾಗೆ, ಶಾರುಖ್ ಸದ್ಯ ‘ಕಿಂಗ್’ (King) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಮಗಳು ಸುಹಾನಾರನ್ನು (Suhana Khan) ಚಿತ್ರರಂಗಕ್ಕೆ ಪರಿಚಯಿಸಲಿದ್ದಾರೆ. ವಿಶೇಷ ಅಂದರೆ, ಶಾರುಖ್ ಎದುರು ಅಭಿಷೇಕ್ ಬಚ್ಚನ್ ವಿಲನ್ ಆಗಿ ಅಬ್ಬರಿಸಲಿದ್ದಾರೆ.

  • ಯಾವಾಗ ಶುರುವಾಗಲಿದೆ ಶಾರುಖ್ ಖಾನ್, ಸುಹಾನಾ ನಟನೆಯ ಸಿನಿಮಾ?

    ಯಾವಾಗ ಶುರುವಾಗಲಿದೆ ಶಾರುಖ್ ಖಾನ್, ಸುಹಾನಾ ನಟನೆಯ ಸಿನಿಮಾ?

    ‘ಪಠಾಣ್’ (Paathan) ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರು ತಮ್ಮ ಮಗಳ ಜೊತೆ ಸಿನಿಮಾ ಮಾಡುವ ಬಗ್ಗೆ ಈಗಾಗಲೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ಅಪ್ಪ-ಮಗಳನ್ನ ಕಣ್ತುಂಬಿಕೊಳ್ಳುವ ಭಾಗ್ಯ ಫ್ಯಾನ್ಸ್‌ಗೆ ಸಿಗಲಿದೆ. ಶಾರುಖ್ ಮತ್ತು ಸುಹಾನಾ (Suhana Khan) ಖಾನ್ ಜೊತೆಯಾಗಿ ನಟಿಸುತ್ತಿದ್ದಾರೆ ಎಂಬುದು ಹಳೆಯ ವಿಚಾರ. ಆದರೆ ಈ ಸಿನಿಮಾ ಯಾವಾಗ ಶುರುವಾಗುತ್ತೆ? ಇಬ್ಬರ ಪಾತ್ರ ಹೇಗಿದೆ? ಎಂಬುದರ ಮಾಹಿತಿ ಇಲ್ಲಿದೆ.

    ‘ಪಠಾಣ್ 2’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶಾರುಖ್ ಬ್ಯುಸಿಯಿದ್ರೆ, ಇತ್ತ ಸುಹಾನಾ ನಟಿಸಿದ ಮೊದಲ ಸಿನಿಮಾ ‘ಆರ್ಚೀಸ್’ ರಿಲೀಸ್ ಆದ್ಮೇಲೆ ಮತ್ತೊಂದು ಬಿಗ್ ಆಫರ್ ಅನ್ನು ಸುಹಾನಾ ಬಾಚಿಕೊಂಡಿದ್ದಾರೆ. ಸದ್ಯ ಶಾರುಖ್‌- ಸುಹಾನಾ ನಟನೆಯ ಈ ಚಿತ್ರಕ್ಕೆ ‘ಕಿಂಗ್’ (King) ಎಂದು ಟೈಟಲ್‌ ಫೈನಲ್‌ ಮಾಡಿದ್ದಾರೆ.

    ‘ಕಿಂಗ್’ ಆ್ಯಕ್ಷನ್ ಕುರಿತ ಸಿನಿಮಾ ಆಗಿರೋದ್ರಿಂದ ಸುಹಾನಾಗೆ ಪಾತ್ರಕ್ಕೆ ತಕ್ಕಂತೆ ಟ್ರೈನಿಂಗ್ ಕೊಡಲಾಗುತ್ತಿದೆ. ತಮ್ಮ ಪಾತ್ರಕ್ಕಾಗಿ ತೆರೆಮರೆಯಲ್ಲಿ ನಟಿ ಸಖತ್ ಕಸರತ್ತು ಮಾಡ್ತಿದ್ದಾರೆ. ಶಾರುಖ್ ಮತ್ತು ಸುಹಾನಾ ಇಬ್ಬರ ಪಾತ್ರ ಕೂಡ ವಿಭಿನ್ನವಾಗಿದೆ. ಈ ಸಿನಿಮಾಗೆ ಸುಜೋಯ್ ಘೋಷ್ ನಿರ್ದೇಶನ ಮಾಡ್ತಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಪ್ರಥಮ್ ನಟಿಸಿ, ನಿರ್ದೇಶಿಸಿದ ‘ಫಸ್ಟ್ ನೈಟ್ ವಿತ್ ದೆವ್ವ’ ಟೀಸರ್ ಬಿಡುಗಡೆ

    ಮಗಳ ಸಿನಿಮಾಗೆ ತಂದೆಯೇ ಸಾಥ್ ನೀಡ್ತಿದ್ದಾರೆ. ‘ಪಠಾಣ್’ ಸಿನಿಮಾ ಸಕ್ಸಸ್ ಆದ್ಮೇಲೆ ಶಾರುಖ್ ಖಾನ್‌ಗೆ ಹೆಚ್ಚಿನ ಬೇಡಿಕೆಯಿದೆ. ತನ್ನ ಹಾಗೆಯೇ ಮಗಳು ಕೂಡ ಸಕ್ಸಸ್ ಫುಲ್ ಕಲಾವಿದೆಯಾಗಿ ಮಿಂಚಬೇಕು ಎಂದು ಕಿಂಗ್ ಖಾನ್ ಆಸೆ. ಹಾಗಾಗಿ ಮಗಳಿಗೆ ಎಲ್ಲಾ ರೀತಿಯ ಟ್ರೈನಿಂಗ್ ಕೊಟ್ಟು ಕ್ಯಾಮೆರಾ ಮುಂದೆ ನಿಲ್ಲಿಸಲು ಶಾರುಖ್ ನಿರ್ಧರಿಸಿದ್ದಾರೆ.

    ಈ ವರ್ಷ ಮೇ ಅಂತ್ಯದಲ್ಲಿ ‘ಕಿಂಗ್’ ಸಿನಿಮಾ ಶೂಟಿಂಗ್ ಶುರುವಾಗಲಿದೆ. ರೆಡ್ ಚಿಲ್ಲೀಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಈ ಚಿತ್ರದ ನಿರ್ಮಾಣಕ್ಕೆ ‘ಪಠಾಣ್’ ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ಸಾಥ್ ನೀಡುತ್ತಿದ್ದಾರೆ.