Tag: kimmane ratnakar

  • ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು: ಕಿಮ್ಮನೆ ರತ್ನಾಕರ್

    ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು: ಕಿಮ್ಮನೆ ರತ್ನಾಕರ್

    ಶಿವಮೊಗ್ಗ: ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ (Kimmane Ratnkar) ಹೇಳಿದ್ದಾರೆ.

    ಶಿವಮೊಗ್ಗ (Shivamogga) ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಭರವಸೆ ಕೊಟ್ಟಿತ್ತು. ಗ್ಯಾರಂಟಿಗಳನ್ನು ಸರ್ಕಾರ ಹಂತ ಹಂತವಾಗಿ ಅನುಷ್ಠಾನ ಮಾಡುತ್ತಿದೆ. ಗ್ಯಾರಂಟಿಗಳ ಬಗ್ಗೆ ಬಿಜೆಪಿ (BJP) ಯವರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಇವರ ತಲೆಯೊಳಗೆ ಏನು ಸಗಣಿ ಇದೆಯಾ..? ನನಗೆ ಅರ್ಥ ಅಗುತ್ತಿಲ್ಲ. ಸಾಮಾನ್ಯ ಕಾರ್ಯಕರ್ತ ಹೇಳಿದರೆ ತಲೆ ಕೆಡಿಸಿಕೊಳ್ಳಲ್ಲ. ಸಂಸತ್ ಸದಸ್ಯರು, ಸಚಿವರು, ರಾಜ್ಯವನ್ನು ಆಳಿದವರು ಜವಾಬ್ದಾರಿಯಿಂದ ಮಾತನಾಡಬೇಕು. ಗಾಂಧಿ ಪ್ರತಿಮೆ ಎದುರು ಜುಲೈ 3 ರಂದು ಪ್ರತಿಭಟನೆ ಮಾಡ್ತೇವೆ ಅಂದಿದ್ದಾರೆ ಎಂದರು.

    ಯಡಿಯೂರಪ್ಪ (BS Yediyurappa) ಬಗ್ಗೆ ಗೌರವ ಇದೆ. ಅವರಿಗೆ ಪ್ರಶ್ನೆ ಮಾಡುತ್ತೆನೆ. ನೀವು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಮನ್ನಾ ಮಾಡ್ತೇವೆ ಎಂದಿದ್ರು, ಮಾಡಿದ್ರಾ..?. 605 ಅಂಶಗಳ ಪ್ರಣಾಳಿಕೆ ನೀಡಿದ್ರು, ಅದರಲ್ಲಿ 50 ಅಂಶನಾದ್ರೂ ಅನುಷ್ಟಾನ ಮಾಡಿದ್ರಾ? 2 ಕೋಟಿ ಉದ್ಯೋಗ ಕೋಡ್ತೇವೆ ಎಂದು ಹೇಳಿದ್ರು. 9 ವರ್ಷಕ್ಕೆ 18 ಕೋಟಿ ಉದ್ಯೋಗವನ್ನು ಕೊಡ್ತೇವೆ ಎಂದವರು ಕೊಟ್ರಾ?. ಇದಕ್ಕೆಲ್ಲಾ ಯಡಿಯೂರಪ್ಪ, ಈಶ್ವರಪ್ಪ, ಪ್ರತಾಪ್ ಸಿಂಹ ಉತ್ತರ ಕೋಡ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕೊಪ್ಪಳದ ವಿದ್ಯಾರ್ಥಿನಿ ಪತ್ರಕ್ಕೆ ಸಿದ್ದರಾಮಯ್ಯ ಸಂತಸ – ಮರಳಿ ಪತ್ರ ಬರೆದ ಸಿಎಂ

    ಬಿಜೆಪಿಯವರಿಗೆ ಕಾಂಗ್ರೆಸ್ ಗ್ಯಾರಂಟಿ (Congress Guarantee) ಬಗ್ಗೆ ಮಾತನಾಡುವ ನೈತಿಕತೆ, ಅರ್ಹತೆ ಇಲ್ಲ. ಇವೆಲ್ಲವನ್ನೂ ಒಂದೇ ಸರಿ ಮಾಡುವುದು ಅಷ್ಟು ಸುಲಭ ಅಲ್ಲ. ಬಸ್ ವ್ಯವಸ್ಥೆ ಕೊಟ್ಟಷ್ಟು ಉಳಿದ ಗ್ಯಾರಂಟಿ ಇಲ್ಲ. ಕೆಲವೊಂದು ವ್ಯವಸ್ಥೆ ಅಗಬೇಕು. ಒಂದೆರಡು ದಿನದಲ್ಲಿ ಮನೆಯ ಸಮಸ್ಯೆಯೇ ಬಗೆಹರಿಯಲ್ಲ. ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು. ಜುಲೈ 3 ರಂದು ನಾನು ಕೂಡ ಉಪವಾಸ ಹೋರಾಟ ಮಾಡುತ್ತೇನೆ. ಶಿವಮೊಗ್ಗದ ಗಾಂಧಿ ಪಾರ್ಕ್‍ನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡ್ತೇನೆ. ಕೇಂದ್ರ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಅವರು 15 ಲಕ್ಷ ಕೊಟ್ರೆ ನಾವೆಲ್ಲರೂ ರಾಜ್ಯ ಸರ್ಕಾರಕ್ಕೆ ಜಮಾ ಮಾಡ್ತೇವೆ ಎಂದು ಹೇಳಿದರು.

    ಇದೇ ವೇಳೆ ಕಾಂಗ್ರೆಸ್ ಸರ್ಕಾರ ಹಗರಣ ತನಿಖೆ ಮಾಡಲಿ ಎಂಬ ಆರಗ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕೂಡ ಹಗರಣಗಳ ತನಿಖೆಗೆ ಒತ್ತಾಯ ಮಾಡಿದ್ದೇನೆ. ಪಿಎ ಹಗರಣವನ್ನು ತನಿಖೆ ಮಾಡಲು ಒತ್ತಾಯಿಸುತ್ತೇನೆ. ಆ ಹಗರಣದ ದುಡ್ಡಲ್ಲೇ ನಾನು ತೀರ್ಥಹಳ್ಳಿಯಲ್ಲಿ ಸೋತಿದ್ದೇನೆ. ಆರತಿ ಮಾಡಿದ್ರಲ್ಲಾ ಆ ದಿವ್ಯಾ ಹಾಗರಗಿ, ಸ್ಯಾಂಟ್ರೋ ರವಿ, ಆರ್ ಜೆ.ಪಾಟೀಲ್ ಹಣದಿಂದಲೇ ಸೋತಿದ್ದೇನೆ ಎಂದು ಹೇಳಿದರು.

    ತೀರ್ಥಹಳ್ಳಿಯಲ್ಲಿ 70 ಕೋಟಿ ಖರ್ಚು ಮಾಡಿದ್ದಾರೆ. ಈ ಹಿಂದೆ ನಂದಿತಾ ಪ್ರಕರಣ ಹೇಳಿದ್ರಲ್ಲಾ ಇವರದ್ದೇ ಸರ್ಕಾರ ಇತ್ತಲ್ಲ ಏನು ಮಾಡಿದ್ರು. ಸಿಬಿಐ ತನಿಖೆ ಮಾಡಿದ್ರೇ ಇವರೇ ಒಳಗೆ ಹೋಗ್ತಾರೆ. ಅಕ್ಕಿ ಕೊಡಲ್ಲ ಎಂದು ಹೇಳ್ತಾ ಇದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇವೆಲ್ಲಾ ದೇಶದ ಏಕತೆಗೆ ಧಕ್ಕೆ ಉಂಟು ಮಾಡುತ್ತವೆ. ಪ್ರತ್ಯೇಕ ಕೇಳಿದ್ರೇ ದೇಶದ ಏಕತೆ ಸ್ಥಿತಿ ಏನಾಗುತ್ತದೆ ಎಂದು ಯೋಚನೆ ಮಾಡಲಿ ಎಂದು ತಿಳಿಸಿದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರ ಮನೆಗಳ ಶೋಧ – ಕಿಮ್ಮನೆ ಬಳಿಯೂ ಮಾಹಿತಿ ಸಂಗ್ರಹ

    ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರ ಮನೆಗಳ ಶೋಧ – ಕಿಮ್ಮನೆ ಬಳಿಯೂ ಮಾಹಿತಿ ಸಂಗ್ರಹ

    ಶಿವಮೊಗ್ಗ: ಮಂಗಳೂರು ಸ್ಫೋಟ (Mangaluru Blast) ಪ್ರಕರಣ ಸಂಬಂಧ ರಾಜ್ಯದಲ್ಲಿ ಎನ್‍ಐಎ (NIA) ದಾಳಿ ಮುಂದುವರೆದಿದೆ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ (Thirthahalli) ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಎನ್‍ಐಎ ಅಧಿಕಾರಿಗಳು, ಮೂವರು ಶಂಕಿತ ಉಗ್ರರ ಮನೆ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಜಾಲಾಡಿದ್ದಾರೆ.

    ಮಾಜ್, ಮತಿನ್ ಮತ್ತು ಶಾರೀಕ್ ಮನೆ ಸೇರಿ ಅಕ್ಕಪಕ್ಕದ ಮನೆಗಳಿಗೂ ತೆರಳಿದ ಎನ್‍ಐಎ ಅಧಿಕಾರಿಗಳು, ಮೊದಲು ಮೊಬೈಲ್ ಸ್ವಿಚ್ ಆಫ್ ಮಾಡಿಸಿ, ಫೋಟೋ, ವಿಡಿಯೋ ಮಾಡುವುದನ್ನು ನಿರ್ಬಂಧಿಸಿ, ಶಂಕಿತ ಉಗ್ರರ ಹಣಕಾಸು ಮೂಲ, ಹಿನ್ನೆಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಹಿಂದುತ್ವ, ಧರ್ಮ, ದೇವರುಗಳನ್ನ ನಂಬಬೇಡಿ – ಜನತೆಗೆ ಸಿದ್ದರಾಮಯ್ಯ ಮನವಿ

    ಇದೇ ವೇಳೆ, ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ (Kimmane Ratnakar) ಕಚೇರಿ ಇರುವ ಕಟ್ಟಡದ ಮೇಲೆಯೂ ಎನ್‍ಐಎ ದಾಳಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಿಮ್ಮನೆ ರತ್ನಾಕರ್, ಕಚೇರಿ ಕಟ್ಟಡ ಬಾಡಿಗೆ ಪಡೆದಿರುವ ಬಗ್ಗೆ ಎನ್‍ಐಎ ಅಧಿಕಾರಿಗಳು ಮಾಹಿತಿ ಕೇಳಿದ್ದರು. ಈ ಕಟ್ಟಡ ಹಾಸಿಂ ಎನ್ನುವವರಿಗೆ ಸೇರಿದ್ದು ಈ ಬಗ್ಗೆ ವಿವರ ನೀಡಿದ್ದೇನೆ. ಆದರೆ ಬಿಜೆಪಿಯವರು ನನ್ನ ಮನೆ ಮೇಲೆ ಎನ್‍ಐಎ ದಾಳಿ ನಡೆದಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಅಲ್ಲ, ಕೇವಲ ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವ: ಕಿಮ್ಮನೆ ರತ್ನಾಕರ್

    ಆರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಅಲ್ಲ, ಕೇವಲ ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವ: ಕಿಮ್ಮನೆ ರತ್ನಾಕರ್

    ಶಿವಮೊಗ್ಗ: ಆರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಗೃಹ ಮಂತ್ರಿಯಲ್ಲ, ಬದಲಿಗೆ ಜ್ಞಾನೇಂದ್ರ ಅವರು ಕೇವಲ ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಕಿಡಿಕಾರಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾದಾಗ ನಾನು ಸಹ ಅವರಿಗೆ ಶುಭ ಹಾರೈಸಿದ್ದೆ. ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅನುಭವಿಗಳು ಗೃಹ ಸಚಿವರಾಗಲು ಸಮರ್ಥರಿದ್ದಾರೆ ಅಂದುಕೊಂಡಿದ್ದೆ. ಆದರೆ ಮೈಸೂರಿನಲ್ಲಿ ನಡೆದ ರೇಪ್ ಪ್ರಕರಣದಲ್ಲಿಯೇ ಅವರ ಬಂಡವಾಳ ಗೊತ್ತಾಯ್ತು. ಗೃಹ ಸಚಿವ ಜ್ಞಾನೇಂದ್ರ ಅವರು ನೀಡಬೇಕಾದ ಹೇಳಿಕೆಯನ್ನು ಮುಖ್ಯಮಂತ್ರಿಗಳು, ಆರೋಗ್ಯ ಸಚಿವ ಡಾ.ಸುಧಾಕರ್ ಅವರು ನೀಡಿದರು ಎಂದರು. ಇದನ್ನೂ ಓದಿ: ಪರಿಷತ್‌ ಚುನಾವಣೆ- ಕಾಂಗ್ರೆಸ್‌ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ

    ಜ್ಞಾನೇಂದ್ರ ಅವರು ಗೃಹ ಸಚಿವರಾದ ಬಳಿಕ ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರೆಲ್ಲರೂ ಗೃಹ ಸಚಿವರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳನ್ನು ಹೆದರಿಸಿಕೊಂಡು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಆದರೆ ಗೃಹ ಸಚಿವರು ಮಾತ್ರ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ವಿನಾಃ ಕಾರಣ ಕ್ರಿಮಿನಲ್ ಕೇಸ್ ಹಾಕಿಸುತ್ತಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದರು.

  • ಗೃಹ ಸಚಿವ ಅರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಗೃಹ ಮಂತ್ರಿಯಲ್ಲ: ಕಿಮ್ಮನೆ ರತ್ನಾಕರ್

    ಗೃಹ ಸಚಿವ ಅರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಗೃಹ ಮಂತ್ರಿಯಲ್ಲ: ಕಿಮ್ಮನೆ ರತ್ನಾಕರ್

    ಶಿವಮೊಗ್ಗ: ಜ್ಞಾನೇಂದ್ರ ಅವರು ಕೇವಲ ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವರಾಗಿದ್ದು, ಇಡೀ ರಾಜ್ಯಕ್ಕೆ ಗೃಹ ಮಂತ್ರಿಯಲ್ಲ ಎಂದು ಮಾಜಿ ಸಚಿವ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜ್ಞಾನೇಂದ್ರ ಅವರು ಗೃಹ ಸಚಿವರಾದಾಗ ನಾನು ಸಹ ಅವರಿಗೆ ಶುಭ ಹಾರೈಸಿದ್ದೆ. ನಾಲ್ಕು ಬಾರಿ ಶಾಸಕರಾಗಿದ್ದಾರೆ, ಸಮರ್ಥರಿದ್ದಾರೆ ಅಂದುಕೊಂಡಿದ್ದೆ. ಆದರೆ ಅವರು ನೀಡಬೇಕಾದ ಹೇಳಿಕೆಯನ್ನು ಮುಖ್ಯಮಂತ್ರಿಗಳು, ಸಚಿವ ಸುಧಾಕರ್ ಅವರು ನೀಡುತ್ತಿದ್ದಾರೆ. ಗೃಹ ಸಚಿವರಾದ ಬಳಿಕ ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಎಲ್ಲರೂ ಗೃಹ ಸಚಿವರಾಗಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಲಿಂಗ ತಾರತಮ್ಯವಿಲ್ಲದೇ ಒಂದೇ ರೀತಿ ಸಮವಸ್ತ್ರ ನೀಡಿದ ಕೇರಳ ಶಾಲೆ

    ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ವಿನಾ: ಕಾರಣ ಕ್ರಿಮಿನಲ್ ಕೇಸ್ ಹಾಕಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳನ್ನು ಹೆದರಿಸಿಕೊಂಡು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಸರ್ಕಾರಕ್ಕೆ ಸೆಡ್ಡು ಹೊಡೆದು ಇಂದಿರಾ ಕ್ಯಾಂಟೀನ್ ಆರಂಭಿಸಿದ್ರು ಕಿಮ್ಮನೆ ರತ್ನಾಕರ್

    ಸರ್ಕಾರಕ್ಕೆ ಸೆಡ್ಡು ಹೊಡೆದು ಇಂದಿರಾ ಕ್ಯಾಂಟೀನ್ ಆರಂಭಿಸಿದ್ರು ಕಿಮ್ಮನೆ ರತ್ನಾಕರ್

    ಶಿವಮೊಗ್ಗ: ಕೊರೊನಾ ಸಂದರ್ಭದಲ್ಲಿ ಬಡವರಿಗೆ, ನಿರ್ಗತಿಕರಿಗೆ ಅನುಕೂಲ ಆಗಲಿ ಎಂದು ರಾಜ್ಯ ಸರ್ಕಾರ ಲಾಕ್ ಡೌನ್ ಸಮಯದಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಿಸಿದೆ. ಆದರೆ ಜಿಲ್ಲೆಯ ತೀರ್ಥಹಳ್ಳಿ ಇದುವರೆಗೂ ಇಂದಿಗೂ ಕ್ಯಾಂಟೀನ್ ಆರಂಭವಾಗಿಲ್ಲ. ಹೀಗಾಗಿಯೇ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದ್ದಾರೆ.

    ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ಗೆ ಕಿಮ್ಮನೆ ರತ್ನಾಕರ್ ಚಾಲನೆ ನೀಡಿದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಬಡವರ, ಕೂಲಿ ಕಾರ್ಮಿಕರ ಅನುಕೂಲಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಕೊರೊನಾ ಲಾಕ್‍ಡೌನ್‍ನಲ್ಲಿ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರವೇ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದೆ. ಆದರೆ ತೀರ್ಥಹಳ್ಳಿಯಲ್ಲಿ ಇನ್ನೂ ಇಂದಿರಾ ಕ್ಯಾಂಟೀನ್‍ಗೆ ಜಾಗ ಗುರುತಿಸದೇ ನಿರ್ಮಾಣ ಮಾಡದ ಕಾರಣ ಇಂದಿರಾ ಕ್ಯಾಂಟೀನ್ ತೆರೆದಿರಲಿಲ್ಲ.

    ತೀರ್ಥಹಳ್ಳಿ ಶಾಸಕರು ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆಯದೇ ಇರುವುದನ್ನು ಖಂಡಿಸಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಸಮಾನ ಮನಸ್ಕರನ್ನು ಸೇರಿಸಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿದ್ದಾರೆ. ಬೆಳಗ್ಗೆ 50 ಜನ ಹಾಗೂ ಮಧ್ಯಾಹ್ನ 100 ಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆಯುವವರೆಗೂ ನಾವೇ ಇಂದಿರಾ ಕ್ಯಾಂಟೀನ್ ನಡೆಸುವುದಾಗಿ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

  • ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಶಾಲೆಗಳು ಆರಂಭವಾಗಲಿ: ಕಿಮ್ಮನೆ

    ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಶಾಲೆಗಳು ಆರಂಭವಾಗಲಿ: ಕಿಮ್ಮನೆ

    – ಸರ್ಕಾರ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡ್ಬಾರ್ದು

    ಶಿವಮೊಗ್ಗ: ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವ ಮುನ್ನ ಯಾವುದೇ ಕಾರಣಕ್ಕೂ ಶಾಲೆಗಳ ಪುನರ್ ಆರಂಭಕ್ಕೆ ಸರ್ಕಾರ ಮುಂದಾಗಬಾರದು. ಮಕ್ಕಳ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡಬಾರದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸರಿಯಾಗಿ ನಿಯಂತ್ರಣಕ್ಕೆ ಬಾರದ ಹೊರತು ಶಾಲೆ ಓಪನ್ ಮಾಡುವ ಪ್ರಯತ್ನ ನಡೆಸಬಾರದು ಎಂದರು.

    ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿ ಇರುವುದೇ ಒಂದು ದೊಡ್ಡ ದುರಂತ. ಕೊರೊನಾ ಕಡಿಮೆ ಇದ್ದ ಅವಧಿಯಲ್ಲಿ ಎಲ್ಲಾ ಬಂದ್ ಮಾಡಿದರು. ಸದ್ಯ ಕೊರೊನಾ ಸೋಂಕು ಹೆಚ್ಚಾಗಿದೆ. ಈ ವೇಳೆ ಎಲ್ಲಾ ಓಪನ್ ಮಾಡಿದ್ದಾರೆ. ಕೊರೊನಾದಿಂದಾಗಿ ಜನ ಸಾಯುತ್ತಿದ್ದಾರೆ. ಈಗಿರುವಾಗ ಶಾಲೆ ಆರಂಭದ ಬಗ್ಗೆ ಮಾತನಾಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬಂದ ನಂತರವೇ ಶಾಲೆ ಆರಂಭಿಸುವುದು ಒಳ್ಳೆಯದು ಎಂದರು.

    ಮೊದಲೆಲ್ಲಾ ಕೊರೊನಾ ಹರಡಲು ಮುಸ್ಲಿಮರೇ ಕಾರಣ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಈಗ ಏನು ಹೇಳುತ್ತಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ.

  • ಸಿಎಂ ಯಡಿಯೂರಪ್ಪ ಒಬ್ಬರೇ ಸಕ್ರಿಯ, ಉಳಿದ ಸಚಿವರು ಆರಾಮಾಗಿದ್ದಾರೆ: ಕಿಮ್ಮನೆ ರತ್ನಾಕರ್

    ಸಿಎಂ ಯಡಿಯೂರಪ್ಪ ಒಬ್ಬರೇ ಸಕ್ರಿಯ, ಉಳಿದ ಸಚಿವರು ಆರಾಮಾಗಿದ್ದಾರೆ: ಕಿಮ್ಮನೆ ರತ್ನಾಕರ್

    – ಇದಕ್ಕೆ 1,700 ಕೋಟಿ ರೂ. ನೀಡಿ 17 ಶಾಸಕರನ್ನು ಖರೀದಿಸುವ ಅವಶ್ಯವೇನಿತ್ತು?
    – ಬಿಜೆಪಿಯವರು ವಿರೋಧ ಪಕ್ಷಕ್ಕಷ್ಟೇ ಲಾಯಕ್ಕು, ಅಧಿಕಾರ ನಡೆಸುವುದಕ್ಕಲ್ಲ

    ಶಿವಮೊಗ್ಗ: ಜನ ಬೀದಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಕೊರೊನಾ ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಪಕ್ಷಕ್ಕಷ್ಟೇ ಲಾಯಕ್ಕು. ಅವರಿಗೆ ಅಧಿಕಾರ ನಡೆಸಲು ಬರುವುದಿಲ್ಲ. ಕೊರೊನಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಜನರು ಬೀದಿ ಬೀದಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಹೀಗಿದ್ದರೂ ಕೊರೊನಾ ತಡೆಗಟ್ಟುವಲ್ಲಿ ಸರಕಾರ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದ ಸಚಿವರು ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಇಂತಹದ್ದಕ್ಕೆ 1,700 ಕೋಟಿ ರೂ. ಖರ್ಚು ಮಾಡಿ 17 ಶಾಸಕರನ್ನು ಖರೀದಿ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದರು.

  • ಮೊದಲು ಗ್ರಾಮದ ರಸ್ತೆ ಅಭಿವೃದ್ಧಿ ಮಾಡಿ, ಆಮೇಲೆ ನಿಮ್ಮ ಕಾಲುವೆ ದುರಸ್ತಿ ಮಾಡಿಕೊಳ್ಳಿ: ಕಿಮ್ಮನೆ ಆಗ್ರಹ

    ಮೊದಲು ಗ್ರಾಮದ ರಸ್ತೆ ಅಭಿವೃದ್ಧಿ ಮಾಡಿ, ಆಮೇಲೆ ನಿಮ್ಮ ಕಾಲುವೆ ದುರಸ್ತಿ ಮಾಡಿಕೊಳ್ಳಿ: ಕಿಮ್ಮನೆ ಆಗ್ರಹ

    ಶಿವಮೊಗ್ಗ: ಮೊದಲು ನಮ್ಮ ಗ್ರಾಮದ ಸೇತುವೆ, ರಸ್ತೆ ದುರಸ್ತಿ ಮಾಡಿ ಆಮೇಲೆ ನಿಮ್ಮ ಕಾಲುವೆ ದುರಸ್ತಿ ಮಾಡಿ ಎಂದು ಆಗ್ರಹಿಸಿ ಕಾಲುವೆ ಕಾಮಗಾರಿಯನ್ನು ಗ್ರಾಮಸ್ಥರು ನಿಲ್ಲಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕರಿಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

    ಇಲ್ಲಿನ ಸಾವೇಹಕ್ಲು ಜಲಾಶಯದಿಂದ ಲಿಂಗನಮಕ್ಕಿ ಜಲಾಶಯಕ್ಕೆ ನೀರು ಹರಿಸುವ ಕಾಲುವೆಯ ದುರಸ್ತಿ ಕಾಮಗಾರಿಯನ್ನು ಕೆಪಿಸಿ ನಿರ್ವಹಿಸುತ್ತಿದೆ. ಬುಧವಾರ ಕಾಮಗಾರಿ ಆರಂಭವಾಗುತ್ತಿದ್ದಂತೆ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಜಮಾವಣೆಯಾದ ಸ್ಥಳೀಯರು ಕಾಮಗಾರಿ ನಡೆಸದಂತೆ ತಾಕೀತು ಮಾಡಿದರು. ಅಲ್ಲದೇ ಕಾಮಗಾರಿ ನಡೆಸುವುದಕ್ಕೆ ಗ್ರಾಮಸ್ಥರು ಅವಕಾಶ ಕೊಡದೆ ನಿಲ್ಲಿಸಿದರು.

    ಈ ಸುದ್ದಿ ತಿಳಿಯುತ್ತಿದ್ದಂತೆ ಕರಿಮನೆ ಗ್ರಾಮಪಂಚಾಯ್ತಿಗೆ ಭೇಟಿ ನೀಡಿದ ಕೆಪಿಸಿ ಅಧಿಕಾರಿಗಳು, ಪಂಚಾಯ್ತಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕಾಲುವೆಯಿಂದ ನೀರು ಹರಿಸುತ್ತಿರುವ ಕಾರಣ ಮಳಲಿ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕಾಲುವೆ ದುರಸ್ತಿ ಕಾಮಗಾರಿಯನ್ನು ವರ್ಷಂಪ್ರತಿ ಮಾಡುತ್ತಿದ್ದೀರಿ. ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಮಾಡುವವರೆಗೆ ಕಾಲುವೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಆಗ್ರಹಿಸಿದರು.

    ಈ ವೇಳೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಗ್ರಾಮಸ್ಥರು, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

  • ಬೇರೆ ರಾಜ್ಯದಲ್ಲಿ ಖಾಲಿ ಇದ್ದರೂ ನಮ್ಮಲ್ಲಿ ಮಾತ್ರ ಯಾಕೆ ಲೋಕಸಭಾ ಉಪಚುನಾವಣೆ: ರಾಷ್ಟ್ರಪತಿಗೆ ಕಿಮ್ಮನೆ ದೂರು

    ಬೇರೆ ರಾಜ್ಯದಲ್ಲಿ ಖಾಲಿ ಇದ್ದರೂ ನಮ್ಮಲ್ಲಿ ಮಾತ್ರ ಯಾಕೆ ಲೋಕಸಭಾ ಉಪಚುನಾವಣೆ: ರಾಷ್ಟ್ರಪತಿಗೆ ಕಿಮ್ಮನೆ ದೂರು

    ಶಿವಮೊಗ್ಗ: ಆಂಧ್ರ ಹಾಗೂ ಒಡಿಶಾದಲ್ಲಿ ಲೋಕಸಭಾ ಸ್ಥಾನಗಳು ಖಾಲಿ ಇದ್ದರೂ ಕರ್ನಾಟಕದಲ್ಲಿ ಮಾತ್ರ ಉಪಚುನಾವಣೆ ಮಾಡುತ್ತಿರುವುದಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಆಕ್ಷೇಪ ವ್ಯಕ್ತಪಡಿಸಿ, ರಾಷ್ಟ್ರಪತಿಗೆ ದೂರು ನೀಡಿದ್ದಾರೆ.

    ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ರಾಷ್ಟ್ರಪತಿಗಳು ಈ ಬಗ್ಗೆ ಗಮನ ಹರಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಕಿಮ್ಮನೆ ಹೇಳಿದ್ದಾರೆ.

     

    ಬೇರೆ ರಾಜ್ಯಗಳನ್ನು ಬಿಟ್ಟು ರಾಜ್ಯದಲ್ಲಿ ಮಾತ್ರ ಚುನಾವಣೆ ಏಕೆ ಎಂದು ಪ್ರಶ್ನಿಸಿದ್ದಾರೆ. ಆಯೋಗದ ಈ ನಡೆ ಅನುಮಾನಾಸ್ಪದವಾಗಿದೆ. ಕರ್ನಾಟಕದ ನಾಡಿ ಮಿಡಿತ ಅರಿಯಲು ಕೇಂದ್ರ ಸರ್ಕಾರ ಈ ಚುನಾವಣೆ ನಡೆಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಕೇವಲ ನಾಲ್ಕು ತಿಂಗಳಿಗಾಗಿ ನಡೆಯುತ್ತಿರುವ ಈ ಚುನಾವಣೆಯಿಂದ ಹಣ, ಮಾನವಸಂಪನ್ಮೂಲ, ಸರ್ಕಾರಿ ಆಡಳಿತ ವ್ಯವಸ್ಥೆ ಎಲ್ಲವೂ ವ್ಯರ್ಥವಾಗುತ್ತದೆ. ಆದ್ದರಿಂದ ತಕ್ಷಣ ಈ ಅಧಿಸೂಚನೆ ಹಿಂಪಡೆದು, ಚುನಾವಣೆ ನಿಲ್ಲಿಸಿ ಎಂದು ಕಿಮ್ಮನೆ ಆಗ್ರಹಿಸಿದ್ದಾರೆ.

    ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಅವರಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv