Tag: Kimmane Rathnakar

  • ಕಿಮ್ಮನೆ ವಿರುದ್ಧ ಅಪಪ್ರಚಾರ – ಗೃಹ ಸಚಿವರನ್ನು ವಜಾಗೊಳಿಸಲು ರಮೇಶ್ ಬಾಬು ಆಗ್ರಹ

    ಕಿಮ್ಮನೆ ವಿರುದ್ಧ ಅಪಪ್ರಚಾರ – ಗೃಹ ಸಚಿವರನ್ನು ವಜಾಗೊಳಿಸಲು ರಮೇಶ್ ಬಾಬು ಆಗ್ರಹ

    ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಕಿಮ್ಮನೆ ರತ್ನಾಕರ್ (Kimmane Rathnakar) ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರನ್ನು ಈ ಕೂಡಲೇ ಸಂಪುಟದಿಂದ ವಜಾ ಗೊಳಿಸಬೇಕು ಎಂದು ಕೆಪಿಸಿಸಿ (KPCC) ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು (Ramesh Babu) ಆಗ್ರಹಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಬಾಬು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯಲ್ಲಿ 4 ಬಾರಿ ಸೋತಿದ್ದು, ಈಗ 4 ಬಾರಿ ಗೆಲುವು ಸಾಧಿಸಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದ ಆರಗ ಜ್ಞಾನೇಂದ್ರ ಅವರು ತಾವು ಗಣೇಶ್ ಭಟ್ ಎಂಬವರಿಂದ ನೈತಿಕತೆ ಕಲಿತಿದ್ದೇನೆ, ನಾನು ಸಂಘ ಪರಿವಾರದ ನೈತಿಕತೆಯನ್ನು ಪಾಲನೆ ಮಾಡುತ್ತೇನೆ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಅವರು ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಕಿಮ್ಮನೆ ರತ್ನಾಕರ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಸಜ್ಜನ ರಾಜಕಾರಣ ಮಾಡುವವರನ್ನು ಹುಡುಕಿದರೆ ನಮಗೆ ಸಿಗುವ ಕೆಲವೇ ಕೆಲವು ನಾಯಕರಲ್ಲಿ ಕಿಮ್ಮನೆ ರತ್ನಾಕರ್ ಕೂಡ ಒಬ್ಬರು. ಕಾಂಗ್ರೆಸ್ ಪಕ್ಷದ ಉದ್ದೇಶಗಳು ಹಾಗೂ ಕಿಮ್ಮನೆ ರತ್ನಾಕರ್ ಅವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ ಇರುವುದರಿಂದ ಆರಗ ಜ್ಞಾನೇಂದ್ರ ಅವರು ರಾಜಕೀಯ ಸಿದ್ಧಾಂತ ರೂಪಿಸಲು ಮುಂದಾಗಿದ್ದಾರೆ ಎಂದು ಕಿಡಿ ಕಾರಿದರು.

    ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯ ಹಾಗರಗಿ, ಸ್ಯಾಂಟ್ರೋ ರವಿ ಅವರ ಜೊತೆ ಸೇರಿ ವರ್ಗಾವಣೆ ದಂಧೆ ಮಾಡಿರುವ ಆರೋಪ ಹೊತ್ತಿರುವ ಆರಗ ಜ್ಞಾನೇಂದ್ರ ಅವರು ಈಗ ಕಿಮ್ಮನೆ ರತ್ನಾಕರ್ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಾನಿಂದು ಆರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ಅಗ್ರಹಿಸುವುದಿಲ್ಲ. ಅವರು ನೈತಿಕತೆ ಇಟ್ಟುಕೊಂಡು ರಾಜಕಾರಣ ಮಾಡಿದ್ದರೆ ಅವರು ರಾಜೀನಾಮೆ ನೀಡುತ್ತಿದ್ದರು. ಆದರೆ ಅವರು ನೈತಿಕತೆ ಕಳೆದುಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಿಗೆ ಸ್ವಲ್ಪವಾದರೂ ನೈತಿಕತೆ, ಉಳಿದಿದ್ದರೆ ಅವರು ಕೂಡಲೇ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿAದ ವಜಾಗೊಳಿಸಬೇಕು ಎಂದು ಕೇಳುತ್ತೇನೆ ಎಂದರು.

    ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದ ಇಲ್ಲಿಯವರೆಗೂ ಒಂದಲ್ಲಾ ಒಂದು ರೀತಿಯ ಹಗರಣಗಳನ್ನು ಮಾಡಿಕೊಂಡು ಬಂದಿದ್ದಾರೆ. ಆರಂಭದಲ್ಲಿ ಪೊಲೀಸರನ್ನು ನಿಂದಿಸಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದರು. ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯ ಹಾಗರಗಿ ಅವರ ನಿವಾಸಕ್ಕೆ ಭೇಟಿ ನೀಡಿ ಈ ಅಕ್ರಮ ನಡೆಸಲು ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಇಂತಹ ಹಗರಣದಲ್ಲಿ ಸಿಲುಕಿ ಅಮಾನತುಗೊಂಡಿರುವುದು. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಆರಗ ಜ್ಞಾನೇಂದ್ರ ಅವರೇ ಕಾರಣ ಎಂದು ಗುಡುಗಿದರು.

    ಜೆಜಿ ನಗರದಲ್ಲಿ ನಡೆದ ಸಣ್ಣ ಗಲಭೆಗೆ ಕೋಮು ಗಲಭೆಯ ಬಣ್ಣವನ್ನು ನೀಡುವ ಪ್ರಯತ್ನ ಮಾಡಿದರು. ಆಗಿನ ಪೊಲೀಸ್ ಆಯುಕ್ತರು ಇದು ಸ್ಥಳೀಯವಾಗಿ ನಡೆದಿರುವ ಗಲಾಟೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಅವರಿಗಿಂತ ಮುಂಚಿತವಾಗಿ ಗೃಹ ಸಚಿವರು ಇದು ಸಮುದಾಯಗಳ ನಡುವಿನ ಕೋಮುಗಲಭೆ ಎಂದು ಹೇಳಿಕೆ ನೀಡಿದ್ದರು. ಇಷ್ಟೆಲ್ಲಾ ಆರೋಪ ಹೊತ್ತಿರುವ ಗೃಹ ಸಚಿವರು ಈಗ ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಕಿಮ್ಮನೆ ರತ್ನಾಕರ್ ಅವರ ಪಾತ್ರವಿದೆ, ಹೀಗಾಗಿ ಎನ್‌ಐಎ ಅಧಿಕಾರಿಗಳು ಕಿಮ್ಮನೆ ರತ್ನಾಕರ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂಬ ಆರೋಪದ ಸುದ್ದಿಗಳನ್ನು ಹರಡುವ ಪ್ರಯತ್ನ ಮಾಡಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಸಿಟಿ ರವಿ ಮೇಲೆ ಕೇಸ್ ಹಾಕ್ತೀವಿ: ರಮೇಶ್ ಬಾಬು

    ಸಂಘ ಪರಿವಾರದಿಂದ ಬಂದಿರುವ ಆರಗ ಜ್ಞಾನೇಂದ್ರ ಅವರು ಕೆಲವು ಮೌಲ್ಯಗಳನ್ನು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಅವರ ಮೇಲೆ ಗೌರವವನ್ನು ಇಟ್ಟುಕೊಂಡಿದ್ದೆ. ಆದರೆ ಅವರು ಇದಕ್ಕೆ ವಿರೋಧವಾಗಿ ರಾಜ್ಯದಲ್ಲಿ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಈ ರಾಜ್ಯದಲ್ಲಿ ಮಹಿಳೆಯರು, ದಲಿತರು, ಜನಸಾಮಾನ್ಯರ ಮೇಲಿನ ದೌರ್ಜನ್ಯ ಪ್ರತಿನಿತ್ಯ ಹೆಚ್ಚಾಗಿದ್ದು, ರಾಜ್ಯದಲ್ಲಿ ರೌಡಿಗಳು ಹಾಗೂ ಗೂಂಡಾಗಳು ವಿಜೃಂಭಿಸುತ್ತಿದ್ದಾರೆ. ಸಮಾಜದಲ್ಲಿ ಕೊಲೆಗಳು ಹೆಚ್ಚಾಗುತ್ತಿವೆ. ಹೀಗೆ ಗೃಹ ಸಚಿವರಾಗಿ ಆರಗ ಜ್ಞಾನೇಂದ್ರ ಅವರು ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ್ದಾರೆ. ಅವರು ತಮ್ಮ ಈ ವೈಫಲ್ಯವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.

    ಆರಗ ಜ್ಞಾನೇಂದ್ರ ಅವರು ತಮ್ಮ ಕ್ಷೇತ್ರದಲ್ಲೂ ಇಂತಹ ಅವಾಂತರಗಳಿಗೆ ಅವಕಾಶ ನೀಡಿದ್ದಾರೆ. 2018ರಲ್ಲಿ ಲಿಸ್ಟ್ ಮೂಲಕ ಕಾಂಗ್ರೆಸ್ ಪಕ್ಷ ಆ ಕಚೇರಿಯನ್ನು ಬಾಡಿಗೆ ಪಡೆದಿದ್ದು, ಅದು ಬಾಂಬ್ ಬ್ಲಾಸ್ಟ್ ಆರೋಪಿಯ ಕುಟುಂಬಕ್ಕೆ ಸೇರಿದ ಆಸ್ತಿ ಎಂಬ ನೆಪವನ್ನು ಇಟ್ಟುಕೊಂಡು ಕಿಮ್ಮನೆ ರತ್ನಾಕರ್ ಅವರ ಮನೆ ಮೇಲೆ ಎನ್‌ಐಎ ದಾಳಿ ನಡೆಸಿದೆ ಎಂಬ ರೀತಿಯಲ್ಲಿ ವ್ಯವಸ್ಥಿತವಾದ ಸುಳ್ಳು ಪ್ರಚಾರವನ್ನು ಮಾಡಿದ್ದಾರೆ. ಮುಖ್ಯಮಂತ್ರಿಗಳು ಆರಗ ಅವರನ್ನು ಸಂಪುಟದಿಂದ ಕೈ ಬಿಡದಿದ್ದರೆ ತೀರ್ಥಹಳ್ಳಿಯಿಂದಲೇ ಇವರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸ್ಯಾಂಟ್ರೋ ರವಿ ಅರೆಸ್ಟ್‌ – ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು ಹೀಗೆ..

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಕೆಶಿ ಮನೆ ಅಂಗಳದಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಪೊಲಿಟಿಕಲ್ ಫೈಟ್

    ಡಿಕೆಶಿ ಮನೆ ಅಂಗಳದಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಪೊಲಿಟಿಕಲ್ ಫೈಟ್

    ಬೆಂಗಳೂರು: ತೀರ್ಥಹಳ್ಳಿ ಕಾಂಗ್ರೆಸ್‍ನ ಎರಡೆರಡು ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ ರನ್ನು ಸದಾಶಿವನಗರ ನಿವಾಸದಲ್ಲಿ ಇಂದು ಭೇಟಿ ಮಾಡಿ ರಾಜಕೀಯ ಮೇಲಾಟಕ್ಕೆ ವೇದಿಕೆಯನ್ನಾಗಿಸಿಕೊಂಡಿದ್ದಾರೆ.

    ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ಸದಸ್ಯರನ್ನು ಡಿಕೆಶಿ ನಿವಾಸಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕರೆ ತಂದಿದ್ದರು. ಕಿಮ್ಮೆನೆ, ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ ಬೆನ್ನಲ್ಲೆ ಡಿಕೆಶಿ ನಿವಾಸಕ್ಕೆ ಮಂಜುನಾಥ ಗೌಡ ಸಹಾ ಬಂದಿದ್ದಾರೆ. ಮಂಜುನಾಥ ಗೌಡ ಡಿಕೆಶಿ ಆಪ್ತ. ಕಿಮ್ನೆನೆ ವಿರೋಧದ ನಡುವೆ ಮಂಜುನಾಥ ಗೌಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದ ಡಿ.ಕೆ.ಶಿವಕುಮಾರ್, ಈಗ ಪಟ್ಟಣ ಪಂಚಾಯತ್ ಸದಸ್ಯರನ್ನು ಡಿಕೆಶಿ ನಿವಾಸಕ್ಕೆ ಕರೆತರುವಲ್ಲು ಇಬ್ಬರ ನಡುವೆ ಪೈಪೋಟಿ ಉಂಟಾಗಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ಗೃಹಸಚಿವರೇ ಧಮ್ ಇದ್ದರೆ ಅರೆಸ್ಟ್ ಮಾಡಿ: ಡಿಕೆಶಿ

    ತೀರ್ಥಹಳ್ಳಿಯಲ್ಲಿ ಕಿಮ್ಮನೆ, ಮಂಜುನಾಥ್ ಗೌಡ ಫೈಟ್
    ಡಿ.ಕೆ.ಶಿವಕುಮಾರ್ ಮನೆ ಅಂಹಳದಲ್ಲಿ ಟಾಕ್ ಫೈಟ್ ಆಗಿ ಪರಿವರ್ತನೆ ಆಯ್ತು. ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಕ್ಷೇತ್ರದಲ್ಲಿ ಏನೇ ಗೊಂದಲ ಇದ್ರು ಪಕ್ಷದ ವೇದಿಕೆಯಲ್ಲಿ ಚರ್ಚೆಮಾಡುತ್ತೇವೆ. ಆದರೆ ತೀರ್ಥಹಳ್ಳಿಯಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಏನೇ ಇದ್ದರು ಪಕ್ಷದ ವೇದಿಕೆಯಲ್ಲಿ ನಾಲ್ಕು ಗೋಡೆಗಳ ಮದ್ಯೆ ಪ್ರಸ್ತಾಪ ಮಾಡುತ್ತೇನೆ. ಭಿನ್ನಾಭಿಪ್ರಾಯ ಇರಬೇಕು ಅದು ಆಂತರಿಕ ಪ್ರಜಾಪ್ರಭುತ್ವಕ್ಕೆ ಸಾಕ್ಷಿ ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಅಲ್ಲಿ ಮೋದಿ ಜೊತೆ ಪಕ್ಷದ ಮುಖಂಡರು ಮಾತನಾಡಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್‍ನಲ್ಲಿ ಆಂತರಿಕ ಚರ್ಚೆ ಮಾಡಲು ಸಾಧ್ಯವಿದೆ ಏನೇ ಭಿನ್ನಾಭಿಪ್ರಾಯ ಇದ್ದರು ಪಕ್ಷದ ನಾಯಕರ ಜೊತೆ ಚರ್ಚೆ ಮಾಡುತ್ತೇನೆ. ನಾನು ಪತ್ರ ಬರೆದಿದ್ದು ಪಕ್ಷದ ವೇದಿಕೆಯಲ್ಲಿ ಬರೆದಿದ್ದು ಅದನ್ನು ಮಾಧ್ಯಮ ಮುಂದೆ ಹೇಳುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಅಂತ ನಾಯಕರು ತೀರ್ಮಾನ ಮಾಡ್ತಾರೆ. ಮತದಾರರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – 10 ಸಾವಿರ ಕೋಟಿ ರೂ. ಹಗರಣ!

    ಮಂಜುನಾಥ ಗೌಡ ಮಾತನಾಡಿ, ಕ್ಷೇತ್ರದಲ್ಲಿ ಆಕಾಂಕ್ಷಿಗಳು ಸಾಕಷ್ಟು ಜನ ಇದ್ದಾರೆ. ಆಕಾಂಕ್ಷಿಗಳು ಎಲ್ಲಾ ಅಭ್ಯರ್ಥಿ ಆಗಲು ಸಾಧ್ಯವಿಲ್ಲ. ನಾನು ಕೂಡ ಟಿಕೆಟ್ ಪ್ರಬಲ ಆಕಾಂಕ್ಷಿ. ಟಿಕೆಟ್ ಯಾರಿಗೆ ಕೊಡಬೇಕು ಎಂದು ತೀರ್ಥಹಳ್ಳಿಯಲ್ಲಿ ತೀರ್ಮಾನ ಆಗಲ್ಲ. ಕೆಪಿಸಿಸಿ ಮಟ್ಟದಲ್ಲಿ ತೀರ್ಮಾನ ಆಗುತ್ತದೆ. ಇಲ್ಲದಿದ್ದರೇ ಎಐಸಿಸಿ ಮಟ್ಟದಲ್ಲಿ ತೀರ್ಮಾನ ಆಗುತ್ತದೆ. ನನ್ನ ನಾಯಕರು ಡಿ.ಕೆ ಶಿವಕುಮಾರ್ ಅವರು ಹೇಳಿದಂತೆ ನಾನು ಕೇಳುತ್ತೇನೆ. ಕೆಲವರು ಪತ್ರವನ್ನು ಪ್ರೀತಿಯಿಂದ ಬರೆದಿರಬಹುದು. ಕಠೋರ ಶಬ್ದ ಬಳಸಿರಬಹುದು, ಪ್ರೀತಿ ಮಾಡುವ ವಯಸ್ಸು ಇದಲ್ಲ ಎಂದು ಕಿಮ್ಮನೆ ರತ್ನಾಕರ್‍ ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಮುಚ್ಚಿಹಾಕಲು ಬಿಜೆಪಿ, ಕಾಂಗ್ರೆಸ್ ಯತ್ನ: ಎಚ್‍ಡಿಕೆ

  • ಮೋದಿ ಸರ್ಕಾರ ಮಾಡಿದ ತಪ್ಪನ್ನ ರಾಜ್ಯ ಸರ್ಕಾರವೂ ಮಾಡುತ್ತಿದೆ: ಕಿಮ್ಮನೆ ರತ್ನಾಕರ್

    ಮೋದಿ ಸರ್ಕಾರ ಮಾಡಿದ ತಪ್ಪನ್ನ ರಾಜ್ಯ ಸರ್ಕಾರವೂ ಮಾಡುತ್ತಿದೆ: ಕಿಮ್ಮನೆ ರತ್ನಾಕರ್

    ಚಿಕ್ಕಮಗಳೂರು: ದೇಶದಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮವೇ ದೊಡ್ಡ ತಪ್ಪು ನಿರ್ಧಾರ. ಆ ತಪ್ಪು ನಿರ್ಧಾರಗಳನ್ನ ಮೋದಿ ಸರ್ಕಾರ ಮಾಡುತ್ತಿದೆ. ಆ ನಿರ್ಧಾರಗಳನ್ನ ರಾಜ್ಯ ಸರ್ಕಾವೂ ಮಾಡುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:  ಬೆಲೆ ಏರಿಕೆ ವಿರುದ್ಧ ಸದನದ ಹೊರಗೆ, ಒಳಗೆ ಹೋರಾಟಕ್ಕೆ ಕಾಂಗ್ರೆಸ್ ಸಿದ್ದತೆ: ಡಿಕೆಶಿ

    ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದೇಶ ಜನಸಂಖ್ಯೆ ಎಷ್ಟು. ನಮ್ಮ ಬಳಿ ಎಷ್ಟು ವ್ಯಾಕ್ಸಿನ್ ಇದೆ. ಅದನ್ನ ನೋಡಿಕೊಂಡು ಹೇಳಿಕೆಗಳನ್ನ ಕೊಡಬೇಕು. ನಾಳೆ ಬೆಳಗ್ಗೆ ಲಸಿಕೆ ನೀಡುತ್ತೇವೆ ಅಂತಾರೆ. ಬೆಳಗ್ಗೆ ಲಸಿಕೆ ಬಂದಿಲ್ಲ ಅಂತಾರೆ. ನಮ್ಮ ಬಳಿ ಇರೋದು ಇಷ್ಟೆ ಎಂದು ಹೇಳಬೇಕು. ನಾಳೆಯಿಂದ 18 ವರ್ಷದವರಿಗೆ ಕೊಡುತ್ತೇವೆ ಅಂತಾರೆ ಆಮೇಲೆ ಒಂದು ವಾರ ಲೇಟ್ ಅಂತಾರೆ ಇದು ಏಕೆ. ಇದನ್ನ ಸರ್ಕಾರವೇ ಹೇಳುವುದು. ನೂರು ತಪ್ಪುಗಳನ್ನ ಕೇಂದ್ರ ಸರ್ಕಾರವೂ ಮಾಡಿದೆ. ರಾಜ್ಯ ಸರ್ಕಾರವೂ ಮಾಡಿದೆ ಎಂದು ಸರ್ಕಾರ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಇದೇ ವೇಳೆ, ಸರ್ಕಾರ ಶಾಲಾ-ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ತಜ್ಞರು ಕೊಡುವ ವರದಿಯನ್ನ ಫಾಲೋ ಮಾಡಬೇಕು. ತಜ್ಞರೇ ತಪ್ಪು ವರದಿ ನೀಡಿದರೆ ಯಾರೇನು ಮಾಡಲು ಸಾಧ್ಯವಿಲ್ಲ. ಆದರೆ ತಜ್ಞರು ಕೊಡುವ ವರದಿಯನ್ನ ಸರ್ಕಾರ ಫಾಲೋ ಮಾಡಬೇಕೆಂದು ಸೂಚಿಸಿದ್ದಾರೆ. ಸರ್ಕಾರ ತಜ್ಞರ ವರದಿಯ ವಿರುದ್ಧ ಕಾರ್ಯಕ್ರಮಗಳನ್ನ ಮಾಡಬಾರದು ಎಂದಿದ್ದಾರೆ.

    ತಜ್ಞರು ಸಾಮಾನ್ಯ ಅಭಿಪ್ರಾಯ ನೀಡುವುದಿಲ್ಲ, ಫ್ಯಾಕ್ಟ್ ಹೇಳುತ್ತಾರೆ. ಹಿಂದಿನ ಫಲಿತಾಂಶ ಆಧರಿಸಿ ಮುಂದಾಗೋ ಅನಾಹುತಗಳ ಬಗ್ಗೆ ಅಭಿಪ್ರಾಯ ನೀಡಿರುತ್ತಾರೆ. ತಜ್ಞರ ವರದಿಯನ್ನ ಆಧರಿಸಿ ಸರ್ಕಾರ ಮುಂದುವರೆಯಬೇಕೆಂದು ಸೂಚಿಸಿದ್ದಾರೆ. ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ. ಸರ್ಕಾರ ತಜ್ಞರ ವರದಿ ವಿರುದ್ಧ ನಡೆದದ್ದೇ, ಈಗಾಗಿರೋ ಅನಾಹುತಗಳಿಗೆ ಕಾರಣ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

  • ಮಕ್ಕಳಿಗೆ ಮಾಸ್ಕ್ ಹಾಕಿಸಿ ಅಂತರ ಕಾಯಿಸ್ತಾರಂತೆ, ಮಂಡೆ ಸರಿ ಇದ್ಯಾ- ಕಿಮ್ಮನೆ ಪ್ರಶ್ನೆ

    ಮಕ್ಕಳಿಗೆ ಮಾಸ್ಕ್ ಹಾಕಿಸಿ ಅಂತರ ಕಾಯಿಸ್ತಾರಂತೆ, ಮಂಡೆ ಸರಿ ಇದ್ಯಾ- ಕಿಮ್ಮನೆ ಪ್ರಶ್ನೆ

    ಚಿಕ್ಕಮಗಳೂರು: ಕೇಂದ್ರ ಸಚಿವರು, ಶಾಸಕರೇ ಕೊರೊನಾದಿಂದ ಸಾಯುತ್ತಿದ್ದಾರೆ. ಇನ್ನೂ ಆಟವಾಡೋ ಮಕ್ಕಳಿಗೆ ಇವರು ಮಾಸ್ಕ್, ಸಾಮಾಜಿಕ ಅಂತರದ ಬಗ್ಗೆ ಮಾರ್ಗದರ್ಶನ ಕೊಡುತ್ತೇವೆ. ಸೂಚನೆ ಕೊಡುತ್ತೇವೆ ಅಂತಾರೆ. ಇವ್ರಿಗೆ ಮಂಡೆ ಸರಿ ಇದ್ಯಾ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸರ್ಕಾರದ ವಿರುದ್ದ ಗರಂ ಆಗಿದ್ದಾರೆ.

    ಜಿಲ್ಲೆಯ ಕೊಪ್ಪದಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ನಾವೇ ಸರಿಯಾಗಿ ಏನನ್ನೂ ಮಾಡುತ್ತಿಲ್ಲ. ಹೀಗಿರುವಾಗ ಆಟವಾಡೋ ಮಕ್ಕಳಿಗೆ ಮಾಸ್ಕ್ ಹಾಕಲು ಹೇಳುತ್ತೇವೆ, ಅಂತರ ಕಾಯಿಸುತ್ತೇವೆ ಅನ್ನೋದು ಮೂರ್ಖತನ. ಇವರು ಬರೀ ಪಕ್ಷದ ಕಾರ್ಯಕ್ರಮ ಮಾಡುತ್ತಿದ್ದಾರೆ. ಇವರ ಉದ್ದೇಶ ಪಕ್ಷಕ್ಕೆ ಲಾಭವಾಗುವಂತದ್ದು, ದುಡ್ಡು ಹೊಡೆಯೋ ಪ್ರೋಗ್ರಾಂ ಮಾಡುತ್ತಿದ್ದಾರೆ. ಇದರ ಹೊರತು ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಸರ್ಕಾರ ನಿರ್ದಿಷ್ಟವಾಗಿ ಒಂದು ತಿಂಗಳು, ಒಂದು ದಿನಾಂಕವನ್ನು ಹೇಳಬೇಕು. ಅಲ್ಲಿಯವರೆಗೆ ಶಾಲೆ ತೆರೆಯುವುದಿಲ್ಲ ಎಂದು ಹೇಳಬೇಕು. ಶಿಕ್ಷಕರು, ಪೋಷಕರು, ಮಕ್ಕಳನ್ನ ಗೊಂದಲದಲ್ಲಿ ಇಡಬಾರದು. ನಾವು ಯಾವುದೇ ಕಾರಣಕ್ಕೂ ನಿಗದಿತ ದಿನಾಂಕದ ವರೆಗೆ ಶಾಲೆ ತೆರೆಯುವುದಿಲ್ಲ. ಪರಿಸ್ಥಿತಿ ನೋಡಿ ಹೇಳುತ್ತೇವೆ ಎಂದು ಒಂದು ನಿರ್ದಿಷ್ಟ ದಿನಾಂಕ ಹೇಳಬೇಕು. ನಾಳೆ ಶಾಲೆ ತೆರೆಯುತ್ತೆ, ನಾಡಿದ್ದು ತೆರೆಯುತ್ತೆ ಅನ್ನೋ ಗೊಂದಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

    ಪ್ರತಿ ಕ್ಷೇತ್ರದಲ್ಲಿ ಶಾಸಕರು, ಸಚಿವರು, ಸ್ಥಳಿಯರು ಸಂಘ-ಸಂಸ್ಥೆಗಳನ್ನು ಜೊತೆಗೆ ತೆಗೆದುಕೊಳ್ಳಬೇಕು. ಪಕ್ಷ ನೋಡಬಾರದು. ಎಲ್ಲ ಜಾತಿ ಸಂಘಟನೆ, ಸಂಘಗಳು, ಲಯನ್ಸ್, ರೋಟರಿ ಸೇರಿದಂತೆ ಎಲ್ಲರನ್ನೂ ಜೊತೆ ತೆಗೆದುಕೊಳ್ಳಬೇಕು. ಗ್ರಾಮ ಪಂಚಾಯಿತಿಯಲ್ಲಿ ಒಂದು ಸಮಿತಿ ರಚನೆ ಮಾಡಿ ಮಾರ್ಗಸೂಚಿಗಳನ್ನ ಜನರಿಗೆ ತಿಳಿಸುವಂತೆ ಮಾಡಬೇಕು. ಅದು ಒಂದು ರಾಷ್ಟ್ರೀಯ ಮನೋಭಾವನೆಯಿಂದ ಮಾಡುವಂತದ್ದು. ಆದರೆ ಇವರು ಬರೀ ಪಕ್ಷದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.