Tag: Kim Sharma

  • ಯುವಿ ಮಾಜಿ ಪ್ರೇಯಸಿ ಜೊತೆ ಲಿಯಾಂಡರ್ ಪೇಸ್ ಡೇಟಿಂಗ್

    ಯುವಿ ಮಾಜಿ ಪ್ರೇಯಸಿ ಜೊತೆ ಲಿಯಾಂಡರ್ ಪೇಸ್ ಡೇಟಿಂಗ್

    ಪಣಜಿ: ಬಾಲಿವುಡ್ ನಟಿ ಕಿಮ್ ಶರ್ಮಾ ಜೊತೆ ಭಾರತ ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಡೇಟಿಂಗ್ ನಡೆಸುತ್ತಿದ್ದಾರೆ.

    ಇಬ್ಬರು ಗೋವಾಕ್ಕೆ ತೆರಳಿದ್ದು, ಜೊತೆಯಾಗಿ ರೆಸ್ಟೋರೆಂಟ್‍ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಸ್ಟೋರೆಂಟ್ ಹಂಚಿಕೊಂಡ ಚಿತ್ರದಲ್ಲಿ ಲಿಯಾಂಡರ್ ಕಿಮ್ ಶರ್ಮಾ ಅವರನ್ನು ತಬ್ಬಿಕೊಂಡಿದ್ದಾರೆ.

    ಈ ಹಿಂದೆಯೇ ಮುಂಬೈನಲ್ಲಿ ಇವರಿಬ್ಬರು ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದರು. ಆಗಲೇ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಈಗ ಈ ಫೋಟೋಗಳು ಬಹಿರಂಗವಾದ ಬಳಿಕ ಡೇಟಿಂಗ್ ವದಂತಿಗೆ ಪುಷ್ಟಿ ನೀಡುವಂತಿದೆ. ಇದನ್ನೂ ಓದಿ: ಯುವಿ ಪಾರ್ಟಿಗೆ ಆಗಮಿಸಿ ಟ್ವಿಸ್ಟ್ ಕೊಟ್ಟ ಮಾಜಿ ಗೆಳತಿ

    2000ನೇ ಇಸ್ವಿಯಲ್ಲಿ ಲಿಯಾಂಡರ್ ಪೇಸ್ ಮಾಡೆಲ್ ರಿಯಾ ಪಿಳ್ಳೈ ಅವರ ಜೊತೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದರು. 2005ರಲ್ಲಿ ಇವರಿಬ್ಬರಿಗೆ ಹೆಣ್ಣು ಮಗು ಜನನವಾಗಿತ್ತು. ಕಿಮ್ ಈ ಹಿಂದೆ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಜೊತೆ ಡೇಟಿಂಗ್ ನಡೆಸಿದ್ದರು. ಇದಾದ ಬಳಿಕ ನಟ ಹರ್ಷವರ್ಧನ್ ರಾಣೆ ಜೊತೆಗೂ ಕಿಮ್ ಶರ್ಮಾ ಕಾಣಿಸಿಕೊಂಡಿದ್ದರು.

    ಕಿಮ್ ಮೊಹಬ್ಬಾತೆಯನ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜೊತೆಗೆ ನೆಹಲ್ಲೆ ಪೆ ಡೆಹಲ್ಲಾ, ಟಾಮ್, ಡಿಕ್ ಮತ್ತು ಹ್ಯಾರಿ, ಕೆಹ್ತಾ ಹೈ ದಿಲ್ ಬಾರ್ ಬಾರ್ ಮತ್ತು ಪದ್ಮಶ್ರೀ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವಾರು ಸಿನಿಮಾದಲ್ಲಿ ಕಿಮ್ ನಟಿಸಿದ್ದಾರೆ. 2000 ರಲ್ಲಿ ಬಿಡುಗಡೆಯಾದ ಸುಷ್ಮಿತಾ ಸೇನ್ ಅವರ ಜಿಂದಗಿ ರಾಕ್ಸ್ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಎಸ್.ಎಸ್.ರಾಜಮೌಳಿ ಅವರ ಮಗಧೀರ ಚಿತ್ರದಲ್ಲಿ ಕಿಮ್ ಶರ್ಮಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  • ಮಾಜಿ ಪ್ರೇಯಸಿ ಬಿಕಿನಿ ಫೋಟೋಗೆ ಕಮೆಂಟ್ ಹಾಕಿ ಕಾಲೆಳೆದ ಯುವಿ

    ಮಾಜಿ ಪ್ರೇಯಸಿ ಬಿಕಿನಿ ಫೋಟೋಗೆ ಕಮೆಂಟ್ ಹಾಕಿ ಕಾಲೆಳೆದ ಯುವಿ

    ಮುಂಬೈ: ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ತನ್ನ ಹಳೇ ಪ್ರೇಯಸಿ ಬಾಲಿವುಡ್ ನಟಿ ಕಿಮ್ ಶರ್ಮಾ ಅವರ ಫೋಟೋಗೆ ಕಮೆಂಟ್ ಹಾಕಿ ಸುದ್ದಿಯಾಗಿದ್ದಾರೆ.

    ಯುವರಾಜ್ ಸಿಂಗ್ ಅವರ ಒಂದು ಕಾಲದ ಗಾಸಿಪ್ ಪ್ರೇಯಸಿ ಎಂದು ಫೇಮಸ್ ಆಗಿದ್ದ ಕಿಮ್ ಶರ್ಮಾ ಅವರು ಇತ್ತೀಚೆಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬಿಕಿನಿ ಧರಿಸಿರುವ ಫೋಟೋ ಹಾಕಿದ್ದರು. ಈ ಫೋಟೋಗೆ ಕಮೆಂಟ್ ಹಾಕಿರುವ ಯುವರಾಜ್ ಹಳೇ ಪ್ರೇಯಸಿಯ ಕಾಲೆಳೆಯಲು ಪ್ರಯತ್ನ ಪಟ್ಟಿದ್ದಾರೆ.

    ಕಿಮ್ ಶರ್ಮಾ ಅವರು ಇತ್ತೀಚೆಗೆ ಗೋವಾಗೆ ಹೋಗಿದ್ದು, ಅಲ್ಲಿನ ಬೀಚಿನಲ್ಲಿ ಕಲರ್ ಕಲರ್ ಬಿಕಿನಿ ತೊಟ್ಟು ಸೀಬೋರ್ಡ್ ಹಿಡಿದುಕೊಂಡಿರುವ ಹಾಟ್ ಫೋಟೋವನ್ನು ಹಾಕಿದ್ದಾರೆ. ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಆದರೆ ಯುವರಾಜ್ ಸಿಂಗ್ ಅವರ ಕಮೆಂಟ್‍ಗೆ ಕಿಮ್ ಶರ್ಮಾ, ದಯವಿಟ್ಟು ಇಂಗ್ಲಿಷ್ ನಲ್ಲಿ ಹೇಳಿ ಅಂತ ರಿಪ್ಲೈ ನೀಡಿದ್ದಾರೆ.

    ಕೊರೊನಾ ನಂತರ ಗೋವಾಗೆ ಪ್ರವಾಸ ಹೋಗಿರುವ ಕಿಮ್ ಶರ್ಮಾ ಅವರು ಇತ್ತೀಚೆಗೆ ಅವರ ಹಾಟ್ ಫೋಟೋಗಳು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ ಅರೆಂಜ್ ಬಣ್ಣದ ಸ್ವಿಮ್ ಸೂಟ್ ತೊಟ್ಟು ಪೂಲಿನಲ್ಲಿ ನಿಂತಿರುವ ಫೋಟೋ ಹಾಕಿ ಅಭಿಮಾನಿಗಳನ್ನು ಸೆಳೆದಿದ್ದರು. ಈಗ ಇಂದು ಕೂಡ ಬಣ್ಣ ಬಣ್ಣದ ಬಿಕಿನಿ ಫೋಟೋ ಹಾಕಿದ್ದಾರೆ. ಇದಕ್ಕೆ ಯುವರಾಜ್ ಕಮೆಂಟ್ ಮಾಡಿದ್ದಾರೆ.

    ಕಿಮ್ ಅವರನ್ನು ಒಂದು ಕಾಲದ ಯುವರಾಜ್ ಸಿಂಗ್ ಪ್ರೇಯಸಿ ಎಂದು ಕರೆಯಲಾಗುತ್ತದೆ. ಕಿಮ್ ಮೊಹಬ್ಬಾತೆಯನ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜೊತೆಗೆ ನೆಹಲ್ಲೆ ಪೆ ಡೆಹಲ್ಲಾ, ಟಾಮ್, ಡಿಕ್ ಮತ್ತು ಹ್ಯಾರಿ, ಕೆಹ್ತಾ ಹೈ ದಿಲ್ ಬಾರ್ ಬಾರ್ ಮತ್ತು ಪದ್ಮಶ್ರೀ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವಾರು ಸಿನಿಮಾದಲ್ಲಿ ಕಿಮ್ ನಟಿಸಿದ್ದಾರೆ. 2000 ರಲ್ಲಿ ಬಿಡುಗಡೆಯಾದ ಸುಷ್ಮಿತಾ ಸೇನ್ ಅವರ ಜಿಂದಗಿ ರಾಕ್ಸ್ ಎಂಬ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದಾದ ನಂತರ ಎಸ್.ಎಸ್.ರಾಜಮೌಳಿ ಅವರ ಮಗಧೀರ ಚಿತ್ರದಲ್ಲಿ ಕಿಮ್ ಶರ್ಮಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.

  • ತಡರಾತ್ರಿಯ ಆಟೋ ಸವಾರಿ ಆನಂದಿಸಿದ ಕಿಮ್ ಶರ್ಮಾ

    ತಡರಾತ್ರಿಯ ಆಟೋ ಸವಾರಿ ಆನಂದಿಸಿದ ಕಿಮ್ ಶರ್ಮಾ

    ಮುಂಬೈ: ಮೊಹಬ್ಬತೇನ್ ಚಿತ್ರದ ನಟಿ ಕಿಮ್ ಶರ್ಮಾ ತಡರಾತ್ರಿ ಆಟೋ ಸವಾರಿಯನ್ನು ಆನಂದಿಸಿದ್ದಾರೆ.

    ತಿಳಿ ಗುಲಾಬಿ ಹಾಗೂ ಬೂದು ಬಣ್ಣದ ಟೀ ಶರ್ಟ್, ಶಾರ್ಟ್ಸ್ ತೊಟ್ಟು ಕಿಮ್ ಶರ್ಮಾ ಆಟೋದಲ್ಲಿ ಮುಂಬೈನ ಬಾಂದ್ರಾದ ರಾತ್ರಿಯನ್ನು ನೋಡಿ ಖುಷಿ ಪಟ್ಟಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮುಖ ಮುಚ್ಚಿಕೊಂಡರು. ಬಳಿಕ ಕ್ಯಾಮೆರಾಮೆನ್ ಫೋಟೋ ಕ್ಲಿಕ್ಕಿಸಿದರೂ ಸುಮ್ಮನೆ ಕುಳಿತು ಪ್ರಯಾಣ ಮುಂದುವರಿಸಿದರು.

    ಕಿಮ್ ಶರ್ಮಾ, ಬಾಲಿವುಡ್ ನಟ ಹರ್ಷವರ್ಧನ್ ರಾಣೆ ಜೊತೆ ಡೇಟಿಂಗ್‍ನಲ್ಲಿದ್ದಾರೆ ಎಂಬ ಗುಸು ಗುಸು ಸಿನಿ ಅಂಗಳದಲ್ಲಿ ಹರಿದಾಡುತಿತ್ತು. ಮಾಧ್ಯಮಗಳ ಕ್ಯಾಮೆರಾ ಕಂಡಕೂಡಲೇ ಗೆಳೆಯನ ಹಿಂದೆ ಬಚ್ಚಿಕೊಳ್ಳುತ್ತಿದ್ದ ಕಿಮ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಜೊತೆಯಾಗಿಯೇ ಕಾರಿನಲ್ಲಿ ಬಂದ ಹಾಟ್ ಜೋಡಿ ಮಾಧ್ಯಮಗಳಿಂದ ದೂರವೇ ಉಳಿದುಕೊಂಡಿದ್ದರು. ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಕಿಮ್ ಗೆಳೆಯ ಹರ್ಷವರ್ಧನ್ ಗೆ ಲಿಪ್ ಟು ಲಿಪ್ ಕಿಸ್ ಕೊಟ್ಟರು. ಈ ಕಿಸ್ಸಿಂಗ್ ಫೋಟೋಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    35 ವರ್ಷದ ಹರ್ಷವರ್ಧನ್ ತನಗಿಂತ ಮೂರು ವರ್ಷ ಹಿರಿಯಳಾದ ಕಿಮ್ ಶರ್ಮಾ (38) ಜೊತೆ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ಕಿಮ್ ಶರ್ಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ವರ್ಷದ ಕೊನೆಯಲ್ಲಿ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ ಈಗ ಹಾಟ್ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹರ್ಷವರ್ಧನ್ ರಾಣೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಇತ್ತೀಚೆಗೆ ನಿವೃತ್ತಿ ಹೇಳಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ತಮ್ಮ ನಿವಾಸದಲ್ಲಿ ಆಪ್ತರಿಗೆ ಪಾರ್ಟಿಯನ್ನ ಏರ್ಪಡಿಸಿದ್ದರು. ಈ ಪಾರ್ಟಿಗೆ ಯುವಿ ತಮ್ಮ ಮಾಜಿ ಗೆಳತಿ ಕಿಮ್ ಶರ್ಮಾ ಅವರಿಗೂ ಆಹ್ವಾನ ನೀಡಿದ್ದರು.

    ಯುವರಾಜ್ ಸಿಂಗ್‍ರೊಂದಿಗೆ ಪ್ರೀತಿಯಲ್ಲಿದ್ದ ಕಿಮ್ ಶರ್ಮಾ 2007ರ ಬಳಿಕ ಅವರಿಂದ ದೂರವಾಗಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದ್ದ ಕಿಮ್, ಯುವಿ ಹಾಗೂ ಪತ್ನಿಯೊಂದಿಗೆ ಫೋಟೋಗೆ ಪೋಸ್ ನೀಡಿ ಟ್ವಿಸ್ಟ್ ನೀಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು.

    ತಮ್ಮ ನಿವೃತ್ತಿಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಭಾವುಕರಾಗಿದ್ದ ಯುವರಾಜ್ ಸಿಂಗ್, ಅಂದು ಪತ್ನಿ  ಹಿಜೇಲ್ ಕೀಚ್‍ರೊಂದಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಪ್ರತಿಕ್ರಿಯೆ ನೀಡಿ ಕಿಮ್ ಕಮೆಂಟ್ ಮಾಡಿ, `ಇನ್ನಷ್ಟು ಪ್ರಕಾಶಿಸಿ ಲವ್ಲಿ ಜೋಡಿ’ ಎಂದು ಬರೆದುಕೊಂಡಿದ್ದರು.

  • ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನ ತುಟಿ ಕಚ್ಚಿದ ನಟಿ

    ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನ ತುಟಿ ಕಚ್ಚಿದ ನಟಿ

    ಮುಂಬೈ: ಹಿಂದಿ ಧಾರಾವಾಹಿಯ ನಟಿ ಕಿಮ್ ಶರ್ಮಾ, ಬಾಲಿವುಡ್ ನಟ ಹರ್ಷವರ್ಧನ್ ರಾಣೆ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಗುಸು ಗುಸು ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರೂ, ತಮ್ಮ ಸಂಬಂಧದ ಬಗ್ಗೆ ಹೇಳಿಕೊಳ್ಳುತ್ತಿಲ್ಲ.

    ಮಾಧ್ಯಮಗಳ ಕ್ಯಾಮೆರಾ ಕಂಡಕೂಡಲೇ ಗೆಳೆಯನ ಹಿಂದೆ ಬಚ್ಚಿಕೊಳ್ಳುವ ಕಿಮ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಜೊತೆಯಾಗಿಯೇ ಕಾರಿನಲ್ಲಿ ಬಂದ ಹಾಟ್ ಜೋಡಿ ಮಾಧ್ಯಮಗಳಿಂದ ದೂರವೇ ಉಳಿದುಕೊಂಡಿದ್ದರು. ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಕಿಮ್ ಗೆಳೆಯ ಹರ್ಷವರ್ಧನ್ ಗೆ ಲಿಪ್ ಟು ಲಿಪ್ ಕಿಸ್ ಕೊಟ್ಟರು. ಈ ಕಿಸ್ಸಿಂಗ್ ಫೋಟೋಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    35 ವರ್ಷದ ಹರ್ಷವರ್ಧನ್ ತನಗಿಂತ ಮೂರು ವರ್ಷ ಹಿರಿಯಳಾದ ಕಿಮ್ ಶರ್ಮಾ (38) ಜೊತೆ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ಕಿಮ್ ಶರ್ಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ವರ್ಷದ ಕೊನೆಯಲ್ಲಿ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದೂ, ನಾವು ಮಾತ್ರ ಬೆಸ್ಟ್ ಫ್ರೆಂಡ್ಸ್ ಅಂತಾ ಜೋಡಿ ಹೇಳಿಕೊಂಡು ಕೈ ಕೈ ಹಿಡಿದುಕೊಂಡು ಸುತ್ತಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv