Tag: killer

  • ಜ್ಯೋತಿ ರೈ ನಟನೆಯ ‘ಕಿಲ್ಲರ್’ ಚಿತ್ರದ ಟೀಸರ್ ರಿಲೀಸ್

    ಜ್ಯೋತಿ ರೈ ನಟನೆಯ ‘ಕಿಲ್ಲರ್’ ಚಿತ್ರದ ಟೀಸರ್ ರಿಲೀಸ್

    ನ್ನಡದ ನಟಿ ಜ್ಯೋತಿ ರೈ (Jyoti Rai) ನಟನೆಯ ‘ಕಿಲ್ಲರ್’ ಚಿತ್ರದ (Killer) ಟೀಸರ್ ರಿಲೀಸ್ ಆಗಿದೆ. ಹೊಸ ಬಗೆಯ ಪಾತ್ರದಲ್ಲಿ ನಟಿ ಮಿಂಚಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥೆ ಹೇಳೋಕೆ ಜ್ಯೋತಿ ಸಜ್ಜಾಗಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ ದಾಳಿಗೆ ಮುನೀರ್‌, ಪಾಕ್‌ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್‌ ನಟಿ ಕೆಂಡಾಮಂಡಲ

    ಇದೀಗ ರಿಲೀಸ್ ಆಗಿರುವ ಟೀಸರ್‌ನಲ್ಲಿ ಜ್ಯೋತಿ ಬೋಲ್ಡ್ ಆಗಿ ನಟಿಸಿದ್ದಾರೆ. ರೋಬೋಟ್ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಾಯಕಿ ಯಾಕೆ ರೋಬೋಟ್‌ ಆಗಿ ಬದಲಾಗುತ್ತಾಳೆ. ಅದರ ಅಸಲಿಯತ್ತು ಏನು, ಯಾಕೆ ಎಲ್ಲರನ್ನು ನಾಯಕಿ ಕೊಲ್ಲುತ್ತಾಳೆ ಎಂಬುದು ಟೀಸರ್‌ನಲ್ಲಿ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಚಿಕ್ಕಮ್ಮನಿಂದ ಹಲ್ಲೆ

    ‘ಕಿಲ್ಲರ್’ ಸಿನಿಮಾದಲ್ಲಿ ಜ್ಯೋತಿ ರೈ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಟಿಯ ಪತಿ ಪೂರ್ವಜ್ ಅವರೇ ನಿರ್ದೇಶನ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ಮೂಡಿ ಬರಲಿದೆ.

    ‘ಕಿಲ್ಲರ್’ ಚಿತ್ರದ ಜೊತೆ ‘ಮಾಸ್ಟರ್ ಪೀಸ್’ ಎಂಬ ಚಿತ್ರ ಕೂಡ ಜ್ಯೋತಿ ಮಾಡುತ್ತಿದ್ದಾರೆ. ಅದನ್ನು ಪೂರ್ವಜ್ ಅವರೇ ನಿರ್ದೇಶನ ಮಾಡುತ್ತಿದ್ದು, ಮೇನಲ್ಲಿ ಶೂಟಿಂಗ್ ಶುರುವಾಗಲಿದೆ. ಸದ್ಯ ನಟಿಯ ಸಿನಿಮಾ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಪ್ರೇಯಸಿಯನ್ನ ಕೊಂದು ಮರುದಿನವೇ ಬೇರೆ ಯುವತಿಯ ಜೊತೆ ಹಸೆಮಣೆ ಏರಿದ!

    ಪ್ರೇಯಸಿಯನ್ನ ಕೊಂದು ಮರುದಿನವೇ ಬೇರೆ ಯುವತಿಯ ಜೊತೆ ಹಸೆಮಣೆ ಏರಿದ!

    ಹೈದರಾಬಾದ್: ಪ್ರೀತಿಸಿ ಮದುವೆಯಾಗುವೆನೆಂದು ನಂಬಿಸಿದ ಪ್ರಿಯಕರ, ಪ್ರೇಯಸಿಯನ್ನ ಬರ್ಬರವಾಗಿ ಹತ್ಯೆಗೈದು ಮರುದಿನವೇ ಬೇರೆ ಯುವತಿಯ ಜೊತೆ ಹಸೆಮಣೆ ಏರಿದ್ದು, ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

    ನರೇಶ್ ಬಂಧಿತ ಆರೋಪಿ. ಈತ ಆಂಬುಲೆನ್ಸ್ ಡ್ರೈವರ್ ಆಗಿದ್ದು, ಪ್ರೇಯಸಿಯಾದ ಭಾರ್ಗವಿ ಖಾಸಗಿ ಆಸ್ಪತ್ರೆಯಲ್ಲಿ ರಿಸೆಪ್ಶನಿಸ್ಟ್ ಆಗಿದ್ದರು. ಇಬ್ಬರೂ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ನರೇಶ್ ಭಾರ್ಗವಿಯನ್ನ ಮದುವೆಯಾಗುವುದಾಗಿ ನಂಬಿಸಿದ್ದ. ಆದ್ರೆ ಮನೆಯಲ್ಲಿ ನಿಶ್ಚಯಿಸಿದ ಹುಡುಗಿಯನ್ನ ನರೇಶ್ ಮದುವೆಯಾಗುತ್ತಿದ್ದಾನೆ ಎಂಬ ವಿಷಯ ಪ್ರೇಯಸಿಗೆ ತಿಳಿಯುತ್ತಿದಂತೆ, ಆಕೆಯನ್ನ ತನ್ನ ಜಮೀನಿಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ಎರಡು ದಿನಗಳಿಂದ ಮನೆಗೆ ಬಾರದ ಮಗಳನ್ನ ಹುಡುಕಾಡಿದ ಪೋಷಕರು, ಪೊಲೀಸರಿಗೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ಸಲ್ಲಿಸಿದ್ದರು. ಭಾರ್ಗವಿಯ ಮೊಬೈಲ್ ಕರೆಯ ಆಧಾರದ ಮೇರೆಗೆ ಪ್ರಿಯಕರ ನರೇಶ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ತನ್ನ ಪ್ರಿಯಕರ ಬೇರೊಬ್ಬ ಯುವತಿಯ ಜೊತೆ ವಿವಾಹ ಆಗುತ್ತಿರುವ ವಿಷಯ ತಿಳಿಯುತ್ತಿದಂತೆ ಭಾರ್ಗವಿ ಕಂಗಾಲಾಗಿ ನರೇಶ್ ಜಗಳವಾಡಿದ್ದಳು. ಬಳಿಕ ನರೇಶ್, ಮನೆಯಲ್ಲಿ ಮಾಡುತ್ತಿರುವ ಮದುವೆ ನನಗೆ ಇಷ್ಟವಿಲ್ಲ. ನಾವಿಬ್ಬರು ಓಡಿಹೋಗಿ ಮದುವೆಯಾಗೋಣ ಎಂದು ಭಾರ್ಗವಿಯನ್ನ ನಂಬಿಸಿ ಮಾರ್ಚ್ 3ರಂದು ಭುವನಗಿರಿಯ ಭೊಂಗಿರ್ ನ  ತನ್ನ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾನೆ.

    ಕೊಲೆ ಮಾಡಿದ ಮರುದಿನವೇ ಅಂದರೆ ಮಾರ್ಚ್ 4ರಂದು ಮನೆಯಲ್ಲಿ ನಿಶ್ಚಯಿಸಿದ ಯುವತಿಯ ಜೊತೆ ಅಮಾಯಕನಂತೆ ಮದುವೆಯಾಗಿದ್ದಾನೆ. ನಾಪತ್ತೆಯಾದ ಭಾರ್ಗವಿಯನ್ನ ಹುಡುಕಿದ ಪೊಲೀಸರು ನರೇಶ್ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ತನ್ನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.

    ಘಟನೆ ನಡೆದ ಸ್ಥಳಕ್ಕೆ ನರೇಶ್ ಪೊಲೀಸರನ್ನ ಕರೆದೊಯ್ದು ಮೃತದೇಹವನ್ನ ತೋರಿಸಿದ್ದಾನೆ. ನರೇಶ್ ಭಾರ್ಗವಿ ತಲೆಯ ಮೇಲೆ ಕಲ್ಲು ಬಂಡೆಯನ್ನು ಹಾಕಿ ಕೊಂದಿದ್ದು, ಗುಂಡಿಯನ್ನು ತೋಡಿ ಹೆಣವನ್ನ ಹೂತು ಹಾಕಿದ್ದ. ಮಗಳ ಮೃತದೇಹ ಕಂಡ ಭಾರ್ಗವಿಯ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

     

  • ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು

    ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣಕ್ಕೆ ದಿನಕ್ಕೊಂದು ಸುಳಿವು ಸಿಗುತ್ತಿದ್ದು, ಎಸ್‍ಐಟಿ ತಂಡ ಚುರುಕಾಗಿ ಕಾರ್ಯನಿವಹಿಸುತ್ತಿದೆ. ಹಂತಕರ ಹಿಂದೆ ಬಿದ್ದಿರುವ ಎಸ್‍ಐಟಿಗೆ ಒಂದು ಸ್ಫೋಟಕ ಸುಳಿವು ಸಿಕ್ಕಿದೆ.

    ಗೌರಿ ಲಂಕೇಶ್ ಹತ್ಯೆಯ ಸಂದರ್ಭದಲ್ಲಿ ಹಂತಕರು ಬಳಸಿದ್ದ ಬೈಕ್ ಖರೀದಿಯ ಬಗ್ಗೆ ಸುಳಿವು ಸಿಕ್ಕಿದ್ದು, ಮಹಾರಾಷ್ಟ್ರದ ಪುಣೆಯ ಸಣ್ಣ ಹಳ್ಳಿಯೊಂದರಲ್ಲಿ ಸೆಕೆಂಡ್ ಹ್ಯಾಂಡ್ ಪಲ್ಸರ್ ಬೈಕ್ ಅನ್ನು ಖರೀದಿ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.

    ಹಂತಕ ಬಂದಿದ್ದ ಬೈಕ್ 150 ಸಿಸಿ ಕಪ್ಪು ಮತ್ತು ಕೆಂಪು ಬಣ್ಣದಾಗಿದೆ. ಖರೀದಿ ಮಾಡಿ ಶಿವಮೊಗ್ಗ ಮೂಲದಿಂದ ಬೈಕ್ ತಂದಿರುವ ಬಗ್ಗೆ ಎಸ್‍ಐಟಿಗೆ ಮಾಹಿತಿ ಲಭ್ಯವಾಗಿದ್ದು, ಎಸ್‍ಐಟಿಯಿಂದ ತೀವ್ರ ಹುಡುಕಾಟ ಶುರುವಾಗಿದೆ.

    ಇತ್ತೀಚೆಗೆ ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹನಾಗಿ ಕಾಣುತ್ತಿದ್ದು, ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು.  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಸುಮಾರು ಒಂದು ತಿಂಗಳು 20 ದಿನಗಳಾಗಿದೆ.

    https://www.youtube.com/watch?v=gMCRfdWRT8w

    https://www.youtube.com/watch?v=Wm2_FgKUvtA

    https://www.youtube.com/watch?v=E47pvUQ887A

    https://www.youtube.com/watch?v=h54A6zdpI3A

    https://www.youtube.com/watch?v=d5V8Pu3eGnM

    https://www.youtube.com/watch?v=CZ76KMF2i74

  • ಜೈಲಿನಲ್ಲೇ ಲವ್ವಿ-ಡವ್ವಿ ಶುರು ಮಾಡ್ದ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಹಂತಕ!

    ಜೈಲಿನಲ್ಲೇ ಲವ್ವಿ-ಡವ್ವಿ ಶುರು ಮಾಡ್ದ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಹಂತಕ!

    ಬೆಂಗಳೂರು: ಕಾಲ್ ಸೆಂಟರ್ ಮಹಿಳಾ ಉದ್ಯೋಗಿ ಪ್ರತಿಭಾ ಕೊಲೆಗೈದ ಹಂತಕ ಜೈಲಿನಲ್ಲೇ ಲವ್ವಿಡವ್ವಿ ಶುರುಮಾಡಿದ್ದಾನೆ.

    ಪ್ರತಿಭಾ ಮರ್ಡರ್ ಕೇಸ್‍ನಲ್ಲಿ ಜೀವವಾಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿ ಶಿವಕುಮಾರ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಆದರೆ ಜೈಲಿನಲ್ಲಿ ಕೊಳೆಯಬೇಕಿದ್ದ ಇವನು ಜೈಲಿನ ಹೋಂ ಗಾರ್ಡ್ ಕೆಲಸ ಮಾಡುವ ಮಹಿಳೆಯ ಜೊತೆ ಲವ್ ಶುರುಮಾಡಿದ್ದಾನೆ.

    ಅಪರಾಧಿ ಶಿವಕುಮಾರ್ ಹುಷಾರಿಲ್ಲ ಅಂತಾ ಸುಳ್ಳು ಹೇಳಿ ತನ್ನ ಪ್ರೇಮಿ ಜೊತೆ ಐಷಾರಾಮಿ ಹೋಟೆಲ್‍ಗಳಿಗೆ ಹೋಗುತ್ತಿದ್ದಾನೆ. ಹೋಂಗಾರ್ಡ್ ಹುಡುಗಿಗೂ ಮದುವೆಯಾಗೋದಾಗಿ ನಂಬಿಸಿ ಆಕೆಯ ಜೊತೆ ಫೊಟೋಗಳನ್ನು ತೆಗೆದುಕೊಂಡಿದ್ದಾನಂತೆ. ಈಗ ಆ ಫೋಟೋಗಳು ವೈರಲ್ ಆಗಿದ್ದು, ಇವರ ಲವ್ ಬಗ್ಗೆ ಜೈಲಾಧಿಕಾರಿಗಳಿಗೆ ತಿಳಿದಿಲ್ಲ ಎಂಬುದು ಒಂದು ಯಕ್ಷ ಪ್ರಶ್ನೆಯಾಗಿದೆ.

    2005 ರಲ್ಲಿ ಕಾಲ್ ಸೆಂಟರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಪ್ರತಿಭಾ ಅವರನ್ನ ಅದೇ ಸೆಂಟರ್‍ನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ಶಿವಕುಮಾರ್ ಮಧ್ಯರಾತ್ರಿ ಪಿಕ್‍ಅಪ್ ಮಾಡಿದ್ದು, ನಂತರ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ನಂತರ ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

    https://www.youtube.com/watch?v=zs6fZ7MlNLg