Tag: Killed

  • ರಷ್ಯಾ-ಉಕ್ರೇನ್ ಯುದ್ಧ: ಕನಿಷ್ಟ 12 ಮಂದಿ ಪತ್ರಕರ್ತರ ಹತ್ಯೆ

    ರಷ್ಯಾ-ಉಕ್ರೇನ್ ಯುದ್ಧ: ಕನಿಷ್ಟ 12 ಮಂದಿ ಪತ್ರಕರ್ತರ ಹತ್ಯೆ

    ಕೀವ್: ಫೆಬ್ರವರಿ 24 ರಂದು ಉಕ್ರೇನ್‍ನಲ್ಲಿ ರಷ್ಯಾ ನಡೆಸಿದ ಭೀಕರ ಮಿಲಿಟರಿ ದಾಳಿ ಪ್ರಾರಂಭವಾದಾಗಿನಿಂದ 12 ಪತ್ರಕರ್ತರು ಮತ್ತು ಮಾಧ್ಯಮ ವೃತ್ತಿಪರರು ಉಕ್ರೇನ್‍ನಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನ್‍ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಯುದ್ಧದಿಂದಾಗಿ ಹಾನಿಗೊಳಗಾದ ರಾಷ್ಟ್ರದ ದುರಾವಸ್ಥೆಯ ಪೋಸ್ಟ್‍ವೊಂದನ್ನು ಹಂಚಿಕೊಂಡ ಅವರು, ಯುದ್ಧದ ಸಮಯದಲ್ಲಿ ಕನಿಷ್ಟ 12 ಮಂದಿ ಪತ್ರಕರ್ತರು ಬಲಿಪಶುಗಳಾಗಿದ್ದಾರೆ. ಇದರೊಂದಿಗೆ ಯುದ್ಧದ ತಿವ್ರತೆಯಿಂದಾಗಿ ಗಂಭೀರ ಗಾಯಗಳನ್ನು ಅನುಭವಿಸುತ್ತಿರುವ ಇತರ 10 ಪತ್ರಕರ್ತರು ಕೂಡಾ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

    ಪ್ರಾಸಿಕ್ಯೂಟರ್ ಜನರಲ್ ಪ್ರಕಾರ, ರಷ್ಯಾದ ಮಿಲಿಟರಿಯು ಒಟ್ಟು 56 ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದು, ಅದರಲ್ಲಿ 15 ಅನ್ಯ ದೇಶದ ಪತ್ರಕರ್ತರಿದ್ದಾರೆ. 15 ರಲ್ಲಿ, ನಾಲ್ವರು ಯುಕೆಯಿಂದ ಬಂದವರು. ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಯುಎಸ್, ಯುನೈಟೆಡ್ ಅರಬ್ ಎಮಿರೇಟ್ಸ್‍ನಿಂದ ತಲಾ ಎರಡು, ಮತ್ತು ಸ್ವಿಟ್ಜಲೆರ್ಂಡ್‍ನ ಒಬ್ಬರು ಎಂದು ವರದಿ ನೀಡಿದ್ದಾರೆ.

    ಉಕ್ರೇನ್‍ನಲ್ಲಿ ನಡೆದ ಇತ್ತೀಚಿನ ಘಟನೆಯೊಂದರಲ್ಲಿ, ಉಕ್ರೇನ್‍ನ ಇಬ್ಬರು ಪ್ರಜೆಗಳು ಮತ್ತು ಟರ್ಕಿಶ್ ಟಿಆರ್‍ಟಿ ವಲ್ರ್ಡ್ ಟಿವಿ ಚಾನೆಲ್‍ಗಳ ಕ್ಯಾಮರಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಯುದ್ಧ ರಹಿತ ನಗರವಾದ ಚೆರ್ನಿಹಿವ್‍ನಿಂದ ಚಿತ್ರೀಕರಣವನ್ನು ಸ್ಥಳಾಂತರಿಸುವ ಸಮಯದಲ್ಲಿ ಗುಂಡಿನ ದಾಳಿಗೆ ಒಳಗಾಯಿತು. ಈ ವೇಳೆ ವರದಿಗಾರ ಆಂಡ್ರಿ ತ್ಸಾಪ್ಲಿಯೆಂಕೊ ದಾಳಿಗೆ ಒಳಗಾಗಿದ್ದು, ಅದೃಷ್ಟವಶಾತ್ ಚಿಕ್ಕ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

    ರಷ್ಯಾದ ಪಡೆಗಳು ಯುದ್ಧದ ಕಾನೂನುಗಳನ್ನು ಮರೆತಿದ್ದು, ಈಗಾಗಲೇ ಶೆಲ್ ದಾಳಿ ನಡೆಸಿ ಅನೇಕ ಟಿವಿ ಟವರ್‍ಗಳು ಮತ್ತು ಟಿವಿ ಮತ್ತು ರೇಡಿಯೊ ಕಂಪನಿಗಳನ್ನು ಧ್ವಂಸ ಮಾಡಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಮಾಸ್ ಮೀಡಿಯಾದ ಸಹಕಾರದೊಂದಿಗೆ ಪ್ರಾಸಿಕ್ಯೂಟರ್ ಕಚೇರಿಯು ಈಗಾಗಲೇ ಪತ್ರಕರ್ತರ ವಿರುದ್ಧದ ಅಪರಾಧಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ವೆನೆಡಿಕ್ಟೋವಾ ಹೇಳಿದರು.

    ಅವರ ಮೇಲ್ವಿಚಾರಣೆಯ ಪ್ರಕಾರ, ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ಆರಂಭದಿಂದಲೂ ಉಕ್ರೇನ್‍ನಲ್ಲಿ ಪತ್ರಕರ್ತರು ಮತ್ತು ಮಾಧ್ಯಮಗಳ ವಿರುದ್ಧ 148 ಕಾನೂನುಬಾಹಿರ ಕ್ರಮಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತರಬೇತಿ ನಿರತ ಐಆರ್‌ಬಿ ಪೊಲೀಸ್ ಹೃದಯಾಘಾತದಿಂದ ಸಾವು

    ಫೆಬ್ರವರಿ 24 ರಂದು ರಷ್ಯಾ ಉಕ್ರೇನಿಯನ್ ನೆಲದಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಪ್ರಾರಂಭಗೊಂಡಿದೆ. ಇಲ್ಲಿಯವರೆಗೆ, ವಿಶ್ವಸಂಸ್ಥೆಯ ವರದಿಯ ಪ್ರಕಾರ 6.5 ಮಿಲಿಯನ್‍ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಹೆಚ್ಚುವರಿಯಾಗಿ, ಸಂಘರ್ಷ ಪ್ರಾರಂಭವಾದಾಗಿನಿಂದ ಉಕ್ರೇನ್‍ನಲ್ಲಿ ಕನಿಷ್ಠ 816 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿ ನೀಡಿದೆ.

  • ತಂದೆ ಕೊಲೆಗೈದವನನ್ನು ಕಲ್ಲು ಎತ್ತಾಕಿ ಕೊಂದ ಮಗ!

    ತಂದೆ ಕೊಲೆಗೈದವನನ್ನು ಕಲ್ಲು ಎತ್ತಾಕಿ ಕೊಂದ ಮಗ!

    ಚಿಕ್ಕೋಡಿ(ಬೆಳಗಾವಿ): ತಂದೆಯ ಕೊಲೆ ಮಾಡಿರುವ ವೈಷಮ್ಯದಿಂದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಮಗ ಸೇಡು ತೀರಿಸಿಕೊಂಡ ಘಟನೆ  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ನಡೆದಿದೆ.

    ವಿಠ್ಠಲ ಕಮತೆ(35) ಹಾಗೂ ಸುರೇಶ ಡಂಗೇರ್(30) ಕೊಲೆ ಮಾಡಿ ಪೊಲೀಸರ ಬಲೆಗೆ ಬಿದ್ದ ಆರೋಪಿಗಳು. ಶೌಕತ್ ನದಾಫ್(45) ಭೀಮಪ್ಪನ ಮಗ ವಿಠ್ಠಲನಿಂದ ಕೊಲೆಯಾದವನು.

    10 ವರ್ಷದ ಹಿಂದೆ ಜೈಲಿನಲ್ಲಿದ್ದ ಬೆಂಡವಾಡ ಗ್ರಾಮದ ಭೀಮಪ್ಪ ಕಮತೆಯನ್ನು ಕೊಲೆ ಮಾಡಿರುವ ಆರೋಪವನ್ನು ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮದ ಶೌಕತ್ ನದಾಫ್ ಎದುರಿಸುತ್ತಿದ್ದ. ಇದೇ ಸೇಡಿನಿಂದ ಶೌಕತ್ ನದಾಫ್‍ನನ್ನು ಟಾರ್ಗೆಟ್ ಮಾಡಿದ್ದ ಭೀಮಪ್ಪನ ಮಗ ಹಾಗೂ ಸಹಚರರು, ಶೌಕತ್ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಶೌಕತ್ ನದಾಫ್ ಕೊಲೆ ಮಾಡಿ ಶವ ಬಿಸಾಡಿ ಹೋಗಿದ್ದ ದುಷ್ಕರ್ಮಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದೆ : ಕೋಟಾ ಶ್ರೀನಿವಾಸ್ ಪೂಜಾರಿ

    10 ವರ್ಷಗಳ ಹಿಂದೆ ಪ್ರಕರಣ ಒಂದರಲ್ಲಿ ಸಜೆಯಾಗಿ ಭೀಮಪ್ಪ ಹಿಂಡಲಗಾ ಜೈಲಿನಲ್ಲಿದ್ದರು. ಇತ್ತ ಮೊತ್ತೊಂದು ಪ್ರಕರಣದಲ್ಲಿ ಅದೇ ಹಿಂಡಲಗಾ ಜೈಲಿನಲ್ಲಿ ಶೌಕತ್ ನದಾಫ್ ಇದ್ದ. ಭೀಮಪ್ಪನನ್ನು ಜೈಲಿನಲ್ಲಿಯೇ ಶೌಕತ್ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಇತ್ತ ತಂದೆಯನ್ನು ಕೊಲೆ ಮಾಡಿರುವ ಸೇಡು ತೀರಿಸಿಕೊಳ್ಳುವಲ್ಲಿ ಭೀಮಪ್ಪನ ಮಗ ವಿಠಲ ಪ್ರಯತ್ನಿಸುತ್ತಿದ್ದ. ಅಂತೆಯೇ ಶೌಕತ್ ನನ್ನು ವಿಠಲ ಬರ್ಬರವಾಗಿ ಕೊಂದು ಹಾಕಿದ್ದಾನೆ. ಘಟನೆ ಬಳಿಕ ರಾಯಭಾಗ ಪೊಲೀಸ್ ಠಾಣೆಯ ಪಿಐ ಹಸನ್ ಮುಲ್ಲಾ ನೇತೃತ್ವದಲ್ಲಿ ತನಿಖೆ ನಡೆಸಿ ಕೊಲೆ ಆರೋಪಿಗಳನ್ನ ಬಂಧಿಸಲಾಗಿದೆ. ಈ ಕುರಿತು ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಾಕ್‌ ನೌಕಾಪಡೆಯಿಂದ ಗುಂಡಿನ ದಾಳಿ- ಭಾರತದ ಮೀನುಗಾರನ ಹತ್ಯೆ

    ಪಾಕ್‌ ನೌಕಾಪಡೆಯಿಂದ ಗುಂಡಿನ ದಾಳಿ- ಭಾರತದ ಮೀನುಗಾರನ ಹತ್ಯೆ

    ಗಾಂಧಿನಗರ: ಗುಜರಾತ್‌ನ ಕರಾವಳಿ ಭಾಗದಲ್ಲಿ ಭಾರತದ ಮೀನುಗಾರನನ್ನು ಪಾಕಿಸ್ತಾನ ನೌಕಾಪಡೆ ಹತ್ಯೆ ಮಾಡಿದೆ.

    ಗುಜರಾತ್‌ನ ದ್ವಾರಕಾದಲ್ಲಿ ಓಖಾ ಪಟ್ಟಣದ ಬಳಿ “ಜಲ್‌ಪರಿ” ಎಂಬ ಹೆಸರಿನ ಬೋಟ್‌ನಲ್ಲಿ ಪಾಕಿಸ್ತಾನದ ನೌಕಾಪಡೆಯು ಗುಂಡಿನ ದಾಳಿ ನಡೆಸಿತ್ತು. ಇದನ್ನೂ ಓದಿ: ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಏನ್ ಮಾಡ್ಬೇಕು?

    ಗುಂಡಿನ ದಾಳಿಯಿಂದ ಭಾರತದ ಒಬ್ಬ ಮೀನುಗಾರ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಇರಾಕ್‌ ಪ್ರಧಾನಿ ನಿವಾಸದ ಮೇಲೆ ಡ್ರೋನ್‌ ದಾಳಿ!

  • 126 ಉಗ್ರರ ಹತ್ಯೆ, 27 ಮಂದಿ ಬಂಧನ: ಗೃಹ ಸಚಿವಾಲಯ

    126 ಉಗ್ರರ ಹತ್ಯೆ, 27 ಮಂದಿ ಬಂಧನ: ಗೃಹ ಸಚಿವಾಲಯ

    ನವದೆಹಲಿ: ಕಳೆದ ಮೂರು ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ರಕ್ಷಣಾ ಸಿಬ್ಬಂದಿ ಒಟ್ಟು 126 ಉಗ್ರರನ್ನು ಹತ್ಯೆಗೈದಿದ್ದಾರೆ ಎಂದು ಸರ್ಕಾರ ತಿಳಿಸಿದೆ.

    ಕಳೆದ ಮೂರೂವರೆ ವರ್ಷಗಳಲ್ಲಿ 400 ಉಗ್ರರು ಜಮ್ಮು ಕಾಶ್ಮೀರದಲ್ಲಿ ಒಳನುಸುಳಿದ್ದು ಅದರಲ್ಲಿ 126 ಉಗ್ರರನ್ನು ಹತ್ಯೆ ಮಾಡಿದ್ದರೆ, 27 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಇಂದು ರಾಜ್ಯಸಭೆಗೆ ತಿಳಿಸಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಉಗ್ರರು ಹಾಗೂ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಲಿಖಿತ ಉತ್ತರ ನೀಡಿದೆ.

    2019ರಲ್ಲಿ ಜೂನ್‍ವರೆಗೆ ಅಂತರರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆ ಮೂಲಕ 16 ಉಗ್ರರನ್ನು ಬಂಧಿಸಲಾಗಿದೆ. 2018ರಲ್ಲಿ 24 ಮಂದಿಯನ್ನು, 2017ರಲ್ಲಿ 35 ಮತ್ತು 2016 ರಲ್ಲಿ 36 ಮಂದಿಯನ್ನು ಬಂಧಿಸಲಾಗಿದೆ. ವಿದೇಶದಲ್ಲಿ ತಲೆ ಮರೆಸಿರುವ ಆರೋಪಿಗಳ ಬಂಧನಕ್ಕಾಗಿ 2019ರಲ್ಲಿ ಇಂಟರ್ ಪೋಲ್‍ಗೆ ಭಾರತವು 41 ರೆಡ್ ಕಾರ್ನರ್ ನೋಟಿಸ್ ಕಳುಹಿಸಿದೆ. ಅದರಲ್ಲಿ 32ಪ್ರಕಟವಾಗಿದೆ. 2016ರಲ್ಲಿ ಸಿಬಿಐ 91 ನೋಟಿಸ್ ಕಳುಹಿಸಿದ್ದು, ಅದರಲ್ಲಿ 87 ಪ್ರಕಟವಾಗಿದೆ, 2017 ರಲ್ಲಿ 94 ನೋಟಿಸ್‍ಗಳಲ್ಲಿ 87 ಪ್ರಕಟವಾಗಿದೆ, 2018ರಲ್ಲಿ 123 ನೋಟಿಸ್‍ಗಳನ್ನು ಪೈಕಿ ಕೇವಲ 76 ನೋಟಿಸ್‍ಗಳನ್ನು ಪ್ರಕಟಗೊಂಡಿದೆ ಎಂದು ಹೇಳಿದೆ.

    ಸೋಮವಾರ ರಾಜ್ಯ ರಕ್ಷಣಾ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ, 2018 ರಲ್ಲಿ ಒಟ್ಟು 318 ಉಗ್ರರ ದಾಳಿ ನಡೆದಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ 2017ರಲ್ಲಿ ನಡೆದಿದ್ದ ದಾಳಿಗೆ ಹೋಲಿಸಿದರೆ 2018ರಲ್ಲಿ ಉಗ್ರ ದಾಳಿ ಸಂಖ್ಯೆ 187 ಹೆಚ್ಚಾಗಿದೆ. ಆದರೆ 2014ರಲ್ಲಿ ಮೋದಿ ಸರ್ಕಾರ ಬಂದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಬರೋಬ್ಬರಿ 963 ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ಲೋಕಸಭೆಯಲ್ಲಿ ಮಂಗಳವಾ ಗೃಹ ಸಚಿವಾಲಯ ಉತ್ತರ ನೀಡಿದೆ.

    2019ರಲ್ಲಿ ಭಾರತ ಹಲವಾರು ಉಗ್ರರ ದಾಳಿಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಗೆ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು.

  • ಜೀವಂತವಾಗಿ 30ಕ್ಕೂ ಹೆಚ್ಚು ನಾಯಿಗಳನ್ನು ಹೂತು ಹಾಕಿದ್ರು

    ಜೀವಂತವಾಗಿ 30ಕ್ಕೂ ಹೆಚ್ಚು ನಾಯಿಗಳನ್ನು ಹೂತು ಹಾಕಿದ್ರು

    ಶಿವಮೊಗ್ಗ: ರೇಬಿಸ್ ಪೀಡಿತ 25 ರಿಂದ 30ಕ್ಕೂ ಹೆಚ್ಚು ನಾಯಿಗಳನ್ನು ಜೀವಂತವಾಗಿ ಹೂತು ಹಾಕಿದ ಘಟನೆ ಶಿಕಾರಿಪುರ ತಾಲೂಕು ಗುಡ್ಡದತುಮ್ಮಿನಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಗದ ಹಾರನಹಳ್ಳಿಯಲ್ಲಿ ನಡೆದಿದೆ.

    ಆರು ತಿಂಗಳ ಹಿಂದೆ ರೇಬಿಸ್ ಪೀಡಿತ ನಾಯಿಯೊಂದು ಒಂದು ದನಕ್ಕೆ ಕಚ್ಚಿತ್ತು. ಇದಾದ ಮೂರು ತಿಂಗಳಲ್ಲಿ ರೇಬಿಸ್ ಪೀಡಿತ ದನ ಮೃತಪಟ್ಟಿತ್ತು. ಈ ದನವನ್ನು ಹೂತು ಹಾಕುವ ಬದಲು, ಕೆರೆ ಅಂಗಳಕ್ಕೆ ಹಾಕಿದ್ದರು. ಹೀಗಾಗಿ ಮದಗದ ಹಾರನಹಳ್ಳಿಯ ಕೆಲ ನಾಯಿಗಳು ಹಸುವಿನ ಮಾಂಸ ತಿಂದಿದ್ದರಿಂದ ಅವುಗಳಿಗೂ ರೇಬೀಸ್ ತಗುಲಿತ್ತು.

    ಪರಿಸ್ಥಿತಿಯನ್ನು ಅರಿತ ಕೆಲವರು ನಾಯಿಗಳಿಗೆ ಚುಚ್ಚುಮದ್ದು ನೀಡುವಂತೆ ಒತ್ತಾಯಿಸಿದ್ದರು. ಆದರೆ ಇದು ದುಬಾರಿ ಆಗಲಿದೆ ಎಂಬ ಕಾರಣಕ್ಕೆ ಗ್ರಾಮ ಪಂಚಾಯತಿಯೂ ನಾಯಿಗಳನ್ನು ಜೀವಂತವಾಗಿ ಹೂತು ಹಾಕಲು ಮುಂದಾಗಿತ್ತು. ಅದರಂತೆ ಮದಗದ ಹಾರನಹಳ್ಳಿಯ ಹೊರಗೆ ಕೆರೆ ಅಂಗಳದಲ್ಲಿ ಜೆಸಿಬಿಯಿಂದ ಗುಂಡಿ ತೆಗೆದು, ಸುಮಾರು 20ರಿಂದ 30 ನಾಯಿಗಳನ್ನು ಹಿಡಿದು, ಜೀವಂತವಾಗಿ ಹೂತು ಹಾಕಿದ್ದಾರೆ.

    ಒಂದು ಗುಂಡಿ ಮುಚ್ಚಿದ ನಂತರ ಇನ್ನೊಂದು ಗುಂಡಿ ತೆಗೆದು ಅಳಿದುಳಿದ ನಾಯಿಗಳನ್ನು ಹೊಡೆದು ಕೊಂದು ಗುಂಡಿಗೆ ಹಾಕಿ ಮುಚ್ಚದೆ ಹಾಗೇ ಬಿಟ್ಟಿದ್ದಾರೆ. ಈ ಅಮಾನವೀಯ, ಹೊಣೆಗೇಡಿತನದ ಕೃತ್ಯ ಮುಚ್ಚಿ ಹಾಕಲು ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳು, ಪಿಡಿಓ ಹಾಗೂ ಕಾರ್ಯದರ್ಶಿಗಳು ಪ್ರಯತ್ನಿಸಿದ್ದಾರೆ. ಗ್ರಾಮಕ್ಕೆ ಭೇಟಿ ಕೊಟ್ಟ ಪಬ್ಲಿಕ್ ಟಿವಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸ್ಥಳದಲ್ಲಿ ಇಲ್ಲ ಎಂದು ಸಬೂಬು ಹೇಳಿದ್ದಾರೆ.

    ಹುಚ್ಚು ಹಿಡಿದು ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡುವ ನಾಯಿಗಳಿಗೆ ದಯಾಮರಣ ನೀಡಲು ಅವಕಾಶವಿದೆ. ಆದರೆ ಹಣ ಖರ್ಚಾಗುತ್ತದೆ ಎಂದು ಹೀಗೆ ಜೀವಂತವಾಗಿ ಹೂತು ಹಾಕಿರುವುದು ಅಕ್ಷಮ್ಯ. ಪ್ರಾಣಿಗಳಿಗೂ ಮನುಷ್ಯರಂತೆ ಬದುಕುವು ಹಕ್ಕು ಇದೆ ಎಂಬುದನ್ನು ಮರೆತಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಗ್ರಾಮ ಪಂಚಾಯತಿಯ ಆಡಳಿತದ ವಿರುದ್ಧ ದೂರಿದ್ದಾರೆ.

  • ಜೈಲಿನಲ್ಲಿ ಸಹ ಕೈದಿಗಳಿಂದ ಪಾಕಿಸ್ತಾನ ಮೂಲದ ಕೈದಿ ಕೊಲೆ!

    ಜೈಲಿನಲ್ಲಿ ಸಹ ಕೈದಿಗಳಿಂದ ಪಾಕಿಸ್ತಾನ ಮೂಲದ ಕೈದಿ ಕೊಲೆ!

    ಜೈಪುರ: ಪಾಕಿಸ್ತಾನ ಮೂಲದ ಕೈದಿಯನ್ನು ಸಹ ಕೈದಿಗಳೇ ಹೊಡೆದು ಕೊಲೆಗೈದ ಘಟನೆ ರಾಜಸ್ಥಾನದ ಜೈಪುರ ಕೇಂದ್ರ ಜೈಲಿನಲ್ಲಿ ಬುಧವಾರ ನಡೆದಿದೆ.

    ಶಕೀರ್ ಉಲ್ಲಾ (50) ಕೊಲೆಯಾದ ಪಾಕಿಸ್ತಾನ ಮೂಲದ ಕೈದಿ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಶಕೀರ್ ಉಲ್ಲಾ ನನ್ನು 2011ರಲ್ಲಿ ಬಂಧಿಸಲಾಗಿತ್ತು. ಬಳಿಕ 2017ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

    ಟಿವಿ ನೋಡುತ್ತಿದ್ದಾಗ ನಾಲ್ವರು ಕೈದಿಗಳು ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಮೂವರು ಕಲ್ಲು ಎತ್ತಿಕೊಂಡು ಶಕೀರ್ ಮೇಲೆ ಎಸೆದಿದ್ದಾರೆ. ಪರಿಣಾಮ ಸ್ಥಳದಲ್ಲಿಯೇ ಶಕೀರ್ ಮೃತಪಟ್ಟಿದ್ದಾನೆ ಎಂದು ಜೈಪುರ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಲಕ್ಷ್ಮಣ್ ಗೌರ್ ತಿಳಿಸಿದ್ದಾರೆ.

    ಈ ವೇಳೆ ಪೊಲೀಸರು ಸ್ಥಳದಲ್ಲಿ ಇದ್ದರೇ? ಅಷ್ಟು ದೊಡ್ಡ ಕಲ್ಲು ಕೈದಿಗಳಿಗೆ ಎಲ್ಲಿ ಸಿಕ್ಕಿತು ಎನ್ನುವುದು ಸ್ಪಷ್ಟವಾಗಿಲ್ಲ ಎಂದರು.

    ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ವಿಧಿವಿಜ್ಞಾನ ಅಧಿಕಾರಿಗಳು ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿದ್ದಾರೆ. ಈ ಸಂಬಂಧ ನ್ಯಾಯಾಂಗ ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv