Tag: kill

  • 12 ಸಾವಿರಕ್ಕಾಗಿ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಮಗನನ್ನೇ ಕೊಂದ ತಂದೆ

    12 ಸಾವಿರಕ್ಕಾಗಿ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಮಗನನ್ನೇ ಕೊಂದ ತಂದೆ

    ಬೆಂಗಳೂರು: 12 ಸಾವಿರ ರೂ. ಹಣ ಕಳೆದುಕೊಂಡಿದ್ದಕ್ಕೆ ಸ್ವಂತ ಮಗನನ್ನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಅಮಾನವೀಯ ಘಟನೆಯೊಂದು ಬೆಂಗಳೂರಿನ ಆಜಾದ್ ನಗರದಲ್ಲಿ ನಡೆದಿದೆ.

    ಇಲ್ಲಿನ ನಿವಾಸಿ ಸುರೇಂದ್ರ ಎಂಬವರೇ ತಮ್ಮ ಮಗ ಅರ್ಪಿತ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅಮಾನವೀಯ ಘಟನೆಯ ದೃಶ್ಯವು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಿಜಬ್, ಕುಂಕುಮ ಇಟ್ಟಿದ್ದಕ್ಕೆ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕ ಹಲ್ಲೆ

    crime

    ಕಳೆದ ವಾರ ಅರ್ಪಿತ್ 12 ಸಾವಿರ ರೂ. ಕಳೆದುಕೊಂಡಿದ್ದಕ್ಕೆ ಸುರೇಂದ್ರ ಅವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ದೇಹದ ಬಹುಪಾಲು ಭಾಗ ಸುಟ್ಟುಹೋಗಿತ್ತು ಎನ್ನಲಾಗಿದೆ. ಅರ್ಪಿತ್‌ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನರಳಿ ಇಂದು ಮೃತಪಟ್ದಿದಾರೆ.

  • ಜಮ್ಮು ಕಾಶ್ಮೀರದಲ್ಲಿ ಈ ವರ್ಷದ 21ನೇ ಎನ್‍ಕೌಂಟರ್ – ಮತ್ತೊಬ್ಬ ಉಗ್ರ ಬಲಿ

    ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ಚಾರ್ಸೂ ಗ್ರಾಮದಲ್ಲಿ ಮಂಗಳವಾರ ನಡೆದ ಎನ್‍ಕೌಂಟರ್‌ನಲ್ಲಿ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ.

    ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಪ್ರತಿಕ್ರಿಯಿಸಿ,ಹತ್ಯೆಗೀಡಾದ ಉಗ್ರನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

    ಗ್ರಾಮದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳ ಜಂಟಿ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

    ಭದ್ರತಾ ತಂಡ ಸ್ಥಳವನ್ನು ಸುತ್ತುವರೆದಿದೆ. ಈ ವೇಳೆ ಅಡಗಿಕೊಂಡಿದ್ದ ಭಯೋತ್ಪಾದಕ ಭದ್ರತಾ ಪಡೆಯ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ಕಳೆದು ಹೋಗಿದ್ದ ಬೆಕ್ಕು 17 ವರ್ಷಗಳ ಬಳಿಕ ಪತ್ತೆ- ಈ ರೋಚಕ ಕಥೆ ಸಖತ್ ಥ್ರಿಲ್ಲಿಂಗ್

    ಹೆಚ್ಚಿನ ಭಯೋತ್ಪಾದಕರು ಈ ಜಾಗದಲ್ಲಿ ಅಡಗಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಕಾಶ್ಮೀರದಲ್ಲಿ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಜಂಟಿ ತಂಡಗಳ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳು ಮುಂದುವರೆದಿವೆ ಎಂದು ತಿಳಿದು ಬಂದಿದೆ.

    ಇದು ಈ ವರ್ಷದ 21ನೇ ಎನ್‍ಕೌಂಟರ್ ಆಗಿದ್ದು, ಇಲ್ಲಿಯವರೆಗೆ, ಭದ್ರತಾ ಪಡೆಗಳು 36 ಭಯೋತ್ಪಾದಕರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದೆ. 20ಕ್ಕೂ ಹೆಚ್ಚು ಭಯೋತ್ಪಾದಕರನ್ನು ಜೀವಂತವಾಗಿ ಸೆರೆಹಿಡಿಯಲಾಗಿದ್ದು, ಭಯೋತ್ಪಾದಕ ಸಹಚರರ ವಿರುದ್ಧದ ಕಾರ್ಯಾಚರಣೆಯೂ ಮುಂದುವರಿದಿದೆ.

  • ವ್ಯಕ್ತಿಯನ್ನು ತಿಂದಿದ್ದಕ್ಕೆ ಸ್ಥಳೀಯರಿಂದ 292 ಮೊಸಳೆಗಳ ಮಾರಣಹೋಮ!

    ವ್ಯಕ್ತಿಯನ್ನು ತಿಂದಿದ್ದಕ್ಕೆ ಸ್ಥಳೀಯರಿಂದ 292 ಮೊಸಳೆಗಳ ಮಾರಣಹೋಮ!

    ಜಕಾರ್ತ: ವ್ಯಕ್ತಿಯೊಬ್ಬನನ್ನು ದಾರುಣವಾಗಿ ತಿಂದು ಹಾಕಿದ್ದ ಮೊಸಳೆಗಳ ವಿರುದ್ಧ ತಿರುಗಿಬಿದ್ದ ಸ್ಥಳೀಯರು ಸುಮಾರು 292 ಮೊಸಳೆಗಳನ್ನು ಹತ್ಯೆ ಮಾಡಿರುವ ಘಟನೆ ಇಂಡೋನೇಷ್ಯಾದ ಪಶ್ಚಿಮ ಪೌವಾ ಪ್ರಾಂತ್ಯದ ಸೋರಾಂಗ್ ಜಿಲ್ಲೆಯಲ್ಲಿ ನಡೆದಿದೆ.

    ಶನಿವಾರ ಸೋರಾಂಗ್ ಜಿಲ್ಲೆಯಲ್ಲಿರುವ ಮೊಸಳೆ ಸಾಕಾಣಿಕ ಕೇಂದ್ರದಲ್ಲಿ ಮೊಸಳೆಗಳಿಗೆ ಆಹಾರ ಹಾಕುವ ವೇಳೆ ವ್ಯಕ್ತಿಯೊಬ್ಬನನ್ನು ಮೊಸಳೆಗಳು ತಿಂದು ಹಾಕಿದ್ದವು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಮನುಷ್ಯನನ್ನು ತಿಂದುಹಾಕಿದ್ದಕ್ಕೆ ಕುಪಿತಗೊಂಡು ಸಾಕಾಣಿಕಾ ಕೇಂದ್ರದಲ್ಲಿದ್ದ ಸುಮಾರು 292 ಮೊಸಳೆಗಳ ಮಾರಣಹೋಮ ನಡೆಸಿದ್ದಾರೆ.

    ಶನಿವಾರ ಮೊಸಳೆಗಳಿಗೆ ಆಹಾರ ಹಾಕುವಾಗ ವ್ಯಕ್ತಿಯೊಬ್ಬನ ಮೇಲೆ ಮೊಸಳೆಗಳು ದಾಳಿ ಮಾಡಿತ್ತು. ಆತ ಸಹಾಯಕ್ಕಾಗಿ ಕಿರುಚಾಡುತ್ತಿದ್ದ ಶಬ್ಧ ಕೇಳಿಸಿ ಕೂಡಲೇ ಸ್ಥಳಕ್ಕೆ ಹೋದಾಗ ಸಾಕಷ್ಟು ಮೊಸಳೆಗಳು ವ್ಯಕ್ತಿಯ ಮೇಲೆ ಆಕ್ರಮಣ ಮಾಡಿ ತಿಂದು ಹಾಕಿವೆ ಎಂದು ಸಾಕಾಣಿಕಾ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.

    ಈ ಘಟನೆಯ ವಿರುದ್ಧ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು, ಮುಂದೆಂದೂ ಇಂತಹ ಘಟನೆಗಳು ಮರುಕಳಿಬಾರದೆಂದು ನಿರ್ಧರಿಸಿ ಮೊಸಳೆಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ವೇಳೆ ನಿವಾಸಿಗಳು ಸಣ್ಣದು, ದೊಡ್ಡಲು ಎಂಬುದನ್ನು ನೋಡದೆಯೇ ಆಯುಧಗಳಿಂದ 292 ಮೊಸಳೆಗಳನ್ನು ಕೊಂದು ಹಾಕಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರ ಸೇರಿದ್ದರಿಂದಾಗಿ ಮೊಸಳೆಗಳ ಮಾರಣಹೋಮ ತಡೆಗಟ್ಟಲು ಅಲ್ಲಿನ ಸಿಬ್ಬಂದಿಗಳಿಗೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

  • ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿ: ವಿದ್ಯಾರ್ಥಿ ಬಲಿ

    ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿ: ವಿದ್ಯಾರ್ಥಿ ಬಲಿ

    ಬೆಂಗಳೂರು: ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ನಗರದ ಮ್ಯೂಸಿಯಂ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಮೃತ ದುರ್ದೈವಿ ಬೈಕ್ ಸವಾರನನ್ನು ಪ್ರಿಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹಿಂಬದಿ ಸವಾರ ರಿಕ್ಕಿ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತ ಪ್ರಿಲ್ ಮತ್ತು ಗಾಯಾಳು ರಿಕ್ಕಿ ಇಬ್ಬರೂ ಮೂಲತಃ ತ್ರಿಪುರಾದವರಾಗಿದ್ದು, ಬೆಂಗಳೂರಿನ ಆಚಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು.

    ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಿದ್ದ ಇವರು ಇಂದು ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮ್ಯೂಸಿಯಂ ರಸ್ತೆಯಲ್ಲಿ ಬೈಕ್ ಕಂಟ್ರೋಲ್‍ಗೆ ಸಿಗದೆ ಎಲೆಕ್ಟ್ರಿಕ್ ಪೋಲ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಬ್ಬ ಮೃತಪಟ್ಟು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.

    ಈ ಬಗ್ಗೆ ಕಬ್ಬನ್ ಪಾರ್ಕ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.