Tag: Kigga

  • ಅನ್ಯಕೋಮಿನವರ ವ್ಯಾಪಾರಕ್ಕೆ ನಿರ್ಬಂಧ ಹೇರಿ – ಈಗ ಕಿಗ್ಗಾದಲ್ಲೂ ಧರ್ಮ ದಂಗಲ್

    ಅನ್ಯಕೋಮಿನವರ ವ್ಯಾಪಾರಕ್ಕೆ ನಿರ್ಬಂಧ ಹೇರಿ – ಈಗ ಕಿಗ್ಗಾದಲ್ಲೂ ಧರ್ಮ ದಂಗಲ್

    ಚಿಕ್ಕಮಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಫಿನಾಡಲ್ಲಿ ಮತ್ತೆ ಧರ್ಮ ದಂಗಲ್ ಮುನ್ನೆಲೆಗೆ ಬಂದಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಅನ್ಯ ಕೋಮಿನ ವ್ಯಾಪಾರಸ್ಥರಿಗೆ ನಿರ್ಬಂಧ ಹೇರುವಂತೆ ಹಿಂದೂ ಸಂಘಟನೆಗಳು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿವೆ.

    ಮಾರ್ಚ್‌ 19ರಂದು ಮಳೆ ದೇವರು ಎಂದೇ ಖ್ಯಾತಿಯಾಗಿರುವ ಕಿಗ್ಗಾ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಅನ್ಯ ಕೋಮಿನವರು ಹೈಕೋರ್ಟ್ ಆದೇಶದ ಬಳಿಕವೂ ರಾಜ್ಯದಲ್ಲಿ ಬಂದ್ ಮಾಡಿ ಈ ಮಣ್ಣಿನ ಕಾನೂನಿಗೆ ಬೆಲೆ ಇಲ್ಲದಂತೆ ಮಾಡಿದ ಹಿನ್ನೆಲೆಯಲ್ಲಿ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.  ಇದನ್ನೂ ಓದಿ: ವಿಷ ಸೇವಿಸಿ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ಹಿಂದೂಗಳ ಜಾತ್ರೆ-ಸಭೆ, ಸಮಾರಂಭದಲ್ಲಿನ ವ್ಯಾಪಾರದಲ್ಲಿ ಬಂದ ಲಾಭವನ್ನು ದೇಶವಿರೋಧಿ ಚಟುವಟಿಕೆ ಬಳಸುತ್ತಾರೆಂಬ ಸಂದೇಹವಿದೆ. ಜೊತೆಗೆ ದೇವಾಲಯ ಹಾಗೂ ಹಳ್ಳಿಯ ಸೂಕ್ಷ್ಮ ವಿಚಾರಗನ್ನು ಗಮನಿಸುತ್ತಾರೆ. ಹಾಗಾಗಿ ನಮ್ಮ ಜಾತ್ರೆಗೆ ಅವರು ವ್ಯಾಪಾರಕ್ಕೆ ಬರುವುದು ಬೇಡವೆಂದು ನಿರ್ಬಂಧಿಸುವಂತೆ ʼಜಾಗೃತ ಹಿಂದೂ ಬಾಂಧವರʼ ಹೆಸರಿನಲ್ಲಿ ತಹಶೀಲ್ದಾರ್‌ಗೆ ಮನವಿ ಮಾಡಲಾಗಿದೆ.

    ಋಷ್ಯಶೃಂಗೇಶ್ವರ ಮಳೆ ದೇವರು ಎಂದೇ ಖ್ಯಾತಿಯಾಗಿದ್ದು, ರಾಜ್ಯಕ್ಕೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂದರ್ಭದಲ್ಲಿ ಸರ್ಕಾರವೇ ಇಲ್ಲಿ ಪೂಜೆ ಮಾಡಿಸುತ್ತದೆ. ಯಾವುದೇ ಸರ್ಕಾರ ಅಧಿಕಾರಲ್ಲಿದ್ದರೂ ಬಹುತೇಕ ಎಲ್ಲಾ ಸಚಿವರು ಇಲ್ಲಿಗೆ ಆಗಮಿಸಿ ಪೂಜೆ ಮಾಡುವುದು ವಿಶೇಷ.

  • ಕಿಗ್ಗಾದಲ್ಲಿ ಪರ್ಜನ್ಯ ಜಪ ನಿಲ್ಲಿಸಿದ ಆಡಳಿತ ಮಂಡಳಿ

    ಕಿಗ್ಗಾದಲ್ಲಿ ಪರ್ಜನ್ಯ ಜಪ ನಿಲ್ಲಿಸಿದ ಆಡಳಿತ ಮಂಡಳಿ

    – ಮಳೆಗಾಗಿ ಋಷ್ಯಶೃಂಗೇಶ್ವರನಿಗೆ 63 ಹಳ್ಳಿಗರು ಪೂಜೆ ಸಲ್ಲಿಸಿದ್ರು

    ಚಿಕ್ಕಮಗಳೂರು: ಮಳೆಗಾಗಿ ವರುಣ ದೇವರೆಂದೇ ಖ್ಯಾತಿ ಪಡೆದಿರುವ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ರಾಜ್ಯದ ವಿವಿಧ ಭಾಗದ ಜನರು ಮೊರೆ ಹೋಗಿದ್ದರು. ಆದರೆ ಈಗ ವರುಣ ಭಾರೀ ಅವಾಂತರ ಸೃಷ್ಟಿಸುತ್ತಿರುವುದಿಂದ ಆಡಳಿತ ಮಂಡಳಿಯು ಪರ್ಜನ್ಯ ಜಪ ನಿಲ್ಲಿಸಿದೆ.

    ಮಳೆಗಾಗಿ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ನಾಲ್ಕು ತಿಂಗಳಲ್ಲಿ ರಾಜ್ಯದ ವಿವಿಧ ಭಾಗಗಳ 63 ಹಳ್ಳಿಗರು ವಿಶೇಷ ಪೂಜೆ ಸಲ್ಲಿಸಿದ್ದರು. ಚಿತ್ರದುರ್ಗ, ದಾವಣಗೆರೆ, ಧಾರವಾಡದಿಂದಲೂ ಬಂದಿದ್ದ ಭಕ್ತರು ಮಳೆಗಾಗಿ ಪರ್ಜನ್ಯ ಜಪ ಮಾಡಿಸಿದ್ದರು. ಈ ಪೂಜೆಯ ಫಲ ಎಂಬಂತೆ ಋಷ್ಯಶೃಂಗೇಶ್ವರನ ಶಕ್ತಿಯಿಂದ ಇಂದು ಕರ್ನಾಟಕವೇ ಜಲಾವೃತವಾಗಿದೆ.

    ಮಳೆಯ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಹರಿಯುವ ಹೆಚ್ಚಿನ ನದಿಗಳು, ಹಳ್ಳಗಳು ಪ್ರವಾಹದ ಮಟ್ಟ ಮೀರಿವೆ. ಹೀಗಾಗಿ ಕಿಗ್ಗಾ ದೇವಸ್ಥಾನದ ಆಡಳಿತ ಮಂಡಳಿಯು ಪರ್ಜನ್ಯ ಜಪ ನಿಲ್ಲಿಸಿದೆ. ಈ ನಿಟ್ಟಿನಲ್ಲಿ ಆಗಸ್ಟ್ 12 ರ ಒಳಗಾಗಿ ಮಳೆ ನಿಲ್ಲಿಸುವಂತೆ  ಋಷ್ಯಶೃಂಗೇಶ್ವರನಿಗೆ ಭಕ್ತರು ಸಂಕಲ್ಪ ಮಾಡಿದ್ದಾರೆ. ಮಳೆ ನಿಂತರೆ ಆಗಸ್ಟ್ 19ರಂದು ಸಂಕಲ್ಪದ ವಿಶೇಷ ಪೂಜೆ ಸಲ್ಲಿಸುತ್ತೇವೆ ಎಂದು ಭಕ್ತರು ಬೇಡಿಕೊಂಡಿದ್ದಾರೆ.

    ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು ಈಗಾಗಲೇ 8 ಜನರು ಜಲಾಸುರನಿಗೆ ಬಲಿಯಾಗಿದ್ದಾರೆ. ಬೆಳಗಾವಿ, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಮಂಗಳೂರು, ಉಡುಪಿ, ಶಿವಮೊಗ್ಗ ಹಾಗೂ ಕೊಡಗಿನಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಪ್ರವಾಹ ಬಾಧಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಜೋರಾಗಿದ್ದು, ನಿಧಾನವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಜ್ಜೆ ಹಾಕಿದ್ದಾರೆ. ಎಲ್ಲಾ ಕಡೆ ಕರೆಂಟ್ ವ್ಯತ್ಯಯವಾಗಿದ್ದು, ಸುತ್ತಲೂ ನೀರಿದ್ದರೂ ಕುಡಿಯುವುದಕ್ಕೆ ನೀರು ಇಲ್ಲದಂತಾಗಿದೆ.

    ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಜೊತೆಗೆ ಸಿನಿಮಾ ನಟರು, ಸೆಲೆಬ್ರೆಟಿಗಳು ಪ್ರವಾಹ ಪೀಡಿತ ಪ್ರದೇಶಗಳ ನೆರವಿಗೆ ಮುಂದಾಗಿದ್ದಾರೆ.