Tag: Kiev

  • ಇಬ್ಬರು ಉಕ್ರೇನ್ ಉನ್ನತ ಅಧಿಕಾರಿಗಳನ್ನ ಅಮಾನತು ಮಾಡಿದ ಝೆಲೆನ್ಸ್ಕಿ

    ಇಬ್ಬರು ಉಕ್ರೇನ್ ಉನ್ನತ ಅಧಿಕಾರಿಗಳನ್ನ ಅಮಾನತು ಮಾಡಿದ ಝೆಲೆನ್ಸ್ಕಿ

    ಕೀವ್: ಇಬ್ಬರು ಉನ್ನತ ಅಧಿಕಾರಿಗಳನ್ನು ತನಿಖೆಗಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮಾನತುಗೊಳಿಸಿದ್ದಾರೆ.

    ರಷ್ಯಾ ಮತ್ತು ಉಕ್ರೇನ್‌ ನಡುವೆ ಕಳೆದ ಮೂರು ತಿಂಗಳಿಂದ ಭೀಕರವಾಗಿ ಯುದ್ಧ ನಡೆಯುತ್ತಿದೆ. ಈ ವೇಳೆ ತಮ್ಮ ದೇಶದಲ್ಲಿಯೇ ಇದ್ದು, ರಷ್ಯಾಗೆ ಸಹಾಯ ಮಾಡುತ್ತಿದ್ದ ಅಧಿಕಾರಗಳ ವಿರುದ್ಧ ಝೆಲೆನ್ಸ್ಕಿ ಅವರು ಕ್ರಮ ತೆಗೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಅಧ್ಯಕ್ಷೀಯ ಕಚೇರಿಯ ಉಪ ಮುಖ್ಯಸ್ಥ ಆಂಡ್ರಿ ಸ್ಮಿರ್ನೋವ್ ಅವರನ್ನು ಅಮಾನತು ಮಾಡಲಾಗಿದೆ. ಐರಿನಾ ವೆನೆಡಿಕ್ಟೋವಾ ಅವರನ್ನು ಸಹ ಪ್ರಾಸಿಕ್ಯೂಟರ್ ಜನರಲ್‍ನಿಂದ ತೆಗೆದುಹಾಕಲಾಗಿದೆ. ಇವರು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸುಳಿವು ನಮಗೆ ಸಿಕ್ಕಿದೆ. ಈ ಕುರಿತು ಸಂಪೂರ್ಣವಾಗಿ ತನಿಖೆಯಾಗುವವರೆಗೂ ಅವರನ್ನು ಅಮಾನತು ಮಾಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ:  ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಒತ್ತಾಯ – ತನಿಖೆಗೆ ಆದೇಶ 

    ಅಧ್ಯಕ್ಷರ ಹಿರಿಯ ಸಹಾಯಕ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಧ್ಯಕ್ಷೀಯ ಕಚೇರಿಯ ಉಪ ಮುಖ್ಯಸ್ಥ ಆಂಡ್ರಿ ಸ್ಮಿರ್ನೋವ್, ವೆನೆಡಿಕ್ಟೋವಾ ಅವರನ್ನು ಅಮಾನತುಗೊಳಿಸಲಾಗಿದೆ. ಬಕಾನೋವ್ ಅವರನ್ನು ತಮ್ಮ ಕರ್ತವ್ಯಗಳನ್ನು ಪೂರೈಸುವುದರಿಂದ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಆದರೆ ವಜಾಗೊಳಿಸಲಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟರು.

    ತನಿಖೆ ವೇಳೆ ಅವರನ್ನು ದೋಷಮುಕ್ತಗೊಳಿಸಿದರೆ ಇಬ್ಬರು ಅಧಿಕಾರಿಗಳು ತಮ್ಮ ಉದ್ಯೋಗಗಳಿಗೆ ಮರಳಬಹುದೇ ಎಂದು ಕೇಳಿದಾಗ, ನಾವು ಕಾನೂನು ಪಾಲಿಸುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಖಂಡಿತವಾಗಿ ಸಾಧ್ಯವಾಗುತ್ತೆ. ಈ ಬಗ್ಗೆ ನಾನು ಊಹಿಸಬಲ್ಲೆ ಎಂದು ಉತ್ತರಿಸಿದರು.

    Live Tv
    [brid partner=56869869 player=32851 video=960834 autoplay=true]

  • ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಉಕ್ರೇನ್

    ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಉಕ್ರೇನ್

    ಕೀವ್: ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಾಗಿ ಉಕ್ರೇನ್ ಹೇಳಿದೆ.

    ದೇಶದ ಪೂರ್ವದಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿಗಳು ತಮ್ಮ ಸ್ವಘೋಷಿತ ಗಣರಾಜ್ಯಗಳನ್ನು ಗುರುತಿಸಿದೆ ಎಂದು ಹೇಳಿದ ಸ್ಪಲ್ವ ಸಮಯದ ನಂತರ ಉಕ್ರೇನ್ ಈ ನಿರ್ಧಾರಕ್ಕೆ ಬಂದಿದೆ. ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಮತ್ತು ಲುಗಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ ಘೋಷಣೆಗೆ ಉತ್ತರ ಕೊರಿಯಾದ ಮಾನ್ಯತೆ ಕೊಟ್ಟಿತು. ಅಲ್ಲದೇ ಕಳೆದ ತಿಂಗಳು ರಷ್ಯಾದ ಮತ್ತೊಂದು ಮಿತ್ರರಾಷ್ಟ್ರ ಸಿರಿಯಾ ಸಹ ಅದೇ ಕ್ರಮವನ್ನು ತೆಗೆದುಕೊಂಡಿತ್ತು. ಆದರೆ ಉಕ್ರೇನಿಯನ್ ವಿದೇಶಾಂಗ ಸಚಿವಾಲಯವು ಉತ್ತರ ಕೊರಿಯಾದ ಈ ನಿರ್ಧಾರವನ್ನು ಖಂಡಿಸಿದೆ. ಇದನ್ನೂ ಓದಿ:  ಬಿಜೆಪಿ MLAಗೆ ಮಣ್ಣಿನ ಸ್ನಾನ ಮಾಡಿಸಿದ ಮಹಿಳೆಯರ ಗುಂಪು – ಕಾರಣ ಕೇಳಿ ನೆಟ್ಟಿಗರು ಶಾಕ್ 

    ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸುವುದಾಗಿ ಉಕ್ರೇನ್ ಘೋಷಿಸಿದೆ ಎಂದು ಹೇಳಿಕೆ ತಿಳಿಸಿದೆ.

    ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅವಲಂಬಿಸಿರುವ ದೇಶಗಳನ್ನು ಹೊರತುಪಡಿಸಿ, ರಷ್ಯಾವು ಇನ್ನು ಮುಂದೆ ಜಗತ್ತಿನಲ್ಲಿ ಯಾವುದೇ ಮಿತ್ರರಾಷ್ಟ್ರಗಳನ್ನು ಹೊಂದಿಲ್ಲ ಎಂದು ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರೆಡಿ ಮಾಡಿದ 15ರ ಭಾರತೀಯ ಬಾಲಕ

    ಉಕ್ರೇನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರೆಡಿ ಮಾಡಿದ 15ರ ಭಾರತೀಯ ಬಾಲಕ

    ನವದೆಹಲಿ: 15 ವರ್ಷದ ಭಾರತೀಯ ಹುಡುಗ ಕೇವಲ 2 ವಾರಗಳಲ್ಲಿ ಉಕ್ರೇನಿಯನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರಚಿಸಿದ್ದಾನೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಸುದ್ದಿ ವೈರಲ್ ಆಗಿದೆ. ಹುಡುಗನ ಸಾಧನೆಗೆ ನೆಟ್ಟಿಗರು ಪ್ರೋತ್ಸಾಹದ ಮಾತುಗಳಾಡಿದ್ದಾರೆ.

    ರಷ್ಯಾ, ಉಕ್ರೇನ್ ಮೇಲೆ ದಾಳಿಯನ್ನು ಆರಂಭಿಸಿದಾಗಿನಿಂದ, ಜಗತ್ತು ಉಕ್ರೇನ್‍ಗೆ ಸಹಾಯ ಮಾಡಲು ಒಗ್ಗಟ್ಟಿನಿಂದ ನಿಂತಿದೆ. ಉಕ್ರೇನ್‍ಗೆ ದೇಣಿಗೆ ಸಂಗ್ರಹಿಸಲು ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಒಗ್ಗೂಡಿವೆ. ಯುದ್ಧದ ಪರಿಣಾಮವಾಗಿ, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದು, ಅವರಿಗೆ ಇತರ ದೇಶಗಳಲ್ಲಿ ಆಶ್ರಯ ಪಡೆಯಬೇಕಾಗಿದೆ. ಇದನ್ನೂ ಓದಿ: ಹೆಣ್ಣು ಮಗು ಜನಿಸಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ತಂದೆ

    ಯುದ್ಧದಿಂದ ನೋವನ್ನು ಅನುಭವಿಸುತ್ತಿರುವ ನಿರಾಶ್ರಿತರಿಗೆ 15 ವರ್ಷದ ಭಾರತೀಯ ಹುಡುಗ ಇದೀಗ ಬೇರೆ ದೇಶದಲ್ಲಿರುವ ಉಕ್ರೇನಿಯನ್ ನಿರಾಶ್ರಿತರನ್ನು ಸಂಪರ್ಕಿಸಲು ವಿಶೇಷ ಮಾರ್ಗವೊಂದನ್ನು ಹುಡುಕಿದ್ದಾನೆ. ಈ ಪೂರಾ ಉಕ್ರೇನಿಯನ್ ನಿರಾಶ್ರಿತರಿಗಾಗಿ ವಿಶೇಷ ಅಪ್ಲಿಕೇಶನ್ ನಿರ್ಮಿಸಿದ್ದಾನೆ. ಇದರಲ್ಲಿರುವ ವಿಶೇಷ ವಿಷಯವೆಂದರೆ ತೇಜಸ್ ರವಿಶಂಕರ್ ಎಂದು ಗುರುತಿಸಲಾದ ಚಿಕ್ಕ ಹುಡುಗ ಸಿಕ್ವೊಯಾ ಇಂಡಿಯಾದ ವ್ಯವಸ್ಥಾಪಕ, ನಿರ್ದೇಶಕ ಜಿವಿ ರವಿಶಂಕರ್ ಅವರ ಮಗ. ಸಾಫ್ಟ್‍ವೇರ್ ಡೆವಲಪರ್ ಆಗಿರುವ ತೇಜಸ್ ಕೇವಲ ಎರಡು ವಾರಗಳಲ್ಲಿ ಆ್ಯಪ್ ಕಂಡುಹಿಡಿದಿದ್ದಾನೆ.

    ತೇಜಸ್ ಆ್ಯಪ್ ಲಿಂಕ್‍ನನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಇದನ್ನು ಹೇಗೆ ಬಳಸಬೇಕು ಎಂಬುದನ್ನು ವಿವರಿಸಿದ್ದಾನೆ. ಈ ಆ್ಯಪ್‍ನಲ್ಲಿ ಹಲವು ವಿಶೇಷತೆಗಳನ್ನು ಹೊಂದಿದೆ. ಉಕ್ರೇನ್ ನಿರಾಶ್ರಿತರಿಗೆ ಹತ್ತಿರವಿರುವ ಜಾಗದ ಜೊತೆಗೆ ಪ್ರಪಂಚದ ನಕ್ಷೆಯನ್ನು ತೇಜಸ್ ಆ್ಯಪ್‍ನಲ್ಲಿ ಆಳವಡಿಸಿದ್ದಾರೆ. ಈ ಮೂಲಕ ನಿರಾಶ್ರಿತರು ಆಹಾರ, ಉಳಿದುಕೊಳ್ಳಲು ಸುರಕ್ಷಿತ ಸ್ಥಳಗಳು ಮತ್ತು ಪ್ರಪಂಚದಾದ್ಯಂತ ಔಷಧಿಗಳಂತಹ ಅವಶ್ಯಕತೆಗಳನ್ನು ಪೂರೈಸಲು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: ಮನೆಯನ್ನೇ ಸ್ಮಶಾನ ಮಾಡಿದ ಪಾಪಿ – ಪತ್ನಿ, ಅಜ್ಜಿ, ತನ್ನ ಎರಡು ಮಕ್ಕಳನ್ನೆ ಕ್ರೂರವಾಗಿ ಕೊಂದ

    ಸಹಾಯ ಅಗತ್ಯವಿರುವ ವ್ಯಕ್ತಿ ಕೇವಲ ಆ್ಯಪ್ ಮೇಲೆ ಎರಡು ಕ್ಲಿಕ್ ಮಾಡಿದರೆ ಸಹಾಯ ಪಡೆಯಬಹುದು ಎಂದು ತೇಜಸ್ ತಮ್ಮ ಟ್ವೀಟ್‍ನಲ್ಲಿ ಬರೆದಿದ್ದಾರೆ. ಈ ಅಪ್ಲಿಕೇಶನ್ ಇಂಗ್ಲಿಷ್ ಜೊತೆಗೆ 12 ಇತರ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ತೇಜಸ್ ತಂದೆ ಜಿವಿ ರವಿಶಂಕರ್ ಅವರು ತಮ್ಮ ಮಗನ ಸಾಧನೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಮಗನ ಯಶಸ್ಸನ್ನು ಶ್ಲಾಘಿಸಿದ್ದಾರೆ. ಕೆಲವು ದಿನಗಳ ಹಿಂದೆ, ತೇಜಸ್ ತನ್ನ ಅಪ್ಲಿಕೇಶನ್ ಅನುಮೋದಿಸಲು ಗೂಗಲ್ ಪ್ಲೇಗೆ ಮನವಿ ಮಾಡಿದ್ದನು.

  • ನೇರವಾಗಿ ರಷ್ಯಾವನ್ನು ಎದುರಿಸಲು ಮತ್ತೆ ಹಿಂದೇಟು ಹಾಕಿದ ನ್ಯಾಟೋ

    ನೇರವಾಗಿ ರಷ್ಯಾವನ್ನು ಎದುರಿಸಲು ಮತ್ತೆ ಹಿಂದೇಟು ಹಾಕಿದ ನ್ಯಾಟೋ

    ಕೀವ್/ಲಂಡನ್: ಶಸ್ತ್ರಾಸ್ತ್ರ ಪೂರೈಸುವ ಮೂಲಕ ಹಿಂದಿನಿಂದ ಉಕ್ರೇನ್ ಬೆಂಬಲಕೊಂಡುತ್ತಿರುವ ನ್ಯಾಟೋ ಪಡೆಗಳು, ನೇರವಾಗಿ ರಷ್ಯಾವನ್ನು ಎದಿರುಹಾಕಿಕೊಳ್ಳಲು ಮತ್ತೆ ಹಿಂದೇಟು ಹಾಕಿದೆ.

    ರಷ್ಯಾ ಮತ್ತು ಉಕ್ರೇನ್ ದಾಳಿ ಇಂದಿಗೆ 10ನೇ ದಿನಕ್ಕೆ ಮುಟ್ಟಿದ್ದು, ಇಂದು 6 ಗಂಟೆಗಳ ಕಾಲ ರಷ್ಯಾ ಕದನ ವಿರಾಮವನ್ನು ಘೋಷಿಸಿತ್ತು. ಇಂದು ರಷ್ಯಾ ದಾಳಿ ತಡೆಯಲು ನೋ ಫ್ಲೈ ಜೋನ್ ಘೋಷಣೆ ಮಾಡುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಮಾಡಿದ ಮನವಿಯನ್ನು ನ್ಯಾಟೋ ಪುರಸ್ಕರಿಸಿಲ್ಲ. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ

    ನಾವು ನೋ ಫ್ಲೈ ಜೋನ್ ಎಂದು ಘೋಷಿಸಿದರೆ ಉಕ್ರೇನ್‍ಗೆ ನ್ಯಾಟೋ ಯುದ್ಧ ವಿಮಾನ ಕಳಿಸಿ ರಷ್ಯಾದ ವಿಮಾನ ತಡೆಯಬೇಕಾಗುತ್ತದೆ. ಇದು ನೇರವಾಗಿ ಯುದ್ಧಕ್ಕೆ ಧುಮುಕಿದಂತೆ. ಇದು ಮೂರನೇ ಮಹಾಯುದ್ಧಕ್ಕೂ ನಾಂದಿ ಹಾಡಬಹುದು. ನಾವಿದಕ್ಕೆ ತಯಾರಿಲ್ಲ. ನಾವು ನೋ ಫ್ಲೈ ಜೋನ್ ಎಂದು ಘೋಷಿಸಲ್ಲ ಎಂದು ನ್ಯಾಟೋ ದೇಶಗಳು ಪ್ರಕಟಿಸಿವೆ.

    Vladimir Putin

    ಈ ಪ್ರಕಟನೆ ಕೇಳಿ ಝೆಲೆನ್‍ಸ್ಕಿ ಗರಂ ಆಗಿದ್ದಾರೆ. ನ್ಯಾಟೋ ತೀರ್ಮಾನ ರಷ್ಯಾಗೆ ಇನ್ನಷ್ಟು ದಾಳಿ ಮಾಡಲು ಗ್ರೀನ್ ಸಿಗ್ನಲ್ ನೀಡಿದಂತಾಗಿದೆ. ಇದನ್ನು ನ್ಯಾಟೋದಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಾನೇಲ್ಲೂ ಓಡಿಹೋಗಿಲ್ಲ. ಕೀವ್‍ನಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

    ರಷ್ಯಾದ ಮೇಲಿನ ದಿಗ್ಬಂಧನ ಯುದ್ಧಕ್ಕೆ ಸಮ. ಇದಕ್ಕೆ ತಕ್ಕ ಮೌಲ್ಯ ತೆರುತ್ತೀರಿ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಸಿದ್ದಾರೆ. ಈ ಯುದ್ಧದಲ್ಲಿ ಗೆಲ್ಲೋದು ಉಕ್ರೇನ್ ದೇಶ ಎಂದು ಅಮೆರಿಕ ಭವಿಷ್ಯ ಹೇಳಿದೆ. ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಮುಂದಿನ ವಾರ ಪೋಲೆಂಡ್, ರೋಮೇನಿಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ

  • ತನ್ನದೇ ದೇಶದ ಸಂಧಾನಕಾರನನ್ನು ಹತ್ಯೆಗೈದ ಉಕ್ರೇನ್

    ತನ್ನದೇ ದೇಶದ ಸಂಧಾನಕಾರನನ್ನು ಹತ್ಯೆಗೈದ ಉಕ್ರೇನ್

    ಕೀವ್: ಉಕ್ರೇನ್ ಮತ್ತು ರಷ್ಯಾ ನಡುವೆ 10 ದಿನಗಳಿಂದ ಭೀಕರ ಯುದ್ಧ ನಡೆಯುತ್ತಿದ್ದು, ದಿನಕ್ಕೊಂದು ಹೊಸ ಸುದ್ದಿ ಕೇಳಿಬರುತ್ತಿದೆ. ಇಂದು ತನ್ನದೇ ದೇಶದ ಸಂಧಾನಕಾರನನ್ನು ಉಕ್ರೇನ್ ಹತ್ಯೆ ಮಾಡಿದೆ ಎಂದು ವರದಿಯಾಗಿದೆ.

    ಉಕ್ರೇನ್ ನಿನ್ನೆಯೂ ಸಹ ತನ್ನ ದೇಶವನ್ನು ರಷ್ಯಾದಿಂದ ಬಚಾವ್ ಮಾಡಲು ತನ್ನದೇ ಹಡಗನ್ನು ಸ್ಫೋಟಿಸಿಕೊಂಡಿತ್ತು. ಆದರೆ ಇಂದು ಉಕ್ರೇನ್ ಸಂಧಾನಕಾರ ರಷ್ಯಾ ಜೊತೆಗೆ ಕೈ ಜೋಡಿಸಿದ್ದಾನೆ ಎಂದು ಶಂಕೆ ಹಿನ್ನೆಲೆಯಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ತಾಯ್ನಾಡಿಗೆ

    10 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಯುದ್ಧಕ್ಕೆ ರಷ್ಯಾ 6 ಗಂಟೆ ಬ್ರೇಕ್ ಕೊಟ್ಟಿತ್ತು. ಈ ನಡುವೆಯೂ ಸಹ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ್ದಾರೆ. ಇದು ನಿಯಮ ಉಲ್ಲಂಘನೆ ಎಂದು ತಿಳಿದಿದ್ದರೂ ರಷ್ಯಾ ಈ ಕೃತ್ಯವನ್ನು ಮಾಡಿದೆ. ಇದಕ್ಕೆ ತನ್ನ ದೇಶದ ಸಂಧಾನಕನೇ ಕಾರಣವೆಂದು ಶಂಕಿಸಿದ ಉಕ್ರೇನ್ ಅವನ ಮೇಲೆಯೇ ದಾಳಿ ಮಾಡಿ ಕೊಂದಿದ್ದಾರೆ. ಒಂದು ಕಡೆ ಕದನ ವಿರಾಮ ಇದ್ದರೂ, ಇನ್ನೊಂದು ಕಡೆ ತೀವ್ರ ದಾಳಿ ನಡೆಯುತ್ತಿದೆ.

  • ತಮ್ಮ ಹಡಗನ್ನೇ ಸ್ಫೋಟಿಸಿಕೊಂಡ ಉಕ್ರೇನ್ ಸೇನೆ!

    ತಮ್ಮ ಹಡಗನ್ನೇ ಸ್ಫೋಟಿಸಿಕೊಂಡ ಉಕ್ರೇನ್ ಸೇನೆ!

    ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಶುರು ಮಾಡಿ ಇವತ್ತಿಗೆ ಒಂಬತ್ತನೇ ದಿನ. ಈ ನಡುವೆ ಉಕ್ರೇನ್‍ನ ಹಡಗೊಂದನ್ನು ಉಕ್ರೇನ್ ಸೈನಿಕರೇ ಸ್ಫೋಟಿಸಿ ಮುಳುಗಿಸಿದ್ದಾರೆ.

    ರಷ್ಯಾ ಸೇನೆ ಕಂಡುಕೇಳರಿಯದ ರೀತಿಯಲ್ಲಿ ಉಕ್ರೇನ್ ಮೇಲೆ ಬಾಂಬ್, ಕ್ಷಿಪಣಿ ದಾಳಿ ನಡೆಸ್ತಿವೆ. ಈ ಹಿನ್ನೆಲೆ ಖಾರ್ಕೀವ್, ಚೆರ್ನಿಹೀವ್, ಸುಮಿ, ಕೀವ್ ನಗರಗಳು ತತ್ತರಿಸಿದ್ದು, ಸ್ಮಶಾನದಂತಾಗಿಬಿಟ್ಟಿವೆ. ಸದ್ಯ ರಷ್ಯಾ ಆರ್ಮಿ ಕೀವ್‍ನಿಂದ 20 ಮೈಲಿ ದೂರದಲ್ಲಿ ಬೀಡುಬಿಟ್ಟಿದೆ. ಮುಂದಿನ ಆದೇಶಕ್ಕಾಗಿ ಕಾಯ್ತಿದೆ. ಇದನ್ನೂ ಓದಿ: 16 ಗಂಟೆ ಟ್ರಾನ್‍ನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ: ನೋವು ಹಂಚಿಕೊಂಡ ವಿದ್ಯಾರ್ಥಿಗಳು!

    ಜಾಪೋರಿಷಿಯಾ ಸಮೀಪದ ಎನರ್ವೋದರ್ ನಗರ ವಶಕ್ಕೆ ಪಡೆಯಲು ಮುಂದಡಿ ಇಟ್ಟಿದೆ. ಭಾರೀ ಸಾವು-ನೋವು, ಆರ್ಥಿಕ ನಷ್ಟ ಉಂಟಾಗ್ತಿದ್ದರೂ, ರಷ್ಯಾ ಸೇನೆ ವಿರುದ್ಧ ಉಕ್ರೇನ್ ಪಡೆಗಳು ಹಿಂದಡಿಯಿಟ್ಟಿಲ್ಲ. ತೀವ್ರ ಸ್ವರೂಪದಲ್ಲಿ ತಿರುಗೇಟು ನೀಡುತ್ತಿವೆ. ಗೆರಿಲ್ಲಾ ಮಾದರಿಯ ಯುದ್ಧವ್ಯೂಹದ ಮೂಲಕ ರಷ್ಯಾ ಪಡೆಗಳನ್ನು ಎದಿರುಸುತ್ತಿವೆ. ಕಂಡಕಂಡದಲ್ಲಿ ರಷ್ಯಾದ ಯುದ್ಧ ಟ್ಯಾಂಕ್‍ಗಳಿಗೆ ಬೆಂಕಿ ಹಚ್ಚುತ್ತಿವೆ.

    ಕೀವ್ ಜೂನಲ್ಲಿನ ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಈ ಮಧ್ಯೆ ಉಕ್ರೇನ್‍ನ ಹಡಗೊಂದನ್ನು ಉಕ್ರೇನ್ ಸೈನಿಕರೇ ಸ್ಫೋಟಿಸಿ ಮುಳುಗಿಸಿದ್ದಾರೆ. ಮೊದಲು ಇದನ್ನು ನ್ಯಾಟೋ ಸದಸ್ಯ ರಾಷ್ಟ್ರ ಎಸ್ಟೋನಿಯಾಗೆ ಸೇರಿದ ಹಡಗು ಎಂದು ಹೇಳಲಾಗಿತ್ತು. ಈಗ ಉಕ್ರೇನ್‌ ನೌಕಾ ಸೇನೆಯವರೇ ನೌಕೆಯನ್ನುಸ್ಫೋಟಿಸಿ ಮುಳುಗಿಸಿದ್ದಾರೆ. ಒಂದು ವೇಳೆ ಈ ನೌಕೆ ರಷ್ಯಾ ಸೇನೆಗೆ ಸಿಕ್ಕಿದರೆ ವಿಜಯಿ ಆಗಿದ್ದೇವೆ ಎಂದು ಹೇಳಿಕೊಳ್ಳುವ ಸಾಧ್ಯತೆ ಇತ್ತು. ಶತ್ರು ರಾಷ್ಟ್ರಕ್ಕೆ ಮಾಹಿತಿ ಸುಲಭವಾಗಿ ಸಿಗುವ ಸಾಧ್ಯತೆ ಇತ್ತು. ಈ ಕಾರಣಕ್ಕೆ ಉಕ್ರೇನ್‌ ಸೇನೆಯೇ ಹಡಗನ್ನು ಸ್ಫೋಟಗೊಳಿಸಿದೆ ಎಂದು ವರದಿಯಾಗಿದೆ.

    ಇದೇ ನಡೆದರೇ ಮೂರನೇ ಮಹಾ ಯುದ್ಧ ಶುರುವಾಗಲಿದೆ ಎಂಬ ಮಾತು ಕೇಳಿಬಂದಿತ್ತು. ಈ ಮಧ್ಯೆ ರಷ್ಯಾ-ಉಕ್ರೇನ್ ನಡ್ವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಸೌದಿ ರಾಜ ಮೊಹ್ಮದ್ ಬಿನ್ ಸಲ್ಮಾನ್ ಪ್ರಕಟಿಸಿದ್ದಾರೆ. ಅತ್ತ ರಷ್ಯಾದಲ್ಲಿ ಫೇಸ್‍ಬುಕ್, ಟ್ವಿಟ್ಟರ್ ಮೇಲೆ ನಿಷೇಧ ಹೇರಲಾಗಿದೆ. ಸೇನೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೇ ಜೈಲಿಗೆ ಕಳಿಸುವ ಹೊಸ ಕಾಯ್ದೆಯನ್ನು ರಷ್ಯಾದಲ್ಲಿ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಉಪ್ಪು ಹುಳಿ ಖಾರ ಇಲ್ಲದ, ಯಾರದ್ದೋ ಒತ್ತಡದಿಂದ ಓದಿದ ಬಜೆಟ್: ಕುಮಾರಸ್ವಾಮಿ

  • ‘ಕೊನೆಗೂ ಸಾಧಿಸಿದ್ವಿ’ – ರಷ್ಯಾ ಟ್ಯಾಂಕ್ ತೆಗೆದುಕೊಂಡು ಜಾಲಿ ರೈಡ್ ಮಾಡಿದ ಉಕ್ರೇನಿ ಪ್ರಜೆಗಳು!

    ‘ಕೊನೆಗೂ ಸಾಧಿಸಿದ್ವಿ’ – ರಷ್ಯಾ ಟ್ಯಾಂಕ್ ತೆಗೆದುಕೊಂಡು ಜಾಲಿ ರೈಡ್ ಮಾಡಿದ ಉಕ್ರೇನಿ ಪ್ರಜೆಗಳು!

    ಕೀವ್: ಉಕ್ರೇನ್ ಪ್ರಜೆಗಳು ರಷ್ಯಾದ ಟ್ಯಾಂಕ್ ವಶಕ್ಕೆ ತೆಗೆದುಕೊಂಡು ಜಾಲಿ ರೈಡ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದೆ.

    ಉಕ್ರೇನಿನಲ್ಲಿ ವಾಸಿಸುವ ಪುರುಷರ ಗುಂಪು ಹಿಮಾದಿಂದ ಕೂಡಿದ್ದ ರಸ್ತೆಯಲ್ಲಿ ಸಂತೋಷವಾಗಿ ತಾವು ವಶಕ್ಕೆ ಪಡೆದುಕೊಂಡಿದ್ದ ರಷ್ಯಾದ ಟ್ಯಾಂಕ್‍ನಲ್ಲಿ ಜಾಲಿರೈಡ್ ಮಾಡುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ವೀಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ನಡುವೆ ಇದೀಗ ಈ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಅಲ್ಲದೇ ಈ ವೀಡಿಯೋ ಸಖತ್ ವೈರಲ್ ಸಹ ಆಗಿದೆ. ಇದನ್ನೂ ಓದಿ: ಭಾರತೀಯರನ್ನು ಒದೆಯುತ್ತಿದ್ದಾರೆ – ದುಃಸ್ವಪ್ನವಾಯ್ತು ಉಕ್ರೇನ್‍ನಿಂದ ಸ್ಥಳಾಂತರಿಸುವ ಆದೇಶ

    ಈ ವೀಡಿಯೋ 24-ಸೆಕೆಂಡ್ ಇದ್ದು, ವೀಡಿಯೋದಲ್ಲಿ ಪ್ರಜೆಗಳ ಗುಂಪು ಹೆಚ್ಚಿನ ವೇಗದ ರಷ್ಯಾದ ಟ್ಯಾಂಕ್ ಓಡಿಸಿಕೊಂಡು ಅವರ ಮೇಲೆ ಕುಳಿತು ಸವಾರಿ ಮಾಡಿದ್ದಾರೆ. ಟ್ಯಾಂಕ್ ಸವಾರಿ ನಮಗೆ ಖುಷಿ ತರುತ್ತಿದೆ ಎಂದು ಹರ್ಷೋದ್ಗಾರವನ್ನು ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು ರೈಡ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಫೋನ್‍ನಲ್ಲಿ ದೃಶ್ಯವನ್ನು ಚಿತ್ರೀಕರಿಸಿದ್ದಾನೆ. ಈ ವೀಡಿಯೋದಲ್ಲಿ ಮತ್ತೊಬ್ಬ ವ್ಯಕ್ತಿ ಕೊನೆಗೂ ನಾವು ಸಾಧಿಸಿದ್ವಿ. ‘ಉಕ್ರೇನ್‍ಗೆ ವೈಭವ ಮರಳಿದೆ’ ಎಂದು ಫೋಷಣೆಯನ್ನು ಕೂಗುತ್ತ ರೈಡ್ ಎಂಜಯ್ ಮಾಡುತ್ತಿರುವುದನ್ನು ನಾವು ರೆಕಾರ್ಡ್ ಮಾಡಲಾಗಿದೆ. ಈ ನಡುವೆ ವೀಡಿಯೋ ಮಾಡುತ್ತಿದ್ದ ವ್ಯಕ್ತಿ ತನ್ನ ಇತರ ಗೆಳೆಯರನ್ನು ನಕ್ಕು ಹುರಿದುಂಬಿಸುತ್ತಿರುವುದನ್ನು ನಾವು ಗಮನಿಸಬಹುದು.

    ಖಾರ್ಕಿವ್‍ನಲ್ಲಿ ಹಿಮದಿಂದ ಆವೃತವಾದ ಮೈದಾನದಲ್ಲಿ ಸಂಚರಿಸುತ್ತಿರುವ ಮಿಲಿಟರಿ ವಾಹನವನ್ನು ಡೈಲಿ ಮೇಲ್‍ನ ಟಿ-80ಬಿವಿಎಂ ಶಸ್ತ್ರಸಜ್ಜಿತ ಯುದ್ಧ ಟ್ಯಾಂಕ್ ಎಂದು ಗುರುತಿಸಲಾಗಿದೆ.

    ಹಲವಾರು ಉಕ್ರೇನಿಯನ್ನರು, ರಷ್ಯಾದ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ತ್ಯಜಿಸುವ ವೀಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಯುದ್ಧದಿಂದ ಸೆರೆಹಿಡಿಯಲ್ಪಟ್ಟ ಅಥವಾ ಯುದ್ಧದಿಂದ ಓಡಿಹೋದ ಸೈನಿಕರು ಇವುಗಳನ್ನು ಬಿಟ್ಟುಹೋದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಆರ್ಯನ್ ಖಾನ್ ಪ್ರಕರಣದಿಂದಲೇ ಖುಲಾಸೆಯಾಗುವ ಸಾಧ್ಯತೆ!

    ಉಕ್ರೇನ್‍ನಲ್ಲಿ ಯುದ್ಧದಲ್ಲಿ ಹೋರಾಡುತ್ತಿರುವ ರಷ್ಯಾದ ಸೈನಿಕರು ಅಸ್ತವ್ಯಸ್ತರಾಗಿದ್ದಾರೆ. ‘ಎಲ್ಲರ ಮೇಲೆ ಗುಂಡು ಹಾರಿಸಲು’ ಹೇಳಿದಾಗ ಅವರು ಅಳುತ್ತಿದ್ದಾರೆ ಎಂದು ನಿನ್ನೆ ಪೆಂಟಗನ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿತ್ತು.

  • ಯುದ್ಧಪೀಡಿತ ಉಕ್ರೇನ್‍ನಿಂದ  ಬೆಳಗಾವಿಗೆ ವಿದ್ಯಾರ್ಥಿನಿ – ಕುಟುಂಬಸ್ಥರಲ್ಲಿ ಹರ್ಷ

    ಯುದ್ಧಪೀಡಿತ ಉಕ್ರೇನ್‍ನಿಂದ ಬೆಳಗಾವಿಗೆ ವಿದ್ಯಾರ್ಥಿನಿ – ಕುಟುಂಬಸ್ಥರಲ್ಲಿ ಹರ್ಷ

    ಬೆಳಗಾವಿ: ಯುದ್ಧಪೀಡಿತ ಉಕ್ರೇನ್‍ನಿಂದ ಬೆಳಗಾವಿಯ ಎಂಬಿಬಿಎಸ್ ವಿದ್ಯಾರ್ಥಿನಿ ಫೈಜಾ ಸುಬೇದಾರ್ ಸುರಕ್ಷಿತವಾಗಿ ಆಗಮಿಸಿದ್ದು, ಕುಟುಂಬಸ್ಥರಲ್ಲಿ ಸಂಭ್ರಮ ಮನೆಮಾಡಿದೆ.

    ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದ ಫೈಜಾ ಸುಬೇದಾರ್ ವಿದ್ಯಾರ್ಥಿನಿಯನ್ನು ಅಂಬೇಡ್ಕರ್ ಜನಜಾಗೃತಿ ವೇದಿಕೆಯಿಂದ ಸ್ವಾಗತಿಸಿಕೊಳ್ಳಲಾಯಿತು. ಮಗಳು ಸುರಕ್ಷಿತವಾಗಿ ಮರಳಿದ ಹಿನ್ನೆಲೆ ಕುಟುಂಬಸ್ಥರಲ್ಲಿಯೂ ಸಂಭ್ರಮ ಮನೆಮಾಡಿತು. ಇದನ್ನೂ ಓದಿ:  ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಫೈಜಾ, ನಾವು ರೊಮೇನಿಯಾ ಗಡಿಗೆ ಬಂದು ಅಲ್ಲಿಂದ 12 ಗಂಟೆ ಪ್ರಯಾಣ ಮಾಡಿ ಏರ್‍ಪೆÇೀರ್ಟ್ ತಲುಪಿದ್ವಿ. ನಾವು ಉಕ್ರೇನ್ ಪಶ್ಚಿಮ ಭಾಗದಲ್ಲಿ ಇದ್ವಿ. ಅಲ್ಲಿ ಅಷ್ಟೊಂದು ತೊಂದರೆ ಇರಲಿಲ್ಲ. ನಮ್ಮ ಭಾರತ ಸರ್ಕಾರದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸಂತೋಷ ವ್ಯಕ್ತಪಡಿಸಿದರು.

    ನಾವು ವಾಪಾಸ್ ಆಗಿರುವುದು ಬಹಳ ಸಂತೋಷ ಆಗ್ತಿದೆ. ಇದಕ್ಕೆ ಕಾರಣವಾದ ಪ್ರಧಾನಿ ಮೋದಿ ಅವರಿಗೂ ಧನ್ಯವಾದ ತಿಳಿಸುತ್ತೇನೆ. ಯುದ್ದ ಆರಂಭವಾದಾಗ ನಮಗೆ ಬಹಳ ಭಯ ಅನಿಸಿತ್ತು. ನಾನು ವೆಸ್ಟರ್ನ್ ಉಕ್ರೇನ್‍ದಲ್ಲಿದ್ದೆ. ಅಲ್ಲಿ ಯುದ್ಧದ ಭೀತಿ ಇರಲಿಲ್ಲ. ಏಕಾಏಕಿ ಯುದ್ದ ಆರಂಭವಾಗಿದನ್ನು ಕೇಳಿ ಶಾಕ್ ಆಯ್ತು. ಬೆಳಂಬೆಳಗ್ಗೆ ಐದು ಗಂಟೆಗೆ ಯುದ್ಧ ಆರಂಭವಾದ ಸುದ್ದಿ ತಿಳಿಯಿತು. ಯಾರು ಕೂಡ ರಷ್ಯಾ ಯುದ್ಧ ಮಾಡುತ್ತೆ ಎಂದು ಊಹೆಯನ್ನೂ ಸಹ ಮಾಡಿಕೊಂಡಿರಲಿಲ್ಲ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

    ಮೊದಲ ವಿಮಾನದಲ್ಲಿ ನಾನು ವಾಪಸ್ ಬಂದಿದ್ದಕ್ಕೆ ಬಹಳ ಖುಷಿಯಾಗ್ತಿದೆ. ನಮ್ಮ ವಿಮಾನದಲ್ಲಿ ಹದಿನೈದು ಜನ ವಿದ್ಯಾರ್ಥಿಗಳು ವಾಪಸ್ ಬಂದ್ರು. ಮುಂಬೈನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ನಮ್ಮನ್ನು ಸ್ವಾಗತಿಸಿದ್ರು. ಖಾರ್ಕೀವ್‍ನಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಅಗೌರವದಿಂದ ನೋವಾಗಿದೆ: ಬಿಜೆಪಿ ಸೇರ್ಪಡೆಯಾದ ಗುಲಾಂ ನಬಿ ಸೋದರಳಿಯ

    ಖಾರ್ಕೀವ್, ಕೀವ್‍ನಲ್ಲಿದ್ದ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕರೆಯಸಿಕೊಳ್ಳಬೇಕು. ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ, ಊಟಕ್ಕೂ ಅವರಿಗೆ ತುಂಬಾ ತೊಂದರೆ ಆಗ್ತಿದೆ. ಹೀಗಾಗಿ ನನ್ನಂತೆ ಅವರನ್ನು ಸುರಕ್ಷಿತವಾಗಿ ಮರಳಿ ದೇಶಕ್ಕೆ ಬರಬೇಕು ಎಂದು ಕೋರಿಕೊಂಡರು.

  • ತೊಟ್ಟಿಲಲ್ಲಿದ್ದ ಕಂದಮ್ಮನ ಮೇಲೆ ಮಲಗಿದ ಬೆಕ್ಕು- ಉಸಿರುಗಟ್ಟಿ ಮಗು ಸಾವು

    ತೊಟ್ಟಿಲಲ್ಲಿದ್ದ ಕಂದಮ್ಮನ ಮೇಲೆ ಮಲಗಿದ ಬೆಕ್ಕು- ಉಸಿರುಗಟ್ಟಿ ಮಗು ಸಾವು

    ಕೀವ್: ತೊಟ್ಟಿಲಲ್ಲಿ ಮಲಗಿದ್ದ 9 ತಿಂಗಳ ಕಂದಮ್ಮನ ಮುಖದ ಮೇಲೆ ಮನೆಯಲ್ಲಿ ಸಾಕಿದ್ದ ಬೆಕ್ಕು ಮಲಗಿದ ಪರಿಣಾಮ ಉಸಿರುಗಟ್ಟಿ ಮಗು ಸಾವನ್ನಪ್ಪಿದ ಘಟನೆ ಉಕ್ರೇನ್‍ನಲ್ಲಿ ನಡೆದಿದೆ.

    ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳದಿದ್ದರೆ ಯಾವ ರೀತಿಯಲ್ಲಾದರೂ ಅಪಾಯ ಬರಬಹುದು. ಉಕ್ರೇನ್‍ನಲ್ಲಿ ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಮೇಲೆ ಬೆಕ್ಕು ಕುಳಿತ ಪರಿಣಾಮ ಪುಟ್ಟ ಕಂದಮ್ಮ ಸಾವನ್ನಪ್ಪಿದೆ. 9 ತಿಂಗಳ ಅಲೆಗ್ಸಾಂಡ್ರಾ ಮನೆಯೊಳಗೆ ತೊಟ್ಟಿಲಲ್ಲಿ ಮಲಗಿತ್ತು. ಮಗುವಿನ ತಾಯಿ ಸ್ನೇಝಾನಾ(22) ಮನೆಯ ಕೆಲಸಗಳನ್ನು ಮುಗಿಸಿ, ಮಗುವನ್ನು ತೊಟ್ಟಿಲ್ಲಲ್ಲಿ ಮಲಗಿಸಿ ಮನೆ ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದರು. ಮಗು ಮಲಗಿದೆ ಎಂದು ತಾಯಿ ತನ್ನ ಕೆಲಸಗಳನ್ನು ಮಾಡುತ್ತಿದ್ದರು. ಈ ವೇಳೆ ತೊಟ್ಟಿಲಿನಲ್ಲಿ ಎರಡು ಬೆಕ್ಕುಗಳು ಹತ್ತಿ, ಮಗುವಿನ ಮುಖದ ಮೇಲೆ ಕುಳಿತಿತ್ತು. ಕೆಲ ಸಮಯದ ನಂತರ ಕೆಲಸ ಮುಗಿಸಿಕೊಂಡು ತಾಯಿ ಮನೆ ಒಳಗೆ ಬಂದಾಗ ಮಗುವಿನ ತೊಟ್ಟಿಲಿನಲ್ಲಿ ಬೆಕ್ಕು ಕುಳಿತಿರುವುದು ನೋಡಿದ್ದಾರೆ. ತಕ್ಷಣ ಬೆಕ್ಕನ್ನು ಓಡಿಸಿ, ಮಗುವನ್ನು ಎಚ್ಚರಿಸಲು ಪ್ರಯತ್ನಿಸಿದ್ದಾರೆ.

    ಆದರೆ ಮಗು ಉಸಿರಾಡುತ್ತಿರಲಿಲ್ಲ ಎಂದು ಅರಿತು ಆತಂಕಗೊಂಡು ತಾಯಿ ಅರೆ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಕ್ಷಣ ಸಿಬ್ಬಂದಿ ಮನೆಗೆ ಬಂದು ಚಿಕಿತ್ಸೆ ನೋಡಿ ಸುಮಾರು 40 ನಿಮಿಷಗಳ ಕಾಲ ಮಗು ಮರು ಉಸಿರಾಟ ಮಾಡುವಂತೆ ಪ್ರಯತ್ನಿಸಿದರು. ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ, ಅಷ್ಟೊತ್ತಿಗೆ ಪುಟ್ಟ ಜೀವ ಪ್ರಾಣ ಬಿಟ್ಟಿತ್ತು. ಮಗುವಿನ ಮುಖದ ಮೇಲೆ ಬೆಕ್ಕು ಕುಳಿತಿದ್ದಕ್ಕೆ ಉಸಿರುಗಟ್ಟಿ ಕಂದಮ್ಮ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಮನೆಯಲ್ಲಿ ಸಾಕಿದ್ದ ಬೆಕ್ಕುಗಳಿಂದ ಮಗು ಸಾವನ್ನಪ್ಪಿರುವ ಪ್ರಕರಣಗಳು ಈ ಹಿಂದೆ ಕೂಡ ನಡೆದಿತ್ತು. 2000 ಡಿಸೆಂಬರ್ ನಲ್ಲಿ ಕಿಂಗ್‍ಸ್ಟೈಟ್‍ಗಾನ್ ಪ್ರದೇಶದಲ್ಲಿ ಆರು ವಾರಗಳ ಮಗು ಮಲಗಿದ್ದಾಗ ಅದರ ಮೇಲೆ ಬೆಕ್ಕು ಕುಳಿತ ಪರಿಣಾಮ ಮಗು ಮೃತಪಟ್ಟಿತ್ತು. ಇದೇ ರೀತಿ ರಷ್ಯಾದ ಜ್ಲಟೋಸ್ಟ್ ನಲ್ಲಿ ಕೂಡ ಒಂದು ತಿಂಗಳ ಕಂದಮ್ಮ ಬೆಕ್ಕಿನಿಂದ ಜೀವ ಕಳೆದುಕೊಂಡಿತ್ತು.

  • ಕಾರು ಮೇಲೆ ಕಾರ್ ಪಲ್ಟಿ ಹೊಡೆದು ಉಲ್ಟಾವಾಗಿ ಬಿದ್ರೂ, ಚಾಲಕ ಪಾರು – ವಿಡಿಯೋ ವೈರಲ್

    ಕಾರು ಮೇಲೆ ಕಾರ್ ಪಲ್ಟಿ ಹೊಡೆದು ಉಲ್ಟಾವಾಗಿ ಬಿದ್ರೂ, ಚಾಲಕ ಪಾರು – ವಿಡಿಯೋ ವೈರಲ್

    ಕೀವ್: ಬಿಳಿ ಬಣ್ಣದ ಕಾರೊಂದು ಡಿಕ್ಕಿ ಹೊಡೆದ ರಭಸಕ್ಕೆ ಫಿಯೆಟ್ ಡೊಬ್ಲೊ ವ್ಯಾನ್, ನಿಂತಿದ್ದ ಇನ್ನೊಂದು ಕಾರಿನ ಮೇಲೆ ಪಲ್ಟಿ ಹೊಡೆದು ರಸ್ತೆಗೆ ಉಲ್ಟಾವಾಗಿ ಬಿದ್ದರೂ ಚಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ.

    ಈ ಘಟನೆ ಭಾನುವಾರ ಉಕ್ರೇನ್ ನ ಕೊಲೊಮಿಯಿಯ ನಗರ ಹೆದ್ದಾರಿಯಲ್ಲಿ ಸಂಭವಿಸಿದೆ. ಈ ಅಪಘಾತದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ.

    ಹೆದ್ದಾರಿಯಲ್ಲಿ ಬೂದು ಬಣ್ಣದ ಕಾರೊಂದು ರಸ್ತೆ ಬದಿಯಲ್ಲಿ ನಿಂತಿರುತ್ತದೆ. ಈ ದಾರಿಯಲ್ಲಿ ನೇರವಾಗಿ ಫಿಯೆಟ್ ಡೊಬ್ಲೊ ವ್ಯಾನೊಂದು ಬರುತ್ತಿತ್ತು. ಈ ವೇಳೆ ಇನ್ನೊಂದು ರಸ್ತೆಯಿಂದ ಕಾರು ನೇರವಾಗಿ ಬಂದು ವ್ಯಾನ್ ಗೆ ಡಿಕ್ಕಿ ಹೊಡೆದಿದೆ.

    ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನ ಮೇಲೆ ಪಲ್ಟಿ ಹೊಡೆದಿದೆ. ಬಳಿಕ ರಸ್ತೆಯಲ್ಲಿ ಉಲ್ಟಾವಾಗಿ ಬಿದ್ದಿದೆ. ಆದರೂ ಚಾಲಕ ಮಾತ್ರ ಆರಾಮವಾಗಿ ವ್ಯಾನ್ ಕಿಟಕಿ ಮೂಲಕ ಹೊರಬಂದು, ಗಾಬರಿಯಿಂದ ಓಡಿದ್ದಾನೆ. ನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನಲ್ಲಿದ್ದ ಮಗು ಸೇರಿ ದಂಪತಿ ಹೊರ ಬಂದು ಓಡಿ ಹೋಗಿದ್ದಾರೆ.

    ಸದ್ಯಕ್ಕೆ ಈ ಅಪಘಾತದಿಂದ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    https://www.youtube.com/watch?time_continue=33&v=XOZcbfZo0rs