Tag: kieron Pollard

  • ಪೋಲಾರ್ಡ್ ಆನ್‍ಫೀಲ್ಡ್ ವರ್ತನೆಗೆ ಕೋಪಗೊಂಡ ಬೂಮ್ರಾ – ವಿಡಿಯೋ

    ಪೋಲಾರ್ಡ್ ಆನ್‍ಫೀಲ್ಡ್ ವರ್ತನೆಗೆ ಕೋಪಗೊಂಡ ಬೂಮ್ರಾ – ವಿಡಿಯೋ

    ಲಕ್ನೋ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪೋಲಾರ್ಡ್ ಉದ್ದೇಶ ಪೂರ್ವಕವಾಗಿಯೇ ಬೂಮ್ರಾಗೆ ಅಡ್ಡಪಡಿಸಿದ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ಪಂದ್ಯದ 11ನೇ ಓವರ್ ಬೌಲ್ ಮಾಡಿದ್ದ ಜಸ್‍ಪ್ರೀತ್ ಬೂಮ್ರಾ ಬೌಲಿಂಗ್ ನಲ್ಲಿ ಪೋಲಾರ್ಡ್ ಕ್ಯಾಚ್ ನೀಡಿ ಔಟಾದರು. ಆದರೆ  ಬೂಮ್ರಾ ಕ್ಯಾಚ್ ಪಡೆಯುವ ವೇಳೆ ಪೋಲಾರ್ಡ್ ಉದ್ದೇಶ ಪೂರ್ವಕವಾಗಿ ಬೂಮ್ರಾಗೆ ಅಡ್ಡ ಬಂದಿದ್ದರು. ಓವರಿನ ನಾಲ್ಕನೇ ಎಸೆತ ಎದುರಿಸಿದ ಪೋಲಾರ್ಡ್ ಬ್ಯಾಟ್‍ಗೆ ತಾಗಿದ ಚೆಂಡು ನೇರ ಮೇಲಕ್ಕೆ ಚಿಮ್ಮಿತ್ತು.

    https://twitter.com/NaaginDance/status/1059844978665381888

    ಚೆಂಡು ಕೆಳಗಡೆ ಬೀಳುತ್ತಿರುವುದನ್ನು ನೋಡಿ ತಾನು ಔಟಾಗುವುದು ಖಾತ್ರಿ ಎಂದು ತಿಳಿದ ಪೋಲಾರ್ಡ್, ಕ್ಯಾಚ್ ಪಡೆಯಲು ಆಗಮಿಸುತ್ತಿದ್ದ ಬೂಮ್ರಾಗೆ ಎದುರು ಬಂದು ಅಡ್ಡಿಪಡಿಸಿದ್ದರು. ಆದರೆ ಇದರಿಂದ ವಿಚಲಿತರಾಗದ ಬೂಮ್ರಾ ಕ್ಯಾಚ್ ಪಡೆದು ಬಳಿಕ ಪೋಲಾರ್ಡ್ ವರ್ತನೆಗೆ ಗರಂ ಆದರು. ಈ ವೇಳೆ ಮಧ್ಯ ಪ್ರವೇಶಿಸಿದ ನಾಯಕ ರೋಹಿತ್ ಶಮಾ ಆನ್‍ಫೀಲ್ಡ್ ಅಂಪೈರ್ ಬಳಿಯೂ ತಮ್ಮ ಈ ಕುರಿತು ಚರ್ಚೆ ನಡೆಸಿದ್ದರು.

    ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಡೆಸಿದ ರೋಹಿತ್ ಶರ್ಮಾ 61 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಪಂದ್ಯದಲ್ಲಿ 11 ರನ್ ಗಳಿಸಿದ ರೋಹಿತ್ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ಹೆಚ್ಚು ರನ್ ಗಳಿಸಿದ ಆಟಗಾರ ಹಾಗೂ ವಿಶ್ವ ಟಿ20 ಕ್ರಿಕೆಟ್‍ನಲ್ಲಿ ಹೆಚ್ಚು ಶತಕ ಸಿಡಿಸಿದ ಸಾಧನೆ ಮಾಡಿದರು. 2ನೇ ಪಂದ್ಯವನ್ನು ಗೆಲ್ಲುವ ಮೂಲಕ 2-0 ಅಂತರದಲ್ಲಿ ಮುನ್ನಡೆ ಪಡೆದು ಇಂಡಿಯಾ ಸರಣಿಯನ್ನು ಗೆದ್ದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv